ಕಾಯ ಪ್ರಸಾದವೆನ್ನ, ಜೀವ ಪ್ರಸಾದವೆನ್ನ,

ಕಾಯ ಪ್ರಸಾದವೆನ್ನ, ಜೀವ ಪ್ರಸಾದವೆನ್ನ, ಪ್ರಾಣ ಪ್ರಸಾದವೆನ್ನ, ಮನಪ್ರಸಾದವೆನ್ನ, ಧನ ಪ್ರಸಾದವೆನ್ನ, ಭಾವ ಪ್ರಸಾದವೆನ್ನ, ಸಯದಾನ ಪ್ರಸಾದವೆನ್ನ, ಸಮಭೋಗ ಪ್ರಸಾದವೆನ್ನ. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಪ್ರಸಾದವ ಹಾಸಿ ಹೊದಿಸಿಕೊಂಡಿಪ್ಪೆನು.

ಕಾಯ ಪ್ರಸಾದವೆನ್ನ, ಜೀವ ಪ್ರಸಾದವೆನ್ನ, Read More »

ಕಾಯ ಕರ್ರನೆ ಕಂದಿದಡೇನಯ್ಯಾ ?

ಕಾಯ ಕರ್ರನೆ ಕಂದಿದಡೇನಯ್ಯಾ ? ಕಾಯ ಮಿರ್ರನೆ ಮಿಂಚಿದಡೇನಯ್ಯಾ ? ಅಂತರಂಗ ಶುದ್ಧವಾದ ಬಳಿಕ ಚೆನ್ನಮಲ್ಲಿಕಾರ್ಜುನಯ್ಯಾ ನೀನೊಲಿದ ಕಾಯವು ಹೇಗಿದ್ದಡೇನಯ್ಯಾ ?

ಕಾಯ ಕರ್ರನೆ ಕಂದಿದಡೇನಯ್ಯಾ ? Read More »

ಕೂಡಿ ಕೂಡುವ ಸುಖದಿಂದ

ಕೂಡಿ ಕೂಡುವ ಸುಖದಿಂದ ಒಪ್ಪಚ್ಚಿ ಅಗಲಿ ಕೂಡುವ ಸುಖ ಲೇಸು, ಕೆಳದಿ ? ಒಚ್ಚೊತ್ತಗಲಿದಡೆ ಕಾಣದಿರಲಾರೆ. ಎನ್ನ ದೇವ ಚೆನ್ನಮಲ್ಲಿಕಾರ್ಜುನನಗಲಿಯಗಲದ ಸುಖವೆಂದಪ್ಪುದೊ ?

ಕೂಡಿ ಕೂಡುವ ಸುಖದಿಂದ Read More »

ಕುಲಗಿರಿಯ ಶಿಖರದ ಮೇಲೆ ಬಾಳೆ ಬೆಳೆವುದಯ್ಯಾ ಎಂದಡೆ,

ಕುಲಗಿರಿಯ ಶಿಖರದ ಮೇಲೆ ಬಾಳೆ ಬೆಳೆವುದಯ್ಯಾ ಎಂದಡೆ, ಬಾಳೆ ಬೆಳೆವುದಯ್ಯಾ ಎನಬೇಕು. ಓರೆಗಲ್ಲ ನುಗ್ಗುಗುಟ್ಟಿ ಮೆಲಬಹುದಯ್ಯಾ ಎಂದಡೆ, ಅದು ಅತ್ಯಂತ ಮೃದು ಮೆಲಬಹುದಯ್ಯಾ ಎನಬೇಕು. ಸಿಕ್ಕದ ಠಾವಿನಲ್ಲಿ ಉಚಿತವ ನುಡಿವುದೆ ಕಾರಣ ಚೆನ್ನಮಲ್ಲಿಕಾರ್ಜುನ ಮತ್ರ್ಯಕ್ಕೆ ಬಂದುದಕ್ಕಿದೆ ಗೆಲವು.

ಕುಲಗಿರಿಯ ಶಿಖರದ ಮೇಲೆ ಬಾಳೆ ಬೆಳೆವುದಯ್ಯಾ ಎಂದಡೆ, Read More »

ಕಳನೇರಿ ಇಳಿವುದು ವೀರಂಗೆ ಮತವಲ್ಲ.

