ಗುರುವೇ ತೊಳೆಯೆನ್ನ ಮನಸಿನ ಕೊಳಕ
ಮಿಶ್ರ ಶಿವರಂಜಿನಿ – ಏಕತಾಲ ಗುರುವೇ ತೊಳೆಯೆನ್ನ ಮನಸಿನ ಕೊಳಕ ಕಳೆದುಕೊಂಡದ್ದನ್ನ ಪಡಕೊಳ್ಳೋತನಕ|| ಭಕ್ತಿಯ ಜಲದಲ್ಲಿ ಮಾಡುವೆ ಜಳಕ ನಾನದರಿಂದಲೆ ಹೊಂದುವೆ ಪುಳಕ|| – ಸ್ವಾಮಿ ಪುರುಷೋತ್ತಮಾನಂದ
ಗುರುವೇ ತೊಳೆಯೆನ್ನ ಮನಸಿನ ಕೊಳಕ Read More »
ಮಿಶ್ರ ಶಿವರಂಜಿನಿ – ಏಕತಾಲ ಗುರುವೇ ತೊಳೆಯೆನ್ನ ಮನಸಿನ ಕೊಳಕ ಕಳೆದುಕೊಂಡದ್ದನ್ನ ಪಡಕೊಳ್ಳೋತನಕ|| ಭಕ್ತಿಯ ಜಲದಲ್ಲಿ ಮಾಡುವೆ ಜಳಕ ನಾನದರಿಂದಲೆ ಹೊಂದುವೆ ಪುಳಕ|| – ಸ್ವಾಮಿ ಪುರುಷೋತ್ತಮಾನಂದ
ಗುರುವೇ ತೊಳೆಯೆನ್ನ ಮನಸಿನ ಕೊಳಕ Read More »
ದರಬಾರೀ ಕಾನಡ – ದಾದರಾ ಗುರುವೆ ತಾಯಿ ಗುರುವೆ ತಂದೆ ಗುರುವೆ ದೈವ ದಾತಾರ| ಗುರುವೆ ಬಂಧು ದಯಾಸಿಂಧು ಗುರುವೆ ಕೃಪೆಯ ಸಾಕಾರ|| ಗುರುವೆ ಬ್ರಹ್ಮ ಗುರುವೆ ವಿಷ್ಣು ಗುರುವೆ ವರ ಮಹೇಶ್ವರ| ಗುರು ಪರತರ ಪರಬ್ರಹ್ಮ ಗುರುವೆ ಸಕಲ ಆಧಾರ|| ತಮವ ಕಳೆದು ಬೆಳಕ ತಂದ ದೀನಬಂಧು ಗುರುವರ| ಕರ್ಮಬಂಧ ತರಿದ ಧೀರ ನಿನಗಿದೋ ನಮಸ್ಕಾರ|| – ಸ್ವಾಮಿ ಪುರುಷೋತ್ತಮಾನಂದ
ಗುರುವೆ ತಾಯಿ ಗುರುವೆ ತಂದೆ Read More »
ಸುಖಕರ್ತಾ ದುಃಖಹರ್ತಾ ವಾರ್ತಾ ವಿಥ್ಯಾಚಿ ನುರವೀ ಪುರವೀ ಪ್ರೇಮ ಕೃಪಾ ಜಯಾಚಿ| ಸರ್ವಾಂಗ ಸುಂದರ ಉಟಿ ಸೇಂದುರಾಚಿ ಕಂಠಿ ಝಳಕೇ ಮಾಳ ಮುಕ್ತಫಳಾಚಿ ಜಯದೇವ ಜಯದೇವ ಜಯ ಮಂಗಳಮೂರ್ತಿ ದರ್ಶನ ಮಾತ್ರೆ ಮನ ಕಾಮನ ಪುರತಿ|| ರತ್ನಖಚಿತ ಫರಾ ತುಝ ಗೌರೀಕುವರಾ| ಚಂದನಾಚೀ ಉಟೀ ಕುಂಕುಮ ಕೇಶರಾ ಹೀರೆ ಜಡಿತ ಮುಕುಟ ಶೋಭತೋ ಬರಾ| ರುಣಝಣತಿ ನೂಪುರ ಚರಣೀ ಘಾಘರಿಯಾ|| ಜಯದೇವ ಜಯದೇವ ಜಯ ಮಂಗಳಮೂರ್ತಿ ದರ್ಶನ ಮಾತ್ರೆ ಮನ ಕಾಮನ ಪುರತಿ|| ಲಂಬೋದರ ಪೀತಾಂಬರ ಫಣಿವರಬಂಧನಾ
