ಭಜನೆಗಳು

ಶಿವದರುಶನ ನಮಗಾಯ್ತು

ಶಿವದರುಶನ ನಮಗಾಯ್ತು ಕೇಳೆ ಶಿವರಾತ್ರಿಯ ಜಾಗರಣೆ|| ಪಾತಾಳಗಂಗೆಯ ಸ್ನಾನವ ಮಾಡಲು ಪಾತಕವೆಲ್ಲ ಪರಿಹಾರವು| ಜ್ಯೋತಿರ್ಲಿಂಗನ ಧ್ಯಾನವ ಮಾಡಲು ದ್ಯೂತಗಳಿಲ್ಲ ಅನುದಿನವು|| ಬೇಡಿದ ವರಗಳ ಕೊಡುವನು ತಾಯಿ ಬ್ರಹ್ಮನ ರಾಣಿಯ ನೋಡುವನು| ಆಡುತ ಪಾಡುತ ಏರುತ ಬಸವನ ಆನಂದದಿಂದಲಿ ನಲಿದಾಡುವನು|| ಶಿಖರವ ಕಂಡೆನು ಪುರಂದರ ವಿಟ್ಠಲನ ಹರಿನಾರಾಯಣ ಧ್ಯಾನದಲಿ|| —-ಪುರಂದರದಾಸ

ಶಿವದರುಶನ ನಮಗಾಯ್ತು Read More »

ಶರೀರವೆಂತೆಂಬುವ ಹೊಲವ

ಶರೀರವೆಂತೆಂಬುವ ಹೊಲವ ಹಸನು ಮಾಡಿ ಪರತತ್ತ್ವ ಬೆಳೆಯನೆ ಬೆಳೆದುಣ್ಣಿರೋ|| ಶಮೆದಮೆಯೆಂದೆಂಬ ಎರಡೆತ್ತುಗಳ ಹೂಡಿ ವಿಮಲಮಾನಸವ ನೇಗಿಲವನೆ ಮಾಡಿ ಮಮಕಾರವೆಂದೆಂಬ ಕರಿಕೆಯ ಕಳೆದಿಟ್ಟು ಸಮತೆಯೆಂದೆಂಬುವ ಗೊಬ್ಬರ ಚೆಲ್ಲಿ|| ಗುರುವರನುಪದೇಶವೆಂಬ ಬೀಜದ ಬಿತ್ತಿ ಮೆರೆವ ಸಂಸ್ಕಾರವೃಷ್ಟಿಯ ಬಲದಿ ಅರಿವೆಂಬ ಪೈರನೆ ಬೆಳೆಸುತೆ ಮುಸುಗಿರ್ದ ದುರಿತದುರ್ಗುಣವೆಂಬ ಕಳೆಯನು ಕಿತ್ತು|| ಚಿರಮುಕ್ತಿಯೆಂದೆಂಬ ಧಾನ್ಯವ ಬೆಳೆದುಂಡು ಪರಮಾನಂದದೊಳು ದಣ್ಣನೆ ದಣಿದು ಗುರುಸಿದ್ಧನಡಿಗಳಿಗೆರಗುತ್ತ ಭವವೆಂಬ ಬರವನು ತಮ್ಮ ಸೀಮೆಗೆ ಕಳುಹಿ|| —-ಸರ್ಪಭೂಷಣ ಶಿವಯೋಗಿ

ಶರೀರವೆಂತೆಂಬುವ ಹೊಲವ Read More »

ಶರಣು ಶರಣು ಸಂಬುದ್ಧ ಗುರು

ಶರಣು ಶರಣು ಸಂಬುದ್ಧ ಗುರು ಜ್ಞಾನ- ದಯಾಸಮುದ್ರನೆ ಬುದ್ಧ ಗುರು| ಲೋಕನಾಥಸಂಬುದ್ಧ ಗುರು ಆರ್ತ್ತ- ತ್ರಾಣಪರಾಯಣ ಬುದ್ಧ ಗುರು ಶರಣು ಶರಣು ಸಂಬುದ್ಧ ಗುರು|| ದೇಶ ಕೋಶಮನೆ ತಂದೆ ಮಡದಿ ಮಗು ಸಕಲ ಸುಖದ ಸವಿ ಪರಿವಾರ ಕಹಿಯೊ ಎಂಬವೊಲು ಕೊಡವಿಕೊಂಡು ನಡು- ರಾತ್ರಿಯೊಳಡವಿಗೆ ನಡೆದೆ ಗುರು|| ಆರುವರುಷದಲೆದಾಟವು ಘೋರ ಕಡೆಗು ಗೆದ್ದೆ ನೀ ಜಿತಮಾರ ಬೋಧಿವೃಕ್ಷದಡಿ ಪ್ರಜ್ಞಾಯುಧದಲಿ ಮಾರಸೇನೆಯನು ಮುರಿದೆ ಗುರು|| ಗೆದ್ದು ಬಂದು ನೀ ವಾರಾಣಸಿಯಲಿ ಅಮೃತ ದುಂದುಭಿಯ ಬಾರಿಸಿದೆ ಧರ್ಮಚಕ್ರವನು ಸ್ಥಾಪಿಸತೊಡಗಿದೆ ಜಗಗಳ

