ದೇವಿ

ಮಾನವ ಸಂತಾನದೆಡೆಗೆ

ಮಾನವ ಸಂತಾನದೆಡೆಗೆ ಎನಿತು ಕರುಣೆ ನಿನ್ನದು ಅದ ನೆನೆದರೆ ಕಂಬನಿಯೆ ಕೋಡಿಯೊಡೆದು ಹರಿವುದು || ಹುಟ್ಟಿದಂದಿನಿಂದ ನಾನು ನಿನ್ನಾಣೆಯ ಮೀರಿದೆ ಆದರೂ ನೀ ಅಕ್ಕರೆಯಲಿ ತಾಯ್ತನವನೆ ತೋರಿದೆ| ಮಧುರ ವಚನದಿಂದ ಮನವ ಸಂತೈಸುತ ನಲಿಸಿದೆ ಇದ ನೆನೆದರೆ ಕಂಬನಿಯೆ ಕೋಡಿಯೊಡೆದು ಹರಿದಿದೆ|| ನಿನ್ನೊಲವಿನ ಹೊರೆಯ ಹೊತ್ತು ನಾನು ಬಹಳ ಬಳಲಿದೆ ಇನ್ನು ಮುಂದೆ ಹೊರಲಾರದೆ ಎದೆಯು ನರಳಿ ಕೊರಗಿದೆ| ನಿನ್ನೊಲವಿನ ಕರಸ್ಪರ್ಶದಿ ಈ ನೋವನು ನೀಗಿಸು ನಿನ್ಮ ಪಾದಪದ್ಮದಲಿ ನನ್ನನಿರಿಸಿ ಪಾಲಿಸು|| —-ವಚನವೇದ

ಮಾನವ ಸಂತಾನದೆಡೆಗೆ Read More »

ಭಾಗ್ಯದ ಲಕ್ಷ್ಮಿ ಬಾರಮ್ಮ

ಭಾಗ್ಯದ ಲಕ್ಷ್ಮಿ ಬಾರಮ್ಮ| ನಮ್ಮಮ್ಮ ನೀ ಸೌ- ಭಾಗ್ಯದ ಲಕ್ಷ್ಮಿ ಬಾರಮ್ಮ|| ಗೆಜ್ಜೆ ಕಾಲ್ಗಳ ಧ್ವನಿಯನು ತೋರುತ ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ ಸಜ್ಜನ ಸಾಧು ಪೂಜೆಯ ಮೇಳೆಗೆ ಮಜ್ಜಿಗೆಯೊಳಗಿನ ಬೆಣ್ಣೆಯಂತೆ|| ಕನಕವೃಷ್ಟಿಯ ಕರೆಯುತ ಬಾರೆ ಮನಕೆ ಮಾನವ ಸಿದ್ಧಿಯ ತೋರೆ ದಿನಕರಕೋಟಿ ತೇಜದಿ ಹೊಳೆಯುವ ಜನಕರಾಯನ ಕುಮಾರಿ ಬೇಗ|| ಅತ್ತಿತ್ತಗಲದೆ ಭಕ್ತರ ಮನೆಯಲಿ ನಿತ್ಯಮಹೋತ್ಸವ ನಿತ್ಯ ಸುಮಂಗಳ ಸತ್ಯವ ತೋರುವ ಸಾಧುಸಜ್ಜನರ ಚಿತ್ತದಿ ಹೊಳೆವ ಪುತ್ಥಳಿ ಬೊಂಬೆ|| ಸಂಖ್ಯೆಯಿಲ್ಲದ ಭಾಗ್ಯವ ಕೊಟ್ಟು ಕಂಕಣ ಕೈಯನು ತಿರುವುತ ಬಾರೆ

ಭಾಗ್ಯದ ಲಕ್ಷ್ಮಿ ಬಾರಮ್ಮ Read More »

ಭವಾನೀ ಭಕ್ತಸುಖದಾಯಿನೀ

ಭವಾನೀ ಭಕ್ತಸುಖದಾಯಿನೀ|| ಭಕ್ತಿಗಮ್ಯಾ ಭಕ್ತಿವಶ್ಯಾ ಭಾವಕಪ್ರಚೋದಿನೀ ಭವಾನೀ ಭಕ್ತಸುಖದಾಯಿನೀ|| ಮಹಾಮಾಯಾ ಮಹಾನಿಲಯಾ ಮಾನವಕುಲಜನನೀ ಮಾಲಿನೀ ಮದನಬಲನಾಶಿನೀ|| ಪ್ರಭಾರೂಪಾ ಪ್ರೇಮರೂಪಾ ಪಾತಕನಿವಾರಿಣೀ ಪಾವನೀ ಪರಮಪದದಾಯಿನೀ||

