ಭಜಿಸಿದ್ಯಾ ಈ ಭಾಗ್ಯನಿಧಿಯಾ

ಭಜಿಸಿದ್ಯಾ ಈ ಭಾಗ್ಯನಿಧಿಯಾ ಭಜಿಸಿದ್ಯಾ ಈ ಭಾಗ್ಯನಿಧಿಯಾ ನೋಡು ತ್ರಿಜಗವಂದಿತ ಗುಣಾಂಬುಧಿಯಾ ಹಾಹಾ ಸುಜನರ ಹೃದಯ ಪಂ ಕಜ ಕರ್ಣಿಕೆವಾಸಾ ಅಜಸುರಾರ್ಚಿತ ಪಾದಾ ರಜತಮೋ ದೂರನ್ನ ಮಣಿಮಯ ಖಚಿತ ಕಿರೀಟ ಚಂದ್ರ ಮನ ಸೋಲಿಸುವ ಲಲಾಟ ಸಣ್ಣ ಫಣಿ ಕಸ್ತೂರಿ ನಾಮಾ ಮಾಟಾ ನಮ್ಮನು ನೋಡುವ ವಾರೆ ನೋಟಾ ಹಾಹಾ ಕನಕ ಮಕರ ಮೋಹನ ಕುಂಡಲ ಕರ್ಣ ಮಿನುಗುವ ಕದಪು ಆವಿನ ಸೋಲಿಸೆ ನಿತ್ಯಾ ||1|| ಭೃಂಗ ಕುಂತಳ ಕೇಶಾ ಪುಬ್ಬು ಅಂಗಜ ಚಾಪಾ ವಿಲಾಸ ಉ […]

ಭಜಿಸಿದ್ಯಾ ಈ ಭಾಗ್ಯನಿಧಿಯಾ Read More »

ಭಕ್ತಿಯಲಿ ನಡೆವರಿವರೇ ಸುಗುಣರೊ

ಭಕ್ತಿಯಲಿ ನಡೆವರಿವರೇ ಸುಗುಣರೊ ಮುಕ್ತಿಯನು ಬಯಸಿ ಮುರಾರಾತಿಯ ಚರಣದಲ್ಲಿ ಉದಯದಲೆದ್ದು ಉನ್ನತ ಸ್ವರದಿಂದ ಹರಿ ಪದವೇ ಗತಿ ಎನುತಾ ಎಲ್ಲ ಕಾಲಕೆ ಉದರ ಚಿಂತಿಯ ಮರೆದು ಮನ ಉಬ್ಬಿ ಉತ್ಸವದಿ ಪದೋಪದಿಗೆ ಮಂಗಳಾವಾರ್ತಿ ಪೇಳುತ ನಿತ್ಯಾ ||1|| ಅಡಿಬಿಡದೆ ಭಾಗವತ ಮಿಕ್ಕ ಪುರಾಣಾದಿ ನುಡಿಗೆ ಕಿವಿಗೊಟ್ಟು ಹಾಹಾ ಎನತಲಿ ಒಡನೊಡನೆ ಹರಿ ಮಹಿಮೆಯಲಿ ಇದ್ದು ಮಾರಿಗಳ ಅಡಿಮಾಡಿ ಆದ್ಯಂತಕಾಲ ಸುಖಿಸುವ ನಿತ್ಯಾ ||2|| ಈ ದೇಹ ತ್ಯಾಗ ಮಾಡದೆ ಆಗಲಿ ಪಂಚ ಭೇದ ಪೇಳುವದು ಬಿಡೆನೆಂಬೊ ಸೊಲ್ಲು

ಭಕ್ತಿಯಲಿ ನಡೆವರಿವರೇ ಸುಗುಣರೊ Read More »

ಭಕ್ತರನ ನಂಬದಿರು ಭವದೂರನೆ

ಭಕ್ತರನ ನಂಬದಿರು ಭವದೂರನೆ ಮುಕ್ತಿಯನು ಬೇಡದಲೆ ನಿನ್ನೆ ಪೂಜಿಸುವರು ||ಪ|| ಪ್ರಸ್ತ ಮಾಡುವ ಸಾಧನಕ್ಕೆ ಪೋಗಿ ನಿಂದು ಬಲು ಹಸ್ತು ಬಂದವನು ತುತ್ತನ್ನ ಕೇಳೆ ಸ್ವಸ್ತವಾಗಿ ಕುಳಿತು ಭೋಜನ ಮಾಳ್ಪ ಆ ಗ್ರಹಸ್ತ ಪೊಟ್ಟಿ ತುಂಬದೆ ಬರಿದೆ ಏಳುವನೆ||1|| ಹಾದಿಕಾರನು ಬಂದು ವಸ್ತಿ ಮಾಡುವದಕ್ಕೆ ಆದರದಲಿ ಸ್ವಲ್ಪ ಸ್ಥಳವ ಕೇಳಿ ಪಾದ ಇಡುವನಿತರೊಳು ಕುಳಿತು ಆಮೇಲೆ ಸಂ ಪಾದಿಸುವ ತನ್ನ ತಕ್ಕಷ್ಟು ಧರಣಿಯನ್ನು||2|| ಆವದೊಲ್ಲೆವೆಂದು ಆಡುವರು ನಿತ್ಯದಲಿ ಕಾವ ಕರುಣಿ ನೀನೆಂದು ತಿಳಿದು ಶ್ರೀ ವನಿತೆಯರಸ ಸಿರಿ

