ಹೇ ಪ್ರೇಮರೂಪ ಶ್ರೀರಾಮಕೃಷ್ಣ
ಹೇ ಪ್ರೇಮರೂಪ ಶ್ರೀರಾಮಕೃಷ್ಣ ಕರುಣಾಮಯ ಪಾಲಯ ಮಾಂ| ಹೇ ದೀನಬಂಧು ಶ್ರೀ ಶಾರದೇಶ ಮಮ ಪ್ರಾಣಪ್ರಿಯ ಪಾಹಿ ಮಾಂ||
ಹೇ ಪ್ರೇಮರೂಪ ಶ್ರೀರಾಮಕೃಷ್ಣ Read More »
ಹೇ ಪ್ರೇಮರೂಪ ಶ್ರೀರಾಮಕೃಷ್ಣ ಕರುಣಾಮಯ ಪಾಲಯ ಮಾಂ| ಹೇ ದೀನಬಂಧು ಶ್ರೀ ಶಾರದೇಶ ಮಮ ಪ್ರಾಣಪ್ರಿಯ ಪಾಹಿ ಮಾಂ||
ಹೇ ಪ್ರೇಮರೂಪ ಶ್ರೀರಾಮಕೃಷ್ಣ Read More »
ಸಿರಿ ರಾಮಕೃಷ್ಣ ಚರಣತಲದಿ ಶರಣೆನು ಮನವೇ|| ಸಕಲ ತೀರ್ಥ ಸಕಲ ಶಾಸ್ತ್ರ ಸಾರ ನೀನಹೆ| ನಿಖಿಲ ಭಕುತ ಹೃದಯಕಮಲ ತರಣಿ ನೀನಹೆ|ಎನುತ|| ಪ್ರೇಮ ಭಕುತಿ ಕಲಿಯುಗದಲಿ ತಾರಕ ಶಕುತಿ| ಪ್ರೇಮರೂಪ ಪ್ರೇಮಾನಂದ ಮಂಗಲ ಮೂರುತಿ|ಎನುತ|| ದಕ್ಷಿಣೇಶ್ವರ ಲೀಲಾಕ್ಷೇತ್ರ ಪರಮಪವಿತ್ರ|ಮು- ಮುಕ್ಷ ಜನರ ಮುದದಿ ಕರೆದೆ ನೀನೆ ಸುಮಿತ್ರ|ಎನುತ||
ಸಿರಿ ರಾಮಕೃಷ್ಣ ಚರಣತಲದಿ Read More »
ಶ್ರೀ ರಾಮಕೃಷ್ಣಪ್ರಭೋ ದೇವ||ಪ|| ಆರತಿಯೆತ್ತುವೆ ಹರಿಹರಬ್ರಹ್ಮನೆ||ಅ. ಪ|| ಭವಬಂಧನವನು ಖಂಡಿಸುವವನೆ ನವನವ ರೂಪಧರ|| ಭಕುತರ ಪ್ರೇಮಕೆ ಮಣಿದರು ನಲಿದರು ನಿಷ್ಕಲ ನಿರುಪಮನೆ|| ಸಂಪದ ರಾಜಪದ ಇಂದ್ರಪದ ಈಯದೆ ಶ್ರೀಪದ ಕೊಡು ಹರಿಯೇ|| ಹೃದಯಕಮಲದಲಿ ಸತತವು ನೆಲಸುತ ಮೋದವ ಸುರಿಸು ಗುರೋ|| —-ಸ್ವಾಮಿ ಹರ್ಷಾನಂದ
ಶ್ರೀ ರಾಮಕೃಷ್ಣಪ್ರಭೋ ದೇವ Read More »
