Akka Mahadevi

ಪುಣ್ಯಪಾಪಂಗಳನರಿಯದ ಮುನ್ನ,

ಪುಣ್ಯಪಾಪಂಗಳನರಿಯದ ಮುನ್ನ, ಅನೇಕ ಭವಂಗಳ ಬಂದೆನಯ್ಯಾ ? ಬಂದು ಬಂದು ನೊಂದು ಬೆಂದೆನಯ್ಯಾ ? ಬಂದು ನಿಮ್ಮ ನಂಬಿ ಶರಣುವೊಕ್ಕೆನಯ್ಯಾ ? ನಿಮ್ಮನೆಂದೂ ಅಗಲದಂತೆ ಮಾಡಿ ನಡೆಸಯ್ಯಾ ನಿಮ್ಮ ಧರ್ಮ ನಿಮ್ಮ ಧರ್ಮ. ನಿಮ್ಮಲೊಂದು ಬೇಡುವೆನು, ಎನ್ನ ಬಂಧನ ಬಿಡುವಂತೆ ಮಾಡಯ್ಯಾ ಚೆನ್ನಮಲ್ಲಿಕಾರ್ಜುನಾ

ಪುಣ್ಯಪಾಪಂಗಳನರಿಯದ ಮುನ್ನ, Read More »

ಪುರುಷನ ಮುಂದೆ ಮಾಯೆ

ಪುರುಷನ ಮುಂದೆ ಮಾಯೆ ಸ್ತ್ರೀಯೆಂಬ ಅಭಿಮಾನವಾಗಿ ಕಾಡುವುದು. ಸ್ತ್ರೀಯ ಮುಂದೆ ಮಾಯೆ ಪುರುಷನೆಂಬ ಅಭಿಮಾನವಾಗಿ ಕಾಡುವುದು. ಲೋಕವೆಂಬ ಮಾಯೆಗೆ ಶರಣಚಾರಿತ್ರ್ಯ ಮರುಳಾಗಿ ತೋರುವುದು. ಚೆನ್ನಮಲ್ಲಿಕಾರ್ಜುನನೊಲಿದ ಶರಣಂಗೆ ಮಾಯೆಯಿಲ್ಲ, ಮರಹಿಲ್ಲ, ಅಭಿಮಾನವೂ ಇಲ್ಲ.

ಪುರುಷನ ಮುಂದೆ ಮಾಯೆ Read More »

ಪಡೆವುದರಿದು ನರಜನ್ಮವ,

ಪಡೆವುದರಿದು ನರಜನ್ಮವ, ಪಡೆವುದರಿದು ಹರಭಕ್ತಿಯ, ಪಡೆವುದರಿದು ಗುರುಕಾರುಣ್ಯವ, ಪಡೆವುದರಿದು ಲಿಂಗಜಂಗಮಸೇವೆಯ, ಪಡೆವುದರಿದು ಸತ್ಯಶರಣರನುಭಾವವ. ಇಂತಾಗಿ ಚೆನ್ನಮಲ್ಲಿಕಾರ್ಜುನಯ್ಯನ ಶರಣರ ಅನುಭಾವದಲ್ಲಿ ನಲಿನಲಿದಾಡು ಕಂಡೆಯಾ ಎಲೆ ಮನವೆ.

ಪಡೆವುದರಿದು ನರಜನ್ಮವ, Read More »

ಪರರೊಡತಣ ಮಾತು ನಮಗೇತರದಯ್ಯ ?

ಪರರೊಡತಣ ಮಾತು ನಮಗೇತರದಯ್ಯ ? ಪರರೊಡತಣ ಗೊಟ್ಟಿ ನಮಗೇಕಯ್ಯ ? ಲೋಕದ ಮಾನವರೊಡನೆ ನಮಗೇತರ ವಿಚಾರವಯ್ಯ ? ಚೆನ್ನಮಲ್ಲಿಕಾರ್ಜುನನ ಒಲವಿಲ್ಲದವರೊಡನೆ ನಮಗೇತರ ವಿಚಾರವಯ್ಯಾ ?

