ವಿರಹ ನಿಲ್ಲದು ಕಾಣೊ

ವಿರಹ ನಿಲ್ಲದು ಕಾಣೊ ನಿನ್ನ ಕೂಡದೆ | ಗುರುತ ಮಾಡಿದ ಸೊಗಸು ಮರಿಯದೊ ಗೋಪಾಲ ಕಣ್ಣುನೋಟ ತಿರುಹಿ ನೀ ಕೈಯ ಮುದರಿ ವರಹ | ಹೊನ್ನು ಕಂಭದಲಿ ನಿಂದು ತೋರಿ | ಭ್ರಮಿಸಿ ಕುನ್ನಿಗೆ ಕಣಿಯನಿಕ್ಕಿ ಹೊಡೆಯೊನಾಗಿ | ಹೆಣ್ಣು ಭಾವನ ಕರೆದು ಸೂಚನೆ ಮಾಡಿದನು ||1|| ಪುಟ್ಟ ಹೆಜ್ಜೆಲೆ ಸಾಗಿ ಮುದ್ದು ಕೊಡಲು ಬಯಸಿ | ದೃಷ್ಟಿಯಿಂದ ನೋಡಲು ಭ್ರಾಂತಳಾಗಿ | ಅಟ್ಟ ಅಡಿವೆಯೊಳು ನಡಿವೆ ನಾ ಪೋಗಲು | ದುಷ್ಟ ನಾದಿನಿ ಕಂಡು ಮಾವಗೆ […]

ವಿರಹ ನಿಲ್ಲದು ಕಾಣೊ Read More »

ವಿಠ್ಠಲನ ಪದವನಜ ತುಂಬೆ

ವಿಠ್ಠಲನ ಪದವನಜ ತುಂಬೆ ಸೃಷ್ಟಿಯೊಳಗೆ ಎನ್ನ ಬಿಡದೆ ಪೊರೆ ಎಂಬೆ e್ಞÁನ ಭಕುತಿ ವೈರಾಗ್ಯದಲಿ ಜಾಣ ದಾನ ಮಾಡುವರೊಳಗೆ ಪೂತುರೆ ನೀನೆ ನಿಪುಣ ಮಾನಸದಲಿ ಹರಿಯ ಧ್ಯಾನ ಮಾಡುವ ಆನಂದಮತಿ ವಿಮಲ ಸರ್ವವಿಧಾನ ||1|| ಮಾತುಮಾತಿಗೆ ನೆನೆಸಿದವರ ಭವದ ಮಾಯಾ ಸೇತುವಿಯ ಕಡಿದು ಸಂತತವಾಗಿ ಸಹಾಯಾ ಪ್ರೀತಿಯಲಿ ಬಂದು ಶ್ರೀ ಹರಿಯ ಪದ ಸೇವಿಯಾ ತಾ ತೋರಿ ತಿಳಿಸುವಾ ಪ್ರಿಯನೆನಿಸುವಾ ಭೂತಳದೊಳು ಗುರು ಪುರಂದರ ರಾಯಾ ||2|| ಪಾವನ ಶರೀರ ಎನಗೆ ವಜ್ರ ಪಂಜರಾ ಕೂವಾದಿ ಮತಹರ

ವಿಠ್ಠಲನ ಪದವನಜ ತುಂಬೆ Read More »

ವಿಠ್ಠಲ ವಿಮಲಶೀಲ ಬಾಲಗೋಪಾಲ

ವಿಠ್ಠಲ ವಿಮಲಶೀಲ ಬಾಲಗೋಪಾಲ ದಿಟ್ಟ ಮೂರುತಿ ಶ್ರೀಲೋಲ ಅಟ್ಟುವ ಖಳರೆದೆ ಕುಟ್ಟಿ ಕೆಡಹಿ ಮತಿ ಗೊಟ್ಟು ಸಲಹೊ ಜಗಜಟ್ಟಿ ಪಂಢರಿರಾಯ ಯದುವಂಶೋದ್ಭವ ಕೇಶವ ಹೇ ಏಕಮೇವ ಮಧುವೈರಿ ಮಹಾವೈಭವ ಸದಮರಾನಂದ ಸ್ವಭಾವ ಮತ್ಕುಲ ದೈವ ಹೃದಯಾಬ್ಜ ಇನ ಬಾಂಧವ ವಿಧಿನದಿಪಿತ ನಾರದ ಮುನಿ ಸನ್ನುತ ಕದನ ಕರ್ಕಶ ವೈರಿ ಸದಮಲಗಾತುರ ಪದೆ ಪದೆಗೆ ಸಂಪದವಿಯ ಬಯಸುವ ಮೃದು ಮನದೊಳು ನಿಲ್ಲು ಪದುಮಿನಿ ವಲ್ಲಭ||1|| ತುತಿಪರ ದೇವ ಪ್ರಾರ್ಥಿಪ ನಿತ್ಯ ಪ್ರಭಾವ ಪತಿತಪಾವನ ಸುರ ಜೀವ ಅತಿಶಯ ಲೀಲಾಮಾನವ

ವಿಠ್ಠಲ ವಿಮಲಶೀಲ ಬಾಲಗೋಪಾಲ Read More »

ವಿಠಲಾ ನಿನ್ನ ನಂಬಿದೆ ಎನ್ನ ಕಾಯೋ

ವಿಠಲಾ ನಿನ್ನ ನಂಬಿದೆ ಎನ್ನ ಕಾಯೋ | ಪುಟ್ಟುವದು ಬಿಡಿಸೊ ಎನ್ನವರೊಳಗಿರಿಸೊ ಬಲುಕಾಲ ಮಲ-ಮೂತ್ರ ಡೊಳ್ಳಿನೊಳು ಬಿದ್ದು | ಹಲುಬಿದೆ ಒಂದಿಷ್ಟು ನೆಲೆಗಾಣದೆ ನಾನು || ಹಲವು ಮಾತೇನು ಎನಗೆ ಬಿಡದು | ಸಲಹಬೇಕಯ್ಯಾ ಸಮುದ್ರ ಶಯ್ಯಾ ||1|| ಕರ ಪಿಡಿದು ಎತ್ತುವ ಬಿರುದು ಪರಾಕ್ರಮ | ಮರಳಿ ಮಿಗಿಲೊಂದು ದೇವರಿಗೆ ಉಂಟೆ || ಮರೆವು ಮಾಡದೆ ಮಹಾದುರಿತವ ಪರಿ_ | ಹರಿಸು ಸ್ಮರಣೆಯನ್ನು ಇತ್ತು ಕೀರ್ತನೆ ಪೇಳಿಸೋ||2|| ಬಿನ್ನಹ ಲಾಲಿಸು ಚೆನ್ನ ಲಕುಮಿಪತಿ | ಚೆನ್ನಾಗಿಡು