ಶರಣು ಶರಣು ಸಂಬುದ್ಧ ಗುರು Read More »

ಶರಣಾಗು ಶರಣಾಗು

ಶರಣಾಗು ಶರಣಾಗು ಶರಣಾಗು ಮನವೇ ಶ್ರೀಗುರುಚರಣ ಸರೋಜಕೆ ಮಣಿದು|| ರಾಮಕೃಷ್ಣ ಗುರುಕೃಪೆ ನಿನಗಾದರೆ ಹರಿವುದು ಭವಭಯ ಚಿಂತಾರುಜಿನ| ಶ್ರೀಗುರುನಾಮದ ನೌಕೆಯು ದೊರೆತರೆ ಭವಸಾಗರ ಯಾನವೆ ಮೋದಕರ|| ಎಲ್ಲ ಧರ್ಮಗಳ ತಿರುಳನು ಸಾರುವ ನೊಂದ ಜೀವರಿಗೆ ಭರವಸೆಯೀಯುವ| ರಾಮಕೃಷ್ಣ ಸಂದೇಶ ಗೀತೆಯ ಸಾಗರದಲೆಗಳು ಹಾಡುತಿವೆ|| ಭವ್ಯ ಹಿಮಾಲಯ ಪರ್ವತರಾಜಿಯು ಮುಳುಗಿರೆ ಧ್ಯಾನ ಸಮಾಧಿಯಲಿ| ರಾಮಕೃಷ್ಣ ಜಯ ರಾಮಕೃಷ್ಣ ಜಯ ಎಂಬೀ ನಿನದವು ಕೇಳುತಿದೆ|| —-ಪ್ರಭುಪ್ರಸಾದ

ಶರಣಾಗು ಶರಣಾಗು Read More »

ಶಕ್ತಿಸಮುದ್ರಸಮುತ್ಥತರಂಗಂ

ಶಕ್ತಿಸಮುದ್ರಸಮುತ್ಥತರಂಗಂ ದರ್ಶಿತಪ್ರೇಮವಿಜೃಂಭಿತರಂಗಂ ಸಂಶಯರಾಕ್ಷಸನಾಶಮಹಾಸ್ತ್ರಂ ಯಾಮಿ ಗುರು ಶರಣಂ ಭವವೈದ್ಯಂ|| ಅದ್ವಯತತ್ತ್ವಸಮಾಹಿತಚಿತ್ತಂ ಪ್ರೋಜ್ಜ್ವಲಭಕ್ತಿಪಟಾವೃತವೃತ್ತಂ| ಕರ್ಮಕಲೇವರಮದ್ಭುತಚೇಷ್ಟಂ ಯಾಮಿ ಗುರುಂ ಶರಣಂ ಭವವೈದ್ಯಂ|| —-ಸ್ವಾಮಿ ವಿವೇಕಾನಂದ

ಶಕ್ತಿಸಮುದ್ರಸಮುತ್ಥತರಂಗಂ Read More »

