ಪೇಮ ಭರೇ ಮನ ರೇ ಗಾಹೋ ರಾಮಕೃಷ್ಣ ನಾಮ್

ಕೀರ್ತನ – ದಾದರಾ ಪೇಮ ಭರೇ ಮನ ರೇ ಗಾಹೋ ರಾಮಕೃಷ್ಣ ನಾಮ್|| ಅಂತರೆ ಜೊತೊನೆ ರಾಖೋ ಮನ ರೇ ಗಾಹೊ ನಾಮ್|| ದೀನ ಕಾಂಗಾಲೇರ್ ಧನ್ ರಾಮಕೃಷ್ಣ ನಾಮ್|| ಏ ಕಿ ಭ್ರಂತೆ ಫೂಟಿಲೋರೆ ರಾಧಾಕೃಷ್ಣ ಶ್ಯಾಮ್| ಶಿವ ಕಾಲಿ ಬ್ರಹ್ಮ ವಿಷ್ಣು ಶ್ಯಾಮ ಸೀತಾರಾಮ್|| ನಾಮ ಬ್ರಹ್ಮಏ ಕೆ ಜೀನೆ ಮನ ರೇ ಗಾಹೊ ನಾಮ್! ಜನನ ಮರಣ ಸಾಥಿ ರಾಮಕೃಷ್ಣ ನಾಮ್|

ಪೇಮ ಭರೇ ಮನ ರೇ ಗಾಹೋ ರಾಮಕೃಷ್ಣ ನಾಮ್ Read More »

ಶ್ರೀಸರಸ್ವತೀ ಸ್ತೋತ್ರ

ರವಿರುದ್ರಪಿತಾಮಹವಿಷ್ಣುನುತಂ ಹರಿಚಂದನಕುಂಕುಮಪಂಕಯುತಮ್ | ಮುನಿವೃಂದಗಜೇಂದ್ರಸಮಾನಯುತಂ ತವ ನೌಮಿ ಸರಸ್ವತಿ ಪಾದಯುಗಮ್ || 1 || ಶಶಿಶುದ್ಧಸುಧಾಹಿಮಧಾಮಯುತಂ ಶರದಂಬರಬಿಂಬಸಮಾನಕರಮ್ | ಬಹುರತ್ನಮನೋಹರಕಾಂತಿಯುತಂ; ತವ ನೌಮಿ… || 2 || ಕನಕಾಬ್ಜವಿಭೂಷಿತಭೂತಿ ಭವಂ ಭವಭಾವವಿಭಾಷಿತ ಭಿನ್ನಪದಮ್ | ಪ್ರಭುಚಿತ್ತಸಮಾಹಿತಸಾಧುಪದಂ; ತವ ನೌಮಿ… || 3 || ಭವಸಾಗರಮಜ್ಜನಭೀತಿನುತಂ ಪ್ರತಿಪಾದಿತಸಂತತಿಕಾರಮಿದಮ್ | ವಿಮಲಾದಿಕಶುದ್ಧವಿಶುದ್ಧಪದಂ; ತವ ನೌಮಿ… || 4 || ಮತಿಹೀನಜನಾಶ್ರಯ ಪಾದಮಿದಂ ಸಕಲಾಗಮಭಾಷಿತ ಭಿನ್ನಪದಮ್ | ಪರಿಪೂರಿತವಿಶ್ವಮನೇಕಭವಂ; ತವ ನೌಮಿ… || 5 || ಪರಿಪೂರ್ಣಮನೋರಥಧಾಮನಿಧಿಂ ಪರಮಾರ್ಥವಿಚಾರವಿವೇಕವಿಧಿಮ್ | ಸುರಯೋಷಿತಸೇವಿತಪಾದತಲಂ;

ಶ್ರೀಸರಸ್ವತೀ ಸ್ತೋತ್ರ Read More »

