ಧರೆಯ ಮೇಗಣ ಹುಲ್ಲೆ, ಚಂದ್ರಮನೊಳಗಣ ಎರಳೆ,

ಧರೆಯ ಮೇಗಣ ಹುಲ್ಲೆ, ಚಂದ್ರಮನೊಳಗಣ ಎರಳೆ, ಕೂರ್ತಡೆ ಫಲವೇನೋ ಕೂಟವಿಲ್ಲದನ್ನಕ್ಕ ಇಂಬನರಿಯದ ಠಾವಿನಲ್ಲಿ ಕಣ್ಣೋಟವ ಮಾಡಿದಡೆ, ತುಂಬಿದ ತೊರೆಯ ನಡುವೆ ಮಾಮರ ಕಾತಂತೆ. ಚೆನ್ನಮಲ್ಲಿಕಾರ್ಜುನದೇವಾ, ದೂರದ ಸ್ನೇಹವಮಾಡಲು ಬಾರದ ಭವಕ್ಕೆ ಬಂದೆ.

ಧರೆಯ ಮೇಗಣ ಹುಲ್ಲೆ, ಚಂದ್ರಮನೊಳಗಣ ಎರಳೆ, Read More »

ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ

ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ ತನ್ನ ನೂಲು ತನ್ನನೆ ಸುತ್ತಿ ಸಾವಂತೆ, ಮನಬಂದುದನು ಬಯಸಿ ಬೇವುತ್ತಿದ್ದೇನಯ್ಯಾ. ಎನ್ನ ಮನದ ದುರಾಶೆಯ ಮಾಣಿಸಿ ನಿಮ್ಮತ್ತ ತೋರಾ ಚೆನ್ನಮಲ್ಲಿಕಾರ್ಜುನಾ.

ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ Read More »

ತಾನು ದಂಡುಮಂಡಲಕ್ಕೆ ಹೋದಹೆನೆಂದಡೆ

ತಾನು ದಂಡುಮಂಡಲಕ್ಕೆ ಹೋದಹೆನೆಂದಡೆ ನಾನು ಸುಮ್ಮನಿಹೆನಲ್ಲದೆ, ತಾನೆನ್ನ ಕೈಯೊಳಗಿದ್ದು ತಾನೆನ್ನ ಮನದೊಳಗಿದ್ದು ಎನ್ನ ಕೂಡದಿದ್ದಡೆ ನಾನೆಂತು ಸೈರಿಸುವೆನವ್ವಾ ? ನೆನಹೆಂಬ ಕುಂಟಿಣಿ ಚೆನ್ನಮಲ್ಲಿಕಾರ್ಜುನನ ನೆರಹದಿದ್ದಡೆ ನಾನೇವೆ ಸಖಿಯೆ ?

ತಾನು ದಂಡುಮಂಡಲಕ್ಕೆ ಹೋದಹೆನೆಂದಡೆ Read More »

ತಾಯ ತೊರದು ನಾನೇನ ಮಾಡುವೆ ?

ತಾಯ ತೊರದು ನಾನೇನ ಮಾಡುವೆ ? ತಂದೆಯ ತೊರದು ನಾನೇನ ಮಾಡುವೆ ? ಎತ್ತ ಮುಂತಾಗಿ ನಡೆದು ನಾನೇನ ಮಾಡುವೆ ? ಚೆನ್ನಮಲ್ಲಿಕಾರ್ಜುನಾ ನೀನೊಲಿಯದನ್ನಕ್ಕರ ?

ತಾಯ ತೊರದು ನಾನೇನ ಮಾಡುವೆ ? Read More »

ತುಂಬಿದುದು ತುಳುಕದು ನೋಡಾ.

ತುಂಬಿದುದು ತುಳುಕದು ನೋಡಾ. ನಂಬಿದುದು ಸಂದೇಹಿಸದು ನೋಡಾ. ಒಲಿದುದು ಓಸರಿಸದು ನೋಡಾ. ನೆರೆಯರಿದುದು ಮರೆಯದು ನೋಡಾ. ಚೆನ್ನಮಲ್ಲಿಕಾರ್ಜುನಯ್ಯಾ, ನೀನೊಲಿದ ಶರಣಂಗೆ ನಿಸ್ಸೀಮಸುಖವಯ್ಯಾ.

