Sri Sarada Devi

ಜಗದೀ ಸಂತೆಯೊಳಲೆಯುವ ಮನುಜ

ಜಗದೀ ಸಂತೆಯೊಳಲೆಯುವ ಮನುಜ ನಿಲ್ಲೋ ಒಂದು ಕ್ಷಣ! ತಾಯಿಯ ನೆನೆಯಲು ಬಂದಿದೆ ಶುಭದಿನ ಹಾಡೋ ತುಂಬಿ ಮನ!! ಸ್ಥಾವರ ಜಂಗಮ ಎಲ್ಲಕ್ಕೂ ತಾಯಿ ಬಂದಿಹಳು ಈ ಧರೆಗೆ.! ಆಮೋದರ ನದಿತೀರದಿ ಕಾಣುವ ಜಯರಾಂಬಾಟಿಯೊಳಗೆ (ಅಮ್ಮ)!! ಮಕ್ಕಳು ಮರೆತರು ತಾಯಿಯು ಮರೆವಳೆ ತನ್ನಯ ಶಿಶುಗಳನು ಮಣ್ಣಿನೊಳಾಡುವ ನಮ್ಮನು ಎತ್ತಲು ಚಾಚಿಹ ಕೈ ನೋಡು (ತಾಯಿಯ)!! ಭವದೀ ಬವಣೆಗಳೆಲ್ಲವ ಮರೆತು ಜೈ ಮಾ ಎಂದೆನ್ನು! ಪಾಪದ ರಾಶಿಗೆ ಇಡು ನೀ ತಾಯಿಯ ಸ್ಮರಣೆಯ ಬೆಂಕಿಯನು!!

ಜಗದೀ ಸಂತೆಯೊಳಲೆಯುವ ಮನುಜ Read More »

ಅಮ್ಮ ಅಮ್ಮಾ ಎಂದು ಕರೆಯುತಿಹೆನಮ್ಮಾ

ಶಿವರಂಜಿನಿ – ಝಪತಾಲ | ಅಮ್ಮ ಅಮ್ಮಾ ಎಂದು ಕರೆಯುತಿಹೆನಮ್ಮಾ ಕರಕರೆಯಿದೆಂದೆನದೆ ಓಡಿ ಬಾರಮ್ಮಾ|| ಯಾರ ದೋಷಗಳೆಷ್ಟು ನನಗೇಕೆ ಬೇಕು। ನನ್ನ ದೋಷವ ತಿದ್ದಿ ನೀ ಸಲಹಬೇಕು|| ಪಾಪಿಗಳನುದ್ಧರಿಪ ನೀ ದಯಾಸಿಂಧು| ನೀಡೆನಗೆ ಕರುಣೆಯಿಂ ಆ ಕೃಪೆಯ ಬಿಂದು|| ತಾಯಿ ನೀನಿರುತಿರಲು ತಬ್ಬಲಿಯೆ ನಾನು| ವಾತ್ಸಲ್ಯಸುಧೆಯುಣಿಸಲಾರೆಯಾ ನೀನು|| ಜ್ಞಾನ ಭಕ್ತಿ ವಿವೇಕ ವೈರಾಗ್ಯ ನೀಡು| ಎನ್ನ ಹೃನ್ಮಂದಿರದಿ ನಿತ್ಯ ನಲಿದಾಡು|| – ಸ್ವಾಮಿ ಪುರುಷೋತ್ತಮಾನಂದ

ಅಮ್ಮ ಅಮ್ಮಾ ಎಂದು ಕರೆಯುತಿಹೆನಮ್ಮಾ Read More »

ನನ್ನ ಜನನಿ ನಿನ್ನ ಜನನಿ

ಅಲೈಯಾ ಬಿಲಾವಲ್ – ಏಕತಾಲ ನನ್ನ ಜನನಿ ನಿನ್ನ ಜನನಿ ಎಂಬ ಭೇದ ಸಲ್ಲದು| ಅವಳು ಜಗದ ಕೋಟಿಕೋಟಿ ಜೀವಜನ್ಮದಾತೆಯು||   ತಾಯೆ ನಿನ್ನ ಸಮ್ಮುಖದಲ್ಲಿ ನಾವು ಕೂಡಿ ನಲಿವೆವು| ನಿನ್ನ ವಾತ್ಸಲ್ಯಸುಧೆಯ ನೀಡಿ ಎಮ್ಮ ಕಾಪಿಡು||   ಅಮ್ಮಾ ಎಂದು ಎಷ್ಟು ಬಾರಿ ಕರೆದರದೂ ಸಾಲದು! ತಾಯ ಮಧುರ ಋಣವ ನಾವು ತೀರಿಸಲೇ ಆರೆವು||   ಮೈಮನಗಳ ಮರೆಸುವಂಥ ದಿವ್ಯನಾಮವಿಲ್ಲಿದೆ! ಅಮ್ಮಾ ಎಂಬ ನಾಮಸುಧೆಗೆ ಜಗದಿ ಸಾಟಿ ಎಲ್ಲಿದೆ||   ಪರಬ್ರಹ್ಮ ಆದಿಶಕ್ತಿ ಎನಿತೊ ನಾಮ

ನನ್ನ ಜನನಿ ನಿನ್ನ ಜನನಿ Read More »

