ನಾ ಪಾಪಿಯಾದರೂ ನನ್ನ ಕಡೆಗಾಲದಲಿ

ದುರ್ಗಾ – ಝಪತಾಲ ನಾ ಪಾಪಿಯಾದರೂ ನನ್ನ ಕಡೆಗಾಲದಲಿ ನಿನ್ನ ಶ್ರೀನಾಮವನು ಜಪಿಸುತಿರಲು ಮುಕ್ತಿಗೊಯ್ಯದೆ ನೀನು ಬಿಡುವಳೇನು ? ಸ್ತ್ರೀಹತ್ಯ ಪಶುಹತ್ಯ ಭ್ರೂಣ ಬ್ರಾಹ್ಮಣ ಹತ್ಯ ಇನಿತೆಲ್ಲ ಪಾಪಗಳ ಮಾಡಿದ್ದರೂ ನಿನ್ನ ಶ್ರೀಶುಭನಾಮ ನನ್ನ ದುರಿತವ ನೀಗಿ ಬ್ರಹ್ಮಪದವಿಯ ಕಡೆಗೆ ಎತ್ತದೇನು? – ವಚನವೇದ

ನಾ ಪಾಪಿಯಾದರೂ ನನ್ನ ಕಡೆಗಾಲದಲಿ Read More »

ಭಾವುಕನ ಭಾವದೊಲು ಅವನವನ ಒಲವು

ಗಜಲ್ – ಝಪತಾಲ ಭಾವುಕನ ಭಾವದೊಲು ಅವನವನ ಒಲವು ಆ ಒಲವಿಗನುಸಾರ ಅವನು ಪಡೆಯುವ ಫಲವು|| ಶ್ರದ್ದೆ ಎಲ್ಲಕು ಮೂಲ ತಾಯ ಶ್ರೀಪಾದಮಧುಸರಸಿಯಲಿ ಮುಳುಗಿರುವ ನನಗೇಕೆ ಮತ್ತೆ ಜಪತಪ ಹೋಮ ಹವನಾದಿ ಕರ್ಮಗಳ ರಗಳೆ ? – ವಚನವೇದ

ಭಾವುಕನ ಭಾವದೊಲು ಅವನವನ ಒಲವು Read More »

ಜಯ ದೇವ ಜಯ ದೇವ ಜಯ ರಾಮಕೃಷ್ಣ

ಕೀರ್ತನ – ದಾದರಾ ಜಯ ದೇವ ಜಯ ದೇವ ಜಯ ರಾಮಕೃಷ್ಣ ಸಾರದಾ ಶ್ರೀಪತಿ ಭಕ್ತಜನರ ಗತಿ ಯುಗದ ಅವತಾರ|| ತುತ್ತಿನ ವಿದ್ಯೆಗೆ ದೂರದಿ ನಿಂದೆ   ದೇವನ ವಿದ್ಯೆಯ ಗಳಿಸುವೆನೆಂದೆ| ಧನಿಯಿಂದ ಭಿಕ್ಷೆಯ ಪಡೆಯುತಲಂದೆ ಸತ್ಯದ ನೆಲೆಗೆ ನೀ ಸ್ಥಿರವಾಗಿ ಸಂದೆ|| ಶಿಲೆಯಲ್ಲವೀ ತಾಯಿ ನಿಜದ ಜಗದಂಬೆ ಕಂಬನಿ ಧಾರೆಗೆ ಕರಗುವಳೆಂದೆ| ತಾಯಿ ತಾಯಿ ಎಂದು ಕೂಗುತ ನೊಂದೆ ಲೋಕವೆಲ್ಲವ ತಾಯ ಮಡಿಲಾಗಿ ಕಂಡೆ|| ಚಲಿಸದ ಬ್ರಹ್ಮವು ಚಲಿಸಲು ಶಕ್ತಿ ಸುರುಳಿ ಸುತ್ತಿದ ಹಾವು ಹರಿವ

ಜಯ ದೇವ ಜಯ ದೇವ ಜಯ ರಾಮಕೃಷ್ಣ Read More »

ಹೇ ಪ್ರೇಮರೂಪ ಶ್ರೀರಾಮಕೃಷ್ಣ

ಮಿಶ್ರ ಪೀಲೂ – ತ್ರಿತಾಲ ಹೇ ಪ್ರೇಮರೂಪ ಶ್ರೀರಾಮಕೃಷ್ಣ ಕರುಣಾಮಯ ಪಾಲಯ ಮಾಂ| ಹೇ ದೀನಬಂಧು ಶ್ರೀಶಾರದೇಶ   ಮಮ ಪ್ರಾಣ ಪ್ರಿಯ ಪಾಹಿಮಾಂll – ಸ್ವಾಮಿ ಪುರುಷೋತ್ತಮಾನಂದ

ಹೇ ಪ್ರೇಮರೂಪ ಶ್ರೀರಾಮಕೃಷ್ಣ Read More »