ತುಂಬಿದುದು ತುಳುಕದು ನೋಡಾ. Read More »

ತನ್ನವಸರಕ್ಕಾಗಿ ಹಗಲುಗನ್ನವನಿಕ್ಕಿದಡೆ,

ತನ್ನವಸರಕ್ಕಾಗಿ ಹಗಲುಗನ್ನವನಿಕ್ಕಿದಡೆ, ತನ್ನ ಸವೆಯಲಿಲ್ಲ, ಕಳವು ದೊರೆಯಲಿಲ್ಲ ? ಬೊಬ್ಬುಲಿಯನೇರಿದ ಮರ್ಕಟನಂತೆ ಹಣ್ಣ ಮೆಲ್ಲಲಿಲ್ಲ, ಕುಳ್ಳಿರೆ ಠಾವಿಲ್ಲ. ನಾನು ಸರ್ವಸಂಗಪರಿತ್ಯಾಗಮಾಡಿದವಳಲ್ಲ, ನಿಮ್ಮ ಕೂಡಿ ಕುಲವಳಿದವಳಲ್ಲ, ಚೆನ್ನಮಲ್ಲಿಕಾರ್ಜುನಾ.

ತನ್ನವಸರಕ್ಕಾಗಿ ಹಗಲುಗನ್ನವನಿಕ್ಕಿದಡೆ, Read More »

ತನ್ನ ಶಿಷ್ಯ ತನ್ನ ಮಗನೆಂಬುದು ತಪ್ಪದಲಾ.

ತನ್ನ ಶಿಷ್ಯ ತನ್ನ ಮಗನೆಂಬುದು ತಪ್ಪದಲಾ. ಏಕೆ? ಆತನ ಧನಕ್ಕೆ ತಂದೆಯಾದನಲ್ಲದೆ ಆತನ ಮನಕ್ಕೆ ತಂದೆಯಾದನೆ ? ಏಕೆ? ಆತನ ಮನವನರಿಯನಾಗಿ, ಆತನ ಧನಕ್ಕೆ ತಂದೆಯಾದನು. ತನ್ನಲ್ಲಿರ್ದ ಭಕ್ತಿಯ ಮಾರಿಕೊಂಡುಂಬವರು ನಿಮ್ಮ ನಿಜಭಕ್ತರಲ್ಲವಯ್ಯಾ ಚೆನ್ನಮಲ್ಲಿಕಾರ್ಜುನಾ.

ತನ್ನ ಶಿಷ್ಯ ತನ್ನ ಮಗನೆಂಬುದು ತಪ್ಪದಲಾ. Read More »

ತನ್ನ ವಿನೋದಕ್ಕೆ ತಾನೆ ಸೃಜಿಸಿದ ಸಕಲ ಜಗತ್ತ.

ತನ್ನ ವಿನೋದಕ್ಕೆ ತಾನೆ ಸೃಜಿಸಿದ ಸಕಲ ಜಗತ್ತ. ತನ್ನ ವಿನೋದಕ್ಕೆ ತಾನೆ ಸುತ್ತಿದನದಕ್ಕೆ ಸಕಲ ಪ್ರಪಂಚನು. ತನ್ನ ವಿನೋದಕ್ಕೆ ತಾನೆ ತಿರುಗಿಸಿದನನಂತ ಭವದುಃಖಂಗಳಲ್ಲಿ. ಇಂತೆನ್ನ ಚೆನ್ನಮಲ್ಲಿಕಾರ್ಜುನನೆಂಬ ಪರಶಿವನು ತನ್ನ ಜಗದ್ವಿಲಾಸ ಸಾಕಾದ ಮತ್ತೆ ತಾನೆ ಪರಿವನದರ ಮಾಯಾಪಾಶವನು.