ಕಳನೇರಿ ಇಳಿವುದು ವೀರಂಗೆ ಮತವಲ್ಲ. ಶಿವಶರಣಂಗೆ ಹಿಮ್ಮೆಟ್ಟುವುದು ಪ ಥವಲ್ಲ. ಮನದೊಡೆಯ ಮನವನಿಂಬುಗೊಂಬನಯ್ಯಾ. ಇರಲಾಗದು ಶ್ರೀಪರ್ವತವ ಇಳಿದಡೆ ವ್ರತಕ್ಕೆ ಭಂಗ. ಕಳನೇರಿ ಕೈದು ಮರೆದಡೆ ಮಾರಂಕ ಚೆನ್ನಮಲ್ಲಿಕಾರ್ಜುನನಿಮ್ಮೈಗಾಣಲಿರಿವನು.

ಕಳನೇರಿ ಇಳಿವುದು ವೀರಂಗೆ ಮತವಲ್ಲ. Read More »

ಕಲ್ಯಾಣವೆಂಬುದಿನ್ನಾರಿಗೆ ಹೊಗಬಹುದು ?

ಕಲ್ಯಾಣವೆಂಬುದಿನ್ನಾರಿಗೆ ಹೊಗಬಹುದು ? ಹೊಗಬಾರದು, ಅಸಾಧ್ಯವಯ್ಯಾ. ಆಸೆ ಆಮಿಷ ಅಳಿದಂಗಲ್ಲದೆ ಕಲ್ಯಾಣದತ್ತಲಡಿಯಿಡಬಾರದು. ಒಳಹೊರಗು ಶುದ್ಧನಾದಂಗಲ್ಲದೆ ಕಲ್ಯಾಣವ ಹೊಗಬಾರದು. ನೀನಾನೆಂಬುದ ಹರಿದಂಗಲ್ಲದೆ ಕಲ್ಯಾಣದ ಒಳಗು ತಿಳಿಯಬಾರದು. ಚೆನ್ನಮಲ್ಲಿಕಾರ್ಜುನಂಗೊಲಿದು ಉಭಯ ಲಜ್ಜೆ ಅಳಿದೆನಾಗಿ ಕಲ್ಯಾಣವಂ ಕಂಡು ನಮೋ ನಮೋ ಎನುತಿದ್ದೆನು.

ಕಲ್ಯಾಣವೆಂಬುದಿನ್ನಾರಿಗೆ ಹೊಗಬಹುದು ? Read More »

ಕಲ್ಯಾಣಕೈಲಾಸವೆಂಬ ನುಡಿ ಹಸನಾಯಿತ್ತು.

ಕಲ್ಯಾಣಕೈಲಾಸವೆಂಬ ನುಡಿ ಹಸನಾಯಿತ್ತು. ಒಳಗೂ ಕಲ್ಯಾಣ ಹೊರಗೂ ಕಲ್ಯಾಣ. ಇದರಂತುವನಾರು ಬಲ್ಲರಯ್ಯಾ ? ನಿಮ್ಮ ಸತ್ಯ ಶರಣರ ಸುಳುಹು ತೋರುತ್ತಿದೆಯಯ್ಯಾ. ನಿಮ್ಮ ಶರಣ ಬಸವಣ್ಣನ ಕಾಂಬೆನೆಂಬ ತವಕವೆನಗಾಯಿತ್ತು ಕೇಳಾ ಚೆನ್ನಮಲ್ಲಿಕಾರ್ಜುನಾ.