ಶಕ್ತನಾದರೆ

ಶಕ್ತನಾದರೆ ನೆಂಟರೆಲ್ಲ ಹಿತರು| ಅ- ಶಕ್ತನಾದರೆ ಅವರೆ ವೈರಿಗಳು ಲೋಕದಲಿ|| ಕಮಲ ಅರ್ಕನಲಿರುವ ಕಡು ನೆಂಟತನದಿಂದ ವಿಮಲ ಜಲದೊಳಗೆ ಅದು ಆಡುತಿಹುದು| ಕ್ರಮಗೆಟ್ಟು ನೀರಿಂದ ತಡಿಗೆ ಬೀಳಲು ರವಿಯ ಅಮಿತ ಕಿರಣಗಳಿಂದ ಕಂದಿಹೋಗುವುದು|| ವನಸುತ್ತಿ ಸುಡುವಾಗ ವಾಯು ಬೀಸಲು ಉರಿಯು ಘನ ಪ್ರಜ್ವಲಿಸುತಿಹುದು ಗಗನಕಡರಿ| ಮನೆಯೊಳಿಹ ದೀಪಕ್ಕೆ ಮಾರುತನು ಸೋಂಕಿದರು ಘನಶಕ್ತಿಯುಡುಗಿ ತಾ ನಂದಿಹೋಗುವುದು|| ಕರಿಯ ಕಾಯಿದ ಹರಿಯ ಕರುಣತಪ್ಪಿದ ಮೇಲೆ ಮರೆಯ ಹೊಕ್ಕರು ಕಾವ ಮಹಿತರಾರಯ್ಯ| ವರದ ಶ್ರೀ ಪುರಂದರವಿಟ್ಠಲನು ಒಲಿದಿರಲು ಸರುವ ಜನರೆಲ್ಲ ಮೂಜಗದಿ

ಶಕ್ತನಾದರೆ Read More »

ವೆಂಕಟಾಚಲನಿಲಯಂ ಸ್ವಾಮಿ

ವೆಂಕಟಾಚಲನಿಲಯಂ ಸ್ವಾಮಿ ವೈಕುಂಠಪುರವಾಸಮ್ ಪಂಕಜನೇತ್ರಂ ಪರಮಪವಿತ್ರಂ ಶಂಖಚಕ್ರಧರ-ಚಿನ್ಮಯರೂಪಮ್|| ಅಂಬುಜೋದ್ಭವವಿನುತಂ ಸ್ವಾಮಿ ಅಗಣಿತಗುಣನಾಮಮ್ ತುಂಬುರುನಾರದ ಗಾನವಿಲೋಲಮ್ ಅಂಬುಧಿಶಯನಂ ಆತ್ಮಾಭಿರಾಮಮ್|| ಪಾಹಿ ಪಾಂಡವಪಕ್ಷಂ ಸ್ವಾಮಿ ಕೌರವಮದಹರಣಮ್ ಬಹು-ಪರಾಕ್ರಮಿ-ಫಣಿಮದಭಂಗಮ್ ಅಹಲ್ಯಾಶಾಪ ಭಯನಾಶಮ್|| ಸಕಲವೇದ ವಿಚಾರಂ ವರ- ಸಾಧುಜನ ಪರಿಪಾಲಮ್ ಮಕರಕುಂಡಲಧರ-ಮದನಗೋಪಾಲಮ್ ಭಕ್ತವತ್ಸಲಂ ಪುರಂದರವಿಟ್ಠಲಮ್|| —-ಪುರಂದರದಾಸ

ವೆಂಕಟಾಚಲನಿಲಯಂ ಸ್ವಾಮಿ Read More »

ವಿಪ್ರವನಿತೆಯಂಕದಲ್ಲಿ

ವಿಪ್ರವನಿತೆಯಂಕದಲ್ಲಿ ನಲಿವನಾರು ಬೆಳಕ ಚೆಲ್ಲಿ| ಧರಿಸಿ ದಿಶೆಯ ಚೆಲುವ ಕುವರ ಒಲಿದು ಬಂದೆ ಬಡಕುಟೀರ|| ಭೂತಲಕೆ ಇಳಿದು ಬಂದೆ ಯಾರು ನೀನು ಕಣ್ಮಣಿ| ಆರ್ತ ಜನರ ತಾಪ ಕಳೆಯೆ ಸುರಿಸಿ ಕರುಣೆ ಕಂಬನಿ|| ನೊಂದ ಜನಕೆ ನೆರವ ನೀಡೆ ಬಂದೆಯೇನು ಗೋಪ್ಯವಾಗಿ| ಕಂದ ಮೊಗದಿ ಕರುಣೆ ತಳೆದು ಅಳುವೆ ನಗುವೆ ಯಾರಿಗಾಗಿ|| ರೂಪರಾಶಿ ಕಂಡು ನಿನ್ನ ಸೆಳೆಯಲಾರೆ ನೆಟ್ಟ ಕಣ್ಣ| ತಾಪತಿಮಿರನಾಶಿ ನಿನ್ನ ತೋಳಲೆತ್ತಿಕೊಂಬೆ ಚಿನ್ನ||

