Guru Raghavendra

ಗುರುವೇ ತೊಳೆಯೆನ್ನ ಮನಸಿನ ಕೊಳಕ

ಮಿಶ್ರ ಶಿವರಂಜಿನಿ – ಏಕತಾಲ ಗುರುವೇ ತೊಳೆಯೆನ್ನ ಮನಸಿನ ಕೊಳಕ ಕಳೆದುಕೊಂಡದ್ದನ್ನ ಪಡಕೊಳ್ಳೋತನಕ|| ಭಕ್ತಿಯ ಜಲದಲ್ಲಿ ಮಾಡುವೆ ಜಳಕ ನಾನದರಿಂದಲೆ ಹೊಂದುವೆ ಪುಳಕ|| – ಸ್ವಾಮಿ ಪುರುಷೋತ್ತಮಾನಂದ

ಗುರುವೇ ತೊಳೆಯೆನ್ನ ಮನಸಿನ ಕೊಳಕ Read More »

ಗುರುಸ್ತೋತ್ರಮ್

ಗುರುಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ | ಗುರುದೇವ ಪರಂ ಬ್ರಹ್ಮ ತಸ್ಮೈ ಶ್ರೀಗುರವೇ ನಮಃ ||   ಅಜ್ಞಾನತಿಮಿರಾಂಧಸ್ಯ  ಜ್ಞಾನಾಂಜನಶಲಾಕಯಾ | ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರವೇ ನಮಃ ||   ಅಖ0ಡಲಾಕಾರಂ  ವ್ಯಾಪ್ತಂ ಯೇನ  ಚರಾಚರಮ್ | ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀಗುರವೇ ನಮಃ ||   ಅನೇಕಜನ್ಮಸಂಪ್ರಾಪ್ತ -ಕರ್ಮ ಬಂಧವಿ.ಹಿನೇ | ಆತ್ಮಜ್ಞಾನಪ್ರದಾನೇನ ತಸ್ಮೈ ಶ್ರೀಗುರವೇ ನಮಃ ||   ಮನ್ನಾತಃ ಶ್ರೀಜಗನ್ನಾಥೋ ಮದ್ಗುರುಃ  ಶ್ರೀಜಗದ್ಗುರುಃ | ಮಮಾತ್ಮಾ  ಸರ್ವಭೂತಾತ್ಮಾ ತಸ್ಮೈ ಶ್ರೀಗುರವೇ

ಗುರುಸ್ತೋತ್ರಮ್ Read More »

ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು, ರಾಘವೇಂದ್ರ

ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು, ರಾಘವೇಂದ್ರ ಹಾಲಲ್ಲಿ ಕೆನೆಯಾಗಿ, ನೀರಲ್ಲಿ ಮೀನಾಗಿ, ಹಾಯಾಗಿರುವೆ ರಾಘವೇಂದ್ರ. ಮುಳ್ಳಲ್ಲಾದರೂ ನೂಕು, ಕಲ್ಲಲ್ಲಾದರೂ ನೂಕು, ರಾಘವೇಂದ್ರ ಮುಳ್ಳಲ್ಲಿ ಮುಳ್ಳಾಗಿ, ಕಲ್ಲಲ್ಲಿ ಕಲ್ಲಾಗಿ, ಒಂದಾಗಿರುವೆ ರಾಘವೇಂದ್ರ. ಬಿಸಿಲಲ್ಲೇ ಒಣಗಿಸು, ನೆರಳಲ್ಲೇ ಮಲಗಿಸು, ರಾಘವೇಂದ್ರ ಬಿಸಿಲಲ್ಲಿ ಕೆಂಪಾಗಿ, ನೆರಳಲ್ಲಿ ತಂಪಾಗಿ, ನಗುನಗುತಾ ಇರುವೆ ರಾಘವೇಂದ್ರ. ಸುಖವನ್ನೇ ನೀಡೆಂದು ಎಂದೂ ಕೇಳೆನು ನಾನು, ರಾಘವೇಂದ್ರ ಮುನ್ನ ಮಾಡಿದ ಪಾಪ ಯಾರ ತಾತನ ಗಂಟು ಮುನ್ನ ಮಾಡಿದ ಪಾಪ ಯಾರ ತಾತನ ಗಂಟು, ನೀನೇ ಹೇಳು, ರಾಘವೇಂದ್ರ.

ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು, ರಾಘವೇಂದ್ರ Read More »