ಶ್ರೀಶ್ಯಾಮನಾಮ ಸಂಕೀರ್ತನಮ್

ವಂದೇ ವಂಶೀಧರಂ ಕೃಷ್ಣಂ ಸ್ಮಯಮಾನಮುಖಾಂಬುಜಮ್ ಪೀತಾಂಬರಧರಂ ನೀಲಂ ಮಾಲ್ಯಚಂದನಭೂಷಿತಮ್ || ರಾಧಾಚಿತ್ತಚಕೋರೇಂದುಂ ಸೌಂದರ್ಯಸುಮಹೋದಧಿಮ್ ಪರಾತ್ಪರತರಂ ದೇವಂ ಬ್ರಹ್ಮಾನಂದಕೃಪಾನಿಧಿಮ್ || ಓಂ ಶ್ರೀನಾರದೋದ್ಧವ-ಪಾರ್ಷದ-ಗೋಪಗೋಪೀಗಣ ಶ್ರೀರಾಧಾಸಮೇತ-ಶ್ರೀಕೃಷ್ಣಪರಮಾತ್ಮನೇ ನಮಃ * ಸತ್ಯಸನಾತನಸುಂದರ ಶ್ಯಾಮ ನಿತ್ಯಾನಂದಘನೇಶ್ವರ ಶ್ಯಾಮ * ಲಕ್ಷ್ಮೀಸೇವಿತಪದಯುಗ ಶ್ಯಾಮ ಸುರಮುನಿವರಗಣಯಾಚಿತ ಶ್ಯಾಮ ಭೂಭಾರೋದ್ಧರಣಾರ್ಥಿತ ಶ್ಯಾಮ ಲೋಕಬಂಧುಗುರುವಾಚಕ ಶ್ಯಾಮ ಧರ್ಮಸ್ಥಾಪನಶೀಲನ ಶ್ಯಾಮ ಸ್ವೀಕೃತನರತನುಸುರವರ ಶ್ಯಾಮ * ಮಾಯಾಧೀಶ್ವರಚಿನ್ಮಯ ಶ್ಯಾಮ ಯಾದವಕುಲಸಂಭೂಷಣ ಶ್ಯಾಮ ನಂದಯಶೋದಾಪಾಲಿತ ಶ್ಯಾಮ ಶ್ರೀವತ್ಸಾಂಕಿತಬಾಲಕ ಶ್ಯಾಮ ಮಾರಿತಮಾಯಾಪೂತನ ಶ್ಯಾಮ ಶಕಟಾಸುರಖಲಭಂಜನ ಶ್ಯಾಮ * ದಾಮೋದರಗುಣಮಂದಿರ ಶ್ಯಾಮ ಯಮಲಾರ್ಜುನತರುಭಂಜನ ಶ್ಯಾಮ ಗೋಪೀಜನಗಣಮೋಹನ […]

ಶ್ರೀಶ್ಯಾಮನಾಮ ಸಂಕೀರ್ತನಮ್ Read More »

ವಿಷಯದ ಸುಖ ವಿಷವೆಂದರಿಯದ ಮರುಳೆ,

ವಿಷಯದ ಸುಖ ವಿಷವೆಂದರಿಯದ ಮರುಳೆ, ವಿಷಯಕ್ಕೆ ಅಂಗವಿಸದಿರಾ. ವಿಷಯದಿಂದ ಕೆಡನೆ ರಾವಣನು ವಿಷಯದಿಂದ ಕೆಡನೆ ದೇವೇಂದ್ರನು ? ವಿಷಯದಿಂದಾರು ಕೆಡರು ಮರುಳೆ ? ವಿಷಯ ನಿರ್ವಿಷಯವಾಯಿತ್ತೆನಗೆ ನಿನ್ನಲ್ಲಿ. ಚೆನ್ನಮಲ್ಲಿಕಾರ್ಜುನಂಗೆ ಒಲಿದವಳ ನೀನಪ್ಪಿಹೆನೆಂದಡೆ ಒಣಗಿದ ಮರನಪ್ಪುವಂತೆ ಕಾಣಾ

ವಿಷಯದ ಸುಖ ವಿಷವೆಂದರಿಯದ ಮರುಳೆ, Read More »

ವಿರಕ್ತಿಯೇ ಅವಿರಕ್ತಿ, ವಿರಕ್ತನೆನ್ನದಿರಣ್ಣಾ.

ವಿರಕ್ತಿಯೇ ಅವಿರಕ್ತಿ, ವಿರಕ್ತನೆನ್ನದಿರಣ್ಣಾ. ನೋಟದ ಕರುಳ ಕೊಯ್ಯದನ್ನಕ್ಕರ, ಕ್ರೀಯದ ಕರಬೋನಗಳೊಡೆಯದನ್ನಕ್ಕರ, ಅಷ್ಟಮದಾದಿಗಳೆಂಬವ ಹೊಟ್ಟುಹುರಿಯದನ್ನಕ್ಕರ, ಬೇಕುಬೇಡಾಯೆಂದು ಪರಿವ ಸರ್ವಸಂದೇಹವ ಹೂಳದನ್ನಕ್ಕರ ವಿರಕ್ತ ವಿರಕ್ತನೆನ್ನದಿರಣ್ಣಾ. ಶ್ರೀಶೈಲಚೆನ್ನಮಲ್ಲಿಕಾರ್ಜುನದೇವನೊಬ್ಬನೆ ವಿರಕ್ತ ಕಾಣಿರಣ್ಣಾ.