ವಿಠಲಾ ನಿನ್ನ ನಂಬಿದೆ ಎನ್ನ ಕಾಯೋ Read More »

ವಿಜಯವಿಠ್ಠಲ ವಿಜಯವಿಠ್ಠಲ

ವಿಜಯವಿಠ್ಠಲ ವಿಜಯವಿಠ್ಠಲ ವಿಜಯವಿಠ್ಠಲ ಶ್ರೀ ವಿಜಯವಿಠ್ಠಲ ವನಚರ ನಗಧರ ಅವನಿಯ ಉದ್ಧಾರ ಹನನ ಮಾಡಿದಿಯೊ ಕಾನನ ವೇಗದಿ ಭು- ವನ ದಾನದ ನೆವನನು ಮಾಡಿ ಗಂಗೆಯ ಹ – ವಣದಿ ಪಡದೋ ಶ್ರೀ ವಿಜಯವಿಠ್ಠಲಾ ||1|| ಛಲದಿಂದ ಕುಲ ಕೋಲಾಹಲ ಮಾಡಿಸಿ ನೀ ತರಿದೆ ಬಾಲೆಯರ ಬಾಲರ ಬಿಡದೆ ಸುಲಭದಿ ಕರ್ಣಗೆ ಒಲಿದು ಪೇಳಿದೆ ಆ ಸುಲಲಿತಾ ಭಾರ್ಗವ ವಿಜಯವಿಠ್ಠಲ||2|| ಶತಮಖರಿಪು ಲೋಕಪಿತನೊರವಿನಿಂದಲಿ ಖತಿ ಸಕಲರಿಗೆ ನೀವು ತರಿದಿರಲು ಪತಿತಪಾವನ ರಾಮ ಅತಿ ವೇಗ ದನುಜನ ಹತವ

ವಿಜಯವಿಠ್ಠಲ ವಿಜಯವಿಠ್ಠಲ Read More »

ವಿಜಯವಿಠ್ಠಲ ನಾಮ

ವಿಜಯವಿಠ್ಠಲ ನಾಮ ಭಜಿಸಿದಾ ಮಾನವಗೆ ಸತತ ಸಂಪದವಕ್ಕು ಕಾಯ ಶುಚಿಯಾಗುವದು ಕಠಿನತನ ಪೋಗುವದು ಆಯು ಹೆಚ್ಚುವುದು ನಿಯೋಗಿ ಯಾಹಾ ನಾಯಿ ಮೊದಲಾದ ಪ್ರಾರಬ್ಧ ಜನುಮಗಳಿರಲು ಬಾಯಿಲಿಂದಾಕ್ಷಣ ತೀರಿ ಪೋಪವು ಕೇಳಿ ||1|| ದ್ವೇಷಿಗಳು ಎಲ್ಲ ಬಾಂಧವರಾಗಿ ಇಪ್ಪರು ದ್ವೇಷ ಪುಟ್ಟದು ತನಗೇತರ ಮೇಲೆ ದೇಶ ಮಧ್ಯದಲಿ ತಾನೆ ಎಲ್ಲಿ ಇದ್ದರೂ ಕೋಶಾಧಿಪತಿಯಾಗಿ ಸಂಚರಿಸುತಿಪ್ಪರು||2|| ಹೀನ ವಿಷಯಂಗಳಿಗೆ ಅವನ ಮನವೆರಗಿದರೆ ಕಾಣಿಸುವನು ತಾನೆ ಮುಂದೊಲಿದು ಏನು ಹೇಳಲಿ ಹರಿಯ ಅನುಕಂಪನಾತನಕೆ ಏಣಿಸಿ ಪೊಗಳಿದರೆ ಕಾಲ ಕಡೆಗಾಣನು ||3|| ದೇವಾದಿ

ವಿಜಯವಿಠ್ಠಲ ನಾಮ Read More »

ವಿಗ್ರಹವನು ನಿಲಿಸೊ ವೆಂಕಟ

ವಿಗ್ರಹವನು ನಿಲಿಸೊ ವೆಂಕಟ ಗಗ- ನಾಗ್ರಕ್ಕೆ ಬೆಳೆದು ಗಂಗೆಯ ಪಡೆವ ನಿನ್ನ ರನ್ನದ ಮಕುಟ ಸುವರ್ಣ ಕುಂಡಲ ತೇಜ ಚೆನ್ನ ಗಂಡಸ್ಥಳದಿ ತೂಗಿ ಪೊಳೆವ ನಿನ್ನ||1|| ಕೊರಳ ತ್ರಿರೇಖೆಯು ಉರು ಕೌಸ್ತುಭಹಾರ ಉರದಲ್ಲಿ ಶ್ರೀ ವತ್ಸಧರಿಸಿ ಮೆರೆವ ನಿನ್ನ ||2|| ಕುಕ್ಷಿಯೊಳಗೆ ಲಕ್ಷ ಲೋಕವನಡಗಿಸಿ ಅ- ಪೇಕ್ಷೆಯಿಂ ಸುಜನರ ರಕ್ಷಿಸುವ ನಿನ್ನ||3|| ನಖದೊಳನಂತ ಬ್ರಹ್ಮಾಂಡವನಡಗಿಸಿ ಮಕ್ಕಳಾಟಿಕೆಯಂತೆ ಮರುಳುಮಾಡುವ ನಿನ್ನ||4|| ಉತ್ಪತ್ತಿ ಸ್ಥಿತಿ ಲಯ ಕಾರಣಕರ್ತ, ಜ- ಗತ್ಪತಿ ವಿಜಯವಿಠ್ಠಲ ವೆಂಕಟ ||5||