ಭಕ್ತರನ ನಂಬದಿರು ಭವದೂರನೆ Read More »

ಭಕ್ತಜನ ಸಂರಕ್ಷಣ

ಭಕ್ತಜನ ಸಂರಕ್ಷಣ ಭಕ್ತಜನ ಸಂರಕ್ಷ ಭವದುರಿತ ಸಂಹಾರಿ ಭಕ್ತರಾ ಸುರಧೇನು – ತರುವೆ ಚಿಂತಾಮಣಿಯೆ ಭಕ್ತರಾಧೀನನೆಂಬುವ ಬಿರುದು ಅನುಗಾಲ ಪೊತ್ತ ತಿಮ್ಮಪ್ಪ ಏಳೊ ಅಂಬರವು ತಾಂಬ್ರಮಯವಾಗೆ ಗರುಡಾಗ್ರಜನು ಇಂಬಿನಲಿ ತಲೆದೋರೆ ಕಿರಣಗಳು ಹರಹಿದುವು ಅಂಬುಜ ವಿರೋಧಿ ಕಳೆಗುಂದಿ ತಾರಾ ನಿಕರವಂಬರದಿ ರೂಹುಮಾಸೆ ಕುಂಭಿಣಿಯ ಮುಸುಕಿರ್ದ ಕತ್ತಲೆ ಪರಿದು ಪೋಗೆ ಅಂಬುಜದಳಕ್ಕೆ ಮರಿದುಂಬಿಗಳು ಎರಗಿದವು ತಾಂಬ್ರ ಚೂಡವು ಧ್ವನಿಮಾಡಿ ಕೂಗಿತು ಸರಸಿಜಾಂಬುಕ ಮಂಚದಿಂದೇಳೊ ||1|| ಉದಯ ಪರ್ವತಕೆ ರಥನೂಕಿದನು ಮಾರ್ತಾಂಡ ಉದಧಿತೆರೆ ತÀಗ್ಗಿದುವು ಉರಗ ಪೆಡೆಯೆತ್ತಿದನು ಗದÀಗದನೆ ನಡುಗಿ

ಭಕ್ತಜನ ಸಂರಕ್ಷಣ Read More »

ಭಕ್ತಜನ ಪಾಲಕ ಭಕ್ತಿಸುಖದಾಯಕ

ಭಕ್ತಜನ ಪಾಲಕ – ಭಕ್ತಿಸುಖದಾಯಕ ಮುಕ್ತೀಶ ದೀನಬಂಧು ಕೃಷ್ಣ ಯುಕ್ತಿಯಲಿ ನಿನ್ನಂಥ ದೇವರನು ನಾಕಾಣೆ ಸತ್ಯವತಿ ಸುತÀನೆ ಕಾಯೋ ಕೃಷ್ಣ ಆನಂದತೀರ್ಥ ಮುನಿಯ ಧ್ಯಾನಿಪರ ಸಂಗ | ಆನಂದದಲಿ ನಿಲಿಸೊ ಕೃಷ್ಣ || ದೀನಜನ ಮಂದಾರ ನೀನೆಂದು ನಂಬಿದೆನೊ | ಸಾನುರಾಗದಲಿ ಕಾಯೋ ಕೃಷ್ಣ ||1|| ಕೆಟ್ಟ ಜನರ ಸಂಗ ಇಷ್ಟು ದಿನವೂ ಮಾಡಿ | ಭ್ರಷ್ಟನಾಗಿ ಪೋದೆನೋ ಕೃಷ್ಣ || ಬೆಟ್ಟದೊಡೆಯನೆ ನಿನ್ನ ಮುಟ್ಟಿ ಭಜಿಸುವ ಭಾಗ್ಯ | ಇಷ್ಟಗಳ ಎನಗೆ ಕೊಡಿಸೋ ಕೃಷ್ಣ ||2||

ಭಕ್ತಜನ ಪಾಲಕ ಭಕ್ತಿಸುಖದಾಯಕ Read More »