ವಿರಕ್ತಿಯೇ ಅವಿರಕ್ತಿ, ವಿರಕ್ತನೆನ್ನದಿರಣ್ಣಾ. Read More »

ವಿರಕ್ತಿ ವಿರಕ್ತಿಯೆಂಬವರು

ವಿರಕ್ತಿ ವಿರಕ್ತಿಯೆಂಬವರು ವಿರಕ್ತಿಯ ಪರಿಯೆಂತುಟು ಹೇಳಿರಯ್ಯಾ ? ಕಟ್ಟಿದ್ದ ಲಿಂಗವ ಕೈಯಲ್ಲಿ ಹಿಡಿದು ಬತ್ತಲೆಯಿರ್ದಡೆ ವಿರಕ್ತನೆ ? ಉಟ್ಟುದ ತೊರದ ಮತ್ತೆ ಕಟ್ಟಿದ ಲಿಂಗವ ಕೈಯಲ್ಲಿ ಹಿಡಿಯಲೇಬೇಕು. ಉಟ್ಟುದ ತೊರೆಯದೆ ಕಟ್ಟಿದ ಲಿಂಗವ ಕೈಯಲ್ಲಿ ಹಿಡಿದ ಭ್ರಷ್ಟರನೇನೆಂಬೆ ಚೆನ್ನಮಲ್ಲಿಕಾರ್ಜುನಾ ?

ವಿರಕ್ತಿ ವಿರಕ್ತಿಯೆಂಬವರು Read More »

ವಿರಕ್ತಿ ವಿರಕ್ತಿ ಎಂಬರು ವಿರಕ್ತಿಯ ಪರಿ ಎಂತುಂಟು ಹೇಳಿರಯ್ಯಾ.

ವಿರಕ್ತಿ ವಿರಕ್ತಿ ಎಂಬರು ವಿರಕ್ತಿಯ ಪರಿ ಎಂತುಂಟು ಹೇಳಿರಯ್ಯಾ. ಕಟ್ಟಿದ ಲಿಂಗವ ಕೈಯಲ್ಲಿ ಹಿಡಿದಿದ್ದರೆ ವಿರಕ್ತನೆ ? ಹುಟ್ಟು ಕೆತ್ತುವ ಡೊಂಬನಂತೆ ಬಿಟ್ಟಮಂಡೆಯ ಕೇಶವ ನುಣ್ಣಿಸಿ ಬಣ್ಣಿಸಿ, ಎಣ್ಣೆಯ ಗಂಟ ಹಾಕಿದಡೆ ವಿರಕ್ತನೆ ? ಕಟ್ಟುಹರಿದ ಪಂಜಿನಂತೆ, ಬಿಟ್ಟಮಂಡೆಯ ಕಟ್ಟದಿರ್ದಡೆ ವಿರಕ್ತನೆ ? ಹರದನಂತೆ ಹೇಸಿಯಾಗಿರ್ದಡೆ ವಿರಕ್ತನೆ ? ಮೂಗನಂತೆ ಮಾತನಾಡದಿರ್ದಡೆ ವಿರಕ್ತನೆ ? ಹೊನ್ನು ಹೆಣ್ಣು ಮಣ್ಣ ಬಿಟ್ಟು ಅಡವಿಯಾರಣ್ಯದಲ್ಲಿರ್ದಡೆ ವಿರಕ್ತನೆ ?ಅಲ್ಲ. ವಿರಕ್ತನ ಪರಿಯೆಂತೆಂದೊಡೆ ಒಡಲ ಹುಡಿಗುಟ್ಟಿ, ಮೃಡನೊಳೆಡದೆರಹಿಲ್ಲದಿರಬಲ್ಲಡೆ ವಿರಕ್ತನಪ್ಪನು. ಅಲ್ಲದಿರ್ದಡೆ ಮೈಲಾರಿ ಮಲ್ಲಿ

ವಿರಕ್ತಿ ವಿರಕ್ತಿ ಎಂಬರು ವಿರಕ್ತಿಯ ಪರಿ ಎಂತುಂಟು ಹೇಳಿರಯ್ಯಾ. Read More »

ವಾನರಂಗಳಿಗೆ ಭೈತ್ರ ತಪ್ಪಿಬಂದಡೆ

ವಾನರಂಗಳಿಗೆ ಭೈತ್ರ ತಪ್ಪಿಬಂದಡೆ ಮುತ್ತು ಮಾಣಿಕ್ಯ ನವರತ್ನದ ಪೆಟ್ಟಿಗೆಗಳು ಸಾರಿದವು. ಸಾರಿದಡೆ ಆ ವಾನರಂಗಳು ಬಲ್ಲವೆ ಮುತ್ತಿನ ರಕ್ಷೆಯ ? ನವರತ್ನದ ಪೆಟ್ಟಿಗೆಯ ತೆರದು ನೋಡಿ, ಕೆಯ್ಕೊಂಡು, ವಾನರಂಗಳು ಮೆದ್ದು ನೋಡಿ, ಹಣ್ಣಲ್ಲವೆಂದು ಬಿಟ್ಟು ಕಳದವು. ಲೋಕದೊಳಗೆ ಶರಣ ಸುಳಿದಡೆ, ಆ ಶರಣನ ನಡೆ ನುಡಿ ಚಾರಿತ್ರವ ಕರ್ಮಿಗಳೆತ್ತ ಬಲ್ಲರು ? ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರ ಇರವನು ನಿಮ್ಮ ಶರಣರು ಬಲ್ಲರಲ್ಲದೆ ಆ ವಾನರನಂತಹ ಮನುಜರೆತ್ತ ಬಲ್ಲರು.

