ಕೃಷ್ಣ

ಕಂದಾ ಬೇಡವೋ

ಕಂದಾ ಬೇಡವೊ ಮಣ್ಣು ತಿನ್ನಬೇಡ ತಿನ್ನಬೇಡವೊ|| ಕಂದಾ ಬೇಡವೊ ಮಣ್ಣು ತಿನ್ನಲಿಬೇಡ| ಸುಂದರಾಂಗನೆ ನಿನಗೆ ಹೊಟ್ಟೆ ನೋಯುವುದಯ್ಯ|| ಬೇಗನೆ ಏಳಯ್ಯ ಮಣ್ಣಾಟ ಬಿಡೊ ನೀನು| ಜೋಗಿ ಬರುತಾನಲ್ಲಿ ಅಂಜಿಸುವುದಕೀಗ|| ತಾಯ ಮಾತನು ಒತ್ತಿ ಕರದಲಿ ಮಣ್ಣೆತ್ತಿ| ಬಾಯಲಿ ಇಟ್ಟನು ಬಾಲಕೃಷ್ಣಯ್ಯನು|| ಪೆಟ್ಟು ಕೊಡುವೆ ನಿನಗೆ ಸಿಟ್ಟು ಬಹಳ ಇದೆ| ಮುಟ್ಟಬೇಡೊ ಮಣ್ಣು ಬೆಣ್ಣೆ ತರುವೆನಯ್ಯ|| ಅಮ್ಮಯ್ಯ ಕೇಳೆಲೆ ಬಾಯಲಿ ಮಣ್ಣೆಲ್ಲ| ಗುಮ್ಮನು ಬರಬೇಡ ಸುಮ್ಮನೆ ಇರುತೇನೆ|| ಮಗುವೆ ಬಾ ಬಾ ಎಂದು ಬಣ್ಣಿಸಿ ಕರೆದಳು| ಮಗುವಿನ ಬಾಯ […]

ಕಂದಾ ಬೇಡವೋ Read More »

ಕಂಡು ಕಂಡು ನೀ ಎನ್ನ

ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣ ಪುಂಡರೀಕಾಕ್ಷ ಶ್ರೀಪುರುಷೋತ್ತಮ ದೇವ|| ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ ನಿಂದೆಯಲಿ ನೊಂದೆನಯ್ಯ ನೀರಜಾಕ್ಷ| ಬಂಧು ಬಳಗವು ನೀನೆ ತಂದೆತಾಯಿಯು ನೀನೆ ಎಂದೆಂದಿಗೂ ನಿನ್ನ ನಂಬಿದೆನೋ ಶ್ರೀಹರಿಯೆ|| ಕ್ಷಣವೊಂದು ಯುಗವಾಗಿ ತೃಣಕಿತ ಕಡೆಯಾಗಿ ಎಣಿಸಲಾರದ ಭವದಿ ನೊಂದೆ ನಾನು| ಸನಕಾದಿ ಮುನಿವಂದ್ಯ ವನಜಸಂಭವಜನಕ ಫಣಿಶಾಯಿ ಪ್ರಹ್ಲಾದಗೊಲಿದ ಶ್ರೀಹರಿಯೆ|| ಭಕ್ತವತ್ಸಲನೆಂಬೊ ಬಿರುದು ಪೊತ್ತಮೇಲೆ ಭಕ್ತರಾಧೀನನಾಗಿರಬೇಡವೆ| ಮುಕ್ತಿದಾಯಕ ನಮ್ಮ ಪುರಂದರವಿಟ್ಠಲನೆ ಶಕ್ತ ನೀನಹುದೆಂದು ನಂಬಿದೆನೋ ಶ್ರೀಹರಿಯೆ||                                                           —ಪುರಂದರದಾಸ

ಕಂಡು ಕಂಡು ನೀ ಎನ್ನ Read More »