ನಿಖಿಲ ಮಾತೃಹೃದಯ

ನಿಖಿಲ ಮಾತೃಹೃದಯ ಮಥಿಸಿ ಪ್ರೇಮದಮೃತ ಧರೆಗೆ ತಂದೆ ಯಾರು ನೀನು ನಿತ್ಯ ನಿರ್ಮಲ ಶುದ್ಧ ಜ್ಯೋತಿ ಬಂದಿಹೇ || ಅನ್ನದಾಯಿನಿ ಅನ್ನಪೂರ್ಣೇ ಮಾತೃಮೂರ್ತಿ ಪ್ರೀತಿ ತುಂಬಿ ನೊಂದ ಜನಕೆ ನೆರವ ನೀಡೆ ಇಳೆಗೆ ಇಳಿದು ಇಳಿದು ಇಳಿದು ಇಳಿದು ಬಂದೆ || ಹೇ ಶಾರದೇ ವರದೇ ಶುಭದೇ ಜ್ಞಾನದೇ ಭಕ್ತಿದೇ ಭುಕ್ತಿದೇ ಮುಕ್ತಿದೇ ನಿನ್ನ ಕೃಪಾಬಲದಿ ಬೇಗ ಸಫಲವಾಗಲೆಮ್ಮ ಯೋಗ ||

ನಿಖಿಲ ಮಾತೃಹೃದಯ Read More »

ಶ್ರೀಶಾರದಾದೇವಿ ಹೇ ಮಹಾಮಾತೆ

ಶ್ರೀಶಾರದಾದೇವಿ ಹೇ ಮಹಾಮಾತೆ ಶ್ರೀರಾಮಕೃಷ್ಣ ಗುರುದೇವ ಸಂಪ್ರೀತೆ | ಪರಮಪಾವನಹೃದಯೆ ಕಲಿಯುಗದ ಸೀತೆ ಭಕ್ತಿಯಿಂದಾರಾಧಿಪೆವು ನಿನ್ನನಮ್ಮ ಗಗನದಂತಿಹುದಮ್ಮ ನಿನ್ನ ಗಾಂಭೀರ್ಯ ನಿನ್ನ ತೇಜದ ಭಾಗವೀ ನಮ್ಮ ಸೂರ್ಯ | ನೀ ಕಾಳಿ ನೀ ಲಕ್ಷ್ಮಿ ನೀ ಬಿಜ್ಜೆಯಮ್ಮ ಮಕ್ಕಳಾಗಿಹ ನಮ್ಮ ಪೊರೆ ಶಕ್ತಿಯಮ್ಮ || ಮಹಿಮೆ ಮಹಿಮೆಯನರಿವುದೆಂದೆಂಬರಮ್ಮ | ಗುರುವರ್ಯನಂ ತಿಳಿದ ನೀ ಮಹಿಮಳಮ್ಮಪತಿಭಕ್ತಿಯದೆ ಮುಕ್ತಿ ನಿನಗಾಯಿತಮ್ಮ ಪರಶಕ್ತಿ ನೀನಮ್ಮ ನಮ್ಮ ಸಲಹಮ್ಮ || ನಿನ್ನ ನಾಮವೆ ಜನನಿ ಸುರನದಿಯ ತೀರ್ಥ | ಎಲೆ ತಾಯೆ, ನೀನೇ

ಶ್ರೀಶಾರದಾದೇವಿ ಹೇ ಮಹಾಮಾತೆ Read More »

ಸಾರದಾ ರೂಪತಾಳಿ

ಸಾರದಾ ರೂಪತಾಳಿ ಬಂದಿಹಳು ತಾಯಿ ಕಾಳಿ ಅದನರಿತೆ ರಾಮಕೃಷ್ಣ ಪೂಜಿಸಿದರು ಭಾವ ತಾಳಿ || ಆದ್ಯಾಶಕ್ತಿ ನೀ ಮಾತೆ ಸರ್ವಜೀವ ಮುಕ್ತಿದಾತೆ | ಮಹಾಲಕ್ಷ್ಮಿ ಸರಸ್ವತಿ ಗುಪ್ತರೂಪ ಜ್ಞಾನದಾತೆ || ಸೀತಾ ರಾಧಾ ಅನ್ನಪೂರ್ಣಾ ಕಾಯ ಪಡೆದ ಭುವಿಯು ಧನ್ಯ | ಪ್ರೇಮದಿಂದ ತಾಯಿಯೆಂದು ಕರೆವ ಮನುಜ ಜಗದಿ ಮಾನ್ಯ || ದೀನಜನರ ಉದ್ಧರಿಸೆ ದೀನರೂಪ ತಾಳಿ ಬಂದೆ | ಅಭಯೇ ನೀನು ಉಭಯಕರದಿ ಅಭಯವನ್ನು ನೀಡಲೆಂದೆ || -ಸ್ವಾಮಿ ಶಾಸ್ತ್ರನಂದ

ಸಾರದಾ ರೂಪತಾಳಿ Read More »

ಜೈ ಜೈ ಮಾ ಜಗದಂಬ

ಜೈ ಜೈ ಮಾ ಜಗದಂಬ ಜಯ ಜಯ ಮಾ ಶಾರದಾಂಬ || ಪ || ಆದ್ಯಾಶಕುತಿ ನೀ ಮಾತಾಜೀವಗತಿ ದಾಯಿನೀ ಹೇ ಮಾತಾ || ಪ || ಸಿದ್ಧಿ ಪ್ರದಾಯಿನಿ ನೀ ಮಾತಾ ದುರ್ಗತಿ ನಿವಾರಿಣಿ ಹೇ ಮಾತಾ || ಪ || ಮುಕ್ತಿ ವಿಧಾಯಿನಿ ನೀ ಮಾತಾ ನಮೋ ನಾರಾಯಣಿ ಹೇ ಮಾತಾ || ಪ || * * * ಸುಜ್ಞಾನದಾಯಿಕೇ ಸುವಿಮಲಚರಿತೇ | ಮಾ ಶಾರದಾಮಣಿ ಪ್ರೀತಿದಾತೇ || ಶಾಂತಿದಾತೇ, ಶಕ್ತಿದಾತೇ, ಮುಕ್ತಿದಾತೇ,