ಭವಾನೀ ಭಕ್ತಸುಖದಾಯಿನೀ Read More »

ನಿನ್ನ ಬಾಳಿನ ಹೊಲವು

ನಿನ್ನ ಬಾಳಿನ ಹೊಲವು ಪಾಳು ಬಿದ್ದಿಹುದಲ್ಲೊ ಕೃಷಿಗೈಯಲೂ ಕೂಡ ತಿಳಿಯದಿರುವೆ| ಎಂಥ ಹೊನ್ನನು ಬೆಳೆದು ತೆಗೆಯಬಹುದಾಗಿತ್ತೊ ಕೆಲವು ದಿನ ಮೈಮುರಿದು ದುಡಿದಿದ್ದರೆ|| ಈಗಲಾದರು ತಾಯ ಶ್ರೀನಾಮವೆಂತೆಂಬ ಬೇಲಿಯನು ಕಟ್ಟಿ ನೀ ಕಾಯ್ದುಕೊಳ್ಳೊ| ಅದಕಿಂತ ಬಲವಾದ ಕಾವಲಿನ್ನಾವುದಿದೆ ಮೃತ್ಯುವೂ ನಿನ್ನ ಬಳಿ ಬರಲಾರನೊ|| ಇಂದೊ ನಾಳೆಯೊ ಹೊಲವ ಹೊಲದೊಡೆಯಗೊಪ್ಪಿಸುವ ಮುನ್ನವೇ ಎಚ್ಚೆತ್ತು ಬೆಳೆಯ ತೆಗೆಯೊ| ಗುರುವಿತ್ತ ಮಂತ್ರವನು ಬೀಜವಾಗಿಸಿ ಬಿತ್ತಿ ಪ್ರೇಮವಾರಿಯ ಹೊಯ್ದು ಹಸನುಗೊಳಿಸೊ| ನಿನಗೆ ಈ ಕೆಲಸವೂ ಕಷ್ಟವಾದರೆ ಹೇಳು ರಾಮಪ್ರಸಾದನಿದೊ ನೆರವಿಗಿಹನೊ||                                               —-ವಚನವೇದ

ನಿನ್ನ ಬಾಳಿನ ಹೊಲವು Read More »

ನನ್ನ ಹೃದಯದ ದಿವ್ಯ

ನನ್ನ ಹೃದಯದ ದಿವ್ಯಸೂತ್ರಧಾರಿಣಿ ನೀನು ಮಡಿಲ ತೊಟ್ಟಿಲೊಳಿಟ್ಟು ಪಾಲಿಸಿರುವೆ| ನಾನಪಾತ್ರನು ತಾಯಿ, ನಿನ್ನ ಒಲವಿನ ಕೃಪೆಗೆ ಆದರೂ ಎನಿತೊಂದು ಕರುಣೆ ನಿನಗೆ|| ನನ್ನ ಮೇಲೆನಿತೊಂದು ವಾತ್ಸಲ್ಯವಿದೆ ನಿನಗೆ ನೇವರಿಸಿ ಕೈಹಿಡಿದು ನಡೆಸುತಿರುವೆ| ಮೃದುನುಡಿಗಳಮೃತವನು ಕಿವಿಗಳಿಗೆ ಕರೆಯುತ್ತ ದಿವ್ಯಮಧುವನು ನನಗೆ ಕುಡಿಸುತಿರುವೆ|| ದೋಷವರಸದ ಹಿರಿಯ ತಾಯ್ತನದ ಮೂರ್ತಿ ನೀ ಕಷ್ಟಸಂಕಟದಿಂದ ರಕ್ಷಿಸಿರುವೆ| ನಾನು ನಿನ್ನವನೆಂಬ, ನೀನು ನನ್ನವಳೆಂಬ ಹಿರಿಯ ತತ್ತ್ವವನೀಗ ಅರಿಯುತಿರುವೆ|| ಓ ತಾಯಿ ನಾ ನಿನ್ನ ಹಾಲುಂಡು ಪುಷ್ಟಿಯಲಿ ನಿನ್ನ ಆಣತಿಯಂತೆ ಋಜುಪಥದಲಿ| ನಡೆನಡೆದು ಭಕ್ತಿಯಲಿ ‘ಜೈ