ರಾಮಕೃಷ್ಣ ರಾಮಕೃಷ್ಣ ಪ್ರೇಮಸುಧಾಸಿಂಧು

ಪಹಾಡಿ – ತ್ರಿತಾಲ ರಾಮಕೃಷ್ಣ ರಾಮಕೃಷ್ಣ ಪ್ರೇಮಸುಧಾಸಿಂಧು ನೀನು| ಮಧುರ ಮಧುರ ನಿನ್ನ ನಾಮ ಜಪಿಸಿ ಜಪಿಸಿ ಧನ್ಯ ನಾನು|| ಮಾತೆ ಶಾರದಾಂಬೆ ನಿನ್ನ ವಕ್ಷಸ್ಥಲದಿ ನೆಲಸಿಹಳಯ್ಯ! ಶ್ರೀ ವಿವೇಕ ಶ್ರೀ ರಾಖಾಲ ನಿನ್ನ ಭವ್ಯ ಬಾಹುಗಳಯ್ಯ|| ನಿನ್ನ ದಿವ್ಯ ದೇಹದಲ್ಲಿ ಶಿಷ್ಯವೃಂದ, ಮಹದಾನಂದ| ಭಕ್ತ ಜನರು ಬಂದು ಬಂದು ಬಾಗಿ ಬಾಗಿ ವಂದಿಪರಯ್ಯ|| – ಸ್ವಾಮಿ ಪುರುಷೋತ್ತಮಾನಂದ

ರಾಮಕೃಷ್ಣ ರಾಮಕೃಷ್ಣ ಪ್ರೇಮಸುಧಾಸಿಂಧು Read More »

ಬೇಗ ಬಾರೈ ದೇವದೇವ

ಪಹಾಡಿ – ತ್ರಿತಾಳ ಬೇಗ ಬಾರೈ ದೇವದೇವ ದೀನಬಂಧು ರಾಮಕೃಷ್ಣ ಎನ್ನ ಹೃದಯ ತಪಿಸುತಿಹುದು ಇನಿತು ಸುಧೆಯ ಕರುಣಿಸೈ  || ನಿನ್ನ ಮಹಿಮೆಯ ಕೇಳಿರುವೆನು ಆದರೂ ಮನವು ಅರಿಯದು.|| ನಿನ್ನ ನೀನೇ ತೋರು ಎನಗೆ ಅನ್ಯ ಉಪಾಯ ಕಾಣೆನು || – ಸ್ವಾಮಿ ಪುರುಷೋತ್ತಮಾನಂದ

ಬೇಗ ಬಾರೈ ದೇವದೇವ Read More »

ಪೇಮ ಭರೇ ಮನ ರೇ ಗಾಹೋ ರಾಮಕೃಷ್ಣ ನಾಮ್

ಕೀರ್ತನ – ದಾದರಾ ಪೇಮ ಭರೇ ಮನ ರೇ ಗಾಹೋ ರಾಮಕೃಷ್ಣ ನಾಮ್|| ಅಂತರೆ ಜೊತೊನೆ ರಾಖೋ ಮನ ರೇ ಗಾಹೊ ನಾಮ್|| ದೀನ ಕಾಂಗಾಲೇರ್ ಧನ್ ರಾಮಕೃಷ್ಣ ನಾಮ್|| ಏ ಕಿ ಭ್ರಂತೆ ಫೂಟಿಲೋರೆ ರಾಧಾಕೃಷ್ಣ ಶ್ಯಾಮ್| ಶಿವ ಕಾಲಿ ಬ್ರಹ್ಮ ವಿಷ್ಣು ಶ್ಯಾಮ ಸೀತಾರಾಮ್|| ನಾಮ ಬ್ರಹ್ಮಏ ಕೆ ಜೀನೆ ಮನ ರೇ ಗಾಹೊ ನಾಮ್! ಜನನ ಮರಣ ಸಾಥಿ ರಾಮಕೃಷ್ಣ ನಾಮ್|

ಪೇಮ ಭರೇ ಮನ ರೇ ಗಾಹೋ ರಾಮಕೃಷ್ಣ ನಾಮ್ Read More »

ಜಯ ದೇವ ದೇವ ಕರುಣಾವತಾರ

ಪೂರ್ವಿ – ತ್ರಿತಾಲ ಜಯ ದೇವ ದೇವ ಕರುಣಾವತಾರ ಜಗದೇಕಗಮ್ಯ ಸಂಸಾರಸಾರ|| ಮಾಯಾವಿಹೀನ ಸಚ್ಚಿತ್ ಸ್ವರೂಪ ಲೀಲಾವಿಲಾಸ-ಧೃತಿವಿವಿಧರೂಪ| ರಾಜಾಧಿರಾಜ ಭುವನೈಕರೂಪ ಭೂತಾಧಿವಾಸ ಭವಕರ್ಣಧಾರ|| ಚೈತನ್ಯನಾಥ ಸ್ವಾನಂದಕಂದ ಭವರೋಗವೈದ್ಯ ಜಿತ ನಿಖಿಲಬಂಧ। ಅತುಲಪ್ರತಾಪ ರಿಪುದಲಕರಾಲ ಸಾಧಕವಿಶುದ್ಧಮಾನಸವಿಹಾರ|| ವಿಶ್ವಪ್ರಣಮ್ಯ ತ್ರಯತಾಪನಾಶ ಕಾಮಾದಿದೋಷಹರ ಚಿತ್ಪಕಾಶ! ಪ್ರಣತೋSಸ್ಮಿನಾಥ ಶರಣಂ ಪ್ರಯಚ್ಚ ಹೇ ರಾಮಕೃಷ್ಣ ಭವಭಯನಿವಾರ – ಸ್ವಾಮಿ ವಾಗೀಶ್ವರಾನಂದ