ಜೈ ಜೈ ಮಾ ಜಗದಂಬ Read More »

ಶ್ರೀ ಅನ್ನಪೂರ್ಣಾ ಸ್ತೋತ್ರಮ್

ನಿತ್ಯಾನಂದಕರೀ ವರಾಭಯಕರೀ ಸೌಂದರ್ಯ ರತ್ನಾಕರೀ ನಿರ್ಧೂತಾಖಿಲ ಘೋರ ಪಾವನಕರೀ ಪ್ರತ್ಯಕ್ಷ ಮಾಹೇಶ್ವರೀ | ಪ್ರಾಲೇಯಾಚಲ ವಂಶ ಪಾವನಕರೀ ಕಾಶೀಪುರಾಧೀಶ್ವರೀ ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ || 1 || ನಾನಾ ರತ್ನ ವಿಚಿತ್ರ ಭೂಷಣಕರಿ ಹೇಮಾಂಬರಾಡಂಬರೀ ಮುಕ್ತಾಹಾರ ವಿಲಂಬಮಾನ ವಿಲಸತ್-ವಕ್ಷೋಜ ಕುಂಭಾಂತರೀ | ಕಾಶ್ಮೀರಾಗರು ವಾಸಿತಾ ರುಚಿಕರೀ ಕಾಶೀಪುರಾಧೀಶ್ವರೀ ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ || 2 || ಯೋಗಾನಂದಕರೀ ರಿಪುಕ್ಷಯಕರೀ ಧರ್ಮೈಕ್ಯ ನಿಷ್ಠಾಕರೀ ಚಂದ್ರಾರ್ಕಾನಲ ಭಾಸಮಾನ ಲಹರೀ ತ್ರೈಲೋಕ್ಯ ರಕ್ಷಾಕರೀ | ಸರ್ವೈಶ್ವರ್ಯಕರೀ ತಪಃ ಫಲಕರೀ

ಶ್ರೀ ಅನ್ನಪೂರ್ಣಾ ಸ್ತೋತ್ರಮ್ Read More »

ಶ್ರೀಶಾರದಾದೇವೀ-ಅಷ್ಟೋತ್ತರಶತನಾಮಸ್ತೋತ್ರಮ್

ರಾಮಚಂದ್ರಾತ್ಮಜಾ  ದೇವೀ  ಶ್ಯಾಮಾಮಾತಾ ಸರಸ್ವತೀ| ಕರ್ಮಾತೀತಾ ಸ್ವಯಂಜಾತಾ ಜಗತ್ತ್ರಯಸುಕೈಷಿಣೀ ||   ಶಾರದಾಮಣಿನ್ನಾಮ್ನೀ ದಯಾರ್ದ್ರಹೃದಯಾ ಸತೀ | ಶಾಂತಾ ಸೌಮ್ಯ ಸುಗಂಭೀರಾ ಭ್ರಾತೃವಾತ್ಸಲ್ಯರೂಪೀಣೀ ||   ಅನ್ನಪೂರ್ಣಾಹಾರದಾತ್ರೀ ವಿಪ್ರಯೋಗವಿನಾಶಿನೀ | ಪಿತರುಸಾಹಾಯ್ಯದಾಪುತ್ರೀ ಪೂಜಾಪುಷ್ಪಾವಚಾಯಿನೀ || ಬಾಲ್ಯೋಢಾ  ಮುಗ್ಧಸತ್ಕನ್ಯಾ ಪಠಿಸೇವಪರಾಯಣಾ | ಕ್ರಂದಿತಾಭರಣಾ ಭೂಷಾಹೀನಾ ಸಹಜಸುಂದರೀ ||   ಪತ್ಯಾಪ್ತಸಕಲಜ್ಞಾನಾ ಪತಿದರ್ಶನಕೌತುಕಾ | ತದ್ಧೇತುದುರ್ಗಮಾಧ್ವನ್ಯಾ ತತ್ಪ್ರೀತಿಸಮಲಂಕೃತಾ ||   .ದಾರ್ಪಿತಸರ್ವಸ್ವಾ ತದರ್ಚಿತಪದಾಂಬುಜಾ | ತತ್ಸಂಯುತಸಮಾಧಿಸ್ಥಾ ತದ್ದತ್ತಸುತಪಃಫಲಾ ||   ಸಂಪ್ರಾಪ್ತಸರ್ವಮಾತೃತ್ವಾ ಸರ್ವಾಲೋಕೋಪಕಾರಿಕಾ| ಸರ್ವಾರ್ತಿನಾಶಿನೀ ಸ್ನಿಗ್ಧಾ  .ದಾಯಿನೀ ||  

ಶ್ರೀಶಾರದಾದೇವೀ-ಅಷ್ಟೋತ್ತರಶತನಾಮಸ್ತೋತ್ರಮ್ Read More »

