Rama

ರಾಮ ಘನಶ್ಯಾಮಂ

ರಾಮಂ ಘನಶ್ಯಾಮಂ ಗುಣಧಾಮಂ ರಮ್ಯನಾಮಂ| ಕ್ಷೇಮಂ ಮುಖಸೋಮಂ ರಿಪುಭೀಮಂ ಚಿತ್ತಕಾಮಂ ಭಜೇ|| ವೀರಂ ಮೇರುಧೀರಂ ಸುಕುಮಾರಂ ಆತ್ಮಸಾರಂ| ಶೂರಂ ಸರ್ವಾಧಾರಂ ಸದ್ವಿಚಾರಂ ಶುಭಾಕಾರಂ ಭಚೇ|| ಧ್ಯಾನಂ ಚಿತ್ತಲೀನಂ ಸ್ಮೃತಿಮಾನಂ ದಯಾಸ್ಥಾನಂ| ಜ್ಞಾನಂ ಸ್ವಯಂಭಾನಂ ಕಾಮಧೇನುಂ ಶ್ರುತಿಮಾನಂ ಭಜೇ|| ವೇದಂ ವೇದಗೀತಂ ನಿಜಬೋಧಂ ವಿಶ್ವಾತೀತಂ| ಮೋದಂ ದಶನಾದಂ ಕವಿನೋದಂ ಮೃದುಪಾದಂ ಭಜೇ|| ಶ್ರೀಶಂ ಶ್ರೀನಿವಾಸಂ ಮಂದಹಾಸಂ ಚಿದ್ವಿಲಾಸಂ| ಭಾಸಂ ಚಿತ್ತಹಾಸಂ ಅಚ್ಯುತೇಶಂ ಭವನಾಶಂ ಭಜೇ||

ರಾಮ ಘನಶ್ಯಾಮಂ Read More »

ರಾಮ ಮಂತ್ರವ ಜಪಿಸೋ

ರಾಮಮಂತ್ರವ ಜಪಿಸೋ ಹೇ ಮನುಜಾ|| ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ ಸೋಮಶೇಖರ ತನ್ನ ಭಾಮಿನಿಗೊರೆದಿಹ|| ಕುಲಹೀನನಾದರೂ ಕೂಗಿ ಜಪಿಸುವ ಮಂತ್ರ ಸರಿವ ಭೀತಿಯೊಳು ಉಚ್ಚರಿಪ ಮಂತ್ರ| ಹಲವು ಪಾಪಂಗಳ ಹದಗೆಡಿಸುವ ಮಂತ್ರ ಸುಲಭದಿಂದಲಿ ಸ್ವರ್ಗ ಸೂರೆಗೊಳ್ಳುವ ಮಂತ್ರ|| ಸಕಲ ವೇದಗಳಿಗೆ ಸಾರವೆನಿಪ ಮಂತ್ರ ಮುಕುತಿ ಮಾರ್ಗಕೆ ಇದೇ ಮೂಲಮಂತ್ರ| ಭಕುತಿರಸಕೆ ಭವ್ಯ ಮಾರ್ಗ ತೋರುವ ಮಂತ್ರ ಸುಖನಿಧಿ ಪುರಂದರವಿಟ್ಠಲನ ಮಹಾಮಂತ್ರ|| —-ಪುರಂದರದಾಸ

ರಾಮ ಮಂತ್ರವ ಜಪಿಸೋ Read More »

ರಾಮ ಪಾಲಯ

ರಾಮ ಪಾಲಯ| ದಶರಥ| ರಾಮ ಪಾಲಯ|| ರಾಮರೂಪಜಿತಕಾಮ ನಿರಂತರ| ತರುಣಾರುಣಮೃದುಚರಣಾಂಬುಜಯುಗ|| ಅಮಲಕಮಲನಿಜನಾಭಿವಿರಾಜಿತ| ಹರಸುರಸರಸಿಜಭವಗರುಡಾರ್ಚಿತ|| ವಸುಧೇಶ್ವರದಶಶಿರಮದಖಂಡನ ಇಂದುವದನದಶಸ್ಯಂದನನಂದನ|| ಕರುಣಾಕರತರಣಿಜವರದಾಯಕ| ವರನರಸಿಂಹದಾಸಾರ್ಚಿತಪಾದುಕ|| —-ನರಸಿಂಹದಾಸ

ರಾಮ ಪಾಲಯ Read More »

