ಲಿಂಗಾಂಗಸಂಗಸಮರಸಸುಖದಲ್ಲಿ ಮನ ವೇದ್ಯವಾಯಿತ್ತು.

ಲಿಂಗಾಂಗಸಂಗಸಮರಸಸುಖದಲ್ಲಿ ಮನ ವೇದ್ಯವಾಯಿತ್ತು. ನಿಮ್ಮ ಶರಣರ ಅನುಭಾವಸಂಗದಿಂದ ಎನ್ನ ತನು ಮನ ಪ್ರಾಣ ಪದಾರ್ಥವ ಗುರುಲಿಂಗಜಂಗಮಕ್ಕಿತ್ತು, ಶುದ್ಧಸಿದ್ಧಪ್ರಸಿದ್ಧಪ್ರಸಾದಿಯಾದೆನು. ಆ ಮಹಾಪ್ರಸಾದದ ರೂಪು ರುಚಿ ತೃಪ್ತಿಯ ಇಷ್ಟ ಪ್ರಾಣ ಭಾವಲಿಂಗದಲ್ಲಿ ಸಾವಧಾನದಿಂದರ್ಪಿಸಿ ಮಹಾಘನಪ್ರಸಾದಿಯಾದೆನು. ಇಂತೀ ಸರ್ವಾಚಾರಸಂಪತ್ತು ಎನ್ನ ತನುಮನ ವೇದ್ಯವಾಯಿತ್ತು. ಇನ್ನೆಲ್ಲಿಯಯ್ಯಾ, ಎನಗೆ ನಿಮ್ಮಲ್ಲಿ ನಿರವಯವು ? ಇನ್ನೆಲ್ಲಿಯಯ್ಯಾ ನಿಮ್ಮಲ್ಲಿ ಕೂಡುವುದು ? ಪರಮಸುಖದ ಪರಿಣಾಮ ಮನಮೇರೆದಪ್ಪಿ ನಾನು ನಿಜವನೈದುವ ಠಾವ ಹೇಳಾ ಚೆನ್ನಮಲ್ಲಿಕಾರ್ಜುನ ಪ್ರಭುವೆ ?

ಲಿಂಗಾಂಗಸಂಗಸಮರಸಸುಖದಲ್ಲಿ ಮನ ವೇದ್ಯವಾಯಿತ್ತು. Read More »

ಲಿಂಗಸ್ಥಲವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ,

ಲಿಂಗಸ್ಥಲವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ, ಲಿಂಗಸ್ಥಲ ನಿಃಶೂನ್ಯವಾಯಿತ್ತು ಸಂಗಮದೇವರಬೆನ್ನಿನಲ್ಲಿ. ಜಂಗಮಸ್ಥಲ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ, ಜಂಗಮಸ್ಥಲ ನಿಃಶೂನ್ಯವಾಯಿತ್ತು ಪ್ರಭುದೇವರಬೆನ್ನಿನಲ್ಲಿ. ಭಕ್ತಿಸ್ಥಲವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ, ಭಕ್ತಿಸ್ಥಲ ನಿಃಶೂನ್ಯವಾಯಿತ್ತು ಸಂಗನಬಸವರಾಜದೇವರಬೆನ್ನಿನಲ್ಲಿ. ಪ್ರಾಣಲಿಂಗಿಸ್ಥಲವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ, ಪ್ರಾಣಲಿಂಗಿಸ್ಥಲ ನಿಃಶೂನ್ಯವಾಯಿತ್ತು ಸಿದ್ಧರಾಮೇಶ್ವರದೇವರಬೆನ್ನಿನಲ್ಲಿ. ಪ್ರಸಾದಿಸ್ಥಲವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ, ಪ್ರಸಾದಿಸ್ಥಲ ನಿಃಶೂನ್ಯವಾಯಿತ್ತು ಚಿಕ್ಕದಣ್ಣಾಯಕರಬೆನ್ನಿನಲ್ಲಿ. ಐಕ್ಯಸ್ಥಲವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ, ಐಕ್ಯಸ್ಥಲ ನಿಃಶೂನ್ಯವಾಯಿತ್ತು ಅಜಗಣ್ಣದೇವರಬೆನ್ನಿನಲ್ಲಿ. ಇಂತೆನ್ನ ಷಟ್‍ಸ್ಥಲಂಗಳು ಒಬ್ಬೊಬ್ಬರ ಬೆನ್ನಿನಲ್ಲಿ ನಿಃಶೂನ್ಯವಾದವು ಎನಗಿನ್ನಾವ ಕಿಂಚಿತುಸ್ಥಲವೂ

