ಕನಕದಾಸ

ಮುಳ್ಳು ಮೊನಿಯ ಮ್ಯಾಲ ಮೂರು ಕೆರಿಯ ಕಟ್ಟಿ

ಮುಳ್ಳು ಮೊನಿಯ ಮ್ಯಾಲ ಮೂರು ಕೆರಿಯ ಕಟ್ಟಿಎರಡು ಹೂಳು, ಒಂದು ತುಂಬಲೆ ಇಲ್ಲ ||1|| ತುಂಬದ ಕೆರೆಗೆ ಮೇಯಾಕ ಬಂದವು ಮೂರು ಎಮ್ಮಿಎರಡು ಗೊಡ್ಡು ಒಂದು ಕಂದು ಹಾಕಿ ಕರುವೇ ಇಲ್ಲ ||2|| ಕರುವಿಲ್ಲದ ಎಮ್ಮಿಯ ಕೂಡಿದರ ಮೂವರು ಹೆಣ್ಮಕ್ಕಳಾಇಬ್ಬರು ಬಂಜಿಯರು, ಒಬ್ಬಾಕಿ ಹಡೆದೇ ಇಲ್ಲ ||3|| ಹಡೆಯದ ಹೆಣ್ಣ ಕೂಡಿಕೊಂಡರು ಮೂವರು ಕುಂಬಾರರುಇಬ್ಬರು ಚೊಂಚರು, ಒಬ್ಬಗೆ ಕೈಯೇ ಇಲ್ಲ ||4|| ಕೈಯಿಲ್ಲದ ಕುಂಬಾರ ಮಾಡಿಕೊಟ್ಟ ಮೂರು ಮಡಿಕಿಗಳಎರಡು ದದ್ದು, ಒಂದಕೆ ತಳವೆ ಇಲ್ಲ||5|| ತಳವಿಲ್ಲದ ಮಡಕಿಗಿ […]

ಮುಳ್ಳು ಮೊನಿಯ ಮ್ಯಾಲ ಮೂರು ಕೆರಿಯ ಕಟ್ಟಿ Read More »

ಮುತ್ತುಗಳಾ ಹಣ್ಣು ಕಾಯಾದ ಬಳಿಕಿನ್ನು

ಮುತ್ತುಗಳಾ ಹಣ್ಣು ಕಾಯಾದ ಬಳಿಕಿನ್ನುಮತ್ತೊಂದು ಚೋದ್ಯ ಕೇಳಿಚಿತ್ರದ ಹೂವಿನ ಹವಳ ಕಾಯಾಗುವಅರ್ಥವ ತಿಳಿದು ಹೇಳಿ ||1|| ಸುಟ್ಟ ಬೀಜವ ಬಿತ್ತಿ ಬೆಳೆಯ ಬಾರದ ಕಾಯಿಬೆಟ್ಟದಿ ಸಾರವನುತೊಟ್ಟು ಇಲ್ಲದ ಹಣ್ಣ ಮುಟ್ಟಿ ಕೊಯ್ವನು ಒಬ್ಬಹುಟ್ಟು ಬಂಜೆಯ ಮಗನು ||2|| ಒಣಗಿದ್ದ ಮರನೇರಿ ಹಣ್ಣು ಕಾಯನು ಮಗನುದಣಿಯದೆ ಮೆದ್ದಿಳಿದ ರಣದಲ್ಲಿ ತಲೆ ಹೊಯ್ದ ರುಂಡವು ಬೀಳಲುಹೆಣನೆದ್ದು ಕುಣಿದಾಡಿತು ||3|| ಕಣ್ಣಿಲ್ಲದಾತನು ಕಂಡು ಪಿಡಿದ ಮೃಗಕೈಯಿಲ್ಲದಾತನೆಚ್ಚಮಣ್ಣಲಿ ಹೊರಳುವ ಕಾಲಿಲ್ಲದಾತನುಗಣ್ಯವಿಲ್ಲದೆ ಪಿಡಿದ ||4|| ಎಲ್ಲರು ಕೇಳಿ ಕನಕ ಹೇಳಿದ ಮಾತಎಲ್ಲರೂ ಗ್ರಹಿಸಿಕೊಳ್ಳಿಬೆಳ್ಳಿ ಕಣ್ಣಿನವಗೆ

ಮುತ್ತುಗಳಾ ಹಣ್ಣು ಕಾಯಾದ ಬಳಿಕಿನ್ನು Read More »

ಮುಟ್ಟಬೇಡ ಮುಟ್ಟಬೇಡ ಮುರಹರನ

ಮುಟ್ಟಬೇಡ ಮುಟ್ಟಬೇಡ ಮುರಹರನ ದಾಸರನು ಕಟ್ಟು ಮಾಡಿದ ಯಮನು ತನ್ನ ದೂತರಿಗೆ ತಿರುಮಣಿ ತಿರುಚೂರ್ಣ ಶೃಂಗಾರ ಧರಿಸುವರಸಿರಿತುಳಸಿ ವನಮಾಲೆಯಿಂದೊಪ್ಪುವವರತಿರುಮಂತ್ರ ತೀರ್ಥಪ್ರಸಾದಕೊಳಗಾದವರತಿರುಪತಿ ಯಾತ್ರೆಯನು ಮಾಡುವ ಮಹಾತ್ಮರ ||1|| ಬಡವರಾಗಲಿ ಭಾಗ್ಯವಂತರಾಗಲಿ ಅವರುಕಡು ಕರ್ಮಿ ಘೋರಪಾತಕರಾಗಲಿನಡೆನುಡಿಗೆ ಮಾಧವನ ಬಿಡದೆ ಕೊಂಡಾಡುವರಗೊಡವೆ ಬೇಡೆಂದು ಯಮಧರ್ಮ ಸಾರಿದನು ||2|| ವಾಸುದೇವನ ವಾಸರವನಾಚರಿಸುವವರಬೇಸರಿಸದೆ ಹರಿಪ್ರಸಂಗ ಮಾಳ್ಪವರಶೇಷಶಯನ ಕಾಗಿನೆಲೆಯಾದಿಕೇಶವನದಾಸಾನುದಾಸರಿಗೆ ದಾಸರಾದವರ||3||