ಭಕುತಿಯ ಪಾಲಿಸು ಜೀಯಾ

ಭಕುತಿಯ ಪಾಲಿಸು ಜೀಯಾ ಮುಂದೆ ಮುಕುತಿಗೊಡವೆ ಯಾಕೆ ನೀನೊಲಿದ ಮೇಲೆ ತನುವೆ ನಿನ್ನಾಧೀನವೆನಿಸು ಇದು ಅನುದಿನ ಕೊಡು ಏಕಪ್ರಕಾರ ಮನಸು ಧನ ವಡವೆಯ ಕಂಡ ಕನಸು ಎಂದು ಎನಗೆ ತೋರಲಿ ನಿತ್ಯ ನಿನ್ನಂಘ್ರಿ ನೆನಸು ||1|| ತತ್ವದ ಮತದೊಳಗಿರುಸು ಪುಶಿ ಉತ್ತರ ಮತವೆಂಬ ಮಾರ್ಗವ ಮೆರೆಸು ಉತ್ತಮರೊಳಗೆನ್ನನಿರಿಸು ಭವ ವತ್ತುವ ನಿನ್ನ ನಾಮಮೃತ ಸುರಿಸು ||2|| ಶ್ರವಣ ಮನನ ಧ್ಯಾನವೀಯೋ ಎನ್ನ ಅವಗುಣವೆಣಿಸದೆ ಕರುಣಾಳು ಕಾಯೊ ಅವಸಾನದಲಿ ನೀನೆ ಗತಿಯೊ ತ್ರೈ ಭುವನೇಶ ವಿಜಯವಿಠ್ಠಲ ನೀ ದೊರೆಯೋ

ಭಕುತಿಯ ಪಾಲಿಸು ಜೀಯಾ Read More »

ಭಕುತಿ ಸುಖವೊ ರಂಗ

ಭಕುತಿ ಸುಖವೊ ರಂಗ ಮುಕುತಿ ಸುಖವೊ ಭಕುತಿ ಸುಖವೊ ಮುಕುತಿ ಸುಖವೊ | ಯುಕುತಿವಂತರೆಲ್ಲ ಹೇಳಿ ಭಕುತಿ ಮಾಡಿದ ಪ್ರಹ್ಲಾದ | ಮುಕುತಿಯನ್ನು ಪಡೆದುಕೊಂಡ | ಮುಕುತಿ ಬೇಡಿದ ಧ್ರುವರಾಯ | ಯುಕುತಿಯಿಂದ ಹರಿಯ ಕಂಡ ||1|| ಭಕುತಿ ಮಾಡಿದ ಅಜಮಿಳನು | ಅಂತ್ಯದಲಿ ಹರಿಯ ಕಂಡ | ಮುಕುತಿ ಬೇಡಿದ ಕರಿರಾಜ | ದುರಿತಗಳನು ಕಳೆದುಕೊಂಡ ||2|| ಭಕುತಿ ಮುಕುತಿದಾತ ನಮ್ಮ | ಲಕುಮಿಯರಸ ವಿಜಯವಿಠ್ಠಲ || ಶಕುತನೆನುತ ತಿಳಿದು ನಿತ್ಯ | ಭಕುತಿಯಿಂದ ಭಜನೆ

ಭಕುತಿ ಸುಖವೊ ರಂಗ Read More »

ಭಕುತ ಜನ ಮುಂದೆ ನೀನವರ

ಭಕುತ ಜನ ಮುಂದೆ ನೀನವರ ಹಿಂದೆ ಯುಕುತಿ ಕೈಗೊಳ್ಳದೊ ಗಯ ಗದಾಧರನೆ ಕಟ್ಟೆರಡು ಬಿಗಿದು ನದಿ ಸೂಸಿ ಪರಿಯುತ್ತಿರೆ | ಕಟ್ಟಲೆಯಲಿ ಹರಿಗೋಲು ಹಾಕಿ || ನೆಟ್ಟನೆ ಆಚೆಗೀಚೆಗೆ ಪೋಗಿ ಬರುವಾಗ | ಹುಟ್ಟು ಮುಂದಲ್ಲದೆ ಹರಿಗೋಲು ಮುಂದೆ ? ||1|| ಕಾಳೆ ಹೆಗ್ಗಾಳೆ ದುಂದುಛಿ ಭೇರಿ ತಮಟೆ ನಿ- | ಸ್ಸಾಳ ನಾನಾವಾದ್ಯ ಘೋಷಣಗಳು || ಸಾಲಾಗಿ ಬಳಿವಿಡಿದು ಸಂಭ್ರÀಮದಿ ಬರುವಾಗ | ಆಳು ಮುಂದಲ್ಲದೆ ಅರಸು ತಾ ಮುಂದೆ?||2|| ಉತ್ಸಾಹ ವಾಹನದಿ ಬೀದಿಯೊಳು ಮೆರೆಯುತಿರೆ

ಭಕುತ ಜನ ಮುಂದೆ ನೀನವರ Read More »