ಜಯ ದೇವ ದೇವ ಕರುಣಾವತಾರ Read More »

ಜಯ ಭಗವದ್ಗೀತೆ, ಮಾತೆ, ಜಯ ಭಗವದ್ಗೀತೆ|

ಜಯ-ಭಗವದ್ಗೀತೆ, ಮಾತೆ, ಜಯ ಭಗವದ್ಗೀತೆ| ಹರಿ-ಹಿಯ-ಕಮಲ-ವಿಹಾರಿಣಿ ಸುಂದರ ಸುಪುನೀತೆ.|| ಕರ್ಮ-ಸುಮರ್ಮ-ಪ್ರಕಾಶಿನಿ ಕಾಮಾಸಕ್ತಿಹರಾ| ತತ್ತ್ವಜ್ಞಾನ-ವಿಕಾಸಿನಿ ವಿದ್ಯಾಬ್ರಹ್ಮಪರಾ || ಜಯ || ನಿಶ್ಚಲ-ಭಕ್ತಿ-ವಿದಾಯಿನಿ ನಿರ್ಮಲಮಲಹಾರಿ! ಶರಣ-ರಹಸ್ಯ-ಪ್ರದಾಯಿನಿ ಸಬ ವಿಧಿ ಸುಖಕಾರಿ || ಜಯ || ರಾಗ-ದ್ವೇಷ-ವಿದಾರಿಣಿ ಕಾರಿಣಿ ಮೋದ ಸದಾ | ಭವ-ಭಯ-ಹಾರಿಣಿ ತಾರಿಣಿ ಪರಮಾನಂದಪ್ರದಾ || ಜಯ | ಆಸುರ ಭಾವ-ವಿನಾಶಿನಿ ನಾಶಿನಿ ತಮ-ಸಜನೀ। ದೈವೀ ಸದ್ಗುಣದಾಯಿನಿ ಹರಿ-ರಸಿಕಾ ಜನನೀ ll ಜಯ || ಸಮತಾ ತ್ಯಾಗ ಸಿಖಾವನಿ ಹರಿ ಮುಖಕೀ ವಾಣಿ | ಸಕಲ ಶಾಸ್ತಕೀ ಸ್ವಾಮಿನಿ

ಜಯ ಭಗವದ್ಗೀತೆ, ಮಾತೆ, ಜಯ ಭಗವದ್ಗೀತೆ| Read More »

ನನ್ನ ಜನನಿ ನಿನ್ನ ಜನನಿ

ಅಲೈಯಾ ಬಿಲಾವಲ್ – ಏಕತಾಲ ನನ್ನ ಜನನಿ ನಿನ್ನ ಜನನಿ ಎಂಬ ಭೇದ ಸಲ್ಲದು| ಅವಳು ಜಗದ ಕೋಟಿಕೋಟಿ ಜೀವಜನ್ಮದಾತೆಯು||   ತಾಯೆ ನಿನ್ನ ಸಮ್ಮುಖದಲ್ಲಿ ನಾವು ಕೂಡಿ ನಲಿವೆವು| ನಿನ್ನ ವಾತ್ಸಲ್ಯಸುಧೆಯ ನೀಡಿ ಎಮ್ಮ ಕಾಪಿಡು||   ಅಮ್ಮಾ ಎಂದು ಎಷ್ಟು ಬಾರಿ ಕರೆದರದೂ ಸಾಲದು! ತಾಯ ಮಧುರ ಋಣವ ನಾವು ತೀರಿಸಲೇ ಆರೆವು||   ಮೈಮನಗಳ ಮರೆಸುವಂಥ ದಿವ್ಯನಾಮವಿಲ್ಲಿದೆ! ಅಮ್ಮಾ ಎಂಬ ನಾಮಸುಧೆಗೆ ಜಗದಿ ಸಾಟಿ ಎಲ್ಲಿದೆ||   ಪರಬ್ರಹ್ಮ ಆದಿಶಕ್ತಿ ಎನಿತೊ ನಾಮ

ನನ್ನ ಜನನಿ ನಿನ್ನ ಜನನಿ Read More »