ಲಿಂಗಸ್ಥಲವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ, Read More »

ಲಿಂಗವನು ಪುರಾತನರನು

ಲಿಂಗವನು ಪುರಾತನರನು ಅನ್ಯರ ಮನೆಯೊಳಯಿಕೆ ಹೋಗಿ ಹೊಗಳುವರು, ತಮ್ಮದೊಂದುದರ ಕಾರಣ. ಲಿಂಗವು ಪುರಾತನರು ಅಲ್ಲಿಗೆ ಬರಬಲ್ಲರೆ ? ಅನ್ಯವನೆ ಮರೆದು ನಿಮ್ಮ ನೆನೆವರ ಎನಗೊಮ್ಮೆ ತೋರಾ ಚೆನ್ನಮಲ್ಲಿಕಾರ್ಜುನಾ.

ಲಿಂಗವನು ಪುರಾತನರನು Read More »

ಲಿಂಗಪೂಜಕಂಗೆ ಫಲಪದಂಗಳಲ್ಲದೆ ಲಿಂಗವಿಲ್ಲ ?

ಲಿಂಗಪೂಜಕಂಗೆ ಫಲಪದಂಗಳಲ್ಲದೆ ಲಿಂಗವಿಲ್ಲ ? ಧರ್ಮತ್ಯಾಗಿಗೆ ನರಕವಲ್ಲದೆ ಲಿಂಗವಿಲ್ಲ ವೈರಾಗ್ಯಸಂಪನ್ನಂಗೆ ಮುಕ್ತಿಯಲ್ಲದೆ ಲಿಂಗವಿಲ್ಲ ? e್ಞನಿಗೆ ಪರಿಭ್ರಮಣವಲ್ಲದೆ ಲಿಂಗವಿಲ್ಲ ? ಇಂತಪ್ಪ ಭ್ರಾಂತನತಿಗಳದು ತನು ತಾನಾದ ಇರವೆಂತೆಂದಡೆ ದ್ವೈತವಳಿದು ಅದ್ವೈತದಿಂದ ತನ್ನ ತಾನರಿದಡೆ ಚೆನ್ನಮಲ್ಲಿಕಾರ್ಜುನಲಿಂಗವು ತಾನೆ.

ಲಿಂಗಪೂಜಕಂಗೆ ಫಲಪದಂಗಳಲ್ಲದೆ ಲಿಂಗವಿಲ್ಲ ? Read More »

ಲಿಂಗದಿಂದುದಯಿಸಿ ಅಂಗವಿಡಿದಿಪ್ಪ ಪುರಾತನರ

ಲಿಂಗದಿಂದುದಯಿಸಿ ಅಂಗವಿಡಿದಿಪ್ಪ ಪುರಾತನರ ಇಂಗಿತವನೇನೆಂದು ಬೆಸಗೊಂಬಿರಯ್ಯಾ ? ಅವರ ನಡೆಯೇ ಆಗಮ, ಅವರ ನುಡಿಯೇ ವೇದ ; ಅವರ ಲೋಕದಮಾನವರೆಂದೆನ್ನಬಹುದೆ ಅಯ್ಯಾ ? ಅದೆಂತೆಂದಡೆ, ಸಾಕ್ಷಿ ‘ವೃಕ್ಷದ್ಭವತಿ ಬೀಜಂ ಹಿ ತದ್‍ವೃಕ್ಷೇ ಲೀಯತೇ ಪುನಃ ೀ ರುದ್ರಲೋಕಂ ಪರಿತ್ಯಕ್ತಾ ಶಿವಲೋಕೇ ಭವಿಷ್ಯತಿ || ‘ ಎಂದುದಾಗಿ, ಅಂಕೋಲೆಯಬೀಜದಿಂದಾಯಿತ್ತು ವೃಕ್ಷವು ; ಆ ವೃಕ್ಷ ಮರಳಿ ಆ ಬೀಜದೊಳಡಗಿತ್ತು. ಆ ಪ್ರಕಾರದಲ್ಲಿ ಲಿಂಗದೊಳಗಿಂದ ಪುರಾತನರುದ್ಭವಿಸಿ, ಮರಳಿ ಆ ಪುರಾತನರು ಆ ಲಿಂಗದೊಳಗೆ ಬೆರಸಿದರು ನೋಡಿರಯ್ಯಾ. ಇಂತಪ್ಪ ಪುರಾತನರಿಗೆ ನಾನು

