ಅಕ್ಕ ಮಹಾದೇವಿ

ಶಿವಗಣಂಗಳ ಮನೆಯಂಗಳ

ಶಿವಗಣಂಗಳ ಮನೆಯಂಗಳ ವಾರಣಾಸಿಯೆಂಬುದು ಹುಸಿಯೆ, ಪುರಾತನರ ಮನೆಯಂಗಳದಲ್ಲಿ ಅಷ್ಟಾಷಷ್ಟಿ ತೀರ್ಥಂಗಳು ನೆಲೆಸಿಪ್ಪವಾಗಿ. ಅದೆಂತೆಂದಡೆ ಅದಕ್ಕೆ ಆಗಮ ಸಾಕ್ಷಿ ‘ಕೇದಾರಸ್ಯೋದಕೆ ಪೀತೇ ವಾರಣಾಸ್ಯಾ ಮೃತೇ ಸತೀ’ ಶ್ರೀಶೈಲಶಿಖರೇ ದೃಷ್ಟೇ ಪುನರ್ಜನ್ಮ ನ ವಿದ್ಯತೇ ||ú ಎಂಬ ಶಬ್ದಕ್ಕಧಿಕವು. ಸುತ್ತಿಬರಲು ಶ್ರೀಶೈಲ, ಕೆಲಬಲದಲ್ಲಿ ಕೇದಾರ, ಅಲ್ಲಿಂದ ಹೊರಗೆ ವಾರಣಾಸಿ. ವಿರಕ್ತಿ ಬೆದೆಯಾಗಿ, ಭಕ್ತಿ ಮೊಳೆಯಾಗೆ, ಎನ್ನ ದೇವ ಚೆನ್ನಮಲ್ಲಿಕಾರ್ಜುನಾ ನಿಮ್ಮ ಭಕ್ತರ ಮನೆಯಂಗಳ ಪ್ರಯಾಗದಿಂದ ಗುರುಗಂಜಿಯಧಿಕ ನೋಡಾ ?

ಶಿವಗಣಂಗಳ ಮನೆಯಂಗಳ Read More »

ಶಿವ ಶಿವಾ, ಆದಿ ಅನಾದಿಗಳೆಂಬೆರಡಿಲ್ಲದ ನಿರವಯ ಶಿವ,

ಶಿವ ಶಿವಾ, ಆದಿ ಅನಾದಿಗಳೆಂಬೆರಡಿಲ್ಲದ ನಿರವಯ ಶಿವ, ನಿಮ್ಮ ನಿಜವನಾರಯ್ಯಾ ಬಲ್ಲವರು ವೇದಂಗಳಿಗಭೇದ್ಯನು ಶಾಸ್ತ್ರಂಗಳಿಗಸಾಧ್ಯನು ಪುರಾಣಕ್ಕೆ ಆಗಮ್ಯನು ಆಗಮಕ್ಕೆ ಅಗೋಚರನು ; ತರ್ಕಕ್ಕೆ ಅತಕ್ರ್ಯನು ವಾಙ್ಮನಾತೀತವಾಗಿಪ್ಪ ಪರಶಿವಲಿಂಗವನು ಕೆಲಂಬರು ಸಕಲನೆಂಬರು ; ಕೆಲಂಬರು ನಿಃಕಲನೆಂಬರು ಕೆಲಂಬರು ಸೂಕ್ಷ್ಮನೆಂಬರು ; ಕೆಲಂಬರು ಸ್ಥೂಲನೆಂಬರು ಈ ಬಗೆಯ ಭಾವದಿಂದ, ಹರಿ, ಬ್ರಹ್ಮ, ಇಂದ್ರ, ಚಂದ್ರ, ರವಿ, ಕಾಲ, ಕಾಮ, ದಕ್ಷ, ದೇವ, ದಾನವ, ಮಾನವರೆಲ್ಲರೂ ಕಾಣಲರಿಯದೆ ಅe್ಞನದಿಂದ ಭವಭಾರಿಗಳಾದರು. ಈ ಪರಿಯಲ್ಲಿ ಬಯಲಾಗಿ ಹೋಗಬಾರದೆಂದು ನಮ್ಮ ಬಸವಣ್ಣನು ಜಗದ್ಧಿತಾರ್ಥವಾಗಿ ಮತ್ರ್ಯಕ್ಕೆ

ಶಿವ ಶಿವಾ, ಆದಿ ಅನಾದಿಗಳೆಂಬೆರಡಿಲ್ಲದ ನಿರವಯ ಶಿವ, Read More »

