ಮುಕುತಿ ತಮಸು ಎರಡಿಲ್ಲೆ ಕಂಡ್ಯಾ

ಮುಕುತಿ ತಮಸು ಎರಡಿಲ್ಲೆ ಕಂಡ್ಯಾ ಮುಕುತಿ ಬೇರೆ ತಮಸು ಬೇರಿಲ್ಲ ಕಂಡ್ಯಾ ಗುರುಪಾದ ಒಡಗೊಂಡು ಮರುತ ಶಾಸ್ತ್ರವ ನೋಡಿ ಹರಿಯ ಗುಣಂಗಳ ಕೊಂಡಾಡುತ ಪರಮ ಉತ್ತಮರು ಬರಲು ಬನ್ನಿ ಬನ್ನೆಂದು ಎರಗಿ ತಕ್ಕೈಸಿ ಕೊಂಡುಂಬುವದೆ ಮುಕ್ತಿ ||1|| ನಾನು ನೀನು ಎಂದು e್ಞÁನವನೆ ತಿಳಿಕೊಂಡು ತಾ ನಿಲ್ಲದಿಲ್ಲೆಂದು ಪೇಳಿಕೊಂಬಾ ಈ ನಾಡಿನೊಳಗಿವ ಹೀನವನು ಎಂಬರ್ಥ ಈ ನುಡಿ ಎನಿಸಿಕೊಂಬುದೆ ತಮಸು ||2|| ಒಂದರೊಳಾನಂತ ಅನಂತದಲಿ ಒಂದು ಒಂದೊಂದು ಅನಂತ ಹರಿಪ್ರೇರಕ ಎಂದು ಗ್ರಹಿಸಿ ಹರಿಗುರು ಹರಿದ್ವೇಷಿಗಳನ್ನ ನಿಂದಕವಾಗಿ […]

ಮುಕುತಿ ತಮಸು ಎರಡಿಲ್ಲೆ ಕಂಡ್ಯಾ Read More »

ಮುಂಜಾನೆ ಎದ್ದು ಸಂಜೀವನೆನ್ನಿ

ಮುಂಜಾನೆ ಎದ್ದು ಸಂಜೀವನೆನ್ನಿ | ಎಂದೆಂದಿನ ದುರಿತ ಪೋದವೆನ್ನಿ ವಾಯುನಂದನನನೆನ್ನಿ | ವರವಜ್ರಕಾಯನೆನ್ನಿ | ರಾಯ ರಾಘವನ ಕಿಂಕರನೆನ್ನಿರೈ | ಛಾಯಾಗ್ರಿಯನ ಕೊಂದು ವನ ಕಿತ್ತಿದನೆನ್ನಿ | ಮಾಯದ ಲಂಕೆಯ ದಹನನೆನ್ನಿರೈ ||1|| ಪಾಂಡು ಕುಮಾರನೆನ್ನಿ ಪಾಪ ಸಂಹಾರನೆನ್ನಿ | ಉಂಡು ವಿಷವ ತೇಗಿದಾನೆನ್ನಿರೈ | ಲೇಂಡ ಹಿಡಂಬಕನ ಕೊಂದನೆನ್ನಿ | ಚಂಡ ಕುರವಂಶಹತನೆನ್ನಿರೈ ||2|| ಆನಂದತೀರ್ಥರೆನ್ನಿ ಅಮಿತ ಜೀವಾತ್ಮನೆನ್ನಿ | ಜ್ಞಾನಕೆ ಮೊದಲು ದೇವತಿಯನ್ನಿರೈ | ಆನಂದಮಯನಾದ ವಿಜಯವಿಠ್ಠಲರಾಯನ ಧೇನಿಪ ಜನರಿಗೆ ಕೈವಲ್ಯ ಮಾರ್ಗವೆನ್ನಿ||3||

ಮುಂಜಾನೆ ಎದ್ದು ಸಂಜೀವನೆನ್ನಿ Read More »

ಮಾನಸ ಪೂಜೆಯನು ಮಾಡು

ಮಾನಸ ಪೂಜೆಯನು ಮಾಡು | ಧ್ಯಾನ ಪೂರ್ವದಿಂದ ಕುಳಿತು e್ಞÁನ ಭಕುತಿಯ ವಿಡಿದು ಲಕುಮಿ | ಪ್ರಾಣನಾಥನ ಪ್ರೇರಣೆಯಿಂದ ಕಾಮ ಕ್ರೋಧವ ಹಳಿದು ವಿಷಾದವೆಂಬೋ | ಸ್ತೋಮಗಳನು ತೊರೆದು ರಜೋ ಮೊದಲಾದ || ತಾಮಸದ ಬುದ್ಧಿ ಬಿಟ್ಟು ನೇಮನಿತ್ಯ ತೀರಿಸಿಕೊಂಡು | ಶ್ರೀಮದಾನಂದತೀರ್ಥರ ಕೋಮಲಾಂಘ್ರಿಯಲ್ಲಿ ಈ ಮನಸ್ಸು ಇಟ್ಟು ||1|| ಹೃದಯ ಪದುಮದೊಳಗೆ ಹರಿಯ ಪದುಮ ಪದಗಳಿಟ್ಟು | ದೇಹ ಕದಲದಂತೆ ಇದ್ದುಜ್ಞಾನ ಉದಿತವಾದ ದೃಷ್ಟಿಯ || ಹದುಳದಿಂದ ತಿಳಿದು ಅಂತರವೆಲ್ಲವನು ನೋಡಿ | ಕದವ ತೆರೆದು

ಮಾನಸ ಪೂಜೆಯನು ಮಾಡು Read More »