ಕಲ್ಯಾಣಕೈಲಾಸವೆಂಬ ನುಡಿ ಹಸನಾಯಿತ್ತು. Read More »

ಕಲ್ಲಹೊತ್ತು ಕಡಲೊಳಗೆ ಮುಳುಗಿದಡೆ

ಕಲ್ಲಹೊತ್ತು ಕಡಲೊಳಗೆ ಮುಳುಗಿದಡೆ ಎಡರಿಂಗೆ ಕಡೆಯುಂಟೆ ಅವ್ವಾ ? ಉಂಡು ಹಸಿವಾಯಿತ್ತೆಂದಡೆ ಭಂಗವೆಂಬೆ. ಕಂಡ ಕಂಡ ಠಾವಿನಲ್ಲಿ ಮನ ಬೆಂದಡೆ ಗಂಡ ಚೆನ್ನಮಲ್ಲಿಕಾರ್ಜುನಯ್ಯನೆಂತೊಲಿವನವ್ವಾ ?

ಕಲ್ಲಹೊತ್ತು ಕಡಲೊಳಗೆ ಮುಳುಗಿದಡೆ Read More »

ಕಲ್ಲ ತಾಗಿದ ಮಿಟ್ಟೆ ಕೆಲಕ್ಕೆ ಸಾರುವಂತೆ

ಕಲ್ಲ ತಾಗಿದ ಮಿಟ್ಟೆ ಕೆಲಕ್ಕೆ ಸಾರುವಂತೆ ಆನು ಬಲ್ಲೆನೆಂಬ ನುಡಿ ಸಲ್ಲದು. ಲಿಂಗದಲ್ಲಿ ಮರೆದು ಮಚ್ಚಿರ್ದ ಮನವು ಹೊರಗೆ ಬೀಸರವೋಗದೆ ? ಉರೆ ತಾಗಿದ ಕೋಲು ಗರಿ ತೋರುವುದೆ ? ಮೊರೆದು ಬೀಸುವ ಗಾಳಿ ಪರಿಮಳವನುಂಡಂತೆ ಬೆರಸಬೇಕು ಚೆನ್ನಮಲ್ಲಿಕಾರ್ಜುನಯ್ಯನ.

ಕಲ್ಲ ತಾಗಿದ ಮಿಟ್ಟೆ ಕೆಲಕ್ಕೆ ಸಾರುವಂತೆ Read More »

ಕರ್ಮವೆಂಬ ಕದಳಿ ಎನಗೆ, ಕಾಯವೆಂಬ ಕದಳಿ ನಿಮಗೆ.

ಕರ್ಮವೆಂಬ ಕದಳಿ ಎನಗೆ, ಕಾಯವೆಂಬ ಕದಳಿ ನಿಮಗೆ. ಮಾಟವೆಂಬ ಕದಳಿ ಬಸವಣ್ಣಂಗೆ, ಭಾವವೆಂಬ ಕದಳಿ ಚೆನ್ನಬಸವಣ್ಣಂಗೆ. ಬಂದ ಬಂದ ಭಾವ ಸಲೆ ಸಂದಿತ್ತು. ಎನ್ನಂಗದ ಅವಸಾನವ ಹೇಳಾ, ಚೆನ್ನಮಲ್ಲಿಕಾರ್ಜುನಾ.

ಕರ್ಮವೆಂಬ ಕದಳಿ ಎನಗೆ, ಕಾಯವೆಂಬ ಕದಳಿ ನಿಮಗೆ. Read More »

ಕದಳಿ ಎಂಬುದು ತನು, ಕದಳಿ ಎಂಬುದು ಮನ,

ಕದಳಿ ಎಂಬುದು ತನು, ಕದಳಿ ಎಂಬುದು ಮನ, ಕದಳಿ ಎಂಬುದು ವಿಷಯಂಗಳು. ಕದಳಿ ಎಂಬುದು ಭವಘೋರಾರಣ್ಯ. ಈ ಕದಳಿ ಎಂಬುದ ಗೆದ್ದು ತವೆ ಬದುಕಿ ಬಂದು ಕದಳಿಯ ಬನದಲ್ಲಿ ಭವಹರನ ಕಂಡೆನು. ಭವ ಗೆದ್ದು ಬಂದ ಮಗಳೆ ಎಂದು ಕರುಣದಿ ತೆಗೆದು ಬಿಗಿಯಪ್ಪಿದಡೆ ಚೆನ್ನಮಲ್ಲಿಕಾರ್ಜುನನ ಹೃದಯಕಮಲದಲ್ಲಿ ಅಡಗಿದೆನು.