ಪರರೊಡತಣ ಮಾತು ನಮಗೇತರದಯ್ಯ ? Read More »

ಪಚ್ಚೆಯ ನೆಲೆಗಟ್ಟು, ಕನಕದ ತೋರಣ, ವಜ್ರದ ಕಂಬ,

ಪಚ್ಚೆಯ ನೆಲೆಗಟ್ಟು, ಕನಕದ ತೋರಣ, ವಜ್ರದ ಕಂಬ, ಪವಳದ ಚಪ್ಪರವಿಕ್ಕಿ, ಮುತ್ತುಮಾಣಿಕದ ಮೇಲುಕಟ್ಟ ಕಟ್ಟಿ, ಮದುವೆಯ ಮಾಡಿದರು, ಎಮ್ಮವರೆನ್ನ ಮದುವೆಯ ಮಾಡಿದರು. ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆನ್ನ ಮದುವೆಯಮಾಡಿದರು

ಪಚ್ಚೆಯ ನೆಲೆಗಟ್ಟು, ಕನಕದ ತೋರಣ, ವಜ್ರದ ಕಂಬ, Read More »

ಪಂಚೇಂದ್ರಿಯದ ಉರವಣೆಯ

ಪಂಚೇಂದ್ರಿಯದ ಉರವಣೆಯ ಉದುಮದದ ಭರದ ಜವ್ವನದೊಡಲು ವೃಥಾ ಹೋಯಿತ್ತಲ್ಲಾ ? ತುಂಬಿ ಪರಿಮಳವ ಕೊಂಡು ಲಂಬಿಸುವ ತೆರನಂತೆ ಇನ್ನೆಂದಿಂಗೆ ಒಳಕೊಂಬೆಯೊ, ಅಯ್ಯಾ ಚೆನ್ನಮಲ್ಲಿಕಾರ್ಜುನಾ ? |

ಪಂಚೇಂದ್ರಿಯದ ಉರವಣೆಯ Read More »

ಪಂಚೇಂದ್ರಿಯಂಗಳೊಳಗೆ

ಪಂಚೇಂದ್ರಿಯಂಗಳೊಳಗೆ ಒಂದಕ್ಕೆ ಪ್ರಿಯನಾದಡೆ ಸಾಲದೆ ? ಸಪ್ತವ್ಯಸನಂಗಳೊಳಗೆ ಒಂದಕ್ಕೆ ಪ್ರಿಯನಾದಡೆ ಸಾಲದೆ ? ರತ್ನದ ಸಂಕಲೆಯಾದಡೇನು ಬಂಧನ ಬಿಡುವುದೆ ಚೆನ್ನಮಲ್ಲಿಕಾರ್ಜುನಾ ?

ಪಂಚೇಂದ್ರಿಯಂಗಳೊಳಗೆ Read More »

ಪಂಚೇಂದ್ರಿಯ ಸಪ್ತಧಾತು ಅಷ್ಟಮದ ಕೊಂದು ಕೂಗಿತಲ್ಲಾ ?

ಪಂಚೇಂದ್ರಿಯ ಸಪ್ತಧಾತು ಅಷ್ಟಮದ ಕೊಂದು ಕೂಗಿತಲ್ಲಾ ? ಹರಿಬ್ರಹ್ಮರ ಬಲುಹ ಮುರಿದು ಕೊಂದು ಕೂಗಿತಲ್ಲಾ ? ಮಹಾ ಋಷಿಯರ ತಪವ ಕೆಡಿಸಿ ಕೊಂದು ಕೂಗಿತಲ್ಲಾ ? ಚೆನ್ನಮಲ್ಲಿಕಾರ್ಜುನಂಗೆ ಶರಣೆಂದು ನಂಬಿ ಮರೆಹೊಕ್ಕಡೆ ಅಂಜಿ ನಿಂದುದಲ್ಲಾ ?

ಪಂಚೇಂದ್ರಿಯ ಸಪ್ತಧಾತು ಅಷ್ಟಮದ ಕೊಂದು ಕೂಗಿತಲ್ಲಾ ? Read More »

ಫಲ ಒಳಗೆ ಪಕ್ವವಾಗಿಯಲ್ಲದೆ,

ಫಲ ಒಳಗೆ ಪಕ್ವವಾಗಿಯಲ್ಲದೆ, ಹೊರಗಳ ಸಿಪ್ಪೆ ಒಪ್ಪಗೆಡದು. ಕಾಮನ ಮುದ್ರೆಯ ಕಂಡು ನಿಮಗೆ ನೋವಾದಿಹಿತೆಂದು ಆ ಭಾವದಿಂದ ಮುಚ್ಚಿದೆ. ಇದಕ್ಕೆ ನೋವೇಕೆ ಕಾಡದಿರಣ್ಣಾ, ಚೆನ್ನಮಲ್ಲಿಕಾರ್ಜುನದೇವರದೇವನ ಒಳಗಾದವಳ.