ಸುಖಕರ್ತಾ ದುಃಖಹರ್ತಾ Read More »
ಗಣಪತಿ ಪರಿವಾರಂ ಚಾರುಕೇಯೂರಹಾರಂ ಗಿರಿಧರವರಸಾರಂ ಯೋಗಿನೀಚಕ್ರಚಾರಂ| ಭವಭಯಪರಿಹಾರಂ ದುಃಖದಾರಿದ್ರ್ಯದೂರಂ ಗಣಪತಿಮಭಿವಂದೇ ವಕ್ರತುಂಡಾವತಾರಂ|| ಅಖಿಲಮಲವಿನಾಶಂ ಪಾಣಿನಾ ಹಸ್ತಪಾಶಮ್ ಕನಕಗಿರಿನಿನಾಶಂ ಸೂರ್ಯಕೋಟಿಪ್ರಕಾಶಮ್| ಭಜಭವಗಿರಿನಾಶಂ ಮಾಲತೀತೀರವಾಸಂ ಗಣಪತಿಮಭಿವಂದೇ ಮಾನಸೇ ರಾಜಹಂಸಂ|| ವಿವಿಧಮಣಿ-ಮಯೂಖ್ಯೆಃ ಶೋಭಮಾನಂ ವಿದೂರೈ: ಕನಕರಚಿತಚಿತ್ರಂ ಕಂಠದೇಶೇ ವಿಚಿತ್ರಮ್| ದಧತಿ ವಿಮಲಹಾರಂ ಸರ್ವದಾ ಯತ್ನಸಾರಂ ಗಣಪತಿಮಭಿವಂದೇ ಸರ್ವದಾನಂದಕಂದಮ್|| ದುರಿತಗಜಮಮಂದಂ ವಾರುಣೀಂ ಚೈವ ವೇದಂ ವಿದಿತಮಖಿಲನಾದಂ ನೃತ್ಯಮಾನಂದಕಂದಮ್| ದಧತಿ ಶಶಿಸುವಕ್ತ್ರಮ್ ಚಾಂಕುಶಂ ಯೋ ವಿಶೇಷಂ ಗಣಪತಿಮಭಿವಂದೇ ಸರ್ವದಾನಂದಕಂದಮ್|| ತ್ರಿನಯನಯುತಭಾಲೇ ಶೋಭಮಾನೇ ವಿಶಾಲೇ ಮುಕುಟಮಣಿ-ಸುಡೋಲೇ ಮೌಕ್ತಿಕಾನಾಂ ಚ ಜಾಲೇ! ಧವಲಕುಸುಮಮಾಲೇ ಯಸ್ಯ ಶೀರ್ಷ್ಣಾ: ಸತಾಲೇ
ಗಿರಿಯೊಳು ಮನದೊಳು ಗಿಡಗಿಡದತ್ತ ದೇವ, ಎನ್ನದೇವ, ಬಾರಯ್ಯಾ, ತೋರಯ್ಯಾ ನಿಮ್ಮ ಕರುಣವನೆಂದು, ನಾನು ಅರಸುತ್ತ ಅಳಲುತ್ತ ಕಾಣದೆ ಸುಯಿದು ಬಂದು ಕಂಡೆ. ಶರಣರ ಸಂಗದಿಂದ ಅರಸಿ ಹಿಡಿದಿಹೆನಿಂದು ನೀನಡಗುವ ಠಾವ ಹೇಳಾ ಚೆನ್ನಮಲ್ಲಿಕಾರ್ಜುನಾ.
ಗಿರಿಯೊಳು ಮನದೊಳು ಗಿಡಗಿಡದತ್ತ Read More »
ಗಿರಿಯಲಲ್ಲದೆ ಹುಲ್ಲುಮೊರಡಿಯಲ್ಲಾಡುವುದೆ ನವಿಲು ? ಕೊಳಕ್ಕಲ್ಲದೆ ಕಿರುವಳ್ಳಕ್ಕೆಳಸುವುದೆ ಹಂಸೆ ? ಮಾಮರ ತಳಿತಲ್ಲದೆ ಸರಗೈವುದೆ ಕೋಗಿಲೆ ? ಪರಿಮಳವಿಲ್ಲದ ಪುಷ್ಪಕ್ಕೆಳಸುವುದೆ ಭ್ರಮರ ? ಎನ್ನ ದೇವ ಚೆನ್ನಮಲ್ಲಿಕಾರ್ಜುನಂಗಲ್ಲದೆ ಅನ್ಯಕ್ಕೆಳಸುವುದೆ ಎನ್ನ ಮನ ? ಪೇಳಿರೆ, ಕೆಳದಿಯರಿರಾ ?
