ಏಶೋ ಭುವನಪಾವನ ನಾರಾಯಣ

ಏಶೋ ಭುವನಪಾವನ ನಾರಾಯಣ। ಏಶ ಆರ್ತ-ಪತಿತ-ಚಿತೇ, ಶಾಂತಿ ವಿತರಿತೇ, ತ್ರಿಭುವನ-ತಾರಣ-ಕಾರಣ। ದ್ವೇಷ ಹಿಂಸಾ ಹೆರೀ ಝರಿತ ನಯನಬಾರಿ ಸಾಮ್ಯ ಪ್ರಚಾರಿಲೇ ದೇಶೇ ದೇಶೇ ಘುರೀ, ಲಾಂಛನಾ ಸಹಿಲೇ, ಸಾಧಿ’ ಶಿಖಾಯಿಲೇ ಜೀವಹಿತೇ ಜೀವನಧಾರಣ॥ ಹೆರ ಘೋರ ತಮ, ಸ್ವಾರ್ಥ ಸೇ ನಿರ್ಮಮ ಛಾಯ್ಛೇ ಭುವನ ಕಾಲಮೇಘ-ಸಮ, ಶೋಣಿತೇ ರಂಜಿತ, ರೋದನೇ ಪೂರಿತ, ಕಲುಷಿತ ಧರಣೀ ಗಗನ। (ಏಶೋ) ಹೃದಯೇ ಹೃದಯೇ, ಅಂತರಯಾಮಿ ಹೋಯೇ, ಸ್ವಾರ್ಥಬಂಧ ಕಾಟೋ ಪ್ರೇಮ ಅಸಿ ದಿಯೇ, ಖುಲಿಯೇ ದಾವ್ ಠುಲಿ, ಹೆರೀ ನಯನ […]

ಏಶೋ ಭುವನಪಾವನ ನಾರಾಯಣ Read More »

ಏಳು ಬೆಳಗಾಯಿತು ಯದುಕುಲೋತ್ತಮ

ಏಳು ಬೆಳಗಾಯಿತು ಯದುಕುಲೋತ್ತಮ | ವಾಲಗಕೆ ಪರಮೇಷ್ಠಿ ಹರ ಸುರಪಾಲಕರು ಹರ ಸುರಪಾಲಕರು ಬಂದರು ತಮ್ಮಯ ಆಳುಸಹಿತದಲಿ ರಂಗಾ ವೇದವನು ತಮ ಕದ್ದು ಒಯ್ದನು | ಆಧಾರಾಗದೆ ಅದ್ರಿ ಮುಣಗಿತು || ಮೇದಿನಿಯ ಬಳಕೊಂಡು ಹೋದನು | ಅದಿತಿಯ ಸುತನು ಭಾದಿಗಾಗದಲೆ ಬಂದು ಸಕಲರು || ಆದರಣೆಯಿಂದ ಕೈಯ ಮುಗಿದು ನೀ | ದಯಾನಿಧಿ ಎಂದು ಹೊರಗೆ ಕಾದು ಐದಾರೆ ರಂಗ ||1|| ಬಲಿಯ ಅಟ್ಟುಳಿ ಹೆಚ್ಚಿತು ವೆ ಗ್ಗಳಿಸಿದರು ಛತ್ರಿಯರು ಈರೈದು ತಲೆಯವನು || ಬಲವಂತನಾದನು

ಏಳು ಬೆಳಗಾಯಿತು ಯದುಕುಲೋತ್ತಮ Read More »

ಏಳು ಏಳು ಏಳು ಲೋಕದ ಒಡಿಯನೆ

ಏಳು ಏಳು ಏಳು ಲೋಕದ ಒಡಿಯನೆ | ಏಳು ಗೋವಳರಾಯ ಗೋಪೇರಿಗತಿ ಪ್ರಿಯಾ | ಏಳು ಅಪ್ರಾಕೃತ ಕಾಯಾ ಸುರಮುನಿ ಗೇಯಾ | ಏಳು ಗೋಪಾಲಕೃಷ್ಣ ಪುರಂದರನ ದಿಶೆಯಲ್ಲಿ ಗರುಡಾಗ್ರಜನು ಬರಲು | ಅರುಣವಾಯಿತು ಗಗನ | ಶರಧಿ ತೆರೆ ತಗ್ಗಿದವು ಉರಗ ಪೆಡೆ ಪಸರಿಸಿದಾ | ಹರಿದು ಪೋಯಿತು | ಕಾಳ | ಸುರ ವೈರಿಗಳು ಅಡಗಲು | ಅರಳಿದವು ಅರವಿಂದ | ಪರಮ ಶೋಭನದಿ ಮಧುಕರಗಳು ಝಂಕರಿಸಿ ಶುಕಪಿಕ ಮೃಗಾದಿ ಯೆ-| ಚ್ಚರವಾಗೆ ಕಣ್ಣೆರಿಯೆ

ಏಳು ಏಳು ಏಳು ಲೋಕದ ಒಡಿಯನೆ Read More »

ಏನೆಲವೊ ದೇವ ವೈಕುಂಠನಾಥಾ

ಏನೆಲವೊ ದೇವ ವೈಕುಂಠನಾಥಾ ನೀ ನಾರಿ ವೇಷವನು ಧರಿಸಿದ ಬಗೆ ಪೇಳೋ ದೈತ್ಯರುರುಬಿಗೆ ದೇವ ತತಿಗಳು ತಲ್ಲಣಿಸಿ ಮಿತ್ರ ಭಾವದ ಅವರ ಕೂಡಲಿಟ್ಟು ಇತ್ತಂಡದ ನಡುವೆ ಸುಧೆಯ ಬಡಿಸುವೆನೆಂದು ಮಿತ್ರವೇಷ ಧರಿಸಿ ಸುರರ ಸಲಹಿದಾ ಬಗೆಯೊ ||1|| ಶಿವಗೆ ವೃಕಾಸುರನು ಬೆಂಬಿಡದೆ ತನ್ನುರಿ ಕ ರವನಿಡುವೆನೆಂದು ಬರಲಾಗಲೂ ಅವನೀಶ ಭವಹರ ಕೇಶವ ನೀನೆ ಗತಿ ಎನಲೂ ಯುವತಿ ವೇಷವಧರಿಸಿ ಶಿವನ ಸಲುಹಿದ ಬಗೆಯೊ||2|| ಅಂದು ಮಾಡಿದ ಚರಿತೆ ಭಕ್ತಜನರು ಬಂದು ಒಂದು ದಿನ ನೋಡಿದವರಲ್ಲವೆಂದೂ ಇಂದು ಸತಿ

