ಜಗದೀ ಸಂತೆಯೊಳಲೆಯುವ ಮನುಜ
ಜಗದೀ ಸಂತೆಯೊಳಲೆಯುವ ಮನುಜ ನಿಲ್ಲೋ ಒಂದು ಕ್ಷಣ! ತಾಯಿಯ ನೆನೆಯಲು ಬಂದಿದೆ ಶುಭದಿನ ಹಾಡೋ ತುಂಬಿ ಮನ!! ಸ್ಥಾವರ ಜಂಗಮ ಎಲ್ಲಕ್ಕೂ ತಾಯಿ ಬಂದಿಹಳು ಈ ಧರೆಗೆ.! ಆಮೋದರ ನದಿತೀರದಿ ಕಾಣುವ ಜಯರಾಂಬಾಟಿಯೊಳಗೆ (ಅಮ್ಮ)!! ಮಕ್ಕಳು ಮರೆತರು ತಾಯಿಯು ಮರೆವಳೆ ತನ್ನಯ ಶಿಶುಗಳನು ಮಣ್ಣಿನೊಳಾಡುವ ನಮ್ಮನು ಎತ್ತಲು ಚಾಚಿಹ ಕೈ ನೋಡು (ತಾಯಿಯ)!! ಭವದೀ ಬವಣೆಗಳೆಲ್ಲವ ಮರೆತು ಜೈ ಮಾ ಎಂದೆನ್ನು! ಪಾಪದ ರಾಶಿಗೆ ಇಡು ನೀ ತಾಯಿಯ ಸ್ಮರಣೆಯ ಬೆಂಕಿಯನು!!
ಜಗದೀ ಸಂತೆಯೊಳಲೆಯುವ ಮನುಜ Read More »