ಮಾನ ನಿನ್ನದು ಅಭಿಮಾನ ನಿನ್ನದು

ಮಾನ ನಿನ್ನದು ಅಭಿಮಾನ ನಿನ್ನದು | ದಾನವಾಂತಕ ರಂಗ ದಯಮಾಡಿ ಸಲಹೊಪ ಒಡೆಯಳು ಕುಳಿತಿರಲು ತೊತ್ತಿನ ಮುಂದಲಿಯ | ಪಿಡಿದೆÀಳೆದೊಯ್ದು ಘಾಸಿಯನು ಮಾಡಿ || ಅಡಿಗಡಿಗೆ ಅಪಮಾನಗೊಳಿಸಿ ಕೊಲೆ ಮಾಡಿದರೆ | ಒಡತಿಗಲ್ಲದೆ ಕೊರತೆ ಅವಳಿಗೇನಯ್ಯಾ||1|| ಸದನದೊಳು ಪುರುಷನು ಇರುತಿರಲು ಹೆಂಡತಿಯ | ಎದೆಯ ಮೇಲಿನ ಸೆರಗು ಸೆಳೆದುಕೊಂಡು|| ಒದೆದು ಕೈ-ಕಾಲಿಂದ ಮಾನಹಾನಿ ಮಾಡಿದರೆ | ಅದು ಪುರುಷಗಲ್ಲದೆ ವಧುವಿಗೇನಯ್ಯಾ ||2|| ಪಿತನ ಬಳಿಯಲಿ ಮಗನು ಕುಳಿತಿರಲು ವರ ಮನುಜ | ಖರೆಯಿಂದ ಕೆಡಹಿ ಪಾಶದಲಿ ಕಟ್ಟಿ

ಮಾನ ನಿನ್ನದು ಅಭಿಮಾನ ನಿನ್ನದು Read More »

ಮಾಧವನ ನೋಡಿ ಸಂಪಾದಿಸಿದೆ

ಮಾಧವನ ನೋಡಿ ಸಂಪಾದಿಸಿದೆ ಭಕುತಿಯನು | ಆದರಪೂರ್ವಕದಿಂದಲಿ ಮಾಧುರ್ಯವಾದ ಮನ | ಸಾಧುಗಳ ಸಂಗತಿ ಭೇದ ಪಂಚಕ ಪೂರ್ಣಬೋಧರ ಮತವಿಡಿದು ಮಡುವಿನೊಳು ಕರಿ ಮೊರೆ ಇಡಲು ಕೇಳುತ ನಕ್ರನ | ಕಡಿದು ಕರುಣದಿಂದಲಿ ತಡಿಯದಲೆ ಜಡುಮತಿಯ | ಬಿಡದೆ ಉದ್ಧರಿಸಿದ ಒಡೆಯ ಪುಣ್ಯನಿಧಿಗೆ ಕಡು ಮೆಚ್ಚಿ ಬಂದವನ ||1|| ಮರಣಕಾಲದಿ ಭಯಂಕರವಾದ ಯಮನ ದೂ | ತರನ ನೋಡಿ ಕರಿಯಲು | ಪರಮ ವೇಗದಿಂದ ಪುರಕೆ ಕರಿಸಿದ ಉಭಯ ಶರಧಿ ಮಧ್ಯದಲ್ಲಿ | ಮೆರೆವ ಮಧುಸೂದನನ ||2||

ಮಾಧವನ ನೋಡಿ ಸಂಪಾದಿಸಿದೆ Read More »

ಮಾತು ಮನ್ನಿಸೊ ಪರಮಾತಮಾ ಮುದದಿಂದ

ಮಾತು ಮನ್ನಿಸೊ ಪರಮಾತಮಾ ಮುದದಿಂದ ಮಾತು ವೈದವನಲವ ಮಾತುರದೊಳು ಗೆದ್ದು ಮಾತಿಯ ಸೆರೆ ಪ್ರೇಮಾತುರ ಭೇದಿಸಿದ ಮಾತುರಪತಿ ಚಿನ್ಮಾತುರ ತೋರೋ ಶುನಕ ಸೂಕರ ಘೂಕಾ ಮನಕಾಶಾ ಕಾಕಕಂಕಾ ದನ ಕತ್ತೆ ಮೊದಲಾದ ಜನ ಕಲಿಯುಗದೀ ತನಕೆ ಆದzಕಿನ್ನು ಮನಕಾನಂದವ ಕಾಣೆ ದಿನ ದಿನ ಕಾಂಚನಾಶಿಯಿಂದ ಘನಕಾಮ ಬದ್ಧನಾದೆ ಕನಕಾಂಬುಜ ಭವಜನಕ ಜಗತ್ಪತಿ ಜನ ಕಥೆಯಿಂದ ಭ ವನಕತಿ ಮೋಹಿಸಿ ಧನಕವಿಯೆನಿಸಿದೆ ವನಕವಿವರಗೆ ಮೋಹನ ಕಂಠ ಮಾಲಿಯೆ ಎನ್ನ ಕಡೆ ಮೊಗವಾಗು ||1|| ಸನಕಾದಿ ವಂದ್ಯ ತ್ರಿಭುವನಕಾದಿ ಮೂಲವೆನಿಸಿ

ಮಾತು ಮನ್ನಿಸೊ ಪರಮಾತಮಾ ಮುದದಿಂದ Read More »

ಮಾತನಾಡೈ ಮನ್ನಾರಿ ಕೃಷ್ಣ ಮಾತನಾಡೈ

ಮಾತನಾಡೈ ಮನ್ನಾರಿ ಕೃಷ್ಣ ಮಾತನಾಡೈ ದಾತನು ನೀನೆಂದು ಬಯಸಿ ಬಂದೆನು ಮಾತನಾಡೈ ಊದುವ ಸಿರಿ ಪೊಂಗೊಳಲೊ ಜಗ-| ದಾಧಾರದ ನಿಜ ಹೊಳೆಯೋ || ಪಾದದ ಪೊಂಗೆಜ್ಜೆ ಥಳಿಲೊ ಸರ್ವ | ವೇದಗಳರಸುವ ಕಲ್ಪಕ ಸೆಳಲೊ ||1|| ಕಸ್ತೂರಿ ತಿಲಕದ ಮದವೊ ಮ- ಕುಟ ಮಸ್ತಕದಿ ಝಗಝಗವೊ || ವಿಸ್ತರದಿ ಪೊತ್ತ ಜಗವೊ ಪರ- | ವಸ್ತುವು ನಂದ ಯಶೋದೆಯ ಮಗುವೊ ||2|| ನವನೀತವ ಪಿಡಿದ ಕರವೊ ನವ-| ನವ ಮೋಹನ ಶೃಂಗಾರವೊ || ಅವತರಿಸಿದ ಸುರತರುವೊ ಶತ-

