ಇವನ ಪಾಲಿಸಿದರೆ ನಿನಗೆ ಪುಣ್ಯ

ಇವನ ಪಾಲಿಸಿದರೆ ನಿನಗೆ ಪುಣ್ಯ ಅವನಿಯೊಳೆಂದೆಂದಿಗೂ ನಾನೆ ಧನ್ಯ ಅ.ಪ ನೆಟ್ಟ ಮುಳ್ಳು ಕಿತ್ತು ಬಿಸುಟಂತೆ ಮಾಡು | ಘಟ್ಟಿಯಾಗಿ ಭಕುತನ್ನ ಕಾಪಾಡು||1|| ಸಾಧನ ಪ್ರಾಣಿಗಳಿರಲಿ ಬೇಕು | ಆದರದಿಂದಲಿ ಕೇಳೆನ್ನ ವಾಕು ||2|| ತ್ರಿಜಗದೊಳಗೆ ನಿ£ಗ್ಯಾರೆಣೆಯೆ | ವಿಜಯವಿಠ್ಠಲ ಕೇಳೆನ್ನ ದೊರೆಯೆ ||3||

ಇವನ ಪಾಲಿಸಿದರೆ ನಿನಗೆ ಪುಣ್ಯ Read More »

ಇರಬಾರದೊ ಬಡವ ಜಗತ್ತಿನೊಳಗೆ

ಇರಬಾರದೊ ಬಡವ ಜಗತ್ತಿನೊಳಗೆ | ಪರದೇಶಿ ಮಾನವಗೆ ದಿಕ್ಕು ಮತ್ತಾವನು ಪೊಡವಿಪತಿ ದೃಷ್ಟಿಗಳು ಒಳ್ಳೆವಲ್ಲಾವೆಂದು | ಬಿಡದೆ ಜನ ಪೇಳುವುದು ಸಿದ್ಧವಯ್ಯಾ | ಬಡವ ನಾನಯ್ಯ ನಾನಾ ಕಷ್ಟಬಟ್ಟೆರಡು | ಒಡವೆ ಸಂಪಾದಿಸಲು ಅಪಹರಿಸಿದ ನೋಡು ||1|| ದಿನ ಪ್ರತಿ ದಿನದಲ್ಲಿ ಕರಳು ಕಟ್ಟಿಕೊಂಡು | ಹಣದಾಸಿಯಿಂದ ನಾ ಘಳಿಸಿದ್ದೆನೊ | ಮನೆವುಗೆ ಬಂದು ಮಾಡಿಕೊಂಡೊಯ್ದಿಯಾ ಧರ್ಮವೇ | ವನಜನಾಭನೆ ನಿನ್ನ ದೊರೆತನಕೆ ಶರಣೆಂಬೆ||2|| ದೊರೆಗಳಾ ಲಕ್ಷಣವಿದೆ ಎಂದೆಂದಿಗೆ ತಮಗೆ | ಸರಿಬಂದ ಕಾರ್ಯಮಾಡುವರಲ್ಲದೇ | ನೆರೆಯವರದೇ

ಇರಬಾರದೊ ಬಡವ ಜಗತ್ತಿನೊಳಗೆ Read More »

ಇದೇ ಸಮಯ ಹರಿಯೇ

ಇದೇ ಸಮಯ ಹರಿಯೇ ಇದೇ ಸಮಯ ನಿನ್ನ ಪದ ಕಮಲ ತೋರಿ ಸದಾ | ಬಿಡದೆ ಎನ್ನ ಮುದದಿ ಪೊರೆವುದಕೆ ಅ.ಪ ನಾನಾ ಯೋನಿಯಲಿ ಬಂದು ಜ್ಞಾನ ದುರ್ಲಭನಾಗಿ | ಹೀನನಾದವಗೆ ಸುಜ್ಞಾನ ಪಾಲಿಸುವುದಕೆ ||1|| ಆಶಾಪಾಶಕೆ ಸಿಲುಕಿ ಶ್ರೀಶನ ಮರೆತೆನೋ | ಲೇಸು ದಾರಿಯ ತೋರಿ ದಾಸನ ಕಾಯುವುದಕೆ ||2|| ಸಂತರ ಸಂಗವ ಸಂತತ ಪಾಲಿಸಿ ಅಂತರಂಗದಿ ನಿನ್ನ ಚಿಂತನೆ ಕೊಡುವುದಕೆ ||3|| ಹಿಂದಿನ ಸುಕೃತದಿ ಬಂದೆ ಭೂಸುರನಾಗಿ | ಮುಂದಿನ ಪದಕ್ಕಾಗಿ ಕುಂದದೆ ಸಲಹುವುದಕೆ

ಇದೇ ಸಮಯ ಹರಿಯೇ Read More »