ಫಲ ಒಳಗೆ ಪಕ್ವವಾಗಿಯಲ್ಲದೆ, Read More »

ನೀನಿಕ್ಕಿದ ಸರಿದೊಡಕನಾರು ಬಿಡಿಸಬಲ್ಲರಯ್ಯಾ ?

ನೀನಿಕ್ಕಿದ ಸರಿದೊಡಕನಾರು ಬಿಡಿಸಬಲ್ಲರಯ್ಯಾ ? ನೀನಿಕ್ಕಿದ ಕಟ್ಟನಾರು ಕಳೆಯಬಲ್ಲರಯ್ಯಾ ? ನೀ ಸೀಳಿದ ರೇಖೆಯನಾರು ಮೀರಬಹುದಯ್ಯಾ ? ಚೆನ್ನಮಲ್ಲಿಕಾರ್ಜುನಯ್ಯಾ, ನೀನು ಕಳುಹಿದ ಸೆರೆಗೆ ಮಾರುವೋಗದಿರ್ದಡೆ ಎನ್ನಿಚ್ಚೆಯ ಅಯ್ಯಾ ?

ನೀನಿಕ್ಕಿದ ಸರಿದೊಡಕನಾರು ಬಿಡಿಸಬಲ್ಲರಯ್ಯಾ ? Read More »

ನೀನು ಹೋಗೆಂದಡೆ ಹೋದೆನಯ್ಯಾ.

ನೀನು ಹೋಗೆಂದಡೆ ಹೋದೆನಯ್ಯಾ. ನೀನು ಹುಟ್ಟೆಂದಡೆ ಹುಟ್ಟಿದೆನಯ್ಯಾ. ನೀನು ಬೆಳೆಯೆಂದ ಠಾವಿನಲ್ಲಿ ಬೆಳೆದೆನಯ್ಯಾ. ನೀನು ಹಿಡಿಯೆಂದವರ ಮನೆಯ ಹೊಕ್ಕೆನಯ್ಯಾ. ನೀನು ಮಾಡೆಂದ ಕೆಲಸವ ಮಾಡಿಕೊಂಡು ನಿಮ್ಮ ಬೆಸಲಾದ ಮಗಳಾಗಿರ್ದೆ ಕಾಣಾ ಚೆನ್ನಮಲ್ಲಿಕಾರ್ಜುನಾ.

ನೀನು ಹೋಗೆಂದಡೆ ಹೋದೆನಯ್ಯಾ. Read More »

ನೀರಕ್ಷೀರದಂತೆ ನೀನಿಪ್ಪೆಯಾಗಿ,

ನೀರಕ್ಷೀರದಂತೆ ನೀನಿಪ್ಪೆಯಾಗಿ, ಆವುದು ಮುಂದು, ಆವುದು ಹಿಂದು ಎಂದರಿಯೆ. ಆವುದು ಕರ್ತೃ, ಆವುದು ಭೃತ್ಯನೆಂದರಿಯೆ. ಆವುದು ಘನ, ಆವುದು ಕಿರಿದೆಂದರಿಯೆ. ಚೆನ್ನಮಲ್ಲಿಕಾರ್ಜುನಯ್ಯಾ, ನೀನೊಲಿದು ಕೊಂಡಾಡಿದಡೆ ಇರುಹೆ ರುದ್ರನಾಗದೆ ಹೇಳಯ್ಯಾ ?

ನೀರಕ್ಷೀರದಂತೆ ನೀನಿಪ್ಪೆಯಾಗಿ, Read More »

ನಿಮ್ಮ ನಿಲವಿಂಗೆ ನೀವು ನಾಚಬೇಡವೆ ?

ನಿಮ್ಮ ನಿಲವಿಂಗೆ ನೀವು ನಾಚಬೇಡವೆ ? ಅನ್ಯರ ಕೈಯಲ್ಲಿ ಅಲ್ಲ ಎನಿಸಿಕೊಂಬ ನಡೆನುಡಿ ಏಕೆ ? ಅಲ್ಲ ಎನಿಸಿಕೊಂಬುದರಿಂದ ಆ ಕ್ಷಣವೆ ಸಾವುದು ಲೇಸು ಕಾಣಾ ಚೆನ್ನಮಲ್ಲಿಕಾರ್ಜುನಾ.

