ನಿನ್ನರಿಕೆಯ ನರಕವೆ ಮೋಕ್ಷ ನೋಡಯ್ಯಾ,

ನಿನ್ನರಿಕೆಯ ನರಕವೆ ಮೋಕ್ಷ ನೋಡಯ್ಯಾ, ನಿನ್ನನರಿಯದ ಮುಕ್ತಿಯೆ ನರಕ ಕಂಡಯ್ಯಾ. ನೀನೊಲ್ಲದ ಸುಖವೆ ದಃಖ ಕಂಡಯ್ಯಾ, ನೀನೊಲಿದ ದುಃಖವೆ ಪರಮಸುಖ ಕಂಡಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ, ನೀ ಕಟ್ಟಿ ಕೆಡಹಿದ ಬಂಧನವ ನಿರ್ಬಂಧವೆಂದಿಪ್ಪೆನು.

ನಿನ್ನರಿಕೆಯ ನರಕವೆ ಮೋಕ್ಷ ನೋಡಯ್ಯಾ, Read More »

ನಿತ್ಯವೆನ್ನ ಮನೆಗೆ ನಡೆದುಬಂದಿತ್ತಿಂದು.

ನಿತ್ಯವೆನ್ನ ಮನೆಗೆ ನಡೆದುಬಂದಿತ್ತಿಂದು. ಮುಕ್ತಿ ಎನ್ನ ಮನೆಗೆ ನಡೆದುಬಂದಿತ್ತಿಂದು. ಜಯ ಜಯಾ, ಹರಹರಾ, ಶಂಕರ ಶಂಕರಾ, ಗುರುವೆ ನಮೋ, ಪರಮಗುರುವೆ ನಮೋ. ಚೆನ್ನಮಲ್ಲಿಕಾರ್ಜುನನ ತೋರಿದ ಗುರುವೆ ನಮೋ ನಮೋ.

ನಿತ್ಯವೆನ್ನ ಮನೆಗೆ ನಡೆದುಬಂದಿತ್ತಿಂದು. Read More »

ನಿತ್ಯವೆಂಬ ನಿಜಪದವೆನ್ನ ಹತ್ತೆಸಾರ್ದು ಕಂಡಬಳಿಕ

ನಿತ್ಯವೆಂಬ ನಿಜಪದವೆನ್ನ ಹತ್ತೆಸಾರ್ದು ಕಂಡಬಳಿಕ ಚಿತ್ತ ಕರಗಿ ಮನ ಕೊರಗಿ ಹೃದಯವರಳಿತ್ತು ನೋಡಯ್ಯಾ. ಒತ್ತಿ ಬಿಗಿದ ಸೆರೆಯೊಳಗೆ ಅತ್ತಿತ್ತಲೆಂದರಿಯದೆ ಚೆನ್ನಮಲ್ಲಿಕಾರ್ಜುನನ ಪಾದದಲ್ಲಿ ಮರೆದೊರಗಿದೆ ನೋಡಯ್ಯಾ.

ನಿತ್ಯವೆಂಬ ನಿಜಪದವೆನ್ನ ಹತ್ತೆಸಾರ್ದು ಕಂಡಬಳಿಕ Read More »

ನಿತ್ಯತೃಪ್ತಂಗೆ ನೈವೇದ್ಯದ ಹಂಗೇತಕ್ಕೆ ?

ನಿತ್ಯತೃಪ್ತಂಗೆ ನೈವೇದ್ಯದ ಹಂಗೇತಕ್ಕೆ ? ಸುರಾಳ ನಿರಾಳಂಗೆ ಮಜ್ಜನದ ಹಂಗೇತಕ್ಕೆ ? ಸ್ವಯಂಜ್ಯೋತಿರ್ಮಯಂಗೆ ದೀಪಾರಾಧನೆಯ ಹಂಗೇತಕ್ಕೆ ? ಸುವಾಸನೆ ಸೂಕ್ಷ್ಮಗಂಧ ಕರ್ಪೂರಗೌರಂಗೆ ಪುಷ್ಪದ ಹಂಗೇತಕ್ಕೆ ? ಮಾಟದಲಿ ಮನ ನಂಬುಗೆಯಿಲ್ಲದ, ಅಹಂಕಾರಕ್ಕೀಡಾದ, ಭಕ್ತಿಯೆಂಬ ಪಸಾರವನಿಕ್ಕಿ ಹೊಲೆಹದಿನೆಂಟುಜನ್ಮವ ಹೊರೆವುದರಿಂದ ಅಂಗೈಯಲೊರಸಿ ಮುಕ್ತಿಯ ಮೂಲ ಶಿಖಿರಂಧ್ರದ ಕಾಮನ ಸುಟ್ಟು ಶುದ್ಭಸ್ಫಟಿಕ ಸ್ವಯಂಜ್ಯೋತಿಯನು ಸುನಾಳದಿಂದ ಹಂ ಕ್ಷಂ ಎಂಬೆರಡಕ್ಷರವ ಸ್ವಯಾನುಭಾವಭಕ್ತಿನಿರ್ವಾಣವಾದವರನೆನಗೊಮ್ಮೆ ತೋರಿದೆ. ಶ್ರೀಗಿರಿ ಚೆನ್ನ ಮಲ್ಲಿಕಾರ್ಜುನಾ.

ನಿತ್ಯತೃಪ್ತಂಗೆ ನೈವೇದ್ಯದ ಹಂಗೇತಕ್ಕೆ ? Read More »

ನೋಡೆನೆಂಬವರ ನೋಡಿಸುವೆ,

ನೋಡೆನೆಂಬವರ ನೋಡಿಸುವೆ, ನುಡಿಯೆನೆಂಬವರ ನುಡಿಯಿಸುವೆ, ಒಲ್ಲೆನೆಂಬವರನೊಲಿಸುವೆ, ಒಲಿದೆನೆಂಬವರ ತೊಲಗಿಸುವೆ ನೋಡಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ, ನೀನಲ್ಲದನ್ಯರ ಮುಖದ ನೋಡೆನೆಂದಡೆ ನೋಡುವಂತೆ ಮಾಡಿದೆಯಲ್ಲಾ ಲಿಂಗವೆ ?

ನೋಡೆನೆಂಬವರ ನೋಡಿಸುವೆ, Read More »

ನೋಡುವ ಕಂಗಳಿಗೆ ರೂಪಿಂಬಾಗಿರಲು

ನೋಡುವ ಕಂಗಳಿಗೆ ರೂಪಿಂಬಾಗಿರಲು ನೀವು ಮನನಾಚದೆ ಬಂದಿರಣ್ಣಾ. ಕೇಳಿದ ಶ್ರೋತ್ರಸೊಗಸಿಗೆ ನೀವು ಮರುಳಾಗಿ ಬಂದಿರಣ್ಣಾ. ನಾರಿಯೆಂಬ ರೂಪಿಂಗೆ ನೀವು ಒಲಿದು ಬಂದಿರಣ್ಣಾ. ಮೂತ್ರವು ಬಿಂದು ಒಸರುವ ನಾಳವೆಂದು ಕಂಗಾಣದೆ ಮುಂದುಗೆಟ್ಟು ಬಂದಿರಣ್ಣಾ. ಬುದ್ಧಿಗೇಡಿತನದಿಂದ ಪರಮಾರ್ಥದ ಸುಖವ ಹೋಗಲಾಡಿಸಿಕೊಂಡು ಇದಾವ ಕಾರಣವೆಂದರಿಯದೆ, ನೀವು ನರಕಹೇತುವೆಂದರಿತು ಮನ ಹೇಸದೆ ಬಂದಿರಣ್ಣಾ. ಚೆನ್ನಮಲ್ಲಿಕಾರ್ಜುನನಲ್ಲದೆ ಮಿಕ್ಕಿಹ ಪುರುಷರೆನಗೆ ಸಹೋದರರು. ಅಛೀ ಹೋಗಾ ಮರುಳೆ.