ಇದೇ ರಾಮನಿಧಿ ನೋಡು ಎದುರಿಗಿರುತಿರೆ

ಇದೇ ರಾಮನಿಧಿ ನೋಡು ಎದುರಿಗಿರುತಿರೆ ಹೃದಯವೆಂಬೊ ಸದನದಲ್ಲಿ ಕದವು ತೆಗೆದಿದೆ ದಾರಿಯಲ್ಲಿ ಆರು ಛತ್ರ ಭೂರಿ ಭೋಜನ ಊರೊಳಲ್ಲಿ ಪ್ರಣವ ಶಬ್ದ ಭೋರೆಗುಟ್ಟುತ ನೂರು ಕೋಟಿ ಸೂರ್ಯ ಕಿರಣ ತೋರುವಾ ಪ್ರಭೆ ಸೂರೆ ಮಾಡಿಕೊಳ್ಳಿರೋ ಪಾರವಿಲ್ಲದಾ ||1|| ಅಷ್ಟದಳದ ಮಂಟಪದ ಪೆಟ್ಟಿಗೆಯಲೀ ಸೃಷ್ಟಿಗೊಡೆಯ ಹರಿಯ ನಾಮ ಅಂಕಿತವಾದ ಕಟ್ಟಳೆಯಿಲ್ಲದ ನಾಣ್ಯಗಳನು ಕಟ್ಟರೀಸಿದೆ ಹುಟ್ಟ ತಿರುಕರೆಲ್ಲ ಬಂದು ಕಟ್ಟಕೊಳ್ಳಿರೋ ||2|| ಅಂಕೆ ಮಾಡುವರಿಲ್ಲವಿದಕೆ ಶಂಕೆ ಬ್ಯಾಡಿರೋ ಅ- ಹಂಕೃತಿಯ ತೊರೆದು ಕಾಲ್ಗೆ ಗೆಜ್ಜೆ ಕಟ್ಟಿರೋ ಶಂಖ ತಾಳ ಮದ್ದಳೆಯು

ಇದೇ ರಾಮನಿಧಿ ನೋಡು ಎದುರಿಗಿರುತಿರೆ Read More »

ಇದೇ ಭಕುತಿ ಮತಿಗೆ ಮುಕುತಿ

ಇದೇ ಭಕುತಿ ಮತಿಗೆ ಮುಕುತಿ | ಇದಕ್ಕಧಿಕವಾಗಿಪ್ಪ ವಿಧಿಗಳೆಲ್ಲಿಯಿಲ್ಲಾ ರತುನ ಗರ್ಭದೊಳಗೆ ತಿಳಿ | ರತುನ ಸಮಕ್ಷೇತ್ರಗಳಿಗೆ | ರತುನವೆನ್ನಿ ಯತಿವಂಶ | ರÀತುನ ಮಧ್ವಮುನಿಮಾಡಿದಾ ||1|| ಪದ ಜೀವಸ್ತರಿಗದೆ ಪಾ | ಪ ಜನರು ಕೃಷ್ಣರಾಯನ ಪಾದವ ನೋಡಿ ನಿತ್ಯಾ | ಸಾಧನಿ ಮನ ಮಾಡಿರಯ್ಯಾ ||2|| ಏಳು ಒಂದು ಮಠದ ಲೋಕರಂಸೆ ಸದನವೆನ್ನಿ | ಪೇಳಲೇನು ಅವರೇ ಯಿಲ್ಲಿ ಊಳಿಗವ ಮಾಡುತ್ತಿಪ್ಪರು ||3|| ಮೇರೊ ಪರ್ವತ ತುಲ್ಯವಿದೆ | ವಾರಿಜನೆ ಮಧ್ವರಾಯ | ಈ

ಇದೇ ಭಕುತಿ ಮತಿಗೆ ಮುಕುತಿ Read More »

ಇದು ನಿನಗೆ ಬಲು ಚಂದವಾಗಿದೇನೋ

ಇದು ನಿನಗೆ ಬಲು ಚಂದವಾಗಿದೇನೋ | ಬಾದರಾಯಣನ ಮೆಚ್ಚಿಸಿ ಸೇವೆ ಮಾಡಬೇ | ಕಾದರೂ ಮತ್ತಾವ ಪರಿಯಿಲ್ಲವೇ | ಈ ಧರೆ ಮನುಜರಿಗೆ ಆವಾವ ಕಾಲಕ್ಕೆ ಭೋದವಾಗದಂತೆ ಇದ್ದದ್ದೇನು ಬಗೆ ||1|| ಸಂಪುಟಾಕಾರವನು ಧರಿಸಿ ಅಲಂಕಾರ | ಸಂಪತ್ತಿನಿಂದ ಯತಿಗಳ ಕೈಯ್ಯಲಿ | ಸೊಂಪಾಗಿ ಮಿಗೆ ಪೂಜೆ ಕೊಳುತ ಪೊಗಳಿದ ಜನಕೆ | ತಂಪಾಗಿ ಗುರು ಶ್ರೀ ಮದಾಚಾಯರ್ಸ ||2|| ಪೆಟ್ಟಿಗೆಯಂದದಲಿ ಒಪ್ಪುವನೆಂದದಕೆ | ದಿಟ್ಟವಾಯಿತು ದಾಸರು ನುಡಿದುದು | ವಿಷ್ಣುತೀರ್ಥರಿಂದ ಆರಿಸಿ ಬಂದ | ವಿಜಯವಿಠ್ಠಲ

ಇದು ನಿನಗೆ ಬಲು ಚಂದವಾಗಿದೇನೋ Read More »

