ಸದಾ ಎನ್ನ ನಾಲಿಗೆಯಲಿ
ಸದಾ ಎನ್ನ ನಾಲಿಗೆಯಲಿ ಬರಲಿ ರಾಮನಾಮ|| ಬರಲಿ ರಾಮನಾಮ ಸದಾ ಬರಲಿ ಕೃಷ್ಣ ನಾಮ| ಸತತ ನಿನ್ನ ಚರಣ ಸೇವೆ ನೀಡು ಎನಗೆ ರಾಮ|| ನಿನ್ನ ನಾಮ ನೆನೆವುದಕೆ ಕರುಣಿಸೆನಗೆ ಸುಮನವ| ನಾ ನಿನ್ನ ನಂಬಿದೆ ಶ್ರೀರಾಮಚಂದ್ರ ದೇವ||
ಸದಾ ಎನ್ನ ನಾಲಿಗೆಯಲಿ Read More »
ಸದಾ ಎನ್ನ ನಾಲಿಗೆಯಲಿ ಬರಲಿ ರಾಮನಾಮ|| ಬರಲಿ ರಾಮನಾಮ ಸದಾ ಬರಲಿ ಕೃಷ್ಣ ನಾಮ| ಸತತ ನಿನ್ನ ಚರಣ ಸೇವೆ ನೀಡು ಎನಗೆ ರಾಮ|| ನಿನ್ನ ನಾಮ ನೆನೆವುದಕೆ ಕರುಣಿಸೆನಗೆ ಸುಮನವ| ನಾ ನಿನ್ನ ನಂಬಿದೆ ಶ್ರೀರಾಮಚಂದ್ರ ದೇವ||
ಸದಾ ಎನ್ನ ನಾಲಿಗೆಯಲಿ Read More »
ಸಕಲ ಭುವನವಿದು ಶ್ಯಾಮಮಯ ಗಿರಿಧರನೆನ್ನಯ ಪ್ರಾಣಪ್ರಿಯ||
ಸಕಲ ಭುವನವಿದು ಶ್ಯಾಮಮಯ Read More »
ಸಕಲಭಯ ತಲ್ಲಣವ ಪರಿಹರಿಪ ಮಹಿಮನನು ಒಮ್ಮೆಯಾದರು ಏಕೆ ಕರೆಯದಿರುವೆ| ಭವಘೋರಭ್ರಮೆಯಲ್ಲಿ ನಿನ್ನ ನೀನೇ ಮರೆತೆ ಏನೀ ವಿಡಂಬನೆಯು ನಿನಗೆ ತರವೇ|| ಜನಧನದ ಸಂಗದಲಿ ಅವನ ಮರೆಯದ ತೆರದಿ ಎಚ್ಚರಿರು ಭ್ರಮೆಯನ್ನು ಅತ್ತ ದೂಡು| ನಿಜವನಾರಾಧಿಸಲು ಸರ್ವಪಾಪವಿಮುಕ್ತ ನನ್ನ ಮಾತಿನ ನಿಜವನಳೆದು ನೋಡು|| ಭವಜಲಧಿಯನು ದಾಟಿ ನಡೆವ ಮನವಿರೆ ನಿನಗೆ ಅಳಿಯಾಸೆಗಳ ತೊರೆದು ಹರಿಯ ನುತಿಸು ದೇಹ ಮನ ಪ್ರಾಣಗಳ ಅವನಿಗರ್ಪಿತ ಮಾಡಿ ಪ್ರೇಮದಾರಾಧನೆಗೆ ಮನವ ಸಲಿಸು|| —-ವಚನವೇದ
ಶ್ರೀಹರಿ ಕಾಯೋ ಕರುಣಾನಿಧೇ|| ಖಗವರಗಮನ ಕರುಣಾನಿಧೇ|| ಜ್ಞಾನ ಧ್ಯಾನದ ನಿಜ ಸಾಧನವರಿಯೆ| ನೀನೆ ಗತಿಯೆನುತ ಮಾಡುವೆ ನಮನ|| ಘೋರ ಸಂಸಾರದಿ ತಾಪದಿ ನೊಂದೆ| ವಾರಿಭವಭಯಹರ ಅಘಕುಲಶಮನ|| ಗುರು ಮಹೀಪತಿ ಪ್ರಭು ಅನಾಥಬಂಧು| ಚರಣಕಮಲಗಳಲಿರಿಸೆನ್ನ ಮನವ|| —-ಮಹೀಪತಿದಾಸ