ಶರಣರ ಮನ ನೋಯ ನುಡಿದೆನಾಗಿ,

ಶರಣರ ಮನ ನೋಯ ನುಡಿದೆನಾಗಿ, ಹರಜನ್ಮವಳಿದು ನರಜನ್ಮಕ್ಕೆ ಬಂದೆನು. ಹರನಟ್ಟಿದ ಬೆಸನ ಶಿರದೊಳಗಾಂತೊಡೆ, ಗಿರಿಗಳ ಭಾರವೆನಗಾದುದಯ್ಯ. ಚೆನ್ನಮಲ್ಲಿಕಾರ್ಜುನನ ಧರ್ಮದಿಂದ ಸಂಸಾರ ಕರ್ಮದ ಹೊರೆಯನಿಳುಹಿ, ನಡುದೊರೆಯ ಹಾಯಿದು ಹೋದೆನು

ಶರಣರ ಮನ ನೋಯ ನುಡಿದೆನಾಗಿ, Read More »

ಲಿಂಗಾಂಗಸಂಗಸಮರಸಸುಖದಲ್ಲಿ ಮನ ವೇದ್ಯವಾಯಿತ್ತು.

ಲಿಂಗಾಂಗಸಂಗಸಮರಸಸುಖದಲ್ಲಿ ಮನ ವೇದ್ಯವಾಯಿತ್ತು. ನಿಮ್ಮ ಶರಣರ ಅನುಭಾವಸಂಗದಿಂದ ಎನ್ನ ತನು ಮನ ಪ್ರಾಣ ಪದಾರ್ಥವ ಗುರುಲಿಂಗಜಂಗಮಕ್ಕಿತ್ತು, ಶುದ್ಧಸಿದ್ಧಪ್ರಸಿದ್ಧಪ್ರಸಾದಿಯಾದೆನು. ಆ ಮಹಾಪ್ರಸಾದದ ರೂಪು ರುಚಿ ತೃಪ್ತಿಯ ಇಷ್ಟ ಪ್ರಾಣ ಭಾವಲಿಂಗದಲ್ಲಿ ಸಾವಧಾನದಿಂದರ್ಪಿಸಿ ಮಹಾಘನಪ್ರಸಾದಿಯಾದೆನು. ಇಂತೀ ಸರ್ವಾಚಾರಸಂಪತ್ತು ಎನ್ನ ತನುಮನ ವೇದ್ಯವಾಯಿತ್ತು. ಇನ್ನೆಲ್ಲಿಯಯ್ಯಾ, ಎನಗೆ ನಿಮ್ಮಲ್ಲಿ ನಿರವಯವು ? ಇನ್ನೆಲ್ಲಿಯಯ್ಯಾ ನಿಮ್ಮಲ್ಲಿ ಕೂಡುವುದು ? ಪರಮಸುಖದ ಪರಿಣಾಮ ಮನಮೇರೆದಪ್ಪಿ ನಾನು ನಿಜವನೈದುವ ಠಾವ ಹೇಳಾ ಚೆನ್ನಮಲ್ಲಿಕಾರ್ಜುನ ಪ್ರಭುವೆ ?

ಲಿಂಗಾಂಗಸಂಗಸಮರಸಸುಖದಲ್ಲಿ ಮನ ವೇದ್ಯವಾಯಿತ್ತು. Read More »

ಲಿಂಗಸ್ಥಲವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ,

ಲಿಂಗಸ್ಥಲವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ, ಲಿಂಗಸ್ಥಲ ನಿಃಶೂನ್ಯವಾಯಿತ್ತು ಸಂಗಮದೇವರಬೆನ್ನಿನಲ್ಲಿ. ಜಂಗಮಸ್ಥಲ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ, ಜಂಗಮಸ್ಥಲ ನಿಃಶೂನ್ಯವಾಯಿತ್ತು ಪ್ರಭುದೇವರಬೆನ್ನಿನಲ್ಲಿ. ಭಕ್ತಿಸ್ಥಲವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ, ಭಕ್ತಿಸ್ಥಲ ನಿಃಶೂನ್ಯವಾಯಿತ್ತು ಸಂಗನಬಸವರಾಜದೇವರಬೆನ್ನಿನಲ್ಲಿ. ಪ್ರಾಣಲಿಂಗಿಸ್ಥಲವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ, ಪ್ರಾಣಲಿಂಗಿಸ್ಥಲ ನಿಃಶೂನ್ಯವಾಯಿತ್ತು ಸಿದ್ಧರಾಮೇಶ್ವರದೇವರಬೆನ್ನಿನಲ್ಲಿ. ಪ್ರಸಾದಿಸ್ಥಲವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ, ಪ್ರಸಾದಿಸ್ಥಲ ನಿಃಶೂನ್ಯವಾಯಿತ್ತು ಚಿಕ್ಕದಣ್ಣಾಯಕರಬೆನ್ನಿನಲ್ಲಿ. ಐಕ್ಯಸ್ಥಲವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ, ಐಕ್ಯಸ್ಥಲ ನಿಃಶೂನ್ಯವಾಯಿತ್ತು ಅಜಗಣ್ಣದೇವರಬೆನ್ನಿನಲ್ಲಿ. ಇಂತೆನ್ನ ಷಟ್‍ಸ್ಥಲಂಗಳು ಒಬ್ಬೊಬ್ಬರ ಬೆನ್ನಿನಲ್ಲಿ ನಿಃಶೂನ್ಯವಾದವು ಎನಗಿನ್ನಾವ ಕಿಂಚಿತುಸ್ಥಲವೂ

