Devi

ಎತ್ತ ಹೋದರು ಸುತ್ತಲೆಲ್ಲೂ

ಎತ್ತ ಹೋದರು ಸುತ್ತಲೆಲ್ಲೂ ಆರಿಗಾರೂ ಇಲ್ಲ ಜಗದೊಳು ಎಂಬುದನು ನೀ ನೆನಪಿಡು| ಮಾಯೆಯೊಡ್ಡಿದ ಬಲೆಯೊಳಿದ್ದರು ತಾಯ ಪಾದದಿ ಮನವಿಡು|| ಒಂದು ದಿನವೊ ಎರಡು ದಿನವೊ “ಸ್ವಾಮಿ, ಬುದ್ಧೀ” ಎಂದು ಜನಗಳು ಗೌರವದಿ ಬಳಿ ಸುಳಿವರು| ಮೃತ್ಯು ಬಂದೆಳೆವಾಗ ನಿನ್ನನು ಎಲ್ಲರೂ ಹಿಂದುಳಿವರು|| ಯಾವ ಪ್ರಿಯತಮೆಯೊಲವಿಗಾಗಿಯೆ ಹಗಲು ಇರುಳೂ ಜೀವ ತೇದೆಯೊ ಬಾರಳವಳೂ ಜೀವ ತೇದೆಯೊ ಬಾರಳನಳೂ ಜೊತೆಯೊಳು| ನೀನು ಸಾಯಲು ನಿನ್ನ ಶವವನು ಅಶುಭವೆಂದೇ ತಿಳಿವಳು||                                —-ವಚನವೇದ

ಎತ್ತ ಹೋದರು ಸುತ್ತಲೆಲ್ಲೂ Read More »

ಆತುರದಿ ಹಾತೊರೆದು

ಆತುರದಿ ಹಾತೊರೆದು ಬಂದೆ ಅವ್ವಾ ಎಂದು | ಯಾತರದು ಕಾತರವು ನಿನ್ನ ಬಳಿಗಿಂದು || ಹೆರತನದ ಹೆದರಿಕೆಯು ಹೃದಯದೊಳು ಹೊಕ್ಕಿಹುದು ನರತನದ ಹುದುರೊಳಗೆ ಜೀವ ಸಿಕ್ಕಿಹುದು| ಹೊರೆತನದ ಬಲೆಯೊಳಗೆ ಬುದ್ಧಿ ಬಳಲಾಡುವುದು ಪರೆ ನಿನ್ನ ಕಿಂಕರಗೆ ಅಭಯಕರ ನೀಡೌ|| ಎತ್ತೆತ್ತ ನೋಡಿದರು ಮತ್ತೆ ಬೇರೆ ಇಲ್ಲ ಅತ್ತ ನೀನೇ ಮತ್ತು ಇತ್ತ ನೀನು| ಸುತ್ತಿರುವ ಬೆದರಿಕೆಯ ಬಟ್ಟೆಯನು ಕಳೆದೊಗೆದು ಬತ್ತಲಾದೆನು ಅವ್ವ ಬಾಲನಂತೆ ನಾನು|| ಮುಚ್ಚಿಡುವುದೇಕಿನ್ನು ಬಚ್ಚಿಡುವುದಿನ್ನೆಲ್ಲಿ ಮುಚ್ಚುಮರೆ ಮಾಳ್ಪುದಕೆ ಮುಸುಕು ಇಹುದೆಲ್ಲಿ| ನೆಚ್ಚು ಮೆಚ್ಚುಗಳನ್ನು ಬಿಚ್ಚು

ಆತುರದಿ ಹಾತೊರೆದು Read More »

