ತಾರೋ ವಸನ-ಎಷ್ಟೋ ವಿನೋದ

ತಾರೋ ವಸನ-ಎಷ್ಟೋ ವಿನೋದ ಕಡಹದ ಮರನೇರಿ ಕಾಡುವುದುಚಿತವೆ ತಡವಾಗುವುದೈ ಒಡೆಯರುಳ್ಳವರಿಗೆ ||1|| ಚಿತ್ತಜನೈಯನೆ ಮತ್ತಗಮನೆಯರ ಬತ್ತಲೆ ನಿಲಿಸುವುದುತ್ತಮವಲ್ಲವೊ||2|| ಪರಮಪುರುಷ ನಿನ್ನವರು ಎಂದಿಗು ನಾವುಕರುಣಿಸು ಎಮ್ಮ ಸಿರಿ ವಿಜಯವಿಠ್ಠಲ ||3||

ತಾರೋ ವಸನ-ಎಷ್ಟೋ ವಿನೋದ Read More »

ತರತಮದಿ ಶರಣು ಮಾಡುವೆ ನಿಮಗೆ

ತರತಮದಿ ಶರಣು ಮಾಡುವೆ ನಿಮಗೆ ಕರಣಶುದ್ಧಿಯಲ್ಲಿ ಕರುಣ ಮಾಡಿ ಎನ್ನ ಪರಿಪಾಲಿಸಬೇಕು ನಿರುತ ಬಿಡದೆ ಮನ ಸಿರಿಹರಿ ಚರಣಕ್ಕೆ ಎರಗುವಂತೆ ವರಭಕುತಿಯಲ್ಲಿ ಸಿರಿ ಪರಮೇಷ್ಠಿ ವಾಯು ಸರಸ್ವತಿ ಭಾರತೀ ಗರುಡ ಉರಗ ಈಶ ಹರಿ ಸತಿಯರು ಮೂ ರೆರಡು ಜನರು ಆ ತರುವಾಯ ಸೌಪರ್ಣಿ ವರವಾರುಣಿ ಗಿರಿಜೆ ಸಿರಿ ಮತ್ತೆ ಇಂದ್ರ ಕಾಮ ಮರುತಾಹಂತಾರನ ಸ್ಮರಿಸುತಲೆ ಮನು ಗುರು ದಕ್ಷನೆ ಶಚಿ ಮರುತ ಪ್ರವಾಹ ಮೂ ವರು ಸನಕಾದ್ಯರು ದುರಿತಶಾಸನ ಶಶಿ ತರಣಿ ಶತರೂಪ ವರುಣ ನಾರದರ

ತರತಮದಿ ಶರಣು ಮಾಡುವೆ ನಿಮಗೆ Read More »

ತಕ್ಕೋ ಗಂಟ ನಿನ್ನಾಟವ ತಿಳಿಸುವೆ

ತಕ್ಕೋ ಗಂಟ ನಿನ್ನಾಟವ ತಿಳಿಸುವೆ ಸಖಿಯರ ಕೂಡಿದಂತೆಲ್ಲೊ ಠಕ್ಕುಬಿಕ್ಕಿನ ಮಾತುಗಳಾಡಲು ಯುಕುತಿಯ ನಾ ಕೇಳೆನೆಲವೊ ಮದಗಜಮನೇರ ಹೆದರಿಸಿ ಬೆದರಿಸಿ ಅಧರವ ಸವಿದಂತಲ್ಲೊ ಸುದತಿಯರೆಲ್ಲರ ಅಂಜಿಸಿ ವಂಚಿಸಿ ದಧಿ ಘೃತ ಸವಿದಂತಲ್ಲೋ ||1|| ಕ್ಷೋಣಿಯೊಳೆಲ್ಲಿಗೆ ಹೋದರು ಎನ್ನಯ ವೀಣೆಯ ಹೊರಬೇಕಲ್ಲೊ ಗಾಣದೆತ್ತಿನ ಪರಿಯಲಿ ತಿರುಗುತ ತ್ರಾಣ ತಪ್ಪಲು ಬಿಡೆನಲ್ಲೊ ||2|| ಸಣ್ಣಾಮಾತುಗಳಾಡಲು ಕೇಳುತ ಚಿಣ್ಣನಂತಿರಬೇಕಲ್ಲೊ ಘನ್ನ ಮಹಿಮ ಶ್ರೀ ವಿಜಯವಿಠ್ಠಲ ಇನ್ನೆಂದಿಗೂ ಬಿಡೆನಲ್ಲೊ ||3||

ತಕ್ಕೋ ಗಂಟ ನಿನ್ನಾಟವ ತಿಳಿಸುವೆ Read More »