ಗುರುವೇ ತೊಳೆಯೆನ್ನ ಮನಸಿನ ಕೊಳಕ

ಮಿಶ್ರ ಶಿವರಂಜಿನಿ – ಏಕತಾಲ ಗುರುವೇ ತೊಳೆಯೆನ್ನ ಮನಸಿನ ಕೊಳಕ ಕಳೆದುಕೊಂಡದ್ದನ್ನ ಪಡಕೊಳ್ಳೋತನಕ|| ಭಕ್ತಿಯ ಜಲದಲ್ಲಿ ಮಾಡುವೆ ಜಳಕ ನಾನದರಿಂದಲೆ ಹೊಂದುವೆ ಪುಳಕ|| – ಸ್ವಾಮಿ ಪುರುಷೋತ್ತಮಾನಂದ

ಗುರುವೇ ತೊಳೆಯೆನ್ನ ಮನಸಿನ ಕೊಳಕ Read More »

ಗುರುವೆ ತಾಯಿ ಗುರುವೆ ತಂದೆ

ದರಬಾರೀ ಕಾನಡ – ದಾದರಾ ಗುರುವೆ ತಾಯಿ ಗುರುವೆ ತಂದೆ ಗುರುವೆ ದೈವ ದಾತಾರ| ಗುರುವೆ ಬಂಧು ದಯಾಸಿಂಧು ಗುರುವೆ ಕೃಪೆಯ ಸಾಕಾರ|| ಗುರುವೆ ಬ್ರಹ್ಮ ಗುರುವೆ ವಿಷ್ಣು ಗುರುವೆ ವರ ಮಹೇಶ್ವರ| ಗುರು ಪರತರ ಪರಬ್ರಹ್ಮ ಗುರುವೆ ಸಕಲ ಆಧಾರ|| ತಮವ ಕಳೆದು ಬೆಳಕ ತಂದ ದೀನಬಂಧು ಗುರುವರ| ಕರ್ಮಬಂಧ ತರಿದ ಧೀರ ನಿನಗಿದೋ ನಮಸ್ಕಾರ|| – ಸ್ವಾಮಿ ಪುರುಷೋತ್ತಮಾನಂದ

ಗುರುವೆ ತಾಯಿ ಗುರುವೆ ತಂದೆ Read More »

ಭೋ ಶಂಭೋ ಶಿವ ಶಂಭೋ ಸ್ವಯಂಭೋ

ರೇವತಿ – ಆದಿತಾಳ ಭೋ ಶಂಭೋ ಶಿವ ಶಂಭೋ ಸ್ವಯಂಭೋll ಗಂಗಾಧರ ಶಂಕರ ಕರುಣಾಕರ ಮಾಮವ ಭವಸಾಗರತಾರಕ|| ನಿರ್ಗುಣ ಪರಬ್ರಹ್ಮ ಸ್ವರೂಪ ಘಮಘಮ ಭೂಷ ಪ್ರಪಂಚರಹಿತ ನಿಜಗುಣನಿಹಿತ ನಿತಾಂತಕ ನಂದ ಆನಂದ ಅತಿಶಯ ಅಕ್ಷಯಲಿಂಗ|| ಧಿಮಿ ಧಿಮಿತ ಧಿಮಿ ಧಿಮಿಕಿಟ ಕಿಟ ತೋಂ ತೋಂ ತೋಂ ತರಿಕಿಟ ತೋಂ ತರಿಕಿಟ ತೋಂ ಮತಂಗಮುನಿವರ ವಂದಿತ ಈಶ ಸರ್ವ ದಿಗಂಬರ ನಿರ್ಜರ ಕೇಶ ನಿತ್ಯ ನಿರಂಜನ ನಿರ್ಗುಣ ಈಶ ಈಶ ಸರ್ವೆಶ ಸರ್ವೆಶ||

ಭೋ ಶಂಭೋ ಶಿವ ಶಂಭೋ ಸ್ವಯಂಭೋ Read More »

ಸುಖಕರ್ತಾ ದುಃಖಹರ್ತಾ

ಸುಖಕರ್ತಾ ದುಃಖಹರ್ತಾ ವಾರ್ತಾ ವಿಥ್ಯಾಚಿ ನುರವೀ ಪುರವೀ ಪ್ರೇಮ ಕೃಪಾ ಜಯಾಚಿ| ಸರ್ವಾಂಗ ಸುಂದರ ಉಟಿ ಸೇಂದುರಾಚಿ ಕಂಠಿ ಝಳಕೇ ಮಾಳ ಮುಕ್ತಫಳಾಚಿ ಜಯದೇವ ಜಯದೇವ ಜಯ ಮಂಗಳಮೂರ್ತಿ ದರ್ಶನ ಮಾತ್ರೆ ಮನ ಕಾಮನ ಪುರತಿ|| ರತ್ನಖಚಿತ ಫರಾ ತುಝ ಗೌರೀಕುವರಾ| ಚಂದನಾಚೀ ಉಟೀ ಕುಂಕುಮ ಕೇಶರಾ ಹೀರೆ ಜಡಿತ ಮುಕುಟ ಶೋಭತೋ ಬರಾ| ರುಣಝಣತಿ ನೂಪುರ ಚರಣೀ ಘಾಘರಿಯಾ|| ಜಯದೇವ ಜಯದೇವ ಜಯ ಮಂಗಳಮೂರ್ತಿ ದರ್ಶನ ಮಾತ್ರೆ ಮನ ಕಾಮನ ಪುರತಿ|| ಲಂಬೋದರ ಪೀತಾಂಬರ ಫಣಿವರಬಂಧನಾ