ವಾನರಂಗಳಿಗೆ ಭೈತ್ರ ತಪ್ಪಿಬಂದಡೆ Read More »

ವೃಷಭನ ಹಿಂದೆ ಪಶುವಾನು ಬಂದೆನು ;

ವೃಷಭನ ಹಿಂದೆ ಪಶುವಾನು ಬಂದೆನು ; ನಂಬಿ ನಚ್ಚಿ ಪಶುವಾನುಬಂದೆನು. ಸಾಕಿ ಸಲಹಿಹನೆಂದು ಸಲೆ ನಚ್ಚಿ ಬಂದೆನು. ಒಲಿದಹ ಒಲಿದಹನೆಂದು ಬಳಿಯಲ್ಲಿ ಬಂದೆನು. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ನಂಬಿ ಬಂದ ಹೆಂಗೂಸ ಹಿಂದೊಬ್ಬರೆಳದೊಯ್ದರೆ ಎಂತು ಸೈರಿಸಿದೆ ಹೇಳಾ, ಎನ್ನ ದೇವರದೇವಾ ?

ವೃಷಭನ ಹಿಂದೆ ಪಶುವಾನು ಬಂದೆನು ; Read More »

ವಟವೃಕ್ಷದೊಳಡಗಿದ ಸಮರಸ ಬೀಜ

ವಟವೃಕ್ಷದೊಳಡಗಿದ ಸಮರಸ ಬೀಜ ಬಿsನ್ನಭಾವಕ್ಕೆ ಬಪ್ಪುದೆ ? ಕಂಗಳ ನೋಟ, ಕರುವಿಟ್ಟ ಮನದ ಸೊಗಸು ಅನಂಗನ ದಾಳಿಯ ಗೆಲಿದವು ಕಾಣಾ. ಈ ಮರೀಚಿಕಾಜಲದೊಳಡಗಿದ ಪ್ರಾಣಿ ವ್ಯಾಧನ ಬಲೆಗೆ ಸಿಲುಕುವುದೆ ? ನಿನ್ನ ಕೈವಶಕ್ಕೆ ಸಿಕ್ಕಿಹಳೆಂಬುದ ಮರೆಯಾ ಮರುಳೆ. ಚೆನ್ನಮಲ್ಲಿಕಾರ್ಜುನನಲ್ಲದೆ ಪರಪುರುಷ ನಮಗಾಗದ ಮೋರೆ ನೋಡಣ್ಣಾ.

ವಟವೃಕ್ಷದೊಳಡಗಿದ ಸಮರಸ ಬೀಜ Read More »

ಶರಣು ಶೇಷಾಚಲ ನಿವಾಸಗೆ

ಶರಣು ಶೇಷಾಚಲ ನಿವಾಸಗೆ | ಶರಣು ವರಹ ತಿಮ್ಮಪ್ಪಗೆ | ಶರಣು ಅಲಮೇಲುಮಂಗ ರಮಣಗೆ ಶರಣು ತಿರುವೆಂಗಳೇಶಗೆ ಧರಣಿಧರ ಗೋವಿಂದ ಮಾಧವ | ನರಹರಿ ಮಧುಸೂದನಾ | ಮುರಹರ ಮುಕುಂದ ಅಚ್ಯುತ | ಗಿರಿಜನುತ ನಾರಾಯಣಾ ||1|| ಕ್ಷೀರ ವಾರಿಧಿಶಯನ ವಾಮನ | ಮಾರ ಜನಕ ಗೋಪಿ ಜನ | ಜಾರ ನವನೀತ | ಚೋರ ರಿಪು ಸಂಹಾರ ಹರಿ ದಾಮೋದರ ||2|| ಗರುಡಗಮನನೆ ಗರಳ ತಲ್ಪನೆ | ಕರುಣಾಳುಗಳ ಒಡೆಯನೆ | ಉರಗ ಗಿರಿ ಸಿರಿ

ಶರಣು ಶೇಷಾಚಲ ನಿವಾಸಗೆ Read More »

ವ್ಯಾಸಾ ಬದರಿ ನಿವಾಸಾ

ವ್ಯಾಸಾ ಬದರಿ ನಿವಾಸಾ | ಎನ್ನಯ | ಕ್ಲೇಶ ನಾಶನಗೈಸು ಮೌನೀಶಾ | ಸಾಸಿರ ಮಹಿಮನೆ | ದೋಷರಹಿತ ಸುರ ಭೂಸುರ ಪರಿಪಾಲ ಶಾಶ್ವತ ವೇದ ಸತ್ಯವತಿ ವರಸೂನು ಭವತಿಮಿರ ಭಾನು | ಭೃತ್ಯವರ್ಗದ ಸುರಧೇನು | ಸತ್ಯಮೂರುತಿಯೆ ನೀನು | ಸ್ತುತಿಪೆ ನಾನು || ನಿತ್ಯ ನಿನ್ನಂಘ್ರಿಯರೇಣು | ಉತ್ತಮಾಂಗದಲಿ ಹೊತ್ತು ಹೊತ್ತಿಗೆ ಸೂಸುತ್ತಿರಲೆನಗದು | ಅತ್ಯಂತ ಸುಖತರ | ಸುತ್ತವ ಸುಳಿಯೆಂದೆತ್ತಿ ಕಡೆಗೆಯಿಡು | ಎತ್ತ ನೋಡಲು ವ್ಯಾಪುತ ಸದಾಗಮ ||1|| ಲೋಕ ವಿಲಕ್ಷಣ

ವ್ಯಾಸಾ ಬದರಿ ನಿವಾಸಾ Read More »

