ಹೇ ಪ್ರೇಮರೂಪ ಶ್ರೀರಾಮಕೃಷ್ಣ
ಹೇ ಪ್ರೇಮರೂಪ ಶ್ರೀರಾಮಕೃಷ್ಣ ಕರುಣಾಮಯ ಪಾಲಯ ಮಾಂ| ಹೇ ದೀನಬಂಧು ಶ್ರೀ ಶಾರದೇಶ ಮಮ ಪ್ರಾಣಪ್ರಿಯ ಪಾಹಿ ಮಾಂ||
ಹೇ ಪ್ರೇಮರೂಪ ಶ್ರೀರಾಮಕೃಷ್ಣ Read More »
ಹೇ ಪ್ರೇಮರೂಪ ಶ್ರೀರಾಮಕೃಷ್ಣ ಕರುಣಾಮಯ ಪಾಲಯ ಮಾಂ| ಹೇ ದೀನಬಂಧು ಶ್ರೀ ಶಾರದೇಶ ಮಮ ಪ್ರಾಣಪ್ರಿಯ ಪಾಹಿ ಮಾಂ||
ಹೇ ಪ್ರೇಮರೂಪ ಶ್ರೀರಾಮಕೃಷ್ಣ Read More »
ಹೇ ಆನಂದಮಯಿ ನೀ ಎನ್ನ ನಿರಾನಂದ ಗೈಯದಿರು|| ನಿನ್ನ ಪಾದವನುಳಿದು ಅನ್ನದಾವುದನು ಎನ್ನಯ ಮನವು ಕಾಣದು ತಾಯಿ| ಮೃತ್ಯುವು ಬಂದಿಲ್ಲಿ ಸಿಡಿಗುಟ್ಟುತಿಹನು ತಪ್ಪೆನ್ನದೇನೋ ಅರಿಯೆನು ನಾನು|| ಭವಾನಿಯೆನ್ನುತ ಭವವ ದಾಟುವೆ ಎನ್ನುವ ಆಸೆಯು ಇದ್ದಿತು ಮನದಿ| ತುಂಬಿದ ಕಡಲೊಳು ಮುಳುಗಪೆ ಎಂಬುದ ಕಂಡವನಲ್ಲ ನಾ ಕನಸಿನಲೂ|| ಹಗಲಿರುಳು ಶ್ರೀದುರ್ಗಾನಾಮವ ನೆಚ್ಚಿ ತೇಲುತಲಿದ್ದರೂ ತಪ್ಪದೀ ದುಃಖವು| ಈ ಬಾರಿ ನಾನಿಲ್ಲಿ ಮುಳುಗಿದರಂತೂ ಜಪಿಸರು ಇನ್ನಾರೂ ನಿನ್ನಯ ನಾಮವ||
ಹುವ್ವ ತರುವರ ಮನೆಗೆ ಹುಲ್ಲ ತರುವ ಅವ್ವ ಲಕುಮೀರಮಣ ಇವಗಿಲ್ಲ ಗರುವ|| ಒಂದು ದಳ ಶ್ರೀತುಳಸಿ ಬಿಂದು ಗಂಗೋದಕವ ಇಂದಿರಾರಮಣಗೆ ಅರ್ಪಿತವೆನುತ| ಒಂದೇ ಮನಸಿನಲಿ ಸಿಂಧುಶಯನ ಎನೆ ಎಂದೆಂದು ವಾಸಿಪನಾ ಮಂದಿರದೊಳಗೆ|| ಪಾಂಡವರ ಮನೆಯೊಳಗೆ ಕುದುರೆಗಳ ತಾ ತೊಳೆದು ಪುಂಡರೀಕಾಕ್ಷ ತಾ ಹುಲ್ಲನು ತಿನಿಸಿ| ಅಂಡಜವಾಹನ ನಮ್ಮ ಪುರಂದರವಿಟ್ಠಲನು ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು|| —-ಪುರಂದರದಾಸ