ಮಾತನಾಡೈ ಮನ್ನಾರಿ ಕೃಷ್ಣ ಮಾತನಾಡೈ Read More »

ಮನ್ನಿಸು ಮಾರಾರಿ ಮುದದಿಂದಲಿ

ಮನ್ನಿಸು ಮಾರಾರಿ ಮುದದಿಂದಲಿ ಎನ್ನ | ಬಿನ್ನಪವನೆ ಲಾಲಿಸಿ ಮುನ್ನೆ ಮಾಡಿದ ಯಿನ್ನು ದುರಿತಗಳನ್ನ ಹಾರಿಸಿ | ಎನ್ನನನುದಿನ ಅಮಿಶ್ರ ತತ್ವದಲಿ ಕಲಿ ವಿರಹಿತ ರುದ್ರ | ಹಮ್ಮಿನಿಂದಿತ್ತ ಸರ್ವವ ನೋಳ್ಪನೆ | ಬೊಮ್ಮನಾ ತತ್ವದಲಿ ಹೋಗಿಬರುವ ಪ್ರಬಲ್ಯ | ಉಮ್ಮೆಯರಸಾ ತಾಮಸ ಕಾರ್ಯದಧಿಪತಿ | ಒಮ್ಮೆ ಬಿಡದಲೆ ನರಹರಿಯ ನಾ | ಮಾಮ್ಮರತ ಮನದಲಿ ನೆನಸುವ ಸುಖದಿಂದಲಿ | ಅಮ್ಮಹಾ ವೈರಾಗ್ಯ ಭಾಗ್ಯವ | ಕಮ್ಮರದಿ ಕೊಡು ಕರುಣದಿಂದಲಿ ||1|| ನಂದಿವಾಹನ ನಾಗತಲ್ಪ ಕಲ್ಪಾಂತರ |

ಮನ್ನಿಸು ಮಾರಾರಿ ಮುದದಿಂದಲಿ Read More »

ಮನ್ನಿ ಮನ್ನಿಗೆ ಉಣ್ಣ ಬಂದಾ

ಮನ್ನಿ ಮನ್ನಿಗೆ ಉಣ್ಣ ಬಂದಾ | ತನ್ನವರೊಳಗಿದ್ದ ಸರ್ವ ಸಾರಭೋಕ್ತಾ ಭಕುತರಗೋಸುಗ ಭಕುತಿಯ ಕೈಕೊಂಡು ಕರುಣಾಂಬುಧಿ ಇಂದು ||1|| ಭೂವದರೊಳಗಿದ್ದು ದೈತ್ಯರ ಗೆದ್ದಂತೆ | ಆವಿಷ್ಣುವಾಗಿ ಮನ್ನಣೆಯ ಕೈಕೊಳುವಲಿ ||2|| ನಂಬಿದ ದಾಸರ್ಗೆ ಪ್ರಾರಬ್ಧ ಕರ್ಮವು | ಉಂಬೋದು ಬಿಡದಂದು ತದಾಕಾರ ರೂಪದಿ3 ಅವರವರ ಯೋಗ್ಯತೆ ಫಲ ಕೊಡುವೆನೆಂದು | ದಿವಿಜರ ಒಡಗೂಡಿ ದಿನ ಪ್ರತಿದಿನದಲ್ಲಿ ||4|| ತನ್ನ ಸಂಕಲ್ಪವು ಸಿದ್ಧಿ ಮಾಡುವೆನೆಂದು ಘನ್ನತೆಯಲಿ ನಮ್ಮ ವಿಜಯವಿಠ್ಠಲಸ್ವಾಮಿ ||5||

ಮನ್ನಿ ಮನ್ನಿಗೆ ಉಣ್ಣ ಬಂದಾ Read More »

ಮನವೆ ಮಾಧವನೊಳು ಮಮತೆಯಿರಲಿ

ಮನವೆ ಮಾಧವನೊಳು ಮಮತೆಯಿರಲಿ ತನು ಮನ ಧನಗಳು ತನವಾ ನೀಡಿದ ಮ್ಯಾಲೆ ಮಾನಸಿಜ ಜನಕನು ಅನುದಿನ ಪೊರೆವ ಕಾಮ ಜನಕನು ಪ್ರೇಮದಿ ನೆನದರೆ ಮಾಮನೋಹರ ತನ್ನ ಧಾಮವ ಕೊಡುವ||1|| ಸಂತತ ನಿನ್ನನು ಚಿಂತಿಸುವಂ- ತೆನ್ನಂತ ಮಂಗಳ ಮತಿಯು ನೀಡು ನೀ ಮನವೆ ||2|| ಅಜಭವನುತ ವಿಜಯ ಸಖನ ಯಜಿಸುವ ಜನರಿಗೆ ನಿಜಪದವನೆ ಕೊಡುವಾ ವಿಜಯವಿಠ್ಠಲನಾ ||3||

ಮನವೆ ಮಾಧವನೊಳು ಮಮತೆಯಿರಲಿ Read More »