ರಾಮನಾಮ ಜಪನಾ ರೇ

ರಾಮನಾಮ ಜಪನಾ ರೇ ಪ್ರಬಲ ಹೇ ಜಗಬಲ ನಟನಾ ರೇ|| ಮಾತಾಪಿತಾ ಜನ ಬಾಂಧವ ಹಾರೀ| ಝೂಟೇ ಜಗತ ಕಲ್ಪನಾ ರೇ|| ದುನಿಯಾ ಮೇ ತೂ ಅಕೇಲಾ ಹೈ ಚಾರ್ ದಿನೋಕಾ ಮೇಲಾ ಹೈ ದುನಿಯಾ ಹೈ ಏಕ ಆನೀ ಜಾನೀ|| ಅಬತೋ ಧ್ಯಾನ ಲಗಾಲೇನಾ ನೈಯ್ಯಾ ಪಾರ ಲಗಾಲೆನಾ ಛಂದಕೇ ಬಿನತಿ ಪ್ರಭುನೇ ಮಾನಿ|| —-ಮುನ್ ಶೀದೀ

ರಾಮನಾಮ ಜಪನಾ ರೇ Read More »

ರಾಮ ಎಂಬುವ ಎರಡು

ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು ಪಾಮರರು ತಾವೇನು ಬಲ್ಲರಯ್ಯ|| ‘ರಾ’ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದ ಆಯಸ್ಥಿಗತವಾದ ಅತಿ ಪಾಪವನ್ನು| ಮಾಯವನು ಮಾಡಿ ಮಹರಾಯ ಮುಕ್ತಿಯ ಕೊಡುವ ದಾಯವನು ವಾಲ್ಮೀಕಿ ಮುನಿರಾಯ ಬಲ್ಲ|| ಮತ್ತೆ ‘ಮ’ ಎಂದೆನಲು ಹೊರಬಿದ್ದ ಪಾಪಗಳು ಒತ್ತಿ ಒಳಪೊಗದಂತೆ ಕವಾಟವಾಗಿ| ಚಿತ್ತ ಕಾಯಗಳ ಪವಿತ್ರ ಮಾಡುವ ಪರಿಯ ಭಕ್ತವರ ಹನುಮಂತನೊಬ್ಬ ತಾ ಬಲ್ಲ|| ಧರೆಯೊಳೀ ನಾಮಕ್ಕೆ ಸರಿಮಿಗಿಲು ಇಲ್ಲೆಂದು ಪರಮ ವೇದಗಳೆಲ್ಲ ಪೊಗಳುತಿಹವು| ಸಿರಿಯರಸ ಪುರಂದರ ವಿಟ್ಠಲನ ನಾಮವನು ಸಿರಿಕಾಶಿಯೊಳಗಿಪ್ಪ ಶಿವನು

ರಾಮ ಎಂಬುವ ಎರಡು Read More »

ರಾಘವಂ ಕರುಣಾಕರಂ

ರಾಘವಂ ಕರುಣಾಕರಂ ಭವನಾಶನಂ ದುರಿತಾಪಹಂ| ಮಾಧವಂ ಖಗಗಾಮಿನಂ ಜಲರೂಪಿಣಂ ಪರಮೇಶ್ವರಂ|| ಪಾಲಕಂ ಜನತಾರಕಂ ಭವಹಾರಕಂ ರಿಪುಮಾರಕಂ| ತ್ವಾಂ ಭಜೇ ಜಗದೀಶ್ವರಂ ನರರೂಪಿಣಂ ರಘುನಂದನಂ|| ಚಿದ್ಘನಂ ಚಿರಜೀವಿನಂ ಮಣಿಮಾಲಿನಂ ವರದೋನ್ಮುಖಂ| ಶ್ರೀಧರಂ ಧೃತಿದಾಯಕಂ ಬಲವರ್ಧನಂ ಗತಿದಾಯಕಂ| ಶಾಂತಿದಂ ಜನತಾರಕಂ ಶರಧಾರಿಣಂ ಗಜಗಾಮಿನಂ ತ್ವಾಂ ಭಜೇ ಜಗದೀಶ್ವರಂ ನರರೂಪಿಣಂ ರಘುನಂದನಂ|| —-ಆನಂದರಾಮಾಯಣಮ್

ರಾಘವಂ ಕರುಣಾಕರಂ Read More »