ನೋಡುವ ಕಂಗಳಿಗೆ ರೂಪಿಂಬಾಗಿರಲು Read More »

ನೆಲದ ಮರೆಯ ನಿಧಾನದಂತೆ

ನೆಲದ ಮರೆಯ ನಿಧಾನದಂತೆ ಫಲದ ಮರೆಯ ರುಚಿಯಂತೆ ಶಿಲೆಯ ಮರೆಯ ಹೇಮದಂತೆ ತಿಲದ ಮರೆಯ ತೈಲದಂತೆ ಮರದ ಮರೆಯ ತೇಜದಂತೆ ಭಾವದ ಮರೆಯ ಬ್ರಹ್ಮವಾಗಿಪ್ಪ ಚೆನ್ನಮಲ್ಲಿಕಾರ್ಜುನನ ನಿಲವನರಿಯಬಾರದು.

ನೆಲದ ಮರೆಯ ನಿಧಾನದಂತೆ Read More »

ನಾಳದ ಮರೆಯ ನಾಚಿಕೆ,

ನಾಳದ ಮರೆಯ ನಾಚಿಕೆ, ನೂಲಮರೆಯಲ್ಲಿ ಅಡಗಿತ್ತೆಂದು ಅಂಜುವರು, ಅಳುಕುವರು. ಮನ ಮೆಚ್ಚಿದಭಿಮಾನಕ್ಕೆ ಆವುದು ಮರೆ ಹೇಳಾ ? ಕಾಯ ಮಣ್ಣೆಂದು ಕಳೆದ ಬಳಿಕ, ದೇಹದಭಿಮಾನ ಅಲ್ಲಿಯೇ ಹೋಯಿತ್ತು. ಪ್ರಾಣ ಬಯಲೆಂದು ಕಳೆದ ಬಳಿಕ, ಮನದ ಲಜ್ಜೆಯಲ್ಲಿಯೆ ಹೋಯಿತ್ತು. ಚೆನ್ನಮಲ್ಲಿಕಾರ್ಜುನನ ಕೂಡಿ ಲಜ್ಜೆಗೆಟ್ಟವಳ ಉಡಿಗೆಯ ಸೆಳೆದುಕೊಂಡಡೆ, ಮುಚ್ಚಿದ ಸೀರೆ ಹೋದರೆ ಅಂಜುವರೆ ಮರುಳೆ ?

ನಾಳದ ಮರೆಯ ನಾಚಿಕೆ, Read More »

ನಾನುಣ್ಣದ ಮುನ್ನವೆ ಜಂಗಮಕ್ಕೆ

ನಾನುಣ್ಣದ ಮುನ್ನವೆ ಜಂಗಮಕ್ಕೆ ಅಮೃತಾನ್ನಾದಿ ನೈವೇದ್ಯವ ನೀಡುವೆ. ನಾನುಡದ ಮುನ್ನವೆ ಜಂಗಮಕ್ಕೆ ದೇವಾಂಗಾದಿ ವಸ್ತ್ರವನುಡಿಸುವೆ. ನಾನು ಹೂಸದ ಮುನ್ನವೆ ಜಂಗಮಕ್ಕೆ ಸುಗಂಧಾದಿ ಪರಿಮಳದ್ರವ್ಯವ ಹೂಸುವೆ. ನಾನು ಮುಡಿಯದ ಮುನ್ನವೆ ಜಂಗಮಕ್ಕೆ ಪರಿಪರಿಯ ಪುಷ್ಪವ ಮುಡಿಸುವೆ. ನಾನು ತೊಡದ ಮುನ್ನವೆ ಜಂಗಮಕ್ಕೆ ತೊಡಿಗೆಯ ತೊಡಿಸುವೆ. ನಾನಾವಾವ ಭೋಗವ ಭೋಗಿಸುವದ ಜಂಗಮಕ್ಕೆ ಭೋಗಿಸಲಿತ್ತು, ಆ ಶೇಷಪ್ರಸಾದವ ಲಿಂಗಕ್ಕಿತ್ತು. ಭೋಗಿಸಿದ ಬಳಿಕಲಲ್ಲದೆ ಭೋಗಿಸಿದಡೆ ಬಸವಣ್ಣಾ, ನಿಮ್ಮಾಣೆಯಯ್ಯಾ ಚೆನ್ನಮಲ್ಲಿಕಾರ್ಜುನಾ.