ಮಧ್ವರಾಯರ ಕರುಣ ಪಡೆಯದವ

ಮಧ್ವರಾಯರ ಕರುಣ ಪಡೆಯದವ ಧರೆಯೊಳಗೆ ಇದ್ದರೇನು ಇಲ್ಲದಿದ್ದರೇನು ಮಧ್ವಮತವೇ ಮತವು ಸಕಲ ಶ್ರುತಿ ಸಮ್ಮತವು | ಮಧ್ವರಾಯರ ಧ್ಯಾನ ಅಮೃತಪಾನ || ಮಧ್ವರಾಯರ ಲೀಲೆ ನವರತುನದಾ ಮಾಲೆ | ಮಧ್ವೇಶನಾ ಸ್ಮರಣೆ ಕುಲಕೋಟಿ ಉದ್ಧರಣೆ ||1|| ಮಧ್ವರಾಯರ ಕಥೆಯ ಕೇಳಲದು ದುರಿತ ಹತ | ಮಧ್ವರಾಯರ ಭಕುತಿ ಮಾಡೆ ಮುಕುತಿ || ಮಧ್ವರಾಯರ ಸ್ತೋತ್ರ ಮಾಡಿದವ ಸತ್ಪಾತ್ರ | ಮಧ್ವರಾಯರ ಭಜನೆ ದುಷ್ಕರ್ಮ ತ್ಯಜನೆ ||2|| ಮಧ್ವರಾಯರ ದಾಸನಾದವನೆ ನಿರ್ದೋಷ | ಮಧ್ವರಾಯರ ಬಂಟ ಜಗಕೆ ನೆಂಟ

ಮಧ್ವರಾಯರ ಕರುಣ ಪಡೆಯದವ Read More »

ಮಧ್ವಮುನಿಯೇ ಎನ್ನ ಹೃತ್ಕುಮುದ ಚಂದ್ರ

ಮಧ್ವಮುನಿಯೇ ಎನ್ನ ಹೃತ್ಕುಮುದ ಚಂದ್ರ ಅದ್ವೈತಮತಾರಣ್ಯ ದಹನ ಗುಣಸಾಂದ್ರ ನೊಂದೆ ಎಂಭತ್ನಾಲ್ಕು ಲಕ್ಷಯೋನಿಗಳಲ್ಲಿ ಒಂದೇ ಪ್ರಕಾರ ಸಂಚgಣೆಯಿಂದ ಒಂದೊಂದು ಕರ್ಮಗಳನರಸಿ ನೋಡಲು ಅದ- ರಿಂದ ಭವಾಬ್ಧಿಗೆ ಬಂದುಪಾಯವ ಕಾಣೆ ||1|| ನೀರು ಚಳಪಳಕಾಸಿ ಆರಲಿಟ್ಟು ಹೆಪ್ಪು ನೀರಿನಿಂದಲಿ ಕೊಡಲು ಬಪ್ಪುದೇನೊ ಮಾರುತೀ ನಿನ್ನ ಕೃಪೆ ಪಡೆಯದಲೆ ಉಳಿದವರ ಕಾರುಣ್ಯವಾಗಲು ಮೋಕ್ಷಸಾಧನವಿಲ್ಲ||2|| ಹರಿಸಿರಿಗೆ ಎರಗುವ ಸತ್ವ ಶರೀರನೆ ನಿರುತ ಎನ್ನೊಳಗಿಪ್ಪ ಮೂಲಗುರುವೆ ನೆರೆ ನಂಬಿದೆನೊ ಸ್ವಾಮಿ ವಿಜಯವಿಠ್ಠಲರೇಯನ ಚರಣದಲ್ಲಿರುವಂತೆ ಸಾಧ್ಯವಾಗಲಿ ಮನಸು ||3||

ಮಧ್ವಮುನಿಯೇ ಎನ್ನ ಹೃತ್ಕುಮುದ ಚಂದ್ರ Read More »

ಮಧ್ವಮುನಿಯೆ ನಿನಗೆ ಎದ್ದು ಕರಗಳ ಮುಗಿವೆ

ಮಧ್ವಮುನಿಯೆ ನಿನಗೆ ಎದ್ದು ಕರಗಳ ಮುಗಿವೆ | ಬುದ್ಧಿ ಪಾಲಿಸಿ ಎನ್ನ ಉದ್ಧರಿಸೊ ಗುರುವೇ ದುರುಳ ಪಾಮರ ಸಂಕರನೆಂಬುವನು | ದುರಾಚಾರಗಳು ಧರಿಯೊಳಗೆ ಕುಭಾಷ್ಯಗಳ ವ್ಯಾಪಿಸೀ | ಇರಲು ಉತ್ತಮ ಸಂಪ್ರದಾಯದಲ್ಲಿಪ್ಪ | ವರರು ಇರದಂತಾಗೆ ಸುಜನರು ಕೂಗೆ ||1|| ಮಲ್ಲ ಮಾಯಿಗಳ ಹಲ್ಲು ಮುರಿದ ಅಪ್ರತಿಮಲ್ಲ | ಇಳಿಯೊಳಗೆ ಶುದ್ದ ಭಾಷ್ಯ ರಚಿಸಿ ಲೇಸಾ | ಕಿಲಕಿಲನೆ ನಗುತ ಮೊಗ ಕಳೆವೇರುತಾ ವೇಗ | ನಳಿನನಾಭನ ಚರಣ ಮನದಲಿಟ್ಟ ಪರಣಾ ||2|| ಇಪ್ಪತ್ತು ಒಂದು ದುರ್ಮತದ

ಮಧ್ವಮುನಿಯೆ ನಿನಗೆ ಎದ್ದು ಕರಗಳ ಮುಗಿವೆ Read More »