ಇಕೋ ಈತ ವೆಂಕಟೇಶನೊ ಭವದ

ಇಕೋ ಈತ ವೆಂಕಟೇಶನೊ | ಭವದ | ಸಿಕ್ಕು ಬಿಡಿಸಿ ನೆನದವರಿಗೆ ಸಿಕ್ಕಿ ಮನದಿಂದಗಲದಿಪ್ಪಾ ಕರುಣ ಅರುಣ ಕಿರಣ ಪೋಲುವ | ಚರಣ ಧರಣಿ ತರುಣಿ ಸ್ಮರಿಸಿ | ಕರುಣಗಡಲಾ | ಧರಣಿಯಿಂದ ಉದ್ಧರಣೆ ಮಾಡಿದೆ ಪರಣನೀತ ||1|| ಮಂಡಿಯ ಮಂಡನ | ಕುಂಡಲ ಕಾಂತಿ | ಗಂಡ ಸ್ಥಳದಲಿ ಮಿರುಗೆ ತುಲಸಿ | ದಂಡೆ ಕೌಸ್ತುಭ ಭೂಷಣ ಕಾಲ | ಪೆಂಡೆಯಿಟ್ಟು ನಂದನೀತ ||2|| ತಂ (ತು) ವಾಹನ ಆ ಖಂಡಲ ಇಕ್ಷುಕೋ | ದಂಡ

ಇಕೋ ಈತ ವೆಂಕಟೇಶನೊ ಭವದ Read More »

ಇಂದು ಸಾರ್ಥಕವಾಯಿತು ಎನ್ನ ಜನನಾ

ಇಂದು ಸಾರ್ಥಕವಾಯಿತು ಎನ್ನ ಜನನಾ ಚಂದ್ರ ಪುಷ್ಕರಣಿಯ ವಾಸ ರಂಗನ್ನ ಕಂಡು ಸುತ್ತೇಳು ಪ್ರಾಕಾರಗೋಪುರ ಮಹಾದ್ವಾರ ರತ್ನದ ಕವಾಟ ತೋರಣಗಳು ಕತ್ತಲೆ ಹರನಂತೆ ಕಣ್ಣಿಗೆ ತೋರುತಿದೆ ತುತ್ತಿಸಲಳವೆ ಅನಂತ ಜನುಮಕೆ ||1|| ಸಾಲು ಬೀದಿಗಳು ಒಂದೊಂದರ ಮಧ್ಯದಲಿ ಸಾಲು ಮಂಟಪ ಮುತ್ತಿನ ಚಪ್ಪರಾ ಕೀಲುಮಣಿಗಳಿಂದ ಬಿಗಿದ ಸೊಬಗು ಹೊಂ ಬಾಳೆಸ್ತಂಭಗಳೆಡಬಲದಲ್ಲಿ ಒಪ್ಪಲು ||2|| ಮುಂದೆ ಗರುಡಗಂಭ ಪವಳದ ಗವಾಕ್ಷಿ ಹಿಂದೆ ನೆರೆದ ಬಲು ಪರಿಯಂಗಡಿ ಸಂದಣಿಯಿಂದ ಭೂಸುರರು ಸ್ತೋತ್ರವ ಪೇಳೆ ಒಂದೊಂದು ಬಗೆಯಲ್ಲಿ ವಂದಿಸುವುದು ಕಂಡು ||3||

ಇಂದು ಸಾರ್ಥಕವಾಯಿತು ಎನ್ನ ಜನನಾ Read More »

ಇಂದು ಬನ್ನಿ ಇಂದಿರೇಶಾ ಇಂದುವಾರದಲಿ ಬಲು

ಇಂದು ಬನ್ನಿ ಇಂದಿರೇಶಾ ಇಂದುವಾರದಲಿ ಬಲು | ಅಂದದಿಂದ ಮೆರೆವನಂದವ ನೋಡಾ ಮುತ್ತಿನ ಕಿರೀಟ ಮೇಲೆ ಸುತ್ತಿದ ಲತೆ ತಳಲು | ರತ್ನಗಂಬಳಿ ಕಲ್ಲಿಯ ಬುತ್ತಿ ಪೆಗಲೂ || ತೂತ್ತುತೂರಿ ಎಂದು ಸ್ವರ | ವೆತ್ತಿ ಊದುವ ಕೊಳಲು | ಉತ್ತಮ ಶೋಕ್ಲವನು ಮೆರೆಯುತ್ತಲಿಪ್ಪುದು ||1|| ಉಂಗುರಗೂದಲು ಪುಬ್ಬು ಸಿಂಗಾಡಿ ಅಂದದಿ ಒಪ್ಪೆ | ಅಂಗಾರ ಕಂಕಣ ಮಂಗಳಾಂಗ ನಿಸ್ಸಂಗ | ರಂಗ ತುಂಗ ಮಹಿಮ ತಾರಂಗ ಅಂಗುಲಿಲಿ ರತ್ನ | ದುಂಗುರವ ಯಿಟ್ಟ ಸುಖಂಗಳ ನೋಡಾ

ಇಂದು ಬನ್ನಿ ಇಂದಿರೇಶಾ ಇಂದುವಾರದಲಿ ಬಲು Read More »