ಕದಳಿ ಎಂಬುದು ತನು, ಕದಳಿ ಎಂಬುದು ಮನ, Read More »

ಕಣ್ಗೆ ಶೃಂಗಾರ ಗುರುಹಿರಿಯರ ನೋಡುವುದು.

ಕಣ್ಗೆ ಶೃಂಗಾರ ಗುರುಹಿರಿಯರ ನೋಡುವುದು. ಕರ್ಣಕ್ಕೆ ಶೃಂಗಾರ ಪುರಾತನರ ಸುಗೀತಂಗಳ ಕೇಳುವುದು. ವಚನಕ್ಕೆ ಶೃಂಗಾರ ಸತ್ಯವ ನುಡಿವುದು. ಸಂಭಾಷಣೆಗೆ ಶೃಂಗಾರ ಸದ್ಭಕ್ತರ ನುಡಿಗಡಣ. ಕರಕ್ಕೆ ಶೃಂಗಾರ ಸತ್ಪಾತ್ರಕ್ಕೀವುದು. ಜೀವಿಸುವ ಜೀವನಕ್ಕೆ ಶೃಂಗಾರ ಗಣಮೇಳಾಪ ಇವಿಲ್ಲದ ಜೀವಿಯ ಬಾಳುವೆ ಏತಕ್ಕೆ ಬಾತೆಯಯ್ಯಾ ಚೆನ್ನಮಲ್ಲಿಕಾರ್ಜುನಾ

ಕಣ್ಗೆ ಶೃಂಗಾರ ಗುರುಹಿರಿಯರ ನೋಡುವುದು. Read More »

ಕಟ್ಟಿದ ಕೆರೆಗೆ ಕೋಡಿ ಮಾಣದು.

ಕಟ್ಟಿದ ಕೆರೆಗೆ ಕೋಡಿ ಮಾಣದು. ಹುಟ್ಟಿದ ಪ್ರಾಣಿಗೆ ಪ್ರಳಯ ತಪ್ಪದಿನ್ನೆಂತಯ್ಯಾ ? ಅರುಹಿರಿಯರೆಲ್ಲ ವೃಥಾ ಕೆಟ್ಟು ಹೋದರಿನ್ನೆಂತಯ್ಯಾ ? ಚೆನ್ನಮಲ್ಲಿಕಾರ್ಜುನದೇವರಿಗೋತು ಮುಟ್ಟಿದವರೆಲ್ಲಾ ನಿಶ್ಚಿಂತರಾದರು.

ಕಟ್ಟಿದ ಕೆರೆಗೆ ಕೋಡಿ ಮಾಣದು. Read More »

ಕಟಿಹಾದ ಬಿದಿರಿನಲ್ಲಿ ಮರಳಿ ಕಳಲೆ ಮೂಡಬಲ್ಲುದೆ ?

ಕಟಿಹಾದ ಬಿದಿರಿನಲ್ಲಿ ಮರಳಿ ಕಳಲೆ ಮೂಡಬಲ್ಲುದೆ ? ಸುಟ್ಟ ಮಡಕೆ ಮುನ್ನಿನಂತೆ ಮರಳಿ ಧರೆಯನಪ್ಪಬಲ್ಲುದೆ ? ತೊಟ್ಟ ಬಿಟ್ಟು ಬಿದ್ದ ಹಣ್ಣು ಮರಳಿ ತೊಟ್ಟನಪ್ಪಬಲ್ಲುದೆ ? ಕಷ್ಟಕರ್ಮಿ ಮನುಜರು ಕಾಣದೆ ಒಂದ ನುಡಿದಡೆ, ನಿಷ್ಠೆಯುಳ್ಳ ಶರಣರು ಮರಳಿ ಮತ್ರ್ಯಕ್ಕೆ ಬಪ್ಪರೆ ಚೆನ್ನಮಲ್ಲಿಕಾರ್ಜುನಾ ?