ಮಧ್ವಮತವ ಪೊಂದದವನ ಭಕುತಿಯಾತಕೆ

ಮಧ್ವಮತವ ಪೊಂದದವನ ಭಕುತಿಯಾತಕೆ ಊಧ್ರ್ವಪುಂಡ್ರ ತಿದ್ದದವನ ಕರ್ಮವ್ಯಾತಕೆ ದಾನವನ್ನು ಮಾಡದವನ ದ್ರವ್ಯವ್ಯಾತಕೆ | ಸ್ನಾನವನ್ನು ಮಾಡದವನ ಮೌನವ್ಯಾತಕೆ | ಮಾನಿನಿಯು ಇಲ್ಲದವನ ಬದುಕು ಯಾತಕೆ | ಧ್ಯಾನವನ್ನು ಅರಿಯದವನ ಪೂಜೆ ಯಾತಕೆ ||1|| ವಂಶವನ್ನುದ್ಧರಿಸದಂಥ ಮಗನು ಯಾತಕೆ | ಹಿಂಸೆಯನ್ನು ಪಡಿಸುವಂಥ ಅರಸು ಯಾತಕೆ || ಸಂಸಾರವನು ಒಲ್ಲದಂಥ ಸತಿಯು ಯಾತಕೆ | ಕಂಸಾರಿಯನು ತಿಳಿಯದಂಥ ಜ್ಞಾನವ್ಯಾತಕೆ ||2|| ಬಂಧು ಬಳಗ ಬಿಟ್ಟು ಉಂಬ ನೆಂಟರ್ಯಾತಕೆ | ಕಂದರನ್ನು ಮಾರುತಿಪ್ಪ ತಂದೆಯಾತಕೆ || ಬಂದ ಅತಿಥಿಗನ್ನವಿಕ್ಕದ ಸದನವ್ಯಾತಕೆ

ಮಧ್ವಮತವ ಪೊಂದದವನ ಭಕುತಿಯಾತಕೆ Read More »

ಮಧ್ವಮತ ಪೊಂದದೆ ಬದುಕಿದವನೂ

ಮಧ್ವಮತ ಪೊಂದದೆ ಬದುಕಿದವನೂ ಹದ್ದು ಕಾಗಿ ಬದುಕಿ ಕಾಲವನು ಕಳೆದಂತೆ ಸಕಲೇಂದ್ರಿಯಗಳು ಇದ್ದು ನಯನೇಂದ್ರಿಯ ಇಲ್ಲದಂ ಫಲಪುಷ್ಪಯಿಲ್ಲದಾ ಗಿಡಬಳ್ಳಿ ಇದ್ದಂತೆ ಮಳೆಯಿಲ್ಲದಾ ಬೆಳಸು ನೋಡಿದಂತೆ ಚಲುವನಾದಡೆ ಏನು ಗುಣಹೀನನಾದಂತೆ ಖಳರು ನಿತ್ಯಾಕರ್ಮ ಚರಿಸಿದಂತೆ ||1|| ಉತ್ತಮರ ಕೂಡದಾ ಯಾತ್ರೆ ಮಾಡಿದಂತೆ ಕತ್ತೆ ಪರಿಮಳ ಪೊತ್ತು ತಿರುಗಿದಂತೆ ಮೃತ್ತಿಕೆ ಶೌಚ ಇಲ್ಲದೆ ಆಚಾರ ಮಾಡಿದಂತೆ ಸತ್ತ ಹೆಣಕ್ಕೆ ವಸ್ತ್ರ ಶೃಂಗರಿಸಿದಂತೆ||2|| ನಿಶಿಕರ ಇಲ್ಲದಾ ತಾರೆಗಳು ಇದ್ದಂತೆ ವಸುಧಿಪತಿಯಿಲ್ಲದಾ ರಾಜ್ಯದಂತೆ ಹಸಿವೆ ಇಲ್ಲದವನು ಮಧುರನ್ನ ಉಂಡಂತೆ ಹಸುಗಳಿಲ್ಲದ ಮನೆ ವೊಪ್ಪಿದಂತೆ

ಮಧ್ವಮತ ಪೊಂದದೆ ಬದುಕಿದವನೂ Read More »

ಮಧ್ವ ಸರೋವರದ ಸ್ನಾನವ ಮಾಡಿರೊ

ಮಧ್ವ ಸರೋವರದ ಸ್ನಾನವ ಮಾಡಿರೊ ಬುದ್ಧಿವಂತರು ಕೇಳಿ ಇದರ ಮಹಾತ್ಮೆಯನು ಕೃತಯುಗದಲಿ ಇದೇ ಅನಂತ ಸರೋವರ ತ್ರೇತಾಯುಗದಲ್ಲಿ ವರುಣತೀರ್ಥ ಕ್ಷಿತಿಯೊಳಗೆ ದ್ವಾಪರದಿ ಚಂದ್ರ ಪುಷ್ಕರಣಿ ಉ- ನ್ನತ ಕಲಿಯುಗದಲ್ಲಿ ಮಹಾ ತೀರಿಥ ||1|| ಸುರನದೀ ಮಿಕ್ಕಾದ ಸ್ಥಾನದಲಿ ಸೇವೆ ವಿ- ಸ್ತರವಾಗಿ ಕೊಳುತಿಪ್ಪಳು ಉಪೇಕ್ಷದಿ ಧರೆಯೊಳಗೆ ಇಲ್ಲಿ ಗುರು ಮಧ್ವಮುನಿ ಸರ್ವಾರ್ಥ ನಿರುತದಲ್ಲಿ ತೀವ್ರಗತಿ ಕೊಡುವಳೂ||2||| ಸಕಲ ವೇದಶಾಸ್ತ್ರ ಓದಿದವನಾದರೂ ಶಕುತಿವಂತನಾಗಿ ಇದ್ದನಾಗೆ ಸುಖ ತೀರ್ಥ ಸರೋವರದ ಸ್ನಾನ ಮಾಡದಿರಲು ಶಕಲ ಮತಿಯಲಿ ಮಹಾನರಕ ಭುಂಜಿಸುವಾ ||3||

ಮಧ್ವ ಸರೋವರದ ಸ್ನಾನವ ಮಾಡಿರೊ Read More »