ವಿಗ್ರಹವನು ನಿಲಿಸೊ ವೆಂಕಟ Read More »

ವಾತನ್ನ ಜಯಾಜಾತನ್ನ

ವಾತನ್ನ ಜಯಾಜಾತನ್ನ ಲೋಕ- ಪ್ರೀತನ್ನ ಸ್ತುತಿಸಿ ಖ್ಯಾತನ್ನ ವಿಷವ ನುಂಗಿದ ಮಹಾಶೌರ್ಯನ್ನ ನಿತ್ಯ ಅಸಮ ಸುಂದರ ಮತಿಧಾರ್ಯನ್ನ ನಿಶಾಚರ ಕುಲದೋಷ ಸೂರ್ಯನ್ನ ಆರಾ ಧಿಸುವ ಭಕ್ತರ ಸುಕಾರ್ಯನ್ನ ||1|| ವಾನರ ಕುಲದೊಳು ಧೈರ್ಯನ್ನ ಮುದ್ದು ಆನನ ಗೀರ್ವಾಣವರ್ಯನ್ನ ಆನಂದ ವಿe್ಞÁನ ಚರ್ಯನ್ನ ದುಷ್ಟ – ದಾನವರಳಿದತಿ ವೀರ್ಯನ್ನ ||2|| ದ್ವಿಜರಾಜ ಕುಲಾಗ್ರಣಿ ಭೀಮನ್ನ ಮಹ ದ್ವಿಜಕೇತ ನಂಘ್ರಿಗೆ ಪ್ರೇಮನ್ನ ದ್ವಿಜರ ಪಾಲಿಸಿದ ನಿಸ್ಸೀಮನ್ನ ಕುರು ವ್ರಜವ ಸದೆದ ಸಾರ್ವಭೌಮನ್ನ||3|| ಅದ್ವೈತ ಮತ ಕೋಲಾಹ ಲನ್ನ ವೇದ ಸಿದ್ಧಾಂತ

ವಾತನ್ನ ಜಯಾಜಾತನ್ನ Read More »

ವಾಣೀ ಪರಮ ಕಲ್ಯಾಣಿ

ವಾಣೀ ಪರಮ ಕಲ್ಯಾಣಿ – ವಾರಿಜೋದ್ಭವನ ರಾಣೀ ನಾರೀ ಶಿರೋಮಣಿ ಕ್ಷೋಣಿಯೊಳಗೆ ಸರಿಗಾಣೆನೆ ನಿನಗೆ ಸು- ಪ್ರಾಣಿಯೆ ಹರಿಪದರೇಣು ಧರಿಪೆ ಸದಾ ಸರಸ್ವತಿ ನಿತ್ಯಾಸಾವಿತ್ರಿ ದೇವಿ ಗಾಯತ್ರಿ ಸರಸಿಜದಳ ಸುನೇತ್ರಿ ಸುರಮುನಿ ನಿಕರ ಸ್ತೋತ್ರಿ – ಶೋಭನಗಾತ್ರಿ ಕರುಣಾಸಾಗರೆ ಪವಿತ್ರಿ ಚರಣದಂದಿಗೆ ಪಂಚ ಬೆರಳು ಭೂಷಣ ಧ್ವನಿ ಸರವು ಕನಕ ಗೆಜ್ಜೆ ಸರಪಳಿ ಪೊಳೆವಾಂ- ಬರಧರೆ ಸುಂದರಿ ಎರಗುವೆ ಎನ್ನನು ಎರವು ಮಾಡದೆ ತ್ರಿಕರಣ ಶುಧ್ಧನೆ ಮಾಡೆ ||1|| ಸರ್ವರಾತ್ಮಕೆ ಪ್ರಖ್ಯಾತೆ-ಧವಳಗೀತೆ ಸರ್ವರಿಗೆ ಮಹಾ ಪ್ರೀತೆ ನಿರ್ವಾಹವಂತೆ

ವಾಣೀ ಪರಮ ಕಲ್ಯಾಣಿ Read More »

ವಾಣೀ ನೀ ತೋರೆ ವಾರಿಜನಾಭನ,

ವಾಣೀ ನೀ ತೋರೆ ವಾರಿಜನಾಭನ, ಮಹಾಲಾಭನ್ನ ನಿತ್ಯ ಸುಲಭನ ಭಾನು ಸನ್ನಿಭನ ಕ್ಷೋಣೀಯೊಳಗಣ ಪ್ರಾಣಶ್ರೇಷ್ಠ – ಜಗ ತ್ರಾಣನ ತೋರಿಸೆ ಭಾನು ಸನ್ನಿಭಳೆ ಚೈತನ್ಯರಾಣಿ ಪುಸ್ತಕಪಾಣಿ-ಸುನೀಲವೇಣಿ ಅತ್ಯಂತ ಮಹಿಮೆ ಗುಣಗುಣಶ್ರೇಣಿ ತ್ರಿಲೋಕ ಜನನಿ ಸತ್ಯವ ತೋರುತ ನಿತ್ಯೋಪಾದಿಲಿ ದೈತ್ಯರ ಮರ್ದಿಸಿ ಮುಕ್ತಿಯ ಕೊಡುತಿಹ ಸತ್ಯ ಸಂಕಲ್ಪಳೆ ನಿತ್ಯದಿ ಪೂಜಿಪೆ ತ್ವತ್ಪಾದಾಂಬುಜವಿತ್ತು ನೀ ಸಲಹೆ1 ನಾಲಿಗೆಯಲ್ಲಿ ಬಂದು ನಿಂದು ದಯದಿಂದ ಇಂದು ಶ್ರೀಲೋಲ ಹರಿಯೆ ದೈವವೆಂದು ಕೊಂಡಾಡೆ ಮುಂದು ಬೀಳುವ ಭವಣೆಯ ಕಾಲ ಹಿಂಗಿಸಿ ವಿ- ಶಾಲ ಮತಿಯ