ಸಕಲದಿಶಾಸು ಮುದಂ ತನ್ವಾನೇ

ಸಕಲದಿಶಾಸು ಮುದಂ ತನ್ವಾನೇ ಸಕಲನಿಶಾಸು ಮಹೋ ವಿಧದಾನೇ | ಜಯ ವಿಶ್ವ-ಜಗದಘ-ತಿಮಿರ-ನಾಶಿನಿ ಜಯ ಜನನಿ ಜಯ ಜಯ ಜನನಿ ಜಯ ||   ನಂದಿತ-ಸಂತತಿ-ವಂದಿತ-ಚರಣಂ ಭಯಹರಣಂ ತವ ಕಮಲ-ಸುಲಲಿತಮ್ | ಶರಣಾಗತ-ಮಾನವ-ದುಃಖ-ಹರೇ ಶಿರಸಾ ವಂದೇ ಹೇ ಜಗದತುಲೇ ||   ಪ್ರತಿಯಮಾಲಂ ವೇಗವಚ್ಚಲಂ ವಹತಿ ಜೀವನಂ ಪ್ರತ್ಯಹಂ ನರಃ | ವಿಷಯವೈಭವಂ ಫೇನಬುದ್ಬುದಃ ಭಜತ ಶಾರದಾಮೀಶ್ವರೀ0 ಪರಾಮ್ ||   ತಿಮಿರತಾರಣಂ ಭಕ್ತಿಕಾರಣಂ ವಿಷಯಶೋಷಣಂ ವೇದಬೋಧನಮ್ | ಪರಪದಸ್ಯ ಮೇ ಪ್ರಾಪಣ0 ಕಣಂ ಚರಣಶೋಭನಂ ದೇಹಿ ಶಾರದೇ

ಸಕಲದಿಶಾಸು ಮುದಂ ತನ್ವಾನೇ Read More »

ಶ್ರೀ ಶಾರದಾ-ಸುಪ್ರಭಾತಮ್

ಮಾತಃ ಸಮಸ್ತಜಗತಾಂ ಪರಮಸ್ಯ ಪುಂಸಃ ಶಕ್ತಿಸ್ವರೂಪಿಣಿ ಶಿವೇ ಕರುಣಾರ್ದ್ರಚಿತ್ತೇ | ಲೋಕಸ್ಯ ಶೋಕಶಮನಾಯ ಕೃತಾವತಾರೇ ಶ್ರೀಶಾರದೇಸ್ತು ಶಿವದೇ ತವ ಸುಪ್ರಭಾತಮ್ || ಬಾಲ್ಯೇ ಭವಸ್ಯ ತಮಸಃ ಪರಿಹಾರಯಿತ್ರೇ ಲೀಲಾ ಮನುಷ್ಯವಪುಷೇಥ ಗದಾಧರಾಯ | ದತ್ತೇ ತದರ್ಪಿತಧಿಯಾಪ್ತಸಮಸ್ತವಿದ್ಯೇ ಶ್ರೀಶಾರದೇಸ್ತು ಶುಭದೇ ತವ ಸುಪ್ರಭಾತಮ್ || ಬಾಲ್ಯಾತ್ ಪರೇ ವಯಸಿ ಭರ್ತರಿ ಸಂಪ್ರವೃತ್ತಾಮ್ ಉನ್ಮತ್ತ ಇತ್ಯನುಚಿತಾಮವಧೂಯ ವಾರ್ತಾಮ್ | ತದ್ದರ್ಶನಕ್ರಮಿತದುರ್ಗಮದೂರಮಾರ್ಗೆ ಶ್ರೀರಾಮಕೃಷ್ಣದಯಿತೇ ತವ ಸುಪ್ರಭಾತಮ್ || ಸಂನ್ಯಾಸಿನಂ ಪತಿಮವೇಕ್ಷ್ಯ ಚ ನೋದ್ವಿಜಾನೆ ಸೇವಾರ್ಪಿತತ್ರೀಕರಣೇ ಪರಿಶುದ್ಧಚಿತ್ತೇ | ತತ್ಸಾಧನಾಚರಮಸೀಮ್ನಿ ಸಮರ್ಪಿತಾಂಘ್ರೆ ಶ್ರೀ

ಶ್ರೀ ಶಾರದಾ-ಸುಪ್ರಭಾತಮ್ Read More »

ಶ್ರೀದೇವೀ-ನಮನಮ್

ಓಂ ಸರ್ವ-ಮಂಗಲ-ಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ | ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋSಸ್ತು ತೇ || ಸೃಷ್ಟಿ-ಸ್ಥಿತಿ-ವಿನಾಶಾನಾಂ ಶಕ್ತಿಭೂತೇ ಸನಾತನಿ | ಗುಣಾಶ್ರಯೇ ಗುಣಮಯೇ ನಾರಾಯಣಿ ನಮೋSಸ್ತುತೇ || ಶರಣಾಗತ-ದೀನಾರ್ತ-ಪರಿತ್ರಾಣ- ಪರಾಯಣೇ | ಸರ್ವಸ್ಯಾರ್ತಿಹರೇ ದೇವಿ ನಾರಾಯಣಿ ನಮೋSಸ್ತು ತೇ || ಜಯ ನಾರಾಯಣಿ ನಮೋSಸ್ತು ತೇ |೪|

ಶ್ರೀದೇವೀ-ನಮನಮ್ Read More »