ವ್ಯಾಸರಾಯರ ಸ್ಮರಿಸಿರೋ

ವ್ಯಾಸರಾಯರ ಸ್ಮರಿಸಿರೋ ವ್ಯಾಸರಾಯರ ಸ್ಮರಿಸಿ ಏಸು ಜನ್ಮದ ಪಾಪ ನಾಶವಾಗುವುದು ನಿಮ್ಮಾಶೆ ಸಿದ್ಧಿಸುವುದು ಲೇಸಾಗಿ ಸುಖಿಸಿ ಆನಂದ ವೈಕುಂಠದಲಿ ವಾಸವಾಗುವುದು ನಿಜ ಭಕುತಿಯಲಿ ಬಿಡದೆ ಪಿತನಿಂದ ನೊಂದು ರತಿಪಿತನ ಸ್ಮರಿಸುತ ಪ್ರತಿಬಂಧಕಗಳ ಪ್ರತಿಯಾಗಿ ಬಂದಿರಲು ಅತಿವೇಗದಿಂದ ಪಾರಂಗತನಾಗಿ ಬಲು ಮತಿವಂತನಾಗಿ ಮುದದೀ ಕ್ಷಿತಿಯ ಭಾರವ ವೊಹಿಸಿ ಕೃತಭುಜ ಮುನೀಶ್ವರನ ಸ್ತುತಿಸುತಲ್ಲಿದ್ದು ಮಿತಿಕಾಲ ಹಿಂಗಳದು ಸುತಗೆ ರಾಜ್ಯವನಿತ್ತು ಕೃತಕಾರ್ಯನಾಗಿ ಅಚ್ಯುತನ ವರದಿಂದ ಬಂದು ||1|| ಅಲ್ಲಿ ತ್ರಿಣಿನೇತ್ರ ಶ್ರೀ ವಲ್ಲಭನ ಶ್ರೀಪಾದ ಪಲ್ಲವಾರುಣಿ ಚಿತ್ತದಲ್ಲಿ ಪ್ರತಿದಿವಸದಲಿ ನಿಲ್ಲಿಸಿ ನಿಗಮಾರ್ಥದಿಂದ

ವ್ಯಾಸರಾಯರ ಸ್ಮರಿಸಿರೋ Read More »

ವ್ಯಾಸರಾಯರ ಸೇವೆ ಲೇಸಾಗಿ ಮಾಡಲು

ವ್ಯಾಸರಾಯರ ಸೇವೆ ಲೇಸಾಗಿ ಮಾಡಲು ದಾಸನೆಂದೆನಿಸಿಕೊಂಬ ಸಾಸಿರನಾಮದ ವಾಸುದೇವನ ಭಕ್ತ ಕಾಷಾಯ ವಸ್ತ್ರಧರ ತಾ ಸಹಗಮನದಿ ಪತಿಸಹ ಪೋಗುವ ಆ ಸ್ತ್ರೀಯು ಬ್ರಹ್ಮಣ್ಯತೀರ್ಥರಲ್ಲಿಗೆ ಪೋಗೆ ಶ್ರೀಶ ಬದರಿಯಲ್ಲಿ ಪೇಳಿದ ಮಹಿಮೆಯ ಆ ಸುಮಹಿಮ ಪ್ರಹ್ಲಾದನ್ನ ಸ್ಮರಿಸುತ್ತ ಮೋಸ ಬರುವುದೆಂದಾಲೋಚನೆ ಇಲ್ಲದೆ ಆ ಸತಿ ವಂದಿಸೆ ಸುಮಂಗಲ್ಯವನಿತ್ತು ಆ ಸಮಯದಿ ಮಂತ್ರಾಘ್ರ್ಯಾವನೆ ಕೊಂಡು ತಾ ಸುಮ್ಮಾನದಿ ಬನ್ನೂರಿಗೆ ಪೋಗ್ಯತಿ ಯಾ ಸತಿಪತಿಯ ಪ್ರಾಣವನುಳಿಹಿ ರನ್ನ ತಾ ಸಮೀಪದಿ ಮಠದಲ್ಲಿ ವಾಸಮಾಡಿಸಿ ಕುಸುಮಾಕ್ಷತೆ ಫಲ ಮಂತ್ರಿಸಿ ಆಕೆಗೆ ಕೊಟ್ಟು ಆ

ವ್ಯಾಸರಾಯರ ಸೇವೆ ಲೇಸಾಗಿ ಮಾಡಲು Read More »

ವ್ಯಾಪಾರ ಉದ್ಯೋಗವನು ಮಾಡುವೆ

ವ್ಯಾಪಾರ ಉದ್ಯೋಗವನು ಮಾಡುವೆ | ಭೂಪಾಶದೊಳಗೆ ಎಲ್ಲರಿಗೆ ಬಲ್ಲಿದನಾಗಿ ಮುರಾರಿ ನಾಮವೆಂಬೊ ಮುಂಡಾಸವನೆ ಸುತ್ತಿ | ಅರವಿಂದನಾಭವೆಂಬೊ ಅಂಗಿಯ ತೊಟ್ಟು || ನರಹರಿನಾಮವೆಂಬೊ ನಡುಕಟ್ಟನೆ ಸುತ್ತಿ | ಕರುಣಾಸಾಗರನೆಂಬೊ ಕಠಾರಿಯನು ಸಿಕ್ಕಿಸಿ ||1|| ಕಮಲನಾಭವೆಂಬೊ ಕಮಲದಾನಿ ಪಿಡಿದು | ತಿಮಿರದೋಷವೆಂಬೊ ಪಾಯಿಪೋಸು ಮೆಟ್ಟಿ || ಶಮೆದಮೆಯೆಂಬೊ ಪರಿಚಾರಕರ ಒಡಗೊಂಡು ಗಮಿಸಿದ್ದೆನೊ ಹರಿದಾಸರಿದ್ದ ಚಾವಡಿಗೆ ||2|| ಪೋಗಿ ನಮಸ್ಕಾರವೆಂದು ತಲೆಬಾಗಿ ನಿಲ್ಲಲು | ಭಾಗವತರು ಕರೆದು ಇಂಬನಿತ್ತು || ಯೋಗಕ್ಷೇಮವೆಲ್ಲ ವಿಚಾರಿಸಿ ಪ್ರೀತಿಯಲಿ | ಈಗಳೆ ಕುಳಿತ ಅಚ್ಯುತನ