ಭೀಮನೆಂಬುವಂಗೆ ಯಾತರ ಭಯವಿಲ್ಲ

ಭೀಮನೆಂಬುವಂಗೆ ಯಾತರ ಭಯವಿಲ್ಲ ಭೀಮರಾಯ ಕಾಮಿತ ಫಲಗಳ ಕೊಟ್ಟು ನೀ ಸಲಹಯ್ಯ ಭೀಮರಾಯ ಅಂಜನೆಯಾತ್ಮಜ ಅಗಣಿತ ಬಲವಂತ ಭೀಮರಾಯಕಂಜನಾಭನ ದೂತ ಕರುಣಿಸೊ ಬಲವಂತ ಭೀಮರಾಯ ||1|| ಕಟ್ಟಿದ ಪೂಮಾಲೆ ಕಸ್ತೂರಿ ನಾಮದ ಭೀಮರಾಯ – ಪೊಂಬಟ್ಟೆ ಪೀತಾಂಬರವನುಟ್ಟು ಮೆರೆವಂಥ ಭೀಮರಾಯ||2|| ವಾರಿಧಿಯನು ದಾಟಿ ಸೀತೆಗುಂಗುರವಿತ್ತ ಭೀಮರಾಯಸೂರಿವೆಗ್ಗಳತನ ಕಿತ್ತು ಈಡಾಡಿದ ಭೀಮರಾಯ||3|| ರಾಮರಾಯರಿಗೆ ನೀ ಪ್ರೇಮದ ಬಂಟನು ಭೀಮರಾಯಕಾಮಿತ ಫಲವಿತ್ತು ಕರುಣದಿ ಸಲಹಯ್ಯ ಭೀಮರಾಯ ||4|| ಛಪ್ಪನ್ನ ದೇಶಕ್ಕೆ ಒಪ್ಪುವ ಕಾಗಿನೆಲೆಯ ಭೀಮರಾಯತಪ್ಪದೆ ಕನಕಗೆ ವರಗಳ ಕೊಡುವಂಥ ಭೀಮರಾಯ

ಭೀಮನೆಂಬುವಂಗೆ ಯಾತರ ಭಯವಿಲ್ಲ Read More »

ಭವತಿ ಭಿಕ್ಷಾಂ ದೇಹಿ ಪರಬ್ರಹ್ಮ

ಭವತಿ ಭಿಕ್ಷಾಂ ದೇಹಿ ಪರಬ್ರಹ್ಮಭವದೂರ ಮಾಂಪಾಹಿಭುವನ ಪಾವನ ಪರಮಾನಂದ ವರಗುಣಾಸುವಿಮಲ ಶಾಂತಿ ಸದ್ಭಕ್ತಿ ಜೀವನ್ಮುಕ್ತಿ ನಿತ್ಯ ನಿರ್ಮಲ ಜ್ಞಾನ ವಿಚಾರ ಪ್ರ-ವೃತ್ತಿ ವಿವೇಕದಾನಸತ್ಯ ಸದ್ವಿನಿಯ ಸಶ್ರವಣ ಮಾನಸಯೋಗಚಿತ್ತ ನಿಧಿಧ್ಯಾಸ ಜಪತಪವ್ರತ ಪೂಜಾ ||1|| ದೋಷರಹಿತ ಭಾಷ ದುರಿತಗುಣನಾಶ ಪರಮ ಸಂತೋಷಕ್ಲೇಶ ವಿದೂರ ವಿಶೇಷ ವಿರಾಗವಿಶ್ವಾಸ ವಿಹಿತ ಸದ್ಧರ್ಮ ವಿಚಾರ ||2|| ಪಾವನ ಪರಿಪೂರ್ಣ ಹೃದಯ ಸದಾದೇವ ನಾಮಸ್ಮರಣಭಾವ ಭರಿತ ಧ್ಯಾನ ಧಾರಣಯೋಗ ಸ-ದ್ಭಾವ ಬ್ರಹ್ಮ ಆದಿಕೇಶವ ದಾಸತೆ ||3||

ಭವತಿ ಭಿಕ್ಷಾಂ ದೇಹಿ ಪರಬ್ರಹ್ಮ Read More »

ಭವ ಭಯ ವಿನಾಶ ಭೋ ಭಕ್ತವಿಲಾಸ

ಭವ ಭಯ ವಿನಾಶ ಭೋ ಭಕ್ತವಿಲಾಸ ಭೋ ಪಾ-ಪವಿನಾಶ ಭೋ ಬಾಡದ ರಂಗೇಶ ಭೋ ಹರಿಯ ಸುತನಿಗೆ ಅಭಯವನಿತ್ತೆ ಹರಿಯ ಮಗನಾ ಕೊಂದೆಹರಿಯೆನಲು ಹರಿರೂಪ ತಾಳಿದೆಹರಿಯೊಳಡಗಿದೆ ಮತ್ತೆಹರಿಯನಗ್ರಜ ಕೋಟಿ ತೇಜನಹರಿಯ ವದನನೆಂಬ||1|| ಶಿವನ ಮಗಳೊಡಗೂಡಿ ಮತ್ತೆಶಿವಮಗಳನು ಮಾವನಿಗಿತ್ತೆಶಿವನ ಉಪಟಳಕಳುಕಿ ಗೋಕುಲಶಿವನ ಕರದಲಿ ಪೊತ್ತೆಶಿವನ ಧನುವನು ಖಂಡಿಸಿ ಮತ್ತೆಶಿವನ ತಲೆಯೇರಿ ನಿಂದೆಶಿವನ ಭೋಜನವಾಹನ ಸುತನಿಗೆಶಿವನ ಪ್ರತಿಪಾಲನೆಂಬ ||2|| ಕಮಲವನು ಈರಡಿಯ ಮಾಡಿದೆಕಮಲ ಮೊರೆಯಿಡಲಂದುಕಮಲದಲಿ ಬ್ರಹ್ಮಾಂಡ ತೋರಿದೆಕಮಲಧರ ನೀನೆಂದು ಕಮಲವನು ಕದ್ದೊಯ್ದ ಕಳ್ಳನ ಸದೆದುಕಮಲವ ತಂದೆಕಮಲಮುಖಿಯಳ ಕಾಯ್ದ ಕಾಗಿನೆಲೆವಿಮಲ ಆದಿಕೇಶವನೆಂಬ

