ಮೃದುವಚನವೇ
ಮೃದುವಚನವೇ ಸಕಲ ಜಪಂಗಳಯ್ಯ ಮೃದುವಚನವೇ ಸಕಲ ತಪಂಗಳಯ್ಯ|| ಸದುವಿನಯವೇ ಸದಾಶಿವನೊಲುಮೆಯಯ್ಯ ಕೂಡಲಸಂಗಯ್ಯನಂತಲ್ಲನಯ್ಯ|| —-ಬಸವಣ್ಣ
ಮೃದುವಚನವೇ ಸಕಲ ಜಪಂಗಳಯ್ಯ ಮೃದುವಚನವೇ ಸಕಲ ತಪಂಗಳಯ್ಯ|| ಸದುವಿನಯವೇ ಸದಾಶಿವನೊಲುಮೆಯಯ್ಯ ಕೂಡಲಸಂಗಯ್ಯನಂತಲ್ಲನಯ್ಯ|| —-ಬಸವಣ್ಣ
ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ|| ಮಾಡಿದೆನೆಂಬುದು ಮನದಲಿ ಹೊಳೆದರೆ ನೀಡಿದೆನೆಂಬುದು ನಿಜದಲಿ ತಿಳಿದರೆ ಏಡಿಸಿ ಕಾಡಿತ್ತು ಶಿವನ ಡಂಗುರ|| ಮಾಡಿದೆನೆನ್ನದಿರಾ ಲಿಂಗಕೆ ನೀಡಿದೆನೆನ್ನದಿರಾ ಜಂಗಮಕೆ ಮಾಡುವ ನೀಡುವ ನಿಜಗುಣವುಳ್ಳವರ ಕೂಡಿಕೊಂಡಿಪ್ಪ ನಮ್ಮ ಕೂಡಲಸಂಗಯ್ಯ|| —-ಬಸವಣ್ಣ
ಮನವೆಂಬ ಮರ್ಕಟನು ತನುವೆಂಬ ವೃಕ್ಷವನೇರಿ ಇಂದ್ರಿಯಂಗಳೆಂಬ ಶಾಖೆಶಾಖೆಗೆ ಹಾರಿ ವಿಷಯಂಗಳೆಂಬ ಫಲಂಗಳ ಗ್ರಹಿಸಿ ಭವದತ್ತ ಮುಖವಾಗಿ ಹೋಗುತಿದೆ ನೋಡಾ|| (ಈ) ಮನವೆಂಬ ಮರ್ಕಟನ (ನಿಮ್ಮ) ನೆನಹೆಂಬ ಪಾಶದಿ ಕಟ್ಟೆ ಎನ್ನನುಳಿಸಿಕೊಳ್ಳಯ್ಯ ಅಖಂಡೇಶ್ವರಾ|| —ಷಣ್ಮುಖಸ್ವಾಮಿ
ಮಡಕೆಯ ಮಾಡುವರೆ ಮಣ್ಣೇ ಮೊದಲು ತೊಡಿಗೆಯ ಮಾಡುವರೆ ಹೊನ್ನೇ ಮೊದಲು ಶಿವಪಥವರಿವಡೆ ಗುರುಪಥ ಮೊದಲು ಕೂಡಲಸಂಗಮದೇವರನರಿವಡೆ ಶರಣರ ಸಂಗವೇ ಮೊದಲು|| —-ಬಸವಣ್ಣ
ಬಿಡು ಬಿಡು ಬಾಹ್ಯದೊಳು ಡಂಭವ ಮಾನಸದೊಳು ಎಡೆಬಿಡದಿರು ಶಂಭುವ ಮನದೊಳು ವಂಚಿಸಿ ಹೊರಗೆ ನೀ ಕೀರ್ತಿಯ ಪಡೆದರೆ ಶಿವ ನಿನಗೊಲಿಯನು ಮರುಳೆ|| ಜನಕಂಜಿ ನಡೆಕೊಂಡರೇನುಂಟು ಲೋಕದಿ ಮನಕಂಜಿ ನಡೆಕೊಂಬುದೇ ಚಂದ| ಜನರೇನ ಬಲ್ಲರು ಒಳಗಾಗೋ ಕೃತ್ಯವ ಮನವರಿಯದ ಕಳ್ಳತನವಿಲ್ಲವಲ್ಲ|| ಮನದಲಿ ಶಿವ ತಾ ಮನೆಮಾಡಿಕೊಂಡಿಹ ಮನಮೆಚ್ಚಿ ನಡೆದರೆ ಶಿವ ತಾ ಮೆಚ್ಚುವ| ಮನಕಂಜಿ ನಡೆಯದೆ ಜನಕಂಜಿ ನಡೆದರೆ ಮನದಾಣ್ಮ ಗುರುಸಿದ್ಧ ಮರೆಯಾಗೋನಲ್ಲ|| —-ಸರ್ಪಭೂಷಣ ಶಿವಯೋಗಿ