ಮುಟ್ಟಬೇಡ ಮುಟ್ಟಬೇಡ ಮುರಹರನ Read More »

ಮುಟ್ಟದಿರೊ ಎನ್ನನು – ರಂಗಯ್ಯ

ಮುಟ್ಟದಿರೊ ಎನ್ನನು – ರಂಗಯ್ಯಮುಟ್ಟದಿರೊ ಎನ್ನನು ಮುಟ್ಟದಿರೊ ಎನ್ನ ಮುಂಗೈಯ ಸೆಳವಿಗೆಮುತ್ತೆಲ್ಲ ಸಡಲ್ಯಾವೊ ಹೇ ಮುದ್ದುರಂಗ ಅತ್ತೆಯೊಬ್ಬಳ ಕೂಡ ಆಡಿ ಬರುವುದ ಕಂಡೆಸತ್ಯವ ಮಾಡದಿರೊ – ಹೇ ಸರಿನಂಟ ನೂರೆಂಟ ಬಣ್ಣದ ಬಂಟ ಬಿಡು ಎನ್ನ ಗಂಟ ||1|| ಹಡೆದವರ ತಲೆಗೆ ಮರಳು ಚೆಲ್ಲಿದಂತೆಮಡದೇರ ಕೂಡ್ಯಾಡಿ – ಕಲಿತ್ಯೆಲ್ಲೊ ಮಿರುಗ ದಿಮ್ಮದಿರುಗ ಸೊಕ್ಕಿಮುರುಗ ಬಿಡು ಎನ್ನ ಸೆರಗ ||2|| ಅಂಗೈಯ ನೊರೆಹಾಲು ಮುಂಗೈಯ ಮೇಲುಗಡೆಸಿಂಗಾರವಾದುದ – ಕಂಡೆ ಕಲೆಯ ಕಾಗಿನೆಲೆಯ ಬಟ್ಟಮೊಲೆಯ ಕನಕಯ್ಯನಿಗೊಲೆಯ ||3||

ಮುಟ್ಟದಿರೊ ಎನ್ನನು – ರಂಗಯ್ಯ Read More »

ಮಾವನ ಮನೆಯೊಳಗೆ ಇರಬಹುದೆ ಕೋವಿದರು

ಮಾವನ ಮನೆಯೊಳಗೆ ಇರಬಹುದೆ ಕೋವಿದರು ಹಾವು ಹಿಡಿಯಲು ಬಹುದು ಹರಣ ನೀಡಲು ಬಹುದುಬೇವ ಕಿಚ್ಚನು ಹಿಡಿದು ನುಂಗಬಹುದುಭಾವೆಯಳ ತಂದೆ ಮನೆಯಲಿ ಜೀವಿಪುದಕಿಂತಸಾವುದೇ ಲೇಸು ಅಭಿಮಾನಿಗಳಿಗೆ||1|| ಪರರ ಸೇರಲು ಬಹುದು ಪತಿತರಲ್ಲಿರಬಹುದುಕೊರಳ ಘಾತಕಂಗೆ ಶಿರ ಒಪ್ಪಿಸಬಹುದುತರುಣಿಯಳ ತೌರು ಮನೆಯಲಿ ಇರುವುದಕಿಂತತರುಗಿರಿ ಗುಹೆಯಲ್ಲಿ ಇದ್ದು ಜೀವಿಸಬಹುದು ||2|| ಮಾವ ಅತ್ತೆಯು ನೊಂದು ಅತ್ತಿಗೆಯು ತಾ ಜರಿದುಹೇವವನಿಕ್ಕಿ ಚೂರ್ಣವ ಮಾಡಲುಆವಾಗ ನೋಡಿದರು ಎನಗೆ ಹಿತರಿಲ್ಲೆಂದುಮಾವ ಹೊರಗಾಡುವನು ಚಿಕ್ಕ ನುಡಿಗಳನು ||3|| ಬಂದೊಂದು ತಿಂಗಳೊಳು ಬಹುಮಾನ ನಡತೆಗಳುಬಂದೆರಡು ತಿಂಗಳೊಳಗೆ ಹಿತವಾದವುಒಂದೊಂದಭದ್ರ ನುಡಿ ಒಳಗೊಳಗೆ

ಮಾವನ ಮನೆಯೊಳಗೆ ಇರಬಹುದೆ ಕೋವಿದರು Read More »

ಮಾಡು ದಾನ ಧರ್ಮ ಪರ

ಮಾಡು ದಾನ ಧರ್ಮ ಪರ ಉಪಕಾರವ ಮರೆಯದಿರೆಚ್ಚರಿಕೆ ಕೇಡು ನೆನೆಯ ಬೇಡ ನಂಬಿದವರ ಮೇಲೆ ಕೆಡುವೆ ನೀನೆಚ್ಚರಿಕೆ ಬಾಳು ಬದುಕು ಸಿರಿ ಇರುವಾಗ ಬಂಧುಬಳಗಗಳೆಚ್ಚರಿಕೆಹಾಳು ಸಂಸಾರಕ್ಕೆ ಹಲವರ ಬಾಯ್ಗಳ ಬಡಿಯದಿರೆಚ್ಚರಿಕೆ ||1|| ಮೂಢರ ಒಡನಾಡಿ ಮುಂದೆ ಕೆಡಲು ಬೇಡ ಮೋಸ ನೋಡೆಚ್ಚರಿಕೆನಾಡೊಳು ಸುಜನರ ನೋಡಿ ನಡೆ ಕಂಡ್ಯ ನಟನೆ ಬೇಡೆಚ್ಚರಿಕೆ ||2|| ಚೆನ್ನಾಗಿ ಬದುಕಿದೆ ಗಳಿಸಿದೆ ನಾನೆಂಬ ಹೆಮ್ಮೆ ಬೇಡೆಚ್ಚರಿಕೆನಿನ್ನಾಯು ಮುಗಿಯಲು ಯಮದೂತರು ಬಂದು ಎಳೆಯುವರೆಚ್ಚರಿಕೆ ||3|| ಹೆಣ್ಣು ಹೊನ್ನು ಮಣ್ಣು ನಿನ್ನನ್ನಗಲಿ ಹೋಗುವರೆಚ್ಚರಿಕೆಮುನ್ನ ಮಾಡಿದ ಪುಣ್ಯ