ತನ್ನ ವಿನೋದಕ್ಕೆ ತಾನೆ ಸೃಜಿಸಿದ ಸಕಲ ಜಗತ್ತ. Read More »

ತನುಶುದ್ಭ ಮನಶುದ್ಧ ಭಾವಶುದ್ಧ

ತನುಶುದ್ಭ ಮನಶುದ್ಧ ಭಾವಶುದ್ಧ ವಾದವರನೆನಗೊಮ್ಮೆ ತೋರಾ ? ನಡೆಯೆಲ್ಲ ಸದಾಚಾರ; ನುಡಿಯೆಲ್ಲ ಶಿವಾಗಮ ; ನಿತ್ಯಶುದ್ಧರಾದವರನೆನಗೊಮ್ಮೆ ತೋರಾ ? ಕತ್ತಲೆಯ ಮೆಟ್ಟಿ ತಳವೆಳಗಾಗಿ ಹೊರಗೊಳಗೊಂದಾಗಿ ನಿಂದ ನಿಮ್ಮ ಶರಣರನೆನಗೊಮ್ಮೆ ತೋರಾ ಚೆನ್ನಮಲ್ಲಿಕಾರ್ಜುನಾ ?

ತನುಶುದ್ಭ ಮನಶುದ್ಧ ಭಾವಶುದ್ಧ Read More »

ತನುವಿನ ಸತ್ವವ ನಿಲಿಸಿತ್ತು,

ತನುವಿನ ಸತ್ವವ ನಿಲಿಸಿತ್ತು, ಮನದ ವಿರಕ್ತಿಯ ಕೆಡಿಸಿತ್ತು. ಘನವ ಕಾಣಲೀಯದು ದುಃಖ. ಅರುಹಿರಿಯರ ತರಕಟ ಕಾಡಿತ್ತು. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಮರೆಗೊಂಡ ಸಂಸಾರದ ತೆರೆ ಎನ್ನ ಬರಲೀಯದಯ್ಯಾ.

ತನುವಿನ ಸತ್ವವ ನಿಲಿಸಿತ್ತು, Read More »

ತನುವಿಡಿದ ಇಂದ್ರಿಯಸುಖ

ತನುವಿಡಿದ ಇಂದ್ರಿಯಸುಖ ಸಿರಿಯಂತೆ ತೋರಿ ಅಡಗುತ್ತಲಿದೆ. ಗಗನದೊಡ್ಡಣೆಯಂತೆ ತನು ; ನೋಡ ನೋಡಲನುಮಾನವಿಲ್ಲದೆ ಹರಿದು ಹೋಗುತ್ತದೆ. ಇವಾದಿಯ ಮಾಣಿಸಿ, ನಿಮ್ಮ ಘನನೆನಹಿನೊಳಿರಿಸಾ ಚೆನ್ನಮಲ್ಲಿಕಾರ್ಜುನಯ್ಯಾ.

ತನುವಿಡಿದ ಇಂದ್ರಿಯಸುಖ Read More »

ತನುವಿಕಾರದಿಂದ ಸವದು ಸವದು,

ತನುವಿಕಾರದಿಂದ ಸವದು ಸವದು, ಮನವಿಕಾರದಿಂದ ನೊಂದು ಬೆಂದವರೆಲ್ಲಾ ಬೋಳಾಗಿ ; ದಿನ ಜವ್ವನಂಗಳು ಸವದು ಸವದು, ಜಂತ್ರ ಮುರಿದು ಗತಿಗೆಟ್ಟವರೆಲ್ಲಾ ಬೋಳಾಗಿದ ‘ಹೇಸಿ, ಒಲ್ಲೆ ಸಂಸಾರವನೆಂಬರು ‘ ವೈರಾಗ್ಯವ ಬಲ್ಲವರಲ್ಲ ಕೇಳವ್ವಾ. ಕನ್ನೆಯಳಿಯದ ಜವ್ವನ ಸತಿಗಲ್ಲದೆ ಚೆನ್ನಮಲ್ಲಿಕಾರ್ಜುನದೇವಗಲ್ಲ ಕೇಳವ್ವಾ.

ತನುವಿಕಾರದಿಂದ ಸವದು ಸವದು, Read More »

ತನುವೆಂಬ ಸಾಗರ ತುಂಬಲು,

ತನುವೆಂಬ ಸಾಗರ ತುಂಬಲು, ಮನವೆಂಬುದು ಹರುಗೋಲಾಯಿತ್ತು ಅಂಬಿಗಾ. ಎನ್ನ ಗಮ್ಮನೆ ತೆಗೆಯೋ ಅಂಬಿಗಾ. ತೊರೆದು ದಾಂಟಿಹೆನೆಂಬ ಭರವಸ ಕರಘನ, ಗಮ್ಮನೆ ತೆಗೆಯೋ ಅಂಬಿಗಾ. ಸಿರಿಶೈಲ ಚೆನ್ನಮಲ್ಲಿಕಾರ್ಜುನಾ ನಿನ್ನ ಕಾಣಲು ಬಂದಿಹೆ ಅಂಬಿಗಾ.