ಶ್ರೀ ಶಾರದಾದೇವಿ ಸ್ತೋತ್ರಮ್

ಪ್ರಕೃತಿಂ ಪರಮಾಮಭಯಂ ವರದಾಂ ನರರೂಪಧರಾಂ ಜನತಾಪಹಾರಾಮ್ | ಶರಣಾಗತ-ಸೇವಕ-ತೋಷಕರೀಮ್ ಪ್ರಣಮಾಮಿ ಪರಾಂ ಜನನೀಮ್ ಜಗತಾಮ್ || ಗುಣಹೀನ-ಸುತಾನಪರಾಧಯುತಾನ್ ಕೃಪಯಾದ್ಯ ಸಮುದ್ಧರ ಮೋಹಗಾತನ್ | ತರಣೀಂ ಭವಸಾಗರ-ಪಾರಕರೀಂ ಪ್ರಣಮಾಮಿ ಪರಾಂ ಜನನೀಮ್ ಜಗತಾಮ್ || ವಿಷಯಂ ಕುಸುಮಂ ಪರಿಹೃತ್ಯ ಸದಾ ಚರಣಾಂಬುರುಹಾಮೃತ-ಶಾಂತಿ-ಸುಧಾಮ್ | ಪಿಬ ಭೃಂಗಮನೋ ಭವರೋಗಹರಂ ಪ್ರಣಮಾಮಿ ಪರಾಂ ಜನನೀಮ್ ಜಗತಾಮ್ || ಕೃಪಾಂ ಕುರು ಮಹಾದೇವಿ ಸುತೇಷು ಪ್ರಣತೇಷು ಚ | ಚರಣಾಶ್ರಯದಾನೇನ ಕೃಪಮಾಯಿ ನಮೋಸ್ತು ತೇ || ಲಜ್ಜಾಪಟಾವೃತೇ ನಿತ್ಯಂ ಶಾರದೇ ಜ್ಞಾನದಾಯಿಕೆ |

ಶ್ರೀ ಶಾರದಾದೇವಿ ಸ್ತೋತ್ರಮ್ Read More »

ಶ್ರೀಶಾರದಾ-ನಾಮ-ಸಂಕೀರ್ತನಮ್

ಧ್ಯಾಯೇದ್ ಹೃದಂಬುಜೇ ದೇವೀಂ ತರುಣಾರುಣವಿಗ್ರಹಾಮ್ | ವರಭಯಕರಾಂ ಶಾಂತಾಂ ಸ್ಮಿತೋತ್ಫುಲ್ಲಮುಖಾಂಬುಜಾಮ್|| ಸ್ಥಲಪದ್ಮಪ್ರತೀಕಾಶಪಾದಾಂಭೋಜಸುಶೋಭನಾಮ್ | ಶುಕ್ಲಾಂಬರಧರಾಂ ಧೀರಾಂ ಲಜ್ಜಾಪಟವಿಭೂಷಿತಾಮ್ || ಪ್ರಸನ್ನಾಂ ಧರ್ಮಕಾಮಾರ್ಥಮೋಕ್ಷದಾಂ ವಿಶ್ವಮಂಗಲಾಮ್ | ಸ್ವನಾಥವಾಮಭಾಗಸ್ಥಾಂ ಭಕ್ತನುಗ್ರಹಕಾರಿಣೀಮ್ || ತ್ವಂ ಮೇ ಬ್ರಹ್ಮ ಸನಾತನಿ     ಮಾ ಶಾರದೇ ಈಶ್ವರಿ ಸುಭಗೇ      ಮಾ ಬ್ರಹ್ಮಾನಂದಸ್ವರೂಪಿಣಿ          ಮಾ ಬ್ರಹ್ಮಶಕ್ಥಿಸುಖದಾಯಿನಿ          ಮಾ ಸಚ್ಚಿತ್ಸುಖಮಯರೂಪಿಣಿ        ಮಾ ಸೃಷ್ಟಿಸ್ಥಿತಿಲಯಕಾರಿಣಿ          ಮಾ ಬ್ರಹ್ಮಸುಧಾಂಬುಧಿಕೇಲಿನಿ      ಮಾ ಬ್ರಹ್ಮಾತ್ಯೆಕ್ಯಶುಭಂಕರಿ          ಮಾ       * ಜೀವೇಶ್ವರಭಿತ್ಕೌತುಕಿ             ಮಾ ಅಗಾಧಲೀಲಾರೂಪಾಣಿ           ಮಾ ಚಿನ್ಮಯರೂಪಾವಿಲಾಸಿನಿ        ಮಾ ಬಹಿರಾಂತರಸುಖವರ್ಧಿನಿ        ಮಾ ಜ್ಞಾನಾನಂದಪ್ರವರ್ಷಿಣಿ           ಮಾ

ಶ್ರೀಶಾರದಾ-ನಾಮ-ಸಂಕೀರ್ತನಮ್ Read More »