ರಾಘವ ನೀ ಬಾ

ರಾಘವ ನೀ ಬಾ ರಘುಕುಲನಂದನ ಅಘಮರ್ಷಣನೇ ನೀ ಬಾರೋ| ದಶಮುಖರಾವಣನ ಲಂಕೆಲಿ ಮಡುಹಿದ ಕೌಸಲ್ಯಾತನಯನೇ ನೀ ಬಾರೋ|| ಧನುರ್ಬಾಣವ ಕರದಲಿ ಧರಿಸಿದ ದನುಜಕುಲಾಂತಕ ನೀ ಬಾರೋ| ಇನವಂಶವನು ಪಾವನಗೈದ ಮನುಜಶ್ರೇಷ್ಠನೇ ನೀ ಬಾರೋ|| ಅಹಲ್ಯೋದ್ಧಾರಕ ತಾಟಕಿಘಾತಕ ಅಹರಹ ಭಜಿಸುವೆ ನೀ ಬಾರೋ| ಇಹದಲಿ ಪರದಲಿ ಗತಿ ನೀನೆನ್ನುತ ತಹತಹ ಪಡುತಿಹೆ ನೀ ಬಾರೋ|| ಪಿತೃಭಕ್ತನೇ ಸತ್ಯಶೀಲನೇ ಸತತವು ನಿನ್ನನೇ ಸ್ತುತಿಸುವೆ ಬಾರೋ| ನತಜನರನು ಪರಿಪಾಲಿಸುವವನೇ ಸೀತಾರಮಣಾ ನೀ ಬಾರೋ|| —-ಸ್ವಾಮಿ ಹರ್ಷಾನಂದ

ರಾಘವ ನೀ ಬಾ Read More »

ಯಾವ ಫಲ ಬೇಕು ಎನಗೆ

ಯಾವ ಫಲ ಬೇಕು ಎನಗೆ ಜನ್ಮ ಸಫಲವ ಗೈವ ಫಲವಿರಲು ಸುಮ್ಮಗೆ|| ಮೋಕ್ಷಫಲಗಳ ಬಿಡುವ ಶ್ರೀರಾಮತರುವಿಹುದು ನನ್ನ ಎದೆಯೊಳಗೆ|| ಶ್ರೀರಾಮಕಲ್ಪತರು- ಮೂಲದಲಿ ನಾ ಕುಳಿತು ಬೇಕಾದ ಪಲಗಳನು ಪಡೆಯುತಿರುವೆ|| ಪ್ರತಿಫಲವ ನಾ ಬಯಸೆ ಜಗದ ಕಹಿ ಫಲಗಳನು ನಿಮ್ಮೊಂದಿಗೇ ಬಿಟ್ಟು ಮುನ್ನಡೆಯುವೆ|| —-ವಚನವೇದ

ಯಾವ ಫಲ ಬೇಕು ಎನಗೆ Read More »

ಭಜ ರೇ ರಘುವೀರಂ

ಭಜ ರೇ ರಘುವೀರಂ ಮಾನಸ, ಭಜ ರೇ ಬಹುಧೀರಮ್|| ಅಂಬುದಡಿಂಭವಿಡಂಬನಗಾತ್ರಮ್ ಅಂಬುದವಾಹನ ನಂದನದಾತ್ರಮ್|| ಕುಶಕಸುತಾರ್ಪಿತಕಾರ್ಮುಕವೇದಮ್ ವಶಿಹೃದಯಾಂಬುಜಭಾಸ್ಕರಪಾದಮ್|| ಕುಂಡಲಮಂಡನಮಂಡಿತಕರ್ಣಮ್ ಕುಂಡಲಿಮಂಚಕಮದ್ಭುತವರ್ಣಮ್|| ದಂಡಿತಸುಂದಸುತಾದಿಕವೀರಮ್ ಮಂಡಿತಮನುಕುಲಮಾಶ್ರಯ ಶೌರಿಮ್|| ಪರಮಹಂಸಮಖಿಲಾಗಮವೇದ್ಯಮ್ ಪರಮವೇದಮಕುಟೀಪ್ರತಿಪಾದ್ಯಮ್|| —-ಸದಾಶಿವ ಬ್ರಹ್ಮೇಂದ್ರ

ಭಜ ರೇ ರಘುವೀರಂ Read More »

