ರಾಜೇಶ್ವರಿ ದುರ್ಗಾಪರಮೇಶ್ವರಿ
ರಾಜೇಶ್ವರಿ ದುರ್ಗಾಪರಮೇಶ್ವರಿ ಶ್ರೀಜಗದೀಶ್ವರಿ ಪಾಲಯ ಮಾಂ| ಚಾಮುಂಡೇಶ್ವರಿ ಶ್ರೀಶಾರದೇಶ್ವರಿ ಸಿದ್ಧೇಶ್ವರಿ ಪರಿಪಾಲಯ ಮಾಂ||
ರಾಜೇಶ್ವರಿ ದುರ್ಗಾಪರಮೇಶ್ವರಿ Read More »
ರಾಜೇಶ್ವರಿ ದುರ್ಗಾಪರಮೇಶ್ವರಿ ಶ್ರೀಜಗದೀಶ್ವರಿ ಪಾಲಯ ಮಾಂ| ಚಾಮುಂಡೇಶ್ವರಿ ಶ್ರೀಶಾರದೇಶ್ವರಿ ಸಿದ್ಧೇಶ್ವರಿ ಪರಿಪಾಲಯ ಮಾಂ||
ರಾಜೇಶ್ವರಿ ದುರ್ಗಾಪರಮೇಶ್ವರಿ Read More »
ರಾಘವಂ ಕರುಣಾಕರಂ ಭವನಾಶನಂ ದುರಿತಾಪಹಂ| ಮಾಧವಂ ಖಗಗಾಮಿನಂ ಜಲರೂಪಿಣಂ ಪರಮೇಶ್ವರಂ|| ಪಾಲಕಂ ಜನತಾರಕಂ ಭವಹಾರಕಂ ರಿಪುಮಾರಕಂ| ತ್ವಾಂ ಭಜೇ ಜಗದೀಶ್ವರಂ ನರರೂಪಿಣಂ ರಘುನಂದನಂ|| ಚಿದ್ಘನಂ ಚಿರಜೀವಿನಂ ಮಣಿಮಾಲಿನಂ ವರದೋನ್ಮುಖಂ| ಶ್ರೀಧರಂ ಧೃತಿದಾಯಕಂ ಬಲವರ್ಧನಂ ಗತಿದಾಯಕಂ| ಶಾಂತಿದಂ ಜನತಾರಕಂ ಶರಧಾರಿಣಂ ಗಜಗಾಮಿನಂ ತ್ವಾಂ ಭಜೇ ಜಗದೀಶ್ವರಂ ನರರೂಪಿಣಂ ರಘುನಂದನಂ|| —-ಆನಂದರಾಮಾಯಣಮ್
ರಾಘವ ನೀ ಬಾ ರಘುಕುಲನಂದನ ಅಘಮರ್ಷಣನೇ ನೀ ಬಾರೋ| ದಶಮುಖರಾವಣನ ಲಂಕೆಲಿ ಮಡುಹಿದ ಕೌಸಲ್ಯಾತನಯನೇ ನೀ ಬಾರೋ|| ಧನುರ್ಬಾಣವ ಕರದಲಿ ಧರಿಸಿದ ದನುಜಕುಲಾಂತಕ ನೀ ಬಾರೋ| ಇನವಂಶವನು ಪಾವನಗೈದ ಮನುಜಶ್ರೇಷ್ಠನೇ ನೀ ಬಾರೋ|| ಅಹಲ್ಯೋದ್ಧಾರಕ ತಾಟಕಿಘಾತಕ ಅಹರಹ ಭಜಿಸುವೆ ನೀ ಬಾರೋ| ಇಹದಲಿ ಪರದಲಿ ಗತಿ ನೀನೆನ್ನುತ ತಹತಹ ಪಡುತಿಹೆ ನೀ ಬಾರೋ|| ಪಿತೃಭಕ್ತನೇ ಸತ್ಯಶೀಲನೇ ಸತತವು ನಿನ್ನನೇ ಸ್ತುತಿಸುವೆ ಬಾರೋ| ನತಜನರನು ಪರಿಪಾಲಿಸುವವನೇ ಸೀತಾರಮಣಾ ನೀ ಬಾರೋ|| —-ಸ್ವಾಮಿ ಹರ್ಷಾನಂದ
