ಸಿಂಹಚಾರೀ ಖಪಥ ಧಾವೇ
ಸಿಂಹಚಾರೀ ಖಪಥ ಧಾವೇ ಅಸುರ ಸುರಗಣ ಗಗನೇ ಛಾವೇ ರಕ್ತ ಬೀಜ ಮಾರೀ ಕರೇ ರುಧಿರ ಧಾರೇ|| ಇಂದ್ರ ಚಂದ್ರ ಕರತ ಧ್ಯಾನ ಭಯೇ ಧರಣೀ ಕಂಪಮಾನ ಆವೇ ಹರಿ ಶಂಖನಾದೇ ಸಕಲ ಚರಣ ಪಾವೇ|| ಬ್ರಹ್ಮಾ ಹರಿ ಹರ ಧರಣೀ ಅಂಬರ ಸಿದ್ಧ ಕಿನ್ನರ ಸಜಲ ಜಲಧರ ಜ್ಯೋತಿಃ ಸಂಚಾರೇ||
ಸಿಂಹಚಾರೀ ಖಪಥ ಧಾವೇ ಅಸುರ ಸುರಗಣ ಗಗನೇ ಛಾವೇ ರಕ್ತ ಬೀಜ ಮಾರೀ ಕರೇ ರುಧಿರ ಧಾರೇ|| ಇಂದ್ರ ಚಂದ್ರ ಕರತ ಧ್ಯಾನ ಭಯೇ ಧರಣೀ ಕಂಪಮಾನ ಆವೇ ಹರಿ ಶಂಖನಾದೇ ಸಕಲ ಚರಣ ಪಾವೇ|| ಬ್ರಹ್ಮಾ ಹರಿ ಹರ ಧರಣೀ ಅಂಬರ ಸಿದ್ಧ ಕಿನ್ನರ ಸಜಲ ಜಲಧರ ಜ್ಯೋತಿಃ ಸಂಚಾರೇ||
ಸದಾನಂದಮಯೀ ಕಾಲೀ ಮಹಾಕಾಲೇರ್ ಮನಮೋಹಿನೀ|| (ತುಮಿ) ಆಪನೀ ನಾಚೋ ಆಪನಿ ಗಾಓ ಮಾ ಆಪನೀ ದಾಓ ಮಾ ಕರತಾಲೀ|| ಆದಿಭೂತಾ ಸನಾತನೀ ಶೂನ್ಯರೂಪಾ ಶಶಿಭಾಲೀ| ಬ್ರಹ್ಮಾಂಡ ಛಿಲೋ ನಾ ಜಖೊನ್ ಮುಂಡಾಮಾಲಾ ಕೊಥಾಯ್ ಪೇಲಿ|| ಸಬೇ ಮಾತ್ರ ತುಮಿ ಯಂತ್ರೀ ಆಮಾರಾ ತೋಮಾರ್ ತಂತ್ರೇ ಚಲಿ| ಜೇಮನಿ ನಾಚಾಓ ತೇಮನಿ ನಾಚಿ ಮಾ ಜೇಮನಿ ಬೋಲಾಓ ತೇಮನಿ ಬೋಲಿ|| ಅಶಾಂತ ಕಮಲಾಕಾಂತ ದಿಯೇ ಬೋಲೇ ಮಾ ಗಾಲಾಗಾಲಿ| ಸರ್ವನಾಶೀ ಧರೇ ಅಸಿ ಧರ್ಮಾಧರ್ಮಾ ದುಟೋ ಖೇಲಿ|| —-ಕಮಲಾಕಾಂತ