ಪಿಬ ರೇ ರಾಮರಸಂ

ಪಿಬ ರೇ ರಾಮರಸಂ ರಸನೇ| ಪಿಬ ರೇ ರಾಮರಸಂ|| ದೂರೀಕೃತ ಪಾತಕ ಸಂಸರ್ಗಂ| ಪೂರಿತ ನಾನಾ ವಿಧ ಫಲವರ್ಗಂ|| ಜನನ ಮರಣ ಭಯ ಶೋಕವಿದೂರಂ| ಸಕಲಶಾಸ್ತ್ರ ನಿಗಮಾಗಮ ಸಾರಂ|| ಪರಿಪಾಲಿತ ಸರಸಿಜ ಗರ್ಭಾಂಡಂ| ಪರಮ ಪವಿತ್ರೀಕೃತ ಪಾಷಂಡಂ|| ಶುದ್ಧ ಪರಮಹಂಸಾಶ್ರಮ ಗೀತಂ| ಶುಕ ಶೌನಕ ಕೌಶಿಕ ಮುಖ ಪೀತಂ||                                      —-ಸದಾಶಿವ ಬ್ರಹ್ಮೇಂದ್ರ

ಪಿಬ ರೇ ರಾಮರಸಂ Read More »

ನುಡಿ ಎಲೆ ಮನವೇ

ನುಡಿ ಎಲೆ ಮನವೇ, ನಿಜವನರಿತು ನುಡಿ|| ಧನದಿಂ ಸುಖವೋ ಧಾನ್ಯದಿ ಸುಖವೋ ಜಾನಕೀನಾಥನ ನಾಮದಿ ಸುಖವೋ|| ಷಡ್ರಸಭೋಜನ ಸುರುಚಿಯು ಸುಖವೋ ಷಡ್ರಿಪುನಾಶದ ಶಾಂತಿಯು ಸುಖವೋ|| ಭ್ರಮೆಯಿಂ ವಿಷಯದಿ ಮಜ್ಜನ ಸುಖವೋ ರಾಮತೀರ್ಥದಲಿ ಸ್ನಾನವು ಸುಖವೋ|| ಮಮತಾಬಂಧಿತ ನರಸ್ತುತಿ ಸುಖವೋ ಸುಮತಿ ಭಕುತನ ಶಿವನುತಿ ಸುಖವೋ||                                         —-ಸ್ವಾಮಿ ಹರ್ಷಾನಂದ

ನುಡಿ ಎಲೆ ಮನವೇ Read More »

ಜೈ ಜೈ ರಾಮಕೃಷ್ಣ ಹರಿ

ಜೈ ಜೈ ರಾಮಕೃಷ್ಣ ಹರಿ|| ದಶರಥನಂದನ ರಾಮ ನಮೋ| ವಸುದೇವನಂದನ ಕೃಷ್ಣ ನಮೋ|| ಕೌಸಲ್ಯಾತನಯ ರಾಮ ನಮೋ ದೇವಕಿನಂದನ ಕೃಷ್ಣ ನಮೋ|| ಸೀತಾರಮಣ ಶ್ರೀರಾಮ ನಮೋ| ರಾಧಾರಮಣ ಶ್ರೀರಾಮ ನಮೋ|| ರಾವಣಮರ್ದನ ರಾಮ ನಮೋ| ಕಂಸವಿಮರ್ದನ ಕೃಷ್ಣ ನಮೋ||

ಜೈ ಜೈ ರಾಮಕೃಷ್ಣ ಹರಿ Read More »

ಜಯ ಜಾನಕೀಕಾಂತ

ಜಯ ಜಾನಕೀಕಾಂತ ಜಯ ಸಾಧುಜನವಿನುತ| ಜಯತು ಮಹಿಮಾವಂತ ಜಯ ಭಾಗ್ಯವಂತ|| ದಶರಥಾತ್ಮಜ ವೀರ ದಶಕಂಠಸಂಹಾರ ಪಶುಪತೀಶ್ವರಮಿತ್ರ ಪಾವನಚರಿತ್ರ| ಕುಸುಮಬಾಣಸ್ವರೂಪ ಕುಶಲಕೀರ್ತಿಕಲಾಪ ಅಸಮಸಾಹಸಶಿಕ್ಷ ಅಂಬುಜದಳಾಕ್ಷ|| ಸಾಮಗಾನವಿಲೋಲ ಸಾಧುಜನಪರಿಪಾಲ ಕಾಮಿತಾರ್ಥವಿದಾತ ಕೀರ್ತಿಸಂಜಾತ| ಸೋಮಸೂರ್ಯಪ್ರಕಾಶ ಸಕಲ ಲೋಕಾಧಿಶ ಶ್ರೀಮಹಾರಘುವೀರ ಸಿಂಧುಗಂಭೀರ|| ಸಕಲಶಾಸ್ತ್ರವಿಚಾರ ಶರಣಜನಮಂದಾರ ವಿಕಸಿತಾಂಬುಜವದನ ವಿಶ್ವಮಯಸದನ| ಸುಕೃತಮೋಕ್ಷಾಧೀಶ ಸಾಕೇತಪುರವಾಸ ಭಕ್ತವತ್ಸಲರಾಮ ಪುರಂದರವಿಟ್ಠಲ||                                            —ಪುರಂದರದಾಸ