ತನುವೆಂಬ ಸಾಗರ ತುಂಬಲು, Read More »

ತನುವಬೇಡಿದಡೆ ತನುವಕೊಟ್ಟು ಶುದ್ಧವಪ್ಪೆ.

ತನುವಬೇಡಿದಡೆ ತನುವಕೊಟ್ಟು ಶುದ್ಧವಪ್ಪೆ. ಮನವ ಬೇಡಿದಡೆ ಮನವಕೊಟ್ಟು ಶುದ್ಧವಪ್ಪೆ. ಧನವ ಬೇಡಿದಡೆ ಧನವ ಕೊಟ್ಟು ಶುದ್ಧವಪ್ಪೆ. ನೀನಾವುದ ಬೇಡಿದಡೂ ಓಸರಿಸಿದಡೆ, ಕೈವಾರಿಸಿದಡೆ ಹಿಡಿದು ಮೂಗ ಕೊಯಿ. ಎನ್ನ ಕಲಿತನದ ಬಿನ್ನಪವ ಕಡೆತನಕ ನಡೆಸದಿರ್ದಡೆ ತಲೆದಂಡ ಕಾಣಾ ಚೆನ್ನಮಲ್ಲಿಕಾರ್ಜುನಾ.

ತನುವಬೇಡಿದಡೆ ತನುವಕೊಟ್ಟು ಶುದ್ಧವಪ್ಪೆ. Read More »

ತನುವನುವಾಯಿತ್ತು, ಮನವನುವಾಯಿತ್ತು,

ತನುವನುವಾಯಿತ್ತು, ಮನವನುವಾಯಿತ್ತು, ಪ್ರಾಣವನುವಾಯಿತ್ತು. ಮುನಿದು ಬಾರದ ಪರಿ ಇನ್ನೆಂತು ಹೇಳಾ ? ಎನ್ನ ಪ್ರಾಣದಲ್ಲಿ ಸಂದು, ಎನ್ನ ಮನಕ್ಕೆ ಮನವಾಗಿ ನಿಂದ ಎನ್ನ ದೇವ ಚೆನ್ನಮಲ್ಲಿಕಾರ್ಜುನನ ಕಾಣದಡೆ ಆನೆಂತು ಬದುಕುವೆನಯ್ಯಾ ?

ತನುವನುವಾಯಿತ್ತು, ಮನವನುವಾಯಿತ್ತು, Read More »

ತನು ಶುದ್ಧವಾಯಿತ್ತು ಶಿವಭಕ್ತರೊಕ್ಕುದ ಕೊಂಡೆನ್ನ.

ತನು ಶುದ್ಧವಾಯಿತ್ತು ಶಿವಭಕ್ತರೊಕ್ಕುದ ಕೊಂಡೆನ್ನ. ಮನ ಶುದ್ಧವಾಯಿತ್ತು ಅಸಂಖ್ಯಾತರ ನೆನದೆನ್ನ. ಕಂಗಳು ಶುದ್ಧವಾಯಿತ್ತು ಸಕಲಗಣಂಗಳ ನೋಡಿ ಎನ್ನ. ಶ್ರೋತ್ರ ಶುದ್ಧವಾಯಿತ್ತು ಅವರ ಕೀರ್ತಿಯ ಕೇಳಿ ಎನ್ನ. ಭಾವನೆ ಎನಗಿದು ಜೀವನ ಲಿಂಗತಂದೆ. ನೆಟ್ಟನೆ ನಿಮ್ಮ ಮನಮುಟ್ಟಿ ಪೂಜಿಸಿ ಭವಗೆಟ್ಟೆ ನಾನು ಚೆನ್ನಮಲ್ಲಿಕಾರ್ಜುನಾ.