ನಿಮ್ಮ ನಿಲವಿಂಗೆ ನೀವು ನಾಚಬೇಡವೆ ? Read More »

ನಿಮ್ಮ ಒಕ್ಕುದ ಕೊಂಡು ಓಲಾಡುವೆ,

ನಿಮ್ಮ ಒಕ್ಕುದ ಕೊಂಡು ಓಲಾಡುವೆ, ಮಿಕ್ಕುದ ಕೊಂಡು ಕುಣಿದಾಡುವೆ. ನಿಮ್ಮ ತೊತ್ತಿನ ತೊತ್ತಿನ ಕರುಣಪ್ರಸಾದವ ಕೊಂಡು ನಿತ್ಯಳಾಗಿ ಬದುಕಿದೆನು ಕಾಣಾ ಚೆನ್ನಮಲ್ಲಿಕಾರ್ಜುನಾ.

ನಿಮ್ಮ ಒಕ್ಕುದ ಕೊಂಡು ಓಲಾಡುವೆ, Read More »

ನಿನ್ನರಿಕೆಯ ನರಕವೆ ಮೋಕ್ಷ ನೋಡಯ್ಯಾ,

ನಿನ್ನರಿಕೆಯ ನರಕವೆ ಮೋಕ್ಷ ನೋಡಯ್ಯಾ, ನಿನ್ನನರಿಯದ ಮುಕ್ತಿಯೆ ನರಕ ಕಂಡಯ್ಯಾ. ನೀನೊಲ್ಲದ ಸುಖವೆ ದಃಖ ಕಂಡಯ್ಯಾ, ನೀನೊಲಿದ ದುಃಖವೆ ಪರಮಸುಖ ಕಂಡಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ, ನೀ ಕಟ್ಟಿ ಕೆಡಹಿದ ಬಂಧನವ ನಿರ್ಬಂಧವೆಂದಿಪ್ಪೆನು.

ನಿನ್ನರಿಕೆಯ ನರಕವೆ ಮೋಕ್ಷ ನೋಡಯ್ಯಾ, Read More »

ನಿತ್ಯವೆನ್ನ ಮನೆಗೆ ನಡೆದುಬಂದಿತ್ತಿಂದು.

ನಿತ್ಯವೆನ್ನ ಮನೆಗೆ ನಡೆದುಬಂದಿತ್ತಿಂದು. ಮುಕ್ತಿ ಎನ್ನ ಮನೆಗೆ ನಡೆದುಬಂದಿತ್ತಿಂದು. ಜಯ ಜಯಾ, ಹರಹರಾ, ಶಂಕರ ಶಂಕರಾ, ಗುರುವೆ ನಮೋ, ಪರಮಗುರುವೆ ನಮೋ. ಚೆನ್ನಮಲ್ಲಿಕಾರ್ಜುನನ ತೋರಿದ ಗುರುವೆ ನಮೋ ನಮೋ.

ನಿತ್ಯವೆನ್ನ ಮನೆಗೆ ನಡೆದುಬಂದಿತ್ತಿಂದು. Read More »

ನಿತ್ಯವೆಂಬ ನಿಜಪದವೆನ್ನ ಹತ್ತೆಸಾರ್ದು ಕಂಡಬಳಿಕ

ನಿತ್ಯವೆಂಬ ನಿಜಪದವೆನ್ನ ಹತ್ತೆಸಾರ್ದು ಕಂಡಬಳಿಕ ಚಿತ್ತ ಕರಗಿ ಮನ ಕೊರಗಿ ಹೃದಯವರಳಿತ್ತು ನೋಡಯ್ಯಾ. ಒತ್ತಿ ಬಿಗಿದ ಸೆರೆಯೊಳಗೆ ಅತ್ತಿತ್ತಲೆಂದರಿಯದೆ ಚೆನ್ನಮಲ್ಲಿಕಾರ್ಜುನನ ಪಾದದಲ್ಲಿ ಮರೆದೊರಗಿದೆ ನೋಡಯ್ಯಾ.