ಬಿಡು ಬಿಡು ಬಾಹ್ಯದೊಳು Read More »
ಪಶೂನಾಂ ಪತಿಂ ಪಾಪನಾಶಂ ಪರೇಶಂ ಗಜೇಂದ್ರಸ್ಯ ಕೃತ್ತಿ ವಸಾನಂ ವರೇಣ್ಯಮ್| ಜಟಾಜೂಟಮಧ್ಯೇ ಸ್ಪುರದ್ಗಾಂಗವಾರಿಂ ಮಹಾದೇವಮೇಕಂ ಸ್ಮರಾಮಿ ಸ್ಮರಾರಿಮ್|| ಮಹೇಶಂ ಸುರೇಶಂ ಸುರಾರಾತಿನಾಶಂ ವಿಭುಂ ವಿಶ್ವನಾಥಂ ವಿಭೂತ್ಯಂಗಭೂಷಮ್| ವಿರೂಪಾಕ್ಷಮಿಂದ್ವರ್ಕ-ವಹ್ನಿ-ತ್ರಿನೇತ್ರಂ ಸದಾನಂದಮೀಡೇ ಪ್ರಭುಂ ಪಂಚವಕ್ತ್ರಮ್|| ಗಿರೀಶಂ ಗಣೇಶಂ ಗಲೇ ನೀಲವರ್ಣಂ ಗವೇಂದ್ರಾದಿರೂಢಂ ಗುಣಾತೀತರೂಪಮ್| ಭವಂ ಭಾಸ್ವರಂ ಭಸ್ಮನಾ ಭೂಷಿತಾಂಗಂ ಭವಾನೀಕಲತ್ರಂ ಭಜೇ ಪಂಚವಕ್ತ್ರಮ್|| ಶಿವಾಕಾಂತ ಶಂಭೋ ಶಶಾಂಕಾರ್ಧಮೌಲೇ ಮಹೇಶಾನ ಶೂಲಿನ್ ಜಟಾಜೂಟಧಾರಿನ್| ತ್ವಮೇಕೋ ಜಗದ್ವ್ಯಾಪಕೋ ವಿಶ್ವರೂಪಃ ಪ್ರಸೀದ ಪ್ರಸೀದ ಪ್ರಭೋ ಪೂರ್ಣರೂಪ|| ಮೃದುವಚನವೇ ಸಕಲ ಜಪಂಗಳಯ್ಯ ಮೃದುವಚನವೇ ಸಕಲ ತಪಂಗಳಯ್ಯ||
ಪರಚಿಂತೆ ಎಮಗೆ ಏಕೆ ಅಯ್ಯಾ ಎಮ್ಮಯ ಚಂತೆ ಎಮಗೆ ಸಾಲದೇ|| ಕೂಡಲಸಂಗನು ಒಲಿವನೊ ಒಲೆಯನೊ ಎಂಬ ಚಿಂತೆ ಹಾಸಲುಂಟು ಹೊದೆಯಲುಂಟು|| —-ಬಸವಣ್ಣ
ನೀನೊಲಿದರೆ ಕೊರಡು ಕೊನರುವುದು|| ನೀನೊಲಿದರೆ ಬರಡು ಹಯನವಹುದು ನೀನೊಲಿದರೆ ವಿಷ ಅಮೃತವಪ್ಪುದು ನೀನೊಲಿದರೆ ಸಕಲ ಪಡು ಪದಾರ್ಥ ಇದಿರಲಿಪ್ಪವು ಕೂಡಲಸಂಗಮದೇವಾ|| —ಬಸವಣ್ಣ
ನಂಬರು ನೆಚ್ಚರು ಬರಿದೇ ಕರೆವರು ನಂಬಲರಿಯದೆ ಲೋಕದ ಮನುಜರು ನಂಬಿ ಕರೆದೊಡೆ ಓ ಎನ್ನನೇ ಶಿವ|| ನಂಬದೆ ನೆಚ್ಚದೆ ಬರಿದೇ ಕರೆವರ ಕಂಬೆ ಮೆಚ್ಚಕೂಡದೆಂದ ಕೂಡಲಸಂಗಮದೇವ|| —ಬಸವಣ್ಣ
ತಂದೆ ನೀನು ತಾಯಿ ನೀನು ಬಂಧು ನೀನು ಬಳಗ ನೀನು ನೀನಲ್ಲದೆ ಮತ್ತಾರಯ್ಯಾ|| ಕೂಡಲಸಂಗಮದೇವಾ ಹಾಲಲದ್ದು ನೀರಲದ್ದು|| —-ಬಸವಣ್ಣ