ವ್ಯಾಪಾರ ಉದ್ಯೋಗವನು ಮಾಡುವೆ Read More »

ವ್ಯರ್ಥ ಕೆಟ್ಟರು ಯಿಂದು ನರಮನುಜರು

ವ್ಯರ್ಥ ಕೆಟ್ಟರು ಯಿಂದು ನರಮನುಜರು ಸಾರ್ಥಕ ಮಾಡಿಕೊಳ್ಳರು ಶರೀರವುಳ್ಳವರು ನಿದ್ರೆಯೊಳಗಿದ್ದು ಪ್ರಪಂಚ ಮರುಳಾಟ ಪರ ಬುದ್ಧಿಯೊಳು ಮುಳುಗಿ ವಿಷಯವ ಭೋಗಿಸಿ ಮದ್ದು ತಿಂದಂತೆ ಇದ್ದಾದರು ಉದಯದಲಿ ಎದ್ದು ಕುಳಿತು ಒಮ್ಮೆ ಹರಿಯಂದು ನುಡಿಯದೆ ||1|| ಹರಿವ ಜಲವ ಮಿಂದು ಹರಿಗೆ ಅರ್ಪಿಸುತೇವೆಂದು ಬರಿದೆ ಬಾರದೆ ಬಿಂದು ಜಲ ತಂದು ಅರಘಳಿಗೆ ಅಚ್ಯುತಗೆ ಭಕುತಿಯಲಿ ಅಭಿಷೇಕ ಯರದು ಯಮಬಾಧೆ ಕಳೆಯಲರಿಯದ ಮಂಕು ||2|| ಅಡವಿಯಿಂದಲಿ ಒಂದು ತುಳಸಿದಳವನೆ ತಂದು ತಡಿಯದಲೆ ತಾವರೆದಳನಯನನ ಅಡಿಗಡಿಗೆ ಏರಿಸಿ ಕರವ ಮುಗಿದು ಮುಕುತಿ

ವ್ಯರ್ಥ ಕೆಟ್ಟರು ಯಿಂದು ನರಮನುಜರು Read More »

ವೇಣು ಗೋಪಾಲವಿಠ್ಠಲರೇಯ

ವೇಣು ಗೋಪಾಲವಿಠ್ಠಲರೇಯ ನಿನ್ನ ಪದ ರೇಣು ನಂಬಿದ ಮಾನವ ಏನು ಅರಿಯದಲಿಪ್ಪ ನೀನೊಲಿದು ಕರುಣದಲಿ e್ಞÁನ ಭಕುತಿಯ ಕೊಡುವುದು ಸ್ವಾಮಿ ಪರದೈವ ನೀನೆಂದು ಮೂಢಮತಿಯಾದವನು | ಪರಿಪೂರ್ಣವಾಗಿ ನಿರುತ | ನೆರೆ ನಂಬಿದೆನು ನಾನಾ ಪ್ರಕಾರದಲಿ ಸ್ಮರಣೆ ಮಾಡುತ ಮನದಲಿ | ತರತಮ್ಯ ಭಾವದಲಿ ಮಾರ್ಗವನೆ ತೋರಿ ವಿ ಸ್ತರ ಮಾಡು ಇವನ ಕೀರ್ತಿ ಕರುಣಾಕರನೆ ನಿನ್ನ ಮೊರೆಹೊಕ್ಕ ಶರಣನ್ನ ಕರಪಿಡಿದು ಪಾಲಿಸುವುದು ಸ್ವಾಮಿ||1|| ಲೌಕಿಕವೆಲ್ಲಿನಗೆ ವೈದಿಕವೆಂದೆನಿಸಿ ಸಾಕುವುದು ಸಾಕಾರನೆ ನೂಕು ದುರಳದಿಂದ ಬಂದ ವಿಪತ್ತುಗಳ ತಾಕಗೊಡದಂತೆ

ವೇಣು ಗೋಪಾಲವಿಠ್ಠಲರೇಯ Read More »

ವೇಣಿ ಮಾಧವನ ತೋರಿಸೆ ಜಾಣೆ ತ್ರಿವೇಣಿ

ವೇಣಿ ಮಾಧವನ ತೋರಿಸೆ ಜಾಣೆ ತ್ರಿವೇಣಿ ಕಾಣದೆ ನಿಲ್ಲಲಾರೆನೆ ಕಾಣುತ ಭಕುತರ ಕರುಣದಿ ಸಲಹುವ ಜಾಣೆ ತ್ರಿವೇಣಿ ಕಲ್ಯಾಣಿ ಸುಸನ್ನುತೆ ಬಂದೆನೆ ಬಹಳ ದೂರದಿ ಭವಸಾಗರ ತರಣಿ ನಿಂದೆನೆ ನಿನ್ನ ತೀರದಿ ಒಂದು ಘಳಿಗೆ ನೀ ಹರಿಯ ಬಿಟ್ಟಿರಲಾರಿ ಮಂದಗಮನೆ ಎನ್ನ ಮುಂದಕ್ಕೆ ಕರೆಯೆ ||1|| ಶರಣಾಗತರನು ಪೊರೆವುದು ಇದು ನಿನ್ನ ಬಿರುದು ಕರುಣವಿಂದೆನ್ನ ಕರೆವುದು ಸ್ಮರಣೆ ಮಾತ್ರದಿ ಭವ ತಾಪವ ಹರಿಸುವ ಸ್ಮರನಪಿತನ ಮುರಹರನ ಕರುಣದಿ ||2|| ಸುಜನರಿಗೆಲ್ಲ ದಾತಳೆ ಸುಶೀಲೆ ಕೇಳೆ ಕುಜನರ ಸಂಗದೂರಳೆ