ನಾನುಣ್ಣದ ಮುನ್ನವೆ ಜಂಗಮಕ್ಕೆ Read More »

ನಾನು ಮಜ್ಜನವ ಮಾಡುವುದಕ್ಕೆ ಮುನ್ನವೆ

ನಾನು ಮಜ್ಜನವ ಮಾಡುವುದಕ್ಕೆ ಮುನ್ನವೆ ಜಂಗಮಕ್ಕೆ ಮಜ್ಜನವ ಮಾಡಿಸುವೆ. ನಾನು ಸೀರೆಯನುಡುವುದಕ್ಕೆ ಮುನ್ನವೆ ಜಂಗಮಕ್ಕೆ ದೇವಾಂಗವನುಡಿಸುವೆ. ನಾನು ಪರಿಮಳವ ಲೇಪಿಸುವುದಕ್ಕೆ ಮುನ್ನವೆ ಜಂಗಮಕ್ಕೆ ಸುಗಂಧದ್ರವ್ಯಂಗಳ ಲೇಪಿಸುವೆ. ನಾನು ಅಕ್ಷತೆಯನಿಡುವುದಕ್ಕೆ ಮುನ್ನವೆ ಜಂಗಮಕ್ಕೆ ಅಕ್ಷತೆಯನಿಡುವೆ. ನಾನು ಪುಷ್ಪವ ಮುಡಿವುದಕ್ಕೆ ಮುನ್ನವೆ ಜಂಗಮಕ್ಕೆ ಪರಿಮಳಪುಷ್ಪವ ಮುಡಿಸುವೆ. ನಾನು ಧೂಪವಾಸನೆಯ ಕೊಳ್ಳುವ ಮುನ್ನವೆ ಜಂಗಮಕ್ಕೆ ಧೂಪವಾಸನೆಯ ಕೊಡುವೆ. ನಾನು ದೀಪಾರತಿಯ ನೋಡುವ ಮುನ್ನವೆ ಜಂಗಮಕ್ಕೆ ಆರತಿಯ ನೋಡಿಸುವೆ. ನಾನು ಸಕಲ ಪದಾರ್ಥಂಗಳ ಸ್ವೀಕರಿಸುವ ಮುನ್ನವೆ ಜಂಗಮಕ್ಕೆ ಮೃಷ್ಟಾನ್ನವ ನೀಡುವೆ. ನಾನು ಪಾನಂಗಳ

ನಾನು ಮಜ್ಜನವ ಮಾಡುವುದಕ್ಕೆ ಮುನ್ನವೆ Read More »

ನಾನು ನಿನಗೊಲಿದೆ, ನೀನು ಎನಗೊಲಿದೆ.

ನಾನು ನಿನಗೊಲಿದೆ, ನೀನು ಎನಗೊಲಿದೆ. ನೀನೆನ್ನನಗಲದಿಪ್ಪೆ, ನಾನಿನ್ನನಗಲದಿಪ್ಪೆನಯ್ಯಾ. ನಿನಗೆ ಎನಗೆ ಬೇರೊಂದು ಠಾವುಂಟೆ ? ನೀನು ಕರುಣಿಯೆಂಬುದ ಬಲ್ಲೆನು ; ನೀನಿರಿಸಿದ ಗತಿಯೊಳಗಿಪ್ಪವಳಾನು. ನೀನೆ ಬಲ್ಲೆ ಚೆನ್ನಮಲ್ಲಿಕಾರ್ಜುನಾ.

ನಾನು ನಿನಗೊಲಿದೆ, ನೀನು ಎನಗೊಲಿದೆ. Read More »

ನಾಣಮರೆಯ ನೂಲು ಸಡಿಲಲು

ನಾಣಮರೆಯ ನೂಲು ಸಡಿಲಲು ನಾಚುವರು ನೋಡಾ ಗಂಡು ಹೆಣ್ಣೆಂಬ ಜಾತಿಗಳು. ಪ್ರಾಣದೊಡೆಯ ಜಗದೊಳಗೆ ಮುಳುಗಲು ತೆರಹಿಲ್ಲದಿರಲು ದೇವರ ಮುಂದೆ ನಾಚಲೆಡೆಯುಂಟೆ ? ಚೆನ್ನಮಲ್ಲಿಕಾರ್ಜುನ ಜಗವೆಲ್ಲ ಕಣ್ಣಾಗಿ ನೋಡುತ್ತಿರಲು ಮುಚ್ಚಿ ಮರಸುವ ಠಾವಾವುದು ಹೇಳಯ್ಯಾ ?