ಸುಖಕರ್ತಾ ದುಃಖಹರ್ತಾ Read More »

ಗಣಪತಿ ಪರಿವಾರಂ

ಗಣಪತಿ ಪರಿವಾರಂ ಚಾರುಕೇಯೂರಹಾರಂ ಗಿರಿಧರವರಸಾರಂ ಯೋಗಿನೀಚಕ್ರಚಾರಂ| ಭವಭಯಪರಿಹಾರಂ ದುಃಖದಾರಿದ್ರ್ಯದೂರಂ ಗಣಪತಿಮಭಿವಂದೇ ವಕ್ರತುಂಡಾವತಾರಂ|| ಅಖಿಲಮಲವಿನಾಶಂ ಪಾಣಿನಾ ಹಸ್ತಪಾಶಮ್ ಕನಕಗಿರಿನಿನಾಶಂ ಸೂರ್ಯಕೋಟಿಪ್ರಕಾಶಮ್| ಭಜಭವಗಿರಿನಾಶಂ ಮಾಲತೀತೀರವಾಸಂ ಗಣಪತಿಮಭಿವಂದೇ ಮಾನಸೇ ರಾಜಹಂಸಂ|| ವಿವಿಧಮಣಿ-ಮಯೂಖ್ಯೆಃ ಶೋಭಮಾನಂ ವಿದೂರೈ: ಕನಕರಚಿತಚಿತ್ರಂ ಕಂಠದೇಶೇ ವಿಚಿತ್ರಮ್| ದಧತಿ ವಿಮಲಹಾರಂ ಸರ್ವದಾ ಯತ್ನಸಾರಂ ಗಣಪತಿಮಭಿವಂದೇ ಸರ್ವದಾನಂದಕಂದಮ್|| ದುರಿತಗಜಮಮಂದಂ ವಾರುಣೀಂ ಚೈವ ವೇದಂ ವಿದಿತಮಖಿಲನಾದಂ ನೃತ್ಯಮಾನಂದಕಂದಮ್| ದಧತಿ ಶಶಿಸುವಕ್ತ್ರಮ್ ಚಾಂಕುಶಂ ಯೋ ವಿಶೇಷಂ ಗಣಪತಿಮಭಿವಂದೇ ಸರ್ವದಾನಂದಕಂದಮ್|| ತ್ರಿನಯನಯುತಭಾಲೇ ಶೋಭಮಾನೇ ವಿಶಾಲೇ ಮುಕುಟಮಣಿ-ಸುಡೋಲೇ ಮೌಕ್ತಿಕಾನಾಂ ಚ ಜಾಲೇ! ಧವಲಕುಸುಮಮಾಲೇ ಯಸ್ಯ ಶೀರ್ಷ್ಣಾ: ಸತಾಲೇ

ಗಣಪತಿ ಪರಿವಾರಂ Read More »

ಸ್ನಾನವ ಮಾಡಿರೊ ಜ್ಞಾನ ತೀರ್ಥದಲ್ಲಿ

ಸ್ನಾನವ ಮಾಡಿರೊ ಜ್ಞಾನ ತೀರ್ಥದಲ್ಲಿಮಾನವರೆಲ್ಲ ಮೌನದೊಳಗೆ ನಿಂದು ತನ್ನ ತಾನರಿತುಕೊಂಬುದೆ ಒಂದು ಸ್ನಾನಅನ್ಯಾಯ ಮಾಡದಿರುವುದೊಂದು ಸ್ನಾನಅನ್ನದಾನವ ಮಾಡುವುದೊಂದು ಸ್ನಾನ – ಹರಿನಿನ್ನ ಧ್ಯಾನವೆ ನಿತ್ಯ ಗಂಗಾ ಸ್ನಾನ 1 ಪರಸತಿಯ ಭ್ರಮಿಸದಿದ್ದರೆ ಒಂದು ಸ್ನಾನಪರನಿಂದೆಯ ಮಾಡದಿದ್ದರೊಂದು ಸ್ನಾನಪರೋಪಕಾರ ಮಾಡುವುದೊಂದು ಸ್ನಾನಪರತತ್ತ್ವವನರಿತುಕೊಂಬುದೆ ಒಂದು ಸ್ನಾನ2 ಸಾಧು ಸಜ್ಜನರ ಸಂಗವೆ ಒಂದು ಸ್ನಾನಭೇದಾಭೇದವಳಿದಡೆ ಒಂದು ಸ್ನಾನಆದಿಮೂರುತಿ ಕಾಗಿನೆಲೆಯಾದಿಕೇಶವನಪಾದ ಧ್ಯಾನವೆ ನಿತ್ಯ ಗಂಗಾ ಸ್ನಾನ 3