ವಿಪ್ರವನಿತೆಯಂಕದಲ್ಲಿ Read More »

ವಿದುರನ ಭಾಗ್ಯವಿದು

ವಿದುರನ ಭಾಗ್ಯವಿದು|| ಇದ ಕಂಡು ಜಗವೆಲ್ಲ ತಲೆದೂಗುತಿಹುದು|| ಕುರುರಾಯನು ಖಳನನುಜನು ರವಿಜನು ಗುರುಗಾಂಗೇಯರು ನೋಡುತಿರೆ| ಹರಿಸಿ ರಥವನು ಬೀದಿಯಲಿ ಬರುತಲಿಹ ಹರಿಯನು ಕಂಡನು ಹರುಷದಲಿ|| ದಾರಿಲಿ ಬರುತಿಹ ಮುರವೈರಿಯನು ಕಂಡು ಹಾರುತ ಚೀರುತ ಕುಣಿಯುತಲಿ| ಹರುಷದ ಕಂಬನಿ ಧಾರೆಯ ಸುರಿಸುತ ಬಾರಿಬಾರಿಗು ಸಂತೋಷದಿ ಹಿಗ್ಗುವ|| ಆಟಕೆ ಲೋಕಗಳೆಲ್ಲವ ಸೃಜಿಸುವ ನಾಟಕಧರ ತನ್ನ ಲೀಲೆಯಲಿ| ನೀಟಾದವರ ಮನೆಗಳ ಜರಿದು ಕುಟೀರದಲಿ ಬಂದು ಕುಳಿತ ಹರಿ|| ಅಡಿಗಡಿಗೆ ತನ್ನ ತನುಮನ ಹರಹಿ ಅಡಿಗೆರಗುತ ಗದ್ಗದ ಸ್ವರದಿ| ನುಡಿಗಳು ತೊದಲಲು ರೋಮಾಂಚವಾಗಲು

ವಿದುರನ ಭಾಗ್ಯವಿದು Read More »

ವಂದೇ ಸಂತಂ

ವಂದೇ ಸಂತಂ ಶ್ರೀ ಹನುಮಂತಂ| ರಾಮದಾಸಮಮಲಂ ಬಲವಂತಂ|| ರಾಮಕಥಾಮೃತಮನುನಿವಸಂತಂ| ಪರಮಪ್ರೇಮಭರೇಣ ನಟಂತಂ|| ಪ್ರೇಮರುದ್ಧಗಲಮಶ್ರುವಹಂತಂ| ಪುಲಕಾಂಚಿತ ವಪುಷಾ ವಿಲಸಂತಂ|| ಕದಾಚಿದಾನಂದೇನ ಹಸಂತಂ| ಕ್ವಚಿತ್ ಕದಾಚಿದಪಿ ಪ್ರರುದಂತಂ|| ಸರ್ವಂ ರಾಮಮಯಂ ಪಶ್ಯಂತಂ| ರಾಮ ರಾಮ ಇತಿ ಸದಾ ಜಪಂತಂ|| ಸದ್ಭಕ್ತಿಪಥಂ ಸಮುಪದಿಶಂತಂ| ವಿಟ್ಠಲಪಂತಂ ಪ್ರತಿ ಸುಖಯಂತಂ|| —-ವಿಟ್ಠಲಪಂತ

ವಂದೇ ಸಂತಂ Read More »

ವನಸುಮದೊಲೆನ್ನ

ವನಸುಮದೊಲೆನ್ನ ಜೀ- ವನವು ವಿಕಸಿಸುವಂತೆ ಮನವನನುಗೊಳಿಸು ಗುರುವೇ ಹೇ ದೇವ|| ಜನಕೆ ಸಂತಸವೀವ ಘನನು ನಾನೆಂದೆಂಬ ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ ಬಿಡದೆ|| ಕಾನನದಿ ಮಲ್ಲಿಗೆಯು ಮೌನದಿಂ ಬಿರಿದು ನಿಜ ಸೌರಭವ ಸೂಸಿ ನಲವಿಂ| ತಾನೆಲೆಯ ಪಿಂತಿರ್ದು ದೀನತೆಯ ತೋರಿ ಅಭಿ- ಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ|| ಉಪಕಾರಿ ನಾನು ಎ- ನ್ನುಪಕೃತಿಯು ಜಗಕೆಂಬ ವಿಪರೀತಮತಿಯನುಳಿದು| ವಿಪುಲಾಶ್ರಯವನೀವ ಸುಫಲ ಸುಮಭರಿತ ಪಾ- ದಪದಂತೆ ನೈಜಮಾದೊಳ್ಪಿನಿಂ ಬಾಳ್ವವೊಲು|| —-ಡಿ.ವಿ.ಜಿ.