ತೊರೆದು ಜೀವಿಸುಬಹುದೆ ಹರಿ

ತೊರೆದು ಜೀವಿಸುಬಹುದೆ ಹರಿ ನಿನ್ನ ಚರಣವನುಬರಿಯ ಮಾತೇಕಿನ್ನು ಅರಿತು ಪೇಳುವೆನಯ್ಯ ತಾಯಿ ತಂದೆಯ ಬಿಟ್ಟು ತಪವ ಮಾಡಲುಬಹುದುದಾಯಾದಿ ಬಂಧುಗಳ ಬಿಡಲುಬಹುದುರಾಯ ಮುನಿದರೆ ಮತ್ತೆ ರಾಜ್ಯವನು ಬಿಡಬಹುದುಕಾಯಜಪಿತ ನಿನ್ನಡಿಯ ಬಿಡಲಾಗದು ||1|| ಒಡಲು ಹಸಿಯಲು ಅನ್ನವಿಲ್ಲದಲೆ ಇರಬಹುದುಪಡೆದ ಕ್ಷೇತ್ರವ ಬಿಟ್ಟು ಪೋಗಬಹುದುಮಡದಿ ಮಕ್ಕಳ ಕಡೆಗೆ ತೊಲಗಿಸಿಯು ಬಿಡಬಹುದುಕಡಲೊಡೆಯ ನಿನ್ನಡಿಯ ಗಳಿಗೆ ಬಿಡಲಾಗದು ||2|| ಪ್ರಾಣವನು ಪರರು ಬೇಡಿದರೆತ್ತಿ ಕೊಡಬಹುದುಮಾನಾಭಿಮಾನ ತಗ್ಗಿಸಲು ಬಹುದುಪ್ರಾಣನಾಯಕನಾದ ಆದಿಕೇಶವರಾಯಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು ||3||

ತೊರೆದು ಜೀವಿಸುಬಹುದೆ ಹರಿ Read More »

ತೀರ್ಥ ಪಿಡಿದವರೆಲ್ಲ ತಿರುನಾಮಧಾರಿಗಳೆ

ತೀರ್ಥ ಪಿಡಿದವರೆಲ್ಲ ತಿರುನಾಮಧಾರಿಗಳೆ – ಜನ್ಮ ಸಾರ್ಥಕವಿಲ್ಲದವರೆಲ್ಲ ಭಾಗವತರೆ ಮೂಗ್ಹಿಡಿದು ನೀರೊಳಗೆ ಮುಳುಗಿ ಜಪತಪ ಮಾಡಿನಿಗಮಾಗಮ ಪುರಾಣಗಳನೋದಿ ತಿಳಿದುಬಾಗಿ ಪರಸ್ತ್ರೀಯರನು ಬಯಸಿ ಕಣ್ಣಿಡುವಂಥಯೋಗ ಭ್ರಷ್ಟರೆಲ್ಲ ದೇವ ಬ್ರಾಹ್ಮಣರೆ ? ||1|| ಪಟ್ಟೆ ನಾಮವ ಬಳಿದು ಪಾತ್ರೆ ಕೈಯಲಿ ಹಿಡಿದು ಗುಟ್ಟಿನಲಿ ಜಪಿಸುವ ಗುರುತರಿಯದೆಕೆಟ್ಟ ಕೂಗನು ಕೂಗಿ ಹೊಟ್ಟೆಯನು ಹೊರೆವಂಥಪೊಟ್ಟೆಗುಡುಮಗಳೆಲ್ಲ ಪರಮ ವೈಷ್ಣವರೆ ? ||2|| ಲಿಂಗಾಂಗದೊಳಗಿರುವ ಚಿನ್ಮಯವ ತಿಳಿಯದೆಅಂಗಲಿಂಗದ ನೆಲೆಯ ಗುರುತರಿಯದೆಜಂಗಮ ಸ್ಥಾವರದ ಹೊಲಬನರಿಯದ ಇಂಥಭಂಗಿಮುಕ್ಕಗಳೆಲ್ಲ ನಿಜ ಲಿಂಗವಂತರೆ ? ||3|| ಅಲ್ಲಾ ಖುದಾ ಎಂಬ ಅರ್ಥವನು

ತೀರ್ಥ ಪಿಡಿದವರೆಲ್ಲ ತಿರುನಾಮಧಾರಿಗಳೆ Read More »

