ಎರೆಯಂತೆ ಕರಕರಗಿ, ಮಳಲಂತೆ ಜರಿಜರಿದು,

ಎರೆಯಂತೆ ಕರಕರಗಿ, ಮಳಲಂತೆ ಜರಿಜರಿದು, ಕನಸಿನಲ್ಲಿ ಕಳವಳಿಸಿ, ಆನು ಬೆರಗಾದೆ. ಆವಿಗೆಯ ಕಿಚ್ಚಿನಂತೆ ಸುಳಿಸುಳಿದು ಬೆಂದೆ ಆಪತ್ತಿಗೆ ಸಖಿಯರನಾರನೂ ಕಾಣೆ. ಅರಸಿ ಕಾಣದ ತನುವ, ಬೆರಸಿ ಕೂಡದ ಸುಖವ, ಎನಗೆ ನೀ ಕರುಣಿಸಾ, ಚೆನ್ನಮಲ್ಲಿಕಾರ್ಜುನಾ.

ಎರೆಯಂತೆ ಕರಕರಗಿ, ಮಳಲಂತೆ ಜರಿಜರಿದು, Read More »

ಎರದ ಮುಳ್ಳಿನಂತೆ ಪರಗಂಡರೆನಗವ್ವಾ.

ಎರದ ಮುಳ್ಳಿನಂತೆ ಪರಗಂಡರೆನಗವ್ವಾ. ಸೋಂಕಲಮ್ಮೆ ಸುಳಿಯಲಮ್ಮೆ ನಂಬಿ ನಚ್ಚಿ ಮಾತಾಡಲಮ್ಮೆನವ್ವಾ. ಚೆನ್ನಮಲ್ಲಿಕಾರ್ಜುನನಲ್ಲದ ಗಂಡರಿಗೆ ಉರದಲ್ಲಿ ಮುಳ್ಳುಂಟೆಂದು ನಾನಪ್ಪಲಮ್ಮೆನವ್ವಾ.

ಎರದ ಮುಳ್ಳಿನಂತೆ ಪರಗಂಡರೆನಗವ್ವಾ. Read More »

ಎಲ್ಲೊ ಎಲ್ಲೊ ಎನ್ನ ಸಾಲವೆತ್ತದೊ

ಎಲ್ಲೊ ಎಲ್ಲೊ ಎನ್ನ ಸಾಲವೆತ್ತದೊ | ನಿಲ್ಲೊ ನಿಲ್ಲೊ ನಿನ್ನ ಕಂಡ ಮ್ಯಾಲಕೆ ಬಿಡೆ ಮೀನ ನಡೆದ ಹೆಜ್ಜೆಗಳು ಕಾಣದಂತೆ ಪೋಗಿ ನಡಗಿದೆ | ಬೆಟ್ಟದಡಿಯ ಅಂದು ಒಡನೆ ಮಣ್ಣುಕಚ್ಚಿ ಬಾಯಿದೆರದು ಆ | ರ್ಭಟಿಸಿದರೆ ನಿನ್ನ ಪೋಗಗೊಡುವೆವೇನೊ ||1|| ಬಲು ಉದ್ದ ಬೆಳೆದರೆ ನ್ಯಾಯದಿ ಸೋಲಿಸಿ | ಹೆಗ್ಗಲಿದಾ ಗಿಡದ ಬೇರು ಕಡಿಸುವೆನೊ | ಕಲಕಾಲಾ ಉಪವಾಸ ಮಾಡಲು ನಮಗೇನು | ಕಳವು ಹಾದರದಲ್ಲಿ ನಿಸ್ಸೀಮ ಪುರುಷನೇ ||2|| ಮಾಣಿಯ ತೋರಿಸಿದರೆ ನಿನಗಾರುರಂಜೋರೋ | ಪಾಣಿಯೊಳಗೆ

ಎಲ್ಲೊ ಎಲ್ಲೊ ಎನ್ನ ಸಾಲವೆತ್ತದೊ Read More »

ಎಲ್ಲಿದ್ದರೇನು ಶ್ರೀ ಹರಿಗಲ್ಲದವನು

ಎಲ್ಲಿದ್ದರೇನು ಶ್ರೀ ಹರಿಗಲ್ಲದವನು ನಿಲ್ಲದೆ ಜಪಿಸಿದರೆ ಸಲ್ಲುವನೆ ಸದ್ಗತಿಗೆ ಕಪ್ಪೆ ಕಮಲದ ಬಳಿಯೆ ತಪ್ಪದೆ ಅನುಗಾಲ | ಇಪ್ಪುದೈ ಒಂದು ಅರೆ ಘಳಿಗೆ ಬಿಡದೆ || ಬಪ್ಪದಿಂದಲಿ ಅದರ ಪರಿಮಳದ ಸೊಬಗ ನೀ- | ಕಪ್ಪೆ ವಾಸನೆಗೊಂಡು ಹರುಷಪಡಬಲ್ಲುದೆ ||1|| ಹಾಲುಕೆಚ್ಚಲು ಬಳಿಯೆ ತೊಣಸಿ ಹತ್ತಿಕೊಂಡು | ಕಾಲವನು ಕಳೆವ ಬಗೆ ಬಲ್ಲಿರೆಲ್ಲ || ವೇಳೆವೇಳೆಗೆ ಹಸುವ ಕರೆದುಂಬ ನರನಂತೆ | ಕೀಳು ತೊಣಸಿಯು ಉಂಡು ಹರುಷಪಡಬಲ್ಲ್ಲುದೆ||2|| ತುಳಸಿ ಸಾನ್ನಿಧ್ಯದಲಿ ನೀರುಳ್ಳಿಯನು ಹಾಕಿ | ಹೊಲಸು ಹೋಗ್ವುದೆ