ಶುಭಕರ ಸುಂದರ ನಿನ್ನ ದರುಶನ ಶೋಭಿಸುತಿದೆ ಕರುಣಾರುಣ ವದನ|| ನಾನಾ ಭಾವ ಸುಧಾರ್ಣವ ನೀನು ನಾನಾ ಯೋಗ ಸಮಾಗಮ ನೀನು|| ಕಮಲಾನನ ಕಮಲದಳನಯನ ಕಲಿಮಲಹರಣ ಸಿರಿ ರಾಮಕೃಷ್ಣ ರಸಮಯ ನಿನ್ನ ಸುಮಧುರ ವಚನ ಮನ ತಣಿಸುವ ಮಲಯಾಚಲ ಪವನ ರಾಮಕೃಷ್ಣ ಜಯ ಜಯ ಧ್ವನಿ ತಾನ ಪ್ರೇಮಾನಂದ ಮನೋಹರ ಗಾನ||
ಶುಭಕರ ಸುಂದರ ನಿನ್ನ ದರುಶನ Read More »
ಶರಣಾಗು ಶರಣಾಗು ಶರಣಾಗು ಮನವೇ ಶ್ರೀಗುರುಚರಣ ಸರೋಜಕೆ ಮಣಿದು|| ರಾಮಕೃಷ್ಣ ಗುರುಕೃಪೆ ನಿನಗಾದರೆ ಹರಿವುದು ಭವಭಯ ಚಿಂತಾರುಜಿನ| ಶ್ರೀಗುರುನಾಮದ ನೌಕೆಯು ದೊರೆತರೆ ಭವಸಾಗರ ಯಾನವೆ ಮೋದಕರ|| ಎಲ್ಲ ಧರ್ಮಗಳ ತಿರುಳನು ಸಾರುವ ನೊಂದ ಜೀವರಿಗೆ ಭರವಸೆಯೀಯುವ| ರಾಮಕೃಷ್ಣ ಸಂದೇಶ ಗೀತೆಯ ಸಾಗರದಲೆಗಳು ಹಾಡುತಿವೆ|| ಭವ್ಯ ಹಿಮಾಲಯ ಪರ್ವತರಾಜಿಯು ಮುಳುಗಿರೆ ಧ್ಯಾನ ಸಮಾಧಿಯಲಿ| ರಾಮಕೃಷ್ಣ ಜಯ ರಾಮಕೃಷ್ಣ ಜಯ ಎಂಬೀ ನಿನದವು ಕೇಳುತಿದೆ|| —-ಪ್ರಭುಪ್ರಸಾದ
ಶಕ್ತಿಸಮುದ್ರಸಮುತ್ಥತರಂಗಂ ದರ್ಶಿತಪ್ರೇಮವಿಜೃಂಭಿತರಂಗಂ ಸಂಶಯರಾಕ್ಷಸನಾಶಮಹಾಸ್ತ್ರಂ ಯಾಮಿ ಗುರು ಶರಣಂ ಭವವೈದ್ಯಂ|| ಅದ್ವಯತತ್ತ್ವಸಮಾಹಿತಚಿತ್ತಂ ಪ್ರೋಜ್ಜ್ವಲಭಕ್ತಿಪಟಾವೃತವೃತ್ತಂ| ಕರ್ಮಕಲೇವರಮದ್ಭುತಚೇಷ್ಟಂ ಯಾಮಿ ಗುರುಂ ಶರಣಂ ಭವವೈದ್ಯಂ|| —-ಸ್ವಾಮಿ ವಿವೇಕಾನಂದ
ಶಕ್ತಿಸಮುದ್ರಸಮುತ್ಥತರಂಗಂ Read More »
ವಿಪ್ರವನಿತೆಯಂಕದಲ್ಲಿ ನಲಿವನಾರು ಬೆಳಕ ಚೆಲ್ಲಿ| ಧರಿಸಿ ದಿಶೆಯ ಚೆಲುವ ಕುವರ ಒಲಿದು ಬಂದೆ ಬಡಕುಟೀರ|| ಭೂತಲಕೆ ಇಳಿದು ಬಂದೆ ಯಾರು ನೀನು ಕಣ್ಮಣಿ| ಆರ್ತ ಜನರ ತಾಪ ಕಳೆಯೆ ಸುರಿಸಿ ಕರುಣೆ ಕಂಬನಿ|| ನೊಂದ ಜನಕೆ ನೆರವ ನೀಡೆ ಬಂದೆಯೇನು ಗೋಪ್ಯವಾಗಿ| ಕಂದ ಮೊಗದಿ ಕರುಣೆ ತಳೆದು ಅಳುವೆ ನಗುವೆ ಯಾರಿಗಾಗಿ|| ರೂಪರಾಶಿ ಕಂಡು ನಿನ್ನ ಸೆಳೆಯಲಾರೆ ನೆಟ್ಟ ಕಣ್ಣ| ತಾಪತಿಮಿರನಾಶಿ ನಿನ್ನ ತೋಳಲೆತ್ತಿಕೊಂಬೆ ಚಿನ್ನ||
ವಿಪ್ರವನಿತೆಯಂಕದಲ್ಲಿ Read More »
ರಾಮಕೃಷ್ಣ-ಭಗವಾನ್ ವಿಜಯತೇ ರಾಮಕೃಷ್ಣ-ಭಗವಾನ್|| ಯೋ ಲೋಕಾನುಗ್ರಹಕರಣಾರ್ಥಂ ಜನ್ಮ ಸ್ವೀಕೃತವಾನ್| ವಿಜಯತೇ|| ಯಸ್ಸರ್ವೇಷಾಂ ಯೋಗಪಥಾನಾಮ್ ಐಕ್ಯಂ ದರ್ಶಿತವಾನ್| ವಿಜಯತೇ|| ಯಃ ಸ್ವಕಲತ್ರೇ ಮಾತರಿ ಚ ಶ್ರೀ- ಕಾಲೀಮೀಕ್ಷಿತವಾನ್| ವಿಜಯತೇ|| ಯೋ ವೇದಾರ್ಥಂ ಸರಲೈರ್ವಚನೈಃ ಪಾಮರಸುಗಮಿತವಾನ್| ವಿಜಯತೇ|| ಯಶ್ಚ ವಿವೇಕಾನಂದಮುಖೇನ ಜ್ಞಾನಂ ಕಾರಿತವಾನ್| ವಿಜಯತೇ|| ಯೋಂತರ್ಯಾಮೀ ಸಕಲಜನಾನಾಂ ಹೃದಯೇ ಸಂಸ್ಥಿತವಾನ್| ವಿಜಯತೇ|| —-ಸ್ವಾಮಿ ಹರ್ಷಾನಂದ
ರಾಮಕೃಷ್ಣ ಪದಾಂಬುಜದಿ ನಲಿಯೋ ಎನ್ನ ಮನದ ಭ್ರಮರ| ಮುಳ್ಳಿನಿಂ ಮುಸುಕಿದೆ ವಿಷಯಕೇದಗೆ ನಿಲ್ಲದಿರಲ್ಲಿ ನೀ ಮೈಯನು ಮರೆತು|| ಜನುಮ ಮರಣ ವಿಷಮ ವ್ಯಾಧಿಯ ಎನಿತು ಕಾಲ ಸಹಿಪೆ ಇನ್ನು| ಪ್ರೇಮಸುಧೆಯ ಸವಿ ಶ್ರೀಪದದಿ ಭವದ ಯಾತನೆ ಉಳಿಯದಿನ್ನು|| ಧರ್ಮಾಧರ್ಮ-ಸುಖ-ದುಃಖ-ಶಾಂತಿ-ತಾಪ ದ್ವಂದ್ವದಲ್ಲಿರಲು ಮುಕ್ತಿಯದೆಲ್ಲಿ| ಜ್ಞಾನಖಡ್ಗದಿ ಪರಮ ಯತ್ನದಿ ಕತ್ತರಿಸು ನೀ ಕರ್ಮದ ಪಾಶವ|| ರಾಮಕೃಷ್ಣನಾಮ ನಾಲಿಗೆ ನುಡಿಯಲಿ ಮೋಹದ ಕತ್ತಲು ಕಳೆವುದಾಗ| ದುಃಸ್ವಪ್ನ ಜ್ವಾಲೆ ಆರುವುದಾಗ ಮತ್ತಿನ ನಿದ್ರೆಯು ಉಳಿಯದಿನ್ನು||
ರಾಮಕೃಷ್ಣ ಪದಾಂಬುಜದಿ Read More »