ಕಟಿಹಾದ ಬಿದಿರಿನಲ್ಲಿ ಮರಳಿ ಕಳಲೆ ಮೂಡಬಲ್ಲುದೆ ? Read More »

ಕರುವಿನ ರೂಹು ಅರಗಿಳಿಯನೋದಿಸುವಂತೆ,

ಕರುವಿನ ರೂಹು ಅರಗಿಳಿಯನೋದಿಸುವಂತೆ, ಓದಿಸುವುದಕ್ಕೆ ಜೀವವಿಲ್ಲ ಕೇಳುವುದಕ್ಕೆ e್ಞನವಿಲ್ಲ. ಚೆನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮನರಿಯದವನ ಭಕ್ತಿ ಕರುವಿನ ರೂಹು ಆ ಅರಗಿಳಿಯನೋದಿಸುವಂತೆ.

ಕರುವಿನ ರೂಹು ಅರಗಿಳಿಯನೋದಿಸುವಂತೆ, Read More »

ಕರಸ್ಥಲಕ್ಕೆ ಲಿಂಗಸ್ವಾಯತವಾದ ಬಳಿಕ

ಕರಸ್ಥಲಕ್ಕೆ ಲಿಂಗಸ್ವಾಯತವಾದ ಬಳಿಕ ಕಾಯಕ ನಿವೃತ್ತಿಯಾಗಬೇಕು. ಅಂಗದಲಳವಟ್ಟಲಿಂಗ, ಲಿಂಗೈಕ್ಯಂಗೆ ಅಂಗಸಂಗ ಮತ್ತೆಲ್ಲಿಯದೊ ? ಮಹಾಘನವನರಿತ ಮಹಾಂತಂಗೆ ಮಾಯವೆಲ್ಲಿಯದೊ ಚೆನ್ನಮಲ್ಲಿಕಾರ್ಜುನಾ ?

ಕರಸ್ಥಲಕ್ಕೆ ಲಿಂಗಸ್ವಾಯತವಾದ ಬಳಿಕ Read More »

ಕರಣ ಮೀಸಲಾಗಿ ನಿಮಗರ್ಪಿತವಾಯಿತ್ತು.

ಕರಣ ಮೀಸಲಾಗಿ ನಿಮಗರ್ಪಿತವಾಯಿತ್ತು. ಆನೊಂದರಿಯೆನಯ್ಯಾ. ಎನ್ನ ಗತಿ ನೀನಾಗಿ, ಎನ್ನ ಮತಿ ನೀನಾಗಿ, ಪ್ರಾಣ ನಿನಗರ್ಪಿತವಾಯಿತ್ತು. ನೀನಲ್ಲದೆ ಪೆರತೊಂದ ನೆನೆದಡೆ ಆಣೆ, ನಿಮ್ಮಾಣೆ ಚೆನ್ನಮಲ್ಲಿಕಾರ್ಜುನಾ.

ಕರಣ ಮೀಸಲಾಗಿ ನಿಮಗರ್ಪಿತವಾಯಿತ್ತು. Read More »

ಕಂಡಡೆ ಒಂದು ಸುಖ, ಮಾತಾಡಿದಡೆ ಅನಂತ ಸುಖ.

ಕಂಡಡೆ ಒಂದು ಸುಖ, ಮಾತಾಡಿದಡೆ ಅನಂತ ಸುಖ. ನೆಚ್ಚಿ ಮೆಚ್ಚಿದಡೆ ಕಡೆಯಿಲ್ಲದ ಹರುಷ. ಮಾಡಿದ ಸುಖವನಗಲಿದರೆ ಪ್ರಾಣದ ಹೋಕು ಕಂಡಯ್ಯಾ. ಚೆನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ತೋರಿದ ಶ್ರೀಗುರುವಿನ ಪಾದವ ನೀನೆಂದು ಕಾಂಬೆನು.