ಮಗನೆಂದೆಂಬುವ ಇನ್ನು ಮತ್ತಾವನೊ

ಮಗನೆಂದೆಂಬುವ ಇನ್ನು ಮತ್ತಾವನೊ ಜಗದೊಳಗೆ ನಿನ್ನ ವಿನಾ ಕಾಣೆಯೆಲ್ಲಿ ರಕ್ತ ಶುಕ್ಲ ಮಿಶ್ರವಾದ ಸಮ್ಮಂಧ ವಿಷ_ ಭುಕ್ತನಾಗಿದ್ದ ಸಂಸಾರದೊಳಗಾ ಸಕ್ತತನದಲಿ ಇಪ್ಪ ಎಂದಿಗೆಂದಿಗೆ ಇವನು ಮುಕ್ತಿ ಕೊಡುವನೇನೊ ಮುಂದೊಲಿದು ಕೊಂಡಾಡೆ||1|| ಪ್ರಕೃತಿ ಬದ್ಧನಾಗಿ ನಾನಾ ಜನುಮಗಳಲ್ಲಿ ವಿಕೃತಿಯ ಮಾಡುವ ಮದದಿಂದಲೀ ಸುಕೃತವನು ಮರೆದು ದೂರಾಗಿ ಸಂಚರಿಸುವ- ನುಕ್ರ ಮವಂದುಮಾಸ ಜನತೆ ಕ್ಯೆಡೆಯಿರದವ ||2|| ಪುತ್ರ ಉಳ್ಳರೆ ಅವಗೆ ಕಂಡಕಡೆ ತಿರುಗಿ ಉ- ನ್ಮತ್ತನಾಗಿ ಕೆಟ್ಟ ಗ್ರಾಸವನ್ನು ಹೊತ್ತಹೊತ್ತಿಗೆ ತಂದು ಹಾಕಬೇಕು ಸಾಕಿ ನಿತ್ಯದಲ್ಲಿ ಅವಗಾಗಿ ಕ್ಲೇಶಬಡಲಿ ಬೇಕು

ಮಗನೆಂದೆಂಬುವ ಇನ್ನು ಮತ್ತಾವನೊ Read More »

ಮಂದಮತಿ ನಾನಯ್ಯ ಮಂಗಳಾಂಗಾ

ಮಂದಮತಿ ನಾನಯ್ಯ ಮಂಗಳಾಂಗಾ ಒಂದಾದರೂ ಗತಿ ಧರ್ಮ ಚಿಂತಿಸಲಿಲ್ಲಾ ಜಪತಪಗಳರಿಯೆ ಉಪವಾಸಗಳರಿಯೆ ಕೃಪೆ ಮಾಡಲರಿಯೇ ಪರಿಜನಗಳಲ್ಲಿ ಕುಪಿತವನು ಬಿಡಲರಿಯೆ ಅಪರಿಮಿತವಾಗಿದ್ದ ಅಪರಾಧಗಳ ಮಾಡಿ ತಪಿಸುವೆನು ಭವದೊಳಗೆ ||1|| ಯಾತ್ರೆ ಮಾಡಲರಿಯೆ ತೀರ್ಥ ಮೀಯಲರಿಯೆ ಗಾತ್ರದಂಡಣಿಯ ಮಾಡಲರಿಯೆ ಸ್ತೋತ್ರ ಪಠಿಸಲರಿಯೆ ಗಾತ್ರ ಲಘು ನೋಡಿ ಸ ತ್ಪಾತ್ರರನು ಭಜಿಸದೆ ವ್ಯರ್ಥ ಕಾಲವ ಕಳೆವ||2|| ಅನ್ನದಾನವರಿಯೆ ಮನ್ನಣೆ ಮಾಡಲರಿಯೆ ಚನ್ನಾಗಿ ಬಂಧುಗಳು ಪೊರಿಯಲರಿಯೆ ಎನ್ನ ಮನದೊಡಿಯ ಶ್ರೀ ವಿಜಯವಿಠ್ಠಲರೇಯಾ ನಿನ್ನ ಭಕುತಿ ಒಮ್ಮೆ ಪಡಿಯಲರಿಯೆ ||3||

ಮಂದಮತಿ ನಾನಯ್ಯ ಮಂಗಳಾಂಗಾ Read More »

ಮಂತ್ರಾಲಯನಿವಾಸ ಉತ್ತಮ ಹಂಸ

ಮಂತ್ರಾಲಯನಿವಾಸ ಉತ್ತಮ ಹಂಸ | ಸಂತಾಪ ಪರಿಹರಿಸ ಕೊಡು ಎನಗೆ ಲೇಸ ಯತಿಗಳ ಶಿರೋರನ್ನ ಯೋಗಸಂಪನ್ನ | ಕ್ಷಿತಿಯೊಳಗೆ ನಿನಗೆ ಸರಿಗಾಣೆನೊ || ನುತಿಸುವೆ ಭಕ್ತಿಯಲಿ ಬಿಡದೆ | ಮುಕುತಿಯಲಿ ಸತತಾನಂದದಲಿಪ್ಪ ||1|| ಕಪಿಲ ತೀರ್ಥದಲಿ ಶರಣ ಶುದ್ಧಿಯಲ್ಲಿ | ತÀಪವ ಮಾಡುವ ಜ್ಞಾನಿ ಸೌಮ್ಯಜ್ಞಾನಿ || ಜಪಶೀಲ ಗುಣ ಗಣಾಂಬುಧಿ ಪುಣ್ಯದ ಬುದ್ಧಿ ಕೃಪೆಮಾಡಿ ಕೊಡು ಗುರುವೆ ಶಿಷ್ಯಸುರತರುವೆ ||2|| ತಮೋಗುಣ ಕಾರ್ಯ ಪೋಗಲಾಡು ವ್ಯಾಪ್ತಿಯಾ | ಶಮೆದಮೆಯಲ್ಲಿ ಉಳ್ಳ ಮಹಿಮೆಯಾ || ನಮಗೆ ಪೇಳುವೆ

ಮಂತ್ರಾಲಯನಿವಾಸ ಉತ್ತಮ ಹಂಸ Read More »