ಗಿರಿಯಲಲ್ಲದೆ ಹುಲ್ಲುಮೊರಡಿಯಲ್ಲಾಡುವುದೆ ನವಿಲು ? Read More »
ಗೂಗೆ ಕಣ್ಣ ಕಾಣಲರಿಯದೆ ರವಿಯ ಬಯ್ವುದು. ಕಾಗೆ ಕಣ್ಣ ಕಾಣಲರಿಯದೆ ಶಶಿಯ ಬಯ್ವುದು. ಕುರುಡ ಕಣ್ಣ ಕಾಣಲರಿಯದೆ ಕನ್ನಡಿಯ ಬಯ್ವನು. ಇವರ ಮಾತೆಲ್ಲವು ಸಹಜವೆ ನರಕಸಂಸಾರದಲ್ಲಿ ಹೊದಕುಳಿಗೊಳುತ್ತ ಶಿವನಿಲ್ಲ ಮುಕ್ತಿಯಿಲ್ಲ, ಹುಸಿಯೆಂದಡೆ ನರಕದಲ್ಲಿಕ್ಕದೆ ಬಿಡುವನೆ ಚೆನ್ನಮಲ್ಲಿಕಾರ್ಜುನಯ್ಯ
ಗೂಗೆ ಕಣ್ಣ ಕಾಣಲರಿಯದೆ ರವಿಯ ಬಯ್ವುದು. Read More »
ಗುಣ ದೋಷ ಸಂಪಾದನೆಯ ಮಾಡುವನ್ನಕ್ಕ ಕಾಮದ ಒಡಲು, ಕ್ರೋಧದ ಗೊತ್ತು, ಲೋಭದ ಇಕ್ಕೆ, ಮೋಹದ ಮಂದಿರ, ಮದದಾವರಣ, ಮತ್ಸರದ ಹೊದಕೆ. ಆ ಭಾವವರತಲ್ಲದೆ ಚೆನ್ನಮಲ್ಲಿಕಾರ್ಜುನನ ಅರಿವುದಕ್ಕೆ ಇಂಬಿಲ್ಲ ಕಾಣಿರಣ್ಣಾ.
ಗುಣ ದೋಷ ಸಂಪಾದನೆಯ ಮಾಡುವನ್ನಕ್ಕ Read More »
ಗುರುವಿನ ಕರುಣದಿಂದ ಲಿಂಗವ ಕಂಡೆ, ಜಂಗಮನ ಕಂಡೆ. ಗುರುವಿನ ಕರುಣದಿಂದ ಪಾದೋದಕವ ಕಂಡೆ, ಪ್ರಸಾದವ ಕಂಡೆ. ಗುರುವಿನ ಕರುಣದಿಂದ ಸಜ್ಜನ ಸದ್ಭಕ್ತರ ಸದ್ಗೋಷ್ಠಿಯ ಕಂಡೆ. ಚೆನ್ನಮಲ್ಲಿಕಾರ್ಜುನಯ್ಯಾ, ನಾ ಹುಟ್ಟಲೊಡನೆ ಶ್ರೀಗುರು ವಿಭೂತಿಯ ಪಟ್ಟವ ಕಟ್ಟಿ ಲಿಂಗಸ್ವಾಯತವ ಮಾಡಿದನಾಗಿ ಧನ್ಯಳಾದೆನು.
ಗುರುವಿನ ಕರುಣದಿಂದ ಲಿಂಗವ ಕಂಡೆ, ಜಂಗಮನ ಕಂಡೆ. Read More »
ಗುರುವೆಂಬ ತೆತ್ತಿಗನು ಲಿಂಗವೆಂಬಲಗನು ಮನನಿಷ್ಠೆಯೆಂಬ ಕೈಯಲ್ಲಿ ಕೊಡಲು, ಕಾದಿದೆ ಗೆಲಿದೆ ಕಾಮನೆಂಬವನ, ಕ್ರೋಧಾದಿಗಳು ಕೆಟ್ಟು, ವಿಷಯಂಗಳೋಡಿದವು. ಅಲಗು ಎನ್ನೊಳು ನಟ್ಟು ಆನಳಿದ ಕಾರಣ ಚೆನ್ನಮಲ್ಲಿಕಾರ್ಜುನಲಿಂಗವ ಕರದಲ್ಲಿ ಹಿಡಿದೆ.
ಗುರುವೆಂಬ ತೆತ್ತಿಗನು Read More »
ಗುರುವೆ ತೆತ್ತಿಗನಾದ, ಲಿಂಗವೆ ಮದುವಣಿಗನಾದ, ನಾನೆ ಮದುವಳಿಗೆಯಾದೆನು. ಈ ಭುವನವೆಲ್ಲರಿಯಲು ಅಸಂಖ್ಯಾತರೆನಗೆ ತಾಯಿತಂದೆಗಳು. ಕೊಟ್ಟರು ಸಾದೃಶ್ಯವಪ್ಪ ವರನ ನೋಡಿ. ಇದು ಕಾರಣ ಚೆನ್ನಮಲ್ಲಿಕಾರ್ಜುನನೆ ಗಂಡನೆನಗೆ. ಮಿಕ್ಕಿನ ಲೋಕದವರೆನಗೆ ಸಂಬಂಧವಿಲ್ಲವಯ್ಯಾ ಪ್ರಭುವೆ.