ಕಂಡಡೆ ಒಂದು ಸುಖ, ಮಾತಾಡಿದಡೆ ಅನಂತ ಸುಖ. Read More »

ಕಂಗಳೊಳಗೆ ತೊಳಗಿ ಬೆಳಗುವ

ಕಂಗಳೊಳಗೆ ತೊಳಗಿ ಬೆಳಗುವ ದಿವ್ಯ ರೂಪವ ಕಂಡು ಮೈಮರೆದೆನವ್ವಾ. ಮಣಿಮುಕುಟದ ಫಣಿಕಂಕಣದ ನಗೆಮೊಗದ ಸುಲಿಪಲ್ಲ ಸೊಬಗನ ಕಂಡು ಮನಸೋತೆನವ್ವಾ. ಇಂತಾಗಿ ಚೆನ್ನಮಲ್ಲಿಕಾರ್ಜುನನೆನ್ನ ಮದುವಣಿಗ, ಆನು ಮದುವಣಿಗಿ ಕೇಳಾ ತಾಯೆ.

ಕಂಗಳೊಳಗೆ ತೊಳಗಿ ಬೆಳಗುವ Read More »

ಕಂಗಳಲ್ಲಿ ಕಾಂಬೆನೆಂದು

ಕಂಗಳಲ್ಲಿ ಕಾಂಬೆನೆಂದು ಕತ್ತಲೆಯ ಹೊಕ್ಕಡೆಂತಹುದಯ್ಯಾ ? ಬೆಟ್ಟದ ತುದಿಯ ಮೆಟ್ಟಲೆಂದು ಹಳ್ಳಕೊಳ್ಳಂಗಳಲ್ಲಿ ಇಳಿದಡೆಂತಹುದಯ್ಯಾ ? ನೀನಿಕ್ಕಿದ ಸಯದಾನವನೊಲ್ಲದೆ ಬೇರೆ ಬಯಸಿದೊಡೆಂತಹುದಯ್ಯಾ ? ಚೆನ್ನಮಲ್ಲಿಕಾರ್ಜುನನ ಘನವನರಿಯಲೆಂದು ಕಿರುಕುಳಕ್ಕೆ ಸಂದಡೆಂತಹುದಯ್ಯಾ ?ಕತ್ತಲೆಯ ಹೊಕ್ಕಡೆಂತಹುದಯ್ಯಾ ? ಬೆಟ್ಟದ ತುದಿಯ ಮೆಟ್ಟಲೆಂದು ಹಳ್ಳಕೊಳ್ಳಂಗಳಲ್ಲಿ ಇಳಿದಡೆಂತಹುದಯ್ಯಾ ? ನೀನಿಕ್ಕಿದ ಸಯದಾನವನೊಲ್ಲದೆ ಬೇರೆ ಬಯಸಿದೊಡೆಂತಹುದಯ್ಯಾ ? ಚೆನ್ನಮಲ್ಲಿಕಾರ್ಜುನನ ಘನವನರಿಯಲೆಂದು ಕಿರುಕುಳಕ್ಕೆ ಸಂದಡೆಂತಹುದಯ್ಯಾ ?

ಕಂಗಳಲ್ಲಿ ಕಾಂಬೆನೆಂದು Read More »

ಕಂಗಳ ಕಳೆದು ಕರುಳ ಕಿತ್ತು ಕಾಮನ ಮೂಗ ಕೊಯ್ದು

ಕಂಗಳ ಕಳೆದು ಕರುಳ ಕಿತ್ತು ಕಾಮನ ಮೂಗ ಕೊಯ್ದು ಭಂಗದ ಬಟ್ಟೆಯ ಭವ ಗೆಲಿದವಳಿಗಂಗವೆಲ್ಲಿಯದು ಹೇಳಾ ? ಶೃಂಗಾರವೆಂಬ ಹಂಚಿಗೆ ಹಲ್ಲ ತೆರೆದಡೇನುಂಟು ? ಅಂಗವೆ ಲಿಂಗವಹ ಪರಿಯನೆನಗೆ ಹೇಳಾ ಶ್ರೀಗಿರಿ ಚೆನ್ನಮಲ್ಲಿಕಾರ್ಜುನಾ ?