ಏನೆಲವೊ ದೇವ ವೈಕುಂಠನಾಥಾ Read More »

ಏನು ಸೇವಿಸಿದೆ ಗುರು ಯೆಲೊ ಮಾರುತಿ

ಏನು ಸೇವಿಸಿದೆ ಗುರು ಯೆಲೊ ಮಾರುತಿ | ಭಾನು ವಂಶೋತ್ತಮನೆ ನಿರುತ ಧಾರ್ಮಿಕನೆಂದು ಪೋತತನದಲಿ ಸೇರಿ ಅರ್ಕಜನ ಕರೆತಂದು ಮಾತಾಡಿಸಿ ಕೊಟ್ಟು ಮುದದಿ ಉದಧಿ | ಭೀತಿ ಇಲ್ಲದೆ ಹಾರಿ ಲಂಕಾಪುರವ ದಹಿಸಿ | ಸೀತೆ ವಾರ್ತೆಯ ತoದು ಪೇಳಿದಕೆ ಸುಫಲಾ ||1|| ಕೋತಿಗಳ ಕೂಡಿಕೊಂಡು ವನಧಿ ತೀರದಲಿಳಿದು ಭೂತಳವ ತಿರುಗಿ ಪ್ರತಾಪದಿಂದ | ಗೋತುರೋನ್ನತ ತಂದು ತಡಿಯದೆ ಪ್ರಖ್ಯಾತದಿ | ಸೇತುವಿಯ ಕಟ್ಟಿ ಕುಣಿದಾಡಿದದುಕೇನು ಫಲಾ ||2|| ಅಂದು ವಿಂಶತಿ ಹಸ್ತ ರಣದೊಳಗೆ ರಥವೇರಿ |

ಏನು ಸೇವಿಸಿದೆ ಗುರು ಯೆಲೊ ಮಾರುತಿ Read More »

ಏನು ಮರುಳಾದೆಮ್ಮ ಯೆಲ ಭಾರತೀ

ಏನು ಮರುಳಾದೆಮ್ಮ ಯೆಲ ಭಾರತೀ | ವಾನರ ಕುಲ ನಿಕರ ಶ್ರೇಷ್ಠನಾದವಗೆ ಕಣ್ಣಿಲ್ಲದಂಜನೆಯ ಉದರದೊಳು ಜನಿಸಿ | ನಿನ್ನ ತೊರೆದು ಬ್ರಹ್ಮಚಾರಿಯಾಗಿ || ಹಣ್ಣಿಗಾಗಿ ಹೋಗಿ ವನವ ಕಿತ್ತೀಡ್ಯಾಡಿ | ಉಣ್ಣ ಕರದರೆ ಎಂಜಲೆಡೆವೈದ ಕಪಿಗೆ ||1|| ಪುಟ್ಟಿದನು ಗುರುತಲ್ಪಕನ ವಂಶದಲಿ | ನಟ್ಟಿರುಳೆ ಒಬ್ಬ ಅಸುರಿಯ ಕೂಡಿದಾ || ಹೊಟ್ಟೆಗಾಗಿ ಪೋಗಿ ಭಿಕ್ಷದನ್ನವನುಂಡ | ಅಟ್ಟು ಹಾಕುವನಾದ ಕುಲವ ಕೊಂದವಗೆ ||2|| ಮಂಡೆ ಬೋಳನಾಗಿ ಭೂಮಂಡಲ ಚರಿಸುವ | ಕಂಡವರಾರು ಈತನ ಗುಣಗಳಾ || ಪುಂಡರೀಕಾಕ್ಷ

ಏನು ಮರುಳಾದೆಮ್ಮ ಯೆಲ ಭಾರತೀ Read More »

ಏನು ಪೇಳಲಿ ತೀರ್ಥಪತಿಯ ಮಹಿಮೆ

ಏನು ಪೇಳಲಿ ತೀರ್ಥಪತಿಯ ಮಹಿಮೆ ಮಾನವರಿಗೆ ಯಿಲ್ಲಿ ಮುಕ್ತಿ ಏಳಲವಯ್ಯಾ ಕಾಸಿಯೊಳು ಮರಣ ಮುಕ್ತಿಯೆಂದು ಪೇಳುವದು ದೇಶದೊಳು ಪುಸಿಯಲ್ಲ ಸಿದ್ಧವೆನ್ನಿ ಈಶನುಪದೇಶದಿಂದಲಿ ವಿಗತ ಜನನಾಗಿ ಶ್ರೀ ಶಕ್ತಿ ವೇಣಿಮಾಧವನ ಸನ್ನಿಧಿ ಗೈಯ್ವಾ ||1|| ನಿರುತ ವ್ಯಭಿಚಾರಿ ವಿಪ್ರನ ಕೆಡಿಸಿ ಕಾಸಿಯಲಿ ಇರಲು ಕಾಲಾಖ್ಯ ಉರಗನು ಕಚ್ಚಲು ಪರಮಭೀತಿಯಿಂದ ಅವಳ ವಸನವ ತಂದು ವರ ತ್ರಿವೇಣಿಯೊಳಗೆ ತೊಯಿಸಲು ಗತಿಸಾರ್ದರು ||2|| ಇಲ್ಲಿಗೆ ನಡೆತಂದು ಸ್ನಾನವಂದೆ ಮಾಡಲು ನಿಲ್ಲದೆ ಸನ್ಮುಕ್ತಿ ಧರನಾಗುವಾ ಬಲ್ಲಿದಾ ವಿಜಯವಿಠ್ಠಲವೇಣಿ ಮಾಧವನ ಸಲ್ಲಲಿತ ಪಾದವನು ಕಾಂಬ