ವನಸುಮದೊಲೆನ್ನ Read More »

ವಚನದಲ್ಲಿ ನಾಮಾಮೃತ

ವಚನದಲ್ಲಿ ನಾಮಾಮೃತ ತುಂಬಿ ನಯನದಲ್ಲಿ ನಿಮ್ಮ ಮೂರುತಿ ತುಂಬಿ|| ಮನದಲಿ ನಿಮ್ಮ ನೆನಹು ತುಂಬಿ ಕಿವಿಯಲಿ ನಿಮ್ಮ ಕೀರುತಿ ತುಂಬಿ|| ಕೂಡಲಸಂಗಮದೇವ ದೇವ ನಿಮ್ಮ ಚರಣಕಮಲದೊಳಗಾನು ತುಂಬಿ|| —-ಬಸವಣ್ಣ

ವಚನದಲ್ಲಿ ನಾಮಾಮೃತ Read More »

ರಾಮ ಘನಶ್ಯಾಮಂ

ರಾಮಂ ಘನಶ್ಯಾಮಂ ಗುಣಧಾಮಂ ರಮ್ಯನಾಮಂ| ಕ್ಷೇಮಂ ಮುಖಸೋಮಂ ರಿಪುಭೀಮಂ ಚಿತ್ತಕಾಮಂ ಭಜೇ|| ವೀರಂ ಮೇರುಧೀರಂ ಸುಕುಮಾರಂ ಆತ್ಮಸಾರಂ| ಶೂರಂ ಸರ್ವಾಧಾರಂ ಸದ್ವಿಚಾರಂ ಶುಭಾಕಾರಂ ಭಚೇ|| ಧ್ಯಾನಂ ಚಿತ್ತಲೀನಂ ಸ್ಮೃತಿಮಾನಂ ದಯಾಸ್ಥಾನಂ| ಜ್ಞಾನಂ ಸ್ವಯಂಭಾನಂ ಕಾಮಧೇನುಂ ಶ್ರುತಿಮಾನಂ ಭಜೇ|| ವೇದಂ ವೇದಗೀತಂ ನಿಜಬೋಧಂ ವಿಶ್ವಾತೀತಂ| ಮೋದಂ ದಶನಾದಂ ಕವಿನೋದಂ ಮೃದುಪಾದಂ ಭಜೇ|| ಶ್ರೀಶಂ ಶ್ರೀನಿವಾಸಂ ಮಂದಹಾಸಂ ಚಿದ್ವಿಲಾಸಂ| ಭಾಸಂ ಚಿತ್ತಹಾಸಂ ಅಚ್ಯುತೇಶಂ ಭವನಾಶಂ ಭಜೇ||

ರಾಮ ಘನಶ್ಯಾಮಂ Read More »

ರಾಮ ಮಂತ್ರವ ಜಪಿಸೋ

ರಾಮಮಂತ್ರವ ಜಪಿಸೋ ಹೇ ಮನುಜಾ|| ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ ಸೋಮಶೇಖರ ತನ್ನ ಭಾಮಿನಿಗೊರೆದಿಹ|| ಕುಲಹೀನನಾದರೂ ಕೂಗಿ ಜಪಿಸುವ ಮಂತ್ರ ಸರಿವ ಭೀತಿಯೊಳು ಉಚ್ಚರಿಪ ಮಂತ್ರ| ಹಲವು ಪಾಪಂಗಳ ಹದಗೆಡಿಸುವ ಮಂತ್ರ ಸುಲಭದಿಂದಲಿ ಸ್ವರ್ಗ ಸೂರೆಗೊಳ್ಳುವ ಮಂತ್ರ|| ಸಕಲ ವೇದಗಳಿಗೆ ಸಾರವೆನಿಪ ಮಂತ್ರ ಮುಕುತಿ ಮಾರ್ಗಕೆ ಇದೇ ಮೂಲಮಂತ್ರ| ಭಕುತಿರಸಕೆ ಭವ್ಯ ಮಾರ್ಗ ತೋರುವ ಮಂತ್ರ ಸುಖನಿಧಿ ಪುರಂದರವಿಟ್ಠಲನ ಮಹಾಮಂತ್ರ|| —-ಪುರಂದರದಾಸ

