ಜಾನಪದ ಗೀತೆ

ಸೋಜುಗಾದ ಸೂಜುಮಲ್ಲಿಗೆ ಮಾದೇವ

ಸೋಜುಗಾದ ಸೂಜುಮಲ್ಲಿಗೆ ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ ಅಂದಾವರೆ ಮುಂದಾವರೆ ಮತ್ತೆ ತಾವರೆ ಪುಷ್ಪ ಚಂದಕ್ಕಿ ಮಾಲೆ ಬಿಲ್ಪತ್ರೆ ಮಾದೇವ ನಿಮ್ಗೆ ಚಂದಕ್ಕಿ ಮಾಲೆ ಬಿಲ್ಪತ್ರೆ ತುಳಸಿ ದಳವ ಮಾದಪ್ನ ಪೂಜೆಗೆ ಬಂದು ಮಾದೇವ ನಿಮ್ಮ ಸೋಜುಗಾದ ಸೂಜುಮಲ್ಲಿಗೆ ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ ತಪ್ಪಾಳೆ ಬೆಳಗಿವ್ನಿ ತುಪ್ಪಾವ ಕಾಯಿಸ್ಯೀವ್ನಿ ಕಿತ್ತಾಳೆ ಹಣ್ಣ ತಂದಿವ್ನಿ ಮಾದೇವ ನಿಮ್ಗೆ ಕಿತ್ತಾಳೆ ಹಣ್ಣ ತಂದ್ಯೀವ್ನಿ ಮಾದಪ್ಪ ಕಿತ್ತಾಳಿ ಬರುವ ಪರಸೇಗೆ ಮಾದೇವ ನಿಮ್ಮ ಸೋಜುಗಾದ […]

ಸೋಜುಗಾದ ಸೂಜುಮಲ್ಲಿಗೆ ಮಾದೇವ Read More »

ಚೆಲ್ಲಿದರು ಮಲ್ಲಿಗೆಯ

ಚೆಲ್ಲಿದರು ಮಲ್ಲಿಗೆಯಾ… ಬಾಣಾಸೂರೇರಿ ಮ್ಯಾಲೆ.. ಅಂದಾದ ಚೆಂದಾದ ಮಾಯ್ಗಾರ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ|| ಮಾದಪ್ಪ ಬರುವಾಗಾ.. ಮಾಳೆಪ್ಪ ಘಮ್ಮೆಂದಿತೊ ಮಾಳದಲಿ ಗರುಕೆ ಚಿಗುರ್ಯಾವೆ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ|| ಸಂಪಿಗೆ ಹೂವ್ನಂಗೇ ಇಂಪಾದೊ ನಿನ್ನ ಪರುಸೆ ಇಂಪಾದೊ ನಿನ್ನ ಪರುಸೆ ಕೌದಳ್ಳಿ ಬಯಲಾಗಿ ಚೆಲ್ಲಿದರು ಮಲ್ಲಿಗೆಯ|| ಮಲ್ಲಿಗುವಿನ ಮಂಚಾ ಮರುಗಾದ ಮೇಲೊದಪು ತಾವರೆ ಹೂವು ತಲೆದಿಂಬು ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ|| ಹೊತ್ತು ಮುಳಿಗಿದರೇನೂ ಕತ್ತಲಾದರೇನು ಅಪ್ಪಾ ನಿನ್ನ ಪರುಸೆ ಬರುವೇವು ನಾವು ಚೆಲ್ಲಿದರು ಮಲ್ಲಿಗೆಯಾ||

ಚೆಲ್ಲಿದರು ಮಲ್ಲಿಗೆಯ Read More »

ನಿಂಬಿಯಾ ಬನಾದ ಮ್ಯಾಗಳ

ನಿಂಬಿಯಾ ಬನಾದ ಮ್ಯಾಗಳ ನಿಂಬಿಯಾ ಬನಾದ ಮ್ಯಾಗಳ ಚಂದ್ರಾಮ ಚೆಂಡಾಡಿದ| ಎದ್ದೋನೆ ನಿಮಗ್ಯಾನ ಏಳುತಲಿ ನಿಮಗ್ಯಾನ ಸಿದ್ಧಾರ ಗ್ಯಾನ ಶಿವೂ ಗ್ಯಾನ ಸಿದ್ಧಾರ ಗ್ಯಾನ ಶಿವೂ ಗ್ಯಾನ ಮಾ ಶಿವನೆ ನಿದ್ರೆಗಣ್ಣಾಗೆ ನಿಮಗ್ಯಾನ ಆರೇಲಿ ಮಾವಿನ ಬೇರಾಗಿ ಇರುವೋಳೆ ಓಲ್ಗಾದ ಸದ್ದಿಗೆ ಒದಗೋಳೆ ಓಲ್ಗಾದ ಸದ್ದೀಗೆ ಒದಗೋಳೆ ಸರಸತಿಯೆ ನಮ್ ನಾಲಿಗೆ ತೊಡಿರ ಬಿಡಿಸವ್ವಾ ಎಂಟೆಲಿ ಮಾವಿನ ದಂಟಾಗಿ ಇರುವೋಳೆ ಗಂಟೆ ಸದ್ದೀಗೆ ಒದಗೋಳೆ ಗಂಟೆ ಸದ್ದೀಗೆ ಒದಗೊಳೆ ಸರಸತಿಯೆ ನಮ್ ಗಂಟಾಲ ತೊಡರ ಬಿಡಿಸವ್ವಾ ರಾಗಿ

ನಿಂಬಿಯಾ ಬನಾದ ಮ್ಯಾಗಳ Read More »