ಕರುಣಿಸೆನ್ನ ಹರಿಯ ರಮಣಿ

ಕರುಣಿಸೆನ್ನ ಹರಿಯ ರಮಣಿ ವರದ ಲಕುಮಿದೇವಿಯೆ ಕಮಲಭಾಣಜನನಿ ದಿವ್ಯ- ಕಮಲಪಾಣಿ ರಾಜಿತೇ|| ಸಕಲನಿಗಮವಿನುತಚರಣೇ ಸಕಲಭಾಗ್ಯದಾಯಿನಿ ಸಕನಮೌನಿನಿಕರವಂದ್ಯ ಸಕಲಲೋಕನಾಯಕಿ|| ಶರಧಿತನುಜೇ ಮಂಗಳಾಂಗಿ ಪರಮಸೌಖ್ಯದಾಯಿನಿ ವರದವೆಂಕಟಾದ್ರಿವರನ ಪುರನಿವಾಸೇ ಮೋಹಿನಿ||

ಕರುಣಿಸೆನ್ನ ಹರಿಯ ರಮಣಿ Read More »

ಕರುಣಾಕರ ಹರ ಶೂಲಧರನೇ

ಕರುಣಾಕರ ಹರ ಶೂಲಧರನೇ| ವರಗೌರೀಪತಿ ಸಾಂಬ ಸದಾಶಿವ|| ಪರಮದಯಾಕರ ಪರಮೇಶ್ವರನೇ| ವರಫಣಿಭೂಷಣನೇ ಪರಶಿವನೇ|| ಫಾಲವಿಲೋಚನ ಗಂಗಾಧರನೇ| ಪಾಲಿಸು ಎಮ್ಮನು ರಜತಗಿರೀಶನೇ|| ಕೈಲಾಸಾಧಿಪ ಕೈವಲ್ಯಪ್ರದ| ಬಾಲಚಂದ್ರಧರನೇ ಸ್ಮರಹರನೇ||

ಕರುಣಾಕರ ಹರ ಶೂಲಧರನೇ Read More »

ಕರುಣಾಕರ ನೀನೆಂಬುವುದೇತಕೋ

ಕರುಣಾಕರ ನೀನೆಂಬುವುದೇತಕೋ ಭರವಸೆಯಿಲ್ಲೆನಗೆ|| ಪರಿಪರಿಯಲಿ ಈ ನರಜನ್ಮವನಿತ್ತು ತಿರುಗಿ ತಿರುಗಿ ಮನಕರಗಿಸುವುದ ಕಂಡು|| ಕರಿ ಧ್ರುವ ಬಲಿ ಪಾಂಚಾಲಿ ಅಹಲ್ಯೆಯ ಪೊರೆದವ ನೀನಂತೆ| ಅರಿತು ವಿಚಾರಿಸಿ ನೋಡಲದೆಲ್ಲವು ಪರಿಪರಿ ಕಂತೆಗಳಂತಿವೆ ಕೃಷ್ಣಾ|| ಕರುಣಾಕರ ನೀನಾದರೆ ಈಗಲೆ ಕರಪಿಡಿದೆನ್ನನು ಹರಿ ಕಾಯೋ| ಸರಸಿಜಾಕ್ಷನೆ ಸರಸ ನೀನಾದರೆ ದುರಿತಗಳೆನ್ನನು ಬಾಧಿಪುದುಂಟೆ|| ಮರಣಕಾಲದಲಿ ಅಜಮಿಳಗೊಲಿದೆ ಗರುಡಧ್ವಜನೆಂಬ ಬಿರುದಿನಿಂದ| ವರಬಿರುದುಗಳು ಉಳಿಯಬೇಕಾದರೆ ತ್ವರಿತದಿ ಕಾಯೋ ಪುರಂದರವಿಟ್ಠಲ||                                        —-ಪುರಂದರದಾಸ

ಕರುಣಾಕರ ನೀನೆಂಬುವುದೇತಕೋ Read More »

ಕರುಣ ಶೀತಲ

ಕರುಣ ಶೀತಲ ಕಿರಣ ಶೋಭಿತ ತರಣಿ ನಿನ್ನಯ ಚರಣಕೆರಗುವೆ|| ಕಾಮ ಮೋಹದ ತಮವ ಕಳೆಯಲು ಪ್ರೇಮ ಚ್ಯೋತಿಯ ಕಾಂತಿ ಬೆಳಗಿಹೆ| ವಿಷಮ ಶೈತ್ಯದಿ ಭೀತ ಜಗಕೆ ಸೌಮ್ಯ ಸಮತೆಯ ಸ್ಥೈರ್ಯ ನೀಡಿಹೆ|| ಕರ್ಮಕಾಂಡದ ಕ್ರೌರ್ಯ ಜಡತೆಯಿಂ ಧರ್ಮಶಾಸ್ತ್ರದ ಶುಷ್ಕವಾದದಿಂ| ಧರ್ಮಬಾಳ್ವೆಯ ಸಲಹಲೆಂದು ಧರ್ಮಮೂರುತಿ ಇಳಿದು ಬಂದೆ|| ಸರ್ವಧರ್ಮದ ಸರ್ವಕರ್ಮದ ಸರ್ವಸಾರವ ತೆರೆದು ತೋರಿದೆ| ಸರ್ವಸೃಷ್ಟಿ ವಿಮುಕ್ತಿಸಾಧಕ ಸರ್ವತ್ಯಾಗಿ ಸಾರ್ವಭೌಮ||                              —–ಸ್ವಾಮಿ ಶಾಸ್ತ್ರಾನಂದ

ಕರುಣ ಶೀತಲ Read More »

ಕಮಲವದನ ಕಲುಷಹರಣ

ಕಮಲವದನ ಕಲುಷಹರಣ ನಿನಗೆ ನಮನ ರಾಮಕೃಷ್ಣ|| ಧರಮಸ್ಥಾಪನ ನಿನ್ನಾಗಮನ ಪರಮಪಾವನ ನಿನ್ನ ಭಜನ| ಕೊಡುವೆ ನಿನಗೆ ಹೃದಯದಾಸನ ಕಳೆಯೋ ಎನ್ನ ಜನುಮಮರಣ|| ಜಗದ ಜೀವನ ಪುಣ್ಯಕಥನ ವಿಜಿತಮದನ ಕರಮ ದಹನ| ರಚಿಸಿ ನೀನು ವಿಶ್ವಕವನ ನೀಡುತಿರುವೆ ತವ ದರುಶನ|| ವಿಶ್ವಮೋಚನ ತವಗುಣಗಾನ ಚಿತ್ತಶೋಧನ ನಿನ್ನನುಧ್ಯಾನ| ನನ್ನದೆನುವ ತನುಮನಧನ ನಿನಗೆ ಅರ್ಪಣ ಹೇ ಮಮ ಜೀವನ||                                —ಸ್ವಾಮಿ ತದ್ರೂಪಾನಂದ

ಕಮಲವದನ ಕಲುಷಹರಣ Read More »