ತಿಳಿಯ ಬರದೆಲೆ ಮನವೆ,

ತಿಳಿಯ ಬರದೆಲೆ ಮನವೆ, ತೀರ್ಥ ಯಾತ್ರೆಯ ಫಲವು ಸುಲಭದಲಿ ಸದ್ಗತಿಯ ಸೂರೆಗೊಂಬುವರಿಗಲ್ಲದೆ ನೂರೆಂಟು ತಿರುಪತಿಯ ಯಾತ್ರೆಯನು ನಾನೊಲ್ಲೆವಾರದೊಂದ್ಹೊತ್ತು ಉಪವಾಸವನು ನಾನೊಲ್ಲೆಸಾರ ರೇಣುವೆಯುಂಡು ಕಡೆಯ ಬಾಗಿಲ ಕಾಯ್ವನೀರ ಗೌಡಿಯ ಮಗನ ಮಗನ ಮಗನೆನಿಸೆನ್ನ||1|| ಪಂಚಾನ್ನ ಪರಮಾನ್ನವಾವುದನು ನಾನೊಲ್ಲೆಚಂಚಲಗೊಳಿಸುವ ಭೋಗ ಭಾಗ್ಯವ ನಾನೊಲ್ಲೆಹಿಂಚದೆ ದಾಸೋಹ ಮಾಳ್ಪವರ ಮನೆಯ ಕಾಯ್ವಉಂಚ ಗೌಡಿಯ ಮಗನ ಮಗನ ಮಗನೆನಿಸೆನ್ನ||2|| ಪಟ್ಟೆ ಪಟ್ಟಾವಳಿ ದುಕೂಲವನು ನಾನೊಲ್ಲೆಪಟ್ಟೆ ನಾಮದ ಬರಿಯ ಪ್ರದರ್ಶನ ನಾನೊಲ್ಲೆಸೃಷ್ಟಿಯೊಳು ನಿನ್ನ ಭಜಿಪ ಭಕ್ತರ ಮನೆ ಕಾಯ್ವಮುಟ್ಟುಗೌಡಿಯ ಮಗನ ಮಗನ ಮಗನೆನಿಸೆನ್ನ ||3|| ಮುತ್ತಿನಾಭರಣ

ತಿಳಿಯ ಬರದೆಲೆ ಮನವೆ, Read More »

ತಾಳಲ್ಲಲ್ಲಲ್ಲಲ್ಯೋ ಮಾಸಾಳಲ್ಲಲ್ಲಲ್ಲಲ್ಯೋ

ತಾಳಲ್ಲಲ್ಲಲ್ಲಲ್ಯೋ ಮಾಸಾಳಲ್ಲಲ್ಲಲ್ಲಲ್ಯೋ ಹೆಚ್ಚಿದ ತಮನೆಂಬ ದನುಜ ವೇದವ ಕದ್ದುಬಚ್ಚಿಟ್ಟು ನೀರೊಳು ಮುಳುಗಿರಲುಮಚ್ಚ ರೂಪದಿಂದ ಪೋಗಿ ಅವನ ಕೊಂದಅಚ್ಯುತರಾಯನೆಂಬ ಮಾಸಾಳಮ್ಮ||1|| ಸಿಂಧು ಮಥನವ ಮಾಡೆ ಅಮರರೆಲ್ಲರುಮಂದರಗಿರಿ ನೀರೊಳು ಮುಳುಗಲುಚಂದದಿ ಕೂರ್ಮ ರೂಪಿನಿಂದೆತ್ತಿದ ಗೋ-ವಿಂದನೆಂಬುವ ಮಾಸಾಳಮ್ಮ||2|| ರೂಢಿಯ ಕದ್ದುಕೊಂಡೋಡುವ ದೈತ್ಯನನೀಡಿ ತಿವಿದು ಕೋರೆದಾಡೆಯಿಂದದೂಡಿ ದ್ವಂಸವ ಮಾಡಿ ರೂಢಿಯ ತಂದಕಾಡು ವರಾಹ ರೂಪಿ ಮಾಸಾಳಮ್ಮ ||3|| ಲೇಸು ತಪ್ಪಿದನೆಂದು ಹಿರಣ್ಯಕ ತನಯನಘಾಸಿ ಮಾಡಲು, ಕಂಬ ಒಡೆದುದಿಸಿರೋಷದಿ ದೈತ್ಯನ ಕರುಳ ಕಿತ್ತ ನರಕೇಸರಿ ರೂಪಿನ ಮಾಸಾಳಮ್ಮ ||4|| ಆ ಮಹಾಸಿರಿಯ ಗರ್ವದಿ ಮುಂದರಿಯದೆಭೂಮಿಯನು

ತಾಳಲ್ಲಲ್ಲಲ್ಲಲ್ಯೋ ಮಾಸಾಳಲ್ಲಲ್ಲಲ್ಲಲ್ಯೋ Read More »

ತಾನ್ಯಾರು ತನ್ನ ದೇಹವ್ಯಾರು

ತಾನ್ಯಾರು ತನ್ನ ದೇಹವ್ಯಾರು – ದಿವ್ಯe್ಞÁನದಲಿ ತಿಳಿದಾತ ಪರಮ ಯೋಗಿ ಸೂತಿಕಾವಸ್ಥೆಯಲಿ ನವಮಾಸ ನೆರೆದಾಗಮಾತೆಯುದರದಿ ಬಂದು ಬೆಳೆದು ನಿಂದುಪಾತಕವದೊಂದು ಮೂರುತಿಯಾದ ತನುವೆಂದುನೀತಿಯಲಿ ತಿಳಿದಾತ ಪರಮ ಯೋಗಿ ||1|| ಅಸ್ಥಿಪಂಜರದ ನರಗಳ ತೊಗಲಿನ ಹೊದಿಕೆಯವಿಸ್ತರಿಸಿ ಬಿಗಿದ ಮಾಂಸದ ಬೊಂಬೆಯುರಕ್ತ ಮಲಮೂತ್ರ ಕೀವಿನ ಪ್ರಳಯದೊಡಲೆಂದುಸ್ವಸ್ಥದಿಂ ತಿಳಿದಾತ ಪರಮ ಯೋಗಿ ||2|| ಘೋರ ನರಕದ ತನುವು ಎಂದು ಮನದಲಿ ತಿಳಿದುಗೇರು ಹಣ್ಣಿನ ಬೀಜದಂತೆ ಹೊರಗಿದ್ದುಮಾರಪಿತ ಕಾಗಿನೆಲೆಯಾದಿಕೇಶವನ ಪಾದವಾರಿಜವ ನೆನೆದವನೆ ಪರಮ ಯೋಗಿ ||3||