ರಾಗಿ ತಂದೀರ್ಯಾ ಭಿಕ್ಷಕೆ ರಾಗಿ ತಂದೀರ್ಯಾ| ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು|| ಅನ್ನದಾನವ ಮಾಡುವರಾಗಿ ಅನ್ನಛತ್ರವನಿಟ್ಟವರಾಗಿ| ಅನ್ಯವಾರ್ತೆಯ ಬಿಟ್ಟವರಾಗಿ ಅನುದಿನ ಭಜನೆಯ ಮಾಡುವರಾಗಿ|| ಮಾತಾಪಿತರನು ಸೇವಿಪರಾಗಿ ಪಾಪಕಾರ್ಯವ ಬಿಟ್ಟವರಾಗಿ| ರೀತಿಯ ಬಾಳನು ಬಾಳುವರಾಗಿ ನೀತಿಮಾರ್ಗದಲಿ ಖ್ಯಾತರಾಗಿ|| ಗುರುಕಾರುಣ್ಯವ ಪಡೆದವರಾಗಿ ಗುರುವಾಕ್ಯವನು ಪಾಲಿಪರಾಗಿ| ಗುರುವಿನ ಪಾದವ ಸ್ಮರಿಸುವರಾಗಿ ಪರಮಪುಣ್ಯವ ಮಾಡುವರಾಗಿ|| ಕಾಮಕ್ರೋಧವ ಅಳಿದವರಾಗಿ ನೇಮನಿಷ್ಠೆಗಳ ಮಾಡುವರಾಗಿ| ರಾಮನಾಮವ ಜಪಿಸುವರಾಗಿ ಪ್ರೇಮದಿ ಕುಣಿಕುಣಿದಾಡುವರಾಗಿ|| ಹರಿಯನು ಅನುದಿನ ನೆನೆಯುವರಾಗಿ ಗುರುತಿಗೆ ಬಾಹೋರಂಥವರಾಗಿ| ಕರೆಕರೆ ಭವವನು ನೀಗುವರಾಗಿ ಪುರಂದರವಿಟ್ಠಲನ ಸೇವಿಪರಾಗಿ|| —-ಪುರಂದರದಾಸ
ಯಾವ ಫಲ ಬೇಕು ಎನಗೆ ಜನ್ಮ ಸಫಲವ ಗೈವ ಫಲವಿರಲು ಸುಮ್ಮಗೆ|| ಮೋಕ್ಷಫಲಗಳ ಬಿಡುವ ಶ್ರೀರಾಮತರುವಿಹುದು ನನ್ನ ಎದೆಯೊಳಗೆ|| ಶ್ರೀರಾಮಕಲ್ಪತರು- ಮೂಲದಲಿ ನಾ ಕುಳಿತು ಬೇಕಾದ ಪಲಗಳನು ಪಡೆಯುತಿರುವೆ|| ಪ್ರತಿಫಲವ ನಾ ಬಯಸೆ ಜಗದ ಕಹಿ ಫಲಗಳನು ನಿಮ್ಮೊಂದಿಗೇ ಬಿಟ್ಟು ಮುನ್ನಡೆಯುವೆ|| —-ವಚನವೇದ
ಯಾರ ಮಹಿಮಾ ಜ್ಯೋತಿ ಜಗವನು ಅಮೃತದಂದದಿ ಎಲ್ಲರೆದೆಯನು ತುಂಬಿ ರೋಮಾಂಚನವ ಗೈವುದೋ ಅಂಥ ಪ್ರೇಮದ ಜಲಧಿಯ ಜೀವ ನಿನ್ನೊಳಗಿರುವವರೆಗೂ ಸಾರು ಆತನ ಮಹಿಮೆಯ|| ಯಾರ ಶ್ರೀಶುಭನಾಮ ಹೃದಯದ ಕೊರಗನೆಲ್ಲ ಕಳೆವುದೋ ಯಾರು ನೆಲ ಜಲ ಗಗನ ದೇಶವ- ನೆಲ್ಲ ವ್ಯಾಪಿಸಿ ನಿಲುವರೋ|| ಯಾರ ಅನ್ವೇಷಣೆಯಲೀ ಜಗ ಬರಿದೆ ತೊಳಲುತಲಿರುವುದೋ ಅಂಥ ದೇವನ ತಿಳಿದು ಬಣ್ಣಿಪ ಶಕ್ತಿ ಯಾರಿಗೆ ಲಭಿಸಿದೆ ಅವನ ಮಹಿಮೆಗೆ ಪಾರವೆಲ್ಲಿದೆ ಆದಿ ಅಂತ್ಯಗಳೆಲ್ಲಿವೆ|| ನಿಜದ ತಿಳಿವಿನ ತವರು ಅವನು ನಿತ್ಯ ಜೀವನ ಚೇತನ ನಿತ್ಯ
ಯಾರ ಪ್ರೇಮದ ಪರಮಪೂರವು ನೀಚರೆದೆಗೂ ಹರಿಯಿತೋ, ಯಾವ ಲೋಕಾತೀತಮಹಿಮನ ಕರಣೆ ಲೋಕಕೆ ದುಡಿಯಿತೋ, ಯಾವನಪ್ರತಿ-ಮಹಿಮನೋ ಮೇಣ್ ಮಾತೆ ಸೀತೆಯ ನಾಥನೋ, ಯಾರು ಸೀತೆಯ ಭಕುತಿಯಿಂದಲಿ ಜ್ಞಾನದೇಹದಿ ವ್ಯಾಪ್ತನೋ ಯಾರು ಮಧುತರ ಶಾಂತಗೀತೆಯ ಯುದ್ಧರಂಗದಿ ಮೊಳಗುತ ಪ್ರಳಯಶಬ್ದವ ಸ್ತಬ್ಧಗೊಳಿಸುತ ಸಿಂಹನಾದವ ಸಿಡಿಸುತ ಮೋಹತಿಮಿರವನಿಲ್ಲಗೈಯುತ ಕೃಷ್ಣರೂಪದಿ ನಿಂದನೋ ಅವನೆ ಇಂದಿಗೆ ರಾಮಕೃಷ್ಣನ ಹೆಸರೊಳೆಸೆಯುತಲಿರುವನು! —-ಮುರಳೀಧರ
ಯಾರ ಪ್ರೇಮದ ಪರಮಪೂರವು Read More »
ಯಾರನು ಬಯಸಿ ಶ್ರೀಭುವನೇಶ್ವರಿ ಹರಕೆಯ ಹೊತ್ತಳೊ ವೀರೇಶ್ವರನಲಿ ವೀರೇಶ್ವರ ಶಿವ ಯಾವನ ರೂಪದಿ ಧರೆಯನು ಪಾವನಗೈದನೊ ಅಂತಹ ವೀರ ವಿವೇಕಾನಂದ ನಮೋ|| ಯಾವನ ಲೀಲೆಯ ಸಹಿಸದೆ ಮಾತೆಯು ‘ಶಿವನೇ ನೀ ಬಾರೆನ್ನುತ ಮೊರೆಯಿಡೆ ಇವನನು ಏತಕೆ ಕಳುಹಿದೆ?’ ಎನ್ನುತ ಯಾವನ ಹಂಗಿಸುತಿದ್ದಳೊ ಅಂತಹ ವೀರ ವಿವೇಕಾನಂದ ನಮೋ|| ‘ಇರುವನೊ ದೇವರು? ಇಲ್ಲವೊ?’ ಎನ್ನುತ ಗುರುವನು ಭರದಿಂ ಪ್ರಶ್ನಿಸಿ ಕೂಡಲೆ ‘ಇರುವನು ತೋರುವೆ ನಿನಗೂ!’ ಎನ್ನುವ ಮರುದನಿಯಿಂದ ಚಕಿತನಾದಂತಹ ವೀರ ವಿವೇಕಾನಂದ ನಮೋ|| ರಾಮಕೃಷ್ಣರಲಿ ಸೇವಾವೃತ್ತಿಯ ಪ್ರೇಮದಿ ಮಾಡುತ