ವೇಣಿ ಮಾಧವನ ತೋರಿಸೆ ಜಾಣೆ ತ್ರಿವೇಣಿ Read More »

ವೆಂಕಟೇಶಾಯ ನಮೊ ವಿಜಯವಿಠ್ಠಲನೆ ನಮೊ

ವೆಂಕಟೇಶಾಯ ನಮೊ ವಿಜಯವಿಠ್ಠಲನೆ ನಮೊ | ಪಂಕಜಾತ್ಮಕ ಪಶುಪತಿ ಗುರು ನಮಿತ ಪಾದಾ | ಪಂಕಜವ ಪೊಗುಳವೆನು ಪರಿಪಾಲಿಸೆನ್ನ | ಕಿಂಕರನ ಕಿಂಕರರಿಗೆ ಕಿಂಕರನೆಂದೆನಿಸೊ ಶೌರ್ಯದಲಿ ತತ್ಸರ್ವ ಜನ್ಮದಲಿ ನಾನಾಶ (ಕ) ಕಾರ್ಯವಾಕಾರ್ಯವನು ತಿಳಿಯಲೊಲ್ಲದ ಕಾಮಾ | ತೂರ್ಯದಲಿ ಪಾಪಗಳೆ ರಚಿಸಿ | ಬೆಂಬಿಡದದೆ ಬಲು | ಧೈರ್ಯವಂತನು ನೀನಾಗಿ | ಧೈರ್ಯವಾಗಿದ್ದಾಗ ಜಡಜೀವ ಜಂತುಗಳು | ವೀರ್ಯದಲಿ ಪೊಕ್ಕು ದುಃಖಾತಿಶಯದಲಿ | ದುರ್ಯೋನಿ ಮುಖದಿಂದ ಜನನ ಜನಿತನಾದೆ | ಮರ್ಯಾದೆಗಳು ಇಲ್ಲದೆ ಹರಿಯೇ ||1|| ಕ್ಷಿತಿಯೊಳಗೆ

ವೆಂಕಟೇಶಾಯ ನಮೊ ವಿಜಯವಿಠ್ಠಲನೆ ನಮೊ Read More »

ವೆಂಕಟೇಶನೆ ಬಲ್ಲ ಪರಮ ಪಾತಕೀಯಾ

ವೆಂಕಟೇಶನೆ ಬಲ್ಲ ಪರಮ ಪಾತಕೀಯಾ | ಕಿನ್ನೇಶ ಮುನಿದು ಬಂದೇನು ಮಾಡುವನು ಚಿತ್ತದೊಲ್ಲಭನ ಸಮ್ಮತದಲ್ಲಿ ನಾರಿಯು | ಅತ್ತವಿತ್ತ ಊರು ಸುತ್ತುತಿರಲು | ಸುತ್ತಯಿದ್ದ ಬಂಧು ಬಳಗದವರು ಕೂಡಿ | ಮುತ್ತಿಕೊಂಡು ಅವಳನೇನು ಮಾಡುವರು ||1|| ಕದ್ದು ತಂದಾ ಒಡವೆ ರಾಜ್ಯವಾಳುವನಿಗೆ ತಿದ್ದುವಾ ಸರಿಪಾಲು ಲಂಚಕೊಟ್ಟು | ಇದ್ದವನು ಹಗಲಿರಳು ಕದ್ದರೆ ಆ ಊರು | ಎದ್ದು ಹಿಡಿದವರೆಲ್ಲ ಏನು ಮಾಡುವರು||2|| ತೊತ್ತಿನ ಮೇಲೆ ಒಡೆಯನ ದಯವಿರೆ | ತೊತ್ತು ಗರ್ತಿಗೆ ಅಂಜಿ ನಡಕೊಂಬಳೆ | ಕರ್ತು

ವೆಂಕಟೇಶನೆ ಬಲ್ಲ ಪರಮ ಪಾತಕೀಯಾ Read More »

ವೆಂಕಟೇಶನ ನಂಬಿರೊ ನೀವೆಲ್ಲರೂ

ವೆಂಕಟೇಶನ ನಂಬಿರೊ ನೀವೆಲ್ಲರೂ | ವೆಂಕಟೇಶನ ನಂಬಿರೋ || ವೆಂಕಟೇಶನ ನಂಬಿ | ಮಂಕುಜನರೆ ನಿಮ್ಮ | ಸಂಕಟ ಪರಿಹರಿಸಿ ತ | ನ್ನಂಕಿತವ ನೀವ ಗುಣ ಒಂದು ನೋಡಿದಿಯಾ ಅಜಮಿಳ | ಗುಣವೇನು ಮಾಡಿದನು | ಗುಣ ಶಿರೋಮಣಿ ಮ | ರಣ ಬಂದಾಗ ಸ್ಮ | ರಣೆ ಇತ್ತು ಅವನ ನಿ | ರ್ವಾಣಕ್ಕೆ ಕರಿಸಿದಾ ||1|| ಕುಲ ಒಂದು ನೋಡಿದಿಯಾ | ವಿದುರ ತಾನು ಕುಲದಲ್ಯಾತರವನು | ಕುಲಶಿಖಾಮಣಿ | ನಿಳಗೆ ಪೋಗಿ