ಶ್ರೀರಾಮಕೃಷ್ಣ ಪ್ರೇಮಸುರಧುನೀ

ಶ್ರೀರಾಮಕೃಷ್ಣ ಪ್ರೇಮಸುರಧುನೀ ಕರುಣಾರೂಪಿಣೀ ಮಾ ಆಮಾರ್|| ಆಸಿಲೇ ಧರಾಯ್ ಧರಿ ನರಕಾಯ್ ಜುಡಾತೇ ತಾಪಿತ ಹಿಯಾ ಸಬಾರ್|| ನಿತ್ಯಶುದ್ಧ ಚಿನ್ಮಯಕಾಯ್ ಶ್ರೀರಾಮಕೃಷ್ಣ ಅರುಣಿಮಾ ತಾಯ್| ಅರೂಪ ಉಥಲೇ ಓರೂಪ ಆಭಾಯ್ ಪರಾಣ ಮಾ ತಾಯ್ ಜಗಜಗನಾರ್|| ನಿತ್ಯನಂದಿತಾ ನಿಖಿಲವಂದಿತಾ ಶ್ರೀರಾಮಕೃಷ್ಣ ಆರಾಧಿತಾ| ಗುಣಾತೀತಾ ತುಮಿ ಗುಣಮಯೀ ದೇವೀ ತುಮಿ ಮಾತಾ ಪುನ ತುಮಿ ಪಿತಾ|| ಸಾಧುಸಜ್ಜನಜನನೀ ತುಮಿ ಮಾ ಅಸಾಧು ದುರ್ಜನ ಸುತ ತೋಮಾರ್| ಬಹೇ ನಿರಂತರ ಅಂತಹೀನ ಧಾರ್ ತವ ಅನಂತ ಕರುಣಾ ಧಾರ್|| —-ಸ್ವಾಮಿ

ಶ್ರೀರಾಮಕೃಷ್ಣ ಪ್ರೇಮಸುರಧುನೀ Read More »

ದೇ ಗೋ ಮಾ ದೇಖಾ ದೇ

ದೇ ಗೋ ಮಾ ದೇಖಾ ದೇ ಸಾರದೇ ಶುಭದೇ|| ಜ್ಞಾನ ಭಕತಿ ದೇ ಜ್ಞಾನ ದೇ ಮಾ ಜ್ಞಾನದೇ|| ತಾಪಿತ ತಾರಣೇ ಏಲೇ ಯದಿ ಕರುಣಾಯ್ | ಆಮಾರೇ ಕೇನೊ ಮಾ ತಬೇ ರಾಖಿಬೇ ನಾ ರಾಂಗಾ ಪಾಯ್|| ದಿನ ಜಾಯ್ ಆಯು ಜಾಯ್ ದೇಖಿತೇ ದೇಖಿತೇ ಹಾಯ್| ಆರ್ ಕಬೇ ದಿಬಿ ದೇಖಾ ಬೋಲ್ ಗೋ ಮಾ ವರದೇ||                             —-ಸ್ವಾಮಿ ಚಂಡಿಕಾನಂದ

ದೇ ಗೋ ಮಾ ದೇಖಾ ದೇ Read More »

ಜಯ ಜಯ ಜನನೀ

ಜಯ ಜಯ ಜನನೀ,ಜಯ ಶ್ರೀಸಾರದಾಮಣಿ ಕರುಣಾರೂಪಿಣಿ ಜಯ ಮಾ| ಆದ್ಯಾಶಕತಿ, ಪರಮಾ ಪ್ರಕೃತಿ ಅಶರಣಗತಿ ತುಮಿ ಮಾ|| ಜಯ ಜಗತಾರಿಣೀ ಭವಭಯಹಾರಿಣೀ ದುರ್ಗತಿ ನಿವಾರಿಣೀ ಮಾ| ಸಿದ್ಧಿಪ್ರದಾಯಿನೀ ಮುಕ್ತಿವಿಧಾಯಿನೀ ಜೀವಗತಿದಾಯಿನೀ ಮಾ|| ನಿಖಿಲ ಜಗತಮಾತಾ ಜೀವಕಲ್ಯಾಣರತಾ ಲಜ್ಜಾಪಟಾವೃತಾ ಮಾ| ದುರ್ಜನ ಸಜ್ಜನ ಸಂತಾನ ಅಗಣನ ಪಾಲನಕಾರಿಣೀ ಮಾ|| ಜಯ ಸಾರದೇಶ್ವರೀ ಸೀತಾ ರಾಧಾ ಮಾತಾ ಮೇರೀ ಯಶೋಧರಾ ವಿಷ್ಣುಪ್ರಿಯಾ ಮಾ| ಯುಗದೇವವಂದಿತಾ ಸುರನರ ಸೇವಿತಾ ನಮೋ ನಾರಾಯಣೀ ಮಾ||                          —-ಸ್ವಾಮಿ ಚಂಡಿಕಾನಂದ

ಜಯ ಜಯ ಜನನೀ Read More »

ಉಠೋ ಗೋ ಕರುಣಾಮಯೀ

ಉಠೊ ಗೋ ಕರುಣಾಮಯೀ ಖೋಲೋ ಗೋ ಕುಟೀರ ದ್ವಾರ ಆಂಧಾರೇ ಹೇರಿತೇ ನಾರಿ ಹೃದಿಕಾಂಪೇ ಅನಿವಾರ್|| ತಾರಸ್ವರೇ ಡಾಕಿತೇಛಿ ತಾರಾ ತೋಮಾಯ್ ಕೊತೊಯಿ ಬಾರ್ ದಯಾಮಯೀ ಹೋಯೇ ಆಜಿ ಏಕಿ ತವ ವ್ಯವಹಾರ್|| ಸಂತಾನೇ ರಾಖಿ ಬಾಹಿರೇ ಆಛೋ ಶುಯೇ ಅಂತಃಪುರೇ ಮಾ ಮಾ ಬೋಲೇ ಡೇಕೇ ಮೋರ್ ಅಸ್ಥಿ ಚರ್ಮ ಹೊಲೊ ಸಾರ್|| ಖೇಲಾಯ್ ಮತ್ತ ಛಿಲೇಮ್ ಬೊಲೇ ಬುಝಿ ಮುಖ ಬಾಂಕಾಯಿಲೇ ಏಕಬಾರ್ ಚಾವೋ ಮಾ ವದನ ತುಲೇ ಖೇಲಿತೇ ಜಾಬೊ ನಾ ಆರ್