ತನು ಶುದ್ಧವಾಯಿತ್ತು ಶಿವಭಕ್ತರೊಕ್ಕುದ ಕೊಂಡೆನ್ನ. Read More »

ತನು ನಿಮ್ಮ ರೂಪಾದ ಬಳಿಕ

ತನು ನಿಮ್ಮ ರೂಪಾದ ಬಳಿಕ ಆರಿಗೆ ಮಾಡುವೆ ? ಮನ ನಿಮ್ಮ ರೂಪಾದ ಬಳಿಕ ಆರ ನೆನೆವೆ ? ಪ್ರಾಣ ನಿಮ್ಮ ರೂಪಾದ ಬಳಿಕ ಆರನಾರಾಧಿಸುವೆ ? ಅರಿವು ನಿಮ್ಮಲ್ಲಿ ಸ್ವಯವಾದ ಬಳಿಕ ಆರನರಿವೆ ? ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮಿಂದ ನೀವೆಯಾದಿರಾಗಿ ನಿಮ್ಮನೆ ಅರಿವುತ್ತಿರ್ದೆನು.

ತನು ನಿಮ್ಮ ರೂಪಾದ ಬಳಿಕ Read More »

ತನು ಕರಗದವರಲ್ಲಿ

ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು. ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು. ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು. ಅರಿವು ಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು. ಭಾವಶುದ್ಭವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯಾ ನೀನು. ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು. ತ್ರಿಕರಣ ಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯಾ ನೀನು. ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯಾ ನೀನು. ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ ಚೆನ್ನಮಲ್ಲಿಕಾರ್ಜುನಯ್ಯಾ ? ಇದರೊಂದಿಗೆ ಕೆಳಕಂಡ ವಚನ “ತನು ಕರಗದವರಲ್ಲಿ” ಧ್ವನಿಮುದ್ರಿತಲಾಗಿಸಿದೆ. 218 ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು. ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು. ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು. ಅರಿವು ಕಣ್ದೆರೆಯದವರಲ್ಲಿ

ತನು ಕರಗದವರಲ್ಲಿ Read More »

ಜೀವೇಶ್ವರಗಾಶ್ರಯವಾದ ಸೂಕ್ಷ್ಮದೇಹಮಧ್ಯದಲ್ಲಿ

ಜೀವೇಶ್ವರಗಾಶ್ರಯವಾದ ಸೂಕ್ಷ್ಮದೇಹಮಧ್ಯದಲ್ಲಿ ಷಟ್‍ಚಕ್ರಂಗಳಲ್ಲಿ ಹುಟ್ಟಿರ್ದ ಷಟ್ಕಮಲಂಗಳನು ಆಧಾರ ತೊಡಗಿ ಆe್ಞಚಕ್ರವೇ ಕಡೆಯಾಗುಳ್ಳ ಬ್ರಹ್ಮಾದಿಗಳ ಸ್ಥಾನಂಗಳ ಗುರೂಪದೇಶದಿಂದೆ ಭಾವಿಸುವುದು. ಆe್ಞಚಕ್ರದತ್ತಣಿಂದೆ ಊಧ್ರ್ವ ಭಾಗವಾದ ಬ್ರಹ್ಮರಂಧ್ರದಲ್ಲಿಯಾಯಿತ್ತಾದಡೆ ಸಹಸ್ರದಳ ಕಮಲವನು ಭಾವಿಸುವುದು. ಆ ಸಹಸ್ರದಳ ಕಮಲದಲ್ಲಿ ನಿರ್ಮಲವಾದ ಚಂದ್ರಮಂಡಲವನು ಧ್ಯಾನಿಸುವುದು. ಆ ಚಂದ್ರಮಂಡಲದ ಮಧ್ಯದಲ್ಲಿ ವಾಲಾಗ್ರ ಮಾತ್ರದೋಪಾದಿಯಲ್ಲಿ ಪರಮ ಸೂಕ್ಷ್ಮರಂಧ್ರವನು ಉಪದೇಶದಿಂದರಿವುದು. ಆ ಸೂಕ್ಷ್ಮರಂಧ್ರವನೆ ಕೈಲಾಸಸ್ಥಾನವಾಗಿ ಅರಿದು ಆ ಕೈಲಾಸದಲ್ಲಿ ಇರುತಿರ್ದ ಪರಮೇಶ್ವರನನು ಸಮಸ್ತ ಕಾರಣಂಗಳಿಗೆ ಕಾರಣವಾಗಿದ್ದಾತನಾಗಿ ಧ್ಯಾನಿಸುವುದಯ್ಯಾ ಶ್ರೀ ಚೆನ್ನಮಲ್ಲಿಕಾರ್ಜುನದೇವಾ.