ಎಲ್ಲಿದ್ದರೇನು ಶ್ರೀ ಹರಿಗಲ್ಲದವನು Read More »

ಎಲ್ಲಿ ಸುವರಗಳು ಇಲ್ಲದಿದ್ದರೆ

ಎಲ್ಲಿ ಸುವರಗಳು ಇಲ್ಲದಿದ್ದರೆ ಇವ | ನಲ್ಲದೆ ಮತ್ತಾರಾ | ವಲ್ಲಿ ಕಾಣದೆ ಪೋದೆ ಸಾರುವ ಶರೀರ ಧರಿಸಿ ಬಾಳಿದ ಮಹಾ | ಭಾರವಾಗಿದ್ದ ಪಾಷಾಣವ ಪೊತ್ತವ | ಗೊರುವ ನೆಲನಂದು ಕಾಷ್ಟದಿಂದಲಿ ಬಂದ | ಹಾರುವನಾಗಿ ತಿರದುಂಡು ಕುಲಧರ್ಮ | ಮೀರಿ ನಡೆದವ ಉಪವಾಸದವÀನಿಂದ | ಊರ ಎಂಜಲಿಗೆ ಹೇಸದೆ ಓಡಾಡಿದವ | ನಾರಿಯರ ವ್ರತ ಕೆಡಿಸಿ ರಾವುತನಾಗಿ | ಹಾರಾಡಿವನು ಇವ ಹಲವು ಕಾಯ | ಆರಿಂದ ಜನಿತನಿವ ನೋಡಲಾಗಿ | ಧಾರುಣಿಯೊಳಗಿದ್ದವ ಸರ್ವರನ್ನ

ಎಲ್ಲಿ ಸುವರಗಳು ಇಲ್ಲದಿದ್ದರೆ Read More »

ಎಲ್ಲಿ ಭಯಗಳು ಹರಿಯ ಭಕುತರಿಗೆ ಇಲ್ಲ

ಎಲ್ಲಿ ಭಯಗಳು ಹರಿಯ ಭಕುತರಿಗೆ ಇಲ್ಲ ಇಲ್ಲವೋ ಕಾಣೋ ಎಂದಿಗಾದರು ಮರುಳೆ ಹುಲಿ ಇಲಿಯಾಗುವುದು ತೋಳ ಕೋಳ್ಯಾಗುವುದು | ಕಲಿ ಬಂದು ಹಿತ್ತಲನ್ನೀಗ ಬಳಿವ ಖಳ ಮಹಾಚೋರ ಚೊಚ್ಚಿಲಗೌಡಿ ಮಗನಾಹ ಜಲಜಾಕ್ಷನ ಕೃಪೆಯ ಪಡೆದ ದಾಸರಿಗೆ ||1|| ಕರಡಿ ಕರುವಾಗುವುದು ಉರಿ ಮಂಜು ಆಗುವುದು | ಕರಿ ನಾಯಿಯಾಗುವುದು ಕಂಡವರಿಗೆ | ಭರದಿಂದ ಸುರಿವ ಮಳೆ ನಿಲ್ಲೆನಲು ನಿಲ್ಲುವುದು | ನರಹರಿಯ ನಾಮಗಳ ನಂಬಿ ಭಜಿಪರಿಗೆ ||2|| ಫಣಿ ಸರಿವೆಯಾಗುವುದು ದಣುವಾಗುತಿಹ ಮಾರ್ಗ | ಕ್ಷಣದೊಳಗೆ ಪೋದಂತೆ

ಎಲ್ಲಿ ಭಯಗಳು ಹರಿಯ ಭಕುತರಿಗೆ ಇಲ್ಲ Read More »

ಎಲ್ಲಡಗಿದನೊ ಹರಿ ಎನ್ನಯ ಧೊರಿ

ಎಲ್ಲಡಗಿದನೊ ಹರಿ ಎನ್ನಯ ಧೊರಿ ಎಲ್ಲೆಲ್ಲಿ ಪರಿಪೂರ್ಣನೆಂಬೊ ಸೊಲ್ಲನು ಮುನ್ನಾ ಅಲ್ಲಲ್ಲಿ ಪುಸಿಮಾಡಿ ಮಲ್ಲಮರ್ದನ ಪುಲ್ಲಲೋಚನ ಹರಿ ಶರಣೆಂದವರ ಕಾಯ್ವ ಕರುಣಾ ಸಮುದ್ರನು ಕರುಣನ ಅರಿಯದೆ ಹರಿಣಾಂಕ ನಿಭವಕ್ತ್ರ ||1|| ಕರಿರಾಜನ ಮೊರೆ ಕೇಳಿ ತ್ವರಿತದಿಂದ ಗರುಡನೇರಿ ಬಂದ ಗರ್ವರಹಿತ ದೇವ ||2|| ವರ ಭುಜದಲಿ ಶಂಖ ಚಕ್ರವ ಧರಿಸಿದ ಪರಮ ಸುಂದರಮೂರ್ತಿ ಪರಮೇಷ್ಠಿ ಜನಕನು ||3|| ವನಜ ಮಲ್ಲಿಗೆ ಜಾಜಿ ವನದಲ್ಲಿ ಚಲಿಸುವ ವನಿತೆಯರಾಟಕ್ಕೆ ಮನಮೆಚ್ಚಿ ನಡೆದಾನೊ ||4|| ಗೋವುಗಳ ಹಿಂಡು ಗೋಪಾಲರನು ಕಂಡು ಕಾವ

ಎಲ್ಲಡಗಿದನೊ ಹರಿ ಎನ್ನಯ ಧೊರಿ Read More »

ಎಲೆ ಮನ ಮುರಾರಿಯನು ಕೊಂಡಾಡು

ಎಲೆ ಮನ ಮುರಾರಿಯನು ಕೊಂಡಾಡು ಸಾಧನಕಿದು ಉಪಾಯ ನೋಡು ಕಾಲನ ದೂತರ ಕಾಲಿಗೆ ಬಿದ್ದರೆ | ನಾಳೆಗೆ ನಿಲುವರೆ ನೋಡು ||1|| ಮಂದಿಯ ಮಾತಿಗೆ ಎಂದೆಂದು ಮರುಗದೆ | ಮುಂದಿನ ಗತಿ ನೀ ನೋಡು ||2|| ರಾಜೀವ ಮುಖಿಯರ ಸೋಜಿಗ ಮೆಚ್ಚದೆ | ವಿಜಯವಿಠಲನ ಪಾಡೋ||3||

ಎಲೆ ಮನ ಮುರಾರಿಯನು ಕೊಂಡಾಡು Read More »

ಎನ್ನಲ್ಲಿ ಅವಗುಣ ಶತಸಾವಿರವಿರೆ

ಎನ್ನಲ್ಲಿ ಅವಗುಣ ಶತಸಾವಿರವಿರೆ | ಅನ್ಯರ ಕರೆದಾನು ನಡತೆ ಇದೇನೆಂಬೆ ವೇದವನೋದಿದೆ ಪರರಿ | ಗಾದÀರಿಸಿ ಮುಕುತಿಗೆ | ಸಾಧನೆ ಇದೆ ಎಂದು | ಹಾದಿಯವರಿಗೆ ಭೋದಿಪೆನಲ್ಲ್ಲದೆ ನಾನು | ಕ್ರೋಧ ಬಿಟ್ಟೆವನಲ್ಲ್ಲ ಹಾದರಹಳು ನಾರಿ | ಮಾದಿಗನ ಪೋದಂತೆ ||1|| ಧನದಾಸೆಯಿಂದ ಸಾಧನವಾಗದೆಂದು | ಜನರಿಗೆ ಉಪದೇಶವನು ಮಾಡುವೆ | ಮನೆ ಮನೆಯ ತಿರು ಮಾತಿನ ಬಣ್ಣವಲ್ಲ್ಲದೆ | ತೃಣ ಹತ್ತದಿದ್ದ | ವಧನರಾಶಿ ಕದ್ದಂತೆ||2|| ರಸನೇಂದ್ರಿಯಗಳ ಬಂ | ಧಿಸಬೇಕೆಂದು ನಾನು | ಉಸುರುವೆ

ಎನ್ನಲ್ಲಿ ಅವಗುಣ ಶತಸಾವಿರವಿರೆ Read More »

ಎನ್ನ ಪಾಲಿಸುವುದಾನಂತ ಶಯನ

ಎನ್ನ ಪಾಲಿಸುವುದಾನಂತ ಶಯನ | ಚನ್ನ ಗರುಡವಾಹನಾ | ಇನ್ನು ನಿನ್ನಯ ಪಾದವನ್ನೆ ಸೇರಿ ಕೌಂಡಣ್ಯ| ಮುನಿಗೊಲಿದನಂತ ಗುಣಾರ್ಣವಾ ದೇವಾ ನಂಬಿದವರ ನೋವ ಕಳೆದು ಬಿಡದೆ | ಕಾವ ಬೇಡಿದ ವರವ ನೀವ ಮೂರು | ಭುವನ ಜೀವ ವಿಮಲರಾ | ಜೀವ ನಯನ ವಸುದೇವ ದೇವಕಿತನು | ಭವನೆ ಭವದೂರ ದುರ್ಜನ ಸಂಹಾರ | ದೇವತಾ ವರ ಸಂಜೀವಾ ಪ್ರಭಾವಾ||1|| ಸೂರ್ಯಕೋಟಿ ಪ್ರಕಾಶಾ | ಚಾರ್ಯನಾ ನಾಯಕಾಧೀಶಾ | ಧೈರ್ಯವುಳ್ಳ ಸರ್ವೇಶಾ | ಕಾರ್ಯರೊಳು ವಿಶೇಷಾ