ತಾನ್ಯಾರು ತನ್ನ ದೇಹವ್ಯಾರು Read More »

ತಲ್ಲಣಿಸದಿರು ಕಂಡ್ಯ ತಾಳು ಮನವೆ

ತಲ್ಲಣಿಸದಿರು ಕಂಡ್ಯ ತಾಳು ಮನವೆ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ ಬೆಟ್ಟದಾ ತುದಿಯಲ್ಲಿ ಹುಟ್ಟಿದ ವೃಕ್ಷಕ್ಕೆಕಟ್ಟೆಯನು ಕಟ್ಟಿ ನೀರೆರೆದವರು ಯಾರೊಪುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲುಗಟ್ಯಾಗಿ ಸಲಹುವನು ಇದಕೆ ಸಂಶಯವಿಲ್ಲ ||1|| ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲಅಡಿಗಡಿಗೆ ಆಹಾರವಿತ್ತವರು ಯಾರೊ ಪಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿಬಿಡದೆ ರಕ್ಷಿಪನು ಇದಕೆ ಸಂಶಯವಿಲ್ಲ||2|| ನವಿಲಿಗೆ ಚಿತ್ರ ಬರೆದವರು ಯಾರುಪವಳದ ಲತೆಗೆ ಕೆಂಪಿಟ್ಟವರು ಯಾರುಸವಿಮಾತಿನರಗಿಳಿಗೆ ಹಸುರು ಬರೆದವರು ಯಾರುಅವನೆ ಸಲಹುವನು ಇದಕೆ ಸಂಶಯವಿಲ್ಲ||3|| ಕಲ್ಲಿನಲಿ ಹುಟ್ಟಿ ಕೂಗುವ ಕಪ್ಪೆಗಳಿಗೆಲ್ಲಅಲ್ಲಲ್ಲಿಗಾಹಾರ ತಂದೀವರಾರುಬಲ್ಲಿದನು ಕಾಗಿನೆಲೆಯಾದಿಕೇಶವರಾಯಎಲ್ಲರನು ಸಲಹುವನು ಇದಕೆ

ತಲ್ಲಣಿಸದಿರು ಕಂಡ್ಯ ತಾಳು ಮನವೆ Read More »

ತನ್ನ ಪ್ರಾಪ್ತಿಯ ಫಲವ ತಾನರಿಯದೆ

ತನ್ನ ಪ್ರಾಪ್ತಿಯ ಫಲವ ತಾನರಿಯದೆ ಇನ್ನು ನುಡಿವುದು ಮೂರ್ಖತನವಲ್ಲದೆ ಸರಸಿಜೋದ್ಭವನು ಫಣೆಯೊಳು ಬರೆದು ನಿರ್ಮಿಸಿದತೆರನೊಂದು ಬೇರುಂಟೆ ತಾನರಿಯದೆಕೆರಕೊಂಡು ಕಂಡವರ ಕೂಡೆ ತಾನಾಡಿದರೆನೆರೆ ದುಃಖವಿದು ಬಿಟ್ಟು ಕಡೆಗೆ ತೊಲಗುವುದೆ ||1|| ಬಡತನವು ಬಂದಲ್ಲಿ ಬಾಯಿ ಬಿಟ್ಟರೆ ಮುನ್ನಪಡೆದಂಥ ವಿಧಿ ಬೆನ್ನ ಬಿಡಲರಿವುದೆಅಡಿಗಡಿಗೆ ಶೋಕದಲಿ ಅವರಿವರಿಗುಸುರಿದರೆಬಡತನವು ತಾ ಬಿಟ್ಟು ಕಡೆಗೆ ಕದಲುವುದೆ||2|| ದೆಸೆಗೆಟ್ಟು ನಾಡದೈವಂಗಳಿಗೆ ಎರಗಿದರೆನೊಸಲ ಬರೆಹವ ತೊಡೆದು ತಿದ್ದಲಳವೆವಸುಧೇಶ ಕಾಗಿನೆಲೆಯಾದಿಕೇಶವಸನಂಘ್ರಿಬಿಸಜವನು ಕಂಡು ನೀ ಸುಖಿಯಾಗು ಮನುಜ||3||