ಶ್ರೀಹರಿ ಕಾಯೋ ಕರುಣಾನಿಧೇ Read More »
ಶ್ರೀಪತಿಯು ನಮಗೆ ಸಂಪದವೀಯಲಿ ವಾಣೀಪತಿಯು ನಮಗೆ ದೀರ್ಘಾಯು ಕೊಡಲಿ|| ವರವಿಬುಧರನು ಪೊರೆಯೆ ವಿಷವ ಕಂಠದಲಿಟ್ಟ ಹರ ನಿತ್ಯ ನಮಗೆ ರಕ್ಷಣೆ ನೀಡಲಿ| ನರರೊಳುನ್ನತವಾದ ನಿತ್ಯ ಭೋಗಂಗಳನು ಪುರಹೂತ ದಯದಿಂದ ಪೂರ್ಣಮಾಡಿಸಲಿ|| ವಿನುತಸಿದ್ಧಿಪ್ರದನು ವಿಘ್ನೇಶ ದಯದಿಂದ ನೆನೆದ ಕಾರ್ಯಗಳ ನೆರೆವೇರಿಸಲಿ ಹರಸಿ| ದಿನದಿನವು ಧನ್ವಂತ್ರಿಯಾಪತ್ತುಗಳ ಕಳೆದು ಮನಹರುಷವಿತ್ತು ಮನ್ನಿಸಲಿ ಬಿಡದೆ|| ನಿರುತ ಸುಜ್ಞಾನವನು ಬೆಳಗಿ ಕೃಪೆಗೈಯುವ ಗುರುಗಳಾಶೀರ್ವಾದ ನಮಗಾಗಲಿ| ಪುರಂದರವಿಟ್ಠಲನ ಕರುಣದಿಂದಲಿ ಸಕಲ ಸುರರೊಲುಮೆ ನಮಗೆ ಸುಸ್ಥಿರವಾಗಲಿ|| —-ಪುರಂದರದಾಸ
ಶಕ್ತನಾದರೆ ನೆಂಟರೆಲ್ಲ ಹಿತರು| ಅ- ಶಕ್ತನಾದರೆ ಅವರೆ ವೈರಿಗಳು ಲೋಕದಲಿ|| ಕಮಲ ಅರ್ಕನಲಿರುವ ಕಡು ನೆಂಟತನದಿಂದ ವಿಮಲ ಜಲದೊಳಗೆ ಅದು ಆಡುತಿಹುದು| ಕ್ರಮಗೆಟ್ಟು ನೀರಿಂದ ತಡಿಗೆ ಬೀಳಲು ರವಿಯ ಅಮಿತ ಕಿರಣಗಳಿಂದ ಕಂದಿಹೋಗುವುದು|| ವನಸುತ್ತಿ ಸುಡುವಾಗ ವಾಯು ಬೀಸಲು ಉರಿಯು ಘನ ಪ್ರಜ್ವಲಿಸುತಿಹುದು ಗಗನಕಡರಿ| ಮನೆಯೊಳಿಹ ದೀಪಕ್ಕೆ ಮಾರುತನು ಸೋಂಕಿದರು ಘನಶಕ್ತಿಯುಡುಗಿ ತಾ ನಂದಿಹೋಗುವುದು|| ಕರಿಯ ಕಾಯಿದ ಹರಿಯ ಕರುಣತಪ್ಪಿದ ಮೇಲೆ ಮರೆಯ ಹೊಕ್ಕರು ಕಾವ ಮಹಿತರಾರಯ್ಯ| ವರದ ಶ್ರೀ ಪುರಂದರವಿಟ್ಠಲನು ಒಲಿದಿರಲು ಸರುವ ಜನರೆಲ್ಲ ಮೂಜಗದಿ