ಭವ ಭಯ ವಿನಾಶ ಭೋ ಭಕ್ತವಿಲಾಸ Read More »

ಭಜಿಸಿ ಬದುಕೆಲೊ ಮಾನವ

ಭಜಿಸಿ ಬದುಕೆಲೊ ಮಾನವ ಅಜ ಭವೇಂದ್ರಾದಿಗಳು ವಂದಿಸುವ ಪಾದವನು ಪಾಕಶಾಸನಗೊಲಿದು ಬಲಿಯ ಮೆಟ್ಟಿದ ಪಾದ ಕಾಕು ಶಕಟನ ಒದ್ದು ಕೊಂದ ಪಾದನಾಕ ಭೀಕರ ಬಕನ ಮೆಟ್ಟಿ ಸೀಳಿದ ಪಾದಲೋಕ ಪಾವನ ಗಂಗೆ ಪುಟ್ಟಿದ ಪಾದವನು ||1|| ಶಿಲೆಯ ಸತಿಯಳ ಬಂಧವಿಮುಕ್ತಿಗೊಳಿಸಿದ ಪಾದಒಲಿದು ಪಾರ್ಥನ ರಥವನೊತ್ತಿದ ಪಾದಕಲಿ ಸುಯೋಧನನ ಓಲಗದಿ ಕೆಡಹಿದ ಪಾದಕಲಕಿ ಕಾಳಿಂಗನ ಪೆಡೆ ತುಳಿದ ಪಾದವನು ||2|| ಗರುಡ ಶೇಷಾದಿಗಳು ಬಿಡದೆ ಪೊತ್ತಿಹ ಪಾದಧರೆಯನೀರಡಿ ಮಾಡಿ ಅಳೆದ ಪಾದಸಿರಿ ತನ್ನ ತೊಡೆಯ ಮೇಲಿರಿಸಿ ಒತ್ತುವ ಪಾದವರ

ಭಜಿಸಿ ಬದುಕೆಲೊ ಮಾನವ Read More »

ಭಜರೇ ಹನುಮಂತಂ

ಭಜರೇ ಹನುಮಂತಂ | ಮಾನಸಭಜರೇ ಹನುಮಂತಂ ಕೋಮಲ ಕಾಯಂ ನಾಮ ಸುದೇವಂ |ಭಜ ಸಖಸಿಂಹಂ ಭೂಸುರ ಶ್ರೇಷ್ಠಂ||1|| ಮೂರ್ಖ ನಿಶಾಚರ ವನ ಸಂಹಾರಂ |ಸೀತಾ ದುಃಖ ವಿನಾಶಕಾರಂ ||2|| ಪರಮಾನಂದ ಗುಣೋದಯ ಚರಿತಂಕರುಣಾರಸ ಸಂಪೂರ್ಣ ಸುಭರಿತಂ||3|| ರಣರಂಗ ಧೀರಂ ಗುಣಗಂಭೀರಂದಾನವ ದೈತ್ಯಾರಣ್ಯ ಕುಠಾರಂ ||4|| ಗುರು ಚೆನ್ನಕೇಶವ ಕದಳೀ ರಂಗಂಸ್ಥಿರ ಸದ್ಭಕ್ತಂ ಮುಖ್ಯಪ್ರಾಣಂ ||5||

ಭಜರೇ ಹನುಮಂತಂ Read More »

