ಇತರೆ

ಕಳೆಯಬೇಕೆ ದಿನಗಳೆಲ್ಲ

ಕಳೆಯಬೇಕೆ ದಿನಗಳೆಲ್ಲ ವಿಫಲವಾಗಿ ಹೋಗಿಯೇ| ಹಗಲು ಇರುಳು ಆಶಾಪಥವ ಕಾಯುತಿಹೆನು ಸ್ವಾಮಿಯೇ|| ತ್ರಿಭುವನಗಳ ನಾಥ ನೀನು ಭಿಕಾರಿ ಅನಾಥ ನಾನು| ಕರೆಯಲೆಂತು ಮಮ ಹೃದಯದಿ ನೆಲೆಸು ಎಂದು ಹೀಗೆಯೇ|| ಹೃದಯ ಕುಟಿಯ ದ್ವಾರಗಳನು ಅನವರತವು ತೆರೆದಿರುವೆನು| ಕೃಪೆಯ ತೋರಿ ಬಂದು ನೀಡು ಶಾಂತಿಯನ್ನು ಸ್ವಾಮಿಯೇ||

ಕಳೆಯಬೇಕೆ ದಿನಗಳೆಲ್ಲ Read More »

ಕರುಣ ಶೀತಲ

ಕರುಣ ಶೀತಲ ಕಿರಣ ಶೋಭಿತ ತರಣಿ ನಿನ್ನಯ ಚರಣಕೆರಗುವೆ|| ಕಾಮ ಮೋಹದ ತಮವ ಕಳೆಯಲು ಪ್ರೇಮ ಚ್ಯೋತಿಯ ಕಾಂತಿ ಬೆಳಗಿಹೆ| ವಿಷಮ ಶೈತ್ಯದಿ ಭೀತ ಜಗಕೆ ಸೌಮ್ಯ ಸಮತೆಯ ಸ್ಥೈರ್ಯ ನೀಡಿಹೆ|| ಕರ್ಮಕಾಂಡದ ಕ್ರೌರ್ಯ ಜಡತೆಯಿಂ ಧರ್ಮಶಾಸ್ತ್ರದ ಶುಷ್ಕವಾದದಿಂ| ಧರ್ಮಬಾಳ್ವೆಯ ಸಲಹಲೆಂದು ಧರ್ಮಮೂರುತಿ ಇಳಿದು ಬಂದೆ|| ಸರ್ವಧರ್ಮದ ಸರ್ವಕರ್ಮದ ಸರ್ವಸಾರವ ತೆರೆದು ತೋರಿದೆ| ಸರ್ವಸೃಷ್ಟಿ ವಿಮುಕ್ತಿಸಾಧಕ ಸರ್ವತ್ಯಾಗಿ ಸಾರ್ವಭೌಮ||                              —–ಸ್ವಾಮಿ ಶಾಸ್ತ್ರಾನಂದ

ಕರುಣ ಶೀತಲ Read More »

ಏನು ನಿರುಪಮ ಸೊಬಗು

ಏನು ನಿರುಪಮ ಸೊಬಗು, ಓಹೋ ಎಂಥ ಚೆಲುವಿನ ಮೋಹನ! ನನ್ನ ಹೃದಯದ ಮೂರ್ತಿ ಬಂದನು ಎದೆಯ ಗುಡಿಸಲಿಗೀದಿನ! ಎದೆಯೊಳೊಲವಿನ ಚಿಲುಮೆ ಚಿಮ್ಮಿವೆ ಹತ್ತು ಕಡೆಗೂ ಸುಮ್ಮನೆ! ಯಾವ ಸಂಪದವನ್ನು ಸುರಿಯಲಿ ಹೇಳು ನಿನ್ನೀ ಪದದೆಡೆ? ನನ್ನ ಹರಣವೆ ಶರಣು ನಿನಗೆ, ನನ್ನ ಆತ್ಮವೆ ನಿನ್ನದು  ; ಮತ್ತೆ ಏನನು ನೀಡಲಯ್ಯಾ?- ನನ್ನದೆಲ್ಲವು ನಿನ್ನದು!                          —-ವಚನವೇದ

ಏನು ನಿರುಪಮ ಸೊಬಗು Read More »

