ಕನಕದಾಸ

ಸ್ನಾನವ ಮಾಡಿರೊ ಜ್ಞಾನ ತೀರ್ಥದಲ್ಲಿ

ಸ್ನಾನವ ಮಾಡಿರೊ ಜ್ಞಾನ ತೀರ್ಥದಲ್ಲಿಮಾನವರೆಲ್ಲ ಮೌನದೊಳಗೆ ನಿಂದು ತನ್ನ ತಾನರಿತುಕೊಂಬುದೆ ಒಂದು ಸ್ನಾನಅನ್ಯಾಯ ಮಾಡದಿರುವುದೊಂದು ಸ್ನಾನಅನ್ನದಾನವ ಮಾಡುವುದೊಂದು ಸ್ನಾನ – ಹರಿನಿನ್ನ ಧ್ಯಾನವೆ ನಿತ್ಯ ಗಂಗಾ ಸ್ನಾನ 1 ಪರಸತಿಯ ಭ್ರಮಿಸದಿದ್ದರೆ ಒಂದು ಸ್ನಾನಪರನಿಂದೆಯ ಮಾಡದಿದ್ದರೊಂದು ಸ್ನಾನಪರೋಪಕಾರ ಮಾಡುವುದೊಂದು ಸ್ನಾನಪರತತ್ತ್ವವನರಿತುಕೊಂಬುದೆ ಒಂದು ಸ್ನಾನ2 ಸಾಧು ಸಜ್ಜನರ ಸಂಗವೆ ಒಂದು ಸ್ನಾನಭೇದಾಭೇದವಳಿದಡೆ ಒಂದು ಸ್ನಾನಆದಿಮೂರುತಿ ಕಾಗಿನೆಲೆಯಾದಿಕೇಶವನಪಾದ ಧ್ಯಾನವೆ ನಿತ್ಯ ಗಂಗಾ ಸ್ನಾನ 3

ಸ್ನಾನವ ಮಾಡಿರೊ ಜ್ಞಾನ ತೀರ್ಥದಲ್ಲಿ Read More »

ಹ್ಯಾಂಗೆ ನೀ ದಾಸನಾದೆ ಪ್ರಾಣಿ

ಹ್ಯಾಂಗೆ ನೀ ದಾಸನಾದೆ ಪ್ರಾಣಿ ಹ್ಯಾಂಗೆ ನೀ ದಾಸನಾದೆ ಹೀಂಗೆ ಸಂಸಾರದೊಳುಮಂಗನಂದದಲಿ ಭವ ಭಂಗವ ಪಡುವವನು ಆಸೆಯ ಬಿಡಲಿಲ್ಲ ಕಾಸು ಗಳಿಸುವೆಯಲ್ಲದೋಷಕ್ಕೆ ಗುರಿಯಾಗಿ ಹೇಸಿಕೆಯೊಳು ಬಿದ್ದು ||1|| ತನುವು ತನ್ನದು ಎಂದು ತನಯ ಮಾನಿನಿಯರೆತನಗೆ ಗತಿಯೆಂದು ನಂಬಿರುವ ಮೂಢನೆ ||2|| ಕಾಲನ ದೂತರು ಕರುಣಸಂಪನ್ನರೆಕಾಲ ವ್ಯರ್ಥದಿ ಕಳೆವ ಕೀಳು ಬುದ್ಧಿಯ ಪ್ರಾಣಿ||3|| ತಲೆ ಹುಳಿತ ನಾಯಂತೆ ಹಲವು ಬೀದಿಯ ತಿರುಗಿಗೆಲುವಿನಿಂದಲಿ ಮೂಲ ಮಲವನಳಿಯದೆ||4|| ಉದರಪೋಷಣೆಗಾಗಿ ಅಧಮರ ಯಾಚಿಸುತಮದಗರ್ವವೆಂಬುವುದ ಬದಿಯಲ್ಲಿ ಇಟುಗೊಂಡು ||5|| ಹಿರಿಯರ ನಿಂದಿಸಿ ಹರಿದಾಸನೆನಿಸಿದೆಗುರುಮಂತ್ರವರಿಯದ ಮರುಳು

ಹ್ಯಾಂಗೆ ನೀ ದಾಸನಾದೆ ಪ್ರಾಣಿ Read More »

ಹೇಗಿದ್ದು ಹೇಗಾದೆಯೊ ಆತ್ಮ

ಹೇಗಿದ್ದು ಹೇಗಾದೆಯೊ ಆತ್ಮಯೋಗೀಶನಾನಂದಪುರದಲಿರುವುದ ಬಿಟ್ಟು ಬಸಿರ ಹಳ್ಳಿಗೆ ಬಂದು ಮಾಸನೂರಲಿ ನಿಂದುಕುಸುಕಾಡಿ ನುಡಿದು ನೆಲಬಟ್ಟೆವಿಡಿದುಕಿಸುಕದರಿವೆಯ ಪೊದ್ದು ಮಲಮೂತ್ರದಲಿ ಬಿದ್ದುವಸುಧೆಯಲಿ ದಿನಗಳೆದೆಯಲ್ಲ ಆತ್ಮ ||1|| ಎಳಗೆರೆಯಲಿ ಆಡಿ ಯೌವನದೂರಿಗೆ ಬಂದುಥಳಥಳಿಪ ಹಸ್ತಾದ್ರಿ ನೆಳಲ ಸೇರಿಅಳಲು ಸುತ ಬೆಳೆದು ದಾರಿದ್ರ್ಯ ಪೇಟೆಗೆ ಬಂದುಹಳೆಯ ಬೀಡಿಗೆ ಪಯಣವೇ ಆತ್ಮ ||2 || ಗನ್ನಗತಕದ ಮಾತು ಇನ್ನು ನಿನಗೇತಕೋಮುನ್ನ ಮಾಡಿದ ಕರ್ಮಭರದೊಡಲಿದೆಉನ್ನತದ ಕಾಗಿನೆಲೆಯಾದಿಕೇಶವ ಸುಪ್ರ-ಸನ್ನ ಮೂರುತಿಯ ಭಜಿಸೆಲೊ ಆತ್ಮ ||3||

ಹೇಗಿದ್ದು ಹೇಗಾದೆಯೊ ಆತ್ಮ Read More »