ನಿತ್ಯವೆಂಬ ನಿಜಪದವೆನ್ನ ಹತ್ತೆಸಾರ್ದು ಕಂಡಬಳಿಕ Read More »

ನಿತ್ಯತೃಪ್ತಂಗೆ ನೈವೇದ್ಯದ ಹಂಗೇತಕ್ಕೆ ?

ನಿತ್ಯತೃಪ್ತಂಗೆ ನೈವೇದ್ಯದ ಹಂಗೇತಕ್ಕೆ ? ಸುರಾಳ ನಿರಾಳಂಗೆ ಮಜ್ಜನದ ಹಂಗೇತಕ್ಕೆ ? ಸ್ವಯಂಜ್ಯೋತಿರ್ಮಯಂಗೆ ದೀಪಾರಾಧನೆಯ ಹಂಗೇತಕ್ಕೆ ? ಸುವಾಸನೆ ಸೂಕ್ಷ್ಮಗಂಧ ಕರ್ಪೂರಗೌರಂಗೆ ಪುಷ್ಪದ ಹಂಗೇತಕ್ಕೆ ? ಮಾಟದಲಿ ಮನ ನಂಬುಗೆಯಿಲ್ಲದ, ಅಹಂಕಾರಕ್ಕೀಡಾದ, ಭಕ್ತಿಯೆಂಬ ಪಸಾರವನಿಕ್ಕಿ ಹೊಲೆಹದಿನೆಂಟುಜನ್ಮವ ಹೊರೆವುದರಿಂದ ಅಂಗೈಯಲೊರಸಿ ಮುಕ್ತಿಯ ಮೂಲ ಶಿಖಿರಂಧ್ರದ ಕಾಮನ ಸುಟ್ಟು ಶುದ್ಭಸ್ಫಟಿಕ ಸ್ವಯಂಜ್ಯೋತಿಯನು ಸುನಾಳದಿಂದ ಹಂ ಕ್ಷಂ ಎಂಬೆರಡಕ್ಷರವ ಸ್ವಯಾನುಭಾವಭಕ್ತಿನಿರ್ವಾಣವಾದವರನೆನಗೊಮ್ಮೆ ತೋರಿದೆ. ಶ್ರೀಗಿರಿ ಚೆನ್ನ ಮಲ್ಲಿಕಾರ್ಜುನಾ.

ನಿತ್ಯತೃಪ್ತಂಗೆ ನೈವೇದ್ಯದ ಹಂಗೇತಕ್ಕೆ ? Read More »

ನೋಡೆನೆಂಬವರ ನೋಡಿಸುವೆ,

ನೋಡೆನೆಂಬವರ ನೋಡಿಸುವೆ, ನುಡಿಯೆನೆಂಬವರ ನುಡಿಯಿಸುವೆ, ಒಲ್ಲೆನೆಂಬವರನೊಲಿಸುವೆ, ಒಲಿದೆನೆಂಬವರ ತೊಲಗಿಸುವೆ ನೋಡಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ, ನೀನಲ್ಲದನ್ಯರ ಮುಖದ ನೋಡೆನೆಂದಡೆ ನೋಡುವಂತೆ ಮಾಡಿದೆಯಲ್ಲಾ ಲಿಂಗವೆ ?

ನೋಡೆನೆಂಬವರ ನೋಡಿಸುವೆ, Read More »

ನೋಡುವ ಕಂಗಳಿಗೆ ರೂಪಿಂಬಾಗಿರಲು

ನೋಡುವ ಕಂಗಳಿಗೆ ರೂಪಿಂಬಾಗಿರಲು ನೀವು ಮನನಾಚದೆ ಬಂದಿರಣ್ಣಾ. ಕೇಳಿದ ಶ್ರೋತ್ರಸೊಗಸಿಗೆ ನೀವು ಮರುಳಾಗಿ ಬಂದಿರಣ್ಣಾ. ನಾರಿಯೆಂಬ ರೂಪಿಂಗೆ ನೀವು ಒಲಿದು ಬಂದಿರಣ್ಣಾ. ಮೂತ್ರವು ಬಿಂದು ಒಸರುವ ನಾಳವೆಂದು ಕಂಗಾಣದೆ ಮುಂದುಗೆಟ್ಟು ಬಂದಿರಣ್ಣಾ. ಬುದ್ಧಿಗೇಡಿತನದಿಂದ ಪರಮಾರ್ಥದ ಸುಖವ ಹೋಗಲಾಡಿಸಿಕೊಂಡು ಇದಾವ ಕಾರಣವೆಂದರಿಯದೆ, ನೀವು ನರಕಹೇತುವೆಂದರಿತು ಮನ ಹೇಸದೆ ಬಂದಿರಣ್ಣಾ. ಚೆನ್ನಮಲ್ಲಿಕಾರ್ಜುನನಲ್ಲದೆ ಮಿಕ್ಕಿಹ ಪುರುಷರೆನಗೆ ಸಹೋದರರು. ಅಛೀ ಹೋಗಾ ಮರುಳೆ.