ಲಿಂಗಸ್ಥಲವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ, Read More »

ಲಿಂಗವನು ಪುರಾತನರನು

ಲಿಂಗವನು ಪುರಾತನರನು ಅನ್ಯರ ಮನೆಯೊಳಯಿಕೆ ಹೋಗಿ ಹೊಗಳುವರು, ತಮ್ಮದೊಂದುದರ ಕಾರಣ. ಲಿಂಗವು ಪುರಾತನರು ಅಲ್ಲಿಗೆ ಬರಬಲ್ಲರೆ ? ಅನ್ಯವನೆ ಮರೆದು ನಿಮ್ಮ ನೆನೆವರ ಎನಗೊಮ್ಮೆ ತೋರಾ ಚೆನ್ನಮಲ್ಲಿಕಾರ್ಜುನಾ.

ಲಿಂಗವನು ಪುರಾತನರನು Read More »

ಲಿಂಗಪೂಜಕಂಗೆ ಫಲಪದಂಗಳಲ್ಲದೆ ಲಿಂಗವಿಲ್ಲ ?

ಲಿಂಗಪೂಜಕಂಗೆ ಫಲಪದಂಗಳಲ್ಲದೆ ಲಿಂಗವಿಲ್ಲ ? ಧರ್ಮತ್ಯಾಗಿಗೆ ನರಕವಲ್ಲದೆ ಲಿಂಗವಿಲ್ಲ ವೈರಾಗ್ಯಸಂಪನ್ನಂಗೆ ಮುಕ್ತಿಯಲ್ಲದೆ ಲಿಂಗವಿಲ್ಲ ? e್ಞನಿಗೆ ಪರಿಭ್ರಮಣವಲ್ಲದೆ ಲಿಂಗವಿಲ್ಲ ? ಇಂತಪ್ಪ ಭ್ರಾಂತನತಿಗಳದು ತನು ತಾನಾದ ಇರವೆಂತೆಂದಡೆ ದ್ವೈತವಳಿದು ಅದ್ವೈತದಿಂದ ತನ್ನ ತಾನರಿದಡೆ ಚೆನ್ನಮಲ್ಲಿಕಾರ್ಜುನಲಿಂಗವು ತಾನೆ.

ಲಿಂಗಪೂಜಕಂಗೆ ಫಲಪದಂಗಳಲ್ಲದೆ ಲಿಂಗವಿಲ್ಲ ? Read More »

ಲಿಂಗದಿಂದುದಯಿಸಿ ಅಂಗವಿಡಿದಿಪ್ಪ ಪುರಾತನರ

ಲಿಂಗದಿಂದುದಯಿಸಿ ಅಂಗವಿಡಿದಿಪ್ಪ ಪುರಾತನರ ಇಂಗಿತವನೇನೆಂದು ಬೆಸಗೊಂಬಿರಯ್ಯಾ ? ಅವರ ನಡೆಯೇ ಆಗಮ, ಅವರ ನುಡಿಯೇ ವೇದ ; ಅವರ ಲೋಕದಮಾನವರೆಂದೆನ್ನಬಹುದೆ ಅಯ್ಯಾ ? ಅದೆಂತೆಂದಡೆ, ಸಾಕ್ಷಿ ‘ವೃಕ್ಷದ್ಭವತಿ ಬೀಜಂ ಹಿ ತದ್‍ವೃಕ್ಷೇ ಲೀಯತೇ ಪುನಃ ೀ ರುದ್ರಲೋಕಂ ಪರಿತ್ಯಕ್ತಾ ಶಿವಲೋಕೇ ಭವಿಷ್ಯತಿ || ‘ ಎಂದುದಾಗಿ, ಅಂಕೋಲೆಯಬೀಜದಿಂದಾಯಿತ್ತು ವೃಕ್ಷವು ; ಆ ವೃಕ್ಷ ಮರಳಿ ಆ ಬೀಜದೊಳಡಗಿತ್ತು. ಆ ಪ್ರಕಾರದಲ್ಲಿ ಲಿಂಗದೊಳಗಿಂದ ಪುರಾತನರುದ್ಭವಿಸಿ, ಮರಳಿ ಆ ಪುರಾತನರು ಆ ಲಿಂಗದೊಳಗೆ ಬೆರಸಿದರು ನೋಡಿರಯ್ಯಾ. ಇಂತಪ್ಪ ಪುರಾತನರಿಗೆ ನಾನು