ನನ್ನ ಹೃದಯದ ದಿವ್ಯ Read More »

ದೇವಿ ಮೀನಾಕ್ಷಿ ಮುದಂ

(ಅಂಬ) ದೇವಿ ಮೀನಾಕ್ಷಿ ಮುದಂ ದೇಹಿ ಮೇ ಸತತಂ|| ಪಾವನಮಧುರಾನಿಲಯೇ ಪಾಂಡ್ಯರಾಜತನಯೇ ಭಾವರಾಗತಾಳಾಧಿಕ- ಪರಿತೋಷಿತ ಹೃದಯೇ|| (ಅಂಬ)ಭಾವುಕಫಲಪ್ರದಾಯಿನಿ ಭಕ್ತಮೋದಸಂದಾಯಿನಿ ಸೇವಕಪಾಪವಿಮೋಚನಿ ಶ್ರೀಕದಂಬವನವಾಸಿನಿ|| ಹಿಮಕರನಿಭವದನೇ ವಿಮಲಕುಂದರದನೇ ಕಮನೀಯಮಣಿಸದನೇ ರಕ್ಷಿತಮದನೇ|| ಸುಮಶರಜನಕಸಹೋದರಿ ಸುಂದರೇಶಹೃದಯೇಶ್ವರಿ ಸಮರವಿಜಿತನಿಖಿಲಾಸುರಿ ಸಾಧುವಶಂಕರಿ ಶಂಕರಿ|| ಕಮಲಜಾದಿಸುರಪಾಲಿನಿ ಘನತರಶುಭಗುಣಶಾಲಿನಿ ಸಮದಾನೇಕಪಗಾಮಿನಿ ಸಂಗೇತರಸಾಹ್ಲಾದಿನಿ||                     —-ತಚ್ಚೂರು ಶಿಂಗರಾಚಾರ್ಯ

ದೇವಿ ಮೀನಾಕ್ಷಿ ಮುದಂ Read More »

ದುರ್ಗಾಪದಕಮಲವನ್ನು

ದುರ್ಗಾಪದಕಮಲವನ್ನು ಸ್ಮರಿಸಿ ಹಗಲು ಇರುಳು ನೀವು|| ಮನದಿ ಧರಿಸಿ ನಾಮಾಮೃತ ಜನನ ಮರಣ ದಾಟಿರಿ|| ಚರಣಕಮಲಧ್ಯಾನದಿಂದ ಪರಮಶಾಂತಿ ಪಡೆಯಿರೆಲ್ಲ ಜ್ಞಾನ ಭಕ್ತಿ ಯೋಗ ಭೋಗ ತನಗೆ ತಾನೆ ಬಪ್ಪುದು||                    —-ಸ್ವಾಮಿ ಹರ್ಷಾನಂದ

ದುರ್ಗಾಪದಕಮಲವನ್ನು Read More »

ದರುಶನ ನೀಡೆನಗೆ ತಾಯಿ

ದರುಶನ ನೀಡೆನಗೆ ತಾಯಿ| ಶಾರದೇಶ್ವರಿ ವರದೇ ಶುಭದೇ|| ದೀನೋದ್ಧರಣಕೆ ನಿನ್ನವತರಣ| ನನಗೇ ಏಕೀ ದೂರೀಕರಣ|| ದಿನಗಳು ಉರುಳಲು ಆಯುರ್ನಾಶ| ನನ್ನಿಯ ತ್ಯಜಿಸಲು ತಾಪದ ಪಾಶ|| ಜ್ಞಾನದಿಂ ಭಕ್ತಿಯಿಂ ಮೋಕ್ಷವು ಬಪ್ಪುದೆ| ನಿನ್ನಯ ಪಾದದಿ ಶರಣವೆ ಸಾಲದೆ|| ಎಂದಾಗುವುದು ಜನನಿ ಕೃಪೆಯು| ಅಂದೇ ನನಗೆ ವಿಮೋಚನೆಯು||                             —ಸ್ವಾಮಿ ಹರ್ಷಾನಂದ

ದರುಶನ ನೀಡೆನಗೆ ತಾಯಿ Read More »