ರಾಮ ಮಂತ್ರವ ಜಪಿಸೋ Read More »

ರಾಮ ಪಾಲಯ

ರಾಮ ಪಾಲಯ| ದಶರಥ| ರಾಮ ಪಾಲಯ|| ರಾಮರೂಪಜಿತಕಾಮ ನಿರಂತರ| ತರುಣಾರುಣಮೃದುಚರಣಾಂಬುಜಯುಗ|| ಅಮಲಕಮಲನಿಜನಾಭಿವಿರಾಜಿತ| ಹರಸುರಸರಸಿಜಭವಗರುಡಾರ್ಚಿತ|| ವಸುಧೇಶ್ವರದಶಶಿರಮದಖಂಡನ ಇಂದುವದನದಶಸ್ಯಂದನನಂದನ|| ಕರುಣಾಕರತರಣಿಜವರದಾಯಕ| ವರನರಸಿಂಹದಾಸಾರ್ಚಿತಪಾದುಕ|| —-ನರಸಿಂಹದಾಸ

ರಾಮ ಪಾಲಯ Read More »

ರಾಮನಾಮ ಜಪನಾ ರೇ

ರಾಮನಾಮ ಜಪನಾ ರೇ ಪ್ರಬಲ ಹೇ ಜಗಬಲ ನಟನಾ ರೇ|| ಮಾತಾಪಿತಾ ಜನ ಬಾಂಧವ ಹಾರೀ| ಝೂಟೇ ಜಗತ ಕಲ್ಪನಾ ರೇ|| ದುನಿಯಾ ಮೇ ತೂ ಅಕೇಲಾ ಹೈ ಚಾರ್ ದಿನೋಕಾ ಮೇಲಾ ಹೈ ದುನಿಯಾ ಹೈ ಏಕ ಆನೀ ಜಾನೀ|| ಅಬತೋ ಧ್ಯಾನ ಲಗಾಲೇನಾ ನೈಯ್ಯಾ ಪಾರ ಲಗಾಲೆನಾ ಛಂದಕೇ ಬಿನತಿ ಪ್ರಭುನೇ ಮಾನಿ|| —-ಮುನ್ ಶೀದೀ

ರಾಮನಾಮ ಜಪನಾ ರೇ Read More »

ರಾಮದೂತ ಹನುಮಾನ್

ರಾಮದೂತ ಹನುಮಾನ್ ವಿಜಯತೇ ರಾಮದೂತ ಹನುಮಾನ್|| ಯೋ ರಘುಪತಿನಾ ಸಹ ಸುಗ್ರೀವಂ ಮೈತ್ರ್ಯಾ ಯೋಜಿತವಾನ್|| ತೀರ್ತ್ವಾ ದುಸ್ತರಸಿಂಧುಂ ಸೀತಾ- ಶುದ್ಧಿಂ ಯಃ ಕೃತವಾನ್|| ಭಿತ್ವಾರಣ್ಯಂ ಹತ್ವಾ ಅಕ್ಷಂ ಲಂಕಾಂ ಜ್ವಾಲಿತವಾನ್|| ಪುನರೇತ್ಯ ಶ್ರೀ ರಾಮಂ ವಿಟ್ಠಲ- ಮಪಿ ಯೋ ಹರ್ಷಿತವಾನ್|| —-ವಿಟ್ಠಲಪಂತ

ರಾಮದೂತ ಹನುಮಾನ್ Read More »

ರಾಮಕೃಷ್ಣ ಭಗವಾನ್

ರಾಮಕೃಷ್ಣ-ಭಗವಾನ್ ವಿಜಯತೇ ರಾಮಕೃಷ್ಣ-ಭಗವಾನ್|| ಯೋ ಲೋಕಾನುಗ್ರಹಕರಣಾರ್ಥಂ ಜನ್ಮ ಸ್ವೀಕೃತವಾನ್| ವಿಜಯತೇ|| ಯಸ್ಸರ್ವೇಷಾಂ ಯೋಗಪಥಾನಾಮ್ ಐಕ್ಯಂ ದರ್ಶಿತವಾನ್| ವಿಜಯತೇ|| ಯಃ ಸ್ವಕಲತ್ರೇ ಮಾತರಿ ಚ ಶ್ರೀ- ಕಾಲೀಮೀಕ್ಷಿತವಾನ್| ವಿಜಯತೇ|| ಯೋ ವೇದಾರ್ಥಂ ಸರಲೈರ್ವಚನೈಃ ಪಾಮರಸುಗಮಿತವಾನ್| ವಿಜಯತೇ|| ಯಶ್ಚ ವಿವೇಕಾನಂದಮುಖೇನ ಜ್ಞಾನಂ ಕಾರಿತವಾನ್| ವಿಜಯತೇ|| ಯೋಂತರ್ಯಾಮೀ ಸಕಲಜನಾನಾಂ ಹೃದಯೇ ಸಂಸ್ಥಿತವಾನ್| ವಿಜಯತೇ|| —-ಸ್ವಾಮಿ ಹರ್ಷಾನಂದ