ಲಿಂಗದಿಂದುದಯಿಸಿ ಅಂಗವಿಡಿದಿಪ್ಪ ಪುರಾತನರ Read More »

ಲಿಂಗಕ್ಕೆ ಶರಣೆಂದು ಪೂಜಿಸಿ ಅರ್ಪಿಸಬಹುದಲ್ಲದೆ,

ಲಿಂಗಕ್ಕೆ ಶರಣೆಂದು ಪೂಜಿಸಿ ಅರ್ಪಿಸಬಹುದಲ್ಲದೆ, ಜಂಗಮವ ಪೂಜಿಸಿ ಸರ್ವಸುಖವನರ್ಪಿಸಿ ಶರಣೆನ್ನಬಾರದು ಎಲೆ ತಂದೆ. ಆಡಬಹುದು ಪಾಡಬಹುದಲ್ಲದೆ, ನುಡಿದಂತೆ ನಡೆಯಲು ಬಾರದು ಎಲೆ ತಂದೆ. ಚೆನ್ನಮಲ್ಲಿಕಾರ್ಜುನದೇವಾ, ನಿಮ್ಮ ಶರಣರು ನುಡಿದಂತೆ ನಡೆಯಲು ಬಲ್ಲರು ಎಲೆ ತಂದೆ.

ಲಿಂಗಕ್ಕೆ ಶರಣೆಂದು ಪೂಜಿಸಿ ಅರ್ಪಿಸಬಹುದಲ್ಲದೆ, Read More »

ಲಿಂಗಕ್ಕೆ ರೂಪ ಸಲಿಸುವೆ,

ಲಿಂಗಕ್ಕೆ ರೂಪ ಸಲಿಸುವೆ, ಜಂಗಮಕ್ಕೆ ರುಚಿಯ ಸಲಿಸುವೆ, ಕಾಯಕ್ಕೆ ಶುದ್ಧಪ್ರಸಾದವ ಕೊಂಬೆ. ಪ್ರಾಣಕ್ಕೆ ಸಿದ್ಧಪ್ರಸಾದವ ಕೊಂಬೆ. ನಿಮ್ಮ ಪ್ರಸಾದದಿಂದ ಧನ್ಯಳಾದೆನು. ಕಾಣಾ ಚೆನ್ನಮಲ್ಲಿಕಾರ್ಜುನಯ್ಯಾ.

ಲಿಂಗಕ್ಕೆ ರೂಪ ಸಲಿಸುವೆ, Read More »

ಲೋಕವ ಹಿಡಿದು ಲೋಕದ ಸಂಗದಂತಿಪ್ಪೆ.

ಲೋಕವ ಹಿಡಿದು ಲೋಕದ ಸಂಗದಂತಿಪ್ಪೆ. ಆಕಾರವಿಡಿದು ಸಾಕಾರಸಹಿತ ನಡೆವೆ. ಹೊರಗೆ ಬಳಸಿ ಒಳಗೆ ಮರೆದಿಪ್ಪೆ. ಬೆಂದನುಲಿಯಂತೆ ಹುರಿಗುಂದದಿಪ್ಪೆ. ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯಾ, ಹತ್ತರೊಳಗೆ ಹನ್ನೊಂದಾಗಿ ನೀರತಾವರೆಯಂತಿಪ್ಪೆ.

ಲೋಕವ ಹಿಡಿದು ಲೋಕದ ಸಂಗದಂತಿಪ್ಪೆ. Read More »

ಲೋಕದ ಚೇಷ್ಟೆಗೆ ರವಿ ಬೀಜವಾದಂತೆ,

ಲೋಕದ ಚೇಷ್ಟೆಗೆ ರವಿ ಬೀಜವಾದಂತೆ, ಕರಣಂಗಳ ಚೇಷ್ಟೆಗೆ ಮನವೇ ಬೀಜ. ಎನಗುಳ್ಳುದೊಂದು ಮನ. ಆ ಮನ ನಿಮ್ಮಲ್ಲಿ ಸಿಲುಕಿದ ಬಳಿಕ ಎನಗೆ ಭವವುಂಟೆ ಚೆನ್ನಮಲ್ಲಿಕಾರ್ಜುನಾ ?