ಇಂದು ಪಾವನವಾಗಿರೊ

ಇಂದು ಪಾವನವಾಗಿರೊ | ಇಂದಿರಾ ರಮಣನ್ನ ದಿನ ವ್ರತವ ಮಾಡಿ ಜನನಿ ಜನಕ ಭ್ರಾತಾ ಅನುಜ ನಿಜಾಂಗನೆ | ತನಯರು ನೆರೆಹೊರೆ ಮನ ಜನಕೆ | ಬಿನಗು ವ್ರತವ ಬಿಟ್ಟು ವನಜನಾಭಾನ ಸಿರಿ | ದಿನ ತ್ರಯವನು ಅನುಸರಿಸಿರೆಂದು ||1|| ಏಕಾದಶಿದನ ವಿಕೇತನದಲಿ ಪಾಕ ಮಾಡಿದರದು | ಕಾಕಮಾಂಸ ಲೋಕದೊಳಗೆ ಸರಿ | ಲೋಕದೊಳಗೆ ಎಂದು | ತಾ ಕೂಗಿ ಸುಖದಲ್ಲೀ | ವಾದ ಪೇಳುತಲಿದ್ದು ಏಕ ಭಕುತಿಯಲ್ಲೀ||2|| ಹರಿದಿನದಲ್ಲಿ ನೀರು ಬೆರಳಲಿ ಸುರಿದಾ | ಭೂಸುರನು

ಇಂದು ಪಾವನವಾಗಿರೊ Read More »

ಇಂದು ನೋಡಿದೆ ಗೋವಿಂದನಾ ಸರ್ವ

ಇಂದು ನೋಡಿದೆ ಗೋವಿಂದನಾ ಸರ್ವ ಸುಂದರಸಾರ ವೆಂಕಟ ರಮಣನಾ ಭಾಗೀರಥಿಯ ಪೆತ್ತವನಾ ಭವ ರೋಗವ ಕಳೆವ ರಾಜೀವನೇತ್ರನಾ ಸಾಗರದೊಳಗೆ ಒಪ್ಪುವನಾ ಭಕ್ತ ಕೂಗಲು ನಿಲ್ಲದೆ ಒದಗಿ ಬರುವನಾ||1|| ನಿಲ್ಲದೆಳಿಪಿಗೆ ಪೊಳೆದನಾ ಗೋ ಪಾಲಕರಿಗೆ ವೈಕುಂಠ ತೋರಿದನಾ ನೀಲಾದೇವಿಗೆ ಬಲಿದವನಾ ಭೂ ಪಾಲಗೆ ಮೆಚ್ಚಿ ಸತ್ವರವನಿತ್ತವನಾ||2|| ವಿಶ್ವ ಮಂಗಳದಾಯಕನಾ ಅಹಿ ವಿಷ್ಟಕಸೇನರಿಂದ ಪೂಜೆಗೊಂಬುವನಾ ವಿಶ್ವರೂಪ ವಿಲಕ್ಷಣನಾ ಸರ್ವ ವಿಶ್ವ ಪರಿಪಾಲ ಪ್ರಣತಾರ್ತಿ ಹರನ||3|| ಸುರ ಶಿರೋಮಣಿ ಸದ್ಗುಣನಾ ಸು ದರಶನ ಶಂಖ ಭಜಕರಿಗೆ ಕೊಟ್ಟವನಾ ನಿರುತ ಆನಂದ ಭರಿತನಾ

ಇಂದು ನೋಡಿದೆ ಗೋವಿಂದನಾ ಸರ್ವ Read More »

ಇಂದು ನೋಡಿದೆ ಇಂದಿರೇಶ

ಇಂದು ನೋಡಿದೆ ಇಂದಿರೇಶ ಮುಕುಂದನ ಮುದ್ದು ರೂಪವ ಕಳೆದೆ ಸಂತಾಪವ ಪಂಚ ವರ್ಣದ ಪಕ್ಕಿ ಪೆಗಲಲ್ಲಿ ಮಿಂಚಿನಂದದಿ ತೋರುತಾ ವರಗಳ ಬೀರುತಾ ವೊಡನಿಪ್ಪ ಮಾರುತಾ ||1|| ಝಗಝಗಿಪ ಪದಯುಗಳ ಬಿಗಿದಪ್ಪಿ ತೆಗೆಯದಲೆ ಮನಪಾಡಿದೆ ಕುಣಿ ಕುಣಿ ದಾಡಿದೆ ಸಂತರ ಸಂಗ ಬೇಡಿದೆ ||2|| ಧನ್ಯನಾದೆನೊ ದಾನವಾರಿಯ ಘನ್ನ ವೈಭೋಗ ಕಂಡೆ ನಾ ಪುಣ್ಯವನು ಕೈಕೊಂಡೆ ನಾ ನಾಮಾಮೃತ ಉಂಡೆ ನಾ ||3|| ಏನು ಪೇಳಲಿ ಗುರುಗಳ ಕೃಪೆ ಸ್ವಾನೆ ನಿರುತ ಕರಗರವದು ಅಹಂಮತಿ ಮರೆವದು ಸುರಗಣ ಪೊರೆವುದು

ಇಂದು ನೋಡಿದೆ ಇಂದಿರೇಶ Read More »