ಭಜ ಯತಿರಾಜಂ ಭಜ ಯತಿರಾಜಂ

ಭಜ ಯತಿರಾಜಂ ಭಜ ಯತಿರಾಜಂ ಭಜ ಯತಿರಾಜಂ ಭವಭೀರೋ | ಭಜ ಯತಿರಾಜಂ  ಭಜ ಯತಿರಾಜಂ ಭಜ ಯತಿರಾಜಂ ಭವಭೀರೋ ||   ಶ್ರೀರಂಗೇಶಜಯಾಶ್ರಯಕೇತುಃ ಶ್ರಿತಜನಸಂರಕ್ಷಣಜೀವಾತುಃ | ಭವಭಯಜಲಧೇರೇಷ ಹಿ ಸೇತುಃ ಪದ್ಮಾನೇತುಃ ಪ್ರಣತೌ ಹೇತುಃ ||   ಆದೌ ಜಗದಾಧಾರಶ್ಮೇಷಃ ತದನುಸುಮಿತ್ರಾನಂದನವೇಷಃ | ತದುಪರಿಧೃತಹಲಮುಸಲವಿಶೇಷಃ ತದನಂತರಮಭವದ್ಗುರುರೇಷಃ ||   ನಷ್ಟೇ ನಯನೇ ಕಸ್ಯಾಲೋಕಃ ಚಿತ್ತೇ ಮತ್ತೇ ಕಸ್ಯ ವಿವೇಕಃ | ಕ್ಷೀಣೇ ಪುಣ್ಯೇ ಕಸ್ಸುರಲೋಕಃ ಕಾಮೇ ಧೂತೇ ಕಸ್ತವಶೋಕಃ ||   ಮನ್ತ್ರದ್ರವ್ಯವಿಶುದ್ಧೋ  ಯಾಗಃ ಸರ್ವಾರಂಭವಿರಾಗಸ್ತ್ಯಾಗಃ

ಭಜ ಯತಿರಾಜಂ ಭಜ ಯತಿರಾಜಂ Read More »

ಭವ-ಭಯ-ಭಂಜನ

ಭವ-ಭಯ-ಭಂಜನ, ಪುರುಷ-ನಿರಂಜನ, ರತಿ-ಪತಿ-ಗಂಜನ-ಕಾರೀ | ಯತಿ-.-ರಂಜನ,ಮನೋಮದ-ಖಂಡನ, ಜಯ-ಭವ-ಬಂಧನ-ಹಾರೀ || ಜಯ ಜನ-ಪಾಲಕ, ಸುರದಲ-ನಾಯಕ, ಜಯ ಜಯ ವಿಶ್ವ-ವಿಧಾತಾ | ಚಿರ-ಶುಭ-ಸಾಧಕ, ಮತಿ-ಮಲ-ಪಾವಕ, ಜಯ ಚಿತ-ಸಂಶಯ-ತ್ರಾತಾ ಸುರ-ನರ-ವಂದನ, ವಿಜರ-ವಿಬಂಧನ, ಚಿತ-ಮನ-ನಂದನ-ಕಾರೀ | ರಿಪು-ಚಯ-ಮಂಥನ, ಜಯ ಭವ-ತಾರಣ, ಸ್ಥಲ-ಜಲ-ಭೂಧರ-ಧಾರೀ || ಶಮ-ದಮ-ಮಂಡನ, ಅಭಯನಿಕೇತನ, ಜಯ ಜಯ ಮಂಗಲ-ದಾತಾ | ಜಯ ಸುಖ-ಸಾಗರ,ನಟವರನಾಗರ, ಜಯ ಶರಣಾಗತ-ಪಾತಾ ಭ್ರಮ-ತಮ-ಭಾಸ್ಕರ,ಜಯ ಪರಮೇಶ್ವರ, ಸುಖಕರ-ಸುಂದರ-ಭಾಷೀ | ಅಚಲ ಸನಾತನ, ಜಯ ಭವ-ಪಾವನ, ಜಯ ವಿಜಯೀ ಅವಿನಾಶೀ || ಭಕತ-ವಿಮೋಹನ, ವರ-ತನು-ಧಾರಣ, ಜಯ ಹರಿ-ಕೀರ್ತನ-ಭೋಲಾ | ಗದ-ಗದ-ಭಾಷಣ,

ಭವ-ಭಯ-ಭಂಜನ Read More »

ಭವ-ಸಾಗರ-ತಾರಣ-ಕಾರಣ ಹೇ

ಭವ-ಸಾಗರ-ತಾರಣ-ಕಾರಣ ಹೇ ರವಿ-ನಂದನ-ಬಂಧನ-ಖಂಡನ ಹೇ | ಶರಣಾಗತ-ಕಿಂಕರ-ಭೀತಮನೇ ಗುರುದೇವ ದಯಾಕರ ದೀನಜನೇ || ಹೃದಿಕಂದರ-ತಾಮಸ-ಭಾಸ್ಕರ ಹೇ ತುಮಿ ವಿಷ್ಣು ಪ್ರಜಾಪತಿ ಶಂಕರ ಹೇ | ಪರಬ್ರಹ್ಮ ಪರಾತ್ ಪರ ವೇದ ಭಣೇ ಗುರುದೇವ ದಯಾಕರ ದೀನಜನೇ || ಮನ-ವಾರಣ-ಶಾಸನ-ಅಂಕುಶ ಹೇ ನರತ್ರಾಣ ತರೇ ಹರಿ ಚಾಕ್ಷುಷ ಹೇ | ಗುಣಗಾನ-ಪರಾಯಣ ದೇವಗಣೇ ಗುರುದೇವ ದಯಾಕರ ದೀನಜನೇ || ಕುಲಕುಂಡಲಿನೀ-ಘುಮ-ಭಂಜಕ ಹೇ ಹೃದಿ-ಗ್ರಂಥಿ-ವಿದಾರಣ-ಕಾರಕ ಹೇ | ಮಮ ಮಾನಸ ಚಂಚಲ ರಾತ್ರದಿನೇ ಗುರುದೇವ ದಯಾಕರ ದೀನಜನೇ || ರಿಪು-ಸೂದನ

