ಶೋಕವ್ಯಾತಕೆ ಮನವೆ ನಿನಗೆ ಇನ್ನು
ಶೋಕವ್ಯಾತಕೆ ಮನವೆ ನಿನಗೆ ಇನ್ನು ಈ ಕುಮಾರಕ ನಿನಗೆ ಗತಿಯ ವಿಧಿಸುವನೇನೊ ಕೃಷ್ಣ ಸೋದರಮಾವ ಮತ್ತೆ ಭೀಮಸೇನ ಜೇಷ್ಠ ಪಿತೃ ಪಾರ್ಥಾದಿ ಮಹಧೀರರು ಇಷ್ಟು ಮಂದಿರಲಾಗಿ ಅಭಿಮನ್ಯು ಪ್ರಾಣವನು ಬಿಟ್ಟು ಹೋಗಲು ಒಬ್ಬರಾದರುಳುಹಿದರೇನೊ ||1|| ವಸಿಷ್ಠ ಮುನಿಪರಿಗೆ ನೂರುಮಂದಿ ಸುತರು ಅಸಮ ಸಾಸಿಗರು ಮಹ ಶೀಲಜ್ಞರು ಕುಶಲದಿಂದಿರುತಿರ್ದು ಅ-ಕಾಲ ಮೃತ್ಯುವಿನ ವಶರಾಗಿ ಪೋದರು ನೋಡಿ ಅಚ್ಚರಿಯ||2|| ಇಂಥವರಿಗೀ ರೀತಿ ನಿನಗಾವ ಸ್ವಾತಂತ್ರ್ಯ ಸಂತೋಷವನು ತೊಡೋ ಮನಸಿನಲ್ಲಿ ಕಂತು ಜನಕ ನಮ್ಮ ವಿಜಯವಿಠ್ಠಲನಂಘ್ರಿ ಸ್ವಾಂತದಲ್ಲಿ ನೆನೆನೆನೆದು ಸುಖಿಯಾಗು ಮನವೆ||3||
ಶೋಕವ್ಯಾತಕೆ ಮನವೆ ನಿನಗೆ ಇನ್ನು Read More »