ಮಾಡು ದಾನ ಧರ್ಮ ಪರ Read More »

ಮರೆಯದೆ ನೆನೆ ಚಿನ್ಮಯನ

ಮರೆಯದೆ ನೆನೆ ಚಿನ್ಮಯನ ಹರಿನಾರಾಯಣ ಅಚ್ಯುತನ ಮಗಳ ತಾನೆ ಮದುವೆಯಾದವನಮಗಳ ಮಗನ ಮೊಮ್ಮಗನಮಗಳ ಗಂಡನ ಮೇಲೆ ಮಲಗಿದ ಜಾಣನಮಗಳ ಮಾವನಿಗೆ ಮೈದುನನ||1|| ತಂದೆಗೆ ತಾನೆ ತಂದೆಯಾದವನ ತಂದೆಗೆ ತಾಯಿಯ ತಂದವನತಂದೆಗೆ ಪೂರ್ವದಿ ತಾ ಪುಟ್ಟಿಹನತಂದೆಗೆ ತಂದೆಗೆ ತಂದೆಯಹನ ||2|| ರಾಮನ ಸಮರೋದ್ಧಾಮನ ಸುಗುಣಾಭಿರಾಮನ ಸೀತಾನಾಯಕನರಾಮನ ಪೆತ್ತನ ಕಮಲದಳಾಕ್ಷನಪ್ರೇಮದಿ ನೆಲೆಯಾದಿಕೇಶವನ||3||

ಮರೆಯದೆ ನೆನೆ ಚಿನ್ಮಯನ Read More »

ಮರೆಯದಿರು ಹರಿಯ

ಮರೆಯದಿರು ಹರಿಯಮರೆವರೆ ಮೂರು ಲೋಕದ ದೊರಿಯ ಮದಗಜ ಹರಿಯೆಂದು ಕರೆಯಲುಒದಗಿ ಆಕ್ಷಣ ಬಂದುಮುದದಿ ನಕ್ರನ ಕೊಂದು ಸಲ-ಹಿದ ಸದ್ಭಕ್ತರ ಬಂಧುಹದುಳ ಪ್ರಹ್ಲಾದನ ಹೆದರಿಸಿದಸುರನಉದರವ ಬಗೆದಂಥದುಭುತ ಮಹಿಮನ||1|| ನಾರಿಯು ತನ್ನ ಕರೆದ ಮಾತ್ರದಿಸೀರೆಯ ಮಳೆಗರೆದಕ್ರೂರ ಖಳನ ತರಿದು ಆ ಪಾಂಡವರಆರಣ್ಯದಿ ಪೊರೆದಗಾರಾದಜಮಿಳ ನಾರಗ ಎನಲುಪಾರಗಾಣಿಸಿದಪಾರ ಗುಣನಿಧಿಯ ||2|| ಒಂದು ಬಾರಿ ಶ್ರೀಶಾ ಎಂದರೆಬಂದ ದುರಿತ ನಾಶಾಬೆಂದವು ಭವ ಪಾಶಾ – ಅವಗೆಂದೆಂದಿಗಿಲ್ಲ ಕ್ಷೇಶಾತಂದೆ ಕದರುಂಡಲಗಿ ಹನುಮಯ್ಯನೊಡೆಯಚಂದಾದಿಕೇಶವನ ನೆನೆದವರೆಂದಿಗು ಧನ್ಯರು||3||

ಮರೆಯದಿರು ಹರಿಯ Read More »

ಮರೆಯದಿರು ಮರೆಯದಿರು ಮನುಜಾ

ಮರೆಯದಿರು ಮರೆಯದಿರು ಮನುಜಾನಾರಾಯಣನ ಸ್ಮರಣೆಯನು ಮಾಡು ಮನುಜಾ ರಂಗನಾಥನು ಇರಲಿಕ್ಕೆ ಜಂಗುಳಿ ದೈವಗಳೇಕೆತುಂಗಭದ್ರೆ ಇರಲಿಕ್ಕೆ ಕೆರೆಬಾವಿಯೇಕೆಅಂಗನೆ ಸತಿ ಇರಲಿಕ್ಕೆ ಬಣಗು ಹೆಣ್ಣುಗಳೇಕೆಮಂಗಳಾತ್ಮಕನಿರಲಿಕ್ಕೆ ಪರದೈವವೇಕೆ ||1|| ಹಾಲು ಹಳ್ಳವಿರಲಿಕ್ಕೆ ವಾಳಿಯವ ತರಲೇಕೆಮೇಲು ನಾಮವಿರಲಿಕ್ಕೆ ಕಟುಕು ಇನ್ನೇಕೆಬಾಲ ಹನುಮನಿರಲಿಕ್ಕೆ ಹುಲು ಕಪಿಗಳೇಕೆಒಳ್ಳೆ ತುಳಸಿ ಇರಲಿಕ್ಕೆ ಕಗ್ಗೊರಲೆಯೇಕೆ ||2|| ಚಿನ್ನದ ಗಿರಿಯಿರಲಿಕ್ಕೆ ಕಬ್ಬಿಣದ ಮೊರಡಿಯೇಕೆರನ್ನ ಮಾಣಿಕವಿರಲಿಕ್ಕೆ ಕಾಜಿನ ಹರಳೇಕೆಅನ್ನ ತುಪ್ಪವಿರಲಿಕ್ಕೆ ಮದ್ಯಪಾನಗಳೇಕೆಚೆನ್ನಾದಿಕೇಶವನಿರೆ ಬಿನುಗು ದೈವಗಳೇಕೆ||3||

ಮರೆಯದಿರು ಮರೆಯದಿರು ಮನುಜಾ Read More »