ಲೋಕದ ಚೇಷ್ಟೆಗೆ ರವಿ ಬೀಜವಾದಂತೆ, Read More »

ವಿಷಯದ ಸುಖ ವಿಷವೆಂದರಿಯದ ಮರುಳೆ,

ವಿಷಯದ ಸುಖ ವಿಷವೆಂದರಿಯದ ಮರುಳೆ, ವಿಷಯಕ್ಕೆ ಅಂಗವಿಸದಿರಾ. ವಿಷಯದಿಂದ ಕೆಡನೆ ರಾವಣನು ವಿಷಯದಿಂದ ಕೆಡನೆ ದೇವೇಂದ್ರನು ? ವಿಷಯದಿಂದಾರು ಕೆಡರು ಮರುಳೆ ? ವಿಷಯ ನಿರ್ವಿಷಯವಾಯಿತ್ತೆನಗೆ ನಿನ್ನಲ್ಲಿ. ಚೆನ್ನಮಲ್ಲಿಕಾರ್ಜುನಂಗೆ ಒಲಿದವಳ ನೀನಪ್ಪಿಹೆನೆಂದಡೆ ಒಣಗಿದ ಮರನಪ್ಪುವಂತೆ ಕಾಣಾ

ವಿಷಯದ ಸುಖ ವಿಷವೆಂದರಿಯದ ಮರುಳೆ, Read More »

ವಿರಕ್ತಿಯೇ ಅವಿರಕ್ತಿ, ವಿರಕ್ತನೆನ್ನದಿರಣ್ಣಾ.

ವಿರಕ್ತಿಯೇ ಅವಿರಕ್ತಿ, ವಿರಕ್ತನೆನ್ನದಿರಣ್ಣಾ. ನೋಟದ ಕರುಳ ಕೊಯ್ಯದನ್ನಕ್ಕರ, ಕ್ರೀಯದ ಕರಬೋನಗಳೊಡೆಯದನ್ನಕ್ಕರ, ಅಷ್ಟಮದಾದಿಗಳೆಂಬವ ಹೊಟ್ಟುಹುರಿಯದನ್ನಕ್ಕರ, ಬೇಕುಬೇಡಾಯೆಂದು ಪರಿವ ಸರ್ವಸಂದೇಹವ ಹೂಳದನ್ನಕ್ಕರ ವಿರಕ್ತ ವಿರಕ್ತನೆನ್ನದಿರಣ್ಣಾ. ಶ್ರೀಶೈಲಚೆನ್ನಮಲ್ಲಿಕಾರ್ಜುನದೇವನೊಬ್ಬನೆ ವಿರಕ್ತ ಕಾಣಿರಣ್ಣಾ.

ವಿರಕ್ತಿಯೇ ಅವಿರಕ್ತಿ, ವಿರಕ್ತನೆನ್ನದಿರಣ್ಣಾ. Read More »

ವಿರಕ್ತಿ ವಿರಕ್ತಿಯೆಂಬವರು

ವಿರಕ್ತಿ ವಿರಕ್ತಿಯೆಂಬವರು ವಿರಕ್ತಿಯ ಪರಿಯೆಂತುಟು ಹೇಳಿರಯ್ಯಾ ? ಕಟ್ಟಿದ್ದ ಲಿಂಗವ ಕೈಯಲ್ಲಿ ಹಿಡಿದು ಬತ್ತಲೆಯಿರ್ದಡೆ ವಿರಕ್ತನೆ ? ಉಟ್ಟುದ ತೊರದ ಮತ್ತೆ ಕಟ್ಟಿದ ಲಿಂಗವ ಕೈಯಲ್ಲಿ ಹಿಡಿಯಲೇಬೇಕು. ಉಟ್ಟುದ ತೊರೆಯದೆ ಕಟ್ಟಿದ ಲಿಂಗವ ಕೈಯಲ್ಲಿ ಹಿಡಿದ ಭ್ರಷ್ಟರನೇನೆಂಬೆ ಚೆನ್ನಮಲ್ಲಿಕಾರ್ಜುನಾ ?

ವಿರಕ್ತಿ ವಿರಕ್ತಿಯೆಂಬವರು Read More »

ವಿರಕ್ತಿ ವಿರಕ್ತಿ ಎಂಬರು ವಿರಕ್ತಿಯ ಪರಿ ಎಂತುಂಟು ಹೇಳಿರಯ್ಯಾ.

