ಅಮ್ಮ ಅಮ್ಮಾ ಎಂದು ಕರೆಯುತಿಹೆನಮ್ಮಾ
ಶಿವರಂಜಿನಿ – ಝಪತಾಲ | ಅಮ್ಮ ಅಮ್ಮಾ ಎಂದು ಕರೆಯುತಿಹೆನಮ್ಮಾ ಕರಕರೆಯಿದೆಂದೆನದೆ ಓಡಿ ಬಾರಮ್ಮಾ|| ಯಾರ ದೋಷಗಳೆಷ್ಟು ನನಗೇಕೆ ಬೇಕು। ನನ್ನ ದೋಷವ ತಿದ್ದಿ ನೀ ಸಲಹಬೇಕು|| ಪಾಪಿಗಳನುದ್ಧರಿಪ ನೀ ದಯಾಸಿಂಧು| ನೀಡೆನಗೆ ಕರುಣೆಯಿಂ ಆ ಕೃಪೆಯ ಬಿಂದು|| ತಾಯಿ ನೀನಿರುತಿರಲು ತಬ್ಬಲಿಯೆ ನಾನು| ವಾತ್ಸಲ್ಯಸುಧೆಯುಣಿಸಲಾರೆಯಾ ನೀನು|| ಜ್ಞಾನ ಭಕ್ತಿ ವಿವೇಕ ವೈರಾಗ್ಯ ನೀಡು| ಎನ್ನ ಹೃನ್ಮಂದಿರದಿ ನಿತ್ಯ ನಲಿದಾಡು|| – ಸ್ವಾಮಿ ಪುರುಷೋತ್ತಮಾನಂದ
ಅಮ್ಮ ಅಮ್ಮಾ ಎಂದು ಕರೆಯುತಿಹೆನಮ್ಮಾ Read More »