ಕಂಗಳ ಕಳೆದು ಕರುಳ ಕಿತ್ತು ಕಾಮನ ಮೂಗ ಕೊಯ್ದು Read More »

ಕ್ಷೀರ ವಾರಿಧಿ ಕನ್ನಿಕೆ ಮಾರಜನಕೆ

ಕ್ಷೀರ ವಾರಿಧಿ ಕನ್ನಿಕೆ ಮಾರಜನಕೆ ಈರೇಳು ಲೋಕನಾಯಿಕೆ ವಾರವಾರಕೆ ಆರಾಧಿಪುದಕೆ ಚಾರುಮತಿಯ ಕೊಡು ದೂರ ನೋಡದಲೆ ಅಪ ಶ್ರೀಧರಾ ದುರ್ಗಿ ಆಂಭ್ರಣಿ ನಿತ್ಯ ಕಲ್ಯಾಣಿ ವೇದವತಿಯೆ ರುಕ್ಮಿಣಿ ವೇದ ವೇದಾಂತದಭಿಮಾನಿ ವಾರಿಜ ಪಾಣಿ ಆದಿ ಮಧ್ಯಾಂತ ಗುಣಮಣಿ ಸಾಧು ಜನರ ಹೃನ್ಮಂದಿರ ವಾಸಿನಿ ಭೇದಗೊಳಿಪ ಕಾಮಕ್ರೋಧಗಳೋಡಿಸಿ ನೀ ದಯದಿಂದಲೆ ಮುಂದೆ ಗತಿಗೆ ಪಂಚ ಭೇದಮತಿಯ ಕೊಡು ಮಾಧವ ಪ್ರಿಯಳೆ ||1|| ಶ್ರೀ ಮಾಯಾ ಜಯಾ ಕೃತಿ ಶಾಂತಿದೇವಿ ಜಯಂತೆ ನಾಮದೊಳಪ್ಪ ಗುಣವಂತೆ ಕೋಮಲವಾದ ವೈಜಯಂತೆ ಧರಿಸಿದ ಶಾಂತೆ

ಕ್ಷೀರ ವಾರಿಧಿ ಕನ್ನಿಕೆ ಮಾರಜನಕೆ Read More »

ಕ್ಷಿತಿಪರನ ಸ್ಮರಿಸಿ ಜನರು

ಕ್ಷಿತಿಪರನ ಸ್ಮರಿಸಿ ಜನರು ಕ್ಷಿತಿಪರನ ಸ್ಮರಿಸಿ ನಿಮಗಪವಿಜಯವೆಂದಿಗೆ ಇಲ್ಲ-ಸು ಪಥವಾಗಿಪ್ಪದನುದಿನ ಸಂಚರಿಪ ಮಾರ್ಗತಪನಾಬ್ಬವಂಶದಲಿ-ದಿ ಪುತರಾದ ವರನೆ ಕೃಪವನಧಿ ಹರಿವೊಲಿವಾ ಬಲಿ ವಿಭೀಷಣ ರಂಧ್ರಗಣ ರಂತಿರೇವತ ಮಲಯಧ್ವಜ ರಾಮಭೋಜಾ ಯದು ಬಲಗಿರಿಕ ಗಾಂಧಾರ ಗಯಸೇತು ಈಶ್ವರ ಕುಲಿಶಧ್ವಜ ಸಗರ ವೀರಾ ನಳ ಹರಿಶ್ಚಂದ್ರ ಚಂದ್ರಕಾಂತ ಆಕಾಶ ಸುರಭ ಶಶಿಬಿಂದು ಮಾಂಧಾತ ಧ್ರುವ ಶಿವಪ್ರಿಯ ಛಲಭರತ ಆಷ್ಮಾಕ ವಾಲಿ ಲೋಹಿತನೃಗಸು ಬಲ ಕುಕ್ಷಿ ಯದು ಭೂಷಣ||1|| ವಸುಪ್ರದ ಸುಖವೀರ್ಯ ಯದು ಕುರು ಋತುಪರ್ನ ವಸುಧರ್ಮ ಖಟ್ಟಾಂಗ ಧೃತರಾಷ್ಟ್ರ ಸೌವರ್ನ ಶಿಶುಪಾಲ

ಕ್ಷಿತಿಪರನ ಸ್ಮರಿಸಿ ಜನರು Read More »