ವಿರಕ್ತಿ ವಿರಕ್ತಿ ಎಂಬರು ವಿರಕ್ತಿಯ ಪರಿ ಎಂತುಂಟು ಹೇಳಿರಯ್ಯಾ. ಕಟ್ಟಿದ ಲಿಂಗವ ಕೈಯಲ್ಲಿ ಹಿಡಿದಿದ್ದರೆ ವಿರಕ್ತನೆ ? ಹುಟ್ಟು ಕೆತ್ತುವ ಡೊಂಬನಂತೆ ಬಿಟ್ಟಮಂಡೆಯ ಕೇಶವ ನುಣ್ಣಿಸಿ ಬಣ್ಣಿಸಿ, ಎಣ್ಣೆಯ ಗಂಟ ಹಾಕಿದಡೆ ವಿರಕ್ತನೆ ? ಕಟ್ಟುಹರಿದ ಪಂಜಿನಂತೆ, ಬಿಟ್ಟಮಂಡೆಯ ಕಟ್ಟದಿರ್ದಡೆ ವಿರಕ್ತನೆ ? ಹರದನಂತೆ ಹೇಸಿಯಾಗಿರ್ದಡೆ ವಿರಕ್ತನೆ ? ಮೂಗನಂತೆ ಮಾತನಾಡದಿರ್ದಡೆ ವಿರಕ್ತನೆ ? ಹೊನ್ನು ಹೆಣ್ಣು ಮಣ್ಣ ಬಿಟ್ಟು ಅಡವಿಯಾರಣ್ಯದಲ್ಲಿರ್ದಡೆ ವಿರಕ್ತನೆ ?ಅಲ್ಲ. ವಿರಕ್ತನ ಪರಿಯೆಂತೆಂದೊಡೆ ಒಡಲ ಹುಡಿಗುಟ್ಟಿ, ಮೃಡನೊಳೆಡದೆರಹಿಲ್ಲದಿರಬಲ್ಲಡೆ ವಿರಕ್ತನಪ್ಪನು. ಅಲ್ಲದಿರ್ದಡೆ ಮೈಲಾರಿ ಮಲ್ಲಿ

ವಿರಕ್ತಿ ವಿರಕ್ತಿ ಎಂಬರು ವಿರಕ್ತಿಯ ಪರಿ ಎಂತುಂಟು ಹೇಳಿರಯ್ಯಾ. Read More »

ರವಿಯ ಕಾಳಗವ ಗೆಲಿದು, ಒಂಬತ್ತು ಬಾಗಿಲ ಮುರಿದು,

ರವಿಯ ಕಾಳಗವ ಗೆಲಿದು, ಒಂಬತ್ತು ಬಾಗಿಲ ಮುರಿದು, ಅಷ್ಟಧವಳಾರಮಂ ಸುಟ್ಟು, ಮೇಲುಪ್ಪರಿಗೆಯ ಮೆಟ್ಟಿ, ಅಲ್ಲಅಹುದು, ಉಂಟುಇಲ್ಲ, ಬೇಕುಬೇಡೆಂಬ ಆರರಿತಾತನೆ ಗುರು ತಾನೆ ಬೇರಿಲ್ಲ. ದ್ವಯಕಮಳದಲ್ಲಿ ಉದಯವಾದ ಚೆನ್ನಮಲ್ಲಿಕಾರ್ಜುನಯ್ಯಾ ನಿಮ್ಮ ಶರಣ ಸಂಗನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.

ರವಿಯ ಕಾಳಗವ ಗೆಲಿದು, ಒಂಬತ್ತು ಬಾಗಿಲ ಮುರಿದು, Read More »

ರತ್ನದ ಸಂಕೋಲೆಯಾದಡೆ ತೊಡರಲ್ಲವೆ ?

ರತ್ನದ ಸಂಕೋಲೆಯಾದಡೆ ತೊಡರಲ್ಲವೆ ? ಮುತ್ತಿನ ಬಲೆಯಾದಡೆ ಬಂಧನವಲ್ಲವೆ ? ಚಿನ್ನದ ಕತ್ತಿಯಲ್ಲಿ ತಲೆಹೊಯ್ದಡೆ ಸಾಯದಿರ್ಪರೆ ? ಲೋಕದ ಭಜನೆಯ ಭಕ್ತಿಯಲ್ಲಿ ಸಿಲುಕಿದಡೆ ಜನನಮರಣ ಬಿಡುವುದೆ ಚೆನ್ನಮಲ್ಲಿಕಾರ್ಜುನಾ ?