ವೆಂಕಟಾಚಲನಿಲಯಂ ಸ್ವಾಮಿ ವೈಕುಂಠಪುರವಾಸಮ್ ಪಂಕಜನೇತ್ರಂ ಪರಮಪವಿತ್ರಂ ಶಂಖಚಕ್ರಧರ-ಚಿನ್ಮಯರೂಪಮ್|| ಅಂಬುಜೋದ್ಭವವಿನುತಂ ಸ್ವಾಮಿ ಅಗಣಿತಗುಣನಾಮಮ್ ತುಂಬುರುನಾರದ ಗಾನವಿಲೋಲಮ್ ಅಂಬುಧಿಶಯನಂ ಆತ್ಮಾಭಿರಾಮಮ್|| ಪಾಹಿ ಪಾಂಡವಪಕ್ಷಂ ಸ್ವಾಮಿ ಕೌರವಮದಹರಣಮ್ ಬಹು-ಪರಾಕ್ರಮಿ-ಫಣಿಮದಭಂಗಮ್ ಅಹಲ್ಯಾಶಾಪ ಭಯನಾಶಮ್|| ಸಕಲವೇದ ವಿಚಾರಂ ವರ- ಸಾಧುಜನ ಪರಿಪಾಲಮ್ ಮಕರಕುಂಡಲಧರ-ಮದನಗೋಪಾಲಮ್ ಭಕ್ತವತ್ಸಲಂ ಪುರಂದರವಿಟ್ಠಲಮ್|| —-ಪುರಂದರದಾಸ
ವೆಂಕಟಾಚಲನಿಲಯಂ ಸ್ವಾಮಿ Read More »
ವಿದುರನ ಭಾಗ್ಯವಿದು|| ಇದ ಕಂಡು ಜಗವೆಲ್ಲ ತಲೆದೂಗುತಿಹುದು|| ಕುರುರಾಯನು ಖಳನನುಜನು ರವಿಜನು ಗುರುಗಾಂಗೇಯರು ನೋಡುತಿರೆ| ಹರಿಸಿ ರಥವನು ಬೀದಿಯಲಿ ಬರುತಲಿಹ ಹರಿಯನು ಕಂಡನು ಹರುಷದಲಿ|| ದಾರಿಲಿ ಬರುತಿಹ ಮುರವೈರಿಯನು ಕಂಡು ಹಾರುತ ಚೀರುತ ಕುಣಿಯುತಲಿ| ಹರುಷದ ಕಂಬನಿ ಧಾರೆಯ ಸುರಿಸುತ ಬಾರಿಬಾರಿಗು ಸಂತೋಷದಿ ಹಿಗ್ಗುವ|| ಆಟಕೆ ಲೋಕಗಳೆಲ್ಲವ ಸೃಜಿಸುವ ನಾಟಕಧರ ತನ್ನ ಲೀಲೆಯಲಿ| ನೀಟಾದವರ ಮನೆಗಳ ಜರಿದು ಕುಟೀರದಲಿ ಬಂದು ಕುಳಿತ ಹರಿ|| ಅಡಿಗಡಿಗೆ ತನ್ನ ತನುಮನ ಹರಹಿ ಅಡಿಗೆರಗುತ ಗದ್ಗದ ಸ್ವರದಿ| ನುಡಿಗಳು ತೊದಲಲು ರೋಮಾಂಚವಾಗಲು
ರಾಗಿ ತಂದೀರ್ಯಾ ಭಿಕ್ಷಕೆ ರಾಗಿ ತಂದೀರ್ಯಾ| ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು|| ಅನ್ನದಾನವ ಮಾಡುವರಾಗಿ ಅನ್ನಛತ್ರವನಿಟ್ಟವರಾಗಿ| ಅನ್ಯವಾರ್ತೆಯ ಬಿಟ್ಟವರಾಗಿ ಅನುದಿನ ಭಜನೆಯ ಮಾಡುವರಾಗಿ|| ಮಾತಾಪಿತರನು ಸೇವಿಪರಾಗಿ ಪಾಪಕಾರ್ಯವ ಬಿಟ್ಟವರಾಗಿ| ರೀತಿಯ ಬಾಳನು ಬಾಳುವರಾಗಿ ನೀತಿಮಾರ್ಗದಲಿ ಖ್ಯಾತರಾಗಿ|| ಗುರುಕಾರುಣ್ಯವ ಪಡೆದವರಾಗಿ ಗುರುವಾಕ್ಯವನು ಪಾಲಿಪರಾಗಿ| ಗುರುವಿನ ಪಾದವ ಸ್ಮರಿಸುವರಾಗಿ ಪರಮಪುಣ್ಯವ ಮಾಡುವರಾಗಿ|| ಕಾಮಕ್ರೋಧವ ಅಳಿದವರಾಗಿ ನೇಮನಿಷ್ಠೆಗಳ ಮಾಡುವರಾಗಿ| ರಾಮನಾಮವ ಜಪಿಸುವರಾಗಿ ಪ್ರೇಮದಿ ಕುಣಿಕುಣಿದಾಡುವರಾಗಿ|| ಹರಿಯನು ಅನುದಿನ ನೆನೆಯುವರಾಗಿ ಗುರುತಿಗೆ ಬಾಹೋರಂಥವರಾಗಿ| ಕರೆಕರೆ ಭವವನು ನೀಗುವರಾಗಿ ಪುರಂದರವಿಟ್ಠಲನ ಸೇವಿಪರಾಗಿ|| —-ಪುರಂದರದಾಸ
ಯಾದವ ನೀ ಬಾ ಯದುಕುಲನಂದನ ಮಾಧವ ಮಧುಸೂದನ ಬಾರೋ|| ಸೋದರಮಾವನ ಮಥುರೆಲಿ ಮಡುಹಿದ ಯಶೋದಾಕಂದ ನೀ ಬಾರೋ|| ಕಣಕಾಲಂದುಗೆ ಘುಲುಘುಲುರೆನುತಲಿ ಝಣಝಣ ವೇಣುನಿನಾದದಲಿ| ಚಿಣ್ಣಿಕೋಲು ಚೆಂಡು ಬುಗುರಿಯನಾಡುತ ಸಣ್ಣವರೊಡಗೂಡಿ ನೀ ಬಾರೋ|| ಶಂಖ ಚಕ್ರವು ಕೈಯಲಿ ಹೊಳೆಯುತ ಬಿಂಕದ ಗೋವಳ ನೀ ಬಾರೋ| ಅಕಳಂಕ ಚರಿತನೆ ಆದಿನಾರಾಯಣ ಬೇಕೆಂಬ ಬಕ್ತರಿಗೊಲಿ ಬಾರೋ|| ಖಗವಾಹನನೆ ಬಗೆಬಗೆರೂಪನೆ ನಗೆಮೊಗದರಸನೆ ನೀ ಬಾರೋ| ಜಗದೊಳು ನಿನ್ನಯ ಮಹಿಮೆಯ ಪೊಗಳುವೆ ಪುರಂದರವಿಟ್ಠಲ ನೀ ಬಾರೋ|| —-ಪುರಂದರದಾಸ
ಮೂರುತಿಯನೆ ನಿಲಿಸೋ ಮಾಧವ ನಿನ್ನ| ಎಳೆ ತುಳಸಿಯ ವನಮಾಲೆಯು ಕೊರಳೊಳು ಪೊಳೆವ ಪೀತಾಂಬರದಿಂದ ಒಪ್ಪುವ ನಿನ್ನ|| ಮುತ್ತಿನ ಸರ ನವರತ್ನದುಂಗುರವಿಟ್ಟು ಮತ್ತೆ ಶ್ರೀಲಕುಮಿಯು ಉರದಿ ಒಪ್ಪುವ ನಿನ್ನ|| ಭಕ್ತರ ಕಲ್ಪತರು ಭಾಗ್ಯದ ಸುರಧೇನು ಮುಕ್ತಿದಾಯಕ ನಮ್ಮ ಪುರಂದರ ವಿಟ್ಠಲ|| —-ಪುರಂದರದಾಸ