ಮರೆಯದಿರು ಮರೆಯದಿರು ಎಲೆ ಮಾನವ

ಮರೆಯದಿರು ಮರೆಯದಿರು ಎಲೆ ಮಾನವ ಗರುವವೇತಕೆ ನಿನಗೆ ಎಲೆ ಮಂಕು ಜೀವ ರೂಪದಲಿ ಮನ್ಮಥನೆ ಶಾಪದಲಿ ಗೌತಮನೆಕೋಪದಲಿ ದೂರ್ವಾಸ ಮುನಿಯೆ ನೀನುತಪದಲ್ಲಿ ವ್ಯಾಸನೆ ಕೃಪೆಯಲ್ಲಿ ಬಲೀಂದ್ರನೆನಿಪುಣತ್ವದಲಿ ನಾರದ ಮುನಿಯೆ ನೀನು ||1|| ಯತಿಯಲ್ಲಿ ಅಗಸ್ತ್ಯನೆ ಕ್ಷಿತಿಪರಲಿ ಜನಮೇಜಯನೆಗೀತದಲಿ ಗಂಧರ್ವನೇ ನೀನುವ್ರತದಲ್ಲಿ ಲಕ್ಷ್ಮಣನೆ ಮತಿಯಲ್ಲಿ ಕಶ್ಯಪನೆವಿತರಣ ಗುಣದಲಿ ಯಮಧರ್ಮನೆ ನೀನು ||2|| ನ್ಯಾಯದಲಿ ಭರತನೆ ಉಪಾಯದಲಿ ಕೃಷ್ಣನೇಕಾಯಶುದ್ಧಿಯಲಿ ಅಂಬರೀಷನೆ ನೀನುಮಾಯದಲಿ ಕಾವ್ಯನೇ ದಾಯದಲಿ ಶಕುನಿಯೇನೀ ಯಾರ ಹೋಲುವೆ ಎಲೆ ಮಾನವ ||3|| ಕೊಡುವುದಕೆ ಕರ್ಣನೆ ನಡತೆಯಲಿ ಧರ್ಮಜನೆದೃಢ ಮನಸಿನಲಿ

ಮರೆಯದಿರು ಮರೆಯದಿರು ಎಲೆ ಮಾನವ Read More »

ಮರವ ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ

ಮರವ ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ – ಇದರಕುರುಹ ಪೇಳಿ ಕುಳಿತಿರುವ ಜನರು ಒಂಟಿ ಕೊಂಬಿನ ಪಕ್ಷಿ ಒಡಲೊಳಗೆ ಕರುಳಿಲ್ಲಗಂಟಲು ಮೂರುಂಟು ಮೂಗು ಇಲ್ಲಕುಂಟು ಮನುಜನ ತೆರದಿ ಕುಳಿತಿಹುದು ಮನೆಯೊಳಗೆ ಎಂಟು ಹತ್ತರ ಭಕ್ಷ್ಯ ಭಕ್ಷಿಸುವುದು ||1|| ನಡುವೆ ಕಲಿಯುಂಬುವುದು ನಡುನೆತ್ತಿಲಿ ಬಾಯಿಕಡು ಸ್ವರಗಳಿಂದ ಗಾನ ಮಾಡುವುದುಅಡವಿಯಲಿ ಹುಟ್ಟುವುದು ಅಂಗವೆರಡಾಗುವುದುಬಡತನ ಬಂದರೆ ಬಹಳ ರಕ್ಷಿಪುದು ||2|| ಕಂಜವದನೆಯರ ಕರದಲ್ಲಿ ನಲಿದಾಡುವುದುಎಂಜಲನುಣಿಸುವುದು ಮೂಜಗಕೆರಂಜಿಪ ಶಿಖಾಮಣಿ ಸಿಂಹಾಸನದ ಮೇಲಿರ್ಪಸಂಜೀವ ಪಿತ ಆದಿಕೇಶವನೆ ಬಲ್ಲ ||3||

ಮರವ ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ Read More »

ಮತವೆ ಒಳ್ಳೆಯದು ಭಾಗವತವು

ಮತವೆ ಒಳ್ಳೆಯದು ಭಾಗವತವು – ನಮ್ಮಯತಿ ರಾಮಾನುಜಯೆಂಬ ಬೇರೆ ಮನಸಿನ ಮತವೆ ಒಳ್ಳೆಯದು ಹರಿದಾಸ ಸರ್ವೇಶತೆಗೆ ನಿಮ್ಮ ವೇಷತೊರೆಯಿರಿ ನಿಮ್ಮ ದೋಷವರ ತೀರ್ಥ ಪ್ರಸಾದವೇಪರಗತಿ ಎಂಬ ದಾಸ||1|| ಕಣಿಯೇ ಶಿಕ್ಷಾ ರ-ಮಣಿಯೇ ಮೋಕ್ಷದರಗಿಣಿಯೇ ನಿಮ್ಮ ಶ್ರೀಮಣಿ ತಿರುಮಂತ್ರವೇ ಗತಿ ಎಂಬ ದಾಸ||2|| ಹರಿದಾರಿ ತಿರುಕಾವಳೂರಿನಪರಮ ಪದವಿಯೆಂಬ ಪಟ್ಟಣಸೇರಿ ನಮ್ಮ ನೆಲೆಯಾದಿಕೇಶವಸಿರಿ ರಂಗ ಪರರುಪಕಾರಿ ||3||

ಮತವೆ ಒಳ್ಳೆಯದು ಭಾಗವತವು Read More »

ಮಣ್ಣಿನ ಮಹಿಮೆ ಮನುಜ ನೀನರಿಯೆ

ಮಣ್ಣಿನ ಮಹಿಮೆ ಮನುಜ ನೀನರಿಯೆಷಣ್ಮಹಿಷಿಯುತ ಸರ್ವೋತ್ತಮನ ಲೀಲೆ ಮಣ್ಣಲಿ ದೊರಕಿದಳು ಮಾತಾಯಿ ಸೀತಾಮಣ್ಣಳೆದ ವಾಮನ ಮಹಬಲಿಯ ಬೇಡಿಮಣ್ಣು ಪಾವನವಾಯ್ತು ರಾಮಪದ ಸ್ಪರ್ಶದಿಮಣ್ಣುಂಡ ಬಾಯಲಿ ಬ್ರಹ್ಮಾಂಡ ತೋರಿದ ಕೃಷ್ಣ ||1|| ಮಣ್ಣಿಗೇ ನಡೆಯಿತು ಮಹಾಭಾರತ ಯುದ್ಧಮಣ್ಣಿಗೇ ಮಡಿದರ ಸಂಖ್ಯೆಗೆಣೆಯಿಲ್ಲಮಣ್ಣಲಿ ಬಿತ್ತೆ ಬೀಜ ಮಹಾವೃಕ್ಷವಾಗುವುದುಅಣ್ಣ ನಮ್ಮಾದಿಕೇಶವನು ಅನುಗ್ರಹದಿಂ ||2||