ಏನು ಪೇಳಲಿ ತೀರ್ಥಪತಿಯ ಮಹಿಮೆ Read More »

ಏನು ಪವಮಾನಿ ಏನು ಪವಮಾನಿ

ಏನು ಪವಮಾನಿ | ಏನು ಪವಮಾನಿ | ಈ ನಿಧಿಯಲಿ ಬಂದು ನಿಂದ ಕಾರಣ | ಮಾಣದೆ ಪೇಳು ನಿ | ದಾನದಿಂದಲಿ | ಮಾನಸದಲಿ | ದಾನವಾರಿಯ | ಧ್ಯಾನ ಮಾಡುವ ಜಾಣ ಜಗದ ಪ್ರಾಣ ಸುಂದರಾ | ನಾನಾ ಮಹಿಮಾ ಗುರುವೆ ಕೇಸರಿನಂದನ ಪಾಶವಿನಾಶ ನಿರ್ದೋಷ | ದಾಸರನ ಪಾಲಿಸುವ ವಾನರೇಶನೆ ಭಾರತೀಶ ಈಶಾ | ಶೇಷಾದ್ಯರಿಗುಪದೇಶದ ಕರ್ತಾ | ಲೇಸು ಸದ್ಗುಣಗಣ ಕೋಶ ಸರಸಿಜಾಸನ ಪದವಿಗೆ ಸೇರುವಾತಾ || ದೇಶದೊಳು ಬಲುಭೂಷಣ ಪಾಕಶಾಸನ

ಏನು ಪವಮಾನಿ ಏನು ಪವಮಾನಿ Read More »

ಏನು ಕಾರಣ ಮಲಗಿದಿಯೊ

ಏನು ಕಾರಣ ಮಲಗಿದಿಯೊ ಶ್ರೀನಾಥ ರಘುಕುಲೋದ್ಭವ ದರ್ಭಶಯನಾ ಸೀತೆ ಪೋದಳು ಎಂದು ಚಿಂತೆಯಲಿ ಮಲಗಿದೆಯೊ ಸೇತುಗಟ್ಟುವದು ಅಸಾಧ್ಯವೆಂದು ಮಲಗಿದೆಯಾ ಕೋತಿಗಳ ಕೈಯಲೆ ರಣವಾಗದೆಂದು ಮಲಗಿದೆಯಾ ಪಾತಕ ಹರದೈತ್ಯ ಭಂಜಾ ತಿಳುಪುವದು ಜ್ಯೋತಿರ್ಮಯರೂಪ ದರ್ಭಶಯನಾ||1|| ವನವಾಸ ತಿರಗಲಾರೆನೆಂದು ಮಲಗಿದೆಯೊ ವನಧೀಶ ಮಾರ್ಗವನು ಕೊಡನೆಂದು ಮಲಗಿದೆಯೊ ದನುಜ ಬಲ್ಲಿದನೆಂಬೊ ವ್ಯಾಕುಲದಿ ಮಲಗಿದೆಯೊ ಜನನ ಮರಣರಹಿತ ರಾಮ ತಿಳುಹುವದು ಹನುಮ ವಂದಿತ ಪಾದ ಶ್ರೀದರ್ಭಶಯನಾ ||2|| ಅನಿಲಾರಿ ಅಹರಗೆ ಕರುಣಿಸಿ ಮಲಗಿದೆಯೊ ವನಜ ಸಂಭವಗೆ ನೀ ಒಲಿಯ ಬಂದು ಮಲಗಿದಿಯೊ ಮುನಿಗಳು

ಏನು ಕಾರಣ ಮಲಗಿದಿಯೊ Read More »

ಏನು ಕಾರಣ ಮತಿಯಿಲ್ಲ ಮನವೆ

ಏನು ಕಾರಣ ಮತಿಯಿಲ್ಲ ಮನವೆ ಹೀನಾಯವಾಡದಿರು ಪರರ ಗುಣಗಳ ಎಣಿಸಿ ಅವನ ಗೊಡವೆಯೇಕೆ ಅವನಾರು ನೀನಾರು | ಅವನ ಪಾಪಕ್ಕೆ ನೀ ಭಾಗಾದಿಯೆ | ಅವನುತ್ತಮನಾದಡವನೆ ಬದುಕಿದ ಕಾಣೊ ಅವ ಪುಣ್ಯಮಾಡಿದರೆ ಅವನ ಕುಲ ಉದ್ಧಾರ ||1|| ನಿನಗೆ ಕೊಡುವುದರೊಳಗೆ ಬೇಡ ಬಂದವನಲ್ಲ | ನಿನಗೆ ಅವನಿಗೆ ಏನು ಸಂಬಂಧವೊ | ಮನೆ ಒಡವೆ ವಸ್ತುಗಳ ಹಂಚಿಕೊಂಬುವುದಲ್ಲ | ಕ್ಷಣ ಕ್ಷಣಕೆ ಕ್ಲೇಶವನು ಮಾಡಿಕೊಂಬುದು ಸಲ್ಲ ||2|| ನಿನ್ನ ಗತಿ ಮಾರ್ಗಕ್ಕೆ ಅವನಡ್ಡ ಬಾಹನೆ | ನಿನ್ನಿಂದ

ಏನು ಕಾರಣ ಮತಿಯಿಲ್ಲ ಮನವೆ Read More »