ರತ್ನದ ಸಂಕೋಲೆಯಾದಡೆ ತೊಡರಲ್ಲವೆ ? Read More »

ಮೋಹವುಳ್ಳಲ್ಲಿ ಮಚ್ಚುವಂತೆಮಾಡಯ್ಯಾ.

ಮೋಹವುಳ್ಳಲ್ಲಿ ಮಚ್ಚುವಂತೆಮಾಡಯ್ಯಾ. ಮೋಹವುಳ್ಳಲ್ಲಿ ಕರುಳುವ ಕೊಯ್ಯಯ್ಯಾ. ಮೋಹವುಳ್ಳಲ್ಲಿ ಬೆರಳುವ ಕಡಿಯಯ್ಯಾ. ಚೆನ್ನಮಲ್ಲಿಕಾರ್ಜುನದೇವಯ್ಯಾ, ನೊಂದೆನೆಂದಡೆ ಮನಕತಮಾಡಯ್ಯಾ.

ಮೋಹವುಳ್ಳಲ್ಲಿ ಮಚ್ಚುವಂತೆಮಾಡಯ್ಯಾ. Read More »

ಮೊಲೆ ಬಿದ್ದು, ಮುಡಿ ಸಡಲಿ, ಗಲ್ಲ ಬತ್ತಿ, ತೋಳು ಕಂದಿದವಳ

ಮೊಲೆ ಬಿದ್ದು, ಮುಡಿ ಸಡಲಿ, ಗಲ್ಲ ಬತ್ತಿ, ತೋಳು ಕಂದಿದವಳ ಎನ್ನನೇಕೆ ನೋಡುವಿರಿ ಎಲೆ ಅಣ್ಣಗಳಿರಾ ? ಕುಲವಳಿದು bsಲವಳಿದು ಭವಗೆಟ್ಟು ಭಕ್ತೆಯಾದವಳ, ಎನ್ನನೇಕೆ ನೋಡುವಿರಿ ಎಲೆ ತಂದೆಗಳಿರಾ ? ಚೆನ್ನಮಲ್ಲಿಕಾರ್ಜುನನ ಕೂಡಿ ಕುಲವಳಿದು bsಲವಳಿದವಳನು.

ಮೊಲೆ ಬಿದ್ದು, ಮುಡಿ ಸಡಲಿ, ಗಲ್ಲ ಬತ್ತಿ, ತೋಳು ಕಂದಿದವಳ Read More »

ವಾನರಂಗಳಿಗೆ ಭೈತ್ರ ತಪ್ಪಿಬಂದಡೆ

ವಾನರಂಗಳಿಗೆ ಭೈತ್ರ ತಪ್ಪಿಬಂದಡೆ ಮುತ್ತು ಮಾಣಿಕ್ಯ ನವರತ್ನದ ಪೆಟ್ಟಿಗೆಗಳು ಸಾರಿದವು. ಸಾರಿದಡೆ ಆ ವಾನರಂಗಳು ಬಲ್ಲವೆ ಮುತ್ತಿನ ರಕ್ಷೆಯ ? ನವರತ್ನದ ಪೆಟ್ಟಿಗೆಯ ತೆರದು ನೋಡಿ, ಕೆಯ್ಕೊಂಡು, ವಾನರಂಗಳು ಮೆದ್ದು ನೋಡಿ, ಹಣ್ಣಲ್ಲವೆಂದು ಬಿಟ್ಟು ಕಳದವು. ಲೋಕದೊಳಗೆ ಶರಣ ಸುಳಿದಡೆ, ಆ ಶರಣನ ನಡೆ ನುಡಿ ಚಾರಿತ್ರವ ಕರ್ಮಿಗಳೆತ್ತ ಬಲ್ಲರು ? ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರ ಇರವನು ನಿಮ್ಮ ಶರಣರು ಬಲ್ಲರಲ್ಲದೆ ಆ ವಾನರನಂತಹ ಮನುಜರೆತ್ತ ಬಲ್ಲರು.