ಎಲ್ಲಿ ಅರಸುವೆ ನೀನು

ಎಲ್ಲಿ ಅರಸುವೆ ನೀನು ಓ ನನ್ನ ಕಿಂಕರನೆ ನಿನ್ನ ಬಳಿಯೇ ನಾನು ವಾಸಿಸಿರುವೆ| ನಾನು ನಿನ್ನೊಂದಿಗೇ ಇದ್ದರೂ ನನಗಾಗಿ ಎಲ್ಲೊ ದೂರದಿ ಹುಡುಕಿ ಬಳಲುತಿರುವೆ|| ನಾನು ಚರ್ಮದೊಳಿಲ್ಲ ರೋಮದೊಳಗೂ ಇಲ್ಲ ಅಸ್ಥಿಯಲೊ ಮಾಂಸದಲೊ ಹುದುಗಿಕೊಂಡಿಲ್ಲ| ಗುಡಿಮಸೀದಿಯೊಳಿಲ್ಲ ಕಾಶಿಕೈಲಾಸದಲೊ ದ್ವಾರಕೆ ಅಯೋಧ್ಯೆಯೊಳೊ ದೊರೆವನಲ್ಲ|| ಸಂನ್ಯಾಸದೊಳಗಿಲ್ಲ ವೈರಾಗ್ಯದೊಳಗಿಲ್ಲ ಯೋಗಾದಿ ಸಿದ್ಧಿಗೂ ದೂರ ನಾನು| ಶ್ರದ್ಧೆ ಎಲ್ಲಿರುವುದೊ ಅಲ್ಲಿ ದೊರೆಯುವೆ ನಾನು ನನಗಾಗಿ ಹುಡುಕಿದರೆ ದೊರೆವೆ ನಾನು||                                                  —ವಚನವೇದ

ಎಲ್ಲಿ ಅರಸುವೆ ನೀನು Read More »

ಎತ್ತ ಹೋದರು ಸುತ್ತಲೆಲ್ಲೂ

ಎತ್ತ ಹೋದರು ಸುತ್ತಲೆಲ್ಲೂ ಆರಿಗಾರೂ ಇಲ್ಲ ಜಗದೊಳು ಎಂಬುದನು ನೀ ನೆನಪಿಡು| ಮಾಯೆಯೊಡ್ಡಿದ ಬಲೆಯೊಳಿದ್ದರು ತಾಯ ಪಾದದಿ ಮನವಿಡು|| ಒಂದು ದಿನವೊ ಎರಡು ದಿನವೊ “ಸ್ವಾಮಿ, ಬುದ್ಧೀ” ಎಂದು ಜನಗಳು ಗೌರವದಿ ಬಳಿ ಸುಳಿವರು| ಮೃತ್ಯು ಬಂದೆಳೆವಾಗ ನಿನ್ನನು ಎಲ್ಲರೂ ಹಿಂದುಳಿವರು|| ಯಾವ ಪ್ರಿಯತಮೆಯೊಲವಿಗಾಗಿಯೆ ಹಗಲು ಇರುಳೂ ಜೀವ ತೇದೆಯೊ ಬಾರಳವಳೂ ಜೀವ ತೇದೆಯೊ ಬಾರಳನಳೂ ಜೊತೆಯೊಳು| ನೀನು ಸಾಯಲು ನಿನ್ನ ಶವವನು ಅಶುಭವೆಂದೇ ತಿಳಿವಳು||                                —-ವಚನವೇದ

ಎತ್ತ ಹೋದರು ಸುತ್ತಲೆಲ್ಲೂ Read More »

ಅರಿತೆ ನಾನು ಅರಿತೆ ನಾನು

ಅರಿತೆ ನಾನು ಅರಿತೆ ನಾನು ನಿಜದ ನೆಲೆಯನರಿತೆನು| ಭಾವದಂತರಂಗವರಿತ ವ್ಯಕ್ತಿಯೊಬ್ಬ ದೊರೆತನು|| ಎಂದೆಂದೂ ಇರುಳಿಲ್ಲದ ಬೆಳಕಿನೂರಿನಿಂದ ಅವನು ನಮ್ಮಲ್ಲಿಗೆ ಬಂದನು| ಅವನ ಸಂಗದಿಂದ ನಾನು ಹಗಲಾವುದು ಇರುಳಾವುದು ಎಂಬುದನೂ ತಿಳಿಯೆನು|| ಜಪತಪಾದಿ ಕರ್ಮಗಳೂ ನೀರಸವೆಂದರಿತೆ ನಾನು ಹಳೆಯ ನಿದ್ರೆ ಹರಿಯಿತು| ತೂಕಡಿಸುವುದೆಲ್ಲಿ ಬಂತು ನಿರಂತರವು ಯೋಗದಲ್ಲಿ ಎಚ್ಚರಿರುವುದಾಯಿತು||                                       —ವಚನವೇದ

ಅರಿತೆ ನಾನು ಅರಿತೆ ನಾನು Read More »