ಏನು ಕಾರಣ ಬಂದೆ ಗಂಗೆ

ಏನು ಕಾರಣ ಬಂದೆ ಗಂಗೆ | ನಾನೇನು ಪುಣ್ಯವನು ಮಾಡಿದವನಲ್ಲ ಕಾಸೀಪುರದಿಂದಲಿ ದೇಶ ನೋಡಲು ಬಂದ್ಯೋ | ಬೀಸಿ ಬಿಸುಟುವಂಥ ಅಸ್ಥಿಗಾರದೆ ಒಂದ್ಯೋ | ದಾಸರ ಮಹಿಮೆಯನು ನೋಡುವೆನೆಂದು ಬಂದ್ಯೋ | ದೋಷವರ್ಜಿತ ವಾರಣಾಸಿ ಕಡಿಯದಲೆ | ಲೇಸಾಗಿ ತಿಳಿಪುವದು ಭೀಷ್ಮನ ಜನನೀ ||1|| ತಿಲನೀರು ಕುಡಿದು ಧರಿಸಲಾರದೆ ಬಂದ್ಯೋ | ಮಲಜನರ ದೋಷವನು ಕಳೆವೆನೆಂದು ಬಂದ್ಯೋ | ಕಲಿಯುಗಕೆ ಈ ಕೃಷ್ಣಾ ಅಧೀನಳೆಂದು ಬಂದ್ಯೋ | ಸುಲಭ ತ್ರಿದದೇಶ್ವರಿ ಗಂಗೆ ತಡೆಯದಲೆ | ನಿಲಜಾಲೆ ತಿಳಿಪುವದು

ಏನು ಕಾರಣ ಬಂದೆ ಗಂಗೆ Read More »

ಏಕಾದಶಿ ವ್ರತ ಶೋಧಿಸಿ

ಏಕಾದಶಿ ವ್ರತ ಶೋಧಿಸಿ ಸಾಧಿಸಿ ಏಕಭಕುತಿಯಿಂದ ಮಾಡಿರೊ ಪಾಡಿರೊ | ಲೋಕದೊಳಗೆ ಇದೆ ಬೀರುತಾ ಸಾರುತಾ ಶ್ರೀಕಾಂತನ ವೊಲಿಸಿ ದಶಮಿ ಏಕಾದಶಿ ದ್ವಾದಶಿ ದಿನತ್ರಯ | ವಸುಧಿಯೊಳಗೆ ಮಹಾವ್ರತವೆಂದು ತಿಳಿದು ತ್ರಿ | ದಶರೆಲ್ಲ ಕೈ ಕೊಂಡು ಮಾಡಿದರಂದು ರಂ | ಜಿಸುವ ಸತ್ಕರ್ಮದಲ್ಲಿ | ಬಿಸಜನಾಭನು ಲಕುಮಿಗೆ ಪೇಳಿದ ವ್ರತ | ಹಸನಾಗಿ ಬೊಮ್ಮಗೆ ಅರಹು ಮಾಡಲು ದೇವ | ಋಷಿಗೆ ಅಜನು ಪೇಳಲಾ ಮುನಿ ಬೀರಿದಾ ದಶ ದಿಕ್ಕಿನೊಳಗೊಂದು ||1|| ಉದಯಕಾಲದೆಲೆದ್ದು ಸಂಸಾರಯಾತ್ರೆ ಎಂದು

ಏಕಾದಶಿ ವ್ರತ ಶೋಧಿಸಿ Read More »

ಏಕಾಂತದಲಿ ಬಂದು ಮಾತು ನುಡಿದೆ

ಏಕಾಂತದಲಿ ಬಂದು ಮಾತು ನುಡಿದೆ ಶ್ರೀ | ಕಾಂತ ನಿನಗಿದು ಸುಲಭವಾಗಿದೆ ನೋಡು ಪರಧನವನಪಹರಿಸಿಕೊಂಡು ಬೆಳೆದು ಇದ್ದ | ವರ ಮನೆಯೊಳಗಡಲೇತÀಕೆ | ನಿರುತ ಎನ್ನ | ಹೃದಯವೆಂಬೊ ಗಾಡಾಂಧಕಾರ | ಭರಿತವಾಗಿದೆ ಇಲ್ಲಿ ಅಡಗಬಾರದೆ ಬಂದು ||1|| ಕೇವಲ ಹಕ್ಕಲದ ವನದೊಳು ಪೊಕ್ಕು ಬೇಟೆ | ದೇವ ಆಡುವರೆ ನೀ ಹುಡಿಕಿ ಹುಡಿಕಿ| ಕಾವಲಾರಣ್ಯ ಇಲ್ಲಿ ವಿಂಡೂ ತುಂಬಿದೆ | ಸಾವಧಾನದಿ ಬೇಟೆ ಆಡÀಬಾರದೆ ಬಂದು ||2|| ವೈಕುಂಠ ಮೂರು ಸ್ಥಾನದಲಿ ಮುಕ್ತರಿಗೆ | ಬೇಕಾದದೀಯಾಬೇಕು

ಏಕಾಂತದಲಿ ಬಂದು ಮಾತು ನುಡಿದೆ Read More »

ಒಡವೆ ಹೋಯಿತು ಮನ ದೃಢವಾಯಿತು

ಒಡವೆ ಹೋಯಿತು ಮನ ದೃಢವಾಯಿತು ಹಿಡಿದರೋಡುವ ಕಳ್ಳ ಬಿಡದೆ ಕದ್ದುಕೊಂಡು ಹೋದ ಆರು ಜೋಡಿನ ಓಲೆಯಿತ್ತು ಮೂರು ಮುತ್ತಿನ ಮೂಗುತಿಯಿತ್ತುಚಾರುತರದ ಇಪ್ಪತ್ನಾಲ್ಕೆಳೆಯ ಸರವು ಒಂದಿತ್ತುಈರೈದು ತಾಳಿಗಳಿತ್ತು ಬಿರುದಿನ ಕಪ್ಪೆಂಟಿತ್ತುದಾರಿ ನೋಡಿಕೊಂಡು ಇದ್ದ ಛಾಯನೆಂಬ ಕಳ್ಳ ಕದ್ದ ||1|| ಎಪ್ಪತ್ತೆರಡು ಸಾವಿರ ಸೂತ್ರದ ಹಸ್ತಕಟ್ಟು ಎರಡಿತ್ತುಕಪ್ಪು ಬಿಳುಪು ಕೆಂಪು ವರ್ಣದ ಪದಕ ಒಂದಿತ್ತುಒಪ್ಪವಿತ್ತ ಹಸ್ತಕಡಗ ಆಶಾಪಾಶವೆರಡಿತ್ತುಒಪ್ಪವನ್ನು ಸಾಧಿಸಿ ನೇತ್ರನೆಂಬ ಕಳ್ಳ ಕದ್ದ ||2|| ಹುಟ್ಟು ಸಾವು ಎರಡು ಎಂಬ ಘಟ್ಟಿ ತೂಕದ ನಗವಿತ್ತುಕಷ್ಟ ಸುಖ ಕರ್ಮಗಳೆಂಬ ಸಂಚಿಗಳಿತ್ತುಅಷ್ಟು ಇಷ್ಟು