ಜಯ ಜಾನಕೀಕಾಂತ Read More »

ಜಯ ಜಯ ಶ್ರೀರಾಮ

ಜಯ ಜಯ ಶ್ರೀರಾಮ ರಘುವರ, ಶುಭಕರ ಶ್ರೀರಾಮ|| ತ್ರಿಭುವನ-ಜನ-ನಯನಾಭಿರಾಮ|| ತಾರಕನಾಮ ದಶರಥರಾಮ ದನುಜವಿರಾಮ ಪಟ್ಟಾಭಿರಾಮ|| ರಾಮ ರಘುಕುಲ-ಜಲನಿಧಿ-ಸೋಮ ಭೂಮಿಸುತಾಕಾಮ| ಕಾಮಿತದಾಯಕ ಕರುಣಾಧಾಮ ಕೋಮಲ-ನೀಲಸರೋಜ-ಶ್ಯಾಮ||

ಜಯ ಜಯ ಶ್ರೀರಾಮ Read More »

ಖೇಲತಿ ಮಮ ಹೃದಯೇ

ಖೇಲತಿ ಮಮ ಹೃದಯೇ ರಾಮಃ|| ಮೋಹಮಹಾರ್ಣವತಾರಕಕಾರೀ ರಾಗದ್ವೇಷಮುಖಾಸುರಮಾರೀ|| ಶಾಂತಿವಿದೇಹಸುತಾಸಹಚಾರೀ ದಹರಾಯೋಧ್ಯಾನಗರವಿಬಾರೀ|| ಪರಮಹಂಸಸಾಮ್ರಾಜ್ಯೋದ್ಧಾರೀ ಸತ್ಯಜ್ಞಾನಾನಂದಶರೀರೀ||                           —ಸದಾಶಿವ ಬ್ರಹ್ಮೇಂದ್ರ

ಖೇಲತಿ ಮಮ ಹೃದಯೇ Read More »

ಅಲ್ಲಿ ನೋಡಲು ರಾಮ

ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ ಎಲ್ಲೆಲ್ಲಿ ನೋಡಿದರು ಅಲ್ಲಿ ಶ್ರೀರಾಮಚಂದ್ರ|| ರಾವಣನ ಮೂಲಬಲ ಕಂಡು ಕಪಿಸೇನೆ ಆವಾಗಲೇ ಬೆದರಿ ಓಡಿದವು| ಈ ವೇಳೆ ನರನಾಗಿ ಇರಬಾರದೆಂದೆಣಿಸಿ ದೇವ ಶ್ರೀರಾಮಚಂದ್ರ ಜಗವೆಲ್ಲ ತಾನಾದ|| ಇವನಿಗೆ ಅವ ರಾಮ ಅವನಿಗೆ ಇವ ರಾಮ ಅವನಿಯೊಳೀ ಪರಿ ರೂಪವುಂಟೇ| ಲವಮಾತ್ರದಿ ಅಸುರರ್ ದುರುಳತನದಿ ಕೂಡಿ ಅವರವರ್ಹೊಡೆದಾಡಿ ಹತರಾಗಿ ಪೋದರು || ಹನುಮದಾದಿಗಳು ಇವನನಪ್ಪಿಕೊಂಡು ಕುಣಿಕುಣಿದಾಡಿದರು ಹರುಷದಿಂದ | ಕ್ಷಣದಲಿ ಪರಂದರವಿಟ್ಠಲರಾಯನು ಕೊನೆಗೊಬ್ಬನಾಗಿಯೇ ರಣದಲಿ ನಿಂದ||                                             ——ಪುರಂದರದಾಸ

ಅಲ್ಲಿ ನೋಡಲು ರಾಮ Read More »