ಗುರುವೆ ತೆತ್ತಿಗನಾದ, Read More »
ಗುರುಪಾದತೀರ್ಥವೆ ಮಂಗಳ ಮಜ್ಜನವೆನಗೆ. ವಿಭೂತಿಯೆ ಒಳಗುಂದದರಿಷಿಣವೆನಗೆ ದಿಗಂಬರವೆ ದಿವ್ಯಾಂಬರವೆನಗೆ. ಶಿವಭಕ್ತರ ಪಾದರೇಣುವೆ ಅನುಲೇಪನವೆನಗೆ. ರುದ್ರಾಕ್ಷಿಯೆ ಮೈದೊಡಿಗೆಯೆನಗೆ. ಶರಣರ ಪಾದರಕ್ಷೆಯೆ ಶಿರದಲ್ಲಿ ತೊಂಡಿಲುಬಾಸಿಗವೆನಗೆ. ಚೆನ್ನಮಲ್ಲಿಕಾರ್ಜುನನ ಮದವಳಿಗೆಗೆ ಬೇರೆ ಶೃಂಗಾರವೇಕೆ ಹೇಳಿರೆ ಅವ್ವಗಳಿರಾ ?
ಗುರುಪಾದತೀರ್ಥವೆ ಮಂಗಳ ಮಜ್ಜನವೆನಗೆ. Read More »
ಗುರು ತನ್ನ ವಿನೋದಕ್ಕೆ ಗುರುವಾದ ಗುರು ತನ್ನ ವಿನೋದಕ್ಕೆ ಲಿಂಗವಾದ ಗುರು ತನ್ನ ವಿನೋದಕ್ಕೆ ಜಂಗಮವಾದ ಗುರು ತನ್ನ ವಿನೋದಕ್ಕೆ ಪಾದೋದಕವಾದ ಗುರು ತನ್ನ ವಿನೋದಕ್ಕೆ ಪ್ರಸಾದವಾದ ಗುರು ತನ್ನ ವಿನೋದಕ್ಕೆ ವಿಭೂತಿಯಾದ ಗುರು ತನ್ನ ವಿನೋದಕ್ಕೆ ರುದ್ರಾಕ್ಷಿಯಾದ ಗುರು ತನ್ನ ವಿನೋದಕ್ಕೆ ಮಹಾಮಂತ್ರವಾದ. ಇಂತೀ ಭೇದವನರಿಯದೆ, ಗುರು ಲಿಂಗ ಜಂಗಮ ಪಾದತೀರ್ಥ ಪ್ರಸಾದ ವಿಭೂತಿ ರುದ್ರಾಕ್ಷಿ ಓಂ ನಮಃ ಶಿವಾಯಯೆಂಬ ಮಂತ್ರವ ಬೇರಿಟ್ಟು ಅರಿಯಬಾರದು. ಅದಲ್ಲದೆ ಒಂದರಲ್ಲಿಯೂ ವಿಶ್ವಾಸ ಬೇರಾದಡೆ ಅಂಗೈಯಲ್ಲಿರ್ದ ಲಿಂಗವು ಜಾರಿತ್ತು. ಮಾಡಿದ
ಗುರು ತನ್ನ ವಿನೋದಕ್ಕೆ ಗುರುವಾದ Read More »
ಗಟ್ಟಿದುಪ್ಪ ತಿಳಿದುಪ್ಪಕ್ಕೆ ಹಂಗುಂಟೆ ಅಯ್ಯಾ ? ದೀಪಕ್ಕೆ ದೀಪ್ತಿಗೆ ಭೇದವುಂಟೆ ಅಯ್ಯಾ ? ಅಂಗಕ್ಕೆ ಆತ್ಮಂಗೆ ಭಿನ್ನವುಂಟೆ ಅಯ್ಯಾ ? ಎನ್ನಂಗವನು ಶ್ರೀಗುರು ಮಂತ್ರವಮಾಡಿ ತೋರಿದನಾಗಿ, ಸಾವಯಕ್ಕೂ ನಿರವಯಕ್ಕೂ ಭಿನ್ನವಿಲ್ಲವಯ್ಯಾ. ಚೆನ್ನಮಲ್ಲಿಕಾರ್ಜುನದೇವರ ಬೆರಸಿ ಮತಿಗೆಟ್ಟವಳನೇತಕ್ಕೆ ನುಡಿಸುವಿರಯ್ಯಾ ?