ಎನ್ನ ಪಾಲಿಸುವುದಾನಂತ ಶಯನ Read More »

ಎನಗ್ಯಾರು ಗತಿಯಿಲ್ಲ ನಿನಗ್ಯಾರು ಸರಿಯಿಲ್ಲ

ಎನಗ್ಯಾರು ಗತಿಯಿಲ್ಲ ನಿನಗ್ಯಾರು ಸರಿಯಿಲ್ಲ | ಎನಗೆ ನಿನಗೆ ನ್ಯಾಯ ಪೇಳುವರಿಲ್ಲ ಒಂದುಗೂಡಿಲಿ ಬಂದು ಒಂದು ಕ್ಷಣ ವಗಲದೆ | ಯೆಂದೆಂದು ನಿನ್ನ ಪಾದ ಪೊಂದಿರಲೂ || ಬಂದ ವಿಷಯಂಗಳಿಗೆ ಯೆನ್ನನೊಪ್ಪಿಸಿ ಕೊಟ್ಟು | ನೀನಂಧಕನಂತೆ ನೋಡುವದುಚಿತವೆ ರಂಗಾ ||1|| ಪರಸತಿಯರ ಕೂಡಿದರೆ ಪರಮ ಪಾತಕವೆಂದು | ಪರಿ ಪರಿಯ ನರಕಗಳ ನಿರ್ಮಿಸಿರುವಿ || ಪರಸತಿಯರೊಲುಮೆ ನಿನಗೊಪ್ಪಿತೆಲೋ ದೇವಾ | ನಿನ್ನ | ದೊರೆತನಕಂಜಿ ನಾ ಶರಣೆಂಬೆನಲ್ಲದೇ ||2|| ನಿನ್ನಾಜ್ಞ್ಞಧಾರನಾಗಿ ನಿನ್ನ ಪ್ರೇರಣೆಯಿಂದ | ಅನೇಕ ವಿಧಕರ್ಮಗಳ

ಎನಗ್ಯಾರು ಗತಿಯಿಲ್ಲ ನಿನಗ್ಯಾರು ಸರಿಯಿಲ್ಲ Read More »

ಎಚ್ಚರಿಕೆಚ್ಚರಿಕೆ ಮನವೆ ಇನ್ನು

ಎಚ್ಚರಿಕೆಚ್ಚರಿಕೆ ಮನವೆ ಇನ್ನು | ಎಚ್ಚರಿಕೆಚ್ಚರಿಕೆ ಯಮನ ಪುರದ ಬಾಧೆ ಕಿಚ್ಚನಾದರು ಕೇಳಿ ದುಶ್ಚಿಂತನ ಬಿಡು ಗಂಡ ಅತ್ತೆ ಮಾವ ಮೈದುನರ ಬೈವರ | ಖಂಡ ತುಂಡನೆ ಮಾಡಿ ಖಂಡವ ಕೊಯಿದು | ಕಂಡದೊಳಗೆ ಬೇಯ್ಸಿ ದಿಂಡುಗೆಡಹಿ ಕಟ್ಟಿ | ಮಂಡೆಯ ಒಡೆದು ಡಂಡದಿ ಶಿಕ್ಷಿಸಿ | ಹಿಂಡಿ ಹಿಪ್ಪೆಯ ಮಾಡಿ ಕೊಂಡೊಯ್ದು ಅಗ್ನಿಯ ಕುಂಡವ ಹೋಗಿಸುವರೊ-ಎದೆಯ ಮೇಲೆ | ಗುಂಡನೆ ಹೊರಿಸುವರೊ-ಬಾಯೊಳಗೆ | ಕೆಂಡವ ಸುರಿಸುವರೊ-ಕೋಟಿ ಜನ್ಮ ಚಂಡಾಲ ಯೋನಿಯಳಿಟ್ಟು ಬಾಧಿಸುವರೊ ||1|| ಉತ್ತಮ ಗುರು

ಎಚ್ಚರಿಕೆಚ್ಚರಿಕೆ ಮನವೆ ಇನ್ನು Read More »

ಎಚ್ಚರಿಕೆ ಎಚ್ಚರಿಕೆ ಎಲೋ ದೇವ

ಎಚ್ಚರಿಕೆ ಎಚ್ಚರಿಕೆ ಎಲೋ ದೇವ | ಎಚ್ಚರಿಕೆ ಎಚ್ಚರಿಕೆ | ಅಚ್ಚ ಕಲ್ಯಾಣ ಮೂರುತಿ ತಿರುವೆಂಗಳಾ ಅಜ ದ್ವಿಜಗಜ ಅಜಾಮಿಳ ಪರಿಪಾಲನೆಯಾ | ದ್ವಿಜ ರಾಜಾಂಗಾ ಗಂಗಜ ಭಕ್ತವರದನೆಯಾ | ಗಜ ಕುಜ ದನುಜ ಭೂ ಭುಜರ ಸಂಹಾರನೆಯಾ | ನಿಜ ಭಜಕರ ಪಂಕಜ ಹೃದಯಾರ್ಕನೆಯಾ||1|| ಪರತರ ಪರಮಾತ್ಮ ಪರಮೇಷ್ಠಿ ವಂದನೆಯಾ | ಕರುಣ ಶರಧಿ ತಾರಾ ಕರುಗಳ ಕಾಯಿದನೇಯಾ | ಎರಡೇಳು ಲೋಕ ಪೊರೆವಾ ಭಾರಣ ಹರಿಯಾ | ಶರಣು ಹೊಕ್ಕೆನು ಎನ್ನ ಮೊರೆ ವಿಚಾರಿಸೊಯಾ