ಇಂದಿರೆ ಇಂದೀವರಾಕ್ಷಿ

ಇಂದಿರೆ ಇಂದೀವರಾಕ್ಷಿ- ಸುಂದರಿ ಅರ- ವಿಂದ ಮಂದಿರೆ ಪೂರ್ಣೆ | ಇಂದುವದನೆ ಅಮರೇಂದ್ರ ವಂದಿತೆ | ಸಿಂಧುಸುತೆ ಆನಂದ ಫಲದೆ ಅಪ ರಾರರಮಣನ ಸೋಲಿಪ ನಖದಕಾಂತಿ | ಚಾರು ಚರಣತಳ ವಾರಿಜಾಂಕುಶ ಧ್ವಜ | ವಾರಣ ಕನಕ ಮಂಗಳರೇಖೆವೊಪ್ಪೆ | ನೂ- ಪುರ ಕಡಗ ಪೆಂಡ್ಯೆ ಪರಡೆ ಜಾನು ಜಂಘೆ | ಊರು ಕಟಿ ನಾಭಿ ಉದರ ತ್ರಿವಳಿ | ಧಾರ ಶೋಭನವಾದ ಹೊನ್ನುಡಿ | ಧಾರ ಕಿಂಕಿಣಿ ತೋರಮುತ್ತಿನ- ಹಾರ ಉರವಿಸ್ತಾರ ಗುಣವಂತೆ ||1|| ನ್ಯಾವಳಸರ

ಇಂದಿರೆ ಇಂದೀವರಾಕ್ಷಿ Read More »

ಇಂದಿರಾದೇವಿಯ ರಮಣ ಬಾ

ಇಂದಿರಾದೇವಿಯ ರಮಣ ಬಾ ವೃಂದಾರಕ ಮುನಿವಂದ್ಯ ಬಾ ಸಿಂಧುಶಯನ ಗೋವಿಂದ ಸದಮಲಾ ನಂದ ಬಾ ಮಾವನ ಕೊಂದ ಬಾ ಗೋಪಿಯ ಕಂದ ಬಾ ಹಸೆಯ ಜಗುಲಿಗೆ ಶೋಭಾನೆ ||1|| ಕೃಷ್ಣವೇಣಿಯ ಪಡೆದವನೆ ಬಾ ಕೃಷ್ಣನ ರಥ ಹೊಡೆದವನೆ ಬಾ ಕೃಷ್ಣೆಯ ಕಷ್ಟವÀ ನಷ್ಟವ ಮಾಡಿದ ಕೃಷ್ಣ ಬಾ ಯದುಕುಲ ಶ್ರೇಷ್ಠ ಬಾ ಸತತ ಸಂ ತುಷ್ಟ ಬಾ ಉಡುಪಿಯ ಕೃಷ್ಣ ಬಾ ಹಸೆಯ ಜಗುಲಿಗೆ ಶೋಭಾನೆ ||2|| ಎಲ್ಲರೊಳು ವ್ಯಾಪಕನಾಗಿಪ್ಪನೆ ಬಲ್ಲಿದ ಧೊರೆಯೇಜ್ಞಾನಿಗಳರಸನೆ ಎಲ್ಲಿ ನೋಡಲು ಸರಿಗಾಣೆ

ಇಂದಿರಾದೇವಿಯ ರಮಣ ಬಾ Read More »

ಇಂಥಾ ಪ್ರಭುವ ಕಾಣೆನೋ ಈಜಗದೊಳ

ಇಂಥಾ ಪ್ರಭುವ ಕಾಣೆನೋ ಈಜಗದೊಳ- ಗಿಂಥಾ ಪ್ರಭುವ ಕಾಣೆನೋ ಇಂಥಾ ಪ್ರಭುವ ಕಾಣೆ ಶಾಂತ ಮೂರುತಿ ಜಗ- ದಂತರಂಗನು ಲಕ್ಷ್ಮೀಕಾಂತ ಸರ್ವಾಂತರ್ಯಾಮಿ ಅ.ಪ. ಬೇಡಿದಿಷ್ಟವ ಕೊಡುವ-ಭಕ್ತರ ತಪ್ಪು ನೋಡದೆ ಬಂದು ಪೊರೆವ ಗಾಡಿಕಾರನು ಗರುಡಾ – ರೂಢ್ಯ ಗುಣವಂತ ಮಹಾ ಪ್ರೌಢ ಪ್ರತಾಪಿ ಜಗದಿ ಗೂಢದಿಂ ಸಂಚರಿಪ ಪಾಡಿ ಪೊಗಳಿ ಕೊಂಡಾಡುವವರ ಮುಂ- ದಾಡುತಲಿಪ್ಪನು ನಾಡೊಳಗಿದ್ದರು ಕೇಡಿಗನೇ ನಾಡಾಡಿಗಳಂದದಿ ಈಡುಂಟೇನೋ ಈ ವೆಂಕಟಗೆ-ಇಂಥಾ ||1|| ನಿಗಮ ತತಿಗಳರಿಯದ- ನೀರಜಭವಾ- ದ್ಯಗಣಿತ ಸುರರು ಕಾಣದ ಜಗದೊಡೆಯನು ಭಕ್ತ- ರುಗಳಿಗೊಲಿದು