ಒಡವೆ ಹೋಯಿತು ಮನ ದೃಢವಾಯಿತು Read More »

ಒಂಬತ್ತು ಹೂವಿಗೆ ಒಂದೇ ನಾಳವು ಚಂದಮಾಮ 

ಒಂಬತ್ತು ಹೂವಿಗೆ ಒಂದೇ ನಾಳವು ಚಂದಮಾಮ ತುಂಬಿ ನಾಳತುದಿ ತುಂಬಿ ಭಾನು ಪ್ರಭೆ ಚಂದಮಾಮ ಕದರು ಗಾತ್ರ ಕಂಬ ತೆಕ್ಕೆಗಾತರ ಹೂವು ಚಂದಮಾಮಆನೆಗಾತರ ಕಾಯಿ ಒಂಟೆಗಾತರ ಹಣ್ಣು ಚಂದಮಾಮ ||1|| ಕಾಲಿಲ್ಲದಾತನು ಹತ್ತಿದನು ಮರವನು ಚಂದಮಾಮಕೈಯಿಲ್ಲದಾತನು ಕೊಯ್ದನಾ ಹಣ್ಣನು ಚಂದಮಾಮ ||2|| ನೆತ್ತಿಲ್ಲದಾತನು ಹೊತ್ತನು ಹಣ್ಣ ಚಂದಮಾಮತಳವಿಲ್ಲದಾ ಗೂಡೆಯಲಿಳಿಸಿದನಾ ಹಣ್ಣ ಚಂದಮಾಮ ||3|| ಮಾರ್ಗ ತಪ್ಪಿ ಮಾರ್ಗ ಹಿಡಿದು ನಡೆದರು ಚಂದಮಾಮಸದ್ದಿಲ್ಲದಾ ಸಂತೇಲಿಳಿಸಿದರಾ ಹಣ್ಣ ಚಂದಮಾಮ ||4|| ರೊಕ್ಕವಿಲ್ಲದಾತ ಕೊಂಡನಾ ಹಣ್ಣ ಚಂದಮಾಮಮೂಗಿಲ್ಲದಾತ ಮೂಸಿದನಾ ಹಣ್ಣ ಚಂದಮಾಮ ||5|| ಕಣ್ಣಿಲ್ಲದಾತನು ಕೆಂಪಾನೆ ಹಣ್ಣೆಂದ

ಒಂಬತ್ತು ಹೂವಿಗೆ ಒಂದೇ ನಾಳವು ಚಂದಮಾಮ  Read More »

ಏನೆಂದು ನುಡಿವೆ ನಿನ್ನವರಂತೆ

ಏನೆಂದು ನುಡಿವೆ ನಿನ್ನವರಂತೆ ಕೇಡು ಬುದ್ಧಿ ಎನ್ನೊಳಗಿಲ್ಲ – ಗುಣಹೀನರಲ್ಲದ ಈ ನರರ ಪಾಲಿಪ ಬುದ್ಧಿ ನಿನ್ನೊಳಗಿಲ್ಲ ತರಳ ಪ್ರಹ್ಲಾದನಂದದಿ ನಿನ್ನ ರೂಪನು ಕೆಡಿಸಲಿಲ್ಲನರನಂತೆ ಬಂಡಿಬೋವನ ಮಾಡಿ ನಿನ್ನ ದುಡಿಸಲಿಲ್ಲಪರಾಶರನಂತೆ ನದಿಯೊಳಿದ್ದ ಹೆಣ್ಣ ಕೂಡಲಿಲ್ಲಗರುಡನಂದದಿ ನಿನ್ನ ಪೊತ್ತು ತಿರುಗಲಿಲ್ಲ ||1|| ಸನಕಾದಿ ಮುನಿಯಂತೆ ವನದೊಳು ಅನುದಿನ ಚರಿಸಲಿಲ್ಲಬಿನಗು ಬೇಡತಿಯಂತೆ ಸವಿದುಂಡ ಹಣ್ಣ ತಿನಿಸಲಿಲ್ಲಇನಕುಲ ಕಪಿಯಂತೆ ವಂಚಿಸಿ ವಾಲಿಯ ಕೊಲಿಸಲಿಲ್ಲಘನ ಪಾತಕದಜಮಿಳನಂತೆ ನಾರಗ ಎನ್ನಲಿಲ್ಲ||2|| ಕದನದೊಳು ವಿಭೀಷಣನಂತೆ ಅಣ್ಣನ ಕೊಲಿಸಲಿಲ್ಲವಿದುರನ ತೆರನಂತೆ ಸದನವ ಮುರಿದು ನಿನ್ನ ಬೆರೆಯಲಿಲ್ಲಮದಗಜದಂತೆ ಮಕರಿಗೆ ಸಿಲ್ಕಿ ಒರಲಲಿಲ್ಲಗದರಿ

ಏನೆಂದು ನುಡಿವೆ ನಿನ್ನವರಂತೆ Read More »