ಕಂಗಳಿವ್ಯಾತಕೋ

ಕಂಗಳಿವ್ಯಾತಕೋ ಕಾವೇರಿರಂಗನ ನೋಡದ|| ಜಗಂಗಳೊಳಗೆ ಮಂಗಳಮೂರುತಿ ರಂಗನ ಶ್ರೀಪಾದಂಗಳ ನೋಡದ|| ಎಂದಿಗಾದರೊಮ್ಮೆ ಜನರು ಬಂದು ಭೂಮಿಯಲ್ಲಿ ನಿಂದು| ಚಂದ್ರ ಪುಷ್ಕರಣಿ ಸ್ನಾನವ ಮಾಡಿ ಆನಂದದಿಂದಲಿ ರಂಗನ ಕಾಣದ|| ಹರಿಪಾದೋದಕಸಮ ಕಾವೇರಿ ವಿರಜಾ ನದಿಲಿ ಸ್ನಾನವ ಮಾಡಿ| ಪರಮ ವೈಕುಂಠ ರಂಗ ಮಂದಿರ ಪರವಾಸುದೇವನ ನೋಡದ|| ಹಾರ ಹೀರ ವೈಜಯಂತಿ ತೋರ ಮುತ್ತಿನ ಹಾರ ಪದಕ| ತೇರನೇರಿ ಬೀದಿಲಿ ಬರುವ ರಂಗವಿಟ್ಠಲರಾಯನ ನೋಡದ||                                 —ಶ್ರೀಪಾದರಾಜಸ್ವಾಮಿ

ಕಂಗಳಿವ್ಯಾತಕೋ Read More »

ಕಲಿಯುಗದಲಿ ಹರಿನಾಮವ

ಕಲಿಯುಗದಲಿ ಹರಿನಾಮವ ನೆನೆದರೆ ಕುಲಕೋಟಿಗಳುದ್ಧರಿಸುವವೋ ರಂಗಾ|| ಸುಲಭದ ಮುಕ್ತಿಗೆ ಸುಲಭನೆಂದೆನಿಸುವ ಜಲರುಹನಾಭನ ನೆನೆ ಮನವೆ|| ಸ್ನಾನವನರಿಯೆನು ಮೌನವನರಿಯೆನು ಧ್ಯಾನವನರಿಯೆನೆಂದೆನಬೇಡ| ಜಾನಕಿವಲ್ಲಭ ದಶರಥನಂದನ ಗಾನವಿನೋದನ ನೆನೆ ಮನವೆ|| ಅರ್ಚಿಸಲರಿಯೆನು ಮೆಚ್ಚಿಸಲರಿಯೆನು ತುಚ್ಛನು ನಾನೆಂದೆನಬೇಡ| ಅಚ್ಯುತಾನಂತ ಗೋವಿಂದ ಮುಕುಂದನ ಇಚ್ಛೆಯಿಂದ ನೀ ನೆನೆ ಮನವೆ|| ಜಪವೊಂದರಿಯೆನು ತಪವೊಂದರಿಯೆನು ಉಪದೇಶವಿಲ್ಲೆಂದೆನಬೇಡ| ಅಪಾರ ಮಹಿಮ ಶ್ರೀ ಪುರಂದರವಿಟ್ಠಲನ ಉಪಾಯದಿಂದಲಿ ನೆನೆ ಮನವೆ||                                     —ಪುರಂದರದಾಸ

ಕಲಿಯುಗದಲಿ ಹರಿನಾಮವ Read More »

ಕರುಣಿಸೋ ರಂಗಾ

ಕರುಣಿಸೋ ರಂಗಾ ಕರುಣಿಸೋ ಹಗಲು ಇರುಳೂ ನಿನ್ನ ಸ್ಮರಣೆ ಮರೆಯದಂತೆ|| ರುಕುಮಾಂಗದನಂತೆ ವ್ರತವ ನಾನರಿಯೆ ಶುಕಮುನಿಯಂತೆ ಸ್ತುತಿಸಲರಿಯೆ| ಬಕವೈರಿಯಂತೆ ಧ್ಯಾನ ಮಾಡಲರಿಯೆ ದೇವಕಿಯಂತೆ ಮುದ್ದಿಸಲರಿಯೆನೋ|| ಗರುಡನಂದದಿ ಪೊತ್ತು ತಿರುಗಲು ಅರಿಯೆ ಕರೆಯಲರಿಯೆನೋ ಕರಿರಾಜನಂತೆ| ವರಕಪಿಯಂತೆ ದಾಸ್ಯ ಮಾಡಲರಿಯೆ ಸಿರಿಯಂತೆ ಸುಖವಿತ್ತು ಸೇವಿಸಲರಿಯೆನೋ|| ಬಲಿಯಂತೆ ದಾನವ ಕೊಡಲಾರೆನೊ ಭಕ್ತಿ- ಛಲವನರಿಯೆನೋ ಪ್ರಹ್ಲಾದನಂತೆ| ಒಲಿಸಲರಿಯೆನೋ ಅರ್ಜುನನಂತೆ ಸಖನಾಗಿ ಸಲಹೋ ದೇವರ ದೇವ ಪುರಂದರವಿಟ್ಠಲ||                                                          —ಪುರಂದರದಾಸ