ಇಂಥಾ ಪ್ರಭುವ ಕಾಣೆನೋ ಈಜಗದೊಳ Read More »

ಇಷ್ಟು ದಿನ ಈ ವೈಕುಂಠ

ಇಷ್ಟು ದಿನ ಈ ವೈಕುಂಠಎಷ್ಟು ದೂರವೊ ಎನ್ನುತಲಿದ್ದೆದೃಷ್ಟಿಯಿಂದಲಿ ನಾನು ಕಂಡೆಸೃಷ್ಟಿಗೀಶನೆ ಶ್ರೀರಂಗಶಾಯಿ ಎಂಟು ಏಳನು ಕಳೆದುದರಿಂದತುಂಟರೈವರ ತುಳಿದುದರಿಂದಕಂಟಕನೊಬ್ಬನು ಅಳಿದುದರಿಂದಭಂಟನಾಗಿ ಬಂದೇ ಶ್ರೀರಂಗಶಾಯಿ||1|| ವನ ಉಪವನಗಳಿಂದಘನ ಸರೋವರಗಳಿಂದಕನಕ ಗೋಪುರಗಳಿಂದಘನಶೋಭಿತನೆ ಶ್ರೀರಂಗಶಾಯಿ||2|| ವಜ್ರವೈಢೂರ್ಯ ತೊಲೆಗಳ ಕಂಡೆಪ್ರಜ್ವಲಿಪ ಮಹಾದ್ವಾರವ ಕಂಡೆನಿರ್ಜರಾದಿ ಮುನಿಗಳ ಕಂಡೆದುರ್ಜನಾಂತಕ ಶ್ರೀರಂಗಶಾಯಿ|| 3|| ರಂಭೆ ಊರ್ವಶಿ ಮೇಳವ ಕಂಡೆತುಂಬುರು ನಾರದರ ಕಂಡೆಅಂಬುಜೋದ್ಭವ ಪ್ರಮುಖರ ಕಂಡೆಶಂಬರಾರಿ ಪಿತನೆ ಶ್ರೀರಂಗಶಾಯಿ||4|| ನಾಗಶಯನನ ಮೂರುತಿ ಕಂಡೆಭೋಗಿ ಭೂಷಣ ಶಿವನನು ಕಂಡೆಭಾಗವತರ ಸಮ್ಮೇಳವ ಕಂಡೆಕಾಗಿನೆಲೆಯಾದಿಕೇಶವ ಶ್ರೀರಂಗಶಾಯಿ ||5||

ಇಷ್ಟು ದಿನ ಈ ವೈಕುಂಠ Read More »

ಇರಬಂದುದಿಲ್ಲ ಸಂಸಾರ

ಇರಬಂದುದಿಲ್ಲ ಸಂಸಾರ – ಇದನರಿತುಸಿರಿಹರಿಯ ಭಜಿಸುವುದು ಸಾರ ಧರೆಯನಾಳಿದ ತ್ರಿಶಂಕು ದೊರೆಯು ತಾನೆಲ್ಲಿಹರಿಶ್ಚಂದ್ರ ಮೊದಲಾದ ಚಕ್ರವರ್ತಿಗಳೆಲ್ಲಿಶರಧಿ ಮಧ್ಯದೊಳಿದ್ದ ರಾವಣಾಸುರನೆಲ್ಲಿಸಿರಿಯುಳ್ಳ ಕೌರವರು ಪಾಂಡವರು ತಾವೆಲ್ಲಿಧರೆಗಿಳಿದು ಪೋದಾತ ವಾಲಿಯು ತಾನೆಲ್ಲಿಸುರರೊಡನೆ ಹೋರಿದಾ ಬಲಿಯು ತಾನೆಲ್ಲಿ ||1|| ದಶರಥ ಮೊದಲು ಷೋಡಶ ರಾಯರುಗಳೆಲ್ಲಿಅಸಹಾಯ ಶೂರ ವೀರ ವಿಕ್ರಮರೆಲ್ಲಿಅಸಮಬಲ ವಸುಮತಿಯ ಹಿರಣ್ಯಾಕ್ಷನೆಲ್ಲಿವಸುಧೆಯೊಳಗಿದ್ದ ಹದಿನಾರು ಸಾವಿರರೆಲ್ಲಿಕುಸುಮ ಬಾಣನ ಪಡೆದ ದೇವ ತಾನೆಲ್ಲಿಸುಶರೀರ ಎನಿಸಿದ ಅಭಿಮನ್ಯು ತಾನೆಲ್ಲಿ ||2|| ಈ ಪರಿಯೆ ಈ ಧರೆಯನಾಳಿ ಹೋದವರೆಷ್ಟುಈ ಪರಿಯೆ ಸ್ವರ್ಗಕ್ಕೆ ಇಂದ್ರಾದಿಗಳು ಎಷ್ಟುಈ ಪರಿಯೆ ಹರಬ್ರಹ್ಮರಾದವರು ತಾವೆಷ್ಟುಈ ಪರಿಯೆ

ಇರಬಂದುದಿಲ್ಲ ಸಂಸಾರ Read More »