ನಾಣಮರೆಯ ನೂಲು ಸಡಿಲಲು Read More »

ನಾ ಹುಟ್ಟಿದಲ್ಲಿ ಸಂಸಾರ ಹುಟ್ಟಿತ್ತು.

ನಾ ಹುಟ್ಟಿದಲ್ಲಿ ಸಂಸಾರ ಹುಟ್ಟಿತ್ತು. ಸಂಸಾರ ಹುಟ್ಟಿದಲ್ಲಿ ಅe್ಞನ ಹುಟ್ಟಿತ್ತು. ಅe್ಞನ ಹುಟ್ಟಿದಲ್ಲಿ ಆಶೆ ಹುಟ್ಟಿತ್ತು. ಆಶೆ ಹುಟ್ಟಿದಲ್ಲಿ ಕೋಪ ಹುಟ್ಟಿತ್ತು. ಆ ಕೋಪಾಗ್ನಿಯ ತಾಮಸಧೂಮ್ರ ಮುಸುಕಿದಲ್ಲಿ ನಾ ನಿಮ್ಮ ಮರೆದು ಭವದುಃಖಕ್ಕೀಡಾದೆ. ನೀ ಕರುಣದಿಂದೆತ್ತಿ ಎನ್ನ ಮರಹ ವಿಂಗಡಿಸಿ ನಿಮ್ಮ ಪಾದವನರುಹಿಸಯ್ಯಾ, ಚೆನ್ನಮಲ್ಲಿಕಾರ್ಜುನಾ.

ನಾ ಹುಟ್ಟಿದಲ್ಲಿ ಸಂಸಾರ ಹುಟ್ಟಿತ್ತು. Read More »

ನಮಗೆ ನಮ್ಮ ಲಿಂಗದ ಚಿಂತೆ, ನಮಗೆ ನಮ್ಮ ಭಕ್ತರ ಚಿಂತೆ,

ನಮಗೆ ನಮ್ಮ ಲಿಂಗದ ಚಿಂತೆ, ನಮಗೆ ನಮ್ಮ ಭಕ್ತರ ಚಿಂತೆ, ನಮಗೆ ನಮ್ಮ ಆದ್ಯರ ಚಿಂತೆ, ನಮಗೆ ನಮ್ಮ ಚೆನ್ನಮಲ್ಲಿಕಾರ್ಜುನಯ್ಯನ ಚಿಂತೆಯಲ್ಲದೆ ಲೋಕದ ಮಾತು ನಮಗೇಕಣ್ಣಾ ?

ನಮಗೆ ನಮ್ಮ ಲಿಂಗದ ಚಿಂತೆ, ನಮಗೆ ನಮ್ಮ ಭಕ್ತರ ಚಿಂತೆ, Read More »

ನಡೆಶುಚಿ, ನುಡಿಶುಚಿ, ತನುಶುಚಿ, ಮನಶುಚಿ, ಭಾವಶುಚಿ.

ನಡೆಶುಚಿ, ನುಡಿಶುಚಿ, ತನುಶುಚಿ, ಮನಶುಚಿ, ಭಾವಶುಚಿ. ಇಂತೀ ಪಂಚ ತೀರ್ಥಂಗಳನೊಳಕೊಂಡು ಮತ್ರ್ಯದಲ್ಲಿ ನಿಂದ ನಿಮ್ಮ ಶರಣರ ತೋರಿ ಎನ್ನನುಳುಹಿಕೊಳ್ಳಾ ಚೆನ್ನಮಲ್ಲಿಕಾರ್ಜುನಾ ?