ತಂದೆ ನೀನು ತಾಯಿ ನೀನು Read More »
ಜಯ ಶಂಕರ ಪಾರ್ವತೀಪತೇ ಮೃಡ ಶಂಭೋ ಶಶಿಖಂಡಮಂಡನ| ಮದನಾಂತಕ ಭಕ್ತವತ್ಸಲ ಪ್ರಿಯ ಕೈಲಾಸ ದಯಾಸುಧಾಂಬುಧೇ|| ಸದುಪಾಯ ಕಥಾಸ್ವಪಂಡಿತೋ ಹೃದಯೇ ದುಃಖಶರೇಣ ಖಂಡಿತಃ| ಶಶಿಖಂಡ ಶಿಖಂಡ ಮಂಡನಂ ಶರಣಂ ಯಾಮಿ ಶರಣ್ಯಮೀಶ್ವರಮ್|| ತ್ವದ್ದೃಶಂ ವಿದಧಾಮಿ ಕಿಂಕರೋ ಕ್ವನು ತಿಷ್ಠಾಮಿ ಕಥಂ ಭಯಾಕುಲಃ| ಕ್ವನು ತಿಷ್ಠಸಿ ರಕ್ಷ ರಕ್ಷ ಮಾಂ ಅಯಿ ಶಂಭೋ ಶರಣಾಗತೋಸ್ಮಿ ತೇ|| ಶಿವ ಸರ್ವಗ ಶರ್ವ ಶರ್ಮದ ಪ್ರಣತೋ ದೇವ ದಯಾಂ ಕುರುಷ್ವ ಮೇ| ನಮ ಈಶ್ವರ ನಾಥ ದಿಕ್ಪತೇ ಪುನರೇವೇಶ ನಮೋ ನಮೋಸ್ತು ತೇ||
ಜಯ ಶಂಕರ ಪಾರ್ವತೀಪತೇ Read More »
ಜಯ ಪರಮೇಶ್ವರ ಪರಮ ಭಿಖಾರೀ ಕಲ್ಪಮೇರು ಗುರು ಯೋಗ ಆಚಾರೀ|| ತರುತಲ ಆಲಯ ವಸನ ದಿಶಾಚಯ ಭೀತ ನಿರಾಶ್ರಯ ಭವಭಯಹಾರೀ|| ಹರ ಕರುಣಾಕರ ವರದಾಭಯಕರ ಮದನಮಾನಹರ ಶಿವ ಶುಭಕಾರೀ|| —-ಗಿರೀಶಚಂದ್ರ ಘೋಷ್
ಜಗವ ಸುತ್ತಿರುವುದು ನಿನ್ನ ಮಾಯೆ ನಿನ್ನ ಸುತ್ತಿರುವುದೆನ್ನ ಮನ ನೋಡಾ|| ಕರಿಯು ಕನ್ನಡಿಯೊಳಗಡಗಿದಂತಯಿಯ ನೀನೆನ್ನೊಳಡಗಿಹೆ ಕೂಡಲಸಂಗಯ್ಯ|| —ಬಸವಣ್ಣ
ಜಗವ ಸುತ್ತಿರುವುದು ನಿನ್ನ ಮಾಯೆ Read More »
ಚಂದ್ರಚೂಡ ಶಿವಶಂಕರ ಪಾರ್ವತಿ| ರಮಣ ನಿನಗೆ ನಮೋ ನಮೋ ನಮೋ|| ಸುಂದರ ಮೃಗಧರ ಪಿನಾಕ ಧನುಕರ| ಗಂಗಾಶಿರ ಗಜಚರ್ಮಾಂಬರಧರ|| ಕೊರಳಲಿ ಭಸ್ಮ ರುದ್ರಾಕ್ಷಿ ಮಾಲೆ| ಧರಿಸಿದ ಪರಮ ವೈಷ್ಣವ ನೀನೇ|| ಗರುಡಗಮನ ಶ್ರೀ ಪುರಂದರ ವಿಟ್ಠಲನ| ಪ್ರಾಣಪ್ರಿಯನೇ ನಮೋ ನಮೋ|| —ಪುರಂದರದಾಸ
ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ ಅಂಬುಜಕೆ ಭಾನುವಿನ ಉದಯದ ಚಿಂತೆ|| ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ ಎಮಗೆ ನಮ್ಮ ಕೂಡಲಸಂಗಮದೇವರ ಚಿಂತೆ|| —ಬಸವಣ್ಣ
ಕರುಣಾಕರ ಹರ ಶೂಲಧರನೇ| ವರಗೌರೀಪತಿ ಸಾಂಬ ಸದಾಶಿವ|| ಪರಮದಯಾಕರ ಪರಮೇಶ್ವರನೇ| ವರಫಣಿಭೂಷಣನೇ ಪರಶಿವನೇ|| ಫಾಲವಿಲೋಚನ ಗಂಗಾಧರನೇ| ಪಾಲಿಸು ಎಮ್ಮನು ರಜತಗಿರೀಶನೇ|| ಕೈಲಾಸಾಧಿಪ ಕೈವಲ್ಯಪ್ರದ| ಬಾಲಚಂದ್ರಧರನೇ ಸ್ಮರಹರನೇ||
ಕರುಣಾಕರ ಹರ ಶೂಲಧರನೇ Read More »
ಎನಗಿಂತ ಕಿರಿಯರಿಲ್ಲಯ್ಯಾ ಶಿವಭಕ್ತರಿಗಿಂತ ಹಿರಿಯರಿಲ್ಲಯ್ಯಾ ನಿಮ್ಮ ಪಾದಸಾಕ್ಷಿ ಎನಗೆ ಎನ್ನ ಮನದ ಸಾಕ್ಷಿಯಯ್ಯಾ ಕೂಡಲಸಂಗಮದೇವಾ ಎನಗಿದೇ ದಿವ್ಯ|| —-ಬಸವಣ್ಣ
ಎನಗಿಂತ ಕಿರಿಯರಿಲ್ಲಯ್ಯಾ Read More »
ಉಳ್ಳವರು ಶಿವಾಲಯ ಮಾಡುವರಯ್ಯ| ನಾನೇನ ಮಾಡಲಿ ಬಡವನಯ್ಯಾ|| ಎನ್ನ ಕಾಲೇ ಕಂಬವು ದೇಹವೇ ದೇಗುಲ| ಶಿರವೇ ಹೋನ್ನ ಕಳಶವಯ್ಯ|| ಸ್ಥಾವರಕಳಿವುಂಟು ಜಂಗಮಕೆ ಅಳಿವಿಲ್ಲ| ಅಯ್ಯಾ ಕೇಳಯ್ಯ ಕೂಡಲಸಂಗಮ ದೇವ|| —ಬಸವಣ್ಣ
ಅಳಿಸಂಕುಲವೇ ಮಾಮರವೇ ಬೆಳುದಿಂಗಳೇ ಕೋಗಿಲೆಯೇ ನಿಮ್ಮ ನಿಮ್ಮನ್ನೆಲ್ಲರನು ಒಂದ ಬೇಡುವೆನು ಚನ್ನ ಮಲ್ಲಿಕಾರ್ಜುನದೇವರ ಕಂಡರೆ ಕರೆದು ತೋರಿರೆ ಚಿಲಿಮಿಲಿ ಎಂದೋದುವ ಗಿಳಿಗಳಿರಾ, ನೀವು ಕಾಣಿರೇ ನೀವು ಕಾಣಿರೇ ಸರವೆತ್ತಿ ಪಾಡುವ ಕೋಗಿಲೆಗಳಿರಾ, ನೀವು ಕಾಣಿರೇ ನೀವು ಕಾಣಿರೇ ಎರಗಿ ಬಂದಾಡುವ ತುಂಬಿಗಳಿರಾ, ನೀವು ಕಾಣಿರೇ ನೀವು ಕಾಣಿರೇ ಕೊಳತಡಿಯೊಳಾಡುವ ಹಂಸೆಗಳಿರಾ, ನೀವು ಕಾಣಿರೇ ನೀವು ಕಾಣಿರೇ ಗಿರಿ ಗಹ್ವರದೊಳಗಾಡುವ ನವಿಲುಗಳಿರಾ, ನೀವು ಕಾಣಿರೇ ನೀವು ಕಾಣಿರೇ ಚನ್ನಮಲ್ಲಿಕಾರ್ಜುನನೆಲ್ಲಿರ್ದಿಹನೆಂದು ನೀವು ಹೇಳಿರೇ ನೀವು ಹೇಳಿರೇ ——ಅಕ್ಕಮಹಾದೇವಿ