ಜೀವೇಶ್ವರಗಾಶ್ರಯವಾದ ಸೂಕ್ಷ್ಮದೇಹಮಧ್ಯದಲ್ಲಿ Read More »

ಜಾಲಗಾರನೊಬ್ಬ ಜಲವ ಹೊಕ್ಕು ಶೋಧಿಸಿ,

ಜಾಲಗಾರನೊಬ್ಬ ಜಲವ ಹೊಕ್ಕು ಶೋಧಿಸಿ, ಹಲವು ಪ್ರಾಣಿಯ ಕೊಂದು, ನಲಿನಲಿದಾಡುವ. ತನ್ನ ಮನೆಯಲೊಂದು ಶಿಶು ಸತ್ತಡೆ ಅದಕ್ಕೆ ಮರುಗುವಂತೆ ಅವಕೇಕೆ ಮರುಗ ? ಅದೆಂತೆಂದಡೆ ‘ಸ್ವಾತ್ಮಾನಮಿತರಂ ಚೇತಿ ಭಿನ್ನತಾ ನೈವ ದೃಶ್ಯತಾಂ ಸರ್ವಂ ಚಿಜ್ಜ್ಯೋತಿರೇವೇತಿ ಯಃ ಪಶ್ಯತಿ ಸ ಪಶ್ಯತಿ’ ಎಂದುದಾಗಿ, ಜಾಲಗಾರನ ದುಃಖ ಜಗಕೆಲ್ಲ ನಗೆಗೆಡೆ. ಇದು ಕಾರಣ, ಚೆನ್ನಮಲ್ಲಿಕಾರ್ಜುನಯ್ಯನ ಭಕ್ತನಾಗಿರ್ದು ಜೀವಹಿಂಸೆ ಮಾಡುವ ಮಾದಿಗರನೇನೆಂಬೆನಯ್ಯಾ ?

ಜಾಲಗಾರನೊಬ್ಬ ಜಲವ ಹೊಕ್ಕು ಶೋಧಿಸಿ, Read More »

ಜಲದ ಮಂಟಪದ ಮೇಲೆ ಉರಿಯ ಚಪ್ಪರವನಿಕ್ಕಿ,

ಜಲದ ಮಂಟಪದ ಮೇಲೆ ಉರಿಯ ಚಪ್ಪರವನಿಕ್ಕಿ, ಆಲಿಕಲ್ಲ ಹಸೆಯ ಹಾಸಿ ಬಾಸಿಗವ ಕಟ್ಟಿ, ಕಾಲಿಲ್ಲದ ಹೆಂಡತಿಗೆ ತಲೆಯಿಲ್ಲದ ಗಂಡ ಬಂದು ಮದುವೆಯಾದನು. ಎಂದೆಂದೂ ಬಿಡದ ಬಾಳುವೆಗೆ ಕೊಟ್ಟರೆನ್ನ. ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆನ್ನ ಮದುವೆಯ ಮಾಡಿದರೆಲೆ ಅವ್ವಾ.

ಜಲದ ಮಂಟಪದ ಮೇಲೆ ಉರಿಯ ಚಪ್ಪರವನಿಕ್ಕಿ, Read More »

ಜಂಗಮವೆನ್ನ ಪ್ರಾಣ, ಜಂಗಮವೆನ್ನ ಜೀವ,

ಜಂಗಮವೆನ್ನ ಪ್ರಾಣ, ಜಂಗಮವೆನ್ನ ಜೀವ, ಜಂಗಮವೆನ್ನ ಪುಣ್ಯದ ಫಲ, ಜಂಗಮವೆನ್ನ ನಿಧಿನಿಧಾನ, ಜಂಗಮವೆನ್ನ ಹರುಷದ ಮೇರೆ. ಚೆನ್ನಮಲ್ಲಿಕಾರ್ಜುನಾ, ಜಂಗಮದ ತಿಂಥಿಣಿಯಲ್ಲಿ ಓಲಾಡುವೆನು.