ಇದ್ದೀಯಾ ಶ್ರೀ ಹರಿ ನೀನೊಲಿದು

ಇದ್ದೀಯಾ ಶ್ರೀ ಹರಿ ನೀನೊಲಿದು ಬಂದಿದ್ದೀಯಾ ಇದ್ದೀಯಾ ಶ್ರೀಹರಿ ನೀನು – ವೃದ್ಧಿಸಿದ್ಧಿಯ ನಡುವೆ ಪದುಮನಾಭನು – ಅಭಿ-ವೃದ್ಧಿಯಾಗಲು ತಡವೇನು – ಅಹಬುದ್ಧಿಯಾಗಿ ಭಜಿಸುವ ಬಾಳುವೆಗೆ – ಸ-ಮೃದ್ಧಿಯಾಗಿ ಸರ್ವ ಸಿದ್ಧಿಯ ಕೊಡಲಾಗಿ ||1|| ನಂಬಿದ್ದ ಸುಜನರು ಹರಿಯೆ – ಕೆಟ್ಟದೆಂಬ ಸುದ್ದಿಯ ನಾನರಿಯೆ – ಸತ್ಕು-ಟುಂಬ ಎಂಬುದು ಹೊಸಪರಿಯೆ – ಅಹಬೆಂಬಲವಾಗಿ ಸಜ್ಜನರ ಸಲಹುವ ಕೃ-ಪಾಂಬುಧಿ ಮೂಜಗಕೊಲಿಯಲೋಸುಗ ಬಂದು ಉಲಿಯೆ||2|| ಶೇಷಗಿರೀಶ ಮದ್ಬಂಧು – ಆದಿಕೇಶವ ಗುರುವೆ ನೀನೆಂದು – ಕೃಷ್ಣಕ್ಲೇಶ ಬಿನ್ನೈಸುವೆ ಇಂದು – ಅಹಆಸೆ ಬಿಟ್ಟು

ಇದ್ದೀಯಾ ಶ್ರೀ ಹರಿ ನೀನೊಲಿದು Read More »

ಇಂದು ಸೈರಿಸಿರಿ ಶ್ರೀಕೃಷ್ಣನ ತಪ್ಪ

ಇಂದು ಸೈರಿಸಿರಿ ಶ್ರೀಕೃಷ್ಣನ ತಪ್ಪ ಮುಂದಕೆ ನಿಮ್ಮ ಮನೆಗೆ ಬಾರನಮ್ಮ ಮಗುವು ಬಲ್ಲುದೆ ಇಷ್ಟು ಬೆಣ್ಣೆಯ ಕದ್ದರೆಬಿಗಿಯ ಬಹುದೇ ಶ್ರೀ ಚರಣವನುಅಗಣಿತ ಮಹಿಮನ ಅಂಜಿಸಲೇಕಮ್ಮಬಗೆಯ ಬಾರದೆ ನಿಮ್ಮ ಮಕ್ಕಳಂತೆ ||1|| ಹಸುಮಗುವನು ಕಂಡು ಮುದ್ದಿಸಲೊಲ್ಲದೆಹುಸಿಗ ಕಳ್ಳನೆಂದು ಕಟ್ಟುವಿರಿವಸುಧೆಯೊಳಗೆ ನಾನೊಬ್ಬಳೆ ಪಡೆದೆನೆ ನಿಮ್ಮಹಸು ಮಗುವಿನಂತೆ ಭಾವಿಸಬಾರದೆ ||2|| ಎಷ್ಟು ಸಾರಿಯು ನಾ ಬೇಡವೆಂದರೆ ಕೇಳದುಷ್ಟ ಮಕ್ಕಳ ಕೂಡೆ ಒಡನಾಟವಕಟ್ಟಿದ ನೆಲುವಿನ ಬೆಣ್ಣೆಯನೀವೆನುಬಿಟ್ಟು ಕಳುಹಿರಮ್ಮ ಆದಿಕೇಶವನ ||3||

ಇಂದು ಸೈರಿಸಿರಿ ಶ್ರೀಕೃಷ್ಣನ ತಪ್ಪ Read More »

ಇಂದು ನೀ ಕರೆದು ತಾರೆ

ಇಂದು ನೀ ಕರೆದು ತಾರೆ – ಬಾರದೆ ಶ್ರೀಗೋ-ವಿಂದ ತಾ ಮುನಿದಿಹರೆ – ವಿರಹ ಬೇಗೆಯಲಿಬೆಂದು ಸೈರಿಸಲಾರೆ – ಸಖಿ, ನೀನು ತಂದು ತೋರೆ ನೊಂದರೂ ಮನದಾನಂದದಿಂದನಂದನಂದನನೆಂದು ಸೈರಿಸಿಎಂದಿಗೂ ಅಗಲಿರಲಾರೆ ಕರೆತಂದುಹೊಂದುಗೂಡಿಸೆ ಮಂದಗಮನೆ ಕಾಲಿಲ್ಲದಲೆ ಆಡಿದ – ವೇದ ತಂದಿತ್ತಕಾಲಿಲ್ಲದವನ ಪೊತ್ತ – ಅಮೃತ ತಂದಿತ್ತಕಾಲ ತೂಗಿ ನೋಡುತ್ತ – ಗಜಉನ್ಮತ್ತಕಾಲಿನಿಂದಲಿ ಕೊಲುವ ರೂಪದಿಕಾಲಿನಲಿ ರಿಪುವನು ಸೀಳಿದಕಾಲಿನಲಿ ತಾನಳೆದ ಮೇದಿನಿಕಾಲಿನಲಿ ನಡೆದ ಭಾರ್ಗವಕಾಲಿನಲಿ ವನವಾಸ ಪೋದನಕಾಲಿನಲಿ ಕಾಳಿಯನ ಮರ್ದಿಸಿದನಕಾಲಿನಲಿ ತ್ರಿಪುರರ ಗೆಲಿದನಕಾಲಿಗೆರಗುವೆ ತೇಜಿರೂಢನ ||1|| ಎವೆಯಿಕ್ಕದೆ ನೋಡಿದ – ತಲೆಯ ತಗ್ಗಿಸಿಕವಲು