ನಡೆಶುಚಿ, ನುಡಿಶುಚಿ, ತನುಶುಚಿ, ಮನಶುಚಿ, ಭಾವಶುಚಿ. Read More »

ನಡೆಯದ ನುಡಿಗಡಣ, ಮಾಡದ ಕಲಿತನ,

ನಡೆಯದ ನುಡಿಗಡಣ, ಮಾಡದ ಕಲಿತನ, ಚಿತ್ರದಸತಿಯ ಶೃಂಗಾರವದೇತಕ್ಕೆ ಪ್ರಯೋಜನ ? ಎಲೆಯಿಲ್ಲದ ಮರನು, ಜಲವಿಲ್ಲದ ನದಿಯು, ಗುಣಿಯಲ್ಲದ ಅವಗುಣಿಯ ಸಂಗವದೇತಕ್ಕೆ ಪ್ರಯೋಜನ ? ದಯವಿಲ್ಲದ ಧರ್ಮ, ಉಭಯವಿಲ್ಲದ ಭಕ್ತಿಯು, ನಯವಿಲ್ಲದ ಶಬ್ದವದೇತಕ್ಕೆ ಪ್ರಯೋಜನ ಎನ್ನ ದೇವ ಚೆನ್ನಮಲ್ಲಿಕಾರ್ಜುನಾ ?

ನಡೆಯದ ನುಡಿಗಡಣ, ಮಾಡದ ಕಲಿತನ, Read More »

ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೆ ನಮೋ.

ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೆ ನಮೋ. ಭವಬಂಧನವ ಬಿಡಿಸಿ ಪರಮಸುಖವ ತೋರಿದ ಗುರುವೆ ನಮೋ. ಭವಿಯೆಂಬುದ ತೊಡೆದು ಭಕ್ತೆ ಎಂದೆನಿಸಿದ ಗುರುವೆ ನಮೋ. ಚೆನ್ನಮಲ್ಲಿಕಾರ್ಜುನನ ತಂದೆನ್ನ ಕೈವಶಕ್ಕೆ ಕೊಟ್ಟ ಗುರುವೆ, ನಮೋ ನಮೋ.

ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೆ ನಮೋ. Read More »

ನಚ್ಚುಗೆ ಮನ ನಿಮ್ಮಲ್ಲಿ, ಮಚ್ಚುಗೆ ಮನ ನಿಮ್ಮಲ್ಲಿ,

ನಚ್ಚುಗೆ ಮನ ನಿಮ್ಮಲ್ಲಿ, ಮಚ್ಚುಗೆ ಮನ ನಿಮ್ಮಲ್ಲಿ, ಸಲುಗುಗೆ ಮನ ನಿಮ್ಮಲ್ಲಿ, ಸೋಲುಗೆ ಮನ ನಿಮ್ಮಲ್ಲಿ, ಅಳಲುಗೆ ಮನ ನಿಮ್ಮಲ್ಲಿ, ಬಳಲುಗೆ ಮನ ನಿಮ್ಮಲ್ಲಿ, ಕರಗುವೆ ಮನ ನಿಮ್ಮಲ್ಲಿ, ಕೊರಗುಗೆ ಮನ ನಿಮ್ಮಲ್ಲಿ. ಎನ್ನ ಪಂಚೇಂದ್ರಿಯಂಗಳು ಕಬ್ಬುನ ಉಂಡ ನೀರಿನಂತೆ ನಿಮ್ಮಲ್ಲಿ ಬೆರಸುಗೆ ಚೆನ್ನಮಲ್ಲಿಕಾರ್ಜುನಯ್ಯಾ.

ನಚ್ಚುಗೆ ಮನ ನಿಮ್ಮಲ್ಲಿ, ಮಚ್ಚುಗೆ ಮನ ನಿಮ್ಮಲ್ಲಿ, Read More »