ಕ್ಲೇಶಮಾಡಲಿ ಬೇಡ ಮನವೆ ನೀನೂ

ಕ್ಲೇಶಮಾಡಲಿ ಬೇಡ ಮನವೆ ನೀನೂ ದೇಶದೊಳಗೆ ಕೇಳು ಜ್ಞಾನಿಗಳ ಸಮ್ಮತಾ ವಸಿಷ್ಠ ಮಹಾಋಷಿಗೆ ನೂರುಮಂದಿ ಸುತರು ಅಸಮಸಾಹಸರು ಬಲು ಶೀಲಜ್ಞರು ಕುಶಲದಲಿ ಇರುತಿದ್ದು ಕಾಲ ಮೃತ್ಯುವಿನ ಕೈ ವಶವಾಗಿ ಹೋದರದು ನೋಡು ದು:ಖವ ಬಿಡು ||1|| ಕೃಷ್ಣ ಸೋದರಮಾವ ಮತ್ತೆ ಭೀಮಸೇನ ಜೇಷ್ಠಪಿತ, ಪಾರ್ಥನು ಪಡೆದ ಶೂರ ಇಷ್ಟು ಜನ ಇರಲಾಗಿ ಅಭಿಮನ್ಯು ದೇಹವನು ಬಿಟ್ಟು ಪೋಗಲು ಒಬ್ಬರಾದರು ಉಳುಹಿದರೆ||2|| ಇಂಥವರಿಗೀತ್ಯರನು ನಿನಗಾವ ಸ್ವಾತಂತ್ರ್ಯ ಸಂತೋಷವೆ ಬಡು ಧೈರ್ಯದಲ್ಲಿ ಕಂತು ಜನಕ ನಮ್ಮ ವಿಜಯವಿಟ್ಠಲನಂಘ್ರಿ ಅಂತರಂಗದಲಿಡು ಮುಂದಿನಗತಿ

ಕ್ಲೇಶಮಾಡಲಿ ಬೇಡ ಮನವೆ ನೀನೂ Read More »

ಕೋಪವೆ ತಾಪ ಬ್ರಹ್ಮೇತಿ

ಕೋಪವೆ ತಾಪ ಬ್ರಹ್ಮೇತಿ ಶ್ರೀ ಪುರುಷ ಬಾಲ ಅಣುರೇಣುತ್ರಿಣಗಳಿಗೆಲ್ಲ ವಿಷ್ಣಪದೆ ಯಮುನೆ ಸರಸ್ವತಿ ಸಿಂಧು ಕಾವೇರಿ ಕೃಷ್ಣವೇಣಿ ಗೋದೆ ತುಂಗೆ ನರ್ಮದಾ ಇಷ್ಟು ಮಹಾನದಿಯಲ್ಲಿ ಮುಣಗಿ ಮಿಂದರೇನು ಕಾಷ್ಟಕಭ್ಯಾಂಗವನು ಮಾಡಿ ನೀರೆರದಂತೆ||1|| ಭಕುತಿಯಲಿ ನಡೆದು ಭವಿಷೊತ್ತರ ಪೇಳಿದರೇನೊ ವಿಕಳಮತಿಯಲಿಟ್ಟು ವರನಾದರೇನು ಕಕುಲಾತಿ ತೊರೆದು ನಿಷ್ಕಳಂಕನಾದರೆ ಏನು ಶುಕಪಕ್ಷಿ ಅನುಗಾಲ ಓದಿ ತಿಳಿದಂತೆ ||2|| e್ಞÁನದಲ್ಲಿ ಪರರಿಗೆ ನ್ಯಾಯ ಪೇಳಿದರೇನು ಹಾನಿ ನೆನೆಸಿ ಕೀರ್ತಿಯ ಪಡೆದರೇನು ಧ್ಯಾನದಲಿ ಮಾನಸ ಪೂಜೆ ಮಾಡಿದರೇನು ಶ್ವಾನದಲಿ ಬೂದಿಯೊಳಗೆ ವರಗಿ ಇದ್ದಂತೆ ||3||

ಕೋಪವೆ ತಾಪ ಬ್ರಹ್ಮೇತಿ Read More »