ಧನ್ಯ ಧನ್ಯವಿದೇ ಸುದಿನ
ಧನ್ಯ ಧನ್ಯವಿದೇ ಸುದಿನ ನಾವೆಲ್ಲರು ಸೇರುವ, ಪುಣ್ಯಭೂಮಿ ಭಾರತಿಯಲಿ ನಿನ್ನ ಸತ್ಯಧರ್ಮಗಳನು ಈ ದಿನವೇ ಸಾರುವ!! ಎದೆ ಎದೆಯೂ ನಿನ್ನ ಧಾಮ ನಿನ್ನ ಪುಣ್ಯ ಮಧುರ ನಾಮ ದಿಗ್ದಿಸೆಗಳ ತುಂಬಿದೆ! ಭಕ್ತವೃಂದ ನಿನ್ನಪಾರ ಮಹಿಮೆಯನ್ನು ಸಾರಿದೆ! ನಾವೆಂದಿಗು ಬಯಸೆವಯ್ಯ ಜನಧನಾದಿ ಗೌರವ, ನಮಗಿಲ್ಲವೋ ಅನ್ಯ ಕಾಮ ಆರ್ತರಾಗಿ ಬಂದೆವಿಲ್ಲಿ ನಂಬಿ ನಿನ್ನ ಪಾದವll ನಿನ್ನ ಪಾದ ಅಮೃತನಿಲಯ ನಮಗಿಲ್ಲವೊ ಮರಣಭಯ! ಜಯತು ಜಯತು-ನಿರ್ಭಯll – ವಚನವೇದ
ಧನ್ಯ ಧನ್ಯವಿದೇ ಸುದಿನ Read More »