ಹೆತ್ತ ತಾಯಿಗಿಂತ ಅತ್ಯಧಿಕ ಮಾಯವುಂಟೆ

ಹೆತ್ತ ತಾಯಿಗಿಂತ ಅತ್ಯಧಿಕ ಮಾಯವುಂಟೆಉತ್ತಮ ಅಶ್ವವ ಕತ್ತೆ ಹೋಲುವುದುಂಟೆ ವಿತ್ತವುಳ್ಳವನ ಕುಲ ಎಣಿಸುವುದುಂಟೆಸ್ವಾರ್ಥಕೆ ನ್ಯಾಯ ಎಂದಾದರೂ ಉಂಟೆ ||1|| ಅತ್ತೆಮನೆ ಸೇರುವಗೆ ಅಭಿಮಾನವುಂಟೆಬತ್ತಲೆ ತಿರುಗುವಗೆ ಭಯವು ಇನ್ನುಂಟೆ||2|| ಪೃಥ್ವಿಯೊಳಗೆ ಕಾಗಿನೆಲೆಯಾದಿಕೇಶವಗೆಮತ್ರ್ಯದೊಳನ್ಯ ದೇವರು ಸರಿಯುಂಟೆ ||3||

ಹೆತ್ತ ತಾಯಿಗಿಂತ ಅತ್ಯಧಿಕ ಮಾಯವುಂಟೆ Read More »

ಹೂವ ತರುವರ ಮನೆಗೆ ಹುಲ್ಲ ತರುವೆ

ಹೂವ ತರುವರ ಮನೆಗೆ ಹುಲ್ಲ ತರುವೆ ಆವ ಪರಿಯಲಿ ಸಲಹೊ ದೇವ ಚಿನ್ಮಯನೆ ಈರೇಳು ಜನ್ಮದಿಂ ದಾಸನಾಗಿಹೆ ನಾನುಸೇರಿದೆನೊ ತವ ಶರಣರ ಸೇವೆಗೆಘೋರ ದುರಿತಗಳೆಂಬ ವಾರಿಧಿಯ ಬತ್ತಿಸಿನಾರಸಿಂಹನೆ ಕಾಯೊ ನಮ್ಮ ಕುಲಸ್ವಾಮಿ ||1|| ರಂಗನಾಥನೆ ನಿನ್ನ ಡಿಂಗರಿಗನೋ ನಾನುಡಂಗುರವ ಹೊಯಿಸಯ್ಯ ದಾಸನೆಂದುಭಂಗಪಡಿಸದೆ ನಿನ್ನ ಶರಣರೊಳಗಿಂಬಿಟ್ಟುಗಂಗೆ ಜನಕನೆ ಕಾಯೊ ಚರಣಕ್ಕೆ ಶರಣು ||2|| ಎಷ್ಟು ಮಾಡಲು ನಿನ್ನ ಬಂಟನೋ – ವೈಷ್ಣವರಹುಟ್ಟು ದಾಸಿಯ ಮಗನು ಪರದೇಶಿಯೋಸೃಷ್ಟಿಗೊಡೆಯ ಕಾಗಿನೆಲೆಯಾದಿಕೇಶವನೆ – ಕೈಬಿಟ್ಟೆಯಾದರೆ ನಿನಗೆ ಹರಿದಾಸರಾಣೆ ||3||

ಹೂವ ತರುವರ ಮನೆಗೆ ಹುಲ್ಲ ತರುವೆ Read More »

ನಾವು ಕುರುಬರು, ನಮ್ಮ ದೇವರು ಬೀರಯ್ಯಕಾವ

ನಾವು ಕುರುಬರು, ನಮ್ಮ ದೇವರು ಬೀರಯ್ಯಕಾವ ನಮ್ಮಜ್ಜ ನರಕುರಿಯ ಹಿಂಡುಗಳ ಅಷ್ಟಮದ ಮತ್ಸರಗಳೆಂತೆಂಬ ಟಗರುಗಳುದೃಷ್ಟಿ ಜೀವಾತ್ಮನೆಂತೆಂಬ ಆಡುಸೃಷ್ಟಿ ಸಿದ್ಧ ಪ್ರಸಿದ್ಧವೆಂತೆಂಬ ಹೋತಗಳುಕಟ್ಟಿ ಕೋಲಿನಲಿ ಇರಿಯುತಿಹ ನಮ್ಮಜ್ಜ ||1|| ವೇದಶಾಸ್ತ್ರ ಪುರಾಣವೆಂತೆಂಬ ಶ್ವಾನಗಳುಕಾದಿದ್ದು ನಮ್ಮಜ್ಜನ ಹಿಂಡೊಳಗೆಹಾದಿಗಾಣದೆ ಕೂಗಿ ಬಾಯಾರಿ ಕಾಲ್ಗೆಡಲುಆದರಿಸಿ ಅಂಬಲಿಯನೆರೆವ ನಮ್ಮಜ್ಜ ||2|| ಅರಿವೆಂಬ ಮರಿಗಳು ಹಿಂಡಿನೊಳಗಡೆ ಬರಲುಮರೆವೆಂಬ ವ್ಯಾಘ್ರ ಕಿರುಬ ತೋಳಗಳು ಹೊಕ್ಕುತರುಬಿ ಹಿಂಜಾವದಲಿ ಕುರಿಯ ಮುರಿವುದ ಕಂಡು ಅರಿತು ಅರಿಯದ ಹಾಗೆ ಇರುವ ನಮ್ಮಜ್ಜ ||3|| ಹುಟ್ಟುದಕೆ ಮೊದಲಿಲ್ಲ ಸಾವುದಕೆ ಕೊನೆಯಿಲ್ಲಹುಟ್ಟು ಸಾವಿನ ಹೊಲಬ

ನಾವು ಕುರುಬರು, ನಮ್ಮ ದೇವರು ಬೀರಯ್ಯಕಾವ Read More »

ಹಿಂಗದೆ ಮನದಣಿಯ ರಂಗನ ಭಜಿಸೊ

ಹಿಂಗದೆ ಮನದಣಿಯ ರಂಗನ ಭಜಿಸೊ ರಂಗನ ಭಜಿಸೊ ಕೃಷ್ಣನ ಭಜಿಸೊ ಯಾತಕೆ ಸುಮ್ಮನಿರುವೆಪಾತಕ ಹೆಚ್ಚಿ ಮೆರೆವೆನೀತಿಯ ತಪ್ಪಿ ನೀನಿರುವೆಭೂತಳ ಭೋಗ ಸ್ಥಿರವೆ ||1|| ಗೆಜ್ಜೆಯ ಕಟ್ಟಿ ಆಡೊಲಜ್ಜೆಯ ಬಿಟ್ಟು ಪಾಡೊಮುಜ್ಜಗನ ಕೊಂಡಾಡೊಸಜ್ಜನರ ಜೊತೆಗೂಡೊ||2|| ಪನ್ನಗರಾಜ ಶಯನನಪನ್ನಗಭೂಷಣ ನುತನಉನ್ನಂತ ಗುಣದವನಚೆನ್ನಾದಿ ಕೇಶವನ||3||