ಶಿವವಂದನಮ್

ಪ್ರಭುಮೀಶಮನೀಶಮಶೇಷಗುಣಂ ಗುಣಹೀನಮಹೀಶಗರಾಭರಣಮ್ | ರಣನಿರ್ಜಿತದುರ್ಜಯದೈತ್ಯಪುರಂ ಪ್ರಣಮಾಮಿ ಶಿವಂ ಶಿವಕಲ್ಪತರುಮ್ || ಗಿರಿರಾಜಸುತಾನ್ವಿತವಾಮತನುಂ ತನುನಿಂದಿತ ರಾಜಿತ ಕೋಟಿವಿಧುಮ್ | ವಿಧಿವಿಷ್ಣುಶಿರೋದ್ಧøತಪಾದಯುಗಂ, ಪ್ರಣಮಾಮಿ…|| ಶಶಿಲಾಂಛಿತರಂಜಿತಸನ್ಮುಕುಟಂ ಕಟಿಲಂಬಿತಸುಂದರಕೃತ್ತಿಪಟಮ್ | ಸುರಶೈವಲಿನೀಕೃತಪೂತಜಟಂ, ಪ್ರಣಮಾಮಿ…|| ನಯನತ್ರಯಭೂಷಿತಚಾರುಮುಖಂ ಮುಖಪದ್ಮಪರಾಜಿತಕೋಟಿವಿಧುಮ್ | ವಿಧುಖಂಡವಿಮಂಡಿತಭಾಲತಟಂ, ಪ್ರಣಮಾಮಿ…|| ವೃಷರಾಜನಿಕೇತನಮಾದಿಗುರುಂ ಗರಲಾಶನಮಾಜಿವಿಷಾಣಧರಮ್ | ಪ್ರಮಥಾಧಿಪಸೇವಕರಂಜನಕಂ, ಪ್ರಣಮಾಮಿ…|| ಮಕರಧ್ವಜಮತ್ತಮತಂಗಹರಂಕರಿಚರ್ಮಗನಾಗವಿಬೋಧಕರಮ್ | ವರಮಾರ್ಗಣಶೂಲವಿಧಾನಧರಂ, ಪ್ರಣಮಾಮಿ…|| ಜಗದುದ್ಭವಪಾಲನನಾಶಕರಂ ತ್ರಿದಿವೇಶಶಿರೋಮಣಿಧೃಷ್ಟಪದಮ್ | ಪ್ರಿಯಮಾನವಸಾಧುಜನೈಕಗತಿಂ, ಪ್ರಣಮಾಮಿ…||

ಶಿವವಂದನಮ್ Read More »

ವೇದಸಾರಶಿವಸ್ತವಃ

ಪರಾತ್ಮಾನಮೇಕಂ ಜಗದ್ಬೀಜಮಾದ್ಯಂ ನಿರೀಹಂ ನಿರಾಕಾರಮೋಂಕಾರವೇದ್ಯಮ್ | ಯತೋ ಜಾಯತೇ ಪಾಲ್ಯತೇ ಯೇನ ವಿಶ್ವಂತಮೀಶಂ ಭಜೇ ಲೀಯತೇ ಯತ್ರ ವಿಶ್ವಮ್ || 1 || ಅಜಂ ಶಾಶ್ವತಂ ಕಾರಣಂ ಕಾರಣಾನಾಂಶಿವಂ ಕೇವಲಂ ಭಾಸಕಂ ಭಾಸಕಾನಾಮ್ | ತುರೀಯಂ ತಮಃಪಾರಮಾದ್ಯಂತಹೀನಂ ಪ್ರಪದ್ಯೇ ಪರಂ ಪಾವನಂ ದ್ವೈತಹೀನಮ್ || 2 || ನಮಸ್ತೇ ನಮಸ್ತೇ ವಿಭೋ ವಿಶ್ವಮೂರ್ತೇ ನಮಸ್ತೇ ನಮಸ್ತೇ ಚಿದಾನಂದಮೂರ್ತೇ | ನಮಸ್ತೇ ನಮಸ್ತೇ ತಪೋಯೋಗಗಮ್ಯ ನಮಸ್ತೇ ನಮಸ್ತೇ ಶ್ರುತಿಜ್ಞಾನಗಮ್ಯ || 3 || -ಶಂಕರಾಚಾರ್ಯ

ವೇದಸಾರಶಿವಸ್ತವಃ Read More »

ಪ್ರಾಣ ಹೊಲ ಮೇರೆಯಲ್ಲಿ ಪ್ರಾಣ ಸತ್ತುದ ಕಂಡೆ ?