ಉಠೋ ಗೋ ಕರುಣಾಮಯೀ Read More »

ಸಾರದ ರೂಪ ತಾಳಿ

ಸಾರದ ರೂಪತಾಳಿ ಬಂದಿಹಳು ತಾಯಿ ಕಾಳಿ ಅದನರಿತೆ ರಾಮಕೃಷ್ಣ ಪೂಜಿಸಿದರು ಭಾವ ತಾಳಿ|| ಆದ್ಯಾಶಕ್ತಿ ನೀ ಮಾತೆ ಸರ್ವಜೀವಮುಕ್ತಿದಾತೆ| ಮಹಾಲಕ್ಷ್ಮೀ ಸರಸ್ವತಿ ಗುಪ್ತರೂಪ ಜ್ಞಾನದಾತೆ|| ಸೀತಾ ರಾಧಾ ಅನ್ನಪೂರ್ಣಾ ಕಾಯ ಪಡೆದ ಭುವಿಯು ಧನ್ಯ| ಪ್ರೇಮದಿಂದ ತಾಯಿಯೆಂದು ಕರೆವ ಮನುಜ ಜಗದಿ ಮಾನ್ಯ|| ದೀನಜನರ ಉದ್ಧರಿಸೆ ದೀನರೂಪ ತಾಳಿ ಬಂದೆ| ಅಭಯೇ ನೀನು ಉಭಯಕರದಿ ಅಭಯವನ್ನು ನೀಡಲೆಂದೆ|| —-ಸ್ವಾಮಿ ಶಾಸ್ತ್ರಾನಂದ

ಸಾರದ ರೂಪ ತಾಳಿ Read More »

ಶ್ರೀಶಾರದದೇವಿ ಹೇ ಮಹಾಮಾತೆ

ಶ್ರೀಶಾರದದೇವಿ ಹೇ ಮಹಾಮಾತೆ ಶ್ರೀರಾಮಕೃಷ್ಣ ಗುರುದೇವ ಸಂಪ್ರೀತೆ| ಪರಮಪಾವನಹೃದಯೆ ಕಲಿಯುಗದ ಸೀತೆ ಭಕ್ತಿಯಿಂದಾರಾಧಿಪೆವು ನಿನ್ನನಮ್ಮ|| ಗಗನದಂತಿಹುದಮ್ಮ ನಿನ್ನ ಗಾಂಭೀರ್ಯ ನಿನ್ನ ತೇಜದ ಭಾಗವೀ ನಮ್ಮ ಸೂರ್ಯ| ನೀ ಕಾಳಿ ನೀ ಲಕ್ಷ್ಮಿ ನೀ ಬಿಜ್ಜೆಯಮ್ಮ ಮಕ್ಕಳಾಗಿಹ ನಮ್ಮ ಪೊರೆ ಶಕ್ತಿಯಮ್ಮ|| ಮಹಿಮೆ ಮಹಿಮೆಯನರಿವುದೆಂದೆಂಬರಮ್ಮ ಗುರುವರ್ಯನಂ ತಿಳಿದ ನೀ ಮಹಿಮಳಮ್ಮ| ಪತಿಭಕ್ತಿಯದೆ ಮುಕ್ತಿ ನಿನಗಾಯಿತಮ್ಮ ಪರಶಕ್ತಿ ನೀನಮ್ಮ ನಮ್ಮ ಸಲಹಮ್ಮ|| ನಿನ್ನ ನಾಮವೆ ಜನನಿ ಸುರನದಿಯ ತೀರ್ಥ ಎಲೆ ತಾಯೆ, ನೀನೇ ಪವಿತ್ರತಮ ತೀರ್ಥ| ನಿನ್ನ ಪೂಜೆಯೆ ಭಕ್ತಿ,

ಶ್ರೀಶಾರದದೇವಿ ಹೇ ಮಹಾಮಾತೆ Read More »

ರಾಮಕೃಷ್ಣ ತಪೋಸೂರ್ಯ

ರಾಮಕೃಷ್ಣ ತಪೋಸೂರ್ಯ ಕಿರಣಬಿಂಬ ಚಂದ್ರಿಕೆ ಓ ತಾಯಿ ಅಂಬಿಕೆ|| ಗಿರಿಯ ದರಿಯ ನೆಲವ ಜಲವ ತಬ್ಬಿ ನಿಂತ ಕರುಣೆಯೆ ವಾತ್ಸಲ್ಯವರಣೆಯೆ|| ರಾಮಕೃಷ್ಣ ತಪೋವನದ ಪರ್ಣಕುಟಿಯ ದೀಪವೆ| ಬಳಿಗೆ ಬಂದ ಹಣತೆಗಳಿಗೆ ಬೆಳಕನಿತ್ತ ಕಿರಣವೆ ಮೌನಪ್ರಭಾವಲಯವೆ|| ಸಂಕಟಗಳ ವನವಸನವ- ನುಟ್ಟು ನಿಂತ ಶಿಖರವೆ| ನದನದಿಗಳ ವಾತ್ಸಲ್ಯದ ಹಾಲೂಡಿದ ತೀರ್ಥವೆ ದಿವ್ಯ ಕೃಪಾರೂಪವೆ|| —-ಜಿ.ಎಸ್. ಶಿವರುದ್ರಪ್ಪ