ಕರುಣಿಸೋ ರಂಗಾ Read More »

ಕರುಣಾಕರ ನೀನೆಂಬುವುದೇತಕೋ

ಕರುಣಾಕರ ನೀನೆಂಬುವುದೇತಕೋ ಭರವಸೆಯಿಲ್ಲೆನಗೆ|| ಪರಿಪರಿಯಲಿ ಈ ನರಜನ್ಮವನಿತ್ತು ತಿರುಗಿ ತಿರುಗಿ ಮನಕರಗಿಸುವುದ ಕಂಡು|| ಕರಿ ಧ್ರುವ ಬಲಿ ಪಾಂಚಾಲಿ ಅಹಲ್ಯೆಯ ಪೊರೆದವ ನೀನಂತೆ| ಅರಿತು ವಿಚಾರಿಸಿ ನೋಡಲದೆಲ್ಲವು ಪರಿಪರಿ ಕಂತೆಗಳಂತಿವೆ ಕೃಷ್ಣಾ|| ಕರುಣಾಕರ ನೀನಾದರೆ ಈಗಲೆ ಕರಪಿಡಿದೆನ್ನನು ಹರಿ ಕಾಯೋ| ಸರಸಿಜಾಕ್ಷನೆ ಸರಸ ನೀನಾದರೆ ದುರಿತಗಳೆನ್ನನು ಬಾಧಿಪುದುಂಟೆ|| ಮರಣಕಾಲದಲಿ ಅಜಮಿಳಗೊಲಿದೆ ಗರುಡಧ್ವಜನೆಂಬ ಬಿರುದಿನಿಂದ| ವರಬಿರುದುಗಳು ಉಳಿಯಬೇಕಾದರೆ ತ್ವರಿತದಿ ಕಾಯೋ ಪುರಂದರವಿಟ್ಠಲ||                                        —-ಪುರಂದರದಾಸ

ಕರುಣಾಕರ ನೀನೆಂಬುವುದೇತಕೋ Read More »

ಏಹಿ ಮುದಂ

ಏಹಿ ಮುದಂ ದೇಹಿ ಶ್ರೀಕೃಷ್ಣ ಕೃಷ್ಣ-ಮಾಂ ಪಾಹಿ ಗೋಪಾಲ ಬಾಲ ಕೃಷ್ಣ ಕೃಷ್ಣ|| ಧಾವ ಧಾವ ಮಾಧವ ಶ್ರೀಕೃಷ್ಣ ಕೃಷ್ಣ-ನವ್ಯ ನವನೀತಮಾಹರ ಶ್ರೀ ಕೃಷ್ಣ ಕೃಷ್ಣ|| ಭವ್ಯನಟನಂ ಕುರು ಶ್ರೀಕೃಷ್ಣ ಕೃಷ್ಣ-ಬಲ ಭದ್ರಸಹಿತ ಶ್ರೀಕೃಷ್ಣ ಕೃಷ್ಣ|| ಸಾಧು ಸಾಧು ಕೃತಮಿಹ ಕೃಷ್ಣ ಕೃಷ್ಣ-ಲೋಕ ಸಾಧಕಹಿತಾಯ ಶ್ರೀಕೃಷ್ಣ ಕೃಷ್ಣ|| ನಾರದಾದಿ ಮುನಿಗೇಯ ಕೃಷ್ಣ ಕೃಷ್ಣ-ಶ್ರೀಮನ್ ನಾರಾಯಣತೀರ್ಥವರದ ಕೃಷ್ಣ ಕೃಷ್ಣ||                                                  ——ನಾರಾಯಣತೀರ್ಥ

ಏಹಿ ಮುದಂ Read More »