ಸಕಲಿ ತೋಮಾರ್ ಇಚ್ಛಾ ಇಚ್ಛಾಮಯೀ ತಾರಾ ತುಮಿ| ತೋಮಾರ್ ಕರ್ಮ ತುಮಿ ಕೊರೊ ಮಾ ಲೋಕೇ ಬೋಲೇ ಕೊರಿ ಆಮಿ|| ಪಂಕೇ ಬದ್ಧ ಕೊರೊ ಕರೀ ಪಂಗುರೇ ಲಂಘಾಓ ಗಿರಿ| ಕಾರೇ ದಾಓ ಮಾ ಬ್ರಹ್ಮಪದ ಕಾರೇ ಕೊರೊ ಅಧೋಗಾಮೀ|| ಆಮಿ ಯಂತ್ರ ತುಮಿ ಯಂತ್ರಿ ಆಮಿ ಘರ ತುಮಿ ಘರಣೀ| ಆಮಿ ರಥ ತುಮಿ ರಥೀ ಜೇಮನಿ ಚಾಲಾಓ ತೇಮನಿ ಚಲಿ|| —-ರಾಜಾ ನವಚಂದ್ರ
ಸ್ಥಿರತಾ ನಹಿ ನಹಿ ರೇ ಮಾನಸ ಸ್ಥಿರತಾ ನಹಿ ನಹಿ ರೇ|| ತಾಪತ್ರಯಸಾಗರಮಗ್ನಾನಾಂ ದರ್ಪಾಹಂಕಾರವಿಲಗ್ನಾನಾಮ್|| ವಿಷಯಪಾಶವೇಷ್ಟಿತಚಿತ್ತಾನಾಂ ವಿಪರೀತಜ್ಞಾನವಿಮತ್ತಾನಾಂ|| ಪರಮಹಂಸಯೋಗವಿರುದ್ಧಾನಾಂ ಬಹುಚಂಚಲತರಸುಖಸಿದ್ಧಾನಾಮ್|| —-ಸದಾಶಿವ ಬ್ರಹ್ಮೇಂದ್ರ
ಸ್ಥಿರತಾ ನಹಿ ನಹಿ ರೇ Read More »
ಸಿರಿ ವಾಣಿ ಗೌರಿ ಹೇ ಶಾರದಾಂಬೆ ಸೂತ್ರಧಾರಿಣಿ ಜಗವೇ ಬೊಂಬೆ|| ಶ್ರೀರಾಮಕೃಷ್ಣರಿಂ ಪೂಜಿತೇ ಮಾತೇ ಪರಾಶಕ್ತಿ ಪರಮೇಶ್ವರದಯಿತೇ|| ದಯಾಸಾಗರೇ ರಕ್ಷಿಸು ಎನ್ನನು ಸ್ಮಯದಿಂ ಭಯದಿಂ ದೂಷಿತಶಿಶುವನು| ಭವಸಾಗರದಿಂ ಕಾಪಿಡು ಜನರನು ಅವನೀಕುವರಿ ನೀಡುತ ಕರವನು|| —-ಸ್ವಾಮಿ ಹರ್ಷಾನಂದ
ಸಿರಿ ರಾಮಕೃಷ್ಣ ಚರಣತಲದಿ ಶರಣೆನು ಮನವೇ|| ಸಕಲ ತೀರ್ಥ ಸಕಲ ಶಾಸ್ತ್ರ ಸಾರ ನೀನಹೆ| ನಿಖಿಲ ಭಕುತ ಹೃದಯಕಮಲ ತರಣಿ ನೀನಹೆ|ಎನುತ|| ಪ್ರೇಮ ಭಕುತಿ ಕಲಿಯುಗದಲಿ ತಾರಕ ಶಕುತಿ| ಪ್ರೇಮರೂಪ ಪ್ರೇಮಾನಂದ ಮಂಗಲ ಮೂರುತಿ|ಎನುತ|| ದಕ್ಷಿಣೇಶ್ವರ ಲೀಲಾಕ್ಷೇತ್ರ ಪರಮಪವಿತ್ರ|ಮು- ಮುಕ್ಷ ಜನರ ಮುದದಿ ಕರೆದೆ ನೀನೆ ಸುಮಿತ್ರ|ಎನುತ||
ಸಿರಿ ರಾಮಕೃಷ್ಣ ಚರಣತಲದಿ Read More »