ಭವ-ಸಾಗರ-ತಾರಣ-ಕಾರಣ ಹೇ Read More »

ಭುವನಮೋಹಿನಿ ಮಾಯಾಯ

(ತೋಮಾರ) ಭುವನಮೋಹಿನೀ ಮಾಯಾಯ ಭೂಲಾಯೋನಾ ಮಾ ಆಮಾಯ| ಭಜನವಿಹೀನಜನೇ ದಾಓ ಮತಿ ರಾಂಗಾಪಾಯ|| ಕೇ ಆಛೇ ಮಾ ತೋಮಾ ಬಿನೇ ಕೋಲೇ ನಿತೇ ದೀನಜನೇ| ಜೀವನೇ ಮರಣೇ ರಣೇ ಸಾಥೇ ಸಾಥೇ ಕೇವಾ ಜಾಯ||                                       —-ಸ್ವಾ.ಚ.

ಭುವನಮೋಹಿನಿ ಮಾಯಾಯ Read More »

ಭೈಯಾರೇ ಕನ್ಹೈಯ್ಯಾರೇ

ಭೈಯಾರೇ ಕನ್ಹೈಯ್ಯಾರೇ ನೇಕ ದರಶ ದಿಖಾಯೇ ಜಾ ರೇ| ಶ್ಯಾಮಲಿಯಾ ಪ್ಯಾರೇ ಬನ್ಸೀವಾರೇ ಮೇರೇ ಛಾತಿಯಾಪೇ ಆಜಾ ರೇ|| ಮೇರೋ ಭೈಯಾ ವರಜ್ ಲಾಲಾ ವ್ರಜಬಾಲ ಸೈಯಾ ನಂದದುಲಾಲಾ| ಯಮುನಾಕಿನಾರೇ ಧೀರಸಮೀರೇ ನೇಕಬಾಸರೀ ಬಾಜಾಯೇ ಜಾ ರೇ|| ಪ್ರಾಣಕೀ ಪ್ರಾಣ ಭೈಯಾ ಮೇರೋ ಭಿಕ್ಷಾ ಮಾಂಗಿ ದರಶನ ತೇರೋ| ನಯನಮೇ ಠಾರೋ ಪಿಯಾಸ ನಿವಾರೋ ಮೇರೇ ರಾಜನಕೀ ರಾಜಾ ರೇ||                     —-ವ್ರಜೇಂದ್ರನಾಥ ಮುಖ್ಯೋಪಾಧ್ಯಾಯ

ಭೈಯಾರೇ ಕನ್ಹೈಯ್ಯಾರೇ Read More »

ಭಜೋರೇ ಭಯ್ಯಾ

ಭಜೋರೇ ಭಯ್ಯಾ ರಾಮ ಗೋವಿಂದ ಹರೀ|| ಜಪ ತಪ ಸಾಧನ ಕಛು ನಹೀ ಲಾಗತ ಖರಚತ ನಹೀ ಗಠರೀ|| ಸಂತತ ಸಂಪತ ಸುಖ ಕೇ ಕಾರಣ ಜಾಸೇ ಭೂಲ ಪರೀ|| ಕಹತ ಕಬೀರ ಜಾ ಮುಖ ರಾಮ ನ ವೋ ಮುಖ ಧೂಲ ಭರೀ||                          —-ಕಬೀರದಾಸ

ಭಜೋರೇ ಭಯ್ಯಾ Read More »

ಭಜೋ ಮಧುರ ಹರಿನಾಮ

ಭಜೋ ಮಧುರ ಹರಿನಾಮ ನಿರಂತರ|| ಸರಲಭಾವ ಸೇ ಹರಿ ಭಜೇ ಜೋ ಪಾವೇ ಸೋ ಸುಖಾರಾಮ ನಿರಂತರ|| ಹರಿ ಹೀ ಸುಖ ಹೈ ಹರಿ ಹೀ ಶಾಂತಿ ಹರಿ ಹೀ ಪ್ರಾಣಾರಾಮ ನಿರಂತರ|| ಹರಿ ಹೀ ಪಾಪಸೇ ಮುಕ್ತ ಕರೇ ಜೋ ಭಜನ ಕರೇ ಹರಿನಾಮ ನಿರಂತರ||

ಭಜೋ ಮಧುರ ಹರಿನಾಮ Read More »