ಏನೆಂದು ಕೊಂಡಾಡಿ ಸ್ತುತಿಸಲೋ

ಏನೆಂದು ಕೊಂಡಾಡಿ ಸ್ತುತಿಸಲೋ ದೇವನಾನೇನು ಬಲ್ಲೆ ನಿನ್ನ ಮಹಿಮೆಗಳ ಮಾಧವ ಹರಿಮುಕುಂದನು ನೀನು ನರಜನ್ಮ ಹುಳು ನಾನುಪರಮಾತ್ಮನು ನೀನು ಪಾಮರನು ನಾನುಗರುಡ ಗಮನನು ನೀನು ಮರುಳು ಪಾಪಿಯು ನಾನುಪರಂಜ್ಯೋತಿಯು ನೀನು ದುರುಳ ತಿರುಕನು ನಾನು|| 1|| ವಾರಿಧಿಶಯನನಾದ ಕಾರುಣ್ಯನಿಧಿ ನೀನುಘೋರದಿಂದಿಹ ಕಾಮಿಕ್ರೋಧಿ ನಾನುಈರೇಳು ಭುವನದೊಳು ಇರುವ ಮೂರುತಿ ನೀನುದೂರಿ ನಿನ್ನನು ಬೈವ ದುಷ್ಟ ನಾನು||2|| ಅಣುರೇಣು ತೃಣಗಳಲಿ ಪರಿಪೂರ್ಣನು ನೀನುಕ್ಷಣಕ್ಷಣಕೆ ಅವಗುಣದ ಕುಕರ್ಮಿ ನಾನುವಾಣಿಯರಸನ ಪೆತ್ತ ವೈಕುಂಠಪತಿ ನೀನುಕ್ಷಣಭಂಗುರ ತನುವಿನ ಗೊಂಬೆ ನಾನು ||3|| ಕಂಬದಲಿ ಬಂದ ಆನಂದ ಮೂರುತಿ ನೀನುನಂಬಿಕೆಯಿಲ್ಲದ

ಏನೆಂದು ಕೊಂಡಾಡಿ ಸ್ತುತಿಸಲೋ Read More »

ಏನೆಂದಳೇನೆಂದಳೋ  ನಿನ್ನೊಳು ಸೀತೆ

ಏನೆಂದಳೇನೆಂದಳೋ ನಿನ್ನೊಳು ಸೀತೆ ಹನುಮಯ್ಯ ಜನಕನರಮನೆಯಲ್ಲಿ ಜನಿಸಿ ಸುಖದಲ್ಲಿರಲುಧನು ಮುರಿದು ಕೈಹಿಡಿದು ತನ್ನಘನ ಪದವಿಯನು ಬಿಟ್ಟು ವನವ ಸೇರಿದನೆಂದುವನಿತೆ ತಪಿಸುತೆ ಮನದಿ ನೊಂದು|| 1|| ಕುರುಹಿನುಂಗುರವನು ತರಳಾಕ್ಷಿಗಿತ್ತಾಗತಿರುಳಿಗಿಂತಧಿಕವೇ ಕರಟವೆಂದುಬೆರಳಿಂದ ಚಿಮ್ಮಿದಳೆ ಅಶೋಕವನದಾಚೆಗೆನಿರುತ ಸಂತಾಪದಲಿ ಮನದಿ ನೊಂದು ||2|| ಸೇತುವೆಯ ಕಟ್ಟಿ ಸಿಂಧುಗೆ ವಿಭೀಷಣಾಗ್ರಜಾತ ಲಂಕಾಧಿಪನ ವಧಿಸಿಸೀತೆಯನು ಸೆರೆಯಿಂದ ಬಿಡಿಸಿದ್ದೆ ಆದರೆನಾಥಾದಿಕೇಶವಗೆ ಬಲು ಬಿರುದು ಎಂದು||3||

ಏನೆಂದಳೇನೆಂದಳೋ  ನಿನ್ನೊಳು ಸೀತೆ Read More »

ಏನೆ ಮನವಿತ್ತೆ ಲಲಿತಾಂಗಿ

ಏನೆ ಮನವಿತ್ತೆ ಲಲಿತಾಂಗಿ ಅಸ-ಮಾನ ಗೋವಳ ಕುಲವಿಲ್ಲದವನೊಳು ಮಗಗೆ ಮೈದುನನಾದ ಮಗಳಿಗೆ ಪತಿಯಾದ ಮಗಳಿಗಳಿಯನಾದ ಅಳಿಯಗಳಿಯನಾದ ||1|| ಮಗಳ ಮಗಗೆ ಮೈದುನನಾಗಿ ಮಾವನಜಗವರಿಯಲು ಕೊಂದ ಕುಲಗೇಡಿ ಗೋವಳ ||2|| ಅತ್ತೆಗೆ ವಲ್ಲಭನಾದ ಭೃತ್ಯರಿಗಾಳಾದಚಿತ್ತ ಒಲಿದು ಚೆನ್ನ ಆದಿಕೇಶವನೊಳು ||3||

ಏನೆ ಮನವಿತ್ತೆ ಲಲಿತಾಂಗಿ Read More »

ಏನು ಮಾಡಲಯ್ಯ

ಏನು ಮಾಡಲಯ್ಯ ಬಯಲಾಸೆ ಬಿಡದು ಮಾನವ ಮೃಗೇಂದ್ರ ರಾಮಚಂದ್ರ ರಕ್ಷಿಸಯ್ಯ ಜ್ಯೋತಿರ್ಮಯವಾದ ದೀಪದ ಬೆಳಕಿಗೆ ತಾನುಕಾತರಿಸಿ ಬೀಳುವ ಪತಂಗದಂದದಲಿಧಾತುಗೆಟ್ಟು ಬೆಳ್ಳಿ ಬಂಗಾರದಲಿ ಮೆರೆವಧೂರ್ತೆಯರ ನೋಡುವೀ ಚಕ್ಷುರಿಂದ್ರಿಯಕೆ ||1|| ಅಂದವಹ ಸಂಪಗೆಯ ಅರಳ ಪರಿಮಳವುಂಡುಮುಂದುವರಿಯದೆ ಬೀಳ್ವ ಮಧುಪನಂತೆಸಿಂಧೂರ ಗಮನೆಯರ ಸಿರಿಮುಡಿಯೊಳಿಪ್ಪ ಪೂಗಂಧ ವಾಸಿಸುವ ಘ್ರಾಣೇಂದ್ರಿಯಕೆ ||2|| ಗಾಣದ ತುದಿಯೊಳಿಪ್ಪ ಭೂನಾಗನಂ ಕಂಡುಪ್ರಾಣಾಹುತಿಯೆಂದು ಸವಿವ ಮೀನಿನಂತೆಏಣಾಕ್ಷಿಯರ ಚೆಂದುಟಿಯ ಸವಿಯ ಸವಿಸವಿದುಜಾಣತನದಲಿ ನಲಿವ ಜಿಹ್ವೇಂದ್ರಿಯಕೆ ||3|| ದಿಮಿದಿಮ್ಮಿ ಘಣಘಣಾ ಎಂಬ ಘಂಟೆಯ ರವಕೆಜುಮುಜುಮನೆ ಬೆಮೆಗೊಳ್ಳುವ ಹರಿಣದಂತೆರಮಣಿಯರ ರಂಜಕದ ನುಡಿಗಳನು ಕೇಳಿ ಪ್ರ-ಣಮವೆಂದು