ಸಾರದ ರೂಪತಾಳಿ ಬಂದಿಹಳು ತಾಯಿ ಕಾಳಿ ಅದನರಿತೆ ರಾಮಕೃಷ್ಣ ಪೂಜಿಸಿದರು ಭಾವ ತಾಳಿ|| ಆದ್ಯಾಶಕ್ತಿ ನೀ ಮಾತೆ ಸರ್ವಜೀವಮುಕ್ತಿದಾತೆ| ಮಹಾಲಕ್ಷ್ಮೀ ಸರಸ್ವತಿ ಗುಪ್ತರೂಪ ಜ್ಞಾನದಾತೆ|| ಸೀತಾ ರಾಧಾ ಅನ್ನಪೂರ್ಣಾ ಕಾಯ ಪಡೆದ ಭುವಿಯು ಧನ್ಯ| ಪ್ರೇಮದಿಂದ ತಾಯಿಯೆಂದು ಕರೆವ ಮನುಜ ಜಗದಿ ಮಾನ್ಯ|| ದೀನಜನರ ಉದ್ಧರಿಸೆ ದೀನರೂಪ ತಾಳಿ ಬಂದೆ| ಅಭಯೇ ನೀನು ಉಭಯಕರದಿ ಅಭಯವನ್ನು ನೀಡಲೆಂದೆ|| —-ಸ್ವಾಮಿ ಶಾಸ್ತ್ರಾನಂದ
ಸಾಗುತಿಹುದು ಚಿತ್ತಭೃಂಗ ಕಾಳೀಪದ ನೀಲಕಮಲ ಮಧುಪಾನದ ಆಸೆಗೆ| ಸಕಲ ವಿಷಯ-ಕುಸುಮರಸವು ಎಷ್ಟಾದರು ತುಚ್ಚವೆಂದು ತಿಳಿಯಿತಿಂದು ಮನಸಿಗೆ|| ತಾಯ ಪಾದಕಮಲ ನೀಲ ಮಧು ಕುಡಿಯುವ ಭೃಂಗ ನೀಲ ನೀಲದಲ್ಲಿ ನೀಲ ಸೇರಿ ನೀಲವಾದ ಪರಿಯನು ಕಂಡು ಬೆರಗುವಡುವನು|| ಸುಖ ಬಂದರೆ ಹಿಗ್ಗದೆ ನೋವಿನಲ್ಲಿ ಕುಗ್ಗದೆ ಆನಂದಸಿಂಧುವಿನಲಿ ನಿರುತ ತೇಲುತಿರುವನು ಭಕ್ತ ಕಮಲಾಕಾಂತನು|| —-ವಚನವೇದ
ಸಾಗುತಿಹುದು ಚಿತ್ತಭೃಂಗ Read More »
ಸಪ್ತಋಷಿ ಭುವನದಿಂದ ಇಳೆಗಿಳಿದು ಬಂದ| ಶ್ರೀಗುರುದೇವನ ಕಂದ ವಿವೇಕಾನಂದ|| ತ್ಯಾಗವಿರಾಗದ ಕಡಲು ಭೋಗಗಳ ಸಿಡಿಲು| ಜಗಜನರಿಗೆ ತಾಯ್ಮಡಿಲು ಹರನ ನರನೊಡಲು|| ಆತ್ಮಜ್ಞಾನದ ಕಾಂತಿ ಮೋಹದುಪಶಾಂತಿ| ಬಳಲಿದರಿಗೆ ವಿಶ್ರಾಂತಿ ನೀಗಿರುವೆ ಭ್ರಾಂತಿ|| ಮಿರುಗುವ ವಿದ್ಯಾಸೂರ್ಯ ನಿಸ್ಸೀಮವೀರ್ಯ| ಮೇರೆಯ ಅರಿಯದ ಧೈರ್ಯ ಎಸಗೆ ಗುರುಕಾರ್ಯ|| —-ಸ್ವಾಮಿ ತದ್ರೂಪಾನಂದ