ಭಜು ಮನ ರಾಮಚರಣ ಸುಖದಾಯೀ

ಭಜು ಮನ ರಾಮಚರಣ ಸುಖದಾಯೀ|| ಜಿನ ಚರಣನಕೀ ಚರಣ ಪಾದುಕಾ ಭರತ ರಹ್ಯೋ ಲವಲಾಯೀ| ಸೋಯಿ ಚರಣ ಕೇವಟ ಧೋಯಿ ಲೀನೇ ತಬ ಹರಿ ನಾವ ಚಲಾಯೀ|| ಸೋಯಿ ಚರಣ ಸಂತನ ಜನ ಸೇವತ ಸದಾ ರಹತ ಸುಖದಾಯೀ| ಸೋಯಿ ಚರಣ ಗೌತಮ ಋಷಿ ನಾರೀ ಪರಸಿ ಪರಮಪದ ಪಾಯೀ|| ದಂಡಕವನ ಪ್ರಭು ಪಾವನ ಕೀನ್ಹೋ ಋಷಿಯನ ತ್ರಾಸ ಮಿಟಾಯೀ| ಸೋಯಿ ಪ್ರಭು ತ್ರಿಲೋಕಕೇ ಸ್ವಾಮಿ ಕನಕಮೃಗಾ ಸಂಗಧಾಯೀ|| ಕಪಿ ಸುಗ್ರೀವ ಬಂಧು ಭಯ ವ್ಯಾಕುಲ ತಿನಜಗ

ಭಜು ಮನ ರಾಮಚರಣ ಸುಖದಾಯೀ Read More »

ಭಜು ಮನ ರಾಮಚರಣ ದಿನ ರಾತಿ

ಭಜು ಮನ ರಾಮಚರಣ ದಿನ ರಾತಿ|| ರಸನಾ ಕಸ ನ ಭಜೋ ತೂ ಹರಿಪದ ಸುಮಿರತ ಕ್ಯೂ ಅಲಸಾತಿ|| ಜಾಕೇ ಕಹತ ದಹತ ದುಃಖದಾರುಣ ಸುನ ತ್ರಯತಾಪ ಬುಝಾತಿ ಸುನತ ಸುಯಶ ಸುಶೀಲ ಸೋ ಹರಿಜನ ದೇತ ಸಲಾಹ ಸೋಹಾತಿ|| ರಾಮಚಂದ್ರ ಕೇ ನಾಮ ಅಮಿಯರಸ ಸೋ ರಸ ಕಾಹೇ ನ ಖಾತಿ ತುಲಸೀದಾಸ ಯಹ ವಿನಯ ಕರತ ಹೈ ಪ್ರಥಮ ಆರಜ ಕೀ ಪಾತಿ||                              —-ತುಲಸೀದಾಸ

ಭಜು ಮನ ರಾಮಚರಣ ದಿನ ರಾತಿ Read More »

ಭಜ ಮನ ರಾಮನಾಮ ಸುಖದಾಈ

ಭಜ ಮನ ರಾಮನಾಮ ಸುಖದಾಈ ಘಡಿ ಘಡಿ ಪಲ ಪಲ ಅವಧ ಬಿತತ ತಬ ಫಿರ್ ಪಾಛೋ ಪಛತಾಈ|| ಭಾಈ ಬಂಧು ಸಬ ಕಾಮ ನ ಆವತ| ದೇಖತ ಜಗ ಲಲಚಾಯೋ ಅಂತ ಸಮಯ ಕೋಈ ಕಾಮ ನ ಆವತ ತೂ ಪಾಛೋ ಪಛತಾಈ||

ಭಜ ಮನ ರಾಮನಾಮ ಸುಖದಾಈ Read More »

ಭೈಯಾರೇ ಕನ್ಹೈಯ್ಯಾರೇ

ಭೈಯಾರೇ ಕನ್ಹೈಯ್ಯಾರೇ ನೇಕ ದರಶ ದಿಖಾಯೇ ಜಾ ರೇ| ಶ್ಯಾಮಲಿಯಾ ಪ್ಯಾರೇ ಬನ್ಸೀವಾರೇ ಮೇರೇ ಛಾತಿಯಾಪೇ ಆಜಾ ರೇ|| ಮೇರೋ ಭೈಯಾ ವರಜ್ ಲಾಲಾ ವ್ರಜಬಾಲ ಸೈಯಾ ನಂದದುಲಾಲಾ| ಯಮುನಾಕಿನಾರೇ ಧೀರಸಮೀರೇ ನೇಕಬಾಸರೀ ಬಾಜಾಯೇ ಜಾ ರೇ || ಪ್ರಾಣಕೀ ಪ್ರಾಣ ಭೈಯಾ ಮೇರೋ ಭಿಕ್ಷಾ ಮಾಂಗಿ ದರಶನ ತೇರೋ| ನಯನಮೇ ಠಾರೋ ಪಿಯಾಸ ನಿವಾರೋ ಮೇರೇ ರಾಜನಕೀ ರಾಜಾ ರೇ|| —-ವ್ರಜೇಂದ್ರನಾಥ ಮುಖ್ಯೋಪಾಧ್ಯಾಯ

ಭೈಯಾರೇ ಕನ್ಹೈಯ್ಯಾರೇ Read More »