ದಯಮಾಡಿಸು

ದಯಮಾಡಿಸು ದಯಮಾಡಿಸು ಹೃದಯಕಮಲಪೀಠದಿ| ಬಂದು ಮೊಗವ ತೋರು ತಾಯೆ ಹೃದಯ ಪ್ರಾಣ ಪುತ್ಥಲೀ|| ಹುಟ್ಟಿದಂದಿನಿಂದ ನಾನು ಎನಿತೊ ನೋವ ನುಂಗಿದೆ| ನೀನು ಬಲ್ಲೆ ನಿನ್ನ ಬರವಿ- ಗಾಗಿ ನಾನು ಕಾದಿಹೆ| ಹೃದಯಕಮಲವರಳಿಸಿ ನೀ ದಯಮಾಡಿಸು ಬೇಗನೆ||                         —-ವಚನವೇದ

ದಯಮಾಡಿಸು Read More »

ತಾಯಿ ನೀನೆನ್ನ ಶಿಕ್ಷಿಸಲು

ತಾಯಿ ನೀನೆನ್ನ ಶಿಕ್ಷಿಸಲು ರಕ್ಷಿಪರಾರು ತ್ರಿಭುವನದೊಳು ಹೇ|| ನಿನ್ನನೆ ನಂಬಿಯೆ ಅನ್ಯರ ತ್ಯಜಿಸಿದೆ ನೀಯೆನ್ನ ತ್ಯಜಿಸಲು ಗತಿ ಯಾರಿನ್ನು|| ಮಾನುಷ ಜನ್ಮವ ಮುಕ್ತಿಯ ಆಸೆಯ ಶ್ರೀಗುರುಪಾದವ ಕರುಣಿಸಿದೆ ತಾಯಿ| ಎನ್ನಯ ದೋಣಿಯ ನಿನ್ನಯ ದಡದಲಿ ಮುಳುಗಿಸಿದರೇ ನೀನೇ ಕಾಯುವರಾರು ಕಾಯುವರಾರು ಜಗಜ್ಜನನಿ||                            —ಸ್ವಾಮಿ ಹರ್ಷಾನಂದ

ತಾಯಿ ನೀನೆನ್ನ ಶಿಕ್ಷಿಸಲು Read More »

ತಾಯಿ ದುರ್ಗೆಯ ನಿಜವನರಿಯುವ

ತಾಯಿ ದುರ್ಗೆಯ ನಿಜವನರಿಯುವ ದೀರರಾರೋ ಜಗದೊಳು| ಆರು ದರುಶನ ವೇದಶಾಸ್ತ್ರ ಪುರಾಣವರಿಯದು ಅವಳನು|| ಯೋಗಿಹೃದಯದ ದಿವ್ಯನಿತ್ಯಾ- ನಂದರೂಪಿಣಿ ಆಕೆಯು| ತನ್ನ ಆನಂದದಲಿ ತಾನೇ ಜೀವರೆದೆಯೊಳಗಿರುವಳು|| ಸಕಲಬ್ರಹ್ಮಾಂಡವನು ಬಸಿರಲಿ ಧರಿಸಿ ನಿತ್ಯವು ಪೊರೆವಳು| ಮೂಲಾಧಾರ ಸಹಸ್ರಾರದಿ ಮುನಿಗಳವಳನು ನೆನೆವರು|| ಶಿವನ ಹೊರತಿನ್ನಾರು ಅರಿಯರು ಅವಳ ದಿವ್ಯಸ್ವರೂಪವ| ಪದ್ಮವನದಲಿ ಹಂಸರೂಪನ ಜೊತೆಗೆ ನಲಿಯುವ ಮಾಟವ|| ಕಡಲನೀಜುವೆನೆಂಬ ಮರುಳನ ಕಲ್ಪನೆಗೆ ನಗುವಂದದಿ| ಇಂಥ ತಾಯಿಯ ತಿಳಿದೆನೆಂದರೆ ಶ್ರೀಪ್ರಸಾದನು ನಗುವನು|| ಕುಬ್ಜನಾದವ ಮುಗಿಲಚಂದ್ರನ ಹಿಡಿವ ಯತ್ನದ ತೆರದಲಿ| ಬುದ್ಧಿಯರಿತರು ಹೃದಯವರಿಯದು ತಾಯಿ ದುರ್ಗೆಯ

ತಾಯಿ ದುರ್ಗೆಯ ನಿಜವನರಿಯುವ Read More »