ಜಂಗಮವೆನ್ನ ಪ್ರಾಣ, ಜಂಗಮವೆನ್ನ ಜೀವ, Read More »

ಜಂಗಮದ ಕೈ ಹೊಯ್ದು ಹೊಯ್ದು ನಕ್ಕು ಕೆಟ್ಟರಯ್ಯ ?

ಜಂಗಮದ ಕೈ ಹೊಯ್ದು ಹೊಯ್ದು ನಕ್ಕು ಕೆಟ್ಟರಯ್ಯ ? ಸರಸದಲ್ಲಿ ಮುಟ್ಟಿ ಪೂಜಿಸುವರೆ ನಿಮಗೆ ಲಿಂಗವಿಲ್ಲ. ಹುತ್ತಿನೊಳಗೆ ಕೈಯನಿಕ್ಕೆ ಸರ್ಪದಷ್ಟವಾದರೆ ಮತ್ತೆ ಗಾರುಡವುಂಟೆ ಚೆನ್ನಮಲ್ಲಿಕಾರ್ಜುನಾ ?

ಜಂಗಮದ ಕೈ ಹೊಯ್ದು ಹೊಯ್ದು ನಕ್ಕು ಕೆಟ್ಟರಯ್ಯ ? Read More »

ಚಿಲಿಮಿಲಿ ಎಂದು ಓದುವ ಗಿಳಿಗಳಿರಾ,

ಚಿಲಿಮಿಲಿ ಎಂದು ಓದುವ ಗಿಳಿಗಳಿರಾ, ನೀವು ಕಾಣಿರೆ, ನೀವು ಕಾಣಿರೆ. ಸರವೆತ್ತಿ ಪಾಡುವ ಕೋಗಿಲೆಗಳಿರಾ, ನೀವು ಕಾಣಿರೆ, ನೀವು ಕಾಣಿರೆ. ಎರಗಿ ಬಂದಾಡುವ ತುಂಬಿಗಳಿರಾ, ನೀವು ಕಾಣಿರೆ, ನೀವು ಕಾಣಿರೆ. ಕೊಳನತಡಿಯೊಳಾಡುವ ಹಂಸೆಗಳಿರಾ, ನೀವು ಕಾಣಿರೆ, ನೀವು ಕಾಣಿರೆ. ಗಿರಿ ಗಹ್ವರದೊಳಗಾಡುವ ನವಿಲುಗಳಿರಾ, ನೀವು ಕಾಣಿರೆ, ನೀವು ಕಾಣಿರೆ. ಚೆನ್ನಮಲ್ಲಿಕಾರ್ಜುನನೆಲ್ಲಿದ್ದಹನೆಂದು ಹೇಳಿರೆ.

ಚಿಲಿಮಿಲಿ ಎಂದು ಓದುವ ಗಿಳಿಗಳಿರಾ, Read More »

ಚಿನ್ನಕ್ಕರಿಸಿನ ಚಿನ್ನಕ್ಕರಿಸಿನ ಚಿನ್ನಕ್ಕರಿಸಿನವ ಕೊಳ್ಳಿರವ್ವಾ.

ಚಿನ್ನಕ್ಕರಿಸಿನ ಚಿನ್ನಕ್ಕರಿಸಿನ ಚಿನ್ನಕ್ಕರಿಸಿನವ ಕೊಳ್ಳಿರವ್ವಾ. ಎಮ್ಮ ನಲ್ಲನ ಮೈಯ ಹತ್ತುವ ಅರಿಸಿನವ ಕೊಳ್ಳಿರವ್ವಾ. ಒಳಗುಂದದರಿಸಿನವ ಮಿಂದು ಚೆನ್ನಮಲ್ಲಿಕಾರ್ಜುನನ ಅಪ್ಪಿರವ್ವಾ.

ಚಿನ್ನಕ್ಕರಿಸಿನ ಚಿನ್ನಕ್ಕರಿಸಿನ ಚಿನ್ನಕ್ಕರಿಸಿನವ ಕೊಳ್ಳಿರವ್ವಾ. Read More »