ಏನು ಮಾಡಿದರೇನು

ಏನು ಮಾಡಿದರೇನು ಭವ ಹಿಂಗದು ಸ್ವಾಮಿ ದಾನವಾಂತಕ ನಿನ್ನ ದಯವಾಗದನಕ|| ಅರುಣೋದಯದೊಳೆದ್ದು ಅತಿಸ್ನಾನಗಳ ಮಾಡಿ ಬೆರಳೆಣಿಸಿದೆ ಅದರ ನಿಜವರಿಯದೆ| ಚರಣ ಸಾಷ್ಟಾಂಗವನು ಮಾಡಿ ನಾ ದಣಿದೆನೋ ಹರಿ ನಿನ್ನ ಕರುಣಾಕಟಾಕ್ಷವಾಗದನಕ|| ಶ್ರುತಿ ಶಾಸ್ತ್ರ ಪುರಾಣಗಳನೋದಿ ಬೆಂಡಾದೆ ಅತಿ ಶೀಲಗಳನೆಲ್ಲ ಮಾಡಿ ದಣಿದೆ| ಗತಿಯ ಪಡೆಯುವೆನೆಂದು ಕಾಯ ದಂಡಿಸಿದೆನೋ ರತಿಪತಿಪಿತ ನಿನ್ನ ದಯವಾಗದನಕ|| ಧ್ಯಾನವನು ಮಾಡಿದೆನು ಮೌನವನು ತಾಳಿದೆ ಮ- ಹಾನು ಪುರುಷಾರ್ಥಕ್ಕೆ ಮನವನಿಕ್ಕಿ| ಅನಾಥಬಂಧು ಶ್ರೀ ಪುರಂದರವಿಟ್ಠಲನ ಧ್ಯಾನಿಸುವರೊಡಗೂಡಿ ನೆಲೆಗಾಣದನಕ||                                                    —-ಪುರಂದರದಾಸ

ಏನು ಮಾಡಿದರೇನು Read More »

ಎಂದಿಗಾಹುದೋ ನಿನ್ನ ದರುಶನ

ಎಂದಿಗಾಹುದೋ ನಿನ್ನ ದರುಶನ ಇಂದಿರೇಶ ಶ್ರೀ ಗೋವಿಂದ ಮುಕುಂದ|| ತಂದೆ ತಾಯಿ ನೀನೇ ಬಂಧು ಬಳಗ ನೀನೇ ಎಂದು ಭಜಿಸುವಾ ಆನಂದ ಗೋವಿಂದ| ಸರಸಿಜೋದ್ಭವಾ ಶ್ರೀಹರೀಶನಾದ ನಿನ್ನ ನ್ಮರಿಸುವಾ ಸುಖ ಎಂದಿಗಾಹುದೋ|| ಅಜಭವಾದಿಗಳು ಆನಂದದಿಂದಲಿ ಭಜಿಸಿ ಪಾಡುವಾ ನಿನ್ನ ಸುಖವು| ದೀನವತ್ಸಲ ಶ್ರೀನಿಕೇತನಾ ಮಾನದಿಂದ ನಿನ್ನ ಧ್ಯಾನವೇ ಸುಖವು|| ಭಯನಿವಾರಣ ಭಕ್ತವತ್ಸಲ ವಿಜಯಸಾರಥಿ ವಿಜಯವಿಟ್ಠಲನೆ||                                       —-ವಿಜಯದಾಸ

ಎಂದಿಗಾಹುದೋ ನಿನ್ನ ದರುಶನ Read More »

ಎಂತಾದರೂ ಚಿಂತೆ ಬಿಡದು

ಎಂತಾದರೂ ಚಿಂತೆ ಬಿಡದು| ನಿಶ್ಚಿಂತರಾದವರ ನಾನೊಬ್ಬರನು ಕಾಣೆ|| ಬ್ರಹ್ಮನಿಗೆ ಶಿರವೊಂದು ಭಿನ್ನವಾದ ಚಿಂತೆ ರಕ್ಕಸರ ಗುರುವಿಗೆ ಕಣ್ಣಿಲ್ಲದ ಚಿಂತೆ| ಮನ್ಮಥಗೆ ತನುಸುಟ್ಟು ಭಸ್ಮವಾದ ಚಿಂತೆ ಮುಕ್ಕಣ್ಣ ಶಿವನಿಗೆ ತಿರಿದುಂಬೊ ಚಿಂತೆ|| ಧರ್ಮನಿಷ್ಠರಿಗೆ ಸುಖದೊಳಿರುವ ಚಿಂತೆ ದುಷ್ಕರ್ಮಿಗಳಿಗೆ ಪರರ ಕೆಡಿಸುವ ಚಿಂತೆ| ತಮ್ಮ ಅರ್ಜುನಗೆ ವೈರಿಯ ಕೊಲ್ಲುವ ಚಿಂತೆ ಅಣ್ಣ ಭೀಮನಿಗೆ ಅನ್ನ ಸಾಲದ ಚಿಂತೆ|| ಭಕ್ತರಿಗೆ ಗುರುವಿನಲಿ ಮುಕ್ತಿ ಪಡೆಯುವ ಚಿಂತೆ ಮುಕ್ತರಿಗೆ ಅನುಕ್ಷಣವು ಹರಿದರ್ಶನದ ಚಿಂತೆ| ಯುಕ್ತಿ ಬಲ್ಲವರಿಗೆ ತತ್ತ್ವ ಹೇಳುವ ಚಿಂತೆ ಶಕ್ತ ಪುರಂದರವಿಟ್ಠಲಗೆಮ್ಮ