ವಾಣೀ ನೀ ತೋರೆ ವಾರಿಜನಾಭನ, Read More »

ವಾಣಿಯರಸ ಪರಮೇಷ್ಠಿ ನಿರುತನಿಷ್ಠಿ

ವಾಣಿಯರಸ ಪರಮೇಷ್ಠಿ ನಿರುತನಿಷ್ಠಿ ಮಾಣದೆ ಕೊಡು ಮನಮುಟ್ಟಿ ನಾನಾ ನಾಡಿನೊಳು ನೀನೆ ಪಿರಿಯನೆಂದು ಆನಂದ ಮತಿಯಿಂದ ಗಾನವ ಮಾಡುವೆ ಪುರುಷನಾಮಕ ವಿಧಾತ ಹಂಸವರೂಥ ಸರಸಿಜ ಗರ್ಭ ಶಿವತಾತ ಪರಮ ಗುರುವೆ ವಿಖ್ಯಾತ ಪೂರ್ವ ಮಾರುತ ತಾರತಮ್ಯದೊಳುನ್ನತ ಹರ ಸಿರಿ ದೇವಿಯ ಚರಣ ರಜವನ್ನು ಪರಮಾಣು ಪ್ರದೇಶ ವರ ಶಬ್ದ ಪಿಡಿದು ತರುವಾಯ ಬಹುವಿಧ ಪರಿ ಪರಿಯಿಂದಲಿ ಸ್ಮರಿಸಿಕೊಳ್ಳುತ ಮೈಮರೆವ ಶತಾನಂದ ||1|| ಜಗವÀ ಪುಟ್ಟಿಸುವ ಮಹಾಧೀರ ತತ್ವಶರೀರ ಮಗುಳೆ ಅನಿರುದ್ಧಕುಮಾರ ಝಗಿಝಗಿಪ ಮಕುಟಧರ ಜೀವನೋದ್ಧಾರ ನಿಗಭಿಮಾನಿ ಚತುರ-ಮೊಗನೆ

ವಾಣಿಯರಸ ಪರಮೇಷ್ಠಿ ನಿರುತನಿಷ್ಠಿ Read More »

ವರ್ಣಿಸಲರಿಯೆ ನಿನ್ನ

ವರ್ಣಿಸಲರಿಯೆ ನಿನ್ನ | ವರ್ಣಿಸಲರಿಯೆ ಗು | ಣಾರ್ಣವ ಹರಿಯೆ ಸೂ | ವರ್ಣ ಗಿರೀಶ ಸು | ಪರ್ಣ ಗಮನ ರಂಗಾ ಮಣಿಮಯ ಮುಕುಟ ಕಾಂ | ಚನದ ಕುಂಡಲ ಕರ್ಣ | ಫಣಿಯ ಕಸ್ತೂರಿ ನಾಮ | ಮಿನುಗುವ ಹಸ್ತ ಕಂಕಣ ಬೆರಳುಂಗರ | ಎಣಿಗಾಣೆ ಕೊರಳ ಮುತ್ತಿನಹಾರ ಕೌಸ್ತುಭ | ಮಣಿರಿಪುಗಳದಲ್ಲಣ ಕಂಬು ಸೂದರು | ಶನ ಭುಜಕೀರ್ತಿ ಭೂ | ಷಣವಾದ ಶಿರ ಉರುವ ಒಪ್ಪಲು ಕಿಂ | ಕಿಣಿ ಕನಕಾಂಬರವ

ವರ್ಣಿಸಲರಿಯೆ ನಿನ್ನ Read More »

ವರದೆ ಸಮಸ್ತ ವರದೆ

ವರದೆ ಸಮಸ್ತ ವರದೆ | ಪರಮ ಭಕುತಿಯಿಂದ ತುತಿ | ಪರನ ಪೊರದೇ ನೋಡಿದಾಕ್ಷಣದಲ್ಲಿ ಅನಂತ ಜನ್ಮದಿಂದ | ಮಾಡಿದ ಪಾಪಗಳು ಪರಿದವಯ್ಯ | ಆಡಲೇನು ತೋಯ ಸ್ಪರ್ಶವಾಗಲು | ನಲಿ | ದಾಡಿದರು ಗೋತ್ರಜರು ಇವನ ಪುಣ್ಯಕ್ಕೆ ಎಣಿಯೇ ||1|| ಮಿಂದು ಮನಃಪೂರ್ವಕದಿ ಕೊಂಡಾಡಲು ವಳಗೆ | ಪೊಂದಿದ ದಾಸವರು ಸುಮ್ಮನಹರೋ | ವೃಂದಾರಕರ ಬಳಗ ಇವನ ಸಾಧನೆ ಮಾಳ್ಪಾ ನಂದದಲಿ ಇಪ್ಪನೆ ಅಭಿಮೊಗರಾಗಿ||2|| ವರನ ಕೊಡುವೆನೆಂದು ವೈಷ್ಣವ ಮಣಿಯಿಂದ | ಧರೆಯೊಳಗೆ ಜನಿಸದೆ ಜಗಜ್ಜನನಿ

ವರದೆ ಸಮಸ್ತ ವರದೆ Read More »

