ಮಂಗಲಮಯ ಪ್ರಭು
ಮಂಗಲಮಯ ಪ್ರಭು ನೀನೆಂದರಿತಿಹೆ ಕಂಗಳು ನಿನ್ನಯ ಪಾದದಿ ನೆಟ್ಟಿರೆ|| ಇರಿಸೈ ಸುಖದಲಿ ಇರಿಸು ದುಃಖದಲಿ ಅರಿತಿಹೆ ಭಯವಿನಿತಿಲ್ಲವು ಎನಗೆ|| ಏನನು ಗೈದರು ಕೈಬಿಡೆಯೆಂಬುವ ಎನಗೆ ನೀಡು ನೀ ಭರವಸೆಯ|| ಪ್ರಭುವೇ ದೇವನೆ ಬಾ ಮಮ ಹೃದಯಕೆ ಶುಭವನು ಕೋರುತ ಬೇಡುತಲಿರುವೆ|| —-ಸ್ವಾಮಿ ಹರ್ಷಾನಂದ
ಮಂಗಲಮಯ ಪ್ರಭು ನೀನೆಂದರಿತಿಹೆ ಕಂಗಳು ನಿನ್ನಯ ಪಾದದಿ ನೆಟ್ಟಿರೆ|| ಇರಿಸೈ ಸುಖದಲಿ ಇರಿಸು ದುಃಖದಲಿ ಅರಿತಿಹೆ ಭಯವಿನಿತಿಲ್ಲವು ಎನಗೆ|| ಏನನು ಗೈದರು ಕೈಬಿಡೆಯೆಂಬುವ ಎನಗೆ ನೀಡು ನೀ ಭರವಸೆಯ|| ಪ್ರಭುವೇ ದೇವನೆ ಬಾ ಮಮ ಹೃದಯಕೆ ಶುಭವನು ಕೋರುತ ಬೇಡುತಲಿರುವೆ|| —-ಸ್ವಾಮಿ ಹರ್ಷಾನಂದ
ಮರೆಯಬೇಡ ಮನವೆ ನೀನು ಹರಿಯ ಸ್ಮರಣೆಯ|| ಯಾಗಯಜ್ಞ ಮಾಡಲೇಕೆ ಯೋಗಿಯತಿಯು ಆಗಲೇಕೆ| ನಾಗಶಯನ ನಾರದನುತನ ಕೂಗಿ ಭಜನೆ ಮಾಡೋ|| ಸತಿಯು ಸುತರು ಹಿತರು ಎಂದು ಮತಿಯುಗೆಟ್ಟು ಕೆಡಲಿಬೇಡ| ಗತಿಯು ತಪ್ಪಿ ಹೋಗುವಾಗ ಸತಿಯು ಸುತರು ಬರುವರೇ|| ಹರಿಯ ಸ್ಮರಣೆ ಮಾತ್ರದಿಂದ ಘೋರದುರಿತವೆಲ್ಲ ನಾಶ| ಪರಮಪುರುಷ ಶ್ರೀ ಪುರಂದರ ವಿಟ್ಠಲೋರಾಯ ಪದವಿ ಕೊಡುವ|| —-ಪುರಂದರದಾಸ
ಮನ ಶುದ್ಧಿಯಿಲ್ಲದವಗೆ ಮಂತ್ರದ ಫಲವೇನು| ತನು ಶುದ್ಧಿಯಿಲ್ಲದವಗೆ ತೀರ್ಥದ ಫಲವೇನು|| ಮಿಂದಲ್ಲಿ ಫಲವೇನು ಮೀನು ಮೊಸಳೆಯಂತೆ ನಿಂದಲ್ಲಿ ಫಲವೇನು ಶ್ರೀಶೈಲದ ಕಾಗೆಯಂತೆ| ಹೊರಗೆ ಮಿಂದು ಒಳಗೆ ಮೀಯದವರ ಕಂಡು ಬೆರಗಾಗಿ ನಗುತಿದ್ದ ಪುರಂದರವಿಟ್ಠಲ|| —ಪುರಂದರದಾಸ
ಮನ ಶುದ್ಧಿಯಿಲ್ಲದವಗೆ Read More »