ತನ್ನ ಪ್ರಾಪ್ತಿಯ ಫಲವ ತಾನರಿಯದೆ Read More »

ತನು ನಿನ್ನದು ಜೀವನ ನಿನ್ನದು ರಂಗ

ತನು ನಿನ್ನದು ಜೀವನ ನಿನ್ನದು ರಂಗ ಅನುದಿನದಲಿ ಬಾಹೊ ಸುಖದುಃಖ ನಿನ್ನದಯ್ಯ ಸವಿನುಡಿ ವೇದ ಪುರಾಣ ಶಾಸ್ತ್ರಂಗಳಕಿವಿಗೊಟ್ಟು ಕೇಳುವ ಕಥೆ ನಿನ್ನದುನವಮೋಹನಾಂಗಿಯರ ರೂಪವನು ಕಣ್ಣಿಂದಎವೆಯಿಕ್ಕದೆ ನೋಡುವ ನೋಟ ನಿನ್ನದಯ್ಯ ||1|| ಒಡಗೂಡಿ ಗಂಧಕಸ್ತೂರಿ ಪರಿಮಳಂಗಳಬಿಡದೆ ಲೇಪಿಸಿಕೊಂಬುವುದು ನಿನ್ನದುಷಡುರಸದನ್ನಕ್ಕೆ ನಲಿದಾಡುವ ಜಿಹ್ವೆಕಡು ರುಚಿಗೊಂಡರಾ ರುಚಿ ನಿನ್ನದಯ್ಯ ||2|| ಮಾಯಾ ಪಾಶದ ಬಲೆಯೊಳಗೆ ಸಿಲುಕಿರುವಕಾಯ ಪಂಚೇಂದ್ರಿಯಂಗಳು ನಿನ್ನವುಕಾಯಜಪಿತ ಕಾಗಿನೆಲೆಯಾದಿಕೇಶವರಾಯ ನೀನಲ್ಲದೆ ನರರು ಸ್ವತಂತ್ರರೆ ||3||

ತನು ನಿನ್ನದು ಜೀವನ ನಿನ್ನದು ರಂಗ Read More »

ತಡೆಯುತಲಿದೆ ಪುಷ್ಪಮಾಲೆ

ತಡೆಯುತಲಿದೆ ಪುಷ್ಪಮಾಲೆ ಒಡಲೊಳಗಾತ್ಮನ ವರ ಮಕುಟಾಗ್ರದಿ ನವರತ್ನಖಚಿತ ಕಿರೀಟ ದೊಡ್ಡಿತು ದಿವ್ಯನವತರ ಕುಸುಮ ದಾಮವು ಕಿರಿದುವಿವರ ಬಲ್ಲ ಸದ್ಗುರು ತಮ್ಮ ಉದ್ದೇಶದನವ ವೈಜಯಂತಿಯ ಹಿರಿದಾಗಿ ಭಾವಿಸಿ ||1|| ಸ್ಥಿರ ಮತಿಯೆಂಬ ಆಸನವನು ಅಳವಡಿಸಿ – ತ್ರಿಕರಣವೆಂಬ ತಾಂಬೂಲವನೊಪ್ಪಿಸುತ – ಮಾಯ ಮರವೆಯೆಂಬ ದಕ್ಷಿಣೆ ಕೊಟ್ಟು – ಮಮ ಭಾವದಿರುವಿನ ತಮವನೋಡಿಸಿ ನಿಂದ ಗುರುದೇವ||2|| ಅಜ್ಞಾನವೆಂಬ ನಿರ್ಮಾಲ್ಯವನು ಮಾಡಿಸುಜ್ಞಾನವೆಂಬಕ್ಷತೆಯ ಪಣೆಗೆ ಸೂಡಿಪ್ರe್ಞÁನವೆಂಬ ದೀವಿಗೆ ಸ್ತಂಭ ಹೂಡಿಪೂಜಿಸಿ ಪ್ರವಿಮಲ ಜ್ಯೋತಿಯ ದೇಶಿಕೋತ್ತಮ ||3||

ತಡೆಯುತಲಿದೆ ಪುಷ್ಪಮಾಲೆ Read More »

ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್

ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ || ಶರೀರಂ ಸುರೂಪಂ ತಥಾ ವಾ ಕಲತ್ರಂ ಯಶಶ್ಚಾರು ಚಿತ್ರಂ ಧನಂ ಮೇರುತುಲ್ಯಮ್ ಗುರೋರಂಘ್ರಿಪದ್ಮೇ ಮನಶ್ಚೇನ್ನ ಲಗ್ನಂ ||   ಷಡಂಗಾದಿವೇದೋ ಮುಖೇ  ಶಾಸ್ತ್ರವಿದ್ಯಾ ಕವಿತ್ವಾದಿಗದ್ಯಂ  ಸುಪದ್ಯಾಂ ಕರೋತಿ ಗುರೋರಂಘ್ರಿಪದ್ಮೇ ಮನಶ್ಚೇನ್ನ ಲಗ್ನಂ ||   ವಿದೇಶೇಷು ಮಾನ್ಯಃ ಸ್ವದೇಶೇಷು ಧನ್ಯಃ ಸದಾಚಾರವೃತ್ತೇಷು ಮತ್ತೋ ನ ಚಾನ್ಯಃ ಗುರೋರಂಘ್ರಿಪದ್ಮೇ ಮನಶ್ಚೇನ್ನ ಲಗ್ನಂ ||   ನ ಭೋಗೇ ನ ಯೋಗೇ ನ ವಾ ವಾಜಿರಾಜೌ ನ

ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ Read More »

ತೋಟಕಾಷ್ಟಕಂ

ವಿದಿತಾಖಿಲ ಶಾಸ್ತ್ರ ಸುಧಾ ಜಲಧೇ ಮಹಿತೋಪನಿಷತ್-ಕಥಿತಾರ್ಥ ನಿಧೇ | ಹೃದಯೇ ಕಲಯೇ ವಿಮಲಂ ಚರಣಂ ಭವ ಶಂಕರ ದೇಶಿಕ ಮೇ ಶರಣಮ್ || 1 || ಕರುಣಾ ವರುಣಾಲಯ ಪಾಲಯ ಮಾಂ ಭವಸಾಗರ ದುಃಖ ವಿದೂನ ಹೃದಮ್ | ರಚಯಾಖಿಲ ದರ್ಶನ ತತ್ತ್ವವಿದಂ ಭವ ಶಂಕರ ದೇಶಿಕ ಮೇ ಶರಣಮ್ || 2 || ಭವತಾ ಜನತಾ ಸುಹಿತಾ ಭವಿತಾ ನಿಜಬೋಧ ವಿಚಾರಣ ಚಾರುಮತೇ | ಕಲಯೇಶ್ವರ ಜೀವ ವಿವೇಕ ವಿದಂ ಭವ ಶಂಕರ ದೇಶಿಕ ಮೇ

ತೋಟಕಾಷ್ಟಕಂ Read More »

ತೂ ಹೈ ಕರುಣಾನಿಧಾನ

ತೂ ಹೈ ಕರುಣಾನಿಧಾನ ದೀನಬಂಧು ಶೀಲಸಿಂಧು ಸೀತಾಪತಿ ರಾಮಚಂದ್ರ ಭಕ್ತನ ಪರ ದಯಾವಾನ|| ದಾಯಕ ಜೀವನ ಅನಂತ ನಾಶತ ಭವದ್ವಂದ್ವ ಫಂದ ಶರಣಾಗತ ಪಾಹಿ ಮಾಂ|| ದೀಜೇ ನಿಜಪದ ಸನೇಹ ಕೀಜೇ ಮಮ ಹೃದಯ ಗೇಹ ಪೂರಹು ಕಾರಜವಿಧಾನ||

ತೂ ಹೈ ಕರುಣಾನಿಧಾನ Read More »

ತೂ ದಯಾಲು

ತೂ ದಯಾಲು ದೀನ ಹೌ ತೂ ದಾನಿ ಹೌ ಭಿಕಾರಿ ಹೌ ಪ್ರಸಿದ್ಧ ಪಾತಕೀ ತೂ ಪಾಪ ಪುಂಜಹಾರೀ|| ನಾಥ ತೂ ಅನಾಥ ಕೌನ ಮೋಸೋ| ಮೋ ಸಮಾನ ಆರತ ನಹಿ ಆರತಿ ಹರ ತೋಸೋ|| ಬ್ರಹ್ಮ ತೂ ಹೌ ಜೀವ ತೂ ಠಾಕೂರ ಹೌ ಚೀರೋ| ತಾತ ಮಾತ ಗುರು ಸಖಾ ತೂ ಸಬ ವಿಧಿ ಹಿತು ಮೇರೋ|| ತೋಹಿ ಮೋಹಿ ನಾತೇ ಅನೇಕ ಮಾನಿಯೇ ಜೋ ಭಾವೈ ಜ್ಯೋ ತ್ಯೋ ತುಲಸೀ ಕೃಪಾಲು ಚರನ ಸರನ

ತೂ ದಯಾಲು Read More »

ತುಮ್ಹೀ ಸಂತ ಮಾಯಬಾಪ

ತುಮ್ಹೀ ಸಂತ ಮಾಯಬಾಪ ಕೃಪಾವಂತ ಕಾಯ ಮೀ ಪತಿತ ಕೀರತೀ ವಾಣೂಂ|| ಅವತಾರ ತುಮ್ಹಾ ಧರಾಯಾ ಕಾರಣ ಉದ್ಧರಾವೇ ಜನ ಜಡ ಜೀವ ಉದ್ಧರಾವೇ ಜನ ಮಹಾದೋಷಿ|| ವಾಢವಾಯಾ ಸುಖ ಭಕ್ತಿ ಭಾವ ಧರ್ಮ ಕುಳಾಚಾರ ನಾಮ ವಿಠೋಬಾಚೇ|| ತುಕಾಮ್ಹಣೇ ಗುಣ ಚಂದನಾಂಚೇ ಅಂಗೀ ತೈಸೇ ತುಮ್ಹೀ ಜಗೀಂ ಸಂತಜನ||                                           —-ತುಕಾರಾಮ