ಹಾಂಗೆ ಇರಬೇಕು ಸಂಸಾದಲ್ಲಿ ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿ|| ಪಕ್ಷಿ ಅಂಗಳದಲ್ಲಿ ಬಂದು ಕೂತಂತೆ ಆ ಕ್ಷಣದಲ್ಲಿ ಹಾರಿ ಹೋದಂತೆ|| ನಾನಾ ಪರಿಯಲಿ ಸಂತೆ ನೆರೆದಂತೆ ನಾನಾ ಪಂಥವ ಹಿಡಿದು ಹೋದಂತೆ|| ಮಕ್ಕಳು ಆಡಿ ಮನೆ ಕಟ್ಟಿದಂತೆ ಆಟ ಸಾಕೆಂದು ಅಳಿಸಿ ಪೋದಂತೆ|| ವಸತಿಕಾರನು ವಸತಿ ಕಂಡಂತೆ ಹೊತ್ತಾರೆದ್ದು ಹೊರಟು ಹೋದಂತೆ|| ಸಂಸಾರಪಾಶವ ನೀನೇ ಬಿಡಿಸಯ್ಯಾ ಕಂಸಾರಿ ಪುರಂದರವಿಟ್ಠಲರಾಯ|| —-ಪುರಂದರದಾಸ
ಹಂಸ ನಿನ್ನಲಿ ನೀ ನೋಡೋ| ಭವ- ಪಾಶಮುಕ್ತನಾಗಿ ಹರಿಯನ್ನು ಕೂಡೋ|| ಪಕ್ಕಗಳೆರಡುಂಟು ನಿನಗೆ| ನೀ ಹೊಕ್ಕು ಹೋಗುವೆ ಮೂರು ಪಂಜರದೊಳಗೆ| ಲೆಕ್ಕವಿಲ್ಲದ ದಾರಿ ನಿನಗೆ| ಈಗ ಸಿಕ್ಕಿದೆಯೋ ಮಾಯಾಪಾಶದೊಳಗೆ|| ಹಬ್ಬದ ಸವಿಗೆ ನೀ ಬಂದೆ| ಬಲು ಕೊಬ್ಬಿಲಿ ಕಾಣದೆ ವಿಷದೊಳು ಬಿದ್ದೆ| ದಿಬ್ಬಣದಲಿ ಮೈಯ ಮರೆತೆ| ನೀ ಒಬ್ಬನೆ ಹೋಗಿ ಕಾಲಕ್ಕೆ ಗುರಿಯಾದೆ|| ಯಾರಿಗೆ ಯಾರು ಮತ್ತಿಲ್ಲ| ನಡು- ದಾರಿಯೊಳಗೆ ಕೈಯ ಬಿಡುವರೆ ಎಲ್ಲ| ದೂರ ಹೋಯಿತು ಪ್ರಾಯವೆಲ್ಲ| ಸಿರಿ ಪುರಂದರವಿಟ್ಠಲನಲದೆ ಬೇರೆಯಿಲ್ಲ|| —-ಪುರಂದರದಾಸ
ಹಂಸ ನಿನ್ನಲಿ ನೀ ನೋಡೋ Read More »
ಹರಿಯ ನೆನೆಸಿದ ದಿವಸ ಶುಭಮಂಗಳ ಹರಿಯ ನೆನೆಸಿದ ದಿವಸ ಅವಮಂಗಳ|| ಹರಿಯ ನೆನೆಸಿದ ನಿಮಿಷ ಆವಾಗಲೂ ಹರುಷ ಹರಿಯ ನೆನೆಸದ ನಿಮಿಷ ದುರ್ಮಾನಸ| ಹರಿಯ ನೆನೆಸಿದ ಘಳಿಗೆ ಮುಕ್ತಿಗೆ ಬೆಳವಳಿಗೆ ಹರಿಯ ನೆನೆಸದ ಘಳಿಗೆ ಯಮನ ಬಳಿಗೆ|| ಹರಿಯ ನೆನೆಸಿದ ನರನು ಅವನೇನೆ ಕೃತಕೃತ್ಯ ಹರಿಯ ನೆನೆಸದ ನರನ ಜನುಮ ವ್ಯರ್ಥ| ಪುರಂದರನ ಪ್ರೀತಿಯ ಶ್ರೀ ವಿಜಯವಿಟ್ಠಲನಂಘ್ರಿ ಮರೆಯದೆ ಅನುದಿನವು ನೆನೆದವನೆ ಮುಕ್ತ|| —-ವಿಜಯದಾಸ