ಮಂಗಳಂ ಪ್ರಧಾನ ಮಾರುತಗೆ

ಮಂಗಳಂ ಪ್ರಧಾನ ಮಾರುತಗೆ ಮಂಗಳಂ ಪಾವನ ಮೂರುತಿಗೆ | ಮಂಗಳಂ ತ್ರಿವಿಧ ಸತ್ಕೀರ್ತಿಗೆ | ಮಂಗಳಂ ಸದ್ಗುಣ ಕೀರ್ತಿಗೆ ಮುಕ್ಕೋಟಿ ರೂಪನಿಗೆ ರುಗ್ಮಮಣಿ ಹಾರನಿಗೆ | ಚಿಕ್ಕವನಾಗಿ ಪುರಪೊಕ್ಕವಗೆ || ಸಿಕ್ಕಿ ವೈರಿಯ ಕೈಗೆ ರಕ್ಕಸರ ಎದೆಯಲ್ಲಿ | ನಿಕ್ಕಿಸಿದರಣದ ವಿಷ ಭೋಕ್ತನಿಗೆ ||1|| ವೃಕೋದರ ಭೀಮಗೆ ವಿಶೋಕನೊಡೆಯಗೆ | ಬಕ ಜರಾಸಂಧ ಕೀಚಕ ವಧೆ ಮಾಡಿದಗೆ || ಸಕಲ ದಳದೊಳಗೆ ನಾಯಕನೇ | ನೀ | ನೇ ಕಲಿಬಂಧಕ ಶಕುತಿಗೆದ್ದ ತಾರಕ ಚರಿತಗೆ ||2|| ಒಂದೆ

ಮಂಗಳಂ ಪ್ರಧಾನ ಮಾರುತಗೆ Read More »

ಯಮದೂತರಿನ್ನೇನು ಮಾಡುವರು ಪೇಳೊ

ಯಮದೂತರಿನ್ನೇನು ಮಾಡುವರು ಪೇಳೊರಮೆಯರಸ ರಘುನಾಥ ನಿನ್ನರಿಕೆಯುಳ್ಳವರಿಗೆ ಮಂಡಲದೊಳಗೊಬ್ಬ ಜಾರಸ್ತ್ರೀಯಳು ತನ್ನಗಂಡನರಿಕೆಯಿಂದ ವ್ಯಭಿಚಾರಗೈಯೆಮಂಡಲ ಪತಿಯು ಶೋಧಿಸಿ ಹಿಡಿದೆಳೆ ತಂದುಭಂಡು ಮಾಡಲು ಬೆದರುವಳೆ ಕೇಳೆಲೊ ಹರಿ||1|| ಕಳವಿನ ಒಡವೆಯ ಒಡೆಯಗೆ ಪಾಲೀವಕಳಬಂಟ ಕನ್ನವ ಕೊರೆಯುತಿರೆಕಳವು ಮಾಡಿದನೆಂದು ಹಿಡಿದೆಳೆತಂದರೆತಳವಾರನೇನು ಮಾಡುವನು ಕೇಳೆಲೊ ಹರಿ ||2|| ಮನವಚನದಲಿ ಮಾಡಿದ ಪುಣ್ಯ ಪಾಪಗಳನಿನಗರ್ಪಿಸುವೆ ಕಾಲಕಾಲದಲಿಘನ ಕೃಪಾಂಬುಧಿ ಕಾಗಿನೆಲೆಯಾದಿಕೇಶವಎನಗೆ ಆರೇನು ಮಾಡುವರು ಕೇಳೆಲೊ ಹರಿ ||3||

ಯಮದೂತರಿನ್ನೇನು ಮಾಡುವರು ಪೇಳೊ Read More »

ಮೊರೆಹೊಕ್ಕೆ ಹರಿ ನಿಮ್ಮ ಚರಣಕಮಲವ

ಮೊರೆಹೊಕ್ಕೆ ಹರಿ ನಿಮ್ಮ ಚರಣಕಮಲವ ನಾನುಮರೆಯದೆ ಸಲಹೆನ್ನ ವರದಾ ಪಕರಿ ಧ್ರುವ ಪ್ರಹ್ಲಾದ ವಿಭೀಷಣರ ರಕ್ಷಿಸಿದೆಪರಂದೇವಿ ವಲ್ಲಭನೆ ವರದಾ ಎಂಬತ್ತು ನಾಲ್ಕು ಲಕ್ಷ ಜೀವರಾಶಿ ಯೋನಿಯೊಳುಹಂಬಲಿಸಿ ನಾ ಬಂದೆ ವರದಾಅಂಬುಜೋದ್ಭವನ ಬರೆಹವ ಮೀರಲಾರದೆ ನರಬೊಂಬೆ ಗರ್ಭದೊಳಿದ್ದೆ ವರದಾ ||1|| ತುಂಬಿದ್ದ ಕೀವು ಮಲಮೂತ್ರ ರಕ್ತದಿಂ ಹೊರಳುವಸಂಭ್ರಮದೊಳಿದ್ದೆ ನಾ ವರದಾಒಂಬತ್ತು ಮಾಸವು ಕಳೆದು ಗುಂಡಿಯೊಳಿಳಿದು ಈಕುಂಭಿನಿಗೆ ನಾ ಬಂದೆ ವರದಾ ||2|| ನಸುನುಡಿಯನು ಕಲಿತು ನಸುನಗೆಗಳ ನಕ್ಕು ಈ ಕುಶಲದಾಟವ ಕಲಿತೆ ವರದಾಎಸೆವ ಯೌವನ ಬಂದು ಶಶಿಮುಖಿಯರೊಳು ಕಾಮತೃಷೆಗೆ

ಮೊರೆಹೊಕ್ಕೆ ಹರಿ ನಿಮ್ಮ ಚರಣಕಮಲವ Read More »