ಮಣ್ಣಿನ ಮಹಿಮೆ ಮನುಜ ನೀನರಿಯೆ Read More »

ಮಗುವು ಕಾಣಿರಯ್ಯ ಮಾಯದ ಮಗುವು

ಮಗುವು ಕಾಣಿರಯ್ಯ | ಮಾಯದ | ಮಗುವು ಕಾಣಿರಯ್ಯ ಸುಗುಣ ವಾದಿರಾಜರೆ ಮೂಜಗವನು ತನ್ನುದರದೊಳಿಟ್ಟ ಮಾಯಾ ಪೂತನಿಯ ಕೊಂದು ಕಾಯವ ಕೆಡಹಿ ಶಕಟನ್ನಸಾಯಬಡಿದು ಧೇನುಕನ ವೃಷಭಾಸುರನನೋಯ ನೋಡದ್ಯಮಳಾರ್ಜುನಂಗೆ ಸಾಯುಜ್ಯವನೆ ಇತ್ತು ತನ್ನತಾಯಿಗೆ ತಾ ಮಣ್ಣ ಮೆದ್ದು ಬಾಯ ಬಿಟ್ಟು ತೋರಿಸಿದ||1|| ಏಕವರ್ಣವಾಗಿಯೆ ಸಕಲಲೋಕವು ಆಕಾರವಳಿಯೆಏಕಮೇವಾದ್ವಿತೀಯನೆಂಬಾಗಮಕೆ ಸರಿಯಾಗಿಶ್ರೀಕರಾಂಬುಜದಿಂ ಪಾದಾಂಗುಲಿಯಂ ಪಿಡಿದು ಬಾಯೊಳಿಟ್ಟುಶ್ರೀಕಾಂತ ವಟಪತ್ರದ ಮೇಲೊರಗಿ ಬ್ರಹ್ಮನ ಪಡೆದ||2|| ಕಡಹದ ಮರನೇರಿ ಸಂಗಡಿಗರೊಡನೆ ಕಾಳಿಂದಿಯಮಡುವ ಧುಮುಕಿ ಧುಮುಕಿ ಕಲಕಿ ಆ ಕಾಳಿಂಗನಪೆಡೆಯ ತುಳಿದು ಜಡಿಯಲವನ ಮಡದಿಯರು ಬೇಡಿಕೊಳ್ಳೆಕಡಲಿಗಟ್ಟಿ ಬಂದು ತಾಯ

ಮಗುವು ಕಾಣಿರಯ್ಯ ಮಾಯದ ಮಗುವು Read More »

ಮಗುವಿನ ಮರುಳಿದು ಬಿಡದಲ್ಲ

ಮಗುವಿನ ಮರುಳಿದು ಬಿಡದಲ್ಲ – ಈ ಜಗದೊಳು ಪಂಡಿತರಿದ ಬಿಡಿಸಿ ನೀರನು ಕಂಡರೆ ಮುಳುಗುತಿದೆ – ತನ್ನಮೋರೆಯ ತೋರದೆ ಆಡುತಿದೆಧಾರಿಣಿ ಹಲ್ಲಲಿ ಎಳೆಯುತಿದೆ – ದೊಡ್ಡಭೈರವಾಕಾರದಿ ಕೂಗುತಿದೆ ||1|| ಪೊಡವಿಯ ಕೊಟ್ಟಗೆ ಅಳೆಯುತಿದೆ – ತನ್ನಕೊಡಲಿಯೊಳು ಭೂಪರ ಕಡಿಯುತಿದೆಅಡವಿ ಕೋತಿಗಳ ಕೂಡುತಿದೆ – ಚೆಲ್ವಮಡದಿಯರನು ಹಿಡಿದೆಳೆಯುತಿದೆ ||2|| ಉಟ್ಟಿದ್ದ ವಸ್ತ್ರವ ಬಿಸುಡುತಿದೆ – ತನ್ನದಿಟ್ಟ ತೇಜಿಯನೇರಿ ನಲಿಯುತಿದೆಸೃಷ್ಟಿಯೊಳು ಭೂಸುರರ ಪೊರೆದ ಜಗಜಟ್ಟಿಯಾದಿಕೇಶವ ರಾಯನಂತೆ||3||

ಮಗುವಿನ ಮರುಳಿದು ಬಿಡದಲ್ಲ Read More »

ಮಗುವ ತಡೆಯಬಾರದೆ ಮಾನಿನಿಯರು

ಮಗುವ ತಡೆಯಬಾರದೆ ಮಾನಿನಿಯರುಸುಗುಣ ಚೆನ್ನಿಗನೆಂಬ ಸೊಬಗುಳ್ಳ ಮಗುವ ನೀರೊಳಗೆ ಪೊಕ್ಕು ತಾ ಬೀರುತಿದೆ ಮಾತುಗಳಧರಣಿಧರ ತಳಕಿಳಿದು ಬಾರದಿದೆಕೊಘೋರ ಪಾತಕವೆಂಬ ಬೇರ ಮೆಲ್ಲುತಲಿದೆಕೊಬಾರಯ್ಯ ಎನೆ ಕೋಪವೇರುತಿಹ ಮಗುವ ||1|| ಬೇಡುತಿದೆ ದಾನವನು ನೀಡುತಿದೆ ಪಾದವನುರೂಢಿಪಾಲರ ಕಂಡು ಕೊಲ್ಲುತಿದೆಕೊಓಡುತಿದೆ ಮೃಗದೊಡನೆ ಆಡುತಿದೆ ಕಪಿಗಳೊಳುನೋಡಲ್ಕರಿನಾಗರ ಹಾವ ತುಳಿಯುತಿದೆಕೊ ||2|| ಇತ್ತ ಬಾರೆಂದೆನಲು ಬತ್ತಲೆ ನಿಲ್ಲುತಿದೆಕೊಮತ್ತೆ ತೇಜಿಯನೇರಿ ನಲಿಯುತಿದೆಕೊಹತ್ತೆ ಬಂದವರಿಗೆ ಅರ್ತಿಯನು ನೀಡುತಿಹನಿತ್ಯ ವೈಕುಂಠದಲಿ ನಲಿವ ಮಗುವ ||3||