ಮನವೆಂಬ ಮರ್ಕಟನು ತನುವೆಂಬ ವೃಕ್ಷವನೇರಿ ಇಂದ್ರಿಯಂಗಳೆಂಬ ಶಾಖೆಶಾಖೆಗೆ ಹಾರಿ ವಿಷಯಂಗಳೆಂಬ ಫಲಂಗಳ ಗ್ರಹಿಸಿ ಭವದತ್ತ ಮುಖವಾಗಿ ಹೋಗುತಿದೆ ನೋಡಾ|| (ಈ) ಮನವೆಂಬ ಮರ್ಕಟನ (ನಿಮ್ಮ) ನೆನಹೆಂಬ ಪಾಶದಿ ಕಟ್ಟೆ ಎನ್ನನುಳಿಸಿಕೊಳ್ಳಯ್ಯ ಅಖಂಡೇಶ್ವರಾ|| —ಷಣ್ಮುಖಸ್ವಾಮಿ
ಮಣಿವೆ ನಿನ್ನ ಕಮಲದಡಿಗೆ ದಯದಿ ಬಾರೊ ಎದೆಯ ಗುಡಿಗೆ|| ಭಕ್ತಹೃದಯಜಲಜ ಬಂಧು ನೀನಪಾರ ಕರುಣೆ ಸಿಂಧು| ಪ್ರೇಮಭಕ್ತಿಯೊಡನೆ ಕೂಡಿ ಬಾರೈ ತಂದೆ ಕರೆವೆ ಬೇಡಿ|| ತ್ಯಾಗಮೂರ್ತಿ ತಪೋಮೂರ್ತಿ ಜ್ಞಾನಮೂರ್ತಿ ಸೊಗದ ಮೂರ್ತಿ| ಹರಿದಿದೆಲ್ಲೆಡೆ ನಿನ್ನ ಕೀರ್ತಿ ತ್ಯಾಗಪಥದ ನಿತ್ಯಸ್ಪೂರ್ತಿ|| ವಿಶ್ವದೊಡೆಯ ಶುದ್ಧಹೃದಯ ಕೋಟಿಸೂರ್ಯ ಜ್ಯೋತಿರೂಪ| ನಿನ್ನೀ ಕಂದನ ಕರೆಯನಾಲಿಸಿ ಬಾರೋ ಬೇಗ ಶಕ್ತಿವೆರಸಿ|| —ಸ್ವಾಮಿ ತದ್ರೂಪಾನಂದ
ಮಣಿವೆ ನಿನ್ನ ಕಮಲದಡಿಗೆ Read More »
ಮಣಿಯಲೆನ್ನ ಶಿರವು ನಿನ್ನ ಚರಣಧೂಳಿ ತಲದಲಿ| ನನ್ನ ಅಹಂಕಾರವೆಲ್ಲ ಮುಳುಗಲಶ್ರುಜಲದಲಿ|| ನನಗೆ ನಾನೆ ಪೂಜೆಗೈಯೆ ಸೊಡರನೆತ್ತಲು ಬೆಳಕು ಬರುವ ಬದಲು ಅಯ್ಯೋ ಬರಿಯ ಕತ್ತಲು ಅಹಂಕಾರದಂಧಕಾರ ಮುತ್ತುತಿದೆ ಸುತ್ತಲು|| ನನ್ನ ನಾನೆ ಮೆರೆಯದಂತೆ ನಾನು ಗೈವ ಕರ್ಮದಿ ನಿನ್ನ ಇಚ್ಛೆ ಪೂರ್ಣವಾಗ- ಲೆನ್ನ ಜೀವಧರ್ಮದಿ| ತಳೆಯಲೆನ್ನ ಜ್ಞಾನ ನಿನ್ನ ಚರಮ ಶಾಂತಿಯ ಬೆಳಗಲೆನ್ನ ಪ್ರಾಣ ನಿನ್ನ ಪರಮ ಕಾಂತಿಯ ನನ್ನನಳಿಸು ನೀನೆ ನೆಲಸು ಹೃದಯಪದ್ಮದಲದಲಿ|| —-ಕುವೆಂಪು
ಮಡಕೆಯ ಮಾಡುವರೆ ಮಣ್ಣೇ ಮೊದಲು ತೊಡಿಗೆಯ ಮಾಡುವರೆ ಹೊನ್ನೇ ಮೊದಲು ಶಿವಪಥವರಿವಡೆ ಗುರುಪಥ ಮೊದಲು ಕೂಡಲಸಂಗಮದೇವರನರಿವಡೆ ಶರಣರ ಸಂಗವೇ ಮೊದಲು|| —-ಬಸವಣ್ಣ