ವರಗಳನು ಕೊಡುವದು ವಾಸುಕಿಯ ಪ್ರಿಯಾ

ವರಗಳನು ಕೊಡುವದು ವಾಸುಕಿಯ ಪ್ರಿಯಾ | ಕರುಣದಿಂದಲಿ ಒಲಿದು ಕಂಡನಾತುರದಲಿ ಇಂದ್ರಸಮಾನ ದೇವತೆಯೆ ರತಿಪತಿಯೇ | ಇಂದಿರೇಶನ ನಿಜಕುಮಾರ ಮಾರ || ಬಂದು ಕಲ್ಪದಲಿ ಸುಂದರನೆನಿಸಿಕೊಂಡಿರ್ದ | ಬಂಧುವೇ ಅಹಂಕಾರ ಪ್ರಾಣನಿಂದಧಿಕನೆ ||1|| ವನಜ ಸಂಭವನು ಸೃಷ್ಟಿ ಸೃಜಿಪಗೋಸುಗ ಮನದಲ್ಲಿ ಪುಟ್ಟಿಸೆ ಚತುರ ಜನರ || ಮುನಿಗಳೊಳಗೆ ನೀ ಸನತ್ಕುಮಾರನಾಗಿ ಜನಿಸಿ | ಯೋಗ ಮಾರ್ಗದಲ್ಲಿ ಚಲಿಸಿದ ಕಾಮಾ ||2|| ತಾರಕಾಸುರನೆಂಬ ಬಹು ದುರುಳತನದಲ್ಲಿ | ಗಾರುಮಾಡುತಲಿರಲು ಸುರಗಣವನು || ಗೌರಿಮಹೇಶ್ವರರಿಗೆ ಪುತ್ರನಾಗಿ ಪುಟ್ಟಿ | ಧಾರುಣಿಯೊಳಗೆ

ವರಗಳನು ಕೊಡುವದು ವಾಸುಕಿಯ ಪ್ರಿಯಾ Read More »

ವಂದೇ ಮುಕುಂದ ನಮೊ

ವಂದೇ ಮುಕುಂದ ನಮೊ | ವಂದೇ ಮುಕುಂದ ನಮೊ | ವೃಂದಾರ ಕೇಶ ನಮೊ | ನಂದ ಮೂರುತಿ ಪರಮಾನಂದ ನರಸಿಂಹಾ ಬಿಸಿಜಪೀಠನ ವರವ ಪಡೆದು ಮಹಾರಾಜೇಂದ್ರ | ವಸುಮತಿಗೆ ತಾನೆ ಸ್ವಾಮಿ ಎಂದು || ಹಸುಳೆಯನು ಬಾಧಿಸಲು ಮೊರೆಯಿಡಲಾಕ್ಷಣ | ಮಿಸಣಿಪ ಕಂಭದಿ ಬಂದ ಭಳಿರೆ ನರಸಿಂಹಾ ||1|| ರೋಷವನೆ ತಾಳಿ ನಿಟ್ಟುಸುರಗೈಸಿಕೊಳುತಾ | ಸೂಸಿ ಕಿಡಿಗಳನುದುರೆ ಕುಪ್ಪಳಿಸುತ ಕಮ || ಲಾಸನಾದ್ಯರ ಪಾಲಿಸಿದ ನರಸಿಂಹಾ ||2|| ಅಜವಾಣಿ ನೆಲೆಯಲ್ಲಿ ವಾಸವಾಗಿದ್ದ ನರ | ಗಜಪಗೀಯ

ವಂದೇ ಮುಕುಂದ ನಮೊ Read More »

ವಂದಿಸು ವಂದಿಸು ಗುಣವ

ವಂದಿಸು ವಂದಿಸು ಗುಣವ ಕೊಂಡಾಡಿ ಅರ ವಿಂದನಾಭನ ಮೂರ್ತಿ ನೋಡಿ | ಹಾಹಾ | ಆ ನಂದ ಸಿಂಧುವಿನೊಳು ಪೊಂದು ಒಂದೆ ಭಕ್ತಿಯಿಂದ ಇಂದುವಿನಂದದಿಪ್ಪನಾ ಓಂಕಾರ ಪ್ರತಿಪಾದ್ಯನೀತಾ ಅಕಳಂಕ ಅಪ್ರಾಕೃತನೀತಾ ಬಿರು ದಾಂಕ ಅಖಂಡವ್ಯಾಪುತ ತನ್ನ ಸಂಕಲ್ಪಕ್ಕೆ ಮೀರಾಜಾತಾ | ಹಾಹಾ| ಪಂಕಜಸÀಖ ಕೋಟಿ ಸಂಕಾಶ ಸುರಗಣ ಲಂಕಾರವಾಗಿಪ್ಪ ವೆಂಕಟರಮಣನ್ನ ವಂದಿಸು ||1|| ಪ್ರಳಯದಲ್ಲಿ ವಟಪತ್ರದಲ್ಲಿ ಮಲಗಿಪ್ಪ ಭುವನ ಪವಿತ್ರ ನಿತ್ಯ ಬಲು ಲೀಲಾಚಿತ್ರ ವೈಚಿತ್ರ ಕರ್ಮ ನೆಲೆಗೊಳಿಸುವ ಶ್ರೀ ಕಳತ್ರ || ಹಾಹಾ || ಪೊಳೆವ

ವಂದಿಸು ವಂದಿಸು ಗುಣವ Read More »

ವಂದಿಪ ಬನ್ನಿ ನೀವೆಲ್ಲ ಚನ್ನಾಗಿ ಕುಂತಿ

ವಂದಿಪ ಬನ್ನಿ ನೀವೆಲ್ಲ ಚನ್ನಾಗಿ ಕುಂತಿ ಕಂದ ಭೀಮಗೆ ಸರಿಯಿಲ್ಲ ಎಂದೆಂದಿಗೆ ಬಿಡದೆ ಬಂದಾ ಪ್ರತಿಬಂಧಕಗಳ ನಿಂದಿರಗೊಳದಲೆ ಕಳಿವ ನಿತ್ಯ ಸುಳಿವಾ ಅರಿತುಳಿವಾ ಸತ್ಕೀರ್ತಿ ಪೊಳವ ಪ್ರಳಯಾಂತದಲ್ಲಿ ತಾನು ತಿಳಿದು ಸತ್ವ ಜೀವರ ನೆಲೆ ಗೊಳಿಸುವೆನೆಂದು ಬಲುಹರುಷದಲಿ ಜಲಜನಾಭನ ಚರಣಾಬ್ಜಕರಿಗೆ ಹಸ್ತ ಮುಗಿದು ತಲೆಬಾಗಿ ಬಿನ್ನೈಸಿದಾತಾ ಗುಣಜಾತಾ ಶ್ರುತಿವಿನುತ ಇದೇ ಕಾಯವನಿತ್ತ ||1|| ಅಂಡಾಂತದೊಳು ತನ್ನ ಮಂಡೆ ಮೇಲೆ ಭಾರವ ಕೊಂಡಾ ಸಹಸ್ರ ಫಣ ಕುಂಡಲಿಯ ಪೊತ್ತಾ ಗಂಡುಗಲಿ ಕೂರ್ಮನಾ ಕೊಂಡಾಡಲು ನಮಗೆ ತಂಡತಂಡದ ಮಹಾ ಸೌಖ್ಯವನೀವ