ಎಚ್ಚರಿಕೆ ಎಚ್ಚರಿಕೆ ಎಲೋ ದೇವ Read More »

ಎಚ್ಚತ್ತು ಇರು ಕಂಡ್ಯ ಮನವೇ

ಎಚ್ಚತ್ತು ಇರು ಕಂಡ್ಯ ಮನವೇ | ನಮ್ಮ | ಅಚ್ಯುತನಂಘ್ರಿಗಳನು ನೆನೆ ಕಂಡ್ಯ ಮನವೆ ಆಡದಿರಪವಾದಗಳನು ಕೊಂ | ಡಾಡದಿರಿನ್ನು ಚಿಲ್ಲರೆ ದೈವತಗಳನು || ಬೇಡದಿರು ಭಯ ಸೌಖ್ಯವನು ನೀ | ಮಾಡದಿರಿನ್ನು ದುರ್ಜನ ಸೇವೆಯನು || ಸಜ್ಜನ ದ್ವೇಷವನು||1|| ನರಜನ್ಮ ಬರುವದೆ ಕಷ್ಟ ಇದ- | ನರಿದು ನೋಡು ವಿಪ್ರಾದಿ ಶ್ರೇಷ್ಠ || ಮರಳಿಬಾಹುದು ಉತೃಷ್ಟ | ಮರುತ ಮತವ ಪೊಂದುವದು ದುರ್ಘಟ || ಕೇಳೆಲವೊ ಮರ್ಕಟ ||2|| ಹಾಳು ಹರಟೆಗೆ ಹೋಗಬೇಡ ನೀ ಕಂಡ

ಎಚ್ಚತ್ತು ಇರು ಕಂಡ್ಯ ಮನವೇ Read More »

ಎಂದೊಡನಾಡುವೆ ಎಂದರ್ಥಿಬಡುವೆ

ಎಂದೊಡನಾಡುವೆ ಎಂದರ್ಥಿಬಡುವೆ ಎಂದಿಗೆ ತಕ್ರ್ಕೈಸಿ ಸಂತೋಷಬಡುವೆ ಉತ್ಸವ ಮಂಟಪದೊಳಗೆ ಕುಳಿತು ಭಕ್ತ ವತ್ಸಲನೆಂದು ನುತಿಸಿಕೊಂಬನ ಕೂಡ ||1|| ಸಕಲ ಭೂಷಿತನಾಗಿ ಅಜಹರ ಸುರಮುನಿ ನಿಕರ ಕೈಯಿಂದ ಸ್ತುತಿಸಿಕೊಂಬನ ಕೂಡ ||2|| ಆಪೋಹಿಷ್ಠಾ ಮಯೋಭುವನೆಂಬೋ ಮಂತ್ರ ಆ ಪುರೋಹಿತರಿಂದ ಕಲಿತುಕೊಂಬನ ಕೂಡ ||3|| ನಾಲ್ವತ್ತುಮೂರು ಪದಂಗಳು ಮಾಡೆಂದು ಹೇಳಿದ ಹೇಮಾದ್ರಿ ಶಿಖರಾಕಾರನಕೂಡೆ ||4|| ದಂಡಿಗೆ ಕರೆದಲ್ಲಿ ಕೊಟ್ಟು ಅಮೃತದ ಕರ ಮಂಡೆಯಲ್ಲಿಟ್ಟ ಮಹಮಹಿಮನ ಕೂಡ ||5|| ಪಲ್ಲಕ್ಕಿ ಏರಿ ಪವಳಿಯ ಸುತ್ತಿ ಸರ್ರಗೆ ನಿಲ್ಲದೆ ಗುಡಿಪೊಕ್ಕ ನಿರ್ಮಳನ ಕೂಡ||6||

ಎಂದೊಡನಾಡುವೆ ಎಂದರ್ಥಿಬಡುವೆ Read More »

ಎಂದೆಂದಿಗೂ ಎರಡು ಒಂದಾಗವು

ಎಂದೆಂದಿಗೂ ಎರಡು ಒಂದಾಗವು | ಒಂದೆ ಕುಲದಲಿ ಜನಿಸಿದ ಪಕ್ಷಿಗಳು ಒಂದೇ ರೂಪಪಕ್ಷಿ ಒಂದರಲಿ ತಿರಗೋವು | ಒಂದೀಗ ಪಂಚವರ್ಣದ ಕೋವಿದಾ || ಒಂದೆಲ್ಲ ಸಮನೆಂದು ಪೇಳುತ ಬದುಕುವುದು | ಒಂದಕ್ಕೆ ಗುರುತು ಮತ್ತೊಂದಕ್ಕೆ ಯಿಲ್ಲ ||1|| ಒಂದೇ ಕೊಂಬಿನಲಿ ಎರಡು ಸೇರಿಕೊಂಡು | ಒಂದು ಸಾರವನುಂಬದೊಂದರಿಯದು || ಒಂದು ಬುದ್ಧಿಯಲ್ಲಿಪ್ಪದೊಂದು ಇರಲೊಲ್ಲದು | ಒಂದು ನಾನೆಂಬೋದು ಮತ್ತೊಂದು ಪೇಳದು ||2|| ಒಂದೀಗ ತನ್ನ ಫಲ ಪರರಿಗೆ ಕೊಡುವದು | ಒಂದು ತನ್ನ ಫಲ ತಾ ತಿಂಬೋದು