ಲಿಂಗದಿಂದುದಯಿಸಿ ಅಂಗವಿಡಿದಿಪ್ಪ ಪುರಾತನರ Read More »

ಲಿಂಗಕ್ಕೆ ಶರಣೆಂದು ಪೂಜಿಸಿ ಅರ್ಪಿಸಬಹುದಲ್ಲದೆ,

ಲಿಂಗಕ್ಕೆ ಶರಣೆಂದು ಪೂಜಿಸಿ ಅರ್ಪಿಸಬಹುದಲ್ಲದೆ, ಜಂಗಮವ ಪೂಜಿಸಿ ಸರ್ವಸುಖವನರ್ಪಿಸಿ ಶರಣೆನ್ನಬಾರದು ಎಲೆ ತಂದೆ. ಆಡಬಹುದು ಪಾಡಬಹುದಲ್ಲದೆ, ನುಡಿದಂತೆ ನಡೆಯಲು ಬಾರದು ಎಲೆ ತಂದೆ. ಚೆನ್ನಮಲ್ಲಿಕಾರ್ಜುನದೇವಾ, ನಿಮ್ಮ ಶರಣರು ನುಡಿದಂತೆ ನಡೆಯಲು ಬಲ್ಲರು ಎಲೆ ತಂದೆ.

ಲಿಂಗಕ್ಕೆ ಶರಣೆಂದು ಪೂಜಿಸಿ ಅರ್ಪಿಸಬಹುದಲ್ಲದೆ, Read More »

ಲಿಂಗಕ್ಕೆ ರೂಪ ಸಲಿಸುವೆ,

ಲಿಂಗಕ್ಕೆ ರೂಪ ಸಲಿಸುವೆ, ಜಂಗಮಕ್ಕೆ ರುಚಿಯ ಸಲಿಸುವೆ, ಕಾಯಕ್ಕೆ ಶುದ್ಧಪ್ರಸಾದವ ಕೊಂಬೆ. ಪ್ರಾಣಕ್ಕೆ ಸಿದ್ಧಪ್ರಸಾದವ ಕೊಂಬೆ. ನಿಮ್ಮ ಪ್ರಸಾದದಿಂದ ಧನ್ಯಳಾದೆನು. ಕಾಣಾ ಚೆನ್ನಮಲ್ಲಿಕಾರ್ಜುನಯ್ಯಾ.

ಲಿಂಗಕ್ಕೆ ರೂಪ ಸಲಿಸುವೆ, Read More »

ಲೋಕವ ಹಿಡಿದು ಲೋಕದ ಸಂಗದಂತಿಪ್ಪೆ.

ಲೋಕವ ಹಿಡಿದು ಲೋಕದ ಸಂಗದಂತಿಪ್ಪೆ. ಆಕಾರವಿಡಿದು ಸಾಕಾರಸಹಿತ ನಡೆವೆ. ಹೊರಗೆ ಬಳಸಿ ಒಳಗೆ ಮರೆದಿಪ್ಪೆ. ಬೆಂದನುಲಿಯಂತೆ ಹುರಿಗುಂದದಿಪ್ಪೆ. ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯಾ, ಹತ್ತರೊಳಗೆ ಹನ್ನೊಂದಾಗಿ ನೀರತಾವರೆಯಂತಿಪ್ಪೆ.

ಲೋಕವ ಹಿಡಿದು ಲೋಕದ ಸಂಗದಂತಿಪ್ಪೆ. Read More »

ಲೋಕದ ಚೇಷ್ಟೆಗೆ ರವಿ ಬೀಜವಾದಂತೆ,

ಲೋಕದ ಚೇಷ್ಟೆಗೆ ರವಿ ಬೀಜವಾದಂತೆ, ಕರಣಂಗಳ ಚೇಷ್ಟೆಗೆ ಮನವೇ ಬೀಜ. ಎನಗುಳ್ಳುದೊಂದು ಮನ. ಆ ಮನ ನಿಮ್ಮಲ್ಲಿ ಸಿಲುಕಿದ ಬಳಿಕ ಎನಗೆ ಭವವುಂಟೆ ಚೆನ್ನಮಲ್ಲಿಕಾರ್ಜುನಾ ?