ಮಗುವ ತಡೆಯಬಾರದೆ ಮಾನಿನಿಯರು Read More »

ಮಗನೆಂದಾಡಿಸುವಳು ಮೊಗ ನೋಡಿ ನಗುವಳು

ಮಗನೆಂದಾಡಿಸುವಳು ಮೊಗ ನೋಡಿ ನಗುವಳು ಜಗದುದ್ಧಾರನ ಮೊಗ ಮೊಗದೊಳಿರಿಸಿಕೊಂಡು ಕಾಲಲಂದುಗೆ ಗೆಜ್ಜೆ ತೋಳ ಮಣಿಯ ದಂಡೆಫಾಲದ ಅರಳೆಲೆಯು ಕುಣಿಯೆನೀಲದುಡುಗೆಯುಟ್ಟ ಬಾಲನೆ ಬಾರೆಂದುಪಾಲುಣಿಸುವ ಪುಣ್ಯವೆಂತು ಪಡೆದಳಯ್ಯ ||1|| ಬಣ್ಣ ಸರವಲ್ಲಾಡೆ ವರ ರನ್ನ ನೇವಳದಹೊನ್ನ ಗಂಟೆಯು ಘಣ ಘಣರೆನಲುಪನ್ನಗಶಯನನೆ ಕುಣಿಯೊಮ್ಮೆ ಕುಣಿಯೆಂದುಕುಣಿಸಿ ನಗುವ ಪುಣ್ಯವೆಂತು ಪಡೆದಳಯ್ಯ ||2|| ಪೊಡವಿಯ ಈರಡಿ ಮಾಡಿದ ದೇವನಕುಡಿಬೆರಳನೆ ಕರದಲಿ ಪಿಡಿದುಅಡಿಯಿಡು ಮಗನೆ ಮೆಲ್ಲಡಿಯಿಡು ಎನುತಲಿನಡೆಗಲಿಸುವ ಪುಣ್ಯವೆಂತು ಪಡೆದಳಯ್ಯ ||3|| ಕುಕ್ಷಿಯೊಳು ಈರೇಳು ಜಗವನ್ನು ಸಲಹುವನರಕ್ಷಿಪರು ಉಂಟೆ ತ್ರೈಜಗದೊಳಗೆಪಕ್ಷಿವಾಹನ ನೀನು ಅಂಜಬೇಡ ಎನುತಲಿರಕ್ಷೆ ಇಡುವ

ಮಗನೆಂದಾಡಿಸುವಳು ಮೊಗ ನೋಡಿ ನಗುವಳು Read More »

ಮಗನಿಂದೆ ಗತಿಯುಂಟೆ ಜಗದೊಳಗೆ

ಮಗನಿಂದೆ ಗತಿಯುಂಟೆ ಜಗದೊಳಗೆನಿಗಮಾರ್ಥ ತತ್ತ್ವವಿಚಾರದಿಂದಲ್ಲದೆ ? ತ್ರಿಗುಣರಹಿತ ಪರಮಾತ್ಮನ ಧ್ಯಾನದಿಹಗಲಿರುಳು ನಿತ್ಯಾನಂದದಿಂದತೆಗೆದು ಪ್ರಪಂಚವಾಸನೆಯ ಬಿಟ್ಟವರಿಗೆಮಗನಿದ್ದರೇನು ಇಲ್ಲದಿದ್ದರೇನು ?||1|| ಲಲನೆಯರು ಪುರುಷರು ತಮತಮ್ಮ ಕಾಮದಸಲುವಾಗಿ ಕೂಡೆ ಶೋಣಿತ ಶುಕ್ಲದಿಮಿಳಿತವಾದ ಪಿಂಡ ತನ್ನ ಪೂರ್ವಕರ್ಮದಿಂದನೆಲಕೆ ಬೀಳಲು ಅದು ಸಲಹಿ ರಕ್ಷಿಪುದೆ ? ||2|| ಪರಮ ದುಷ್ಟನಾಗಿ ಮರೆತು ಸ್ವಧರ್ಮವಗುರು ಹಿರಿಯರ ಸಾಧುಗಳ ನಿಂದಿಸಿಬೆರೆದನ್ಯ ಜಾತಿಯ ಪರನಾರಿಯ ಕೂಡಿಸುರೆ ಕುಡಿದು ಜೂಜಾಡಿ ನರಕಕ್ಕೆ ಬೀಳುವ||3|| ಸತ್ಯನೊಬ್ಬ ಮಗ ಶಾಂತನೊಬ್ಬ ಮಗ ದು-ರ್ವೃತ್ತಿ ನಿಗ್ರಹನೊಬ್ಬ ಸಮಚಿತ್ತನೊಬ್ಬನುಉತ್ತಮರೀ ನಾಲ್ಕು ಮಕ್ಕಳಿದ್ದ ಮೇಲೆಹೆತ್ತರೇನು ಇನ್ನು ಹೆರದಿದ್ದರೇನಯ್ಯ

ಮಗನಿಂದೆ ಗತಿಯುಂಟೆ ಜಗದೊಳಗೆ Read More »

ಮಂದರಧರ ಪಾವನ ಇಂದಿರಾರಮಣನ

ಮಂದರಧರ ಪಾವನ ಇಂದಿರಾರಮಣನ _ ಗೋವಿಂದ ಎನ್ನಿರೋ ನಂದನ ಕಂದ ಮುಕುಂದಾಬ್ಧಿಶಯನನ – ಗೋವಿಂದ ಎನ್ನಿರೋ ಗರಳ ಕಂಧರ ಸಖನನುಜನ ಕೊಂದನ – ಗೋವಿಂದ ಎನ್ನಿರೋಸುರಮುನಿಯನುಜನ ಪಾದವ ಪಿಡಿದನ – ಗೋವಿಂದ ಎನ್ನಿರೋಪರಮ ವೈಷ್ಣವರ ಕೈಲಿ ದಾನವ ಪಿಡಿದನ _ ಗೋವಿಂದ ಎನ್ನಿರೋಉರಗನ ಮಗಳ ಗಂಡಗೆ ಪ್ರಾಣವಿತ್ತನ – ಗೋವಿಂದ ಎನ್ನಿರೋ ||1|| ಸತಿ ರುಕ್ಮಿಣಿಯ ರಾಧೆಯ ಚುಂಬಿಸಿದಾತನ – ಗೋವಿಂದ ಎನ್ನಿರೋಅತಿಶಯದಿಂದ ಸತಿ ರೂಪ ತಾಳ್ದನ _ ಗೋವಿಂದ ಎನ್ನಿರೋಪಿತನ ಮಾತನು ಶಿರದೊಳಗಾಂತು ನಡೆದನ –

ಮಂದರಧರ ಪಾವನ ಇಂದಿರಾರಮಣನ Read More »

ಮಂಗಳಾರತಿಯ ಪಾಡಿರೆ ಮಾನಿನಿಯರು

ಮಂಗಳಾರತಿಯ ಪಾಡಿರೆ ಮಾನಿನಿಯರು ಅಂಧಕನನುಜನ ಕಂದನ ತಂದೆಯಕೊಂದನ ಶಿರದಲಿ ನಿಂದವನಚಂದದಿ ಪಡೆದವನ ನಂದನೆಯಳ ನಲವಿಂದ ಧರಿಸಿದ ಮುಕುಂದನಿಗೆ ||1|| ರಥವನಡರಿ ಸುರ ಪಥದಲಿ ತಿರುಗುವನಸುತನಿಗೆ ಶಾಪವನಿತ್ತವನಖತಿಯನು ತಡೆದನ ಸತಿಯ ಜನನಿ ಸುತನಸತಿಯರನಾಳಿದ ಚತುರನಿಗೆ ||2|| ಹರಿಯ ಮಗನ ಶಿರ ತರಿದನ ತಂದೆಯಹಿರಿಯ ಮಗನ ತಂದೆಯ ಪಿತನಭರದಿ ಭುಜಿಸಿದವನ ಶಿರದಲಿ ನಟಿಸಿದವರ ಕಾಗಿನೆಲೆಯಾದಿಕೇಶವಗೆ ||3||

ಮಂಗಳಾರತಿಯ ಪಾಡಿರೆ ಮಾನಿನಿಯರು Read More »

ಮಂಗಳಂ ಸರ್ವಜೀವ ರಕ್ಷಕಗೆ

ಮಂಗಳಂ ಸರ್ವಜೀವ ರಕ್ಷಕಗೆಮಂಗಳಂ ಅಂಬುಜದಳಾಕ್ಷಗೆ ಜಲಪ ಒಮ್ಮೆಗೆ ತಂದವಗೆ ಮಂಗಳಂಕುಲಗಿರಿಯನು ಕಾಯ್ದವಗೆ ಮಂಗಳಂನೆಲನ ಕದ್ದ ಚೋರನ ಗೆಲಿದಗೆ ಮಂಗಳಂಸುಲಭ ನರಸಿಂಹನಿಗೆ ಶುಭ ಮಂಗಳಂ ||1|| ವಸುಧೆ ಈರಡಿ ಗೈದವಗೆ ಮಂಗಳಂವಸುಧೇಶ ಕುಲವನಳಿದಗೆ ಮಂಗಳಂದಶಕಂಧರನನು ಗೆಲಿದಗೆ ಮಂಗಳಂಪಶುಗಳ ಕಾಯ್ದವಗೆ ಮಂಗಳಂ ||2|| ಪುರತ್ರಯ ವಧು ವ್ರತವಳಿದಗೆ ಮಂಗಳಂತುರಗ ವಾಹನನಿಗೆ ಮಂಗಳಂಗರುಡ ವಾಹನ ವಾರಿಧಿ ಶಯನವರ ಕಾಗಿನೆಲೆಯಾದಿಕೇಶವಗೆ ಮಂಗಳಂ ||3||

ಮಂಗಳಂ ಸರ್ವಜೀವ ರಕ್ಷಕಗೆ Read More »

ಭೀಮನೆಂಬುವಂಗೆ ಯಾತರ ಭಯವಿಲ್ಲ

ಭೀಮನೆಂಬುವಂಗೆ ಯಾತರ ಭಯವಿಲ್ಲ ಭೀಮರಾಯ ಕಾಮಿತ ಫಲಗಳ ಕೊಟ್ಟು ನೀ ಸಲಹಯ್ಯ ಭೀಮರಾಯ ಅಂಜನೆಯಾತ್ಮಜ ಅಗಣಿತ ಬಲವಂತ ಭೀಮರಾಯಕಂಜನಾಭನ ದೂತ ಕರುಣಿಸೊ ಬಲವಂತ ಭೀಮರಾಯ ||1|| ಕಟ್ಟಿದ ಪೂಮಾಲೆ ಕಸ್ತೂರಿ ನಾಮದ ಭೀಮರಾಯ – ಪೊಂಬಟ್ಟೆ ಪೀತಾಂಬರವನುಟ್ಟು ಮೆರೆವಂಥ ಭೀಮರಾಯ||2|| ವಾರಿಧಿಯನು ದಾಟಿ ಸೀತೆಗುಂಗುರವಿತ್ತ ಭೀಮರಾಯಸೂರಿವೆಗ್ಗಳತನ ಕಿತ್ತು ಈಡಾಡಿದ ಭೀಮರಾಯ||3|| ರಾಮರಾಯರಿಗೆ ನೀ ಪ್ರೇಮದ ಬಂಟನು ಭೀಮರಾಯಕಾಮಿತ ಫಲವಿತ್ತು ಕರುಣದಿ ಸಲಹಯ್ಯ ಭೀಮರಾಯ ||4|| ಛಪ್ಪನ್ನ ದೇಶಕ್ಕೆ ಒಪ್ಪುವ ಕಾಗಿನೆಲೆಯ ಭೀಮರಾಯತಪ್ಪದೆ ಕನಕಗೆ ವರಗಳ ಕೊಡುವಂಥ ಭೀಮರಾಯ

ಭೀಮನೆಂಬುವಂಗೆ ಯಾತರ ಭಯವಿಲ್ಲ Read More »