ಎಂದೆಂದಿಗೂ ಎರಡು ಒಂದಾಗವು Read More »

ಎಂದು ನೋಡುವೆ ಎನ್ನ ಗುರುವಿನಾ

ಎಂದು ನೋಡುವೆ ಎನ್ನ ಗುರುವಿನಾ | ನಿಂದು ನಂದಿಗಮನನಾ ಎಂದೆಂದಿಗೆ ಪೊಂದಿದವರಿಗಾ | ನಂದ ಕೊಡುವ ಇಂದು ಮೌಳಿಯ ತ್ರಿಗುಣ ರೂಪನ ತ್ರಿಭುವನೇಶನ | ಜಗತಿಧರ ವಿಭೂಷನ || ನಿಗಮವಂದ್ಯ ನೀಲಕಂಠನ ನಗವತಿ ಸುತಿಪತಿಯ ರುದ್ರನ ||1|| ತಪೋಧನೇಶನ ತಪ ಪ್ರತಾಪನ | ತಪನ ಶಶಿ ಅಗ್ನಿನೇತ್ರನ | ಕುಪಿತ ರಹಿತ ಕುಜನ ಮಥನನ | ಅಪರಮಿತ ಗುಣ ವನದಿ ಶಿವನ ||2|| ವಿಮಲಗಾತ್ರನ ವಿಶ್ವಪಾಲನ | ರಮೆಯರಸ ಪದಿಧಾರನ || ಶಮಜಿತನನ ಸುಜನ ರನ್ನನ |

ಎಂದು ನೋಡುವೆ ಎನ್ನ ಗುರುವಿನಾ Read More »

ಎಂದಿಗಾಹುದೋ ನಿನ್ನ ದರುಶನ

ಎಂದಿಗಾಹುದೋ ನಿನ್ನ ದರುಶನ | ಇಂದಿರೇಶ ಮುಕುಂದ ಕೇಶವ ಗಾನಲೋಲನೆ ದೀನವತ್ಸಲ | ಮಾನದಿಂದಲಿ ನೀನೆ ಪಾಲಿಸೋ ||1|| ಯಾರಿಗೆ ಮೊರೆ ಇಡುವೆ ಶ್ರೀ ಹರಿ | ಸಾರಿ ಬಂದು ನೀ ಈಗಲೆ ಪೊರಿ ||2|| ಗಜವ ಪಾಲಿಸೊ ಗರುವದಿಂದಲಿ | ಭುಜಗಶಯನ ಶ್ರೀ ವಿಜಯವಿಠಲಾ ||3||

ಎಂದಿಗಾಹುದೋ ನಿನ್ನ ದರುಶನ Read More »

ಎಂತು ವರ್ಣಿಪೆ ನಮ್ಮಮ್ಮಾ

ಎಂತು ವರ್ಣಿಪೆ ನಮ್ಮಮ್ಮಾ | ಯಂತ್ರೋದ್ಧಾರಕÀನಾಗಿ ಮೆರೆವನಾ ಕೋತಿ ರೂಪದಲಿ ಬಂದು | ಭೂತಳಕೆ ಬೆಡಗು ತೋರಿ || ಈ ತುಂಗಭದ್ರೆಯಲ್ಲಿ | ಖ್ಯಾತಿಯಾಗಿಪ್ಪ ಯತಿಯಾ||1|| ಸುತ್ತಲು ವಾನರ ಬದ್ಧ | ಮತ್ತೆ ವಲಯಾಕಾರ ಮಧ್ಯ || ಚಿತ್ರಕೋಣ ಅದರೊಳು | ನಿತ್ಯದಲಿಯಿಪ್ಪ ಯತಿಯಾ ||2|| ವ್ಯಾಸ ಮುನಿರಾಯರಿಂದ | ಈ ಶಿಲೆಯೊಳಗೆ ನಿಂದು || ಶ್ರೀಶ ವಿಜಯವಿಠ್ಠಲನ್ನ | ಏಸು ಬಗೆ ತುತಿಪನ್ನ ||3||

ಎಂತು ವರ್ಣಿಪೆ ನಮ್ಮಮ್ಮಾ Read More »