ಯಾದವ ನೀ ಬಾ ಯದುಕುಲನಂದನ ಮಾಧವ ಮಧುಸೂದನ ಬಾರೋ|| ಸೋದರಮಾವನ ಮಥುರೆಲಿ ಮಡುಹಿದ ಯಶೋದಾಕಂದ ನೀ ಬಾರೋ|| ಕಣಕಾಲಂದುಗೆ ಘುಲುಘುಲುರೆನುತಲಿ ಝಣಝಣ ವೇಣುನಿನಾದದಲಿ| ಚಿಣ್ಣಿಕೋಲು ಚೆಂಡು ಬುಗುರಿಯನಾಡುತ ಸಣ್ಣವರೊಡಗೂಡಿ ನೀ ಬಾರೋ|| ಶಂಖ ಚಕ್ರವು ಕೈಯಲಿ ಹೊಳೆಯುತ ಬಿಂಕದ ಗೋವಳ ನೀ ಬಾರೋ| ಅಕಳಂಕ ಚರಿತನೆ ಆದಿನಾರಾಯಣ ಬೇಕೆಂಬ ಬಕ್ತರಿಗೊಲಿ ಬಾರೋ|| ಖಗವಾಹನನೆ ಬಗೆಬಗೆರೂಪನೆ ನಗೆಮೊಗದರಸನೆ ನೀ ಬಾರೋ| ಜಗದೊಳು ನಿನ್ನಯ ಮಹಿಮೆಯ ಪೊಗಳುವೆ ಪುರಂದರವಿಟ್ಠಲ ನೀ ಬಾರೋ|| —-ಪುರಂದರದಾಸ
ಮೃದುವಚನವೇ ಸಕಲ ಜಪಂಗಳಯ್ಯ ಮೃದುವಚನವೇ ಸಕಲ ತಪಂಗಳಯ್ಯ|| ಸದುವಿನಯವೇ ಸದಾಶಿವನೊಲುಮೆಯಯ್ಯ ಕೂಡಲಸಂಗಯ್ಯನಂತಲ್ಲನಯ್ಯ|| —-ಬಸವಣ್ಣ
ಮೂರ್ತಮಹೇಶ್ವರಮುಜ್ಜ್ವಲಭಾಸ್ಕರ- ಮಿಷ್ಟಮಮರನರವಂದ್ಯಂ|| ವಂದೇ ವೇದತನುಮುಜ್ಜಿತ-ಗರ್ಹಿತ- ಕಾಮಕಾಂಚನಬಂಧಂ|| ಕೋಟಿಭಾನುಕರದೀಪ್ತ ಸಿಂಹಮಹೋ ಕಟಿತಟಕೌಪೀನವಂತಂ| ಅಭೀರಭೀಃ ಹುಂಕಾರನಾದಿತದಿಙ್ಮಖ- ಪ್ರಚಂಡತಾಂಡವನೃತ್ಯಂ|| ಭುಕ್ತಿಮುಕ್ತಿಕೃಪಾಕಟಾಕ್ಷಪ್ರೇಕ್ಷಣ- ಮಘದಲವಿದಲನದಕ್ಷಂ| ಬಾಲಚಂದ್ರಧರಮಿಂದುವಂದ್ಯಮಿಹ ನೌಮಿ ಗುರು ವಿವೇಕಾನಂದಂ|| —-ಶರತ್ ಚಂದ್ರ ಚಕ್ರವರ್ತಿ
ಮೂರುತಿಯನೆ ನಿಲಿಸೋ ಮಾಧವ ನಿನ್ನ| ಎಳೆ ತುಳಸಿಯ ವನಮಾಲೆಯು ಕೊರಳೊಳು ಪೊಳೆವ ಪೀತಾಂಬರದಿಂದ ಒಪ್ಪುವ ನಿನ್ನ|| ಮುತ್ತಿನ ಸರ ನವರತ್ನದುಂಗುರವಿಟ್ಟು ಮತ್ತೆ ಶ್ರೀಲಕುಮಿಯು ಉರದಿ ಒಪ್ಪುವ ನಿನ್ನ|| ಭಕ್ತರ ಕಲ್ಪತರು ಭಾಗ್ಯದ ಸುರಧೇನು ಮುಕ್ತಿದಾಯಕ ನಮ್ಮ ಪುರಂದರ ವಿಟ್ಠಲ|| —-ಪುರಂದರದಾಸ