ಜೇನಿನ ಗೂಡೊಳು

ಜೇನಿನ ಗೂಡೊಳು ಹುದುಗಿಹ ಮಧುವೋಲ್ ದೇವನ ಹೃದಯದಿ ಹುದುಗಿಹ ಕರುಣೆಯು| ದೀನರ ಆರ್ತರ ಕೂಗಿನ ಹೊಡೆತಕೆ ಶಾರದೆ-ರೂಪದಿ ಸೂಸಿತು ಹರಿಯಿತು|| ಮಾನಸ-ಸರಸಿಜ-ಮಂದಾಕಿನಿ-ಜಲ ಭಾರತ-ಭೂಮಿಯ ಪಾವನಗೈದರೆ| ಶಾರದರೂಪೀ ಕರುಣಾಗಂಗೆಯು ವಿಶ್ವಕೆ ತಂಪಿನ ಸುಧೆಯನು ನೀಡಿತು|| ತನ್ನನು ಕಡಿವಗು ತಣ್ಣನೆ ನೆರಳನು ನೀಡುವ ವೃಕ್ಷದ ತೆರದಲಿ ಶಾರದೆ| ತನ್ನನು ಹಿಂಸಿಸಿ ಬಾಳಲು ಬಯಸಿದ ಮೂರ್ಖರ ಮನ್ನಿಸಿ ಹರಸಿದಳಲ್ಲವೆ|| ಸರ್ವವಿದ್ಯೆಗಳ ಮೂರುತಿ ನೀನು ಭೋಗದ ಮೋಕ್ಷದ ದಾತೆಯು ನೀನೇ| ಎನ್ನಯ ಹೃದಯದಿ ನಿನ್ನಯ ಭಕ್ತಿಯ ತುಂಬಿಸು ಕೂಡಲೆ ಕೃಪೆಯನು ತೋರುತ|| ನಾನೂ

ಜೇನಿನ ಗೂಡೊಳು Read More »

ಜಯ ಜಗದಂಬ ಮಾ

ಜಯ ಜಗದಂಬ ಮಾ ಜನನೀ ಶ್ಯಾಮಾ ಜವದಿ ಬಂದು ಪಾಲಿಸೆನ್ನ ಪಾರ್ವತಿ ಉಮಾ|| ಮಮ ಹೃದಯಕಮಲದಿ ವಾಸಿಸು ಮುದದಿ ಸದಾ ನಿನ್ನ ಪರಮಧ್ಯಾನ ಗೈವೆ ಹೃದಯದಿ| ನಿನ್ನ ಕಂದ ನಾನು ಕರೆಯುತಿಹೆ ಲಾಲಿಸೆನ್ನ ಹೇ ರಮಾ| ಜವದಿ ಬಂದು ಪಾಲಿಸೆನ್ನ ಪಾರ್ವತೀ ಉಮಾ|| ಪರಾಶಕ್ತಿರೂಪಿಣೀ ವಿಮುಕ್ತಿದಾಯಿನೀ ಪರಾಭಕ್ತಿಗಮ್ಯೆ ನೀನು ಭವತಾರಿಣೀ| ನಿನ್ನ ನಂಬಿ ಕರೆವೆ ನಮನಗೈವೆ ನಲಿದು ಬಾರೆ ಹೇ ರಮಾ| ಜವದಿ ಬಂದು ಪಾಲಿಸೆನ್ನ ಪಾರ್ವತೀ ಉಮಾ||

ಜಯ ಜಗದಂಬ ಮಾ Read More »

ಕಾಲಭಯವಾರಿಣೀ

(ಏ ಮಾ) ಕಾಲಭಯವಾರಿಣೀ ಕಪಾಲಿನೀ ಕಾಲರೂಪಿಣೀ| ಶಂಭುಭಾಮಿನೀ ನಿಶುಂಭಘಾತನೀ ಸಮರವಾಸಿನೀ ಸುರವಂದಿನೀ|| ಪುರಹರಮನೋಮೋಹಕಾರಿಣೀ ಸತ್ಯವಾದಿನೀ| ತತ್ತ್ವದಾಯಿನೀ ತ್ರಾಸನಾಶಿನೀ ತ್ರಾಣಕಾರಿಣೀ ತಿಮಿರವರಣೀ|| ತ್ರಿಗುಣಧಾರಿಣೀ ತ್ರಿದೇವಜನನೀ ತ್ರಿಲೋಕೇಶೀ ತೇಜರೂಪಿಣೀ ಅನ್ನದಾಯಿನೀ ಅಮರಪಾಲಿನೀ ಅಸುರದಲನೀ ಆದಿಕಾರಿಣೀ| ಆಶುತೋಷ ಹೃದಿವಿಲಾಸಿನೀ ಆತ್ಮರೂಪಿಣೀ||