ಲೋಕದ ಚೇಷ್ಟೆಗೆ ರವಿ ಬೀಜವಾದಂತೆ, Read More »

ಲಿಂಗಾಭವ ಭಸಿತಾಂಗ ಅಂಗಜಮದ ಭಂಗ

ಲಿಂಗಾಭವ ಭಸಿತಾಂಗ ಅಂಗಜಮದ ಭಂಗ ಶೃಂಗಾರ ಗುಣನಿಧಿ ಕೃಪಾಂಗ ಎನ್ನನು ಕಾಯೊ ರಜತಪರ್ವತವಾಸ ಸುಜನ ಮನವಿಲಾಸ ಅಜನಂದನ ರುದ್ರ ವೀರಭದ್ರಾ ಕುಜನಮತವನು ಬಿಡಿಸೊ ನಿಜಪಥವ ತೋರಿ ಭುಜಗಭೂಷಣ ಸಾಂಬ ಪ್ರಾಣ ಪ್ರತಿಬಿಂಬ ||1|| ನೀಲಕಂಧರ ವಿಶಾಲಗುಣ ಸುಂದರ ಫಾಲಲೋಚನ ಭಜಕ ಕಾಲಹರ ಪಾರ್ವತಿ ಲೋಲ ಭಕ್ತರ ಪಾಲ ಪಾಲಯ ಶ್ರೀ ಸಿರಿ ಲೊಲನಪ್ರಿಯ ||2|| ದುರ್ವಾಸ ಶುಕಮುನಿಯೆ ಉರ್ವಿಯಾಳ್ ನಿನಗೆಣೆಯೆ ಓರ್ವ ಮೂಕನ ಕೊಂದು ಮರಳೆ ಬಂದು ದೇವ ದೇವ ನಮ್ಮ ವಿಜಯವಿಠ್ಠಲರೇಯ ಸರ್ವೋತ್ತಮನೆಂಬ ನಾಮರಸ ಉಂಟಾ

ಲಿಂಗಾಭವ ಭಸಿತಾಂಗ ಅಂಗಜಮದ ಭಂಗ Read More »

ಲಿಂಗಾ ಎನ್ನಂತರಂಗ

ಲಿಂಗಾ ಎನ್ನಂತರಂಗ ಮಂಗಳಾಂಗ ಸರ್ವೋ-ತುಂಗನೆ ರಾಮ ಮಂದಾಕಿನೀಧರಗೆ ಗಂಗಾಂಬು ಮಜ್ಜನವೆ ಚಂದ್ರಮೌಳಿಗೆ ಗಂಧ ಕುಸುಮಾರ್ಪಣೆಯೆ ಇಂದು ರವಿನೇತ್ರಗೆ ಕರ್ಪೂರದಾರತಿಯೆ ಕಂದರ್ಪಜಿತಗೆ ಮಿಗಿಲಾಪೇಕ್ಷೆಯೆ ರಾಮಾ ||1|| ಘನವಿದ್ಯಾತುರಗೆ ಮಂತ್ರಕಲಾಪವೆ ಧನವತಿಯ ಸಖಗೆ ಕೈಕಾಣಿಕೆಯೆ ಮನೆರಜತ ಪರ್ವತಗೆ ಫಣಿಯ ಆಭರಣವೆ ಮನೋ ನಿಯಾಮಕಗೆನ್ನ ಬಿನ್ನಹವೆ ರಾಮಾ||2|| ವೈರಾಗ್ಯ ನಿಧಿಗೆ ಈ ವಿಷಯ ಪದಾರ್ಥವೆ ಗೌರಿಯ ರಮಣಗೆ ಈ ಸ್ತೋತ್ರವೆ ವೀರ ರಾಘವ ವಿಜಯವಿಠ್ಠಲ ನಿಜಹಸ್ತ ವಾರಿಜದಳದಿಂದುದ್ಭವಿಸಿದ ಮಹಾ ||3||