ಭವತಿ ಭಿಕ್ಷಾಂ ದೇಹಿ ಪರಬ್ರಹ್ಮ

ಭವತಿ ಭಿಕ್ಷಾಂ ದೇಹಿ ಪರಬ್ರಹ್ಮಭವದೂರ ಮಾಂಪಾಹಿಭುವನ ಪಾವನ ಪರಮಾನಂದ ವರಗುಣಾಸುವಿಮಲ ಶಾಂತಿ ಸದ್ಭಕ್ತಿ ಜೀವನ್ಮುಕ್ತಿ ನಿತ್ಯ ನಿರ್ಮಲ ಜ್ಞಾನ ವಿಚಾರ ಪ್ರ-ವೃತ್ತಿ ವಿವೇಕದಾನಸತ್ಯ ಸದ್ವಿನಿಯ ಸಶ್ರವಣ ಮಾನಸಯೋಗಚಿತ್ತ ನಿಧಿಧ್ಯಾಸ ಜಪತಪವ್ರತ ಪೂಜಾ ||1|| ದೋಷರಹಿತ ಭಾಷ ದುರಿತಗುಣನಾಶ ಪರಮ ಸಂತೋಷಕ್ಲೇಶ ವಿದೂರ ವಿಶೇಷ ವಿರಾಗವಿಶ್ವಾಸ ವಿಹಿತ ಸದ್ಧರ್ಮ ವಿಚಾರ ||2|| ಪಾವನ ಪರಿಪೂರ್ಣ ಹೃದಯ ಸದಾದೇವ ನಾಮಸ್ಮರಣಭಾವ ಭರಿತ ಧ್ಯಾನ ಧಾರಣಯೋಗ ಸ-ದ್ಭಾವ ಬ್ರಹ್ಮ ಆದಿಕೇಶವ ದಾಸತೆ ||3||

ಭವತಿ ಭಿಕ್ಷಾಂ ದೇಹಿ ಪರಬ್ರಹ್ಮ Read More »

ಭವ ಭಯ ವಿನಾಶ ಭೋ ಭಕ್ತವಿಲಾಸ

ಭವ ಭಯ ವಿನಾಶ ಭೋ ಭಕ್ತವಿಲಾಸ ಭೋ ಪಾ-ಪವಿನಾಶ ಭೋ ಬಾಡದ ರಂಗೇಶ ಭೋ ಹರಿಯ ಸುತನಿಗೆ ಅಭಯವನಿತ್ತೆ ಹರಿಯ ಮಗನಾ ಕೊಂದೆಹರಿಯೆನಲು ಹರಿರೂಪ ತಾಳಿದೆಹರಿಯೊಳಡಗಿದೆ ಮತ್ತೆಹರಿಯನಗ್ರಜ ಕೋಟಿ ತೇಜನಹರಿಯ ವದನನೆಂಬ||1|| ಶಿವನ ಮಗಳೊಡಗೂಡಿ ಮತ್ತೆಶಿವಮಗಳನು ಮಾವನಿಗಿತ್ತೆಶಿವನ ಉಪಟಳಕಳುಕಿ ಗೋಕುಲಶಿವನ ಕರದಲಿ ಪೊತ್ತೆಶಿವನ ಧನುವನು ಖಂಡಿಸಿ ಮತ್ತೆಶಿವನ ತಲೆಯೇರಿ ನಿಂದೆಶಿವನ ಭೋಜನವಾಹನ ಸುತನಿಗೆಶಿವನ ಪ್ರತಿಪಾಲನೆಂಬ ||2|| ಕಮಲವನು ಈರಡಿಯ ಮಾಡಿದೆಕಮಲ ಮೊರೆಯಿಡಲಂದುಕಮಲದಲಿ ಬ್ರಹ್ಮಾಂಡ ತೋರಿದೆಕಮಲಧರ ನೀನೆಂದು ಕಮಲವನು ಕದ್ದೊಯ್ದ ಕಳ್ಳನ ಸದೆದುಕಮಲವ ತಂದೆಕಮಲಮುಖಿಯಳ ಕಾಯ್ದ ಕಾಗಿನೆಲೆವಿಮಲ ಆದಿಕೇಶವನೆಂಬ

ಭವ ಭಯ ವಿನಾಶ ಭೋ ಭಕ್ತವಿಲಾಸ Read More »

ಭಜಿಸಿ ಬದುಕೆಲೊ ಮಾನವ

ಭಜಿಸಿ ಬದುಕೆಲೊ ಮಾನವ ಅಜ ಭವೇಂದ್ರಾದಿಗಳು ವಂದಿಸುವ ಪಾದವನು ಪಾಕಶಾಸನಗೊಲಿದು ಬಲಿಯ ಮೆಟ್ಟಿದ ಪಾದ ಕಾಕು ಶಕಟನ ಒದ್ದು ಕೊಂದ ಪಾದನಾಕ ಭೀಕರ ಬಕನ ಮೆಟ್ಟಿ ಸೀಳಿದ ಪಾದಲೋಕ ಪಾವನ ಗಂಗೆ ಪುಟ್ಟಿದ ಪಾದವನು ||1|| ಶಿಲೆಯ ಸತಿಯಳ ಬಂಧವಿಮುಕ್ತಿಗೊಳಿಸಿದ ಪಾದಒಲಿದು ಪಾರ್ಥನ ರಥವನೊತ್ತಿದ ಪಾದಕಲಿ ಸುಯೋಧನನ ಓಲಗದಿ ಕೆಡಹಿದ ಪಾದಕಲಕಿ ಕಾಳಿಂಗನ ಪೆಡೆ ತುಳಿದ ಪಾದವನು ||2|| ಗರುಡ ಶೇಷಾದಿಗಳು ಬಿಡದೆ ಪೊತ್ತಿಹ ಪಾದಧರೆಯನೀರಡಿ ಮಾಡಿ ಅಳೆದ ಪಾದಸಿರಿ ತನ್ನ ತೊಡೆಯ ಮೇಲಿರಿಸಿ ಒತ್ತುವ ಪಾದವರ

ಭಜಿಸಿ ಬದುಕೆಲೊ ಮಾನವ Read More »