ಸ್ನಾನವ ಮಾಡಿರೊ ಜ್ಞಾನ ತೀರ್ಥದಲ್ಲಿ Read More »

ಶ್ರೀರಾಮಕೃಷ್ಣಂ ಶಿರಸಾ

ಶ್ರೀರಾಮಕೃಷ್ಣಂ ಶಿರಸಾ ನಮಾಮಿ ಮಮ ರಾಮಕೃಷ್ಣಂ ಮನಸಾ ಸ್ಮರಾಮಿ || ದೀನಮಂದಾರಂ ದಾರಿದ್ರ್ಯಹರಣಂ ಜಗದೀಶ ಧೀರಂ ಚರಣಾರವಿಂದಂ || ವೇದಾಂತವೇದ್ಯಂ ವಿಜ್ಞಾನಬೋಧಂ ಕಮನೀಯ ಗಾತ್ರಂ ವೈರಾಗ್ಯನಿಲಯಂ || ತವ ಸೌಮ್ಯರೂಪಂ ಮೋಕ್ಷಸ್ವರೂಪಂ ತವ ನಾಮಗಾನಂ ಮಧುರಾತಿ ಮಧುರಂ || ಪುರಾಣ ಪುರುಷಂ ಪರಮಾತ್ಮರೂಪಂ ರಾಗಾದಿರಹಿತಂ ಶಾಂತ ಸ್ವರೂಪಂ || ಬ್ರಹ್ಮಾದಿವಿನುತಂ ಭವಮುಕ್ತಿಹೇತುಂ ಪ್ರತ್ಯಕ್ಷ ದೈವಂ ಶ್ರೇμÁ್ಠವತಾರಂ || ವಂದೇ ಭವೇಶಂ ಭವರೋಗವೈದ್ಯಂ ತಮೇವ ವಂದೇ ಭುವಿರಾಮಕೃಷ್ಣಂ ||

ಶ್ರೀರಾಮಕೃಷ್ಣಂ ಶಿರಸಾ Read More »

ಈ ಮತ್ರ್ಯಧೂಳಿಯಲಿ

ಈ ಮತ್ರ್ಯಧೂಳಿಯಲಿ ಹುಟ್ಟಿಬೆಳೆದೆವು ನಾವು ಈ ಧೂಳಿಯಲಿ ದೃಷ್ಟಿ ಕುರುಡಾಯಿತು | ಈ ಮಣ್ಣಿನಲಿ ನಾವು ಮಕ್ಕಳಂತಾಡಿದೆವು ಅಭಯವನು ನೀಡಯ್ಯ ದಿವ್ಯಗುರುವೆ || ನಮ್ಮ ಏನೋ ಒಂದು ಅಲ್ಪ ತಪ್ಪಿಗೆ ನೀನು ನಿನ್ನ ಮಡಿಲಿಂದಾಚೆ ನೂಕಲಿಹೆಯಾ | ನೀನೆ ನಮ್ಮನು ತಳ್ಳಿ ಅನಾಥರಂದದಲಿ ತೊಳಲಿಸುವೆಯಾ ನಮ್ಮ ಬಳಲಿಸುವೆಯಾ || ಹೇ ಪ್ರಭುವೆ ಹಾಗೆಂದಿಗೂ ಗೈಯಬೇಡ ನಮ್ಮನೆಂದಿಗು ಆಚೆ ನೂಕಬೇಡ | ನಾವು ಅಲ್ಪರು ಗುರುವೆ, ಸಿಟ್ಟಾಗದಿರು ಪ್ರಭುವೆ ಮೃದುನುಡಿಯೊಳೆಮ್ಮೊಡನೆ ಮಾತನಾಡು || ನಿನ್ನೆದುರು ನಾವೆಲ್ಲ ಬರಿಯ ಹಸುಳೆಗಳಯ್ಯ

ಈ ಮತ್ರ್ಯಧೂಳಿಯಲಿ Read More »

ಬೀತಗಯೇ ದಿನ ಭಜನ

ಬೀತಗಯೇ ದಿನ ಭಜನ ಬಿನಾ ರೇ || ಬಾಲ ಅವಸ್ಥಾ ಖೇಲ ಗವಾಯೋ ಜಬ್ ಜೋಬನ ತಬ್ ಮಾನ ಧನಾ ರೇ || ಲಾಹೇ ಕಾರನ ಮೂಲ್ ಗವಾಯೋ ಅಜಹು ನ ಗಯೀ ಮನ ಕೀ ತೃಸನಾ ರೇ ಕಹತ ಕಬೀರ ಸುನೋ ಭಾಯೀ ಸಾಧೋ ಪಾರ್ ಉತರ ಗಯೇ ಸಂತ ಜನಾ ರೇ || -ಕಬೀರದಾಸ

ಬೀತಗಯೇ ದಿನ ಭಜನ Read More »