ವಂದಿಪ ಬನ್ನಿ ನೀವೆಲ್ಲ ಚನ್ನಾಗಿ ಕುಂತಿ Read More »

ವ್ಯರ್ಥವಾಯಿತಲ್ಲ ಜನ್ಮವು ಸಾರ್ಥಕಾಗಲಿಲ್ಲ

ವ್ಯರ್ಥವಾಯಿತಲ್ಲ ಜನ್ಮವು ಸಾರ್ಥಕಾಗಲಿಲ್ಲ ಅರ್ಥದಾಸೆಯಲಿ ಪೃಥ್ವಿಯೊಳಗೆ ಸುತ್ತಿಮತ್ತನಾಗಿ ಬಲು ಕೃತ್ಯಗಳನು ಮಾಡಿ ಹರಿಯ ನೆನಯಲಿಲ್ಲ ಹರುಷದಿ ಗರುವ ಪುಟ್ಟಿತಲ್ಲಪರಮ ಮೂಢರಲಿ ನಿರುತ ಸಂಗವ ಮಾಡಿಗುರು ಹಿರಿಯರ ದಯ ದೊರೆಯದೆ ಸುಮ್ಮನೆ||1|| ಏನು ಪೇಳಲೇನು ಎನಗೆ ಹೀನ ಬಿಡದು ಮುನ್ನಶ್ವಾನಗಿಂತಲು ಬಲು ಮಾನಗೆಟ್ಟು ನಾದೀನನಾಗಿ ಮನೆಮನೆಗಳ ತಿರುಗಿ ||2|| ಭಾಗವತರ ಪಾದಕ್ಕೊಂದಿನ ಬಾಗಿ ನಡೆಯಲಿಲ್ಲರಾಗುರಂಗು ಭಕ್ತಿ ಭಾವದೊಳುಬೀಗಿ ಚೆನ್ನಕೇಶವನನು ನೆನೆಯದೆ ||3||

ವ್ಯರ್ಥವಾಯಿತಲ್ಲ ಜನ್ಮವು ಸಾರ್ಥಕಾಗಲಿಲ್ಲ Read More »

ವಿಶ್ವಲೋಕೇಶ ವಿಶ್ವಲೋಕೇಶ ವಿಮಲೈಕ ಮೂರ್ತಿ

ವಿಶ್ವಲೋಕೇಶ ವಿಶ್ವಲೋಕೇಶ ವಿಮಲೈಕ ಮೂರ್ತಿವಿಶ್ವ ಉದ್ಧರ ವಿಶ್ವ e್ಞÁನರೂಪವಿಶ್ವದೊಳ ಹೊರಗು ನೀನಲ್ಲದೆ ಬೇರೆವಿಶ್ವನಾಟಕ ಸೂತ್ರಧಾರರುಂಟೆ ಹರಿಯೆ ಮುಕುಟ ಮಂಡೆಯಲಿ ಧ್ರುವಲೋಕ ಭುವನಾವಳಿಯುನಿಖಿಲ ಶ್ರುತಿ ನವರತುನ ನಿಟಿಲದಲ್ಲಿಮುಖದಲಿಂದ್ರರು ಅಗ್ನಿ ಸಪ್ತ ಋಷಿಗಳು ದ್ವಿಜರುಮುಖದ್ವಾರದುಸುರಿನಲಿ ಶ್ರುತಿ ಮರುತರುದೃಕುಯುಗದಿ ರವಿ ಶಶಿಯು ಎವೆಯಲ್ಲಿ ನಕ್ಷತ್ರಪ್ರಕಟ ಜಿಹ್ವೆಯ ವಾಣಿ ಕರ್ಣದ್ವಯದಿವಿಕಟ ಕಿವಿಯಲಿ ಅಶ್ವಿನಿದೇವತೆಗಳೆಲ್ಲಸಕಲ ಧರ್ಮವ ಪಡೆದೆಯೆಲೊ ಹರಿಯೆ ||1|| ಸ್ಕಂಧದಲಿ ಅತಿಥಿಗಳು ವಿದ್ಯಾತತಿಗಳು ಮಹಾಚಂದದರಸುಗಳು ಭುಜ ತೋಳಿನಲ್ಲಿಮುಂದುರದಿ ವಿಷ್ಣು ಹರ ಬ್ರಹ್ಮ ಸಹಿತುದರದಲಿಹಿಂದಿನ ಮಗ್ಗುಲಲಿ ಮನುಮುನಿಗಳುಮುಂದಿನ ಮಗ್ಗುಲಲಿ ಗಿರಿನಿಚಯಂಗಳುಸಂಧಿಯಲಿ ಮಕರಂದ ದೇವತೆಗಳುಮುಂದೊರೆದಿಹ ರೋಮಕೂಪದಗ್ರದಳತೆಯುವೃಂದಗಳ

ವಿಶ್ವಲೋಕೇಶ ವಿಶ್ವಲೋಕೇಶ ವಿಮಲೈಕ ಮೂರ್ತಿ Read More »