ಏನು ಮಾಡಲಯ್ಯ Read More »

ಏನು ಬರುವುದೊ ಸಂಗಡೇನು ಬರುವುದೊ 

ಏನು ಬರುವುದೊ ಸಂಗಡೇನು ಬರುವುದೊ ದಾನ ಧರ್ಮ ಮಾಡಿ ಬಹು ನಿಧಾನಿ ಎನಿಸಿಕೊಳ್ಳೊ ಮನುಜ ಹೆಂಡರಿಲ್ಲ ಮಕ್ಕಳಿಲ್ಲ ಮಂಡೆ ತುಂಬ ಬಂಧುಬಳಗಕಂಡು ಬಿಡಿಸಿಕೊಂಬರಾರೊ ದುಂಡ ಯಮನ ದೂತರೆಳೆಯೆಬಂಡಿ ತುಂಬ ಇದ್ದ ಧನವು ಹಿಂದೆ ಉಳಿವುದಲ್ಲೊ ನಿನ್ನಅಂಡಿಕೊಂಡು ಬರುವ ವಸ್ತು ಕೀರ್ತಿ ಅಪಕೀರ್ತಿ ಎರಡೆ||1|| ಎನ್ನದೆಂದು ತನ್ನದೆಂದು ಹೊನ್ನು ಹೆಣ್ಣು ಮಣ್ಣಿಗಾಗಿಬನ್ನಪಟ್ಟು ಬಾಯಿಬಿಡುವೆ ಬರಿದೆ ಮೋಹದಿಚೆನ್ನ ಮನದಿ ಪರಹಿತಾರ್ಥ ಮಾಡಿ ಪುಣ್ಯಪಡೆಯೊ ನೀನುಇನ್ನು ಮುಂದೆ ಕಿತ್ತು ತಿಂಬ ಕೂಪದಲ್ಲಿ ಕೆಡಲು ಬೇಡ ಮನುಜ||2|| ಬತ್ತಲಿಂದ ಬರುತ್ತಿಹರು ಬತ್ತಲಿಂದ ಹೋಗುತಿಹರುಕತ್ತಲೆ ಕಾಲವನು ಬೆಳಕು

ಏನು ಬರುವುದೊ ಸಂಗಡೇನು ಬರುವುದೊ  Read More »

ನು ಕಾರಣ ಬಾಯಿ ತೆರೆದಿ – ಪೇಳೆಲೊ

ಏನು ಕಾರಣ ಬಾಯಿ ತೆರೆದಿ – ಪೇಳೆಲೊದಾನವಾಂತಕ ಅಹೋಬಲ ನಾರಸಿಂಹನೆ ನಿಗಮ ಚೋರನ ಕೊಲಲು ತೆರೆದೆಯೋ ಈ ಬಾಯನಗವ ಬೆನ್ನಲಿ ಹೊತ್ತು ನಡುಗಿ ತೆರೆದೆಯೋ ಬಾಯ ಭೂ-ಮಿಗಳ್ಳನ ಕೊಂದು ಬಳಲಿ ತೆರೆದೆಯೋ ಬಾಯಜಗವರಿಯೆ ಪೇರುರವಿರಿದ ಪ್ರಹ್ಲಾದವರದಅಹೋಬಲ ನಾರಸಿಂಹನೆ||1|| ಬಲಿಯ ದಾನವ ಬೇಡಲೆಂದು ತೆರೆದೆಯೊ ಬಾಯಛಲದಿಂದ ಕ್ಷತ್ರಿಯರ ಕೊಲಲು ತೆರೆದೆಯೊ ಬಾಯಕುಲಸತಿಯ ಅರಸಿ ಕಾಣದೆ ತೆರೆದೆಯೊ ಬಾಯಮರೆತು ಮಾವನ ಕೊಂದು ನಿಂದೆ – ಇಂಥಇಳಿಯ ಬಾರದ ಭೂಮಿಗಿಳಿದ ನಾರಸಿಂಹ||2|| ನಾರಿಯರ ಚೆಲ್ವಿಕೆಯ ನೋಡಿ ತೆರೆದೆಯೊ ಬಾಯಏರಿ ಅಶ್ವವ ಮೆಟ್ಟಿ

ನು ಕಾರಣ ಬಾಯಿ ತೆರೆದಿ – ಪೇಳೆಲೊ Read More »