ನಂದಿ ದೇವಂಗೆ, ಖಳ ಸಿರಿಯಾಳಂಗೆ,

ನಂದಿ ದೇವಂಗೆ, ಖಳ ಸಿರಿಯಾಳಂಗೆ, ಲಿಂಗ ದಾಸಿಮಯ್ಯಂಗೆ, ಜಾಗರ ಬಸವಣ್ಣಂಗೆ, ಆದರಿಕೆಯ ಬಿಟ್ಟು ಜೂಜನಾಡರೆ ನಮ್ಮವರಂದು ? ಒಬ್ಬಂಗೆ ಮಗನ ರಪಣ, ಒಬ್ಬಂಗೆ ಸೀರೆಯ ರಪಣ, ಒಬ್ಬಂಗೆ ತನು ಮನ ಧನದ ರಪಣ. ಮೂವರೂ ಮೂದಲಿಸಿ ಮುಕ್ಕಣ್ಣನ ಗೆಲಿದರು ಎನ್ನ ದೇವ ಚೆನ್ನಮಲ್ಲಿಕಾರ್ಜುನಾ.

ನಂದಿ ದೇವಂಗೆ, ಖಳ ಸಿರಿಯಾಳಂಗೆ, Read More »

ದೇಹ ಉಳ್ಳನ್ನಕ್ಕರ ಲಜ್ಜೆ ಬಿಡದು, ಅಹಂಕಾರ ಬಿಡದು.

ದೇಹ ಉಳ್ಳನ್ನಕ್ಕರ ಲಜ್ಜೆ ಬಿಡದು, ಅಹಂಕಾರ ಬಿಡದು. ದೇಹದೊಳಗೆ ಮನ ಉಳ್ಳನ್ನಕ್ಕರ ಅಭಿಮಾನ ಬಿಡದು, ನೆನಹಿನ ವ್ಯಾಪ್ತಿ ಬಿಡದು. ದೇಹ ಮನವೆರಡೂ ಇದ್ದಲ್ಲಿ ಸಂಸಾರ ಬಿಡದು. ಸಂಸಾರವುಳ್ಳಲ್ಲಿ ಭವ ಬೆನ್ನ ಬಿಡದು. ಭವದ ಕುಣಿಕೆಯುಳ್ಳನ್ನಕ್ಕರ ವಿಧಿವಶ ಬಿಡದು. ಚೆನ್ನಮಲ್ಲಿಕಾರ್ಜುನನೊಲಿದ ಶರಣರಿಗೆ ದೇಹವಿಲ್ಲ, ಮನವಿಲ್ಲ, ಅಭಿಮಾನವಿಲ್ಲ ಕಾಣಾ ಮರುಳೆ.

ದೇಹ ಉಳ್ಳನ್ನಕ್ಕರ ಲಜ್ಜೆ ಬಿಡದು, ಅಹಂಕಾರ ಬಿಡದು. Read More »

ದೇವಲೋಕದವರಿಗೂ ಬಸವಣ್ಣನೆ ದೇವರು.

ದೇವಲೋಕದವರಿಗೂ ಬಸವಣ್ಣನೆ ದೇವರು. ಮತ್ರ್ಯಲೋಕದವರಿಗೂ ಬಸವಣ್ಣನೆ ದೇವರು. ನಾಗಲೋಕದವರಿಗೂ ಬಸವಣ್ಣನೆ ದೇವರು. ಮೇರುಗಿರಿ ಮಂದರಗಿರಿ ಮೊದಲಾದವೆಲ್ಲಕ್ಕೂ ಬಸವಣ್ಣನೆ ದೇವರು. ಚೆನ್ನಮಲ್ಲಿಕಾರ್ಜುನಯ್ಯಾ, ನಿಮಗೂ ಎನಗೂ ನಿಮ್ಮ ಶರಣರಿಗೂ ಬಸವಣ್ಣನೆ ದೇವರು.

ದೇವಲೋಕದವರಿಗೂ ಬಸವಣ್ಣನೆ ದೇವರು. Read More »

ದೃಷ್ಟಿವರಿದು ಮನ ನೆಲೆಗೊಂಡುದಿದೇನೊ ?

ದೃಷ್ಟಿವರಿದು ಮನ ನೆಲೆಗೊಂಡುದಿದೇನೊ ? ಆವನೆಂದರಿಯೆ ಭಾವನಟ್ಟುದವ್ವಾ. ಕಳೆವರಿದು ಅಂಗ ಗಸಣೆಯಾದುದವ್ವಾ. ಇನ್ನಾರೇನೆಂದಡೆ ಬಿಡೆನು ಚೆನ್ನಮಲ್ಲಿಕಾರ್ಜುನಲಿಂಗವ.

