ಅಲೆದಲೆದು ಅತಿದಣಿದು
ಅಲೆದಲೆದು ಅತಿದಣಿದು ನೆಲೆಗಾಣ್ದೆ ನಿನ್ನಡಿಗೆ ಎಲೆ ತಾಯೆ ಕಡೆಗಿಂದು ಬಂದೆಮ್ಮಸಲಹು|| ಕೊನೆಯಿಲ್ಲ ಕೊರೆಯಿಲ್ಲ ಈ ನಮ್ಮ ದುಃಖಕ್ಕೆ ಮನದಲ್ಲಿ ಬನದಲ್ಲಿ ನೆಮ್ಮದಿಯು ಇನಿತಿಲ್ಲ| ಜನುಮಗಳು ಕಳೆಕಳೆದು ದುಃಖ ಮಿತಿಮೀರುತಿದೆ ಜನನಿ ಮಂಗಳಮೂರ್ತಿ ಕಳೆಯೆಮ್ಮ ಕಲುಷಾರ್ತಿ|| ಪರಮಹಂಸರ ಕರುಣೆರೂಪಿಣಿಯೆ ನೀ ತಾಯೆ ಪರತನವನರಿಯದಿಹ ಪ್ರೇಮದಂಬುಧಿ ಜಲವ| ಎರೆದೆಮ್ಮನುದ್ಧರಿಸು ಪತಿತಪಾವನೆ ಮಾತೆ ಸಾರದಾಯಿನಿ ಪರಮೆ ಅಕಳಂಕಚರಿತೆ|| ——ಸ್ವಾಮಿ ತದ್ರೂಪಾನಂದ