ವೆಂಕಟೇಶನ ನಂಬಿರೊ ನೀವೆಲ್ಲರೂ Read More »

ವೆಂಕಟೇಶ ಮಂತ್ರ ಒಂದೇ

ವೆಂಕಟೇಶ ಮಂತ್ರ ಒಂದೇ ಸಂಕಟ ಪರಿಹರಿಸಿ ಸಂಪದವಿಯ ಕೊಡುವ ಬಲನ ಭೂಸುರಹತ ಪೋಗಾಡಿದ ಮಂತ್ರ | ಬಲಿಯ ಕನಕ ಸ್ತೇಯ ಕಳದ ಮಂತ್ರಾ || ಬಲವಂತ ವೃಷಭನ್ನ ಸಂಹರಿಸಿದ ಮಂತ್ರಾ | ಕಲಿಯುಗದೊಳಗಿದೆ ಸಿದ್ಧ ಮಂತ್ರಾ ||1|| ವೃದ್ಧ ಬ್ರಾಹ್ಮಣಗೆ ಪ್ರಾಯವನು ಕೊಟ್ಟ ಮಂತ್ರಾ | ಶುದ್ಧನ್ನ ಪರಿಶುದ್ದ ಮಾಳ್ಪ ಮಂತ್ರಾ | ಉದ್ಧರಿಸಿ ಕಾವ್ಯನ್ಯೊಂಚಿ ? ಮಾಡಿದ ಮಂತ್ರಾ | ಶ್ರದ್ಧೆಯನು ಪಾಲಿಸುವ ಸುಲಭ ಮಂತ್ರಾ||2|| ಗುರು ತಲ್ಪಕನ ದೋಷ ನಾಶನ ಮಾಡಿದ ಮಂತ್ರಾ |

ವೆಂಕಟೇಶ ಮಂತ್ರ ಒಂದೇ Read More »

ವೆಂಕಟೇಶ ಜಗದೀಶ ವೆಂಕಟೇಶ

ವೆಂಕಟೇಶ ಜಗದೀಶ | ವೆಂಕಟೇಶ || ವೆಂಕಟೇಶ ಜಗದೀಶ ಸದರುಶನ | ಶಂಖಪಾಣಿ ಅಕಳಂಕ ಚರಿತಾ ನಭಾಸ್ಥಾನನರಸಿಜನಾಭ ಭಜಕರ ಸು | ಲಭಾ ವಸುಧಾ ಶ್ರೀ ದುರ್ಗಾವ | ಲ್ಲಭಾ ಭಸುಮಾಸುರನ ಕೊಂದು ಭಸ್ಮ ಭೂಷಣನ ಪಾಲಿಸಿದ ಪಾವನಕಾಯ | ವಿಷವಕ್ಷಜದ ಅಸುರೆಯ ಮಡುಹಿ ದಾಸರುಗಳ ಕಾಹುವ ಶೇಷಭೂಷಾ ||1|| ದತ್ತ ವೈಕುಂಠ ಮಹಿದಾಸ ಹಯಗ್ರೀವ ಹಂಸಾ | ಸತ್ಯಪತಿ ಸೂನು ತಾಪಸಾ | ಚಿತ್ತಜಪಿತ ದೇವೋತ್ತಮ ಆಗಮಾ | ಸ್ತೋತ್ರವಿನುತ ಜಗವ ಸುತ್ತಿಪ್ಪ ಸುರಗಂಗೆ |

ವೆಂಕಟೇಶ ಜಗದೀಶ ವೆಂಕಟೇಶ Read More »

ವೆಂಕಟಾಚಲನೆ ಬಾರೊ ಶಂಕರಾಭರಣ ಶಾಯಿ

ವೆಂಕಟಾಚಲನೆ ಬಾರೊ ಶಂಕರಾಭರಣ ಶಾಯಿ ಕಿಂಕರರಿಗೊಲಿದ ನಿಃಶಂಕ ಬಾರೊ ಪೊಂದೇರಿನೊಳಗೆ ಭೂಮಿ ಇಂದಿರೆ ಕೂಡ | ಚಂದದಿಂದಲೊಪ್ಪುತಿಹ ಇಂದುವದನಾ ಮಂದರೋದ್ಧಾರನೆ ಮಹನಂದ ಮೂರುತಿ ವೃಂದಾರಕ ವಂದ್ಯಪಾಲ ವಂದಿಪೆ ನಿಂದು ||1|| ಲೌಕಿಕ ವಿಲಕ್ಷಣ ಅನೇಕ ಏಕಾ | ಸಾಕಾರ ವಿಗ್ರಹ ಪುಣ್ಯಶ್ಲೋಕ ವಿಭುವೆ || ಪ್ರಾಕೃತ ರಹಿತಗಾತ್ರ ಲೋಕಪಾವನ | ಶೋಕ ಮೂಲನಾಶನ ಅಶೋಕ ಜನಕಾ ||2|| ಆಗಮ ಮಣಿ ಕಣಿಯೆ ಅಗಣಿತ ಬಂಧು | ಆಗನಾಗಧಾರಕನೆ ನಾಗ ಭಂಜನಾ || ಆಕಾಶ ಗಂಗೆಯ ಅಂಗುಷ್ಟದಿ ಪೆತ್ತನೆ