ಗಟ್ಟಿದುಪ್ಪ ತಿಳಿದುಪ್ಪಕ್ಕೆ ಹಂಗುಂಟೆ ಅಯ್ಯಾ ? Read More »
ಗಗನದ ಗುಂಪ ಚಂದ್ರಮ ಬಲ್ಲುದಲ್ಲದೆ, ಕಡೆಯಲಿದ್ದಾಡುವ ಹದ್ದು ಬಲ್ಲುದೆ ಅಯ್ಯಾ ? ನದಿಯ ಗುಂಪ ತಾವರೆ ಬಲ್ಲುದಲ್ಲದೆ, ಕಡೆಯಲಿದ್ದ ಹೊನ್ನಾವರಿಕೆ ಬಲ್ಲುದೆ ಅಯ್ಯಾ ? ಪುಷ್ಪದ ಪರಿಮಳವ ತುಂಬಿ ಬಲ್ಲುದಲ್ಲದೆ, ಕಡೆಯಲಿದ್ದಾಡುವ ನೊರಜು ಬಲ್ಲುದೆ ಅಯ್ಯಾ ? ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರ ನಿಲವ ನೀವೆ ಬಲ್ಲಿರಲ್ಲದೆ, ಈ ಕೋಣನ ಮೈಮೇಲಣ ಸೊಳ್ಳೆಗಳೆತ್ತ ಬಲ್ಲವಯ್ಯಾ ?
ಗಗನದ ಗುಂಪ ಚಂದ್ರಮ ಬಲ್ಲುದಲ್ಲದೆ, Read More »
ಗಂಡ ನೀನು ಹೆಂಡತಿಯಾನು ಮತ್ತೊಬ್ಬರಿಲ್ಲಯ್ಯಾ. ನಿನ್ನ ಬೆಂಬಳಿಯಲಾನು ಮೆಚ್ಚಿಬಂದೆ. ಕಂಡಕಂಡವರೆಲ್ಲ ಬಲುಹಿಂದ ಕೈಹಿಡಿದರೆ, ಗಂಡಾ, ನಿನಗೆ ಸೈರಣೆಯೆಂತಾಯಿತ್ತು ಹೇಳಾ ? ಚೆನ್ನಮಲ್ಲಿಕಾರ್ಜುನಯ್ಯಾ, ನಿನ್ನ ತೋಳ ಮೇಲಣವಳನನ್ಯರೆಳದೊಯ್ಯುವರೆ ನೋಡುತಿಹುದುಚಿತವೆ ಕರುಣಿಗಳರಸಾ ?
ಗಂಡ ನೀನು ಹೆಂಡತಿಯಾನು ಮತ್ತೊಬ್ಬರಿಲ್ಲಯ್ಯಾ. Read More »
ಗೌರೀವರನೆ ಎನ್ನ ಮೊರೆ ಕೇಳೊ ಚೆನ್ನ ಹೌರನೆ ಮತಿಯಿತ್ತು ಸಲಬೇಕೆನ್ನ ಗೌರವ ಗಾತುರ ತೌರ ಮನೆಯ ಹರ ಕೌರವಾಂತಕನೊಳು ಶೌರಿಯ ತೋರಿಸೋ ಮೃಗಲಾಂಛನ ಸನ್ಮೌಳಿ ಶಿವ ಮಹಾದೇವ ತ್ರಿಗುಣಾತುವ ಗಾತುರ ಭಕ್ತ ಸಂಜೀವ ನಿಗಮತುರಗ ಪಾವ ವನಮಾಲ ಪಾವಾ ಮೃಗಪಾಣಿ ಮೃತ್ಯುಂಜಯ ಸುಪ್ರಭಾವ ನಗೆಪಗೆ ಮಗನನು ಮೃಗನೆವನದಿ ಕಾ ಳಗಮಾಡಿ ಮೆಚ್ಚಿದೆ ಅಗಣಿತ ಗುಣಮಣಿ ಯುಗಯುಗದಲಿ ವಾಲಗ ನಿನ್ನವರೊಳು ಮಗಳೆ ಮಗುಳೆ ಕೊಡು ಗಗನೇಶ ಜನಕ ||1|| ಭವಹರ ತ್ರಿಯಂಬಕ ತ್ರಿಪುರಾರಾತಿ ಪವನ ಸಪುತ ಸಪ್ತ ವಂದಿತ
ಗೌರೀವರನೆ ಎನ್ನ ಮೊರೆ ಕೇಳೊ ಚೆನ್ನ Read More »