ವಾನರಂಗಳಿಗೆ ಭೈತ್ರ ತಪ್ಪಿಬಂದಡೆ Read More »

ವೃಷಭನ ಹಿಂದೆ ಪಶುವಾನು ಬಂದೆನು ;

ವೃಷಭನ ಹಿಂದೆ ಪಶುವಾನು ಬಂದೆನು ; ನಂಬಿ ನಚ್ಚಿ ಪಶುವಾನುಬಂದೆನು. ಸಾಕಿ ಸಲಹಿಹನೆಂದು ಸಲೆ ನಚ್ಚಿ ಬಂದೆನು. ಒಲಿದಹ ಒಲಿದಹನೆಂದು ಬಳಿಯಲ್ಲಿ ಬಂದೆನು. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ನಂಬಿ ಬಂದ ಹೆಂಗೂಸ ಹಿಂದೊಬ್ಬರೆಳದೊಯ್ದರೆ ಎಂತು ಸೈರಿಸಿದೆ ಹೇಳಾ, ಎನ್ನ ದೇವರದೇವಾ ?

ವೃಷಭನ ಹಿಂದೆ ಪಶುವಾನು ಬಂದೆನು ; Read More »

ಮುತ್ತು ನೀರಲಾಯಿತ್ತು, ವಾರಿಕಲ್ಲು ನೀರಲಾಯಿತ್ತು,

ಮುತ್ತು ನೀರಲಾಯಿತ್ತು, ವಾರಿಕಲ್ಲು ನೀರಲಾಯಿತ್ತು, ಉಪ್ಪು ನೀರಲಾಯಿತ್ತು. ಉಪ್ಪು ಕರಗಿತ್ತು, ವಾರಿಕಲ್ಲು ಕರಗಿತ್ತು, ಮುತ್ತು ಕರಗಿದುದನಾರೂ ಕಂಡವರಿಲ್ಲ. ಈ ಸಂಸಾರಿಮಾನವರು ಲಿಂಗವಮುಟ್ಟಿ ಭವಭಾರಿಗಳಾದರು. ನಾ ನಿಮ್ಮ ಮುಟ್ಟಿ ಕರಿಗೊಂಡೆನಯ್ಯಾ ಚೆನ್ನಮಲ್ಲಿಕಾರ್ಜುನಯ್ಯಾ.

ಮುತ್ತು ನೀರಲಾಯಿತ್ತು, ವಾರಿಕಲ್ಲು ನೀರಲಾಯಿತ್ತು, Read More »

ಮುತ್ತು ಒಡೆದಡೆ ಬೆಸೆಯಬಹುದೆ ?

ಮುತ್ತು ಒಡೆದಡೆ ಬೆಸೆಯಬಹುದೆ ? ಮನ ಮುರಿದಡೆ ಸಂತಕ್ಕೆ ತರಬಹುದೆ ? ಅಪ್ಪುಗೆ ಸಡಲಿದ ಸುಖವ ಮರಳಿ ಅರಸಿದರುಂಟೆ ? ಸಾಧಕನೊಯಿದ ನಿಧಾನದ ಕುಳಿಯಂತೆ ಅಲ್ಲಿ ಏನುಂಟು ? ಮಚ್ಚು ಪಲ್ಲಟವಾಗಿ, ನೋಟದ ಸುಖವ ಹಿಂಗಿದರೊಳವೆ ? ನೋಡದಿರು, ಕಾಡದಿರು, ಮನಬಳಸದಿರು. ಭಾಷೆಗೆ ತಪ್ಪಿದರೆ ಮುಳ್ಳುಮೊನೆಯ ಕಿಚ್ಚಿನಂತೆ. ಲೇಸು ಬೀಸರವೋಗದ ಮುನ್ನ ಚೆನ್ನಮಲ್ಲಿಕಾರ್ಜುನನ ಕೂಡಿ ಧಾತುಗೆಟ್ಟ ಬಳಿಕ ಒಳವೆ ?

ಮುತ್ತು ಒಡೆದಡೆ ಬೆಸೆಯಬಹುದೆ ? Read More »

ಮುಡಿಬಿಟ್ಟು ತೊಂಗವಾರಿದವು ಕೇಳು ತಂದೆ.

ಮುಡಿಬಿಟ್ಟು ತೊಂಗವಾರಿದವು ಕೇಳು ತಂದೆ. ಉಡಿ ಜೋಲಿ ಅಡಿಗಿಕ್ಕಿ ಹೋಯಿತ್ತು ಶಿವಶಿವಾ. ನಡೆಗೆಟ್ಟು ನಿಧಿ ನಿಂದಿತ್ತು ಕೇಳಾ ಎನ್ನ ತಂದೆ. ಪ್ರಾಣದೊಡೆಯಾ, ಕರುಣದಿಂದೊಪ್ಪುಗೊಳ್ಳಾ ಚೆನ್ನಮಲ್ಲಿಕಾರ್ಜುನಾ.

ಮುಡಿಬಿಟ್ಟು ತೊಂಗವಾರಿದವು ಕೇಳು ತಂದೆ. Read More »