ಅಂತರಂಗದಲಿ ಶ್ರೀಘನಶ್ಯಾಮೆಯ

ಅಂತರಂಗದಲಿ ಶ್ರೀಘನಶ್ಯಾಮೆಯ ಆದರಿಸೆಲೆ ಮನವೇ| ನಮ್ಮಿಬ್ಬರ ಹೊರತಾರೂ ಅರಿಯದ ರೀತಿಯೊಳವಳೆಡೆ ಸಾಗುವವೇ || ಅಂತರಂಗ….. ಓ ಮನವೇ ನಿನ್ನ ಆಸೆ ಸಾಸಿರವ ಆಚೆ ನಿಲಿಸಿ ಬಾರೋ | ಬಾಗಿಲಾಚೆ ನಿಲಿಸಿ ಬಾರೋ| ಏಕಾಂತದಿ ನೀನಾಕೆಯ ಕಾಣಲು “ಓ ತಾಯಿ” ಎಂದೆನ್ನುವ ರಸನೆಯ ಮಾತ್ರ ಕರೆದು ತಾರೋ || ಅಂತರಂಗ…. ಕುಟಿಲ ಕುಮಂತ್ರವ ದೂರ ತಳ್ಳಿ ನೀ ಬಾ ನಮ್ಮನು ನೋಡು | ಜ್ಞಾನನಯನವನು ಪಹರೆ ನಿಲಿಸಿ ನೀ ಒಳಗೆ ಬಂದು ಕೂಡೋ||                                ——-ವಚನವೇದ

ಅಂತರಂಗದಲಿ ಶ್ರೀಘನಶ್ಯಾಮೆಯ Read More »

ಅನಂತರೂಪಿಣಿ (ಶ್ರೀ ದೇವೀ ಸಂಕೀರ್ತನೆ)

ಪೂರಿಯಾಧನಾಶ್ರೀ—–ತೇವರಾ ಅನಂತ ರೂಪಿಣಿ ಅನಂತ ಗುಣವತಿ ಅನಂತನಾಮ್ನಿ ಗಿರಿಜೇ ಮಾ| ಶಿವಹೃನ್ಮೋಹಿನಿ ವಿಶ್ವವಿಲಾಸಿನಿ ರಾಮಕೃಷ್ಣಜಯದಾಯಿನಿ ಮಾ|| ಜಗಜ್ಜನನಿ ತ್ರಿಲೋಕಪಾಲಿನಿ ವಿಶ್ವಸುವಾಸಿನಿ ಶುಭದೇ ಮಾ| ದುರ್ಗತಿನಾಶಿನಿ ಸನ್ಮತಿದಾಯಿನಿ ಭೋಗಮೋಕ್ಷ ಸುಖಕಾರಿಣಿ ಮಾ|| ಪರಮೇ ಪಾರ್ವತಿ ಸುಂದರಿ ಭಗವತಿ ದುರ್ಗೇ ಭಾಮತಿ ತ್ವಂ ಮೇ ಮಾ| ಪ್ರಸೀದ ಮಾತರ್ ನಗೇಂದ್ರ ನಂದಿನಿ ಚಿರಸುಖದಾಯಿನಿ ಜಯದೇ ಮಾ||

ಅನಂತರೂಪಿಣಿ (ಶ್ರೀ ದೇವೀ ಸಂಕೀರ್ತನೆ) Read More »

ಅಗ್ನಿಮಂತ್ರ ದೀಕ್ಷೆಯ

ಅಗ್ನಿಮಂತ್ರ ದೀಕ್ಷೆಯ ಕೊಡು ನಿನ್ನ ಸಂತಾನಕಿಂದು| ಆಶೀರ್ವಾದ ಕವಚ ತೊಡಿಸು ದೈನ್ಯವಸನದಿಂ ಬಿಡಿಸು|| ಕುದಿಸು ಎಮ್ಮ ಹೃದಯ ರುಧಿರ ಒರಸು ಭಯದ ಅಶ್ರು ಜಲವ ನಿಲಿಸು ಎಮ್ಮ ಜಗದ ಸಭೆಯೊಳ್ ನ್ನಿನ ಸುತ್ತ ತಾಯಿ || ನರರು ನಾವು ಕುರಿಗಳಲ್ತು ನಿನ್ನ ಸುತರು ದೀನರೆಂತು ವ್ಯರ್ಥ ಭೀತಿ ಏಕೆ ಇನ್ನು ಮಿಥ್ಯವಲ್ತೆ ಈ ಲಜ್ಜೆ|| ಬಾರಮ್ಮ ಬಾರಮ್ಮ ಬಾರೆಮ್ಮ ತಾಯಿ ದಶಪ್ರಹರಣ ಧಾರಿಣೀ ನಗುತ ಅಟ್ಟ ಅಟ್ಟಹಾಸದಿ ದಿವಿಯ ಭುವಿಯ ತುಂಬಿ ನೀ ಸಾಧಿಸಿ ನಿನ್ನ ಕಾರ್ಯವನ್ನು

ಅಗ್ನಿಮಂತ್ರ ದೀಕ್ಷೆಯ Read More »