ಮೆರೆಯದಿರು ಮೆರೆಯದಿರು ಎಲೆ ಮಾನವ

ಮೆರೆಯದಿರು ಮೆರೆಯದಿರು ಎಲೆ ಮಾನವ – ನಿನ್ನಸಿರಿಯ ಹವಣೇನು ಹೇಳೆಲೊ ಮಂಕು ಜೀವ ಸಿರಿಯೊಳಗೆ ಮಾಧವನೊ ಹಿರಿಯರೊಳು ಬ್ರಹ್ಮನೋದುರುಳ ರಾವಣನ ಸಂಪದವೊ ನಿನಗೆದುರಿಯೋಧನನಂತೆ ಮಕುಟವರ್ಧನನೊ – ನಿನ್ನಸಿರಿಯ ಹವಣೇನು ಪೇಳೆಲೊ ಮಾನವ ||1|| ಬಲುಹಿನಲಿ ವಾಲಿಯೋ ಚೆಲುವಿಕೆಗೆ ಕಾಮನೋಸಲುಗೆಯಲಿ ನಾರದನೊ ಹೇಳು ನೀನುಕಲಿಗಳೊಳು ಭೀಷ್ಮ ದ್ರೋಣಾಚಾರ್ಯ ಫಲುಗುಣನೊಕುಲದಲ್ಲಿ ವಸಿಷ್ಠನೊ ಹೇಳೆಲೊ ಮಾನವ ||2|| ತ್ಯಾಗದಲಿ ಕರ್ಣನೋ ಭೋಗದಲಿ ಸುರಪನೋಭಾಗ್ಯದಲಿ ದಶರಥನೊ ಹೇಳು ನೀನುರಾಗದಲಿ ತುಂಬುರನೊ ಯೋಗದಲಿ ಸನಕನೊಹೀಗ್ಯಾರ ಹೋಲುವೆ ಹೇಳೆಲೊ ಮಾನವ||3|| ಯತಿಗಳಲ್ಲಗಸ್ತ್ಯನೊ ಜೊತೆಯಲಿ ಹನುಮನೊವ್ರತಕೆ ಶುಕಮುನಿಯೇನೊ

ಮೆರೆಯದಿರು ಮೆರೆಯದಿರು ಎಲೆ ಮಾನವ Read More »

ಮೂವರೇರಿದ ಬಂಡಿ ಹೊರೆನೆನದು

ಮೂವರೇರಿದ ಬಂಡಿ ಹೊರೆನೆನದುದೇವಕೀ ನಂದನನು ತಾನೊಬ್ಬ ಬಲ್ಲ ಆಡಿ ಪೊತ್ತವನೊಬ್ಬ ನೋಡಿ ತಿರುಗಿದನೊಬ್ಬಓಡಾಡಿದನೊಬ್ಬ ಈ ಮೂವರುಆಡಿದವಗೆ ಕಿವಿಯಿಲ್ಲ ನೋಡಿದವನ ಮಗ ಪಾಪಿಓಡಾಡಿದವನೊಬ್ಬ ಓಡನಯ್ಯ ||1|| ಮಾಯಾಕಾರನು ಒಬ್ಬ ಕಾಯ ಬಡಲಿಗನೊಬ್ಬಕಾಯ ಗಿರಿಪೊತ್ತನೊಬ್ಬ ಈ ಮೂವರುಮಾಯಾಕಾರಗೆ ರೂಪ ಕಾಯ ಬಡಲಿಗ ಚೆಲ್ವಕಾಯ ಗಿರಿ ಪೊತ್ತವನು ಕಡುಧರ್ಮಿಯು ||2|| ಹರಿಗೆ ಮಾವನು ಆದ ಹರಿಗಳಿಯ ತಾನಾದಹರಿಯು ತನ್ನೊಳಗೆ ತಾ ಹರಿಯೊಳಗೆ ಇಪ್ಪಹರಿಯ ರೂಪವ ತಾಳಿ ಇರುಳು ದೈತ್ಯನ ಕೊಂದಸಿರಿಧರನು ಕಾಗಿನೆಲೆಯಾದಿಕೇಶವರಾಯ||3||

ಮೂವರೇರಿದ ಬಂಡಿ ಹೊರೆನೆನದು Read More »

ಮುಳ್ಳು ಮೊನಿಯ ಮ್ಯಾಲ ಮೂರು ಕೆರಿಯ ಕಟ್ಟಿ

ಮುಳ್ಳು ಮೊನಿಯ ಮ್ಯಾಲ ಮೂರು ಕೆರಿಯ ಕಟ್ಟಿಎರಡು ಹೂಳು, ಒಂದು ತುಂಬಲೆ ಇಲ್ಲ ||1|| ತುಂಬದ ಕೆರೆಗೆ ಮೇಯಾಕ ಬಂದವು ಮೂರು ಎಮ್ಮಿಎರಡು ಗೊಡ್ಡು ಒಂದು ಕಂದು ಹಾಕಿ ಕರುವೇ ಇಲ್ಲ ||2|| ಕರುವಿಲ್ಲದ ಎಮ್ಮಿಯ ಕೂಡಿದರ ಮೂವರು ಹೆಣ್ಮಕ್ಕಳಾಇಬ್ಬರು ಬಂಜಿಯರು, ಒಬ್ಬಾಕಿ ಹಡೆದೇ ಇಲ್ಲ ||3|| ಹಡೆಯದ ಹೆಣ್ಣ ಕೂಡಿಕೊಂಡರು ಮೂವರು ಕುಂಬಾರರುಇಬ್ಬರು ಚೊಂಚರು, ಒಬ್ಬಗೆ ಕೈಯೇ ಇಲ್ಲ ||4|| ಕೈಯಿಲ್ಲದ ಕುಂಬಾರ ಮಾಡಿಕೊಟ್ಟ ಮೂರು ಮಡಿಕಿಗಳಎರಡು ದದ್ದು, ಒಂದಕೆ ತಳವೆ ಇಲ್ಲ||5|| ತಳವಿಲ್ಲದ ಮಡಕಿಗಿ

ಮುಳ್ಳು ಮೊನಿಯ ಮ್ಯಾಲ ಮೂರು ಕೆರಿಯ ಕಟ್ಟಿ Read More »