ಇನಿತಾದರೂ ನಿನಗೆ ಮತಿಯಿಲ್ಲವೆ

ಇನಿತಾದರೂ ನಿನಗೆ ಮತಿಯಿಲ್ಲವೇ ಮನವೆ| ಹೀನಾಯ ಮಾಡದಿರು ಪರದೋಷಗಳನೆಣಿಸಿ|| ಅವನ ಬಯ್ಯುವೆ ಯಾಕೆ ಅವನ್ಯಾರು ನೀನ್ಯಾರು ಅವನ ಪಾಪಕೆ ನೀನು ಭಾಗಿಯಾದೆ| ಅವನು ಉತ್ತಮನಾದರವನು ಬದುಕಿದ ಕಾಣೊ ಅವ ಪುಣ್ಯ ಮಾಡಿದರೆ ಅವನ ಕುಲ ಉದ್ಧಾರ|| ನೀನು ಪಡೆವುದರಲ್ಲಿ ಬೇಡಬಂದವನಲ್ಲ ನಿನಗು ಅವನಿಗು ಏನು ಸಂಬಂಧವೊ| ಮನೆ ಒಡವೆ ವಸ್ತ್ರಗಳ ಭಾಗ ಕೇಳುವುದಿಲ್ಲ ಕ್ಷಣಕ್ಷಣಕೆ ಸಂದೇಹ ಮಾಡಿಕೊಂಬುದು ಸಲ್ಲ|| ನಿನ್ನ ಗತಿ ಮಾರ್ಗಕ್ಕೆ ಅವ ನಡೆದು ಬರುವನೇ ನಿನ್ನಿಂದ ಪರಲೋಕ ಅವಗೆ ಉಂಟೆ| ನಿನ್ನೊಳಗೆ ನೀ ತಿಳಿದು […]

ಇನಿತಾದರೂ ನಿನಗೆ ಮತಿಯಿಲ್ಲವೆ Read More »