ಮಾನವ ಸಂತಾನದೆಡೆಗೆ ಎನಿತು ಕರುಣೆ ನಿನ್ನದು ಅದ ನೆನೆದರೆ ಕಂಬನಿಯೆ ಕೋಡಿಯೊಡೆದು ಹರಿವುದು || ಹುಟ್ಟಿದಂದಿನಿಂದ ನಾನು ನಿನ್ನಾಣೆಯ ಮೀರಿದೆ ಆದರೂ ನೀ ಅಕ್ಕರೆಯಲಿ ತಾಯ್ತನವನೆ ತೋರಿದೆ| ಮಧುರ ವಚನದಿಂದ ಮನವ ಸಂತೈಸುತ ನಲಿಸಿದೆ ಇದ ನೆನೆದರೆ ಕಂಬನಿಯೆ ಕೋಡಿಯೊಡೆದು ಹರಿದಿದೆ|| ನಿನ್ನೊಲವಿನ ಹೊರೆಯ ಹೊತ್ತು ನಾನು ಬಹಳ ಬಳಲಿದೆ ಇನ್ನು ಮುಂದೆ ಹೊರಲಾರದೆ ಎದೆಯು ನರಳಿ ಕೊರಗಿದೆ| ನಿನ್ನೊಲವಿನ ಕರಸ್ಪರ್ಶದಿ ಈ ನೋವನು ನೀಗಿಸು ನಿನ್ಮ ಪಾದಪದ್ಮದಲಿ ನನ್ನನಿರಿಸಿ ಪಾಲಿಸು|| —-ವಚನವೇದ
ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ|| ಮಾಡಿದೆನೆಂಬುದು ಮನದಲಿ ಹೊಳೆದರೆ ನೀಡಿದೆನೆಂಬುದು ನಿಜದಲಿ ತಿಳಿದರೆ ಏಡಿಸಿ ಕಾಡಿತ್ತು ಶಿವನ ಡಂಗುರ|| ಮಾಡಿದೆನೆನ್ನದಿರಾ ಲಿಂಗಕೆ ನೀಡಿದೆನೆನ್ನದಿರಾ ಜಂಗಮಕೆ ಮಾಡುವ ನೀಡುವ ನಿಜಗುಣವುಳ್ಳವರ ಕೂಡಿಕೊಂಡಿಪ್ಪ ನಮ್ಮ ಕೂಡಲಸಂಗಯ್ಯ|| —-ಬಸವಣ್ಣ
ಮಾಡಬಾರದ ಮಾಡಿ, ಆಗಬಾರದು ಆಗಿ ಬಾಳೆಲ್ಲ ಬರಿದಾಗಿ, ಗೋಳೊಂದೆ ಉಳಿದಾಗ ಅಂತರಾಳದಿ ಬೆಳಗಿ, ಸಂತಸವ ಕರುಣಿಸಿಹೆ “ಏಳು ಮಗು, ನಾನಿಹೆನು!” ಎನ್ನುತ್ತ ಕರೆದೆ|| ಅವರಿವರ ಉಪದೇಶ ಬರಿಯ ಬಾಯ್ಮಾತಾಗಿ ರವಿರಹಿತ ಕತ್ತಲೆಯೆ ಎತ್ತೆತ್ತ ಕವಿದಾಗ ಕರುಣಿಸಿಹೆ ಓ ತಾಯಿ, ತವ ಚರಣದಾಶ್ರಯವ “ಬಾ ಕಂದ, ಇಹೆ ನಾನು, ಕುಂದದಿರು” ಎಂದು|| ಜಗವೆಲ್ಲ ಕೈಬಿಟ್ಟು ಮತಿಗೆಟ್ಟು, ಗತಿಗೆಟ್ಟು, ಆವುದನು ಗೈಯಲೂ ತ್ರಾಣವಿಲ್ಲದ ಎನಗೆ “ನಾನೆ ಸಾಧನೆ ಸಿದ್ಧಿ ಗತಿ ಆಸರೆಯು ನಿನಗೆ” ಎನ್ನುತ್ತ ವರವಿತ್ತ ಗುರು-ದೈವ-ಜನನಿ|| —ಸ್ವಾಮಿ ಶಾಸ್ತ್ರಾನಂದ