ರಾಮಕೃಷ್ಣಗುರುವೇ ಪರಮಹಂಸ ಗುರುವೇ| ಕಾಮಿತದಾಯಕ ಪ್ರೇಮದಿ ನಮಿಪೆವು || ಸಕಲ ಮತವ ನೀನೇಕವೆಂದೆಣಿಸಿದೆ ಅಕಲಂಕಮಹಿಮ ಮಮ ದೇವ| ಲೋಕಸೇವೆಯಿಂ ಖ್ಯಾತಿಯ ಹೊಂದಿದೆ ಮುಕ್ಕಣ್ಣನ ಪ್ರಿಯ ನಮಿಪೆವು ದೇವ|| ಸ್ವಾಮಿ ವಿವೇಕಾನಂದನ ಗುರುವೇ ಪ್ರೇಮದಿ ಸಲಹೈ ಸಕಲ ಲೋಕವ| ತಾಮಸ ಮಾಡದೆ ಕಾವುದು ಎಮ್ಮನು ಚಾಮುಂಡಾಂಬೆಯ ವರಭಕ್ತನೆ|| —-ಮೈಸೂರು ದೇವೇಂದ್ರಪ್ಪ
ಯಾರ ಪ್ರೇಮದ ಪರಮಪೂರವು ನೀಚರೆದೆಗೂ ಹರಿಯಿತೋ, ಯಾವ ಲೋಕಾತೀತಮಹಿಮನ ಕರಣೆ ಲೋಕಕೆ ದುಡಿಯಿತೋ, ಯಾವನಪ್ರತಿ-ಮಹಿಮನೋ ಮೇಣ್ ಮಾತೆ ಸೀತೆಯ ನಾಥನೋ, ಯಾರು ಸೀತೆಯ ಭಕುತಿಯಿಂದಲಿ ಜ್ಞಾನದೇಹದಿ ವ್ಯಾಪ್ತನೋ ಯಾರು ಮಧುತರ ಶಾಂತಗೀತೆಯ ಯುದ್ಧರಂಗದಿ ಮೊಳಗುತ ಪ್ರಳಯಶಬ್ದವ ಸ್ತಬ್ಧಗೊಳಿಸುತ ಸಿಂಹನಾದವ ಸಿಡಿಸುತ ಮೋಹತಿಮಿರವನಿಲ್ಲಗೈಯುತ ಕೃಷ್ಣರೂಪದಿ ನಿಂದನೋ ಅವನೆ ಇಂದಿಗೆ ರಾಮಕೃಷ್ಣನ ಹೆಸರೊಳೆಸೆಯುತಲಿರುವನು! —-ಮುರಳೀಧರ
ಯಾರ ಪ್ರೇಮದ ಪರಮಪೂರವು Read More »
ಮಣಿವೆ ನಿನ್ನ ಕಮಲದಡಿಗೆ ದಯದಿ ಬಾರೊ ಎದೆಯ ಗುಡಿಗೆ|| ಭಕ್ತಹೃದಯಜಲಜ ಬಂಧು ನೀನಪಾರ ಕರುಣೆ ಸಿಂಧು| ಪ್ರೇಮಭಕ್ತಿಯೊಡನೆ ಕೂಡಿ ಬಾರೈ ತಂದೆ ಕರೆವೆ ಬೇಡಿ|| ತ್ಯಾಗಮೂರ್ತಿ ತಪೋಮೂರ್ತಿ ಜ್ಞಾನಮೂರ್ತಿ ಸೊಗದ ಮೂರ್ತಿ| ಹರಿದಿದೆಲ್ಲೆಡೆ ನಿನ್ನ ಕೀರ್ತಿ ತ್ಯಾಗಪಥದ ನಿತ್ಯಸ್ಪೂರ್ತಿ|| ವಿಶ್ವದೊಡೆಯ ಶುದ್ಧಹೃದಯ ಕೋಟಿಸೂರ್ಯ ಜ್ಯೋತಿರೂಪ| ನಿನ್ನೀ ಕಂದನ ಕರೆಯನಾಲಿಸಿ ಬಾರೋ ಬೇಗ ಶಕ್ತಿವೆರಸಿ|| —ಸ್ವಾಮಿ ತದ್ರೂಪಾನಂದ