ಸದಾ ಎನ್ನ ಹೃದಯದಲ್ಲಿ ವಾಸಮಾಡೋ ಶ್ರೀಹರಿ| ನಾದಮೂರ್ತಿ ನಿನ್ನ ಚರಣ ಮೋದದಿಂದ ಭಜಿಸುವೆನೋ|| ಧ್ಯಾನವೆಂಬ ನವರತ್ನದ ಮಂಟಪದ ಮಧ್ಯದಲ್ಲಿ| ಗಾನಲೋಲನ ಕುಳ್ಳಿರಿಸಿ ಜ್ಞಾನದಿಂದ ಭಜಿಸುವೆನೋ|| ಭಕ್ತಿರಸವೆಂಬ ಮುತ್ತು ಮಾಣಿಕ್ಯದ ಹರಿವಾಣದಿ| ಮುಕ್ತನಾಗಬೇಕು ಎಂದು ಮುತ್ತಿನ ಆರತಿಯೆತ್ತುವೆನೋ|| ನಿನ್ನ ನಾನು ಬಿಡುವನಲ್ಲ ಎನ್ನ ನೀನು ಬಿಡಲು ಸಲ್ಲ| ಘನ್ನಮಹಿಮ ವಿಜಯವಿಟ್ಠಲ ನಿನ್ನ ಭಕ್ತನ ಕೇಳೋ ಸೊಲ್ಲ|| —-ವಿಜಯದಾಸ
ಸದಾ ಎನ್ನ ಹೃದಯದಲ್ಲಿ Read More »
ಸದಾ ಎನ್ನ ನಾಲಿಗೆಯಲಿ ಬರಲಿ ರಾಮನಾಮ|| ಬರಲಿ ರಾಮನಾಮ ಸದಾ ಬರಲಿ ಕೃಷ್ಣ ನಾಮ| ಸತತ ನಿನ್ನ ಚರಣ ಸೇವೆ ನೀಡು ಎನಗೆ ರಾಮ|| ನಿನ್ನ ನಾಮ ನೆನೆವುದಕೆ ಕರುಣಿಸೆನಗೆ ಸುಮನವ| ನಾ ನಿನ್ನ ನಂಬಿದೆ ಶ್ರೀರಾಮಚಂದ್ರ ದೇವ||
ಸದಾ ಎನ್ನ ನಾಲಿಗೆಯಲಿ Read More »
ಸತ್ಯ ಜ್ಞಾನ ತಪೋನಿಧಿಯೇ ವೀರ್ಯ ಧೈರ್ಯ ತ್ಯಾಗಗಣಿಯೇ| ಭೃತ್ಯ ಜನರ ನಮನವಿದನು ಸ್ವೀಕರಿಸು ನರೇಂದ್ರಮುನಿಯೇ|| ಭವದ ಭ್ರಾಂತಿ ಬನಣೆ ನೀಗೆ ಹರನೆ ನರನ ವೇಷ ತಾಳ್ದೆ ಕವಿದ ಭ್ರಮೆಯ ಕತ್ತಲಳಿಸಿ ದಿವ್ಯ ಜ್ಞಾನ ಪ್ರಭೆಯ ತೋರ್ದೆ ಶಾಂತಿ ಕಾಂತಿ ನೀಡಿದೆ|| ಹೇಡಿ ಜನರ ಹೃದಯದಲ್ಲಿ ಆತ್ಮಶ್ರದ್ಧೆಶೂನ್ಯರಲ್ಲಿ ಸಿಡಿಲ ಸ್ನಿಗ್ಧ ಮೊಳಗಿನಿಂದ ಶಕ್ತಿ ಶ್ರದ್ಧ ಹೊಳೆ ಹರಿಸಿದೆ ಧೈರ್ಯ ಸ್ಥೈರ್ಯ ಬಿತ್ತಿದೆ|| ಕ್ಲೇಶ ಕಷ್ಟಗ್ರಸ್ತ ಜನಕೆ ಅಮೃತಸುಖದ ಧಾಮವಾದೆ ಈಶರೂಪಿ ರಾಮಕೃಷ್ಣ ಶಿಷ್ಯರತ್ನ ಶಿಖಾಮಣಿಯೇ ಜ್ಞಾನ ಸೌಖ್ಯದಾತನೆ|| —-ಸ್ವಾಮಿ