ಮಂಗಲಮಯ ಪ್ರಭು ನೀನೆಂದರಿತಿಹೆ ಕಂಗಳು ನಿನ್ನಯ ಪಾದದಿ ನೆಟ್ಟಿರೆ|| ಇರಿಸೈ ಸುಖದಲಿ ಇರಿಸು ದುಃಖದಲಿ ಅರಿತಿಹೆ ಭಯವಿನಿತಿಲ್ಲವು ಎನಗೆ|| ಏನನು ಗೈದರು ಕೈಬಿಡೆಯೆಂಬುವ ಎನಗೆ ನೀಡು ನೀ ಭರವಸೆಯ|| ಪ್ರಭುವೇ ದೇವನೆ ಬಾ ಮಮ ಹೃದಯಕೆ ಶುಭವನು ಕೋರುತ ಬೇಡುತಲಿರುವೆ|| —-ಸ್ವಾಮಿ ಹರ್ಷಾನಂದ
ಮರೆಯಬೇಡ ಮನವೆ ನೀನು ಹರಿಯ ಸ್ಮರಣೆಯ|| ಯಾಗಯಜ್ಞ ಮಾಡಲೇಕೆ ಯೋಗಿಯತಿಯು ಆಗಲೇಕೆ| ನಾಗಶಯನ ನಾರದನುತನ ಕೂಗಿ ಭಜನೆ ಮಾಡೋ|| ಸತಿಯು ಸುತರು ಹಿತರು ಎಂದು ಮತಿಯುಗೆಟ್ಟು ಕೆಡಲಿಬೇಡ| ಗತಿಯು ತಪ್ಪಿ ಹೋಗುವಾಗ ಸತಿಯು ಸುತರು ಬರುವರೇ|| ಹರಿಯ ಸ್ಮರಣೆ ಮಾತ್ರದಿಂದ ಘೋರದುರಿತವೆಲ್ಲ ನಾಶ| ಪರಮಪುರುಷ ಶ್ರೀ ಪುರಂದರ ವಿಟ್ಠಲೋರಾಯ ಪದವಿ ಕೊಡುವ|| —-ಪುರಂದರದಾಸ
ಮನ ಶುದ್ಧಿಯಿಲ್ಲದವಗೆ ಮಂತ್ರದ ಫಲವೇನು| ತನು ಶುದ್ಧಿಯಿಲ್ಲದವಗೆ ತೀರ್ಥದ ಫಲವೇನು|| ಮಿಂದಲ್ಲಿ ಫಲವೇನು ಮೀನು ಮೊಸಳೆಯಂತೆ ನಿಂದಲ್ಲಿ ಫಲವೇನು ಶ್ರೀಶೈಲದ ಕಾಗೆಯಂತೆ| ಹೊರಗೆ ಮಿಂದು ಒಳಗೆ ಮೀಯದವರ ಕಂಡು ಬೆರಗಾಗಿ ನಗುತಿದ್ದ ಪುರಂದರವಿಟ್ಠಲ|| —ಪುರಂದರದಾಸ
ಮನ ಶುದ್ಧಿಯಿಲ್ಲದವಗೆ Read More »
ಮನವೆಂಬ ಮರ್ಕಟನು ತನುವೆಂಬ ವೃಕ್ಷವನೇರಿ ಇಂದ್ರಿಯಂಗಳೆಂಬ ಶಾಖೆಶಾಖೆಗೆ ಹಾರಿ ವಿಷಯಂಗಳೆಂಬ ಫಲಂಗಳ ಗ್ರಹಿಸಿ ಭವದತ್ತ ಮುಖವಾಗಿ ಹೋಗುತಿದೆ ನೋಡಾ|| (ಈ) ಮನವೆಂಬ ಮರ್ಕಟನ (ನಿಮ್ಮ) ನೆನಹೆಂಬ ಪಾಶದಿ ಕಟ್ಟೆ ಎನ್ನನುಳಿಸಿಕೊಳ್ಳಯ್ಯ ಅಖಂಡೇಶ್ವರಾ|| —ಷಣ್ಮುಖಸ್ವಾಮಿ