ಎಂತಾದರೂ ಚಿಂತೆ ಬಿಡದು Read More »

ಎನಗೂ ಆಣೆ

ಎನಗೂ ಆಣೆ ರಂಗ ನಿನಗೂ ಆಣೆ| ಎನಗೂ ನಿನಗೂ ಇಬ್ಬರಿಗೂ ನಿನ್ನ ಭಕ್ತರಿಗೂ ನಿನ್ನ ಭಕ್ತರಾಣೆ|| ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ| ರಂಗ ಎನ್ನ ನೀ ಕೈಬಿಟ್ಟು ಪೋದರೆ ನಿನಗೆ ಆಣೆ|| ತನುಮನಧನದಲಿ ವಂಚಕನಾದರೆ ಎನಗೆ ಆಣೆ |ರಂಗ ಮನಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ || ಕಾಕು ಮನುಜರ ಸಂಗ ಮಾಡಿದರೆನಗೆ ಆಣೆ| ರಂಗ ಲೌಕಿಕವ ಬಿದಿಸದಿದ್ದರೆ ನಿನಗೆ ಆಣೆ|| ಶಿಷ್ಟರ ಸಂಗವ ಮಾಡದಿದ್ದರೆ ಎನಗೆ ಆಣೆ| ರಂಗ ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ

ಎನಗೂ ಆಣೆ Read More »

ಉಬ್ಬದಿರು ಉಬ್ಬದಿರು

ಉಬ್ಬದಿರು ಉಬ್ಬದಿರು ಎಲೆ ಮಾನವ | ಹೆಬ್ಬುಲಿಯಂತೆ ಯಮ ಬೊಬ್ಬಿಡುತ ಕಾದಿರುವ|| ಸಾಗರದ ತೆರೆಯಂತೆ ಸಾವು ಹುಟ್ಟಿರಲಾಗಿ ಭೋಗಭಾಗ್ಯಗಳೆಂದು ಬಳಲಲೇಕೋ| ನಾಗಹೆಡೆ ನೆರಳಲ್ಲಿ ನಡುಗೋ ಕಪ್ಪೆಯ ತೆರದಿ ಕೂಗಿ ಚೀರಿದರೆ ನಿನ್ನಾಗ ಕೇಳುವರೆ|| ಮಾಳಿಗೆ ಮನೆಯೆಂದು ಮತ್ತೆ ಸತಿಸುತರೆಂದು ಜಾಳಿಗೆ ಧನಧಾನ್ಯ ಪಶುಗಳೆಂದು| ವೇಳೆ ತಪ್ಪದೆ ತಿಂಬ ಕೂಳು ತನಗುಂಟೆಂದು ಗಾಳಿಗೊಡ್ಡಿದ ದೀಪ ಬದುಕು ಬಯಲು || ಅಸ್ಧಿರದ ಭವದೊಳಗೆ ಅತಿಶಯಗಳಣಿಸದಲೆ ವಸ್ತು ಇದರಲಿ ಕೇಳು ವೈರಾಗ್ಯವ| ವಿಸ್ತಾರ ಮಹಿಮ ಶ್ರೀ ಪುರಂದರವಿಟ್ಠಲನ ಸ್ವಸ್ಥಚಿತ್ತದಿ ನೆನೆದು ಮುಕ್ತಿ

ಉಬ್ಬದಿರು ಉಬ್ಬದಿರು Read More »