ಹಿಂಗದೆ ಮನದಣಿಯ ರಂಗನ ಭಜಿಸೊ Read More »

ಹರಿಮುಖಿ ಹರಿವಾಣಿ ಹರಿವೇಣಿ ಹರಿಣಾಕ್ಷಿ

ಹರಿಮುಖಿ ಹರಿವಾಣಿ ಹರಿವೇಣಿ ಹರಿಣಾಕ್ಷಿಹರಿಮಧ್ಯೆ ಹರಿಗಮನೆ ಹರಿಯ ನಂದನ ಸಖನೆನಿಪ ಅಹೋಬಲದಹರಿಯ ನೀ ತಂದು ತೋರೆ ಎರವಿನ ತಲೆಯವನಣ್ಣನಯ್ಯನಪರಮ ಸಖನ ಸುತನಹಿರಿಯಣ್ಣನಯ್ಯನ ಮೊಮ್ಮನ ಮಾವನತಂದೊಟ್ಟಿದನ ಹಗೆಯಗುರುವಿನ ಮುಂದೆ ಮುಂದಿಹ ಬಾಹನಕಿರಿಯ ಮಗನ ರಾಣಿಯದುರುಳತನದಿ ಸೆಳೆದುಕೊಂಡನ ಕೊಂದನತರಳೆ ನೀ ತಂದು ತೋರೆ ||1|| ಸೋಮನ ಜನಕನ ಸತಿಯ ಧರಿಸಿದನರೋಮ ಕೋಟಿಯೊಳಿಟ್ಟಹನಕಾಮಿನಿ ಸತಿಯ ಕಂದನ ತಮ್ಮಗೊಲಿದನಭಾಮೆ ನೀ ತಂದು ತೋರೆ ||2|| ಶ್ರುತಿಯನುದ್ಧರಿಸಿ ಭೂಮಿಯ ಪೊತ್ತು ಅಡವಿಯಪಥದೊಳು ತಿರುಗಿದನ ಅತಿಶಯ ನರಹರಿ ವಾಮನ ರೂಪಿನಪಿತನ ಮೋಹದ ರಾಣಿಯ ಹತ ಮಾಡಿ

ಹರಿಮುಖಿ ಹರಿವಾಣಿ ಹರಿವೇಣಿ ಹರಿಣಾಕ್ಷಿ Read More »

ಹರಿ ನಿಮ್ಮ ಪದಕಮಲ ನಿರುತ ಧ್ಯಾನದಿ

ಹರಿ ನಿಮ್ಮ ಪದಕಮಲ ನಿರುತ ಧ್ಯಾನದಿ ಎನಗೆದೊರಕಿತೀ ಗುರುಸೇವೆ ಹರಿಯೆ ಗುರುಮಂತ್ರ ಮೂಲ ಸದ್ಗುರು ಮೂರ್ತಿ ನೀನಾಗಿಕರೆಯ ಸೇರಿಸಿದೆ ಶ್ರೀಹರಿಯೆ ಮೊದಲು ನಿಮ್ಮುಪದೇಶ ನದರು ಮಾಡದೆ ಇರಲುಅದನೆಲ್ಲ ಮನ್ನಿಸಿದೆ ಹರಿಯೆಮುದದಿಂದ ನೀ ಬಂದು ಭವ ಬಂಧನವ ಬಿಡಿಸಿಹದನಕ್ಕೆ ನಿಲ್ಲಿಸಿದೆ ಹರಿಯೆ ||1|| ದೊರೆತನವ ಬಿಡಿಸಿ ಸುಸ್ಥಿರ ಮಾರ್ಗ ತೋರಿಸಿದೆನರಮಾತ್ರದವನೆನದೆ ಹರಿಯೆಗರುವದೊಳಗಿಹನೆಂದು ಅರಿತು ತವದಾಸರಿಗೆಇರದೆ ಅಡಿಯಾಗಿಸಿದೆ ಹರಿಯೆ ||2|| ಕನಕ ದಳದಲಿ ಬಂದು ಕಲೆತನೆಂದರೆ ಫೌಜುಕನುಕುಮನುಕಾಗುವುದು ಹರಿಯೆಮೊನೆಗಾರತನವೆಂಬ ಶನಿ ಬಿಡಿಸಿ ತವಪಾದವನಜವನು ಸೇರಿಸಿದೆ ಹರಿಯೆ ||3|| ಮನದೊಳಗೆ ಎರಡಿಲ್ಲ

ಹರಿ ನಿಮ್ಮ ಪದಕಮಲ ನಿರುತ ಧ್ಯಾನದಿ Read More »

ಹಣ್ಣು ಕೊಂಬುವ ಬನ್ನಿರಿ

ಹಣ್ಣು ಕೊಂಬುವ ಬನ್ನಿರಿ – ಹರಿದಾಸರುಹಣ್ಣು ಕೊಂಬುವ ಬನ್ನಿರಿ ಚೆನ್ನ ಬಾಲಕೃಷ್ಣನೆಂಬಕನ್ನೆಗೊನೆ ಬಾಳೆಹಣ್ಣು ಸುತ್ತೇಳು ಲೋಕದಿ ಸುರರು ಬಿತ್ತಿದ ಹಣ್ಣುಭಕ್ತರ ಬಾಯೊಳು ನೆನೆವ ಹಣ್ಣುಅರ್ತಿಯುಳ್ಳವರೆಲ್ಲ ಕೊಳ್ಳಿ ಬೇಕಾದರೆನಿತ್ಯ ಮಾಧವನೆಂಬ ಅಚ್ಚ ಮಾವಿನ ಹಣ್ಣು ||1|| ಅಜನ ಪಡೆದ ಹಣ್ಣು ಗಜವ ಕಾಯ್ದ ಹಣ್ಣುನಿಜಮುನಿಗಳಿಗೆ ತೋರಿಸಿದ ಹಣ್ಣುತ್ರಿಜಗವಂದಿತ ಪಾಲ್ಗಡಲೊಡೆಯನ ಹಣ್ಣುಸುಜನ ಭಕ್ತರೆಲ್ಲ ಕೊಳ್ಳ ಬನ್ನಿರಿ ಹಣ್ಣು ||2|| ತುರುವ ಕಾಯ್ದ ಹಣ್ಣು ಉರಗನ ತುಳಿದ ಹಣ್ಣುಕರೆದರೆ ಕಂಬದೊಳು ಓಯೆಂಬ ಹಣ್ಣುಮರುಗುವ ಧ್ರುವನಿಗೆ ಪಟ್ಟಗಟ್ಟಿದ ಹಣ್ಣುಕರುಣಾಳು ಕಾಗಿನೆಲೆಯಾದಿಕೇಶವ ಹಣ್ಣು ||3||

