Sri Sarada Devi

ತವ ಕೃಪೆ ಬೆಳಗಲಿ

ತವ ಕೃಪೆ ಬೆಳಗಲಿ  ಭವಭ್ರಮೆ ಕಳೆಯಲಿ ಶಿವೆ ಶ್ರೀಶಾರದೆ ತವಕದಿ ಮೊರೆಯುವೆ|| ಇಂದು ಸುವಿಮಲೆ ವಂದಿತ ಪದತಲೆ | ಕುಂದದ ಪ್ರೇಮದ ಮಂದಾಕಿನಿಯೆ|| ತ್ಯಾಗವಿಭೂಷಿತೆ ತ್ಯಾಗಿಕುಲಾಂಬಿಕೆ| ಯೋಗೀಂದ್ರಾರ್ಚಿತೆ ಯೋಗಪ್ರದಾತೆ|| ನಿನ್ನಡಿದಾವರೆ ಎನ್ನಯ ಆಸರೆ| ಮನ್ನಿಸು ದಾಸನ ಬಿನ್ನಹ ಮಾತೆ|| —-ಸ್ವಾಮಿ ಶಾಸ್ತ್ರಾನಂದ

ತವ ಕೃಪೆ ಬೆಳಗಲಿ Read More »

ಅಲೆದಲೆದು ಅತಿದಣಿದು

ಅಲೆದಲೆದು ಅತಿದಣಿದು ನೆಲೆಗಾಣ್ದೆ ನಿನ್ನಡಿಗೆ ಎಲೆ ತಾಯೆ ಕಡೆಗಿಂದು ಬಂದೆಮ್ಮಸಲಹು|| ಕೊನೆಯಿಲ್ಲ ಕೊರೆಯಿಲ್ಲ ಈ ನಮ್ಮ ದುಃಖಕ್ಕೆ ಮನದಲ್ಲಿ ಬನದಲ್ಲಿ ನೆಮ್ಮದಿಯು ಇನಿತಿಲ್ಲ| ಜನುಮಗಳು ಕಳೆಕಳೆದು ದುಃಖ ಮಿತಿಮೀರುತಿದೆ ಜನನಿ ಮಂಗಳಮೂರ್ತಿ ಕಳೆಯೆಮ್ಮ ಕಲುಷಾರ್ತಿ|| ಪರಮಹಂಸರ ಕರುಣೆರೂಪಿಣಿಯೆ ನೀ ತಾಯೆ ಪರತನವನರಿಯದಿಹ ಪ್ರೇಮದಂಬುಧಿ ಜಲವ| ಎರೆದೆಮ್ಮನುದ್ಧರಿಸು ಪತಿತಪಾವನೆ ಮಾತೆ ಸಾರದಾಯಿನಿ ಪರಮೆ ಅಕಳಂಕಚರಿತೆ||                                                ——ಸ್ವಾಮಿ ತದ್ರೂಪಾನಂದ

ಅಲೆದಲೆದು ಅತಿದಣಿದು Read More »

ಅನಂತರೂಪಿಣಿ (ಶ್ರೀ ದೇವೀ ಸಂಕೀರ್ತನೆ)

ಪೂರಿಯಾಧನಾಶ್ರೀ—–ತೇವರಾ ಅನಂತ ರೂಪಿಣಿ ಅನಂತ ಗುಣವತಿ ಅನಂತನಾಮ್ನಿ ಗಿರಿಜೇ ಮಾ| ಶಿವಹೃನ್ಮೋಹಿನಿ ವಿಶ್ವವಿಲಾಸಿನಿ ರಾಮಕೃಷ್ಣಜಯದಾಯಿನಿ ಮಾ|| ಜಗಜ್ಜನನಿ ತ್ರಿಲೋಕಪಾಲಿನಿ ವಿಶ್ವಸುವಾಸಿನಿ ಶುಭದೇ ಮಾ| ದುರ್ಗತಿನಾಶಿನಿ ಸನ್ಮತಿದಾಯಿನಿ ಭೋಗಮೋಕ್ಷ ಸುಖಕಾರಿಣಿ ಮಾ|| ಪರಮೇ ಪಾರ್ವತಿ ಸುಂದರಿ ಭಗವತಿ ದುರ್ಗೇ ಭಾಮತಿ ತ್ವಂ ಮೇ ಮಾ| ಪ್ರಸೀದ ಮಾತರ್ ನಗೇಂದ್ರ ನಂದಿನಿ ಚಿರಸುಖದಾಯಿನಿ ಜಯದೇ ಮಾ||

ಅನಂತರೂಪಿಣಿ (ಶ್ರೀ ದೇವೀ ಸಂಕೀರ್ತನೆ) Read More »