ಎಂತು ಮರುಳಾದೆ ನೀ ಯದಿಯ

ಎಂತು ಮರುಳಾದೆ ನೀ ಯದಿಯ ಬಿಗುವಿನಲಿ ತಿರುಗಿ | ಪಂಥದಲ್ಲಿ ಕೆಡಲಿಬೇಡ ಎರಡು ದಿನ | ಸಂತೆ ನೆರೆದಂತೆ ಮೂಢ ಇಪ್ಪದಿದು | ಸಂತತ ತೊರೆದು ಬಾಡೊ ಪ್ರಾಣಿ ಪ್ರಾಣಿ ವಿಂಚುಗೂಳನು ತಿಂದು ಮನೆ ಮನೆಗಳು ತಿರುಗಿ | ಸಂಚಿತಾರ್ಥವ ತಿಳಿಯದೆ ಮರುಳಾದ | ಪಂಚೇಂದ್ರಿಯಂಗಳನು ಅಳಿಯದೆ | ಬಂದ ಪರ | ಪಂಚವನು ನೀ ಕಳಿಯದೆ ವ್ಯರ್ಥಾಯ | ವಂಚನಿಂದಲಿ ನಡೆದು ಬಾಯಿ ತೆರೆದು | ಹಲ್ಲನು | ಹಂಚಿಕೆ ತೋರಿದಂತೆ ಮೃತ್ಯುವಿನ | ಪಂಚದಲಿ

ಎಂತು ಮರುಳಾದೆ ನೀ ಯದಿಯ Read More »

ಎಂತು ಬಿನ್ನೈಸಲೊ ಮುರಾರಿ ಸಾರಿಗೆ

ಎಂತು ಬಿನ್ನೈಸಲೊ ಮುರಾರಿ ಸಾರಿಗೆ ಸಾರಿ | ಸಂತ ಜನರ ಆಧಾರಿ ಶ್ಲೋಕ – ಘನ ಅನವರತ ಕಾಯಾ | ಸ್ವಾಮಿ ಲಕ್ಷ್ಮೀ ಸಹಾಯ | ಅನಿಮಿಷ ಮುನಿಗೇಯಾ ಹೇಯ ಧರ್ಮ ವಿಹಾಯ | ಅನಘ ನಗರ ನಿಲಯಾ | ಅಮಿತÀ ಆನಂದ ಕಾಯಾ | ನೆನಹಿ ಪಾಲಿಸೋ ಜೀಯಾ | ನಾಗ ತಲ್ಪೋರು ಗಾಯಾ ||1|| ಪದ – ಶರಣು ಶರಣು ಶಾರಣ್ಯನೆ | ಗುಣ ಗುಣ್ಯನೆ | ನಮಗಾನನ್ಯನೆ | ನಿರುತರಂತರ ಕಾರುಣ್ಯನೆ ಪ್ರದದಾನ್ಯನೆ

ಎಂತು ಬಿನ್ನೈಸಲೊ ಮುರಾರಿ ಸಾರಿಗೆ Read More »

ಎಂತು ನಿಲ್ಲುವೆನು ನಿನ್ನಯ ಬಳಿಯಲ್ಲಿ

ಎಂತು ನಿಲ್ಲುವೆನು ನಿನ್ನಯ ಬಳಿಯಲ್ಲಿ | ಅಂತರಾತ್ಮಕ ಪೇಳು ಎನಗೊಂದು ಹದನಾ ವೇದಶಾಸ್ತ್ರವನು ಅರಿಯೆ | ಪುರಾಣ ಪುಣ್ಯಕಥೆ | ಓದಲಿನ್ನರಿಯೆನೊ ಎಂದೆಂದಿಗೂ | ಭೇದ ಭೇದವನರಿಯೆ | ಬಾಗಿ ನಮಿಸುವದನರಿಯೇ | ಆದರಣಿ ಅರಿಯೆ ಆರಾಧಿನಿಯನರಿಯೆ||1|| ಜ್ಞಾನ ಭಕುತಿಯನರಿಯೆ | ಗಮನ ತೀರ್ಥವನರಿಯೆ | ಧ್ಯಾನವನು ಅರಿಯೆ ದಾಕ್ಷಿಣ್ಯವನು ಅರಿಯೆ | ಮೌನವನು ಅರಿಯೆ ಮಹತಪಸ್ಸು ಮೊದಲೆ ಅರಿಯೆ | ಗಾನವನು ಅರಿಯೆ ಗತಿಮತಿಗಳನು ನಾನರಿಯೆ ||2|| ಭೂತದಯವನು ಅರಿಯೆ | ಬುದ್ಧಿ ಪೂರ್ವಕವರಿಯೆ |

ಎಂತು ನಿಲ್ಲುವೆನು ನಿನ್ನಯ ಬಳಿಯಲ್ಲಿ Read More »