ಮರೆಯಬೇಡ ಮನವೆ ನೀನು ಹರಿಯ ಸ್ಮರಣೆಯ|| ಯಾಗಯಜ್ಞ ಮಾಡಲೇಕೆ ಯೋಗಿಯತಿಯು ಆಗಲೇಕೆ| ನಾಗಶಯನ ನಾರದನುತನ ಕೂಗಿ ಭಜನೆ ಮಾಡೋ|| ಸತಿಯು ಸುತರು ಹಿತರು ಎಂದು ಮತಿಯುಗೆಟ್ಟು ಕೆಡಲಿಬೇಡ| ಗತಿಯು ತಪ್ಪಿ ಹೋಗುವಾಗ ಸತಿಯು ಸುತರು ಬರುವರೇ|| ಹರಿಯ ಸ್ಮರಣೆ ಮಾತ್ರದಿಂದ ಘೋರದುರಿತವೆಲ್ಲ ನಾಶ| ಪರಮಪುರುಷ ಶ್ರೀ ಪುರಂದರ ವಿಟ್ಠಲೋರಾಯ ಪದವಿ ಕೊಡುವ|| —-ಪುರಂದರದಾಸ
ಮನ ಶುದ್ಧಿಯಿಲ್ಲದವಗೆ ಮಂತ್ರದ ಫಲವೇನು| ತನು ಶುದ್ಧಿಯಿಲ್ಲದವಗೆ ತೀರ್ಥದ ಫಲವೇನು|| ಮಿಂದಲ್ಲಿ ಫಲವೇನು ಮೀನು ಮೊಸಳೆಯಂತೆ ನಿಂದಲ್ಲಿ ಫಲವೇನು ಶ್ರೀಶೈಲದ ಕಾಗೆಯಂತೆ| ಹೊರಗೆ ಮಿಂದು ಒಳಗೆ ಮೀಯದವರ ಕಂಡು ಬೆರಗಾಗಿ ನಗುತಿದ್ದ ಪುರಂದರವಿಟ್ಠಲ|| —ಪುರಂದರದಾಸ
ಮನ ಶುದ್ಧಿಯಿಲ್ಲದವಗೆ Read More »
ಭಜ ರೇ ಗೋಪಾಲಂ ಮಾನಸ ಭಜ ರೇ ಗೋಪಾಲಂ|| ಭಜ ಗೋಪಾಲಂ ಭಜಿತಕುಚೇಲಂ| ತ್ರಿಜಗನ್ಮೂಲಂ ದಿತಿಸುತಕಾಲಂ|| ಆಗಮಸಾರಂ ಯೋಗವಿಚಾರಂ| ಭೋಗಶರೀರಂ ಭುವನಾಧಾರಂ|| ಕದನಕಠೋರಂ ಕಲುಷವಿದೂರಂ| ಮದನಕುಮಾರಂ ಮಧುಸಂಹಾರಂ|| ನತಮಂದಾರಂ ನಂದಕಿಶೋರಂ| ಹತಚಾಣೂರಂ ಹಂಸವಿಹಾರಂ|| —-ಸದಾಶಿವ ಬ್ರಹ್ಮೇಂದ್ರ
ಬ್ರೂಹಿ ಮುಕುಂದೇತಿ ರಸನೇ|| ಕೇಶವ ಮಾಧವ ಗೋವಿಂದೇತಿ ಕೃಷ್ಣಾನಂದ ಸದಾನಂದೇತಿ|| ರಾಧರಮಣ ಹರೇ ರಾಮೇತಿ ರಾಜೀವಾಕ್ಷ ಘನಶ್ಯಾಮೇತಿ|| ಅಕ್ರೂರಪ್ರಿಯ ಚಕ್ರಧರೇತಿ ಹಂಸ ನಿರಂಜನ ಕಂಸಹರೇತಿ|| —-ಸದಾಶಿವ ಬ್ರಹ್ಮೇಂದ್ರ