ಈ ಪರಿಯ ಸೊಬಗಾವ

ಈ ಪರಿಯ ಸೊಬಗಾವ ದೇವರಲಿ ನಾ ಕಾಣೆ ಗೋಪೀಜನಪ್ರಿಯ ಗೋಪಾಲಗಲ್ಲದೆ|| ದೊರೆಯತನದಲಿ ನೋಡೆ ಧರಣಿದೇವಿಗೆ ರಮಣ ಸಿರಿಯತನದಲಿ ನೋಡೆ ಶ್ರೀಕಾಂತನು| ಹಿರಿಯತನದಲಿ ನೋಡೆ ಸರಸಿಜೋದ್ಭವನಯ್ಯಾ ಗುರುವುತನದಲಿ ನೋಡೆ ಜಗದಾದಿಗುರುವು|| ಪಾವನತ್ವದಿ ನೋಡೆ ಅಮರಗಂಗಾಜನಕ ದೇವತ್ವದಲಿ ನೋಡೆ ದಿವಿಜರೊಡೆಯ| ಲಾವಣ್ಯದಲಿ ನೋಡೆ ಲೋಕಮೋಹಕನಯ್ಯಾ ಆವ ಧೈರ್ಯದಿ ನೋಡೆ ಅಸುರಾಂತಕನು|| ಗಗನದಲಿ ಸಂಚರಿಪ ಗರುಢದೇವನೆ ತುರಗ ಜಗತೀಧರ ಶೇಷ ಪರ್ಯಂಕಶಯನ| ನಿಗಮಗೋಚರ ನಮ್ಮ ಪುರಂದರವಿಟ್ಠಲಗಲ್ಲದೆ ಮಿಗಿಲಾದ ದೈವಗಳಿಗೀ ಭಾಗ್ಯವುಂಟೇ||                                                      —ಪುರಂದರದಾಸ

ಈ ಪರಿಯ ಸೊಬಗಾವ Read More »

ಇನಿತಾದರೂ ನಿನಗೆ ಮತಿಯಿಲ್ಲವೆ

ಇನಿತಾದರೂ ನಿನಗೆ ಮತಿಯಿಲ್ಲವೇ ಮನವೆ| ಹೀನಾಯ ಮಾಡದಿರು ಪರದೋಷಗಳನೆಣಿಸಿ|| ಅವನ ಬಯ್ಯುವೆ ಯಾಕೆ ಅವನ್ಯಾರು ನೀನ್ಯಾರು ಅವನ ಪಾಪಕೆ ನೀನು ಭಾಗಿಯಾದೆ| ಅವನು ಉತ್ತಮನಾದರವನು ಬದುಕಿದ ಕಾಣೊ ಅವ ಪುಣ್ಯ ಮಾಡಿದರೆ ಅವನ ಕುಲ ಉದ್ಧಾರ|| ನೀನು ಪಡೆವುದರಲ್ಲಿ ಬೇಡಬಂದವನಲ್ಲ ನಿನಗು ಅವನಿಗು ಏನು ಸಂಬಂಧವೊ| ಮನೆ ಒಡವೆ ವಸ್ತ್ರಗಳ ಭಾಗ ಕೇಳುವುದಿಲ್ಲ ಕ್ಷಣಕ್ಷಣಕೆ ಸಂದೇಹ ಮಾಡಿಕೊಂಬುದು ಸಲ್ಲ|| ನಿನ್ನ ಗತಿ ಮಾರ್ಗಕ್ಕೆ ಅವ ನಡೆದು ಬರುವನೇ ನಿನ್ನಿಂದ ಪರಲೋಕ ಅವಗೆ ಉಂಟೆ| ನಿನ್ನೊಳಗೆ ನೀ ತಿಳಿದು

ಇನಿತಾದರೂ ನಿನಗೆ ಮತಿಯಿಲ್ಲವೆ Read More »