ಗೋಪಿದೇವಿ ಎಂತು ಪೇಳಲೆ ನಾನೆಂತು ತಾಳಲೆ ಶ್ರೀಪತಿ ಬಂದು ನಿಂದು ಏಕಾಂತವನ್ನ ಆಡುತಾನೆ | ಪಾಪ ಇಂಥಾದುಂಟೇನೆ ಕೇಳೆ ಲಕ್ಷ್ಮೀಕಾಂತನೀತನೆ || ಮಂಥನ ಮಾಡುವಲ್ಲಿ ಮಂಥಣಿಯ ಒಡೆದನು | ಕುಂತಳವ ಪಿಡಿದು ಎನ್ನ ಕುಳ್ಳಿರಿಸಿದಾ ಕಿರಿಬೆವರನೊರಸಿದಾ ||1|| ಚಿಕ್ಕಮಕ್ಕಳ ಕೂಡಿ ಚಕ್ಕನೆ ತಾ ಬಂದು ಬೇಗ | ಬೆಕ್ಕು ಕುನ್ನಿ ಮರ್ಕಟವ ತಂದನಮ್ಮಾ ಇದು ಚಂದವೇನಮ್ಮ || ಉಕ್ಕುತಿಹ ಪಾಲ್ಗೊಡಗಳ ಉರುಳಿಸಿದಾ ಸುಮ್ಮನೆ | ಚೊಕ್ಕವೇನೆ ಸುಮ್ಮನೆ ಮೊಸರ ಸುರಿದಾ ಮೀಸಲು ಮುರಿದಾ ||2|| ರಕ್ಕಸರ ಗಂಡ
ಗೋಪಿದೇವಿ ಎಂತು ಪೇಳಲೆ ನಾನೆಂತು ತಾಳಲೆ Read More »
ಗೋಪಾಲವಿಠ್ಠಲ ನಿನ್ನ ಪೂಜೆ ಮಾಡುವೆನು ಕಾಪಾಡೊ ಈ ಮಾತನು ಅಪರಾ ಜನುಮದಲಿಡುವನೆ ಮ್ಯಾಲೆ ನೀ ಪ್ರೀತಿಯನು ಮಾಡಿ ನಿಜದಾಸರೊಳಿದು ಶ್ರುತಿಶಾಸ್ತ್ರ ಪುರಾಣ ಮಿಕ್ಕಾದ ಗ್ರಂಥಗಳ ಸತತ ಅಭ್ಯಾಸ ಮಾಡಿ ಮಿತಿಯಿಲ್ಲದಲೆ ತೀರ್ಥಯಾತ್ರೆ ನಾನಾ ದಾನ ವ್ರತಗಳನೆ ಬಿಡದೆ ಮಾಡಿ ಮತಿಯಲ್ಲಿ ನಿಮ್ಮಯ ಸ್ತೋತ್ರಗಳ ಗೈದುನ್ನ ತೋಪಾಸನಗಳನು ಮಾಡಿ ಹಿತ ಪುಣ್ಯದಿಂದವಗುಪದೇಶವನು ಮಾಡಿದೆನು ಚ್ಯುತಿದೂರ ನಿನ್ನ ಕೊಂಡಾಡಿದೆ ||1|| e್ಞÁನವೆ ಭಕುತರಿಗೆಯಿತ್ತು ಯಥಾರ್ಥದಲಿ ಕ್ಷೋಣಿಯೊಳಗೆ ನಡಿಸುತ ಮಾನವರೊಳಗಿದ್ದು ವಿಚಿತ್ರವನು ತೋರಿ ಮೇಣು ಧನ್ಯನ್ನ ಮಾಡು ಮಾಣದಲೆ ಈ ಪರಿ
ಗೋಪಾಲವಿಠ್ಠಲ ನಿನ್ನ ಪೂಜೆ Read More »
ಗೋದೆ ಅತಿ ಪುಣ್ಯ ಸಾಧೆ ಮಾಧವನ ಚರಣಾರವಿಂದೆ ಪಾದೆ ಇದ್ದಲ್ಲಿ ನಿನ್ನ ಸ್ಮರಣೆಯನು ಮಾಡಲು ಪಾಪ ಎದ್ದೋಡಿ ತಿರುಗಿ ನೋಡದೆ ಹೋಹವು ಸದ್ಬಕ್ತಿಯಿಂದ ನಿನ್ನನು ನೋಡಬೇಕೆನುತ ಉದ್ಯುಕ್ತವಾಗೆ ಬ್ರಹ್ಮಹತ್ಯ ಪರಿಹಾರವೊ ||1|| ಬಂದು ಹರುಷದಲಿ ಕಣ್ಣಲಿ ಕಂಡು ಶಿರವಾಗಿ ವಂದನೆಯ ಮಾಡಿ ಸಾಷ್ಟಾಂಗೆರಗಲೂ ಹಿಂದಣ ಶತಕೋಟಿ ದುರಿತ ರಾಸಿಗಳೆಲ್ಲ ಒಂದು ಉಳಿಯದಂತೆ ಬೆಂದು ಹೋಹವು ||2|| ಅತಿವೇಗದಿಂದ ಬಂದು ಸ್ನಾನವನು ಮಾಡಲು ಮತಿವಂತರನ ಮಾಡಿ ದುರ್ಮಾರ್ಗ ಬಿಡಿಸಿ ರತಿಪತಿ ಜನಕ ಸಿರಿ ವಿಜಯವಿಠ್ಠಲನ್ನ ಸ್ತುತಿಸಿ ಗತಿ ಪಡೆವಂತೆ