ರಾಮಕೃಷ್ಣ ತಪೋಸೂರ್ಯ Read More »

ಮಾಡಬಾರದ ಮಾಡಿ

ಮಾಡಬಾರದ ಮಾಡಿ, ಆಗಬಾರದು ಆಗಿ ಬಾಳೆಲ್ಲ ಬರಿದಾಗಿ, ಗೋಳೊಂದೆ ಉಳಿದಾಗ ಅಂತರಾಳದಿ ಬೆಳಗಿ, ಸಂತಸವ ಕರುಣಿಸಿಹೆ “ಏಳು ಮಗು, ನಾನಿಹೆನು!” ಎನ್ನುತ್ತ ಕರೆದೆ|| ಅವರಿವರ ಉಪದೇಶ ಬರಿಯ ಬಾಯ್ಮಾತಾಗಿ ರವಿರಹಿತ ಕತ್ತಲೆಯೆ ಎತ್ತೆತ್ತ ಕವಿದಾಗ ಕರುಣಿಸಿಹೆ ಓ ತಾಯಿ, ತವ ಚರಣದಾಶ್ರಯವ “ಬಾ ಕಂದ, ಇಹೆ ನಾನು, ಕುಂದದಿರು” ಎಂದು|| ಜಗವೆಲ್ಲ ಕೈಬಿಟ್ಟು ಮತಿಗೆಟ್ಟು, ಗತಿಗೆಟ್ಟು, ಆವುದನು ಗೈಯಲೂ ತ್ರಾಣವಿಲ್ಲದ ಎನಗೆ “ನಾನೆ ಸಾಧನೆ ಸಿದ್ಧಿ ಗತಿ ಆಸರೆಯು ನಿನಗೆ” ಎನ್ನುತ್ತ ವರವಿತ್ತ ಗುರು-ದೈವ-ಜನನಿ|| —ಸ್ವಾಮಿ ಶಾಸ್ತ್ರಾನಂದ

ಮಾಡಬಾರದ ಮಾಡಿ Read More »

ಬಂದಿಹೆ ಜನನಿ ಮರಳಿ ನೀನು

ಬಂದಿಹೆ ಜನನಿ ಮರಳಿ ನೀನು ಧರೆಯ ಪಾಪದ ಭಾರವ ಕಳೆಯೆ| ದಗ್ಧ ಹೃದಯದ ಜ್ವಾಲೆಯನಾರಿಸೆ ದುಃಖಿತರೆಲ್ಲರ ಕಣ್ಣೀರೊರಸೆ|| ಯುಗಯುಗದಲೂ ನೀ ಬರುವೆ ಧರೆಗೆ ಯಾತನೆಗಳನು ಎನಿತೋ ಸಹಿಪೆ| ಕಲ್ಲಾಗಿಹುದು ಹೃದಯವೆಮ್ಮದು ಮರಳಿ ಮರಳಿ ಮರೆವೆವು ಧರ್ಮವ|| ಸಹನ-ಮೂರುತಿ ಸೀತೆಯ ರೂಪದಿ ಬೋಧಿಸಿ ಅರುಹಿದೆ ಅಚಲ ಭಕ್ತಿಯ| ರಾಧೆಯ ರೂಪದಿ ದರುಶನವಿತ್ತು ಪ್ರೇಮದ ಮಹಿಮೆಯ ಪ್ರಚಾರಗೈದೆ|| ರಾಮಕೃಷ್ಣಲೀಲೆ ಪೂರಣಗೈಯಲು ಎಲ್ಲರ ತಾಯಿಯು ಆಗಿ ನೀ ಬಂದಿಹೆ| ಪಾಪಿ ತಾಪಿಗಳ ಅಪಾರ ಶರಣು ಸರ್ವರ ಆಶ್ರಯ, ಅರ್ಹರೇ ಎಲ್ಲ! ||

ಬಂದಿಹೆ ಜನನಿ ಮರಳಿ ನೀನು Read More »

ದೊರಕಿತು ಧರಣಿಗೆ

ದೊರಕಿತು ಧರಣಿಗೆ ಸಿರಿವರ ಇಂದು ಕರುಣೆಯ ಮೂರುತಿ ಶಾರದೆ ಬಂದು| ಪರಮ ಗುರುವಿನ ಶಕ್ತಿಯ ಸಿಂಧು ಪೊರೆವಳು ಸರ್ವರ ಹೃದಯದಿ ನಿಂದು|| ಕಲಿಯುಗದಾರ್ತರ ನೋಡುತ ನೊಂದು ಒಲುಮೆಯ ಸುರನದಿ ತನ್ನಲಿ ಮಿಂದು| ಕಲುಷವ ಕಳೆಯುತ ಬೆಳಗಲಿ ಎಂದು ಸುಲಭದ ಸಾಧನೆ ಸಾರವ ತಂದು|| ನಿರ್ಮಲ ಮೂರುತಿ ನಿಷ್ಕಲ ಇಂದು ಕರುಣಿಸು ಒಂದೇ ಪ್ರೇಮದ ಬಿಂದು| ಪರಹಿತ ಜೀವಿತೆ ಸರ್ವರ ಬಂಧು ಮೊರೆಯುವೆ ನಿನ್ನಲಿ ಕೃಪೆ ತೋರೆಂದು||                                                —-ಸ್ವಾಮಿ ಶಾಸ್ತ್ರಾನಂದ

ದೊರಕಿತು ಧರಣಿಗೆ Read More »