ಎಂತು ನಿನ್ನ ಮೆಚ್ಚಿಸುವೆನೊ ಎಲೊ ವೆಂಕಟಾ

ಎಂತು ನಿನ್ನ ಮೆಚ್ಚಿಸುವೆನೊ ಎಲೊ ವೆಂಕಟಾ ಸಂತತ ಬಿಡದೆ ಎನ್ನ ಅಂತರಂಗದಲ್ಲಿ ಇರೊ ಕುಣಿದು ನಿನ್ನ ಮೆಚ್ಚಿಸುವೆನೆ | ಫಣಿಹಾರನೈಯನನ ಜನಕಾ | ಮಣಿದು ನಿನ್ನ ಮೆಚ್ಚಿಸುವೆನೆ | ಸನಕಾದಿಗಳ ಸುಪ್ರೇಮಾ ||1|| ಅನ್ನವಿತ್ತು ಮೆಚ್ಚಿಸುವೆನೆ | ಘನ್ನ ನಿತ್ಯ ತೃಪ್ತ ನೀನು | ಹೆಣ್ಣನಿತ್ತು ಮೆಚ್ಚಿಸುವೆನೆ | ಹೆಣ್ಣುರೂಪ ನೀನೆ ಸ್ವಾಮಿ ||2|| ಅಪ್ಪ ನಿನ್ನ ಮೆಚ್ಚಿಸುವೆನೆ | ದರ್ಪಾಕ ಬೊಮ್ಮನ ತಂದೆ | ಅಪ್ಪ ನಿನ್ನ ಮೆಚ್ಚಿಸುವೆನೆ | ಸುಪ್ಪಾಣಿ ರಮೆಯರಸಾ ||3|| ಪಾಲು

ಎಂತು ನಿನ್ನ ಮೆಚ್ಚಿಸುವೆನೊ ಎಲೊ ವೆಂಕಟಾ Read More »

ಎಂತಹದೋ ನಿನ್ನ ಸಂದುರಶನಾ

ಎಂತಹದೋ ನಿನ್ನ ಸಂದುರಶನಾ | ಕಂತುವಿನ ಜನಕ ಉಡಪಿ ಕೃಷ್ಣರಾಯಾ ಪರರ ಓದನ ತಿಂದೆ | ಪರರ ದ್ರವ್ಯದ ತಂದೆ | ಪರ ಸತಿಯರಿಗೆ ನೊಂದೆ | ಗುರು ಹಿರಿಯರ ನಿಂದೆ | ಹಿರದಾಗಾಡಿದೆ ಮುಂದೆ | ಬರುತಿಪ್ಪ ಪಾಪದಿಂದೆ | ಒಂದೆ ಪೋಯಿತು ವಂದೆ ಪರಿಯಾಗಿ ಈ ಬಂದೆ | ಅರುಹು ತೊರದೆ ಬಂದೆ | ಕರುಣಿಸು ಜಗದ ತಂದೆ ||1|| ಸುಜನರ ಗುಣವ ಹಳಿದೆ | ಕುಜನರ ಸಂಗದಲಿ ಬೆಳಿದೆ | ಭಜನೆಗೆÀಟ್ಟು ಸುಳಿದೆ

ಎಂತಹದೋ ನಿನ್ನ ಸಂದುರಶನಾ Read More »

ಎಳ್ಳು ಕಾಳಿನಷ್ಟು ಭಕ್ತಿ ಎನ್ನೊಳಗಿಲ್ಲ 

ಎಳ್ಳು ಕಾಳಿನಷ್ಟು ಭಕ್ತಿ ಎನ್ನೊಳಗಿಲ್ಲ ಕಳ್ಳರಿಗೆ ಕಳ್ಳನಂತೆ – ಬೆಳ್ಳಕ್ಕಿಯಂದದಿ ಡಂಭ ಗಾಣದೆತ್ತಿನಂತೆ ಕಣ್ಣಮುಚ್ಚಿ ಪ್ರದಕ್ಷಿಣೆಯ ಮಾಡಿಕಾಣದೆ ತಿರುಗುವೆನೆರಡು ಕಣ್ಣಿದ್ದು ನಾನುಮಾಣಿಕ್ಯದ ರಾಶಿಯಲ್ಲಿ ಅಂಧಕರೈವರು ಕೂಡಿಆಣಿಮುತ್ತ ಹಿಡಿದು ಹಿಡಿದು ಬಿಡುವ ಭ್ರಮಿತನಯ್ಯ||1|| ಗುಂಡು ಮುಳುಗನ ಹಕ್ಕಿಯಂತೆ ಕಂಡ ಕಂಡ ನೀರ ಮುಳುಗಿಮಂಡೆ ಶೂಲೆ ಬಾಹೋದಲ್ಲದೆ ಗತಿಯ ಕಾಣೆನೊಮಂಡೂಕನಂದದಲಿ ನೀರ ತಡಿಯಲಿ ಕುಳಿತುಕೊಂಡುಮುಂಡೆ ಮುಸುಕನಿಕ್ಕಿ ಮೂಗು ಹಿಡಿದು ಬಿಡುವ ಭ್ರಮಿತನಯ್ಯಾ|| 2|| ಇಕ್ಕುಳದ ಕೈಯಲ್ಲಿ ಹಿಡಿದ ಕಾದ ಕಬ್ಬಿಣದಂತೆಸಿಕ್ಕಿ ಸಿಡಿಮಿಡಿಗೊಂಬೆ ಗತಿಯ ಕಾಣದೆಹೊಕ್ಕುಳ ಹೂವಿನ ಬಾಡದಾದಿಕೇಶವನ ಮೊರೆಹೊಕ್ಕೆನಿಂದು ಮನ್ನಿಸಿ

ಎಳ್ಳು ಕಾಳಿನಷ್ಟು ಭಕ್ತಿ ಎನ್ನೊಳಗಿಲ್ಲ  Read More »