ಬೇವು ಬೆಲ್ಲದೊಳಿಡಲೇನು ಫಲ ಹಾವಿಗೆ ಹಾಲೆರೆದೇನು ಫಲ|| ಕುಟಿಲವ ಬಿಡದಿಹ ಮನುಜರು ಮಂತ್ರವ ಪಠನೆಯ ಮಾಡಿದರೇನು ಫಲ| ಸಟೆಯನ್ನಾಡುವ ಮನುಜರು ಸಂತತ ನಟನೆಯ ಮಾಡಿದರೇನು ಫಲ|| ಕಪಟತನದಲಿ ಕಾಡುತ ಜನರನು ಜಪವನು ಮಾಡಿದರೇನು ಫಲ| ಕುಪಿತತನವನು ಬಿಡದೆ ನಿರಂತರ ಉಪವಾಸ ಮಾಡಿದರೇನು ಫಲ|| ಮಾತಾಪಿತರನು ಬಳಲಿಸಿದಾತನು ಯಾತ್ರೆಯ ಮಾಡಿದರೇನು ಫಲ| ಘಾತಕತನವನು ಬಿಡದೆ ನಿರಂತರ ಗೀತೆಯನೋದಿದರೇನು ಫಲ|| ಹೀನಗುಣಂಗಳ ಹಿಂಗದೆ ಗಂಗೆಯ ಸ್ನಾನವ ಮಾಡಿದರೇನು ಫಲ| ಶ್ರೀನಿಧಿ ಪುರಂದರವಿಟ್ಠಲನ ನೆನೆಯದೆ ಮೌನವ ಮಾಡಿದರೇನು ಫಲ|| —-ಪುರಂದರದಾಸ
ಬೇವು ಬೆಲ್ಲದೊಳಿಡಲೇನು ಫಲ Read More »
ಬೆಲ್ಲದ ಕಟ್ಟೆಯ ಕಟ್ಟಿ ಬೇವಿನ ಬೀಜವ ಬಿತ್ತಿ ಜೇನು ಮಳೆಗರೆದರೆ ವಿಷ ಹೋಗುವುದೇನಯ್ಯಾ|| ಏನು ನೋಡಿದರೇನು ಏನು ಕೇಳಿದರೇನು| ಮನದೊಳಗಿನ ತಾಮಸ ಮಾಣದನ್ನಕ|| ಕೊಳಲು ದನಿಗೆ ಸರ್ಪ ತಲೆದೂಗುವಂದದಿ ಇದಕೇನು ಮದ್ದು ಶ್ರೀ ಪುರಂದರ ವಿಟ್ಠಲಾ|| —–ಪುರಂದರದಾಸ
ಬೆಲ್ಲದ ಕಟ್ಟೆಯ ಕಟ್ಟಿ Read More »
ಬೆಟ್ಟದಂಥ ದುರಿತವು ಸುತ್ತಮುತ್ತಲೊಟ್ಟಿರೆ ಕೃಷ್ಣನಾಮದ ಕಿಡಿಬಿದ್ದು ಬೆಂದುಹೋದುದ ಕಂಡೆನಯ್ಯ|| ಎಲೆ ಎಲೆ ದುರಿತವೆ ತಿರುಗಿ ನೋಡದೆ ಹೋಗು ಎಲೆ ಎಲೆ ದುರಿತವೆ ಮರಳಿ ನೋಡದೆ ಹೋಗು ನಿನ್ನ ಕಂಡರೆ ಕೃಷ್ಣ ಶಿಕ್ಷಿಸದೆ ಬಿಡನು ಇನ್ನೊಮ್ಮೆ ಕಂಡರೆ ಶಿರವ ಚೆಂಡಾಡುವನು ಪುಂಡರೀಕಾಕ್ಷ ನಮ್ಮ ಪುರಂದರವಿಟ್ಠಲ|| —-ಪುರಂದರದಾಸ