ಇಂದು ನೀ ಕರೆದು ತಾರೆ Read More »

ಇತನೇ ಗುನ

ಇತನೇ ಗುನ ಜಾಮೇ ಸೋ ಸಂತ|| ಶ್ರೀಭಾಗವತ ಮಧ್ಯ ಜಸ ಗಾವತ ಶ್ರೀಮುಖ ಕಮಲಾಕಂತ್|| ಹರಿಕೋ ಭಜನ ಸಾಧುಕೀ ಸೇವಾ ಸರ್ವಭೂತ ಪರ ದಾಯಾ| ಹಿಂಸಾ ಲೋಭ ದಂಭ ಛಲ ತ್ಯಾಗೈ ವಿಷಸಮ ದೇಖೈ ಮಾಯಾ|| ಸಹನಶೀಲ ಆಸಯ ಉದಾರ ಅತಿ ಧೀರಜ ಸಹಿತ ವಿವೇಕೀ| ಸತ್ಯವಚನ ಸಬಕೋ ಸುಖದಾಯಕ ಗಹಿ ಅನನ್ಯ ವ್ರತ ಏಕೀ|| ಇಂದ್ರೀಜಿತ ಅಭಿಮಾನ ನ ಜಾಕೇ ಕರೈ ಜಗತಕೋ ಪಾವನ್| ಭಗವತ ರಸಿಕ ತಾಸುಕೀ ಸಂಗತಿ ತೀಲಹು ತಾಪ ನಸಾವನ್||                                    

ಇತನೇ ಗುನ Read More »

ಇತನೀ ಬಿನತಿ

ಇತನೀ ಬಿನತಿ ರಘುನಂದನ ಸೇ ದುಃಖದ್ವಂದ್ವ ಹಮಾರಾ ಮಿಟಾಓ ಜೀ|| ಅಪನೇ ಪದಪಂಕಜಪಿಂಜರ ಮೇ(ಪ್ರಭು) ಚಿತಹಂಸ ಹಮಾರಾ ಬೈಠಾವೋ ಜೀ|| ತುಲಸೀದಾಸ ಕಹೇ ಕರಜೋಡಿ (ಭವ) ಸಾಗರ ಪಾರ ಉತಾರೋ ಜೀ||                                                  —-ತುಲಸೀದಾಸ

ಇತನೀ ಬಿನತಿ Read More »

ಇನಿತಾದರೂ ನಿನಗೆ ಮತಿಯಿಲ್ಲವೆ

ಇನಿತಾದರೂ ನಿನಗೆ ಮತಿಯಿಲ್ಲವೇ ಮನವೆ| ಹೀನಾಯ ಮಾಡದಿರು ಪರದೋಷಗಳನೆಣಿಸಿ|| ಅವನ ಬಯ್ಯುವೆ ಯಾಕೆ ಅವನ್ಯಾರು ನೀನ್ಯಾರು ಅವನ ಪಾಪಕೆ ನೀನು ಭಾಗಿಯಾದೆ| ಅವನು ಉತ್ತಮನಾದರವನು ಬದುಕಿದ ಕಾಣೊ ಅವ ಪುಣ್ಯ ಮಾಡಿದರೆ ಅವನ ಕುಲ ಉದ್ಧಾರ|| ನೀನು ಪಡೆವುದರಲ್ಲಿ ಬೇಡಬಂದವನಲ್ಲ ನಿನಗು ಅವನಿಗು ಏನು ಸಂಬಂಧವೊ| ಮನೆ ಒಡವೆ ವಸ್ತ್ರಗಳ ಭಾಗ ಕೇಳುವುದಿಲ್ಲ ಕ್ಷಣಕ್ಷಣಕೆ ಸಂದೇಹ ಮಾಡಿಕೊಂಬುದು ಸಲ್ಲ|| ನಿನ್ನ ಗತಿ ಮಾರ್ಗಕ್ಕೆ ಅವ ನಡೆದು ಬರುವನೇ ನಿನ್ನಿಂದ ಪರಲೋಕ ಅವಗೆ ಉಂಟೆ| ನಿನ್ನೊಳಗೆ ನೀ ತಿಳಿದು

ಇನಿತಾದರೂ ನಿನಗೆ ಮತಿಯಿಲ್ಲವೆ Read More »