ಗೋದೆ ಅತಿ ಪುಣ್ಯ ಸಾಧೆ Read More »
ಗೋತ್ರ ಪ್ರವರ ಉಚ್ಚಾರಣೆ ವಂದೇ ಕಾಣೊ ಧಾತ್ರಿಯೊಳಗೆ ತಂದೆ ಮಕ್ಕಳು ಮಾಡುವ ಕಾ | ಲತ್ರಯದ ಸಂಧ್ಯಾವೆಲ್ಲ ಎಂದಿಗೂ ಭೇದವಿಲ್ಲಾ ಪುತ್ರನಿಗೆ ಪಿತನು ಆನಾರಂಭದಿ ನಾಮ ಮಾತ್ರ ನುಡಿಸುವ ಬುದ್ಧಿ ಪೇಳಿ | ಚಿತ್ರವ ಗೋಡೆಯ ಮೇಲೆ ರಚಿಸಿರಲು ನೋಡಿ ಸ್ತೋತ್ರ ಮಾಡಿದರೆ ಯೇನಾಹದೋ||1|| ಚಿತ್ರಿಕ ಬಲು ವಿವೇಕ ಉಳ್ಳವನೆಂದು ಪಾತ್ರರ ಮುಂದೆ ಕೊಂಡಾಡಿದಂತೆ | ಧಾತ್ರಿಯೊಳಗೆ ನಮ್ಮ ಪುರಂದರದಾಸರ ಸ್ತೋತ್ರ ಮಾಡಿರಯ್ಯ ಸಚಲರಾಗೀ ||2|| ಗಾತ್ರ ನಿರ್ಮಲವಕ್ಕು ಯೆಂದೆಂದಿಗೆ ದಿವ್ಯ | ನೇತ್ರದಿಂದಲಿ ಹರಿಯ ಸರಿದರುಶನಾ
ಗೋತ್ರ ಪ್ರವರ ಉಚ್ಚಾರಣೆ Read More »
ಗುರುವೇ ನಿಮ್ಮ ಮಹಿಮೆ ಅರಿವೇ ವಿಚಿತ್ರವೆಂದು ಕರವೇ ವಂದಿಸಿ-ನಮಸ್ಕರಿಸಿ ಮಾತನುಸುರುವೆ ಪರಮಾದರದಲಿ ಕರುಣ ಎನ್ನ ಮೇಲೆ ಹರಹಿ ದುರುಮತಿಯ ಪರಿಹರಿಸುವುದು ವಾತತನಯ ವಾರಿಜಾತ ಬಾಂಧವ ಸಂ ಭೂತ ಸಹಾಯ ರಘುನಾಥನ್ನ ಪ್ರಿಯದೂತ ಶಾತಕುಂಭ ಮಕುಟ ಶೀತಕರ ಕುಂಡಲ- ತೀತ ಸುಂದರ ಕಾಯ-ಜಾತ ಶರವರ್ಜಿತ ದಾತನಿಂದಲಿ ಬಹಳಾತುರದಲಿ ಗು- ರುತು ಪಡೆದು ನಿರ್ಭೀತನಾಗಿ ಪೋಗಿ ಮಾತೆಗೆರಗಿ ಖಳವ್ರಾತವ ಘಾತಿಸಿ ಪ್ರೀತಿಯಿಂದಲಿ ನಿಜರಾತಿಯ ತಣಿಸಿದ ||1|| ಪಾಂಡುತನಯ ಗಿರಿ ಖಂಡಿತ ಶತಶೃಂಗ ಮಂಡಲದೊಳಗೆ ಉದ್ದಂಡ ವಿಷವನುಂಡು ಕುಂಡಲಿಯಿಂದ ಕೈಗೊಂಡು ಮನ್ನಣೆಯ
ಗುರುವೇ ನಿಮ್ಮ ಮಹಿಮೆ ಅರಿವೇ ವಿಚಿತ್ರವೆಂದು Read More »