ಬಿನ್ನಹಕೆ ಬಾಯಿಲ್ಲವಯ್ಯ ಅನಂತ ಅಪರಾಧ ಎನ್ನೊಳಗೆ ಇರಲಾಗಿ|| ಶಿಶುಮೋಹ ಸತಿಮೋಹ ಜನನಿ-ಜನಕರ ಮೋಹ ರಸಿಕ ಭ್ರಾತರ ಮೋಹ ರಾಜಮೋಹ| ಪಶುಮೋಹ ಭೂಮೋಹ ಬಂಧುವರ್ಗದ ಮೋಹ ಅಸುರಾರಿ ನಿನ್ನ ಮರೆತೆನೋ ಕಾಯೋ ಹರಿಯೇ|| ಅನ್ನಮದ ಅರ್ಥಮದ ಅಖಿಲ ವೈಭವದ ಮದ ಮುನ್ನ ಪ್ರಾಯದ ಮದವು ಪೂಪಮದವು| ತನ್ನ ಸತ್ತ್ವದ ಮದ ಧಾತ್ರಿವಶದ ಮದ ಇನ್ನು ತನಗೆದುರಿಲ್ಲವೆಂತೆಂಬ ಮದದಿಂದ|| ಇಷ್ಟು ದೊರೆಕಿದರೆ ಮತ್ತಿಷ್ಟು ಬೇಕೆಂಬಾಸೆ ಅಷ್ಟು ದೊರಕಿದರೆ ಮತ್ತಿಷ್ಟರಾಸೆ| ಕಷ್ಟ ಬೇಡೆಂಬಾಸೆ ಕಡುಸುಖವ ಕಾಂಬಾಸೆ ನಷ್ಟಜೀವನದಾಸೆ ಪುರಂದರವಿಟ್ಠಲ|| —-ಪುರಂದರದಾಸ
ಬಿನ್ನಹಕೆ ಬಾಯಿಲ್ಲವಯ್ಯ Read More »
ಬಾರಯ್ಯ ರಂಗ ಬಾರಯ್ಯ ಕೃಷ್ಣ ಬಾರಯ್ಯ ಸ್ವಾಮಿ ಬಾರಯ್ಯ|| ವಾರಣಭಯವ ನಿವಾರಣ ಮಾಡಿದ ಕಾರುಣ್ಯನಿಧಿ ಎನ್ನ ಹೃದಯಮಂದಿರಕೆ|| ಇಂದೆನ್ನ ಪೂರ್ವಪಾಪಂಗಳ ಕಳೆದು ಮುಂದೆನ್ನ ಜನ್ಮ ಸಫಲವ ಗೈದು| ತಂದೆ ಶ್ರೀ ಪುರಂದರವಿಟ್ಠಲಾ ನೀನೊಲಿದು ಎಂದೆಂದಿಗಾನಂದ ಸುಖವನು ಸುರಿದು|| —-ಪುರಂದರದಾಸ
ಬಂದು ನಿಂದಿಹ ನೋಡಿ ಭೂತಳದಿ ವೆಂಕಟ ಇಂದಿರೆಯ ಒಡಗೂಡಿ ಒಪ್ಪುವ ನಿರಂತರ ಪೊಂದಿ ಭಜನೆಯ ಮಾಡಿ ಆನಂದಗೂಡಿ|| ವಂದಿಸುತ ಮನದೊಳಗೆ ಇವನಡಿ ದ್ವಂದ್ವ ಭಜಿಸಲು ಬಂದ ಭಯಹರ ಇಂದುಧರ ಸುರವೃಂದನುತ ಗೋ- ವಿಂದ ಕರುಣಾಸಿಂಧು ಶ್ರೀಹರಿ|| ದ್ವಾರದೆಡಬಲದಲ್ಲಿ ಜಯವಿಜಯರಿಬ್ಬರು ಸೇರಿ ಸೇವಿಪರಲ್ಲಿ ಸನಕಾದಿನುತ ಶೃಂ- ಗಾರ ನಿಧಿ ಕೊರಳಲ್ಲಿ ಮುತ್ತಿನಲ್ಲಿ ಶೋಭಿಪ ಹಾರ ಪೊಂದಿಹುದಲ್ಲಿ ವಿಸ್ತಾರದಲ್ಲಿ|| ವಾರವಾರಕೆ ಪೂಜೆಗೊಂಬುವ ಹಾರ ಮುಕುಟಾಭರಣ ಕುಂಡಲ ಧಾರ ಭುಜ ಕೇಯೂರಭೂಷಿತ ಮಾರಪಿತ ಗುಣ ಮೋಹನಾಂಗ|| ಚಾರು ಪೀತಾಂಬರ ಕಟೀ ಕರ-