ತುಮ್ಹೀ ಸಂತ ಮಾಯಬಾಪ Read More »

ತುಮಿ ಬ್ರಹ್ಮ ರಾಮಕೃಷ್ಣ

ತುಮಿ ಬ್ರಹ್ಮ ರಾಮಕೃಷ್ಣ ತುಮಿ ಕೃಷ್ಣ ತುಮಿ ರಾಮ ತುಮಿ ವಿಷ್ಣು ತುಮಿ ಜಿಷ್ಣು ಪ್ರಭವಿಷ್ಣು ಪ್ರಾಣಾರಾಮ|| ತುಮಿ ಆಧೇಯ ಆಧಾರ ತುಮಿ ಬ್ರಹ್ಮ ನಿರಾಕಾರ| ತುಮಿ ನರರೂಪಧರ ವಿಜಿತಕನಕಕಾಮ|| ಅಪಾರ ಕರುಣಾಸಿಂಧು ತುಮಿ ದೇವ ದೀನಬಂಧು| ಯಾಚೇ ಇಂದು ಕೃಪಾಬಿಂದು ಚರಣೇ ಕೊರಿ ಪ್ರಣಾಮ||                                                          —-ಶರತ್ ಚಂದ್ರ ಚಕ್ರವರ್ತಿ

ತುಮಿ ಬ್ರಹ್ಮ ರಾಮಕೃಷ್ಣ Read More »

ತುಮಿ ಬಂಧು ತುಮಿ ನಾಥ

ತುಮಿ ಬಂಧು ತುಮಿ ನಾಥ ನಿಶಿದಿನ ತುಮಿ ಆಮಾರ್ || ತುಮಿ ಸುಖ ತುಮಿ ಶಾಂತಿ ತುಮಿ ಹೇ ಅಮೃತ ಪಾಥಾರ್|| ತುಮಿ ತೋ ಆನಂದ ಲೋಕ ಜುಡಾಓ ಪ್ರಾಣ, ನಾಶ ಶೋಕ|| ತಾಪಹರಣ ತೋಮಾರ ಚರಣ ಅಸೀಮ ಶರಣ ದೀನಜನಾರ್||                              —-ರವೀಂದ್ರನಾಥ ಠಾಕೂರ

ತುಮಿ ಬಂಧು ತುಮಿ ನಾಥ Read More »

ತುಮಿ ಕಾಂಗಾಲ್ ವೇಶೇ

(ತುಮಿ) ಕಾಂಗಾಲ್ ವೇಶೇ ಏಶೇಛೊ ಹರಿ ಕಾಂಗಾಲೇ ಕರುಣಾ ಕೊರಿತೇ ಹೇ| ಪ್ರೇಮ ವಿತರಿತೇ ಮರುಸಮ ಚಿತೇ ಪತಿತ ಜನೇ ತಾರಿತೇ ಹೇ|| ರಾಮಕೃಷ್ಣ ನಾಮ್ ಅಮಿಯಾ ಢಾಲಾ ಹೇರಿಲೇ ಓ ರೂಪ ಜುಡಾಯ್ ಜ್ವಾಲಾ| (ತವ) ಜರಣತಲೇ ಪರಾಣ ಸಪಿಲೇ ಭಾವನಾ ಪಲಾಯ್ ದೂರೇತೇ ಹೇ|| ಕೊರಿ ತವ ಕಥಾ ಅಮೃತ ಪಾನ್ ಜಾಗಿಯಾ ಉಠಿಛೇ ಅವಶ ಪ್ರಾಣ್| ಹತಾಶ ಹೃದಯೇ ಶತ ಆಶಾ ಜಾಗೇ ತೋಮಾರ್ ಮಧುರ ನಾಮೇತೇ ಹೇ||                                             —-ಸ್ವಾಮಿ ಪ್ರೇಮೇಶಾನಂದ

ತುಮಿ ಕಾಂಗಾಲ್ ವೇಶೇ Read More »

ತುಮ್ಹರೇ ಕಾರಣ

ತುಮ್ಹರೇ ಕಾರಣ ಸಬ ಸುಖ ಛೋಡ್ಯಾ ಅಬ ಮೋಹಿ ಕ್ಯೋಂ ತರಸಾವೋ ಹೋ|| ಬಿರಹ ಬಿಥಾ ಲಾಗೀ ಉರ ಅಂತರ ಸೋ ತುಮ ಆಯ ಬುಝಾವೋ ಹೋ|| ಅಬ ಛೋಡತ ನಹೀ ಬಡೈ ಪ್ರಭುಜೀ ಹಂಸಕರ ತುರತ ಬುಲಾವೋ ಹೋ| ಮೀರಾದಾಸೀ ಜನಮ ಜನಮಕೀ ಸಾಂಚೀ ದಾಸೀ ಬನಾವೋ ಹೋ||                                                 —-ಮೀರಾ