ಹಣ್ಣು ಕೊಂಬುವ ಬನ್ನಿರಿ Read More »

ಸೈಯವ್ವ ಇದು ಸೈಯೆ

ಸೈಯವ್ವ ಇದು ಸೈಯೆ, ಗೋಪಿ, ಸೈಯವ್ವ ಇದು ಸೈಯೆ ಸೈಯೆ ಗೋಪಿ, ನಿನ್ನ ಮಗರಾಮನಿಗೆ ಒಳ್ಳೆ ಬುದ್ಧಿ ಕಲಿಸಿದ್ದೀಯೆ ಸಂಜೆಯ ವೇಳೆಗೆ ಬಂದು – ಸಟೆಯಲ್ಲ – ಮನೆಯ ಒಳಗಡೆ ನಿಂದುಕುಂಜರಗಮನೆ ಬಾರೆಂದು ಎನ್ನ ಮುಂಗುರುಳ ತಿದ್ದಿದಗಂಜಿ ಶಲ್ಯವ ಎನಗೆ ಮುಸುಕಿಟ್ಟು ಮುದ್ದಾಡಿ ಕಡೆಗೆಕಂಜಲೋಚನೆ ಕುಚದ ಗಂಟು ಬಿಚ್ಚೆಂದ ನೋಡು ||1|| ಬಿಟ್ಟ ಮಂಡೆಯಲಿ ಗಂಡ ಮೈಮರೆತು ಮಲಗಿಹುದ ಕಂಡುಜುಟ್ಟನ್ನು ಬಿಚ್ಚಿ ಮಂಚದ ನುಲಿಗೆ ಬಿಗಿದು ಕಟ್ಟಿದಕೊಟ್ಟಿಗೆ ಸುಡುತಿದೆ ಏಳೆಂದು ಬೊಬ್ಬೆಯಿಟ್ಟುದ ಕೇಳಿಥಟ್ಟನೇಳಲು ಗಂಡ, ಜುಟ್ಟು ಕಿತ್ತು

ಸೈಯವ್ವ ಇದು ಸೈಯೆ Read More »

ಸೇವಕತನದ ರುಚಿಯನೇನರಿದೆಯೊ

ಸೇವಕತನದ ರುಚಿಯನೇನರಿದೆಯೊದೇವ ಹನುಮರಾಯ ವೈರಾಗ್ಯ ಬೇಡಿ ಉದಧಿಯನು ದಾಟಿ ಸೀತೆಯ ಕಂಡು ಬಂದಾಗಮದುವೆಯನು ಮಾಡೆನ್ನಬಾರದಿತ್ತೆಪದದಿಂದ ಪಾಷಾಣ ಪೆಣ್ಣ ಮಾಡಿದಾತಗೆಇದೇನಸಾಧ್ಯವೊ ನೀ ಬಯಸಲೊಲ್ಲದೆ||1|| ಕ್ಷಣದಲ್ಲಿ ಸಂಜೀವನ ಪರ್ವತ ತಂದಾಗಹಣ ಹೊನ್ನುಗಳ ಬೇಡ ಬಾರದಿತ್ತೆವಿನಯದ ವಿಭೀಷಣಗೆ ರಾಜ್ಯವನಿತ್ತಂಥಧಣಿಗೆ ಏನಸಾಧ್ಯವೊ ಹನುಮ ನೀನೊಲ್ಲದೆ ||2|| ಸಾರ್ವಭೌಮನು ತಾನೆ ಮೆಚ್ಚಿ ಬಳಿಗೈದಾಗಉರ್ವಿಯನು ಬೇಡಿದಡೆ ಕೊಡದಿಹನೆಸರ್ವವನು ತೊರೆದು ಶ್ರೀ ನೆಲೆಯಾದಿ ಕೇಶವನನಿವ್ರ್ಯಾಜ ಭಕುತಿಯನು ಬೇಡಿಕೊಂಡೆಯೊ ||3||

ಸೇವಕತನದ ರುಚಿಯನೇನರಿದೆಯೊ Read More »

ಸಿರಿಯ ಮದವೆ ಮುಕುಂದ

ಸಿರಿಯ ಮದವೆ ಮುಕುಂದ – ನಿನ್ನಚರಣ ಸೇವಕನ ಬಿನ್ನಹ ಪರಾಕೆಲೊ ದೇವ ಅಷ್ಟದಿಕ್ಪಾಲಕರ ಮಧ್ಯದಲಿ ವೈಕುಂಠಪಟ್ಟಣವು, ಸಿರಿಯೋಲಗವ ನಿತ್ಯದಿಕಟ್ಟಿ ಓಲೈಸುತಿಹ ದಾಸರನಿಮಿಷರು, ಮನಮುಟ್ಟಿ ಪಾಡುವ ನಾರದರ ಗೀತ ಸಂಭ್ರಮದ ||1|| ಸಕಲ ಐಸಿರಿಯ ಅಧಿದೇವಿಯೆ ಪಿರಿಯರಸಿಯುಕುತಿಯೊಳು ಲೋಕಗಳ ಸೃಜಿಸುವಂಥಶಕುತ ನಿನ್ನಯ ಹಿರಿಯ ಮಗನು, ಜೀವಿಗಳ ಮೋ-ಹಕದಿ ಮರುಳು ಮಾಳ್ಪಾತ ಕಿರಿಮಗನೆಂಬ ||2|| ಬಲ್ಲಿದರಿಗೆಲ್ಲ ಬಲ್ಲಿದನೆಂಬ ಅರಿ ಹೃದಯದಲ್ಲಣನೆಂಬ ಬಿರುದು ಸಾಹಸಇಲ್ಲ ನಿನಗಾರು ಇದಿರೆಂಬ ಗರ್ವದಿ ಎನ್ನಸೊಲ್ಲು ಕಿವಿ ಕೇಳದಂತಾಯಿತೆ ಹರಿಯೆ ? ||3|| ಶೇಷ ಹಾಸು ಮಂಚವು,

ಸಿರಿಯ ಮದವೆ ಮುಕುಂದ Read More »