ಬಲಿಯ ಮನೆಗೆ ವಾಮನ ಬಂದಂತೆ ಭಗೀರಥಗೆ ಶ್ರೀಗಂಗೆ ಬಂದಂತೆ ಮುಚುಕುಂದಗೆ ಮುಕುಂದ ಬಂದಂತೆ ಗೋಪಿಯರಿಗೆ ಗೋವಿಂದ ಬಂದಂತೆ ವಿದುರನ ಮನೆಗೆ ಶ್ರೀಕೃಷ್ಣ ಬಂದಂತೆ ವಿಭೀಷಣನೆಡೆಗೆ ಶ್ರೀರಾಮ ಬಂದಂತೆ ನಿನ್ನ ನಾಮವು ನನ್ನ ನಾಲಿಗೆಗೆ ಬರಲಿ ಬರಲಿ ಬರಲಿ ಶ್ರೀಪುರಂದರವಿಟ್ಠಲ|| —-ಪುರಂದರದಾಸ
ಬರಿದೆ ಹೋಯಿತು ಹೋಯಿತು ಹೊತ್ತು| ನರಜನ್ಮ ಸ್ಥಿರವೆಂದು ನಾನಿದ್ದೆನೊ ರಂಗ|| ಆಸೆ ಎಂಬುದು ಎನ್ನ ಕ್ಲೇಶಪಡಿಸುತಿದೆ ಗಾಸಿಯಾದೆನೊ ಹರಿ ನಾರಾಯಣ| ವಾಸುದೇವನೆ ನಿನ್ನ ಧ್ಯಾನವ ಮಾಡದೆ ನಾಶವಾಯಿತು ಜನ್ಮ ಮೋಸಹೋದೆನು ಕೃಷ್ಣ|| ಪರರ ಸೇವೆಯ ಮಾಡಿ ಪರರನ್ನೆ ಕೊಂಡಾಡಿ ಮರುಳುತನದಲಿ ಮತಿಹೀನನಾದೆ| ನೆರೆ ನಂಬಿದೆನೊ ನಿನ್ನ ಕರುಣದಿಂದಲಿ ಎನ್ನ ಮರೆಯದೆ ಸಲಹಯ್ಯ ಪುರಂದರವಿಟ್ಠಲ|| —-ಪುರಂದರದಾಸ
ಬರಿದೆ ಕರೆಯೆ ನೀ ಬಾರದಿರುವೆ ಪರಮ ಪ್ರೇಮದಿಂ ಕರೆದರೆ ಬರುವೆ|| ತಿಳಿತಿಳಿದು ನಿನ್ನ ಕರೆಯದೆ ಉಳಿದೆ ಇಳೆಯ ಆಟದಲಿ ಮೈಮರೆತೆ| ಕಳೆಯೈ ಮೋಹದ ಆವರಣವ ನೀ ಬೆಳಕ ತೋರೊ ಹರಿ ಕರುಣಾಜಲಧೇ|| ಕನಕಹರಿಣವೀ ಭುವನ ವಿರಚನೆ ಕನಸು ಸಾಕೋ ಕೃಷ್ಣ ಕೈಮುಗಿವೆ| ದಿನಕರನುದಯಕೆ ವನಜವಿಕಸನ ಮನವರಳಿಸೊ ಹರಿ ಪರಮಗುಣನಿಧೇ||
ಬರಿದೆ ಕರೆಯೆ ನೀ ಬಾರದಿರುವೆ Read More »
ಬಡವರೊಳಗೆ ಎನಗಿಂತ ಅನ್ಯರಿಲ್ಲ| ಕೊಡುವರೊಳಗೆ ನಿನಗಿಂತ ಅನ್ಯರಿಲ್ಲ|| ದೃಢಭಕ್ತಿ ಎನಗೆ ನಿನ್ನಲಿ ನಿಲಿಸಿ| ಬಿಡದೆ ಸಲಹಯ್ಯ ಪುರಂದರವಿಟ್ಠಲ|| —-ಪುರಂದರದಾಸ