ಪ್ರಾಣ ಹೊಲ ಮೇರೆಯಲ್ಲಿ ಪ್ರಾಣ ಸತ್ತುದ ಕಂಡೆ ? ದೇವ ದಾನವ ಮಾನವರೆಲ್ಲಾ ಜೋಳವಾಳಿಯಲೈದಾರೆ. ಜಾಣಕಲುಕುಟಿಗನನಗಲದೆ ಹೂವನೆ ಕೊಯ್ದು, ಕಲಿಯುಗದ ಕರಸ್ಥಲದೇವಪೂಜೆ ಘನ. ಮೇರುವಿನ ಕುದುರೆ ನಲಿದಾಡಲದುಭುತ. ಜಾರಜಂಗುಳಿಗಳ ಜಗಳ ಮೇಳಾಪ, ಮರುಪತ್ತದ ಮಾತು, ನಗೆ ಹಗರಣ ? ಕ್ಷೀರಸಾಗರದಲ್ಲಿ ದಾರಿಯಳವಡದಯ್ಯಾ. ನೀ ಹೇಳಬೇಕು, ಭಕ್ತರೆಂತಿಪ್ಪರೊ ? ಪಂಚವರ್ಣದ ಬಣ್ಣ ಸಂತೆಯ ಪರದಾಟವು ಚೆನ್ನಮಲ್ಲಿಕಾರ್ಜುನಯ್ಯಾ, ತ್ರಿಭುವನದ ಹೆಂಡಿರ ನೀರಹೊಳೆಯಲ್ಲಿರಿಸಿತ್ತು.

ಪ್ರಾಣ ಹೊಲ ಮೇರೆಯಲ್ಲಿ ಪ್ರಾಣ ಸತ್ತುದ ಕಂಡೆ ? Read More »

ಪ್ರಾಣ ಲಿಂಗವೆಂದರಿದಬಳಿಕ

ಪ್ರಾಣ ಲಿಂಗವೆಂದರಿದಬಳಿಕ ಪ್ರಾಣ ಪ್ರಸಾದವಾಯಿತ್ತು. ಲಿಂಗ ಪ್ರಾಣವೆಂದರಿದಬಳಿಕ ಅಂಗದಾಸೆ ಹಿಂಗಿತ್ತು. ಲಿಂಗ ಸೋಂಕಿನ ಸಂಗಿಗೆ ಕಂಗಳೆ ಕರುವಾದವಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ, ಹಿಂಗದೆ ಅನಿಮಿಷನಾಗಿಹ ಶರಣಂಗೆ.

ಪ್ರಾಣ ಲಿಂಗವೆಂದರಿದಬಳಿಕ Read More »

ಪಾತಾಳವಿತ್ತಿತ್ತ, ಪಾದಂಗಳತ್ತತ್ತ,

ಪಾತಾಳವಿತ್ತಿತ್ತ, ಪಾದಂಗಳತ್ತತ್ತ, ದಶದಿಕ್ಕು ಇತ್ತಿತ್ತ, ದಶಭುಜಂಗಳತ್ತತ್ತ, ಬ್ರಹ್ಮಾಂಡವಿತ್ತಿತ್ತ, ಮಣಿಮುಕುಟವತ್ತತ್ತ, ಚೆನ್ನಮಲ್ಲಿಕಾರ್ಜುನಯ್ಯಾ, ನೀವೆನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಲ್ಲಾ ಲಿಂಗವೆ.