ಹೇ ಜಗತ್ರಾತಾ ವಿಶ್ವವಿಧಾತಾ

ಹೇ ಜಗತ್ರಾತಾ ವಿಶ್ವವಿಧಾತಾ ಹೇ ಸುಖ ಶಾಂತಿನಿಕೇತನ ಹೇ | ಪ್ರೇಮಕೆ ಸಿಂಧು ದೀನ ಕೆ ಬಂಧು ದುಃಖ ದರಿದ್ರ ವಿನಾಶನ ಹೇ | || 1 || ನಿತ್ಯ ಅಖಂಡ ಅನಂತ ಅನಾದಿ ಪೂರಣ ಬ್ರಹ್ಮ ಸನಾತನ ಹೇ | ಜಗ ಆಶ್ರಯ ಜಗಪತಿ ಜಗವಂದನ ಅನುಪಮ ಅಲಖ ನಿರಂಜನ ಹೇ || 2 || ಪ್ರಾಣ ಸಖಾ ತ್ರಿಭುವನ ಪ್ರತಿಪಾಲಕ ಜೀವನ ಹೇ ಅವಲಂಬನ ಹೇ ಜಗ ಆಶ್ರಯ ಜಗಪತಿ ಜಗವಂದನ ಅನುಪಮ ಅಲಖ

ಹೇ ಜಗತ್ರಾತಾ ವಿಶ್ವವಿಧಾತಾ Read More »

ರಾಮಕೃಷ್ಣ ಪದಶರಣಜೀವನ

ರಾಮಕೃಷ್ಣ ಪದಶರಣಜೀವನ ಜಯ ವಿವೇಕಾನಂದ ನಾಮಧಾರೀ | ರುದ್ರ ಅವತಾರ ಭೈರವ-ಹುಂಕಾರಏಶೇ ಚರಾಚರವಾರೀ ಪ್ರಭು || ತೇಜದೃಪ್ತ ತವ ಸ್ಥಿರಕಂಠರವ ಅಭೀರಭೀಃ ಮಂತ್ರಪ್ರಚಾರೀ | ನಾಶಿ ಭವಾಮಯ ದಿಲೇ ವರಾಭಯ ನಿರ್ಭಯ ಕೊರಿ ನರನಾರೀ || ಗಾಹೇ ಅಕಿಂಚನ ತವ ಗುಣಕೀರ್ತನ ಚಾಹೋ ಕೃಪಾ ನಯನೇ ನೇಹಾರೀ | ದೇಹೊ ಪದಾಶ್ರಯ ದೀನದಯಾಮಯ ಅಪಾರ್ ಕರುಣಾ ಭಯಹಾರೀ || -ಹೃಷೀಕೇಶ ಚಕ್ರವರ್ತಿ

ರಾಮಕೃಷ್ಣ ಪದಶರಣಜೀವನ Read More »

ಶ್ರೀ ವಿವೇಕಾನಂದ ಗುರುವರ

ಶ್ರೀ ವಿವೇಕಾನಂದ ಗುರುವರ ನವಯುಗಾಚಾರ್ಯ ರಾಮಕೃಷ್ಣರ ಭೀಮಶಿಷ್ಯನೆ, ವೀರವೇದಾಂತಿ ಭಾರತಾಂಬೆಯ ಧೀರಪುತ್ರನೆ, ಸಾಧುಭೈರವನೆ ಸ್ಥೈರ್ಯದಚಲವೆ, ಧೈರ್ಯದಂಬುಧಿ, ಜಯತು ಜಯ ಜಯತು || ಚಿದ್‍ಋತಾಗ್ನಿಯ ಚಂಡಕಾಂತಿಯೆ, ಮೇರುಸಂನ್ಯಾಸಿ ಭರತಖಂಡದ ನಂದಿದಿದ್ದಲಿಗಿತ್ತೆ ತೇಜವನು ಬೊಮ್ಮದಂಬುಧಿಗಲೆಯನೀಯುವ ಭರದ ಬಿರುಗಾಳಿ ಬೂದಿಮುಚ್ಚಿದ ಭರತಭೂಮಿಯನೂದಿ ಬೆಳಗಿಸಿದೆ || ಭರತಖಂಡದೊಳರಚುತಲೆಯುವ ಮನುಜಕುರಿಗಳಿಗೆ ಸಿಂಹಹೃದಯವನಿತ್ತು ಗರ್ಜಿಸುವಂತೆ ನೀ ಮಾಡಿ ಕುರಿಯದೊಡ್ಡಿಯ ಮುರಿದು ಸಿಂಹದ ಗುಹೆಯ ವಿರಚಿಸಿದೆ, ಸಿಂಹಹೃದಯನೆ, ಶ್ರೀ ವಿವೇಕಾನಂದಯೋಗೀಂದ್ರ || ನಿಶೆಯ ಗಗನದೊಳಿರುವ ತಾರೆಯ ತೆರದಿ ರಂಜಿಸಿದೆ ಜಗದ ಕಂಗಳು ನೋಡಲಾರದೆ ನಿನ್ನ ತೇಜವನು ವಿಸ್ಮಯಾಶ್ಚರ್ಯದಲಿ

ಶ್ರೀ ವಿವೇಕಾನಂದ ಗುರುವರ Read More »