ಸತ್ಯ ಜ್ಞಾನ ತಪೋನಿಧಿಯೇ Read More »
ಸಕಲ ಭುವನವಿದು ಶ್ಯಾಮಮಯ ಗಿರಿಧರನೆನ್ನಯ ಪ್ರಾಣಪ್ರಿಯ||
ಸಕಲ ಭುವನವಿದು ಶ್ಯಾಮಮಯ Read More »
ಸಕಲಭಯ ತಲ್ಲಣವ ಪರಿಹರಿಪ ಮಹಿಮನನು ಒಮ್ಮೆಯಾದರು ಏಕೆ ಕರೆಯದಿರುವೆ| ಭವಘೋರಭ್ರಮೆಯಲ್ಲಿ ನಿನ್ನ ನೀನೇ ಮರೆತೆ ಏನೀ ವಿಡಂಬನೆಯು ನಿನಗೆ ತರವೇ|| ಜನಧನದ ಸಂಗದಲಿ ಅವನ ಮರೆಯದ ತೆರದಿ ಎಚ್ಚರಿರು ಭ್ರಮೆಯನ್ನು ಅತ್ತ ದೂಡು| ನಿಜವನಾರಾಧಿಸಲು ಸರ್ವಪಾಪವಿಮುಕ್ತ ನನ್ನ ಮಾತಿನ ನಿಜವನಳೆದು ನೋಡು|| ಭವಜಲಧಿಯನು ದಾಟಿ ನಡೆವ ಮನವಿರೆ ನಿನಗೆ ಅಳಿಯಾಸೆಗಳ ತೊರೆದು ಹರಿಯ ನುತಿಸು ದೇಹ ಮನ ಪ್ರಾಣಗಳ ಅವನಿಗರ್ಪಿತ ಮಾಡಿ ಪ್ರೇಮದಾರಾಧನೆಗೆ ಮನವ ಸಲಿಸು|| —-ವಚನವೇದ
ಸಕಲಕೆಲ್ಲಕೆ ನೀನೇ ಅಕಲಂಕ ಗುರುವೆಂದು ನಿಖಿಲ ಶಾಸ್ತ್ರವು ಪೇಳುತಿರಲರಿದೆನು|| ಅವರವರ ದರುಶನಕೆ ಅವರವರ ದೇಶದಲಿ ಅವರವರಿಗೆಲ್ಲ ಗುರು ನೀನೊಬ್ಬನೇ| ಅವರವರ ಭಾವಕ್ಕೆ, ಅವರವರ ಅರ್ಚನೆಗೆ ಅವರವರಗೆ ದೇವ ನೀನೊಬ್ಬನೇ|| ಹೋರಾಟವಿಕ್ಕಿಸಲು ಬೇರಾದೆಯಲ್ಲದೆ ಬೇರುಂಟೆ ಜಗದೊಳಗೆ ಎಲೆ ದೇವನೇ| ಆರೂ ಅರಿಯರು ನೀನು ಬೇರಾದ ಪರಿಗಳನು ಮಾರಾರಿ ಶಿವ ಷಡಕ್ಷರಿಲಿಂಗವೆ|| —-ಮುಪ್ಪಿನ ಷಡಕ್ಷರಿ