ತುಮ್ಹರೇ ಕಾರಣ Read More »

ತುಮ ಬಿನ ಮೋರೀ

ತುಮ ಬಿನ ಮೋರೀ ಕೌನ ಖಬರ ಲೇ ಗೋವರ್ಧನ ಗಿರಿಧಾರೀ || ಮೋರಮುಕುಟ ಪೀತಾಂಬರ ಸೋಭೇ ಕುಂಡಲಕೀ ಛಬ್ ನ್ಯಾರೀ ರೇ|| ಭರಿ ಸಭಾ ಮೇ ದ್ರೌಪದಿ ಠಾಡೇ ರಾಖೋ ಲಾಜ್ ಹಮಾರೀ| ಮೀರಾ ಕೇ ಪ್ರಭು ಗಿರಿಧರ ನಾಗರ ಚರಣ ಕಮಲ ಬಲಿಹಾರೀ||                                       —-ಮೀರಾ

ತುಮ ಬಿನ ಮೋರೀ Read More »

ತಾರಾ ತರಣೀ ನಾಮ

ತಾರಾ ತರಣೀ ನಾಮ ಜಗಮೇ ತರಯಕೋ|| ಯಾ ಜಗಮೇ ಜಪೂ ಮೂಢ ಹರೇ ತಾಪ ತನ ಕೋ|| ಆಗಮ ನಿಗಮ ವೇದ ಬ್ರಹ್ಮಾ ವಾಖಾನತ| ಸಂಕಟಹರಣಿ ಮಾತಾ ಹರೇ ಪಾಪ ಜನಕೋ|| ಜೋಯೀ ಜೋಯೀ ಧ್ಯಾವತ ಇಚ್ಛಾಫಲ ಪಾವತ| ಆವತ ನ ಯಹೀ ಜಗಮೇ ಪುನರಾಗಮನಕೋ|| ತಾನತರಂಗ ತೂಯಾ ಘಟ ಘಟ ವಿರಾಜತ| ಐಸೀ ಅರೀ ಮಾತ ಕೃಪಾ ಕರನ ಕೋ||

ತಾರಾ ತರಣೀ ನಾಮ Read More »

ತಾರಾ ಉಜ್ವಲ

ತಾರಾ ಉಜ್ವಲ ಪಶಿಲೊ ಧರಾಪರ ನಿರ್ಮಲ ಗಗನ ವಿಕಾಶೀ| ರತ್ನಗರ್ಭಾ ನಾರೀ ರತ್ನ ಪ್ರಸವಿಲೊ ಬಿಭೋರ ಬಾಲ ಸಂನ್ಯಾಸೀ|| ರವಿಕರ ಕರ್ಷಿತ ಕುಜ್ಝಟಿಕಾ ಘನ ಆವರೇ ದಿನಕರ ಕಾಂತಿ| ಮಾಯಾವಲಂಬನ ಕಾಯಾ ಪ್ರಕಟನ ಲೀಲಾ ಆವರಣ ಭ್ರಾಂತಿ|| ಗುರುಪದ ಧಾರಣ ಆತ್ಮ ಸಮರ್ಪಣ ಮಹಾ ಹ್ರದೇ ನದ ಮಹಾಸಮ್ಮಿಲನ| ದಯಾ ಉಚ್ಛ್ವಸಿತ ಸ್ರೋತ ಮಹಾನ್ ದುರಿತ ಅಶಾಂತಿ ವಿಧೌತ ಮೇದಿನೀ|| ಜನಮನ ಮಾರ್ಜಿತ ಶಾಂತಿಪ್ರದಾನ್ ಸಶಿಷ್ಯ ಗುರುಪದ ಹೃದೇ ಸಾಧೇ ಧರಿ| ಗಾಯ್ ಅಕಿಂಚನ ಗಾನ್ ಕೃಪಾಕಣಾ

ತಾರಾ ಉಜ್ವಲ Read More »

ತಾಥೈಯಾ ತಾಥೈಯಾ

ತಾಥೈಯಾ ತಾಥೈಯಾ ನಾಚೇ ಭೋಲಾ ಬಂ ಬಬ ಬಾಜೇ ಗಾಲ|| ಡಿಮಿ ಡಿಮಿ ಡಿಮಿ ಡಮರು ಬಾಜೇ ದುಲಿಛೇ ಕಪಾಲ ಮಾಲ|| ಗರಜೇ ಗಂಗಾ ಜಟಾಮಾಝೇ ಉಗರೇ ಅನಲ ತ್ರಿಶೂಲ ರಾಜೇ| ಧಕ್ ಧಕ್ ಧಕ್ ಮೌಲಿಬಂಧ ಜ್ವಲೇ ಶಶಾಂಕ ಭಾಲ||                       —-ಸ್ವಾಮಿ ವಿವೇಕಾನಂದ

ತಾಥೈಯಾ ತಾಥೈಯಾ Read More »