ಮಣಿವೆ ನಿನ್ನ ಕಮಲದಡಿಗೆ Read More »
ಭರತಖಂಡದ ನೀಲಗಗನವ ತಿಮಿರ ಮುಸುಗಿರಲು, ಭಾರತೀಯರು ತಮ್ಮ ಧ್ಯೇಯವ ಮರೆತು ಮಲಗಿರಲು, ಪರಮಹಂಸನೆ, ಉದಯಸೂರ್ಯನ ತೆರದಿ ರಂಜಿಸಿದೆ. ಹೃದಯ ನಭದ ಜ್ಞಾನತಿಮಿರವನಿರದೆ ಭಂಜಿಸಿದೆ. ಸರ್ವಮಾರ್ಗಗಳೊಂದೆ ನಿಲಯಕೆ ಪೋಪುವೆಂಬುದನು ಯೋಗವಿದ್ಯೆಯೊಳರಿತು ಮಾನವಕುಲಕೆ ಬೋಧಿಸಿದೆ; ಕ್ರೈಸ್ತ ಹಿಂದೂ ಮಹಮದೀಯರೆ ಬೌದ್ಧಮೊದಲಾದ ಮತಗಳಾತ್ಮವದೊಂದೆ ಎಂಬುದ ತಿಳುಹಿ ಪಾಲುಸಿದೆ. ಕ್ರಿಸ್ತ ಮಹಮದ ರಾಮ ಕೃಷ್ಣ ಜೊರಾಸ್ತ ಗೌತಮರು ದಿವ್ಯ ವೇದ ಕೊರಾನು ಬೈಬಲು ತಲ್ಮಡಾದಿಗಳು ಗುಡಿಯು ಚರ್ಚು ಮಸೀದಿ ಆಶ್ರಮ ಅಗ್ನಿಪೂಜೆಗಳು ಕಾಶಿ ಮಕ್ಕಗಳೆಲ್ಲ ನಿನ್ನೊಳಗೈಕ್ಯ ‘ವಾಗಿಹವು’! ದಕ್ಷೀಣೇಶ್ವರ ದೇವನಿಲಯದ ಪರಮಯೋಗೀಂದ್ರ ಶ್ರೀ
ಪರಮ ಸತ್ಯನೆ ಪುರುಷ ಗುಣಮಣಿ ಕಲಿಯ ಕಳೆಯುವ ಚರಣ ನಿನ್ನಯ ನಿರುತ ಭಜಿಸದ ಕೃಪಣ ಎನಗೂ ದೀನಬಂಧುವೆ ನೀನೆ ಶರಣು|| ಭಕುತಿ ಭಜನೆ ತಪಗಳಿಂದಲೆ ಮುಕುತಿ ಗಳಿಸುವೆ ಎಂದು ಅರಿತಿಹೆ| ಯುಕುತಿ ನುಡಿದರು ನಂಬಿ ನಡೆಯದ ಶಕುತಿಹೀನಗೆ ನೀನೆ ಶರಣು|| ರಾಮಕೃಷ್ಣ! ನಿನ್ನ ಚರಣ ರಾಗತೃಷ್ಣಾ-ಶಮನಕರಣ| ಸತ್ಯಪಥನೇ ಮೃತ್ಯುಹರನೇ ದೀನಬಂಧುವೆ ನೀನೆ ಶರಣು|| ನಿನ್ನ ಪಾವನನಾಮ ಶುಭಕರ ದುರಿತವಾದಕ ಸುಕೃತಿಕಾರಕ| ಸ್ಥಾನವಿಲ್ಲದ ದೀನ ಎನಗೆ ಮಾನವಾಶ್ರಯ ನೀನೆ ಶರಣು|| (ಶ್ರೀರಾಮಕೃಷ್ಣ ಸ್ತೋತ್ರದ ಭಾವಾನುವಾದ) —ಸ್ವಾಮಿ ಶಾಸ್ತ್ರಾನಂದ