ಸಾಲದೆ ನಿನ್ನದೊಂದು ದಿವ್ಯನಾಮ

ಸಾಲದೆ ನಿನ್ನದೊಂದು ದಿವ್ಯನಾಮ – ಅ-ಕಾಲ ಮೃತ್ಯುವಿನ ಗಂಟಲಗಾಣ ಹರಿಯೆ ರಣದೊಳಗೆ ಅಂಗಾಂಗ ಖಂಡತುಂಡಾಗಿ ಪ್ರತಿರಣವನುತ್ತರಿಸಿ ಮರಣವ ತಾಳಿರೆಪ್ರಣವ ಗೋಚರ ನೀನು ಗೋಚರಿಸಿ ಬಂದೆನ್ನಹೆಣಕೆ ಪ್ರಾಣವ ಪ್ರಯೋಗಿಸಿದಂತರಾತ್ಮ||1|| ಕುಂತದಿಂ ತೂಂತುಗೊಂಡೆನ್ನ ಬೆನ್ನಿಂದಿಳಿವಸಂತತ ನೆತ್ತರನೊರಸಿ ಬಿಸುಟೆತಿಂತ್ರಿಣಿಯ ಮರದಡಿಯೆ ಹಾವು ಕಡಿದೊರಗಿರಲುಮಂತ್ರಿಸಿ ಮನೆಗೆ ಕಳುಹಿದೆ ಗರುಡಗಮನ ||2|| ಕ್ಷೀಣ ದೇಹವ ಬಿಡುವೆನೆಂದು ಪಾಡಂಬಟ್ಟುತ್ರಾಣದಲಿ ಗರಳ ತೈಲವ ಸೇವಿಸೆವೇಣುನಾದದಲಿ ಹಣೆಯನೇವರಿಸಿ ಪಂಚಪ್ರಾಣ ಪ್ರತಿಷ್ಠೆಯ ಮಾಡಿದೆ ಮಹಾತ್ಮ ||3|| ತಮ್ಮ ಹವಣನರಿಯದೆ ಕೊಬ್ಬಿದ ಪಿಶಾಚಿಗಳುಎಮ್ಮ ಮನೆಗೊಂದೆ ಸಮ ಕಲ್ಲಲಿಟ್ಟುಹೆಮ್ಮಕ್ಕಳ ಬಾಧಿಸುವುದನು ಕಂಡುಬೊಮ್ಮಜಟ್ಟಿಗರ ಶಿರವರಿದೆ

ಸಾಲದೆ ನಿನ್ನದೊಂದು ದಿವ್ಯನಾಮ Read More »

ಸಾರಿ ದೂರಿ ಹೇಳುತೇನೆ ಕೆಟ್ಟಿ ಕಂಡ್ಯ

ಸಾರಿ ದೂರಿ ಹೇಳುತೇನೆ ಕೆಟ್ಟಿ ಕಂಡ್ಯ ಬಡ್ಡಿ ಮನವೆ ದೂರೋ ಬುದ್ಧಿ ಮಾಡಬೇಡ ಕೈಯೊಳಿಕೋ ಕಡ್ಡಿನಿನ್ನ ಕೈಯೊಳಿಕೋ ಕಡ್ಡಿ ಕೋಪವನ್ನೆ ಮಾಡದಿರು ಪಾಪಕೆ ಗುರಿಯಾಗದಿರುಶ್ರೀಪತಿಯ ನಾಮವನು ನೀ ಪಠಿಸುತಲಿರು ಮನವೆ ||1|| ಅಷ್ಟಮದದಿ ಮೆರೆಯದಿರು ನಷ್ಟಕೆ ಗುರಿಯಾಗದಿರುದುಷ್ಟಸಂಗವನ್ನು ಮಾಡಿ ಭ್ರಷ್ಟನಾಗಬೇಡ ಮನವೆ ||2|| ಸಿರಿಯ ಮೆಚ್ಚಿ ಮೆರೆಯದಿರು ಬರಿದೆ ಹೊತ್ತ ಕಳೆಯದಿರುಪರರ ನಿಂದೆಯನ್ನು ಮಾಡಿ ನರಕಿಯಾಗಬೇಡ ಮನವೆ ||3|| ಕಾಯವನ್ನು ನಂಬದಿರು ಮಾಯಕೆ ಮರುಳಾಗದಿರುಸ್ತ್ರೀಯರನ್ನು ಕಂಡು ನೀನು ಬಯಸದಿರು ಮರುಳು ಮನವೆ ||4|| ನಿನ್ನ ನಿಜವ ನಂಬದಿರು

ಸಾರಿ ದೂರಿ ಹೇಳುತೇನೆ ಕೆಟ್ಟಿ ಕಂಡ್ಯ Read More »

ಸಾಧು ಸಜ್ಜನ ಸತ್ಯಗುಣಕಿದಿರುಂಟೆ

ಸಾಧು ಸಜ್ಜನ ಸತ್ಯಗುಣಕಿದಿರುಂಟೆಆದಿಕೇಶವನ ಪೋಲುವ ದೈವವುಂಟೆ ಸತ್ಯವ್ರತವುಳ್ಳವಗೆ ಮೃತ್ಯುಭಯವುಂಟೆಚಿತ್ತಶುದ್ಧಿಯಿಲ್ಲದವಗೆ ಪರಲೋಕವುಂಟೆವಿತ್ತವನರಸುವಂಗೆ ಮುಕ್ತಿಯೆಂಬುದುಂಟೆಉತ್ತಮರ ಸಂಗಕಿಂತಧಿಕ ಧರ್ಮವುಂಟೆ ||1|| ಸುತಲಾಭಕಿಂತಧಿಕ ಲಾಭವುಂಟೆಮತಿರಹಿತನೊಳು ಚತುರತೆಯುಂಟೆಪತಿಸೇವೆಗಿಂತಧಿಕ ಸೇವೆಯುಂಟೆಸತಿಯಿಲ್ಲದವಗೆ ಸಂಪದವೆಂಬುದುಂಟೆ ||2|| ಪಿಸುಣಗಿನ್ನಧಿಕ ಹೀನನುಂಟೆವಸುಧೆಯೊಳನ್ನದಾನಕೆ ಸರಿಯುಂಟೆಅಶನವ ತೊರೆದ ಯೋಗಿಗೆ ಭಯವುಂಟೆವ್ಯಸನಿಯಾದ ನೃಪನಿಗೆ ಸುಖವುಂಟೆ ||3|| ಧನಲೋಭಿಗಿನ್ನಧಿಕ ಹೀನನುಂಟೆಮನವಂಚಕ ಕಪಟಿಗೆ ನೀತಿಯುಂಟೆಸನುಮಾನಿಸುವ ಒಡೆಯಗೆ ಬಡತನವುಂಟೆವಿನಯವಾಗಿಹ ಸಂಗದೊಳು ಭಂಗವುಂಟೆ||4|| ಹರಿಭಕ್ತಿಯಿಲ್ಲದವಗೆ ಪರಲೋಕವುಂಟೆಪರಮಸಾತ್ತ್ವಿಕ ಗುಣಕೆ ಪಿರಿದುಂಟೆಪರನಿಂದೆಗಿಂತಧಿಕ ಪಾತಕವುಂಟೆವರದಾದಿಕೇಶವನಲ್ಲದೆ ದೈವವುಂಟೆ ||5||

ಸಾಧು ಸಜ್ಜನ ಸತ್ಯಗುಣಕಿದಿರುಂಟೆ Read More »

ಸಾಕು ಸಾಕು ಮನುಜಸೇವೆಯು, ರಂಗಯ್ಯ

ಸಾಕು ಸಾಕು ಮನುಜಸೇವೆಯು, ರಂಗಯ್ಯ ಇನ್ನು ಸಾಕು ಸಾಕು ಮನುಜಸೇವೆ ಮಾಡಿ ದಣಿದು ನೊಂದೆ ನಾನುಬೇಕು ನಿನ್ನ ಪಾದಭಜನೆ ಕೊಟ್ಟು ಸಲಹೊ ರಂಗಯ್ಯ ಹೊತ್ತರೆದ್ದು ಹೋಗಿ ಪರರ ಚಿತ್ತವೃತ್ತಿಯನ್ನು ತಿಳಿದುಹತ್ತರಿದ್ದು ಹಲವು ಕೆಲಸ ಭೃತ್ಯನಂತೆ ಮಾಡಿ – ರಿಕ್ತಹಸ್ತದಿಂದ ಮನೆಯ ಸೇರುವೆ – ಆಸೆಗಾಗಿಮತ್ತೆ ಕಂಡ ಕಡೆಗೆ ತೊಲಗುವೆ – ಬಂದು ಅಪರರಾತ್ರಿಯಲ್ಲಿ ತಿಂದು ಒರಗುವೆ ರಂಗಯ್ಯ ರಂಗ ||1|| ಸ್ನಾನ ಸಂಧ್ಯಾನುಷ್ಠಾನ ನೇಮವೆಲ್ಲ ತೊರೆದುಬಿಟ್ಟುಹೀನನಾಗಿ ಕೆಟ್ಟ ಜನರ ಮನೆಗಳನ್ನು ತಿರುಗಿ ತಿರುಗಿಶ್ವಾನನಂತೆ ದಿನವ ಕಳೆವೆನೊ –

ಸಾಕು ಸಾಕು ಮನುಜಸೇವೆಯು, ರಂಗಯ್ಯ Read More »

ಸಾಕು ಸಾಕಿನ್ನು ಸಂಸಾರ ಸುಖವು

ಸಾಕು ಸಾಕಿನ್ನು ಸಂಸಾರ ಸುಖವು ಶ್ರೀಕಾಂತ ನೀನೊಲಿದು ಕರುಣಿಸೈ ಹರಿಯೆ ಉದಿಸಿದುವು ಪಂಚಭೂತಗಳಿಂದ ಓಷಧಿಗಳುಉದಿಸಿದುದು ಓಷಧಿಗಳಿಂದನ್ನವುಉದಿಸಿದುವು ಅನ್ನದಿಂ ಶುಕ್ಲ ಶೋಣಿತವೆರಡುಉದಿಸಿದುವು ಸ್ತ್ರೀ ಪುರುಷರಲ್ಲಿ ಹರಿಯೆ ||1|| ಸತಿಪುರುಷರೊಂದಾಗಿ ರತಿಕ್ರೀಡೆಗಳ ಮಾಡೆಪತನವಾದಿಂದ್ರಿಯವು ಹೊಲೆರುಧಿರವುಸತಿಯ ಉದರದೊಳೆರಡು ಏಕತ್ರ ಸಂಧಿಸುತಪುತಪುತನೆ ಮಾಸ ಪರಿಯಂತ ಹರಿಯೆ||2|| ಮಾಸವೆರಡರಲಿ ಶಿರ ಮಾಸ ಮೂರರಲಿ ಅಂಗಮಾಸ ನಾಲ್ಕರಲಿ ಚರ್ಮದ ಹೊದಿಕೆಮಾಸ ಐದಾರರಲಿ ನಖ ರೋಮ ನವರಂಧ್ರಮಾಸ ಏಳರಲಿ ಧಾತು ಹಸಿವು ತೃಷೆಯು ||3|| ತಿಂಗಳೆಂಟರಲಿ ಪೂರ್ವಾನುಭವ ಕರ್ಮಗಳಗುಂಗಿನಲಿ ನಾನಿಂತು ಭವಭವದೊಳುಅಂಗನೆಯರುದರದಲಿ ಮತ್ತೆಮತ್ತೆ ಬಂದುಭಂಗಪಡೆನೆಂದು ಧ್ಯಾನಿಸುತ ದಿನಗಳೆದೆ

ಸಾಕು ಸಾಕಿನ್ನು ಸಂಸಾರ ಸುಖವು Read More »

ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆ

ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆನಿತ್ಯನಿಯಾದ ಮೇಲೆ ಚಿಂತೆಯಾತಕೆ ತಾನು ಉಣ್ಣದ ಪರರಿಗಿಕ್ಕದ ಧನವಿದ್ಯಾತಕೆಮಾನ ಹೀನನಾಗಿ ಬಾಳ್ವ ಮನುಜನ್ಯಾತಕೆe್ಞÁನವಿಲ್ಲದೆ ನೂರು ಕಾಲ ಬದುಕಲ್ಯಾತಕೆಮಾನಿನಿಯ ತೊರೆದ ಮೇಲೆ ಭೋಗವ್ಯಾತಕೆ ||1|| ಮಾತು ಕೇಳದೆ ಮಲೆತು ನಡೆವ ಮಕ್ಕಳ್ಯಾತಕೆಪ್ರೀತಿಯಿಲ್ಲದೆ ಎಡೆಯಲಿಕ್ಕಿದ ಅನ್ನವ್ಯಾತಕೆನೀತಿಯರಿತು ನಡೆಯದಿರುವ ಬಂಟನ್ಯಾತಕೆಸೋತ ಹೆಣ್ಣಿಗೆ ಓತು ನಡೆಯದ ಪುರುಷನ್ಯಾತಕೆ ||2|| ಸನ್ನೆಯರಿತು ನಡೆಯದಿರುವ ಸತಿಯು ಯಾತಕೆಮನ್ನಣಿಂದ ನಡೆಸದಿರುವ ದೊರೆಯು ಯಾತಕೆಮುನ್ನ ಕೊಟ್ಟು ಪಡೆಯದಿನ್ನು ಬಯಸಲ್ಯಾತಕೆಚೆನ್ನ ಆದಿಕೇಶವನಲ್ಲದ ದೈವವ್ಯಾತಕೆ ||3||

ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆ Read More »

ಸಜ್ಜನರ ಸಂಗದೊಳಗಿರಿಸೆನ್ನ ರಂಗ

ಸಜ್ಜನರ ಸಂಗದೊಳಗಿರಿಸೆನ್ನ ರಂಗ ದುರ್ಜನರ ಸಂಗ ನಾನೊಲ್ಲೆ ಮಂಗಳಾಂಗ ಕೂಡಿದ ಸಭೆಯಲಿ ಕುತ್ಸಿತವ ನುಡಿವನ ಸಂಗನಾಡಿನೊಳಗನ್ಯಾಯವ ಮಾಡುವನ ಸಂಗಬೇಡಿದರು ಕೊಡದಿರುವ ಕಡುಲೋಭಿಯ ಸಂಗಮೂಢ ಮೂರ್ಖರ ಸಂಗ ಬಲು ಭಂಗ ಎಲೊ ರಂಗ||1|| ಗುರು ಸತಿಗೆ ಪರಸತಿಗೆ ಎರಡು ಬಗೆವರ ಸಂಗಗುರು ನಿಂದೆ ಪರನಿಂದೆ ಮಾಡುವರ ಸಂಗಪರಹಿತಾರ್ಥದ ಧರ್ಮವರಿಯದವರ ಸಂಗಮರುಳ ಪಾಮರ ಸಂಗ ಬಲು ಭಂಗ ಎಲೊ ರಂಗ ||2|| ಆಗಮದ ಅನ್ವಯವನರಿಯದವನ ಸಂಗರೋಗದಲಿ ಆವಾಗಲು ಮುಲುಗುವನ ಸಂಗಕಾಗಿನೆಲೆಯಾದಿಕೇಶವನಂಘ್ರಿ ನೆನೆಯದಿಹಭಾಗವತರ ಸಂಗ ಬಲು ಭಂಗ ಎಲೊ ರಂಗ ||3||

ಸಜ್ಜನರ ಸಂಗದೊಳಗಿರಿಸೆನ್ನ ರಂಗ Read More »

ಸಂಸಾರ ಸಾಗರವನುತ್ತರಿಸುವಡೆ

ಸಂಸಾರ ಸಾಗರವನುತ್ತರಿಸುವಡೆಕಂಸಾರಿ ನಾಮವೊಂದೇ ಸಾಕು ಮರುಳೆ ಯತಿಯಾಗಬೇಡ ನೀ ವೈರಾಗ್ಯವನೆ ಪಿಡಿದುಸತತ ವ್ರತವ ಮಾಡುವೆನೆಂಬ ಹಮ್ಮು ಬೇಡಶ್ರುತಿಸ್ಮøತಿಯರಿತು ನಡೆವೆನೆಂಬ ಚೇಷ್ಟೆಯು ಬೇಡರತಿಪತಿಪಿತನ ನಾಮವೊಂದೆ ಸಾಕು ಮರುಳೆ ||1|| ತನುವ ದಂಡಿಸಿ ತುದಿಯ ಕೋಡುಗಲ್ಲಿನ ಮೇಲೆವನಿತೆಯನು ಬಿಟ್ಟು ತಪವಿರಲು ಬೇಡಅನುದಿನವು ನೀರೊಳಗೆ ಮುಳುಗಿ ನಡುಗಲು ಬೇಡವನಜನಾಭನ ನಾಮ ನೆನೆ ಕಂಡ್ಯ ಮರುಳೆ ||2|| ತೀರ್ಥಯಾತ್ರೆಯ ಮಾಡಿ ಬಹುವಿಧದಲಿ ಬಳಲಿ ಕೃ-ತಾರ್ಥನಾದೆನೆಂಬುವ ಹೆಮ್ಮೆ ಬೇಡಪಾರ್ಥಸಾರಥಿ ಕಾಗಿನೆಲೆಯಾದಿಕೇಶವನಕೀರ್ತನೆಯ ಮಾಡಿ ಮುಕುತಿಯ ಹೊಂದು ಮರುಳೆ ||3|| * ಈ ಕೀರ್ತನೆ ಪುರಂದರದಾಸರ ಅಂಕಿತದಲ್ಲೂ

ಸಂಸಾರ ಸಾಗರವನುತ್ತರಿಸುವಡೆ Read More »

ಶ್ರೀರಾಮರ ಪೂಜಿಸಲಿಲ್ಲ – ಮೈಮರೆತೆನಲ್ಲ

ಶ್ರೀರಾಮರ ಪೂಜಿಸಲಿಲ್ಲ – ಮೈಮರೆತೆನಲ್ಲ ಬಾಲತ್ವದಲಿ ಬಲು ಲೀಲೆಯಿಂದಲಿ ನಾನುಕಾಲವ ಕಳೆದೆನಲ್ಲ – ಮೈಮರೆತೆನಲ್ಲ ||1|| ಸತಿಸುತರೆ ಎನಗೆ ಗತಿಯೆಂದು ತಿಳಿದು ನಾನುಮತಿಗೆಟ್ಟು ಭ್ರಾಂತನಾದೆನಲ್ಲ – ಮೈಮರೆತೆನಲ್ಲ ||2|| ಹೊನ್ನ ಗಳಿಸಿ ಪರರಿಗೆ ಅನ್ನವಿಕ್ಕಲಿಲ್ಲಚೆನ್ನಕೇಶವನ ನಂಬಲಿಲ್ಲ – ಮೈಮರೆತೆನಲ್ಲ||3||

ಶ್ರೀರಾಮರ ಪೂಜಿಸಲಿಲ್ಲ – ಮೈಮರೆತೆನಲ್ಲ Read More »