ಮಣಿವೆ ನಿನ್ನ ಕಮಲದಡಿಗೆ ದಯದಿ ಬಾರೊ ಎದೆಯ ಗುಡಿಗೆ|| ಭಕ್ತಹೃದಯಜಲಜ ಬಂಧು ನೀನಪಾರ ಕರುಣೆ ಸಿಂಧು| ಪ್ರೇಮಭಕ್ತಿಯೊಡನೆ ಕೂಡಿ ಬಾರೈ ತಂದೆ ಕರೆವೆ ಬೇಡಿ|| ತ್ಯಾಗಮೂರ್ತಿ ತಪೋಮೂರ್ತಿ ಜ್ಞಾನಮೂರ್ತಿ ಸೊಗದ ಮೂರ್ತಿ| ಹರಿದಿದೆಲ್ಲೆಡೆ ನಿನ್ನ ಕೀರ್ತಿ ತ್ಯಾಗಪಥದ ನಿತ್ಯಸ್ಪೂರ್ತಿ|| ವಿಶ್ವದೊಡೆಯ ಶುದ್ಧಹೃದಯ ಕೋಟಿಸೂರ್ಯ ಜ್ಯೋತಿರೂಪ| ನಿನ್ನೀ ಕಂದನ ಕರೆಯನಾಲಿಸಿ ಬಾರೋ ಬೇಗ ಶಕ್ತಿವೆರಸಿ|| —ಸ್ವಾಮಿ ತದ್ರೂಪಾನಂದ
ಮಣಿವೆ ನಿನ್ನ ಕಮಲದಡಿಗೆ Read More »
ಮಣಿಯಲೆನ್ನ ಶಿರವು ನಿನ್ನ ಚರಣಧೂಳಿ ತಲದಲಿ| ನನ್ನ ಅಹಂಕಾರವೆಲ್ಲ ಮುಳುಗಲಶ್ರುಜಲದಲಿ|| ನನಗೆ ನಾನೆ ಪೂಜೆಗೈಯೆ ಸೊಡರನೆತ್ತಲು ಬೆಳಕು ಬರುವ ಬದಲು ಅಯ್ಯೋ ಬರಿಯ ಕತ್ತಲು ಅಹಂಕಾರದಂಧಕಾರ ಮುತ್ತುತಿದೆ ಸುತ್ತಲು|| ನನ್ನ ನಾನೆ ಮೆರೆಯದಂತೆ ನಾನು ಗೈವ ಕರ್ಮದಿ ನಿನ್ನ ಇಚ್ಛೆ ಪೂರ್ಣವಾಗ- ಲೆನ್ನ ಜೀವಧರ್ಮದಿ| ತಳೆಯಲೆನ್ನ ಜ್ಞಾನ ನಿನ್ನ ಚರಮ ಶಾಂತಿಯ ಬೆಳಗಲೆನ್ನ ಪ್ರಾಣ ನಿನ್ನ ಪರಮ ಕಾಂತಿಯ ನನ್ನನಳಿಸು ನೀನೆ ನೆಲಸು ಹೃದಯಪದ್ಮದಲದಲಿ|| —-ಕುವೆಂಪು
ಮಡಕೆಯ ಮಾಡುವರೆ ಮಣ್ಣೇ ಮೊದಲು ತೊಡಿಗೆಯ ಮಾಡುವರೆ ಹೊನ್ನೇ ಮೊದಲು ಶಿವಪಥವರಿವಡೆ ಗುರುಪಥ ಮೊದಲು ಕೂಡಲಸಂಗಮದೇವರನರಿವಡೆ ಶರಣರ ಸಂಗವೇ ಮೊದಲು|| —-ಬಸವಣ್ಣ
ಭಾಗ್ಯದ ಲಕ್ಷ್ಮಿ ಬಾರಮ್ಮ| ನಮ್ಮಮ್ಮ ನೀ ಸೌ- ಭಾಗ್ಯದ ಲಕ್ಷ್ಮಿ ಬಾರಮ್ಮ|| ಗೆಜ್ಜೆ ಕಾಲ್ಗಳ ಧ್ವನಿಯನು ತೋರುತ ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ ಸಜ್ಜನ ಸಾಧು ಪೂಜೆಯ ಮೇಳೆಗೆ ಮಜ್ಜಿಗೆಯೊಳಗಿನ ಬೆಣ್ಣೆಯಂತೆ|| ಕನಕವೃಷ್ಟಿಯ ಕರೆಯುತ ಬಾರೆ ಮನಕೆ ಮಾನವ ಸಿದ್ಧಿಯ ತೋರೆ ದಿನಕರಕೋಟಿ ತೇಜದಿ ಹೊಳೆಯುವ ಜನಕರಾಯನ ಕುಮಾರಿ ಬೇಗ|| ಅತ್ತಿತ್ತಗಲದೆ ಭಕ್ತರ ಮನೆಯಲಿ ನಿತ್ಯಮಹೋತ್ಸವ ನಿತ್ಯ ಸುಮಂಗಳ ಸತ್ಯವ ತೋರುವ ಸಾಧುಸಜ್ಜನರ ಚಿತ್ತದಿ ಹೊಳೆವ ಪುತ್ಥಳಿ ಬೊಂಬೆ|| ಸಂಖ್ಯೆಯಿಲ್ಲದ ಭಾಗ್ಯವ ಕೊಟ್ಟು ಕಂಕಣ ಕೈಯನು ತಿರುವುತ ಬಾರೆ
ಭಾಗ್ಯದ ಲಕ್ಷ್ಮಿ ಬಾರಮ್ಮ Read More »
ಭವಾನೀ ಭಕ್ತಸುಖದಾಯಿನೀ|| ಭಕ್ತಿಗಮ್ಯಾ ಭಕ್ತಿವಶ್ಯಾ ಭಾವಕಪ್ರಚೋದಿನೀ ಭವಾನೀ ಭಕ್ತಸುಖದಾಯಿನೀ|| ಮಹಾಮಾಯಾ ಮಹಾನಿಲಯಾ ಮಾನವಕುಲಜನನೀ ಮಾಲಿನೀ ಮದನಬಲನಾಶಿನೀ|| ಪ್ರಭಾರೂಪಾ ಪ್ರೇಮರೂಪಾ ಪಾತಕನಿವಾರಿಣೀ ಪಾವನೀ ಪರಮಪದದಾಯಿನೀ||
ಭವಾನೀ ಭಕ್ತಸುಖದಾಯಿನೀ Read More »
ಭರತಖಂಡದ ನೀಲಗಗನವ ತಿಮಿರ ಮುಸುಗಿರಲು, ಭಾರತೀಯರು ತಮ್ಮ ಧ್ಯೇಯವ ಮರೆತು ಮಲಗಿರಲು, ಪರಮಹಂಸನೆ, ಉದಯಸೂರ್ಯನ ತೆರದಿ ರಂಜಿಸಿದೆ. ಹೃದಯ ನಭದ ಜ್ಞಾನತಿಮಿರವನಿರದೆ ಭಂಜಿಸಿದೆ. ಸರ್ವಮಾರ್ಗಗಳೊಂದೆ ನಿಲಯಕೆ ಪೋಪುವೆಂಬುದನು ಯೋಗವಿದ್ಯೆಯೊಳರಿತು ಮಾನವಕುಲಕೆ ಬೋಧಿಸಿದೆ; ಕ್ರೈಸ್ತ ಹಿಂದೂ ಮಹಮದೀಯರೆ ಬೌದ್ಧಮೊದಲಾದ ಮತಗಳಾತ್ಮವದೊಂದೆ ಎಂಬುದ ತಿಳುಹಿ ಪಾಲುಸಿದೆ. ಕ್ರಿಸ್ತ ಮಹಮದ ರಾಮ ಕೃಷ್ಣ ಜೊರಾಸ್ತ ಗೌತಮರು ದಿವ್ಯ ವೇದ ಕೊರಾನು ಬೈಬಲು ತಲ್ಮಡಾದಿಗಳು ಗುಡಿಯು ಚರ್ಚು ಮಸೀದಿ ಆಶ್ರಮ ಅಗ್ನಿಪೂಜೆಗಳು ಕಾಶಿ ಮಕ್ಕಗಳೆಲ್ಲ ನಿನ್ನೊಳಗೈಕ್ಯ ‘ವಾಗಿಹವು’! ದಕ್ಷೀಣೇಶ್ವರ ದೇವನಿಲಯದ ಪರಮಯೋಗೀಂದ್ರ ಶ್ರೀ