ನೋಡುವ ಕಂಗಳಿಗೆ ರೂಪಿಂಬಾಗಿರಲು Read More »

ನೆಲದ ಮರೆಯ ನಿಧಾನದಂತೆ

ನೆಲದ ಮರೆಯ ನಿಧಾನದಂತೆ ಫಲದ ಮರೆಯ ರುಚಿಯಂತೆ ಶಿಲೆಯ ಮರೆಯ ಹೇಮದಂತೆ ತಿಲದ ಮರೆಯ ತೈಲದಂತೆ ಮರದ ಮರೆಯ ತೇಜದಂತೆ ಭಾವದ ಮರೆಯ ಬ್ರಹ್ಮವಾಗಿಪ್ಪ ಚೆನ್ನಮಲ್ಲಿಕಾರ್ಜುನನ ನಿಲವನರಿಯಬಾರದು.

ನೆಲದ ಮರೆಯ ನಿಧಾನದಂತೆ Read More »

ನಾಳದ ಮರೆಯ ನಾಚಿಕೆ,

ನಾಳದ ಮರೆಯ ನಾಚಿಕೆ, ನೂಲಮರೆಯಲ್ಲಿ ಅಡಗಿತ್ತೆಂದು ಅಂಜುವರು, ಅಳುಕುವರು. ಮನ ಮೆಚ್ಚಿದಭಿಮಾನಕ್ಕೆ ಆವುದು ಮರೆ ಹೇಳಾ ? ಕಾಯ ಮಣ್ಣೆಂದು ಕಳೆದ ಬಳಿಕ, ದೇಹದಭಿಮಾನ ಅಲ್ಲಿಯೇ ಹೋಯಿತ್ತು. ಪ್ರಾಣ ಬಯಲೆಂದು ಕಳೆದ ಬಳಿಕ, ಮನದ ಲಜ್ಜೆಯಲ್ಲಿಯೆ ಹೋಯಿತ್ತು. ಚೆನ್ನಮಲ್ಲಿಕಾರ್ಜುನನ ಕೂಡಿ ಲಜ್ಜೆಗೆಟ್ಟವಳ ಉಡಿಗೆಯ ಸೆಳೆದುಕೊಂಡಡೆ, ಮುಚ್ಚಿದ ಸೀರೆ ಹೋದರೆ ಅಂಜುವರೆ ಮರುಳೆ ?

ನಾಳದ ಮರೆಯ ನಾಚಿಕೆ, Read More »

ನಾನುಣ್ಣದ ಮುನ್ನವೆ ಜಂಗಮಕ್ಕೆ

ನಾನುಣ್ಣದ ಮುನ್ನವೆ ಜಂಗಮಕ್ಕೆ ಅಮೃತಾನ್ನಾದಿ ನೈವೇದ್ಯವ ನೀಡುವೆ. ನಾನುಡದ ಮುನ್ನವೆ ಜಂಗಮಕ್ಕೆ ದೇವಾಂಗಾದಿ ವಸ್ತ್ರವನುಡಿಸುವೆ. ನಾನು ಹೂಸದ ಮುನ್ನವೆ ಜಂಗಮಕ್ಕೆ ಸುಗಂಧಾದಿ ಪರಿಮಳದ್ರವ್ಯವ ಹೂಸುವೆ. ನಾನು ಮುಡಿಯದ ಮುನ್ನವೆ ಜಂಗಮಕ್ಕೆ ಪರಿಪರಿಯ ಪುಷ್ಪವ ಮುಡಿಸುವೆ. ನಾನು ತೊಡದ ಮುನ್ನವೆ ಜಂಗಮಕ್ಕೆ ತೊಡಿಗೆಯ ತೊಡಿಸುವೆ. ನಾನಾವಾವ ಭೋಗವ ಭೋಗಿಸುವದ ಜಂಗಮಕ್ಕೆ ಭೋಗಿಸಲಿತ್ತು, ಆ ಶೇಷಪ್ರಸಾದವ ಲಿಂಗಕ್ಕಿತ್ತು. ಭೋಗಿಸಿದ ಬಳಿಕಲಲ್ಲದೆ ಭೋಗಿಸಿದಡೆ ಬಸವಣ್ಣಾ, ನಿಮ್ಮಾಣೆಯಯ್ಯಾ ಚೆನ್ನಮಲ್ಲಿಕಾರ್ಜುನಾ.