ವೆಂಕಟಾಚಲನೆ ಬಾರೊ ಶಂಕರಾಭರಣ ಶಾಯಿ Read More »

ವೆಂಕಟಾಚಲ ಪಂಕಜ ಪತಿ

ವೆಂಕಟಾಚಲ ಪಂಕಜ ಪತಿ | ಪಂಕಜ ಸಖ ಸಂಕಾಶಾನೇಕಾ | ಸಂಕಟಳಿದು ನಿಃಶಂಕನ ಮಾಡೊ | ಅಂಕೆಯವನೆಂದು || ಬಂದೆ ಎದುರಿಲಿ ನಿಂದೆ ಸಿರಬಾಗಿ | ಒಂದೆ ವಂದನೆಯೆಂದೆ ಲೋಕದ ತಂದೆ ಮನಸಿಗೆ | ತಂದೆ ನಿನಗ ಇಂದೆ ಅಂದದನು | ಹಿಂದೆ ಯೆಸಗಿದ ದ್ವಂದ್ವ ಪಾಪಕೆ ಒಂದೆ ನಿನ್ನಂಘ್ರಿ | ಸಂದೇ ನಾರದೆ ಮುಂದೆ ಬಾರದೆ ಎಂದೆಗೆಂದಿಗೆ ಮುಂದೆ ಜನನಗಳು ||1|| ನೋಡು ಎನ್ನ ಕೂಡಾಡು ದಯವನ್ನು | ಮಾಡು ಮುದದಿಂದಲಾಡು ಮಾತನು ನೀಡು ಕರುಣವ

ವೆಂಕಟಾಚಲ ಪಂಕಜ ಪತಿ Read More »

ವೆಂಕಟಾಚಲ ನಿಲಯ ಪಿಡಿಯೆನ್ನ ಕೈಯ

ವೆಂಕಟಾಚಲ ನಿಲಯ ಪಿಡಿಯೆನ್ನ ಕೈಯ ಪಂಕಜಾಲಯ ಸುಪ್ರೀಯ ಪಂಕಜಭವ ಅಹಿ ಕಂಕಣನುತ ಪದ- ಪಂಕಜ ತೋರೊ ಮೀನಾಂಕನ ಜನಕ ಪತಿತ ಪಾವನ ಮೋಹನ, ಪಾಲಿಸೊ ಎನ್ನ ಸತತ ಬಿಡದೆ ನೋಡೆನ್ನ ಹಿತರಹಿತರಾದವರನ್ನ ಪೊರೆದಳಿದೆ ಘನ್ನ ನತಜನರಿಗೆ ಪ್ರಸನ್ನ ಕ್ರತುಭುಜ ದಿತಿಸುತ ತತಿಸಂಗತಿಯಲಿ ಮಥಿಸಲು ವನಧಿಯ ಅತಿ ಸಮ್ಮತಿಯಲಿ ಚತುರ ಧರಿಸಿ ಪರ್ವತ ಸುರತತಿಗ- ಮೃತ ವುಣಿಸಿದ ಶಾಶ್ವತಗತಿನಾಥ ||1|| ಸತಿಯ ಕಾಯಿದ ವಿನೋದ ಸಾಮಜವರದ ಚತುರದಶ ಲೋಕಾಧಿನಾಥ ಗತಿ ನೀನೆ ಮಹಾಪ್ರಸಾದ ಪರಮಮೋದ ಅತಿಶಯದಿ ಪೊಳೆವ ಪಾದ

ವೆಂಕಟಾಚಲ ನಿಲಯ ಪಿಡಿಯೆನ್ನ ಕೈಯ Read More »

ವೆಂಕಟ ಬಾರೋ ರಿಪುಸಂಕಟ ಬಾರೊ

ವೆಂಕಟ ಬಾರೋ ರಿಪುಸಂಕಟ ಬಾರೊ ಕಿಂಕರಿಗೊಲಿದ ನಿಶ್ಶಂಕ ಬಾರೋ ಪೊಂದೇರಿನೊಳಗೆ ಭೂಮಿ ಇಂದಿರೆಗೂಡಿ ಚೆಂದದಿಂದಲೊಪ್ಪುತಿಹ ಇಂದುವದÀನ ಮಂದರೋದ್ಧಾರನೆ ಮಹಾನಂದ ಮೂರುತಿ ವೃಂದಾರಕ ವಂದ್ಯ ಪಾದ ವಂದಿಪನೆಂದು ||1|| ಲೌಕೀಕ ವಿಲಕ್ಷಣ ಅನೇಕ ಏಕ ಸಾಕಾರ ವಿಗ್ರಹ ಪುಣ್ಯಶ್ಲೋಕ ವಿಭುವೆ ಪ್ರಾಕೃತ ರಹಿತಗಾತ್ರ ಲೋಕಪಾವನ ಶೋಕ ಮೂಲ ನಾಶನ ವಿಶೋಕ ಜನಕ ||2|| ಅಂಗ ಅಂಗೀ ಭಾವದಿಂದ ಅಂಗದೊಳಿದ್ದು ಸಂಗಡ ತಿರುಗುವೊ ನೀಲಾಂಗ ನಿಸ್ಸಂಗ ಡಿಂಗರಿಗ ಹೃತ್ಕಮಲ ಭೃಂಗ ಜಗದಂತೆ- ರಂಗ ರಂಗರಾಜ ಸುಖಸಂಗ ಅನಂಗ ||3|| ಆಪ್ತಕಾಮ

ವೆಂಕಟ ಬಾರೋ ರಿಪುಸಂಕಟ ಬಾರೊ Read More »