ವಾರಿಜ ಮುಖಿ ವಾರಿಜಾಕ್ಷಿ ವಾರಿಜ ಗಂಧಿ

ವಾರಿಜ ಮುಖಿ ವಾರಿಜಾಕ್ಷಿ ವಾರಿಜ ಗಂಧಿ ವಾರಿಸನಳಿಯನನುಓರಂತೆ ನೀ ಪೋಗಿ ಕರೆತಾರೆನ್ನಯ ಪ್ರಾಣಾಧಾರ ಕೇಶವ ಮೂರ್ತಿಯ ನಗ ವೈರಿಯಣುಗನಣ್ಣನಯ್ಯನಾಪ್ತಗೆ ಮಿಗೆ ಹುಟ್ಟಿದನ ತಮ್ಮನಸೊಗಸು ವಸ್ತ್ರಕೆ ಸೋತನ ಸುರಪುತ್ರನ ವಾಜಿಯನಿವ ವೈರಿಯ ಪಗೆಯಜಗದೊಳಗೆ ಹಾಟಿದೊಳೇರಾಟದ ವನವ… ನವನಿಂದ ನಗೆತೋರಿನಾವುನಿನಗೆಅಗಣಿತಾಭರಣವೀವೆನು ಅಂಗಜಾಗ್ನಿಯ ತಗಹ ಬಿಡಿಸೆ ತರುಣಿ ||1|| ಮಿಹಿರ ನಂದನನ ತಂದೆಯ ಪಗೆಯವನ ಮಾವನ ಹಿತನ ಮನೆವೆಸರಮಹಿ ವನ ಕೃತಿಗೊಡೆಯನ ಬಂಟನನುಜನ ಸಹಿಸಿ ತಮ್ಮನ ಮಿತ್ರನ ಕುಹಕದಿ ಶಾಪವಡೆದಳು ಪ್ರಸ್ತರವಾಗಿ ಗಗನ ಮಧ್ಯದೊಳಿರಲು…ಸಿ ಶಾಪವ ದನುಜ… ಕ್ಷಿತಿಯೊಳು ವಿವರಿಸುವವನ ಕರೆತಾರೆ

ವಾರಿಜ ಮುಖಿ ವಾರಿಜಾಕ್ಷಿ ವಾರಿಜ ಗಂಧಿ Read More »

ವರವ ಕೊಡು ಎನಗೆ ವಾಗ್ದೇವಿ

ವರವ ಕೊಡು ಎನಗೆ ವಾಗ್ದೇವಿ – ನಿಮ್ಮಚರಣ ಕಮಲಂಗಳ ದಯಮಾಡು ದೇವಿ ಶಶಿ ಮುಖದ ನಸುನಗೆಯ ಬಾಲೆಎಸೆವ ಕರ್ಣದ ಮುತ್ತಿನೋಲೆನಸುನಗುವ ಸುಪಲ್ಲ ಗುಣಶೀಲೆ – ದೇವಿಬಿಸಜಾಕ್ಷಿ ಎನ್ನ ಹೃದಯದೊಳು ನಿಂದವಳೆ ||1|| ಇಂಪು ಸೊಂಪಿನ ಚಂದ್ರ ಬಿಂಬೆಕೆಂಪು ತುಟಿಗಳ ನಾಸಿಕದ ರಂಭೆಜೊಂಪು ಮದನನ ಪೂರ್ಣ ಶಕ್ತಿ ಬೊಂಬೆ – ಒಳ್ಳೆಸಂಪಗೆ ಮುಡಿಗಿಟ್ಟು ರಾಜಿಪ ಶಾರದಾಂಬೆ||2|| ರವಿಕೋಟಿ ತೇಜಪ್ರಕಾಶೆ – ಮಹಾಕವಿ ಜನರ ಹೃತ್ಕಮಲ ವಾಸೆಅವಿರಳ ಪುರಿ ಕಾಗಿನೆಲೆಯಾದಿಕೇ-ಶವನ ಸುತನಿಗೆ ಸನ್ನುತ ರಾಣಿವಾಸೆ ||3||

ವರವ ಕೊಡು ಎನಗೆ ವಾಗ್ದೇವಿ Read More »

ವರಕವಿಗಳ ಮುಂದೆ ನರಕವಿಗಳ ವಿದ್ಯೆ ತೋರಬಾರದು

ವರಕವಿಗಳ ಮುಂದೆ ನರಕವಿಗಳ ವಿದ್ಯೆ ತೋರಬಾರದು – ಈಧರಣಿಯ ಕಲ್ಲಿಗೆ ಶರಣೆಂದು ಪೂಜೆಯ ಮಾಡಬಾರದು ಪಾಪಿಗಳಿದ್ದಲ್ಲಿ ರೂಪುಳ್ಳ ವಸ್ತುವ ತೋರಬಾರದು – ಬಹುಕೋಪಿಗಳಿದ್ದಲ್ಲಿ ಅನುಭವಗೋಷ್ಠಿಯ ಮಾಡಬಾರದು||1|| ಅಡಿ ಸತ್ತ ಮಡಕೆಗೆ ಜೋಡಿಸಿ ಒಲೆಗುಂಡು ಹೂಡಬಾರದು – ಬಹುಬಡತನ ಬಂದಾಗ ನೆಂಟರ ಬಾಗಿಲ ಸೇರಬಾರದು||2|| ಹರಿಯ ನಿಂದಿಸಿ ಹರ ಘನನೆಂದು ನರಕಕ್ಕೆ ಬೀಳಬಾರದು – ತಾಪರರನು ಬೈದು ಪಾತಕಕೆ ಮುನ್ನೊಳಗಾಗಬಾರದು ||3|| ಮಡದಿ ನುಡಿಯ ಕೇಳಿ ಜಗಳಕೊಬ್ಬರ ಕೂಡೆ ಹೋಗಬಾರದು – ಬಾ-ಯ್ಬಡಿಕರು ಇದ್ದಲ್ಲಿ ವಸ್ತಿ ಬಿಡಾರವ ಮಾಡಬಾರದು

ವರಕವಿಗಳ ಮುಂದೆ ನರಕವಿಗಳ ವಿದ್ಯೆ ತೋರಬಾರದು Read More »

