ವಚನವೇದ

ಧನ್ಯ ಧನ್ಯವಿದೇ ಸುದಿನ

ಧನ್ಯ ಧನ್ಯವಿದೇ ಸುದಿನ ನಾವೆಲ್ಲರು ಸೇರುವ, ಪುಣ್ಯಭೂಮಿ ಭಾರತಿಯಲಿ ನಿನ್ನ ಸತ್ಯಧರ್ಮಗಳನು ಈ ದಿನವೇ ಸಾರುವ!! ಎದೆ ಎದೆಯೂ ನಿನ್ನ ಧಾಮ ನಿನ್ನ ಪುಣ್ಯ ಮಧುರ ನಾಮ ದಿಗ್ದಿಸೆಗಳ ತುಂಬಿದೆ! ಭಕ್ತವೃಂದ ನಿನ್ನಪಾರ ಮಹಿಮೆಯನ್ನು ಸಾರಿದೆ! ನಾವೆಂದಿಗು ಬಯಸೆವಯ್ಯ ಜನಧನಾದಿ ಗೌರವ, ನಮಗಿಲ್ಲವೋ ಅನ್ಯ ಕಾಮ ಆರ್ತರಾಗಿ ಬಂದೆವಿಲ್ಲಿ ನಂಬಿ ನಿನ್ನ ಪಾದವll ನಿನ್ನ ಪಾದ ಅಮೃತನಿಲಯ ನಮಗಿಲ್ಲವೊ ಮರಣಭಯ! ಜಯತು ಜಯತು-ನಿರ್ಭಯll – ವಚನವೇದ

ಧನ್ಯ ಧನ್ಯವಿದೇ ಸುದಿನ Read More »

ನಾ ಪಾಪಿಯಾದರೂ ನನ್ನ ಕಡೆಗಾಲದಲಿ

ದುರ್ಗಾ – ಝಪತಾಲ ನಾ ಪಾಪಿಯಾದರೂ ನನ್ನ ಕಡೆಗಾಲದಲಿ ನಿನ್ನ ಶ್ರೀನಾಮವನು ಜಪಿಸುತಿರಲು ಮುಕ್ತಿಗೊಯ್ಯದೆ ನೀನು ಬಿಡುವಳೇನು ? ಸ್ತ್ರೀಹತ್ಯ ಪಶುಹತ್ಯ ಭ್ರೂಣ ಬ್ರಾಹ್ಮಣ ಹತ್ಯ ಇನಿತೆಲ್ಲ ಪಾಪಗಳ ಮಾಡಿದ್ದರೂ ನಿನ್ನ ಶ್ರೀಶುಭನಾಮ ನನ್ನ ದುರಿತವ ನೀಗಿ ಬ್ರಹ್ಮಪದವಿಯ ಕಡೆಗೆ ಎತ್ತದೇನು? – ವಚನವೇದ

ನಾ ಪಾಪಿಯಾದರೂ ನನ್ನ ಕಡೆಗಾಲದಲಿ Read More »

ಭಾವುಕನ ಭಾವದೊಲು ಅವನವನ ಒಲವು

ಗಜಲ್ – ಝಪತಾಲ ಭಾವುಕನ ಭಾವದೊಲು ಅವನವನ ಒಲವು ಆ ಒಲವಿಗನುಸಾರ ಅವನು ಪಡೆಯುವ ಫಲವು|| ಶ್ರದ್ದೆ ಎಲ್ಲಕು ಮೂಲ ತಾಯ ಶ್ರೀಪಾದಮಧುಸರಸಿಯಲಿ ಮುಳುಗಿರುವ ನನಗೇಕೆ ಮತ್ತೆ ಜಪತಪ ಹೋಮ ಹವನಾದಿ ಕರ್ಮಗಳ ರಗಳೆ ? – ವಚನವೇದ

ಭಾವುಕನ ಭಾವದೊಲು ಅವನವನ ಒಲವು Read More »