ಪಾತಾಳವಿತ್ತಿತ್ತ, ಪಾದಂಗಳತ್ತತ್ತ, Read More »

ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಪಿಡಿದು

ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಪಿಡಿದು ಅಂತಃಕರಣಚತುಷ್ಟಯವೆಂಬ ಪಶುವಂ ಕಟ್ಟಿ ಓಂಕಾರವೆಂಬ ಶಿಣಿಗೋಲಂ ಪಿಡಿದು ವ್ರತ ಕ್ರಿಯವೆಂಬ ಸಾಲನೆತ್ತಿ ನಿರಾಶೆಯೆಂಬ ಕುಂಟೆಯಂ ತುರುಗಿ ದುಷ್ಕರ್ಮಂಗಳೆಂಬ ದುರ್ಮಲರಿಗಳಂ ಕಳೆದು ನಾನಾ ಮೂಲದ ಬೇರಂ ಕಿತ್ತು e್ಞನಾಗ್ನಿಯೆಂಬ ಬೆಂಕಿಯಂ ಸುಟ್ಟು ಈ ಹೊಲನ ಹಸನಮಾಡಿ ಬಿತ್ತುವ ಪರ್ಯಾಯವೆಂತೆಂದೊಡೆ ನಾದ ಬಿಂದು ಕಳೆ ಮೊಳೆ ಹದ ಬೆದೆಯನರಿದು ಸ್ಥೂಲವೆಂಬ ದಿಂಡಿಂಗೆ ಶ್ರೀದೇವರೆಂಬ ತಾಳನಟ್ಟು ಸುಷುಮ್ನನಾಳವೆಂಬ ಕೋವಿಯಂ ಜೋಡಿಸಿ ಮೇಲೆ ತ್ರಿಕೂಟಸ್ಥಾನವೆಂಬ ಬಟ್ಟೆಯಂ ಬಲಿದು ಕುಂಡಲಿಯ ಸರ್ಪನ ಹಗ್ಗವಂ ಬಿಗಿದು ಹಂಸನೆಂಬ ಎತ್ತಂ ಕಟ್ಟಿ ಪ್ರಣವವೆಂಬ

ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಪಿಡಿದು Read More »

ಪೃಥ್ವಿ ಪೃಥ್ವಿಯ ಕೂಡದ ಮುನ್ನ,

ಪೃಥ್ವಿ ಪೃಥ್ವಿಯ ಕೂಡದ ಮುನ್ನ, ಅಪ್ಪು ಅಪ್ಪುವ ಕೂಡದ ಮುನ್ನ, ತೇಜ ತೇಜವ ಕೂಡದ ಮುನ್ನ, ವಾಯು ವಾಯುವ ಕೂಡದ ಮುನ್ನ, ಆಕಾಶ ಆಕಾಶವ ಕೂಡದ ಮುನ್ನ ಪಂಚೇಂದ್ರಿಯಂಗಳೆಲ್ಲ ಹಂಚುಹರಿಯಾಗದ ಮುನ್ನ ಚೆನ್ನಮಲ್ಲಿಕಾರ್ಜುನಂಗೆ ಶರಣೆನ್ನಿರೆ ?

ಪೃಥ್ವಿ ಪೃಥ್ವಿಯ ಕೂಡದ ಮುನ್ನ, Read More »

ಪುಣ್ಯಪಾಪಂಗಳನರಿಯದ ಮುನ್ನ,

ಪುಣ್ಯಪಾಪಂಗಳನರಿಯದ ಮುನ್ನ, ಅನೇಕ ಭವಂಗಳ ಬಂದೆನಯ್ಯಾ ? ಬಂದು ಬಂದು ನೊಂದು ಬೆಂದೆನಯ್ಯಾ ? ಬಂದು ನಿಮ್ಮ ನಂಬಿ ಶರಣುವೊಕ್ಕೆನಯ್ಯಾ ? ನಿಮ್ಮನೆಂದೂ ಅಗಲದಂತೆ ಮಾಡಿ ನಡೆಸಯ್ಯಾ ನಿಮ್ಮ ಧರ್ಮ ನಿಮ್ಮ ಧರ್ಮ. ನಿಮ್ಮಲೊಂದು ಬೇಡುವೆನು, ಎನ್ನ ಬಂಧನ ಬಿಡುವಂತೆ ಮಾಡಯ್ಯಾ ಚೆನ್ನಮಲ್ಲಿಕಾರ್ಜುನಾ