ನಾನುಣ್ಣದ ಮುನ್ನವೆ ಜಂಗಮಕ್ಕೆ Read More »

ನಾನು ಮಜ್ಜನವ ಮಾಡುವುದಕ್ಕೆ ಮುನ್ನವೆ

ನಾನು ಮಜ್ಜನವ ಮಾಡುವುದಕ್ಕೆ ಮುನ್ನವೆ ಜಂಗಮಕ್ಕೆ ಮಜ್ಜನವ ಮಾಡಿಸುವೆ. ನಾನು ಸೀರೆಯನುಡುವುದಕ್ಕೆ ಮುನ್ನವೆ ಜಂಗಮಕ್ಕೆ ದೇವಾಂಗವನುಡಿಸುವೆ. ನಾನು ಪರಿಮಳವ ಲೇಪಿಸುವುದಕ್ಕೆ ಮುನ್ನವೆ ಜಂಗಮಕ್ಕೆ ಸುಗಂಧದ್ರವ್ಯಂಗಳ ಲೇಪಿಸುವೆ. ನಾನು ಅಕ್ಷತೆಯನಿಡುವುದಕ್ಕೆ ಮುನ್ನವೆ ಜಂಗಮಕ್ಕೆ ಅಕ್ಷತೆಯನಿಡುವೆ. ನಾನು ಪುಷ್ಪವ ಮುಡಿವುದಕ್ಕೆ ಮುನ್ನವೆ ಜಂಗಮಕ್ಕೆ ಪರಿಮಳಪುಷ್ಪವ ಮುಡಿಸುವೆ. ನಾನು ಧೂಪವಾಸನೆಯ ಕೊಳ್ಳುವ ಮುನ್ನವೆ ಜಂಗಮಕ್ಕೆ ಧೂಪವಾಸನೆಯ ಕೊಡುವೆ. ನಾನು ದೀಪಾರತಿಯ ನೋಡುವ ಮುನ್ನವೆ ಜಂಗಮಕ್ಕೆ ಆರತಿಯ ನೋಡಿಸುವೆ. ನಾನು ಸಕಲ ಪದಾರ್ಥಂಗಳ ಸ್ವೀಕರಿಸುವ ಮುನ್ನವೆ ಜಂಗಮಕ್ಕೆ ಮೃಷ್ಟಾನ್ನವ ನೀಡುವೆ. ನಾನು ಪಾನಂಗಳ

ನಾನು ಮಜ್ಜನವ ಮಾಡುವುದಕ್ಕೆ ಮುನ್ನವೆ Read More »

ನಾನು ನಿನಗೊಲಿದೆ, ನೀನು ಎನಗೊಲಿದೆ.

ನಾನು ನಿನಗೊಲಿದೆ, ನೀನು ಎನಗೊಲಿದೆ. ನೀನೆನ್ನನಗಲದಿಪ್ಪೆ, ನಾನಿನ್ನನಗಲದಿಪ್ಪೆನಯ್ಯಾ. ನಿನಗೆ ಎನಗೆ ಬೇರೊಂದು ಠಾವುಂಟೆ ? ನೀನು ಕರುಣಿಯೆಂಬುದ ಬಲ್ಲೆನು ; ನೀನಿರಿಸಿದ ಗತಿಯೊಳಗಿಪ್ಪವಳಾನು. ನೀನೆ ಬಲ್ಲೆ ಚೆನ್ನಮಲ್ಲಿಕಾರ್ಜುನಾ.

ನಾನು ನಿನಗೊಲಿದೆ, ನೀನು ಎನಗೊಲಿದೆ. Read More »