ಆವ ರೋಗವು ಎನಗೆ

ಆವ ರೋಗವು ಎನಗೆ ದೇವ ಧನ್ವಂತ್ರಿ| ಸಾವಧಾನದಿ ಎನ್ನ ಕೈಪಿಡಿದು ನೋಡಯ್ಯ|| ಹರಿಮೂರ್ತಿಗಳು ಎನ್ನ ಕಂಗಳಿಗೆ ಕಾಣಿಸವು ಹರಿಯ ಕೀರ್ತನೆಯು ಕೇಳಿಸದು ಕಿವಿಗೆ| ಹರಿಮಂತ್ರ ಸ್ತೋತ್ರ ಬಾರದು ಎನ್ನ ನಾಲಿಗೆಗೆ ಹರಿಪ್ರಸಾದವ ಜಿಹ್ವೆ ಸವಿಯದಯ್ಯ|| ಹರಿಪಾದ ಸೇವೆಗೆ ಹಸ್ತಗಳು ಚಲಿಸವು ಗುರುಹಿರಿಯರಂಘ್ರಿಗೆ ಶಿರ ಬಾಗದು| ಹರಿಯ ನಿರ್ಮಾಲ್ಯವಾಘ್ರಾಣಿಸದು ನಾಸಿಕವು ಹರಿಯಾತ್ರೆಗಳಿಗೆನ್ನ ಕಾಲೇಳದಯ್ಯ|| ಅನಾಥಬಂಧು ಗೋಪಾಲವಿಟ್ಠಲರೇಯ ಎನ್ನ ಭಾಗದ ವೈದ್ಯ ನೀನೆ ನೀನೇ| ಅನಾದಿಕಾಲದ ಭವರೋಗ ಕಳೆಯಯ್ಯ ನಾನೆಂದಿಗೂ ಮರೆಯೆ ನಿನ್ನ ಉಪಕಾರ||                                           ——-ಗೋಪಾಲದಾಸ

ಆವ ರೋಗವು ಎನಗೆ Read More »

ಆಲೋಲತುಲಸೀ

ಆಲೋಲತುಲಸೀವನಮಾಲಭೂಷಣ ಶ್ರೀರಾಮ ರಾಮ ಹರೇ –ಶ್ರೀಮನ್ ನಾರಾಯಣ ಕೃಷ್ಣ ಗೋವಿಂದ ಮಾಧವ ಪುರುಷೋತ್ತಮ ಪಾಲಯ|| ನಂದನಂದನ ಸುಂದರವದನ–ಶ್ರೀರಾಮ…|| ದಶರಥಬಾಲ ದಶಮುಖಕಾಲ–ಶ್ರೀರಾಮ…|| ಕ್ಷೀರಾಬ್ಧಿಶಯನ ಕ್ಷಾರಾಬ್ಧಿಬಂಧನ–ಶ್ರೀರಾಮ…|| ಧನ್ಯಚರಿತ್ರ ಗಣ್ಯಪವಿತ್ರ –ಶ್ರೀರಾಮ…|| ಪಾಲಿತಾಮರ ವಾಲಿನಾಶಕ –ಶ್ರೀರಾಮ…|| ಸಾಮಗಾನನುತ ಭೀಮಾನುಜಮಿತ್ರ–ಶ್ರೀರಾಮ…|| ತಾಟಕಾಂತಕ ಪಾಟಿತಾಸುರ–ಶ್ರೀರಾಮ…|| ಭಕ್ತಪಾಲಕ ಮುಕ್ತಿದಾಯಕ–ಶ್ರೀರಾಮ…|| ಕಂಕಣಭೂಷಣ ಪಂಕಜನಯನ– ಶ್ರೀರಾಮ…|| ವರಹೇಮಾಂಬರ ಕರಧೃತಶೈಲ– ಶ್ರೀರಾಮ…|| ಭರತಾನಂದ ಭದ್ರಾದ್ರಿವಾಸ –ಶ್ರೀರಾಮ…||                                                     —-ಭದ್ರಾಚಲ ರಾಮದಾಸ

ಆಲೋಲತುಲಸೀ Read More »

ಆಚಾರವಿಲ್ಲದ ನಾಲಿಗೆ

ಆಚಾರವಿಲ್ಲದ ನಾಲಿಗೆ| ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ| ವಿಚಾರವಿಲ್ಲದೆ ಪರರ ದೂಷಿಪುದಕೆ ಚಾಚಿಕೊಂಡಿರುವಂಥ ನಾಲಿಗೆ|| ಪ್ರಾತಃಕಾಲದೊಳೆದ್ದು ನಾಲಿಗೆ| ಸಿರಿ- ಪತಿಯೆನ್ನಬಾರದೆ ನಾಲಿಗೆ| ಪತಿತಪಾವನ ನಮ್ಮ ರತಿಪತಿಜನಕನ ಸತತವು ನುಡಿ ಕಂಡ್ಯ ನಾಲಿಗೆ|| ಚಾಡಿ ಹೇಳಲಿಬೇಡ ನಾಲಿಗೆ| ನಿನ್ನ ಬೇಡಿಕೊಂಬೆನು ಕಂಡ್ಯ ನಾಲಿಗೆ| ರೂಢಿಗೊಡೆಯ ಶ್ರೀರಾಮನ ಪಾದವ ಪಾಡುತಲಿರು ಕಂಡ್ಯ ನಾಲಿಗೆ|| ಹರಿಯನ್ನೆ ಸ್ಮರಿಸಯ್ಯ ನಾಲಿಗೆ| ನರ- ಹರಿಯನ್ನೆ ಭಜಿಸಯ್ಯ ನಾಲಿಗೆ| ವರದ ಪುರಂದರವಿಟ್ಠಲರಾಯನ ಚರಣವ ನುತಿಸಯ್ಯ ನಾಲಿಗೆ||                                           —-ಪುರಂದರದಾಸ