ರಾಮಕೃಷ್ಣ ಭಗವಾನ್ Read More »

ರಾಮಕೃಷ್ಣ ಪದಾಂಬುಜದಿ

ರಾಮಕೃಷ್ಣ ಪದಾಂಬುಜದಿ ನಲಿಯೋ ಎನ್ನ ಮನದ ಭ್ರಮರ| ಮುಳ್ಳಿನಿಂ ಮುಸುಕಿದೆ ವಿಷಯಕೇದಗೆ ನಿಲ್ಲದಿರಲ್ಲಿ ನೀ ಮೈಯನು ಮರೆತು|| ಜನುಮ ಮರಣ ವಿಷಮ ವ್ಯಾಧಿಯ ಎನಿತು ಕಾಲ ಸಹಿಪೆ ಇನ್ನು| ಪ್ರೇಮಸುಧೆಯ ಸವಿ ಶ್ರೀಪದದಿ ಭವದ ಯಾತನೆ ಉಳಿಯದಿನ್ನು|| ಧರ್ಮಾಧರ್ಮ-ಸುಖ-ದುಃಖ-ಶಾಂತಿ-ತಾಪ ದ್ವಂದ್ವದಲ್ಲಿರಲು ಮುಕ್ತಿಯದೆಲ್ಲಿ| ಜ್ಞಾನಖಡ್ಗದಿ ಪರಮ ಯತ್ನದಿ ಕತ್ತರಿಸು ನೀ ಕರ್ಮದ ಪಾಶವ|| ರಾಮಕೃಷ್ಣನಾಮ ನಾಲಿಗೆ ನುಡಿಯಲಿ ಮೋಹದ ಕತ್ತಲು ಕಳೆವುದಾಗ| ದುಃಸ್ವಪ್ನ ಜ್ವಾಲೆ ಆರುವುದಾಗ ಮತ್ತಿನ ನಿದ್ರೆಯು ಉಳಿಯದಿನ್ನು||

ರಾಮಕೃಷ್ಣ ಪದಾಂಬುಜದಿ Read More »

ರಾಮಕೃಷ್ಣಾನಂದ ಸ್ವಾಮಿಯೆ

ರಾಮಕೃಷ್ಣಾನಂದ ಸ್ವಾಮಿಯೆ ನಮ್ಮ ನಮನವು ನಿನಗೆ ಯತಿಯೆ|| ವೇದಶಾಸ್ತ್ರದ ಜ್ಞಾನನಿಧಿಯೆ ಭೇದದರ್ಶನ ರಹಿತ ಸಂತನೆ ವಾದದೂರನೆ ಶಾಂತಿಪ್ರಿಯನೆ ನಮ್ಮ ನಮನವು ನಿನಗೆ ಯತಿಯೆ|| ಹರಿಯ ಪಾದದಿ ಪರಮಭಕುತಿಯು ಗುರುವಿನಡಿಯಲಿ ಅದುಕು ಮಿಗಿಲು ಹರಸುತೆಮ್ಮನು ಶಮನಗೊಳಿಸು ನಮ್ಮ ನಮನವು ನಿನಗೆ ಯತಿಯೆ|| ತ್ಯಾಗಯೋಗದ ಯುಗಳಮೂರ್ತಿಯೆ ಭಾಗ್ಯವೆಮ್ಮದು ನಿನ್ನ ಕರುಣೆಯೆ ಹೋಗಲಾಡಿಸು ಭವದ ಬವಣೆ ನಮ್ಮ ನಮನವು ನಿನಗೆ ಯತಿಯೆ|| —-ಸ್ವಾಮಿ ಹರ್ಷಾನಂದ

ರಾಮಕೃಷ್ಣಾನಂದ ಸ್ವಾಮಿಯೆ Read More »