ಪರಮ ಸತ್ಯನೆ ಪುರುಷ ಗುಣಮಣಿ Read More »
ನೋಡಿರಣ್ಣ ನೀವೆಲ್ಲ ಬಂದು ಈ ನೂತನ ಮಾನವನ| ತ್ಯಾಗ-ವಿವೇಕದ ಚೀಲಗಳೆರಡನು ಹೆಗಲಲಿ ಹೊತ್ತಿಹನ|| ಗಂಗೆಯ ದಡದಲಿ ಹೊರಳುತ ‘ತಾಯೀ’ ಎನ್ನುತ ಕೂಗುವನು| ‘ಕಾಣದೆ ನಿನ್ನನು ದಿನಗಳುರುಳುತಿವೆ’ ಎನ್ನುತ ಮರುಗುವನು|| ನಂಬದ ನೆಚ್ಚದ ಮಂದಮತಿಗಳಿಗೆ ಸರಳಕಥೆಯ ಹೇಳಿ| ಕಾಳಿಯು ಕೃಷ್ಣನು ಒಂದೇ ಎನ್ನುತ ಸಾರುತಿಹನು ಕೇಳಿ|| ಅಕ್ವಾ-ವಾಟರ್-ಪಾನಿ-ವಾರಿಗಳು ನೀರಿಗೊಂದೆ ಹೆಸರು| ಅಲ್ಲಾ-ಜೀಸಸ್-ಮೋಸೆಸ್-ಕಾಳಿಯರು ಪರಬ್ರಹ್ನನುಸಿರು|| ಪಂಡಿತ-ಪಾಮರ-ಬಡವನು-ಬಲ್ಲಿದ ಭೇದ ತೋರಲಿಲ್ಲ| ಜಾತಿಮತಗಳಾ ರೀತಿನೀತಿಗಳ ಮನಕೆ ತಾರಲಿಲ್ಲ|| ದಿವ್ಯೋನ್ಮಾದದಿ ಬಾಹುಗಳೆರಡನು ಬೀಸಿ ಕರೆಯುತಿಹನು| ತಾಮಸಗೈಯದೆ ಎಲ್ಲರು ಬೇಗನೆ ಬನ್ನಿರೆನ್ನುತಿಹನು|| ಜಗದ ಜನಗಳಿಗೆ ಕೃಪೆಯನು
ನೋಡಿರಣ್ಣ ನೀವೆಲ್ಲ ಬಂದು Read More »
ನೀನೆನ್ನ ಪ್ರಾಣ ಹೇ ರಾಮಕೃಷ್ಣ|| ನೀನೆನ್ನ ಜೀವನ ಸರಿಗಮ ತಾನ ಮನಮಂದಿರದಲಿ ಮಾಡುವೆ ಗಾನ| ನಿನ್ನಯ ಧ್ಯಾನ ಸುಧಾರಸ ಪಾನ ತನುಮನವೆಲ್ಲ ತವ ಚರಣಾರ್ಪಣ||
ನೀನಲ್ಲದಿನ್ನಾರು ಚಿರಬಂಧು ಎನಗೆ ನಿನ್ನನ್ನೆ ಕರೆಯುತಿಹೆ ಹೃದಯದೇಗುಲಕೆ|| ಕಾತರದ ಅಳಲಿನಲಿ ಪರಿಪೂತ ಹೃದಯವದು ಕ್ಷೇತ್ರವೆನೆ ಆಗಿಹುದು ದಕ್ಷಿಣೇಶ್ವರವು| ಜನ್ಮಜನ್ಮಾಂತರದ ಸಂಸ್ಕಾರತರುರಾಜಿ ಪಂಚವಟಿಯಂದದಲಿ ಮಿಗೆ ಒಪ್ಪುತಿಹುದು|| ಹಗಲಿರುಳು ಎನ್ನೆದೆಯ ಹಂಬಲಿನ ಹೊನಲದುವೆ ಜಗವ ಪಾವನಗೈವ ಗಂಗೆಯಾಗಿಹುದು| ಜೀವಿಗಳ ಎದೆಯಲ್ಲಿ ಅನವರತ ನೆಲೆಸಿರುವ ದೇವತೆಯೆ ಇಲ್ಲೀಗ ಮಾತೆ ಭವತಾರಿಣೀ|| ಹೇ ದಿವ್ಯ ಅರ್ಚಕನೆ ಪಂಚವಟಿಪ್ರಿಯನೆ ಭವತಾರಿಣೀತನಯ ಸುರನದಿಯ ಭಕ್ತ| ಬಂದಿಲ್ಲಿ ಎಚ್ಚರಿಸು ಪ್ರೇಮಮಯಿ ಜನನಿಯನು ಬಂಧನವು ಹರಿಯುವುದು ಮಾತೆಯೊಲುಮೆಯಲಿ|| —–ಸ್ವಾಮಿ ತದ್ರೂಪಾನಂದ
ಜಯತು ಜಯತು ರಾಮಕೃಷ್ಣ ಜಯತು ಭುವನಮಂಗಲ ಜಯತು ತಾಯಿ ಮಹಾಮಾಯಿ ಶಾರದೇ ಸುನಿರ್ಮಲ| ಜಯತು ಶ್ರೀವಿವೇಕಾನಂದ ತಮವ ಕಳೆವ ಭಾಸ್ಕರ ಶ್ರೀಗುರುವಿನ ಆತ್ಮಪುತ್ರ ಬ್ರಹ್ಮಾನಂದ ಸಾಗರ|| ಜಯತು ಜಯತು ಪ್ರೇಮಾನಂದ- ಪ್ರೇಮಾಮೃತ ಸಿಂಚನ ತ್ಯಾಗವ್ರತನೆ ಶಿವಾನಂದ ಗುರುಶಕ್ತಿಯ ದರ್ಶನ| ಕಾಮನೆಗಳ ಗೆದ್ದ ಯೋಗಿ ಜಯತು ಯೋಗಾನಂದನೆ ಧೀರ-ವೀರ ನಿರಂಜನನೆ ನಿನ್ನ ಪದಕೆ ವಂದನೆ|| ಗುರುಸೇವೆಯ ಮೂರ್ತರೂಪ ರಾಮಕೃಷ್ಣಾನಂದನೆ ಅಕ್ಷರದಲಿ ನೆಲೆನಿಂದಿಹ ಅದ್ಭುತ ಆನಂದನೆ| ತಾಪಸಿ ನೀ ಅಭೇದಾನಂದ ಜ್ಞಾನಮೂರ್ತಿ ಜಯ ಜಯ ದೇಹಭಾವವಳಿದ ಯತಿ ತುರೀಯಾನಂದ ನಿರ್ಭಯ||
ಜಯತು ಜಯತು ರಾಮಕೃಷ್ಣ Read More »
ಕಮಲವದನ ಕಲುಷಹರಣ ನಿನಗೆ ನಮನ ರಾಮಕೃಷ್ಣ|| ಧರಮಸ್ಥಾಪನ ನಿನ್ನಾಗಮನ ಪರಮಪಾವನ ನಿನ್ನ ಭಜನ| ಕೊಡುವೆ ನಿನಗೆ ಹೃದಯದಾಸನ ಕಳೆಯೋ ಎನ್ನ ಜನುಮಮರಣ|| ಜಗದ ಜೀವನ ಪುಣ್ಯಕಥನ ವಿಜಿತಮದನ ಕರಮ ದಹನ| ರಚಿಸಿ ನೀನು ವಿಶ್ವಕವನ ನೀಡುತಿರುವೆ ತವ ದರುಶನ|| ವಿಶ್ವಮೋಚನ ತವಗುಣಗಾನ ಚಿತ್ತಶೋಧನ ನಿನ್ನನುಧ್ಯಾನ| ನನ್ನದೆನುವ ತನುಮನಧನ ನಿನಗೆ ಅರ್ಪಣ ಹೇ ಮಮ ಜೀವನ|| —ಸ್ವಾಮಿ ತದ್ರೂಪಾನಂದ