ಕಾಲಭಯವಾರಿಣೀ Read More »

ಕರುಣಿಸೆನ್ನ ಹರಿಯ ರಮಣಿ

ಕರುಣಿಸೆನ್ನ ಹರಿಯ ರಮಣಿ ವರದ ಲಕುಮಿದೇವಿಯೆ ಕಮಲಭಾಣಜನನಿ ದಿವ್ಯ- ಕಮಲಪಾಣಿ ರಾಜಿತೇ|| ಸಕಲನಿಗಮವಿನುತಚರಣೇ ಸಕಲಭಾಗ್ಯದಾಯಿನಿ ಸಕನಮೌನಿನಿಕರವಂದ್ಯ ಸಕಲಲೋಕನಾಯಕಿ|| ಶರಧಿತನುಜೇ ಮಂಗಳಾಂಗಿ ಪರಮಸೌಖ್ಯದಾಯಿನಿ ವರದವೆಂಕಟಾದ್ರಿವರನ ಪುರನಿವಾಸೇ ಮೋಹಿನಿ||

ಕರುಣಿಸೆನ್ನ ಹರಿಯ ರಮಣಿ Read More »

ಏಳು ತಾಯಿ, ಏಳು ತಾಯಿ

ಏಳು ತಾಯಿ, ಏಳು ತಾಯಿ, ಎಷ್ಟು ಕಾಲ ನಿದ್ದೆಗೈವೆ ಮೂಲಾಧಾರ ಪದ್ಮದಿ|| ಏಳು ತಾಯಿ ಶಿವನಿರುವಾ ಸಾವಿರದಳ ಕಮಲವರಳಲೆನ್ನ ಶಿರೋಮಧ್ಯದಿ ಷಟ್ ಚಕ್ರವ ಭೇದಿಸಮ್ಮ ಮನದ ವ್ಯಥೆಯ ನೀಗಿಸಮ್ಮ ಓ ಚೇತನ ರೂಪಿಣಿ||                        —-ವಚನವೇದ

ಏಳು ತಾಯಿ, ಏಳು ತಾಯಿ Read More »

ಎಲ್ಲವೂ ನಿನ್ನಚ್ಛೆಯಂತೆ ನಡೆದಿರಲು

ಎಲ್ಲವೂ ನಿನ್ನಚ್ಛೆಯಂತೆ ನಡೆದಿರಲು ನೀನೆ ಭವಸಾಗರವ ದಾಟಿಸುವ ಹಡಗು| ನಿನ್ನ ಇಚ್ಛೆಯ ನೀನು ಪೂರೈಸುತಿರಲು ತಮ್ಮ ಗೈಮೆಯಿದೆಂದು ತಿಳಿವರೀ ಜನರು || ಕೆಸರಿನಲಿ ಸಲಗವನು ಹಿಡಿಯುವಳು ನೀನು ಹೆಳವನನು ಗಿರಿಯ ತುದಿಗೊಯ್ಯುವಳು ನೀನು| ಹಲವರಿಗೆ ಬ್ರಹ್ಮಪದವಿತ್ತು ಹಲವರನು ಭವಜಲಧಿ ಸುಳಿಯೊಳಗೆ ಎಸೆಯುವಳು ನೀನು|| ನೀನು ಚಾಲಕಶಕ್ತಿ ನಾನೊಂದು ಯಂತ್ರ ನಾನೊಂದು ಬರಿಯ ಮನೆ ನೀನದರ ಮಂತ್ರ| ನಾನೊಂದು ರಥವಾಗೆ ನೀನದರ ರಥಿಕ ನೀ ನಡೆಸೆ ನಾ ನಡೆವೆ ನಿನ್ನದೀ ಲೋಕ||                                               ——ವಚನವೇದ

ಎಲ್ಲವೂ ನಿನ್ನಚ್ಛೆಯಂತೆ ನಡೆದಿರಲು Read More »