ರಾಮಕೃಷ್ಣ ತಪೋಸೂರ್ಯ

ರಾಮಕೃಷ್ಣ ತಪೋಸೂರ್ಯ ಕಿರಣಬಿಂಬ ಚಂದ್ರಿಕೆ ಓ ತಾಯಿ ಅಂಬಿಕೆ|| ಗಿರಿಯ ದರಿಯ ನೆಲವ ಜಲವ ತಬ್ಬಿ ನಿಂತ ಕರುಣೆಯೆ ವಾತ್ಸಲ್ಯವರಣೆಯೆ|| ರಾಮಕೃಷ್ಣ ತಪೋವನದ ಪರ್ಣಕುಟಿಯ ದೀಪವೆ| ಬಳಿಗೆ ಬಂದ ಹಣತೆಗಳಿಗೆ ಬೆಳಕನಿತ್ತ ಕಿರಣವೆ ಮೌನಪ್ರಭಾವಲಯವೆ|| ಸಂಕಟಗಳ ವನವಸನವ- ನುಟ್ಟು ನಿಂತ ಶಿಖರವೆ| ನದನದಿಗಳ ವಾತ್ಸಲ್ಯದ ಹಾಲೂಡಿದ ತೀರ್ಥವೆ ದಿವ್ಯ ಕೃಪಾರೂಪವೆ|| —-ಜಿ.ಎಸ್. ಶಿವರುದ್ರಪ್ಪ

ರಾಮಕೃಷ್ಣ ತಪೋಸೂರ್ಯ Read More »

ರಾಮಕೃಷ್ಣ ಗುರುವೇ

ರಾಮಕೃಷ್ಣಗುರುವೇ ಪರಮಹಂಸ ಗುರುವೇ| ಕಾಮಿತದಾಯಕ ಪ್ರೇಮದಿ ನಮಿಪೆವು || ಸಕಲ ಮತವ ನೀನೇಕವೆಂದೆಣಿಸಿದೆ ಅಕಲಂಕಮಹಿಮ ಮಮ ದೇವ| ಲೋಕಸೇವೆಯಿಂ ಖ್ಯಾತಿಯ ಹೊಂದಿದೆ ಮುಕ್ಕಣ್ಣನ ಪ್ರಿಯ ನಮಿಪೆವು ದೇವ|| ಸ್ವಾಮಿ ವಿವೇಕಾನಂದನ ಗುರುವೇ ಪ್ರೇಮದಿ ಸಲಹೈ ಸಕಲ ಲೋಕವ| ತಾಮಸ ಮಾಡದೆ ಕಾವುದು ಎಮ್ಮನು ಚಾಮುಂಡಾಂಬೆಯ ವರಭಕ್ತನೆ|| —-ಮೈಸೂರು ದೇವೇಂದ್ರಪ್ಪ

ರಾಮಕೃಷ್ಣ ಗುರುವೇ Read More »

ರಾಮ ಎಂಬುವ ಎರಡು

ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು ಪಾಮರರು ತಾವೇನು ಬಲ್ಲರಯ್ಯ|| ‘ರಾ’ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದ ಆಯಸ್ಥಿಗತವಾದ ಅತಿ ಪಾಪವನ್ನು| ಮಾಯವನು ಮಾಡಿ ಮಹರಾಯ ಮುಕ್ತಿಯ ಕೊಡುವ ದಾಯವನು ವಾಲ್ಮೀಕಿ ಮುನಿರಾಯ ಬಲ್ಲ|| ಮತ್ತೆ ‘ಮ’ ಎಂದೆನಲು ಹೊರಬಿದ್ದ ಪಾಪಗಳು ಒತ್ತಿ ಒಳಪೊಗದಂತೆ ಕವಾಟವಾಗಿ| ಚಿತ್ತ ಕಾಯಗಳ ಪವಿತ್ರ ಮಾಡುವ ಪರಿಯ ಭಕ್ತವರ ಹನುಮಂತನೊಬ್ಬ ತಾ ಬಲ್ಲ|| ಧರೆಯೊಳೀ ನಾಮಕ್ಕೆ ಸರಿಮಿಗಿಲು ಇಲ್ಲೆಂದು ಪರಮ ವೇದಗಳೆಲ್ಲ ಪೊಗಳುತಿಹವು| ಸಿರಿಯರಸ ಪುರಂದರ ವಿಟ್ಠಲನ ನಾಮವನು ಸಿರಿಕಾಶಿಯೊಳಗಿಪ್ಪ ಶಿವನು

ರಾಮ ಎಂಬುವ ಎರಡು Read More »