ನಿಖಿಲ ಮಾತೃಹೃದಯ

ನಿಖಿಲ ಮಾತೃಹೃದಯ ಮಥಿಸಿ ಪ್ರೇಮದಮೃತ ಧರೆಗೆ ತಂದೆ ಯಾರು ನೀನು ನಿತ್ಯ ನಿರ್ಮಲ ಶುದ್ಧ ಜ್ಯೋತಿ ಬಂದಿಹೇ || ಅನ್ನದಾಯಿನಿ ಅನ್ನಪೂರ್ಣೇ ಮಾತೃಮೂರ್ತಿ ಪ್ರೀತಿ ತುಂಬಿ ನೊಂದ ಜನಕೆ ನೆರವ ನೀಡೆ ಇಳೆಗೆ ಇಳಿದು ಇಳಿದು ಇಳಿದು ಇಳಿದು ಬಂದೆ || ಹೇ ಶಾರದೇ ವರದೇ ಶುಭದೇ ಜ್ಞಾನದೇ ಭಕ್ತಿದೇ ಭುಕ್ತಿದೇ ಮುಕ್ತಿದೇ ನಿನ್ನ ಕೃಪಾಬಲದಿ ಬೇಗ ಸಫಲವಾಗಲೆಮ್ಮ ಯೋಗ ||

ನಿಖಿಲ ಮಾತೃಹೃದಯ Read More »

ಶ್ರೀಶಾರದಾದೇವಿ ಹೇ ಮಹಾಮಾತೆ

ಶ್ರೀಶಾರದಾದೇವಿ ಹೇ ಮಹಾಮಾತೆ ಶ್ರೀರಾಮಕೃಷ್ಣ ಗುರುದೇವ ಸಂಪ್ರೀತೆ | ಪರಮಪಾವನಹೃದಯೆ ಕಲಿಯುಗದ ಸೀತೆ ಭಕ್ತಿಯಿಂದಾರಾಧಿಪೆವು ನಿನ್ನನಮ್ಮ ಗಗನದಂತಿಹುದಮ್ಮ ನಿನ್ನ ಗಾಂಭೀರ್ಯ ನಿನ್ನ ತೇಜದ ಭಾಗವೀ ನಮ್ಮ ಸೂರ್ಯ | ನೀ ಕಾಳಿ ನೀ ಲಕ್ಷ್ಮಿ ನೀ ಬಿಜ್ಜೆಯಮ್ಮ ಮಕ್ಕಳಾಗಿಹ ನಮ್ಮ ಪೊರೆ ಶಕ್ತಿಯಮ್ಮ || ಮಹಿಮೆ ಮಹಿಮೆಯನರಿವುದೆಂದೆಂಬರಮ್ಮ | ಗುರುವರ್ಯನಂ ತಿಳಿದ ನೀ ಮಹಿಮಳಮ್ಮಪತಿಭಕ್ತಿಯದೆ ಮುಕ್ತಿ ನಿನಗಾಯಿತಮ್ಮ ಪರಶಕ್ತಿ ನೀನಮ್ಮ ನಮ್ಮ ಸಲಹಮ್ಮ || ನಿನ್ನ ನಾಮವೆ ಜನನಿ ಸುರನದಿಯ ತೀರ್ಥ | ಎಲೆ ತಾಯೆ, ನೀನೇ

ಶ್ರೀಶಾರದಾದೇವಿ ಹೇ ಮಹಾಮಾತೆ Read More »

ಸಾರದಾ ರೂಪತಾಳಿ

ಸಾರದಾ ರೂಪತಾಳಿ ಬಂದಿಹಳು ತಾಯಿ ಕಾಳಿ ಅದನರಿತೆ ರಾಮಕೃಷ್ಣ ಪೂಜಿಸಿದರು ಭಾವ ತಾಳಿ || ಆದ್ಯಾಶಕ್ತಿ ನೀ ಮಾತೆ ಸರ್ವಜೀವ ಮುಕ್ತಿದಾತೆ | ಮಹಾಲಕ್ಷ್ಮಿ ಸರಸ್ವತಿ ಗುಪ್ತರೂಪ ಜ್ಞಾನದಾತೆ || ಸೀತಾ ರಾಧಾ ಅನ್ನಪೂರ್ಣಾ ಕಾಯ ಪಡೆದ ಭುವಿಯು ಧನ್ಯ | ಪ್ರೇಮದಿಂದ ತಾಯಿಯೆಂದು ಕರೆವ ಮನುಜ ಜಗದಿ ಮಾನ್ಯ || ದೀನಜನರ ಉದ್ಧರಿಸೆ ದೀನರೂಪ ತಾಳಿ ಬಂದೆ | ಅಭಯೇ ನೀನು ಉಭಯಕರದಿ ಅಭಯವನ್ನು ನೀಡಲೆಂದೆ || -ಸ್ವಾಮಿ ಶಾಸ್ತ್ರನಂದ

ಸಾರದಾ ರೂಪತಾಳಿ Read More »