ಗುರುವಶಕೆ ನಮೋ ಎಂಬೆ ನಮ್ಮ ಮರುತ ಮತಾಬ್ದಿಗೆ ನಮೋ ಎಂಬೆ ಶ್ರೀ ಮದಾನಂದತೀರ್ಥ ಪದ್ಮನಾಭರಿಗೆ | ರಾಮದೇವರ ಕಂದ ನರಹರಿಗೆ || ಕಾಮಿತ ಫಲವೀವ ಮಾಧವಕ್ಷೋಭ್ಯರಿಗೆ | ಆ ಮಹಾಮಹಿಮ ಜಯತೀರ್ಥ ರಾಯರಿಗೆ ||1|| ವಿದ್ಯಾಧಿರಾಜರಿಗೆ ವಿಜಯ ಕವೀಂದ್ರ ಸು | ಸದ್ಗುಣ ವಾಗೀಶ ರಾಮಚಂದ್ರರಿಗೆ || ವಿದ್ಯಾನಿಧಿ ರಘುನಾಥ ರಘುವರ್ಯತೀರ್ಥರಿಗೆ | ಅದ್ವೈತಮತ ಖಂಡ ರಘೋತ್ತರಾಯರಿಗೆ ||2|| ವೇದವ್ಯಾಸ ವಿದ್ಯಾಧೀಶ ವೇದನಿಧಿ ಮುನಿಗೆ | ಸಾಧುಜನ ಪ್ರಿಯ ನಿತ್ಯ ವತ್ರರಿಗೆ || ಮೇದಿನಿಯಲಿ ಮೆರೆದ ಸತ್ಯನಿಧಿತೀರ್ಥರಿಗೆ
ಗುರು ವಾದಿರಾಜ ರವಿಕೋಟಿ ತೇಜಾ ಶರಣೆಂಬೆನಯ್ಯಾ ಸತತಗೇಯಾ ನಂಬಿದೆನು ನಿನ್ನ ದಯ ಸಂಪನ್ನ ಸಂಭ್ರಮದಲ್ಲೆನ್ನ ಪೊರೆಯೊ ಪ್ರಸನ್ನ ||1|| ವೇದಶಾಸ್ತ್ರ ಬಲ್ಲ ಭಳಿರೆ ಮಲ್ಲ ಭೇದ e್ಞÁನವೆ ಎಂಬೊ ನಿಜವೆಂಬ ಫಲ ||2|| ಮಾಯಿಗಳ ವದ್ದ ಮಮತಾ ಗೆದ್ದ ಗಾಯನ ಪ್ರಸಿದ್ಧ ಗುಣದಲಿ ಇದ್ದ ||3|| ನಾನಾ ಚಾರಿತ್ರ ತೋರಿದ ಮಿತ್ರ ಧೇನಿಸಿ ಸಿರಿ ಹರಿಯ ಗಾತ್ರದೊಳಿಟ್ಟ ಪಾತ್ರ||4|| ಸಂತತ ವಿರಕ್ತ ಜೀವನ ಮುಕ್ತಾ ಸಂತಾರಿ ಸುಶಕ್ತಾ ಹರಿನಾಮ ಭೋಕ್ತಾ ||5|| ಸ್ವಾದಿಪುರವಾಸ ಸಾಧುಗುಣ ಭಾಸಾ ಸದ್ಭಕುತ
ಗುರು ವಾದಿರಾಜ ರವಿಕೋಟಿ Read More »
ಗುರು ವಾದಿರಾಜ ಯತಿಯಾ ನೆನಸುವದು ನಿರುತ ಕರುಣಿಪ ಮತಿಯಾ ಆರ್ತನಾ ಸರಿದಾರು ನವನ ವರ್ತಮಾನವನೆ ಕೇಳಿ ಕರ್ತೃತ್ವ ಪರಿಹರಿಸಿ ಸಂಸೃತಿಯ ಗರ್ತದಿಂದೆತ್ತಿ ನೋಳ್ಪ ||1|| ದುರಿತ ರಾಶಿಗಳ ಶೀಳಿ ಹೊರದೆಗೆದು ಮರುತ ಶಾಸ್ತ್ರವನೆ ಪೇಳಿ ಪರಮಾರ್ಥ ಮಾರ್ಗವಾ ತೋರಿ ಸುಖಬಡಿಸಿ ಧರಿಯೊಳಗೆ ಮೆರೆದೆ ಧೀರ ||2|| ವಂದಿಸಿ ಸೌಂದರ್ಯಪುರಿಯ ವಾಸ ವರಪ್ರದ ನಂದ ಸತ್ಕೀರ್ತಿ ಭೂಪ ವಂದಿಸಿದವರಿಗೆ ಲೇಸಾಗಿ ಕೊಡುವ ಮು ಕುಂದನಂಘ್ರಿಯ ದಾಸ ||3|| ತೀರ್ಥಯಾತ್ರೆಯನೆ ಮಾಡಿ ಹರಿ ಭೇದಾರ್ಥದಿಂದಲೆ ಕೊಂಡಾಡಿ ಅರ್ಥಾಸೆಗಳ ಈಡಾಡಿ ಹಯಮೊಗನ
ಗುರು ವಾದಿರಾಜ ಯತಿಯಾ Read More »