ಹರಿಭಜನೆ ಮಾಡೋ ನಿರಂತರ| ಪರಗತಿಗಿದು ನಿರ್ಧಾರ ನೋಡೋ|| ಮೊದಲೆ ತೋರುತದೆ ಮಧುರ ವಿಷಯಸುಖ ಕಡೆಯಲಿ ದುಃಖ ಅನೇಕ|| ವೇದಶಾಸ್ತ್ರಗಳನೋದಿದರೇನು ಸಾಧನಕಿದು ನಿರ್ಧಾರ|| ಸಾರವೋ ಬಹು ಸಂಸಾರ ವಿಮೋಚಕ ಸೇರೋ ಶ್ರೀ ಹಯವದನನ್ನ|| —-ವಾದಿರಾಜಸ್ವಾಮಿ
ಹರಿದಾಸರ ಸಂಗ ದೊರಕಿತು ಎನಗೀಗ | ವರಗುರು ಉಪದೇಶ ನೆರವಾಯ್ತು|| ಮಾಯದ ಸಂಸಾರ ಮಮಕಾರ ತಗ್ಗಿತು| ತೋಯಜಾಕ್ಷನ ನಾಮ ಜಿಹ್ವೆಯೊಳ್ ನೆಲಸಿತು|| ಏನೆಂದು ಹೇಳಲಿ ಆನಂದ ಸಂಭ್ರಮ ಆ ನಂದಗೋಪನ ಕಂದನ ಮಹಿಮೆಯ| ಎನ್ನ ವಂಶಗಳೆಲ್ಲ ಪಾವನವಾದವು ಶ್ರೀಪುರಂದರವಿಟ್ಠಲಯ್ಯ ದೊರಕಿದ|| —-ಪುರಂದರದಾಸ
ಹರ ಶಿವ ಶಂಕರ ಶಶಾಂಕ ಶೇಖರ ಹರ ಬಂ ಹರ ಬಂ ಬಂ ಬಂ ಭೋಲಾ| ತೂ ಹಿ ವಿಶ್ವೇಶ್ವರ ಕರುಣಾ ಸಾಗರ ತ್ರಿಜಗ ಸಂಸಾರ ತೋಮಾರಿ ಖೇಲಾ|| ಡಮರು ಡಿಮಿ ಡಿಮಿ ಬಾಜಿಛೇ ಗಣ ಗಣ ಮೃದಂಗ ತಾಲೇ ತಾಲೇ ತಾಂಡವ ನರ್ತನ| ಭೈರವೀ ಭೈರವ ಆನಂದೇ ಕರೇ ರವ ಮಣಿಮಯ ಕುಂಡಲ ಗಲೇ ಹಾಡಮಾಲಾ|| ಭಾಲೇ ವಹ್ನಿ ಜಲಿಛೇ ಧಗ ಧಗ ಅಂಗೇ ಜ್ಯೋತಿ ಶೋಭಿಛೇ ಝಕಝಕ| ವೃಷಭವಾಹನೇ ಗೌರಿ ಲಯೇ ಬಾಮೇ ಜಟಾಮೂಲೇ
ಹನುಮನ ಮತವೇ ಹರಿಯ ಮತವೊ ಹರಿಯ ಮತವೇ ಹನುಮನ ಮತವೊ|| ಹನುಮನು ಒಲಿದರೆ ಹರಿ ತಾನೊಲಿವನು| ಹನುಮನು ಮುನಿದರೆ ಹರಿಯು ಮುನಿವನು|| ಹನುಮನು ಒಲಿಯೆ ಸುಗ್ರೀವನು ಗೆದ್ದ| ಹನುಮನು ಮುನಿಯೆ ವಾಲಿಯು ಬಿದ್ದ|| ಹನುಮನು ಒಲಿಯೆ ವಿಭೀಷಣ ಗೆದ್ದ| ಹನುಮನು ಮುನಿಯೆ ರಾವಣ ಬಿದ್ದ|| ಹನುಮನು ಪುರಂದರವಿಟ್ಠಲನ ದಾಸ| ಪುರಂದರವಿಟ್ಠಲನು ಹನುಮನೊಳ್ ವಾಸ|| —-ಪುರಂದರದಾಸ