ದೃಷ್ಟಿವರಿದು ಮನ ನೆಲೆಗೊಂಡುದಿದೇನೊ ? Read More »

ದೃಶ್ಯವಾದ ರವಿಯ ಬೆಳಗು, ಆಕಾಶದ ವಿಸ್ತೀರ್ಣ,

ದೃಶ್ಯವಾದ ರವಿಯ ಬೆಳಗು, ಆಕಾಶದ ವಿಸ್ತೀರ್ಣ, ವಾಯುವಿನ ಚಲನೆ, ತರುಗುಲ್ಮ ಲತಾದಿಗಳಲ್ಲಿಯ ತಳಿರು ಪುಷ್ಪ ಷಡುವರ್ಣಂಗಳೆಲ್ಲ ಹಗಲಿನ ಪೂಜೆ. ಚಂದ್ರಪ್ರಕಾಶ ನಕ್ಷತ್ರ ಅಗ್ನಿ ವಿದ್ಯುತ್ತಾದಿಗಳು ದೀಪ್ತಮಯವೆನಿಸಿಪ್ಪವೆಲ್ಲ ಇರುಳಿನ ಪೂಜೆ. ಹಗಲಿರುಳು ನಿನ್ನ ಪೂಜೆಯಲ್ಲಿ ಎನ್ನ ಮರೆದಿಪ್ಪೆನಯ್ಯಾ ಚೆನ್ನಮಲ್ಲಿಕಾರ್ಜುನಾ.

ದೃಶ್ಯವಾದ ರವಿಯ ಬೆಳಗು, ಆಕಾಶದ ವಿಸ್ತೀರ್ಣ, Read More »

ದೂರದಲ್ಲಿರ್ದನೆಂದು ಆನು ಬಾಯಾರಿ ಬಳಲುತಿರ್ದೆನಯ್ಯಾ.

ದೂರದಲ್ಲಿರ್ದನೆಂದು ಆನು ಬಾಯಾರಿ ಬಳಲುತಿರ್ದೆನಯ್ಯಾ. ಸಾರಿ ಬೆರಸಿ ಎನ್ನ ಕರಸ್ಥಲದಲ್ಲಿ ಮೂರ್ತಿಗೊಂಡಡೆ ಎನ್ನ ಆರತವೆಲ್ಲವೂ ಲಿಂಗಾ ನಿಮ್ಮಲ್ಲಿ ನಟ್ಟಿತು ನೋಡಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮನು ಕರಸ್ಥಲದಲ್ಲಿ ನೋಡಿ ಕಂಗಳೆ ಪ್ರಾಣವಾಗಿರ್ದೆನಯ್ಯಾ.

ದೂರದಲ್ಲಿರ್ದನೆಂದು ಆನು ಬಾಯಾರಿ ಬಳಲುತಿರ್ದೆನಯ್ಯಾ. Read More »

ಧನದ ಮೇಲೆ ಬಂದವರೆಲ್ಲ ಅನುಸರಿಗಳಲ್ಲದೆ

ಧನದ ಮೇಲೆ ಬಂದವರೆಲ್ಲ ಅನುಸರಿಗಳಲ್ಲದೆ ಆಗುಮಾಡಬಂದವರಲ್ಲ. ಮನದ ಮೇಲೆ ಬಂದು ನಿಂದು ಜರೆದು ನುಡಿದು ಪಥವ ತೋರಬಲ್ಲಡಾತನೆ ಸಂಬಂಧಿ. ಹಾಗಲ್ಲದೆ ಅವರಿಚ್ಚೆಯ ನುಡಿದು ತನ್ನುದರವ ಹೊರೆವ ಬಚ್ಚಣಿಗಳ ಮಚ್ಚುವನೆ ಚೆನ್ನಮಲ್ಲಿಕಾರ್ಜುನ ?

ಧನದ ಮೇಲೆ ಬಂದವರೆಲ್ಲ ಅನುಸರಿಗಳಲ್ಲದೆ Read More »