ಲಿಂಗಾ ಎನ್ನಂತರಂಗ Read More »

ಲಾಲಿ ಪಾವನ ಚರಣ ಲಾಲಿ ಅಘಹರಣ

ಲಾಲಿ ಪಾವನ ಚರಣ ಲಾಲಿ ಅಘಹರಣಲಾಲಿ ವೆಂಕಟರಮಣ ಲಲಿತ ಕಲ್ಯಾಣ ವನಜಾಕ್ಷ ಮಾಧವ ವಸುದೇವ ತನಯಸನಕಾದಿ ಮುನಿವಂದ್ಯ ಸಾಧುಜನಪ್ರಿಯಇನ ಕೋಟಿಶತತೇಜ ಮುನಿಕಲ್ಪ ಭೂಜಕನಕಾದ್ರಿನಿಲಯ ವೆಂಕಟರಾಯ ಜೀಯ ||1|| ಜಗದೇಕನಾಯಕ ಜಲಜದಳನೇತ್ರಖಗರಾಜವಾಹನ ಕಲ್ಯಾಣ ಚರಿತಸಗರತನಯಾರ್ಚಿತ ಸನಕಾದಿ ವಿನುತರಘುವಂಶ ಕುಲತಿಲಕ ರಮಣೀಯ ಗಾತ್ರ||2|| ನಂದಗೋಪ ಕುಮಾರ ನವನೀತ ಚೋರಮಂದಾಕಿನೀ ಜನಕ ಮೋಹನಾಕಾರಇಂದುಧರ ಸತಿ ವಿನುತ ವಿಶ್ವಸಂಚಾರನಂದ ಗೋವಿಂದ ಮುಚುಕುಂದ ನುತಸಾರ ||3|| ಪಕ್ಷಿವಾಹನ ವಿಷ್ಣು ಪಾಹಿ ಪರಮೇಶರಕ್ಷ ಕೌಸ್ತುಭಭೂಷ ವೈಕುಂಠವಾಸಅಕ್ಷಯ ಫಲದಾತ ಅಖಿಳ ಲೋಕೇಶಲಕ್ಷಣ ಪರಿಪೂರ್ಣ ಲಕ್ಷ್ಮೀ ಪ್ರಾಣೇಶ||4|| ನರಮೃಗಾಕಾರಿ

ಲಾಲಿ ಪಾವನ ಚರಣ ಲಾಲಿ ಅಘಹರಣ Read More »

ಲಟಪಟ ನಾ ಸಟೆಯಾಡುವೆನಲ್ಲ ಪೋದೆನಲ್ಲ

ಲಟಪಟ ನಾ ಸಟೆಯಾಡುವೆನಲ್ಲ ಪೋದೆನಲ್ಲ ವಿಠಲನ ನಾಮ ಮರೆತು ಶೇಷಗಿರಿಯ ಮೇಲೆ ಸವುತೆಯ ಬಿತ್ತಿದೇವಗಿರಿಯ ಮೇಲೆ ಅವತಾರವಿಕ್ಕಿಹಾಳೂರಿನೊಳಗೊಬ್ಬ ಕುಂಬಾರ ಸತ್ತಗೋಕರ್ಣದೊಳಗೊಬ್ಬ ಪರದೇಶಿ ಅತ್ತ ||1|| ಆ ಸಮಯದಿ ಮೂರು ರಾಯರ ಕಂಡೆಕುಪ್ಪುಸ ತೊಟ್ಟ ಕೋಳಿಯ ಕಂಡೆಬೆಳ್ಳಕ್ಕಿ ಬೆರಣಿಯ ಮಾಳ್ಪುದ ಕಂಡೆನರೆಸೂಳೆ ಗೆಯ್ವುದ ಕಣ್ಣಾರೆ ಕಂಡೆ ||2|| ನುಸಿಯೊಂದು ರೊಟ್ಟಿಯ ಸುಡುವುದ ಕಂಡೆಆಡೊಂದು ಮದ್ದಳೆ ಬಡಿವುದ ಕಂಡೆಕಪ್ಪೆ ತತ್ಥೈ ಎಂದು ಕುಣಿವುದ ಕಂಡೆಬಾಡದಾದಿಕೇಶವನ ಕಣ್ಣಾರೆ ಕಂಡೆ||3||