ವನಜ ಮುಖಿಯರ ಮನದಿಷ್ಟಾರ್ಥವನೀವನ

ವನಜ ಮುಖಿಯರ ಮನದಿಷ್ಟಾರ್ಥವನೀವನ – ಶ್ರೀ ಕೃಷ್ಣ ಎನ್ನಿರೊಮನು ಮುನಿಜನರನು ಅನುದಿನದೊಳು ಪೊರೆವನ – ಶ್ರೀ ಕೃಷ್ಣ ಎನ್ನಿರೊ ಪಣ್ಣ ಕೊಯ್ದನನುಜಗೆ ಸಹಾಯನಾದನ _ ಶ್ರೀ ಕೃಷ್ಣ ಎನ್ನಿರೊಸಣ್ಣ ಸೀರೆಯ ನಲ್ವೆಣ್ಣು ರೂಪಾದನ _ ಶ್ರೀ ಕೃಷ್ಣ ಎನ್ನಿರೊಅಣ್ಣನ ವೈರಿಯ ಮಗನ ಕೊಂದಾತನ _ ಶ್ರೀ ಕೃಷ್ಣ ಎನ್ನಿರೊಬಣ್ಣಿಸಲರಿಯೆ ನಾನಿವನ ಮಹಿಮೆಯ _ ಶ್ರೀ ಕೃಷ್ಣ ಎನ್ನಿರೊ ||1|| ಮುತ್ತಯ್ಯನಿರೆ ಮೊಮ್ಮಗಗೆ ಪಟ್ಟಗಟ್ಟಿದನ _ ಶ್ರೀ ಕೃಷ್ಣ ಎನ್ನಿರೊಹೆತ್ತವಳಿರೆ ತಾಯ ಬೇರೆ ಪಡೆದಾತನ _ ಶ್ರೀ ಕೃಷ್ಣ

ವನಜ ಮುಖಿಯರ ಮನದಿಷ್ಟಾರ್ಥವನೀವನ Read More »

ಕನಕ ಧಾರಾ ಸ್ತೋತ್ರಮ್

ವಂದೇ ವಂದಾರು ಮಂದಾರಮಿಂದಿರಾನಂದ ಕಂದಲಂ ಅಮಂದಾನಂದ ಸಂದೋಹ ಬಂಧುರಂ ಸಿಂಧುರಾನನಮ್ ಅಂಗಂ ಹರೇಃ ಪುಲಕಭೂಷಣಮಾಶ್ರಯಂತೀ ಭೃಂಗಾಂಗನೇವ ಮುಕುಳಾಭರಣಂ ತಮಾಲಮ್ | ಅಂಗೀಕೃತಾಖಿಲ ವಿಭೂತಿರಪಾಂಗಲೀಲಾ ಮಾಂಗಲ್ಯದಾಸ್ತು ಮಮ ಮಂಗಳದೇವತಾಯಾಃ || 1 || ಮುಗ್ಧಾ ಮುಹುರ್ವಿದಧತೀ ವದನೇ ಮುರಾರೇಃ ಪ್ರೇಮತ್ರಪಾಪ್ರಣಿಹಿತಾನಿ ಗತಾಗತಾನಿ | ಮಾಲಾದೃಶೋರ್ಮಧುಕರೀವ ಮಹೋತ್ಪಲೇ ಯಾ ಸಾ ಮೇ ಶ್ರಿಯಂ ದಿಶತು ಸಾಗರ ಸಂಭವಾ ಯಾಃ || 2 || ಆಮೀಲಿತಾಕ್ಷಮಧಿಗ್ಯಮ ಮುದಾ ಮುಕುಂದಮ್ ಆನಂದಕಂದಮನಿಮೇಷಮನಂಗ ತಂತ್ರಮ್ | ಆಕೇಕರಸ್ಥಿತಕನೀನಿಕಪಕ್ಷ್ಮನೇತ್ರಂ ಭೂತ್ಯೈ ಭವನ್ಮಮ ಭುಜಂಗ ಶಯಾಂಗನಾ ಯಾಃ

ಕನಕ ಧಾರಾ ಸ್ತೋತ್ರಮ್ Read More »

ಶ್ರೀರಾಮಭುಜಂಗಪ್ರಯಾತಸ್ತೋತ್ರಮ್

ವಿಶುದ್ಧಂ ಪರಂ ಸಚ್ಚಿದಾನಂದರೂಪಂ ಗುಣಾಧಾರಮಾಧಾರಹೀನಂ ವರೇಣ್ಯಮ್ | ಮಹಾಂತಂ ವಿಭಾಂತಂ ಗುಹಾಂತಂ ಗುಣಾಂತಂ ಸುಖಾಂತಂ ಸ್ವಯಂ ಧಾಮ ರಾಮಂ ಪ್ರಪದ್ಯೇ ||   ಮಹಾರತ್ನಪೀಠೇ ಶುಭೇ ಕಲ್ಪಮೂಲೇ ಸುಖಾಸೀನಮಾದಿತ್ಯಕೋಟಿಪ್ರಕಾಶಮ್ | ಸದಾ ರಾಮಚಂದ್ರಂ  ಭಜೇಹಂ ಭಜೇಹಮ್ ||   ಪುರಃ ಪ್ರಾಂಜಲೀನಾಂಜನೇಯಾದಿಭಕ್ತಾನ್ ಸ್ವಚಿನ್ಮುದ್ರಯಾ ಭದ್ರಯಾ ಬೋಧಾಯಂತಮ್ | ಭಜೇಹಂ ಭಜೇಹಂ ಸದಾ ರಾಮಚಂದ್ರಂ ತ್ವದನ್ಯಂ ನ ಮನ್ಯೇ ನ ಮನ್ಯೇ ||   ಸದಾ ರಾಮರಾಮೇತಿ ರಾಮಾಮೃತಂ ತೇ ಸದಾರಾಮಮಾನಂದನಿಷ್ಯಂದಕಂದಮ್ | ಪೀಬಂತಂ ನಮಂತಂ ಸುದಂತಂ ಹಸಂತಂ

ಶ್ರೀರಾಮಭುಜಂಗಪ್ರಯಾತಸ್ತೋತ್ರಮ್ Read More »