ಶ್ರೀರಾಮ ಎನ್ನಿರೊ ಮೂಜಗದವರೆಲ್ಲ

ಶ್ರೀರಾಮ ಎನ್ನಿರೊ ಮೂಜಗದವರೆಲ್ಲಈರೇಳು ಭುವನ ತನ್ನುದರದೊಳಿಟ್ಟನ ಅನಿಮಿಷರಂದದಿ ವನವಾಸಕೆ ಹೋದವನ _ ಶ್ರೀರಾಮ ಎನ್ನಿರೊಮನಸಿಜ ನಾರಿಯ ಪಿತನ ಕೊಂದನ ಪಿತನ ಪೊತ್ತವನ _ ಶ್ರೀರಾಮ ಎನ್ನಿರೊಘನ ಕೋಡ ಕೊನೆಯಿಂದ ಧರಣಿಯ ತಾಳ್ದವನ _ ಶ್ರೀರಾಮ ಎನ್ನಿರೊದಿನಕರನಳಿವಿನಲಿ ಪಗೆಯ ಗೆದ್ದಾತನ _ ಶ್ರೀರಾಮ ಎನ್ನಿರೊ||1|| ಗಜವನೇರಿದವನ ತಂದೆಯ ತಾಯನಳೆದವನ _ ಶ್ರೀರಾಮ ಎನ್ನಿರೊಭುಜಬಲದಿಂದ ಭೂಪಾಲರ ಗೆದ್ದವನ _ ಶ್ರೀರಾಮ ಎನ್ನಿರೊನಿಜಮುನಿಗಳ ವನದಿಂದ ತನಯರ ತಂದವನ _ ಶ್ರೀರಾಮ ಎನ್ನಿರೊಭುಜಗಧರನ ಕೈಯ ಆಯುಧವನು ತಂದವನ _ ಶ್ರೀರಾಮ ಎನ್ನಿರೊ ||2||

ಶ್ರೀರಾಮ ಎನ್ನಿರೊ ಮೂಜಗದವರೆಲ್ಲ Read More »

ಶೇಷಶಯನ ನಿನ್ನ ಪರಮ ಭಾಗವತರ

ಶೇಷಶಯನ ನಿನ್ನ ಪರಮ ಭಾಗವತರ ಸಹವಾಸದೊಳಿರಿಸು ಕಂಡ್ಯ ಎನ್ನನು ಬೇಸರಿಸದೆ ನಿನ್ನ ಹೃದಯಾಬ್ಜದೊಳಗಿರುವದಾಸರೊಳಿರಿಸು ಕಂಡ್ಯ ಎನ್ನನು ತಂದೆಯೊಡಲನು ಸೀಳಿಸಿದವರೊಳು, ದೇ-ವೇಂದ್ರನ ತಲೆಗೆ ತಂದವರೊಳು, ದು-ರ್ಗಂಧ ಪೆಣ್ಣಿಗೆ ಚಂದನದ ಕಂಪನಿತ್ತಂಥಬಾಂಧವರೊಳಗಿರಿಸು ಕಂಡ್ಯ ಎನ್ನನು ||1|| ತೋಯಜವೆಂಬ ಪುಷ್ಪದ ಪೆಸರವರೊಳುತಾಯ ಸೊಸೆಗೆ ಮಕ್ಕಳಿತ್ತವರೊಳುಆಯದಿ ದ್ವಾದಶಿ ವ್ರತವ ಸಾಧಿಸಿದಂಥರಾಯರೊಳಿರಿಸು ಕಂಡ್ಯ ಎನ್ನನು||2|| ಗಿಳಿನಾಯಿ ಪೆಸರಿನವರೊಳು, ಮುಗಿಲಹೊಳೆಯ ಹೊಟ್ಟೆಲಿ ಹುಟ್ಟಿದವರೊಳುಕೆಳದಿಯ ಜರಿದು ಶ್ರೀಹರಿದಿನ ಗೆದ್ದಂಥಹಳಬರೊಳಿರಿಸು ಕಂಡ್ಯ ಎನ್ನನು||3|| ಅಂಕಕ್ಕೆ ರಥವ ನಡೆಸಿದವರೊಳು, ನಿ-ಶ್ಶಂಕೆ ಧರ್ಮವ ಗೆದ್ದ ಹಿರಿಯರೊಳುಲಂಕೆಯ ಅನುದಿನ ಸ್ಥಿರರಾಜ್ಯವಾಳಿದಕಿಂಕರರೊಳಿರಿಸು ಕಂಡ್ಯ ಎನ್ನನು

ಶೇಷಶಯನ ನಿನ್ನ ಪರಮ ಭಾಗವತರ Read More »

ಶಿವ ಶಿವ ಶಿವ ಎನ್ನಿರೊ – ಮೂಜಗದವರೆಲ್ಲ

ಶಿವ ಶಿವ ಶಿವ ಎನ್ನಿರೊ – ಮೂಜಗದವರೆಲ್ಲಶಿವ ಶಿವ ಶಿವ ಎನ್ನಿರೊ ಆಗಮ ಸಿದ್ಧಾಂತ ಮೂಲದ ಜಪವಿದು ಶಿವಶಿವಶಿವ ಎನ್ನಿರೋ – ನಿಮ್ಮರೋಗದ ಮೂಲವ ಕೆಡಿಪ ಔಷಧವಿದು ಶಿವಶಿವಶಿವ ಎನ್ನಿರೊ ||1|| ಮನುಜ ಜನ್ಮದಿ ಹುಟ್ಟಿ ಮೈಮರೆದಿರಬೇಡಿ ಶಿವಶಿವಶಿವ ಎನ್ನಿರೋ – ನಿಮ್ಮತನುಮನ ಪ್ರಾಣವ ವ್ಯರ್ಥವ ಮಾಡದೆ ಶಿವಶಿವಶಿವ ಎನ್ನಿರೊ ||2|| ಅಪರಾಧಕೋಟಿ ತ್ಯಜಿಸಬೇಕಾದರೆ ಶಿವಶಿವಶಿವ ಎನ್ನಿರೋ – ಮುಂದೆಉಪಮಿತರೋರ್ಮಿತರರಿಯದ ಜಪವಿದು ಶಿವಶಿವಶಿವ ಎನ್ನಿರೊ||3|| ಜವನ ಬಾಧೆಯ ನೀವು ಜಯಿಸಬೇಕಾದರೆ ಶಿವಶಿವಶಿವ ಎನ್ನಿರೋ – ನಿಜಸವಿಮಲ ಮುಕ್ತಿಯ

ಶಿವ ಶಿವ ಶಿವ ಎನ್ನಿರೊ – ಮೂಜಗದವರೆಲ್ಲ Read More »