ಆಚಾರವಿಲ್ಲದ ನಾಲಿಗೆ Read More »

ಅಲ್ಲಿದೆ ನಮ್ಮನೆ

ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ || ಕದ ಬಾಗಿಲಿರಿಸಿದ ಕಳ್ಳಮನೆ —ಇದು ಮುದದಿಂದ ಲೋಲಾಡೊ ಸುಳ್ಳುಮನೆ| ಇದಿರಾಗಿ ವೈಕುಂಠವಾಸ ಮಾಡುವಂಥ ಪದುಮನಾಭನ ದಿವ್ಯ ಬದುಕು ಮನೆ|| ಮಾಳಿಗೆ ಮನೆಯೆಂದು ನೆಚ್ಚಿ ಕೆಡಲಿಬೇಡ ಕೇಳಯ್ಯ ಹರಿಕಥೆ ಶ್ರವಣಂಗಳ| ನಾಳೆ ಯಮದೂತರು ಬಂದೆಳೆದೊಯ್ವಾಗ ಮಾಳಿಗೆ ಮನೆಯು ಸಂಗಡ ಬಾರದಯ್ಯ|| ಮಡದಿ ಮಕ್ಕಳೆಂಬ ಹಂಬಲ ನಿನಗೇಕೋ ಕಡುಗೊಬ್ಬುತನದಲಿ ನಡೆಯದಿರು| ಒಡೆಯ ಶ್ರೀ ಪುರಂದರವಿಟ್ಠಲನ ಚರಣವ ದೃಢಭಕ್ತಿಯಲಿ ನೀ ಭಜಿಸೆಲೊ ಮನುಜನೆ||                                                  —–ಪುರಂದರದಾಸ  

ಅಲ್ಲಿದೆ ನಮ್ಮನೆ Read More »

ಅಮ್ಮ ನಿಮ್ಮ ಮನೆಗಳಲ್ಲಿ

ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಂಗನ ಕಾಣಿರೇನೆ|| ಕಾಶಿ ಪೀತಾಂಬರ ಕೈಯಲಿ ಕೊಳಲು ಪೂಸಿದ ಶ್ರೀಗಂಧ ಮೈಯೊಳಗಮ್ಮ| ಲೇಸಾಗಿ ತುಲಸಿಯ ಮಾಲೆಯ ಧರಿಸಿದ ವಾಸುದೇವನು ಬಂದ ಕಾಣಿರೇನೆ|| ಕರದಲಿ ಕಂಕಣ ಬೆರಳಲ್ಲಿ ಉಂಗುರ ಕೊರಳಲ್ಲಿ ಧರಿಸಿದ ಹುಲಿಯುಗುರಮ್ಮ| ಅರಳೆಲೆ ಕನಕಕುಂಡಲ ಕಾಲಲಂದುಗೆ ಉರಗಶಯನ ಬಂದ ಕಾಣಿರೇನೆ|| ಕಾಲಲಿ ಕಿರುಗೆಜ್ಜೆ ನೀಲದ ಬಾವುಲಿ ನೀಲವರ್ಣನು ನಾಟ್ಯವಾಡುತಲಿ| ಮೇಲಾಗಿ ಬಾಯಲಿ ಜಗವನು ತೋರಿದ ಮೂಲೋಕದೊಡೆಯನ ಕಾಣಿರೇನೆ|| ಕುಂಕುಮ ಕಸ್ತೂರಿ ಕುಡಿಕುಡಿ ನಾಮವು ಶಂಖಚಕ್ರಗಳ ಧರಿಸಿಹನಮ್ಮ| ಬಿಂಕದಿಂದಲಿ ಕೊಳಲೂದುತ್ತ ಪಾಡುತ್ತ ಪಂಕಜಾಕ್ಷ

ಅಮ್ಮ ನಿಮ್ಮ ಮನೆಗಳಲ್ಲಿ Read More »