ಏನು ಇಲ್ಲದ ಎರಡು ದಿನದ ಸಂಸಾರ

ಏನು ಇಲ್ಲದ ಎರಡು ದಿನದ ಸಂಸಾರಜ್ಞಾನದಲ್ಲಿ ದಾನಧರ್ಮವ ಮಾಡಿರಯ್ಯ ಹಸಿದು ಬಂದವರಿಗೆ ಅಶನವೀಯಲು ಬೇಕುಶಿಶುವಿಗೆ ಪಾಲ್ಬೆಣ್ಣೆಯನುಣಿಸಬೇಕುಹಸನಾದ ಭೂಮಿಯನು ಧಾರೆಯೆರೆಯಲು ಬೇಕುಪುಸಿಯಾಡದಲೆ ಭಾಷೆ ನಡೆಸಲೇ ಬೇಕು1 ಕಳ್ಳತನಗಳ ಮಾಡಿ ಒಡಲ ಹೊರೆಯಲು ಬೇಡಕುಳ್ಳಿರ್ದ ಸಭೆಯೊಳಗೆ ಕುತ್ಸಿತವು ಬೇಡಒಳ್ಳೆಯವ ನಾನೆಂದು ಬಲು ಹೆಮ್ಮೆಪಡಬೇಡಬಾಳ್ವೆ ಸ್ಥಿರವೆಂದು ನೀ ನಂಬಿ ಕೆಡಬೇಡ 2 ದೊರೆತನವು ಬಂದಾಗ ಕೆಟ್ಟುದ ನುಡಿಯಬೇಡಸಿರಿ ಬಂದ ಕಾಲಕ್ಕೆ ಬಲು ಮೆರೆಯಬೇಡಸಿರಿವಂತ ಶ್ರೀ ಕಾಗಿನೆಲೆಯಾದಿಕೇಶವನಚರಣ ಕಮಲವ ಸೇರಿ ಸುಖಿಯಾಗು ಮನುಜ 3 * ಕೀರ್ತನೆ ಪುರಂದರದಾಸರ ಅಂಕಿತದಲ್ಲೂ ದೊರೆತಿದೆ.

ಏನು ಇಲ್ಲದ ಎರಡು ದಿನದ ಸಂಸಾರ Read More »

ಏನಿದೆತ್ತಣ ಬಯಕೆ ಎಲೊ

ಏನಿದೆತ್ತಣ ಬಯಕೆ ಎಲೊ ಮಂಕು ಜೀವನೀನು ಅರಿತರೆ ಪೇಳು ನಿಜವನೆನಗೆ ಎಂಟೆರಡು ಮಾರುತರು ಎಡೆಎಡೆಗೆ ಬರುತಿರಲುನಂಟರೈವರು ಕೂಡಿ ಆಕ್ರಮಿಸುತಿಹರುದಾಂಟುವುದು ಅಸದಳವೊ ಎರಡೊಂದು ಬಲೆಗಳಲಿಕಂಟಕದಿ ಬಲು ತಾಪದಿಂದ ಬಳಲುವರು ||1|| ಆರೆರಡು ದಂತಿಗಳು ದಾರಿಯೊಳು ನಿಂತಿಹವುಆರು ಮೂರು ತುರುಗಗಳು ದಾರಿಯನು ಕೊಡವುಮೂರೆರಡನೀಡಾಡಿ ತೋರುವುದು ಎನ್ನಾಣೆಸಾರಿ ಏನೇನಹುದು ಎಂಬುದನು ನೋಡು ||2|| ಪರರನು ನಿಂದಿಸದೆ ಪರಯೋಗ್ಯ ನೀನಾಗಿಪರರ ಪಾಪಗಳ ನೀ ಕಟ್ಟಿಕೊಳದೆಪರಮಾತ್ಮ ಕಾಗಿನೆಲೆಯಾದಿಕೇಶವರಾಯಪರಹಿತಕೆ ಸಖನೆಂದು ಭಜಿಸೆಲೊ ಮನುಜ ||3||

ಏನಿದೆತ್ತಣ ಬಯಕೆ ಎಲೊ Read More »

ಏಣನಯನೆ ಏಣಭೋಜ ಮಧ್ಯಳೆ ತೋರೆ

ಏಣನಯನೆ ಏಣಭೋಜ ಮಧ್ಯಳೆ ತೋರೆಏಣಾಂಕ ಬಿಂಬ ಮುಖಿಏಣವೈರಿಯ ವೈರಿಯ ಶಿರಕುಚಯುಗೆ ಕರೆತಾರೆಏಣಾಂಕಧರ ಸಖನ ಚಳಿಯ ಮಗಳ ತಾಯಳಿಯನ ತನಯನಇಳುಹದೆ ಪೊತ್ತಿಹನಬಳಿದುಣ್ಣಲೀಸದೆ ಸೆಳೆದುಂಡನಣ್ಣನಸಲಹಿದಾತನ ಸುತನಕಳದೊಳು ತಲೆ ಚೆಂಡಾಡಿದ ಧೀರನಬಳಿ ವಾಘೆಯನು ಪಿಡಿದನಇಳೆಯ ಮೊರೆಯನು ಕೇಳಿ ಖಳರುತ್ತಮಾಂಗವನಿಳುಹಿದಾತನ ತೋರೆಲೆ 1 ಇಪ್ಪತ್ತುನಾಲ್ಕು ನಾಮಗಳೊಳಗೇಳನುತಪ್ಪದೆಣಿಸಿ ಕಳೆದುಬಪ್ಪ ಎಂಟನೆಯ ನಾಮದ ಪೆಸರಿನೊಳ್‍ಇಪ್ಪ ಕಡೆಯ ಬೀಡಲಿಅಪ್ಪಜಯದರಸನ ಕೂಡೆ ಜನಿಸಿದಕಪ್ಪು ವರ್ಣದ ಮೈಯಳಅಪ್ಪನ ಮಿತ್ರನ ಮಗನೆಂಬ ಬೊಮ್ಮನಬೊಪ್ಪನ ತೋರೆನಗೆ2 ಬಿಡುಗಣ್ಣ ಬಾಲೆ ತನ್ನೊಡೆಯನ ನುಡಿಗೇಳಿದೃಢದಿಂದ ನಡೆದು ಬಂದುಜಡಿವ ಕೋಪಕೆ ಶಾಪ ಪಡೆದುಕೊಂಡಾಕ್ಷಣನುಡಿದ ದಿನವು ದಾಟಲುಪಡೆಯನೆಲ್ಲವ ನಡು

ಏಣನಯನೆ ಏಣಭೋಜ ಮಧ್ಯಳೆ ತೋರೆ Read More »