ಲಟಪಟ ನಾ ಸಟೆಯಾಡುವೆನಲ್ಲ ಪೋದೆನಲ್ಲ Read More »

ಲಿಂಗಾಷ್ಟಕಮ್

ಬ್ರಹ್ಮಮುರಾರಿಸುರಾರ್ಚಿತಲಿಂಗಮ್ ನಿರ್ಮಲಭಾಸಿತಶೋಭಿತಲಿಂಗಮ್ । ಜನ್ಮಜದುಃಖವಿನಾಶಕಲಿಂಗಮ್ ತತ್ ಪ್ರಣಮಾಮಿ ಸದಾಶಿವಲಿಂಗಮ್ ॥ 1॥ ದೇವಮುನಿಪ್ರವರಾರ್ಚಿತಲಿಂಗಮ್ ಕಾಮದಹಮ್ ಕರುಣಾಕರ ಲಿಂಗಮ್ । ರಾವಣದರ್ಪವಿನಾಶನಲಿಂಗಮ್ ತತ್ ಪ್ರಣಮಾಮಿ ಸದಾಶಿವ ಲಿಂಗಮ್ ॥ 2॥ ಸರ್ವಸುಗಂಧಿಸುಲೇಪಿತಲಿಂಗಮ್ ಬುದ್ಧಿವಿವರ್ಧನಕಾರಣಲಿಂಗಮ್ । ಸಿದ್ಧಸುರಾಸುರವಂದಿತಲಿಂಗಮ್ ತತ್ ಪ್ರಣಮಾಮಿ ಸದಾಶಿವ ಲಿಂಗಮ್ ॥ 3॥ ಕನಕಮಹಾಮಣಿಭೂಷಿತಲಿಂಗಮ್ ಫನಿಪತಿವೇಷ್ಟಿತ ಶೋಭಿತ ಲಿಂಗಮ್ । ದಕ್ಷಸುಯಜ್ಞ ವಿನಾಶನ ಲಿಂಗಮ್ ತತ್ ಪ್ರಣಮಾಮಿ ಸದಾಶಿವ ಲಿಂಗಮ್ ॥ 4॥ ಕುಂಕುಮಚಂದನಲೇಪಿತಲಿಂಗಮ್ ಪಂಕಜಹಾರಸುಶೋಭಿತಲಿಂಗಮ್ । ಸಂಚಿತಪಾಪವಿನಾಶನಲಿಂಗಮ್ ತತ್ ಪ್ರಣಮಾಮಿ ಸದಾಶಿವ ಲಿಂಗಮ್ ॥ 5॥

ಲಿಂಗಾಷ್ಟಕಮ್ Read More »

ಲಾಗು ನಿಯಾ ಪಾಯಾ

ಲಾಗು ನಿಯಾ ಪಾಯಾ ವಿ ನವಿತೋ ತುಮ್ಹಾಲಾ| ಕರತಾಳಿ ಬೋಲಾ ಮುಖೇ ನಾಮ|| ವಿಟ್ಠಲ ವಿಟ್ಠಲ ಮ್ಹಣಾ ವೇಳು ವೇಳಾ ಹಾ ಸುಖ ಸೋಹೋಳಾ ಸ್ವರ್ಗೀ ನಾಹಿ|| ಕೃಷ್ಣ ವಿಷ್ಣು ಹರಿ ಗೋವಿಂದ ಗೋಪಾಲ ಮಾರ್ಗ ಹಾ ಪರಂಝಳ ವೈಕುಂಠೀ ಚಾ|| ಸಕಳ್ಯಾಂಚಿ ಏಥೇ ಆಹೇ ಅಧಿಕಾರ ಕಲಿಯುಗ ಉದ್ಧಾರ ಹರಿ ಚೇ ನಾಮ|| ತುಕಾ ಮ್ಹಣೇ ನಾಮ ಪಾಂಚೀ ಚಾರೀ ಮುಕ್ತಿ ಐ ಸೇ ಬಹು ಗ್ರಂಥೀ ಬೋಲಿ ಏಲೇ|| —-ತುಕಾರಾಮ

ಲಾಗು ನಿಯಾ ಪಾಯಾ Read More »