ಪುಣ್ಯಪಾಪಂಗಳನರಿಯದ ಮುನ್ನ, Read More »

ಪುರುಷನ ಮುಂದೆ ಮಾಯೆ

ಪುರುಷನ ಮುಂದೆ ಮಾಯೆ ಸ್ತ್ರೀಯೆಂಬ ಅಭಿಮಾನವಾಗಿ ಕಾಡುವುದು. ಸ್ತ್ರೀಯ ಮುಂದೆ ಮಾಯೆ ಪುರುಷನೆಂಬ ಅಭಿಮಾನವಾಗಿ ಕಾಡುವುದು. ಲೋಕವೆಂಬ ಮಾಯೆಗೆ ಶರಣಚಾರಿತ್ರ್ಯ ಮರುಳಾಗಿ ತೋರುವುದು. ಚೆನ್ನಮಲ್ಲಿಕಾರ್ಜುನನೊಲಿದ ಶರಣಂಗೆ ಮಾಯೆಯಿಲ್ಲ, ಮರಹಿಲ್ಲ, ಅಭಿಮಾನವೂ ಇಲ್ಲ.

ಪುರುಷನ ಮುಂದೆ ಮಾಯೆ Read More »

ಪಡೆವುದರಿದು ನರಜನ್ಮವ,

ಪಡೆವುದರಿದು ನರಜನ್ಮವ, ಪಡೆವುದರಿದು ಹರಭಕ್ತಿಯ, ಪಡೆವುದರಿದು ಗುರುಕಾರುಣ್ಯವ, ಪಡೆವುದರಿದು ಲಿಂಗಜಂಗಮಸೇವೆಯ, ಪಡೆವುದರಿದು ಸತ್ಯಶರಣರನುಭಾವವ. ಇಂತಾಗಿ ಚೆನ್ನಮಲ್ಲಿಕಾರ್ಜುನಯ್ಯನ ಶರಣರ ಅನುಭಾವದಲ್ಲಿ ನಲಿನಲಿದಾಡು ಕಂಡೆಯಾ ಎಲೆ ಮನವೆ.

ಪಡೆವುದರಿದು ನರಜನ್ಮವ, Read More »

ಪರರೊಡತಣ ಮಾತು ನಮಗೇತರದಯ್ಯ ?

ಪರರೊಡತಣ ಮಾತು ನಮಗೇತರದಯ್ಯ ? ಪರರೊಡತಣ ಗೊಟ್ಟಿ ನಮಗೇಕಯ್ಯ ? ಲೋಕದ ಮಾನವರೊಡನೆ ನಮಗೇತರ ವಿಚಾರವಯ್ಯ ? ಚೆನ್ನಮಲ್ಲಿಕಾರ್ಜುನನ ಒಲವಿಲ್ಲದವರೊಡನೆ ನಮಗೇತರ ವಿಚಾರವಯ್ಯಾ ?

ಪರರೊಡತಣ ಮಾತು ನಮಗೇತರದಯ್ಯ ? Read More »

ಪಚ್ಚೆಯ ನೆಲೆಗಟ್ಟು, ಕನಕದ ತೋರಣ, ವಜ್ರದ ಕಂಬ,

ಪಚ್ಚೆಯ ನೆಲೆಗಟ್ಟು, ಕನಕದ ತೋರಣ, ವಜ್ರದ ಕಂಬ, ಪವಳದ ಚಪ್ಪರವಿಕ್ಕಿ, ಮುತ್ತುಮಾಣಿಕದ ಮೇಲುಕಟ್ಟ ಕಟ್ಟಿ, ಮದುವೆಯ ಮಾಡಿದರು, ಎಮ್ಮವರೆನ್ನ ಮದುವೆಯ ಮಾಡಿದರು. ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆನ್ನ ಮದುವೆಯಮಾಡಿದರು

ಪಚ್ಚೆಯ ನೆಲೆಗಟ್ಟು, ಕನಕದ ತೋರಣ, ವಜ್ರದ ಕಂಬ, Read More »

ಪಂಚೇಂದ್ರಿಯದ ಉರವಣೆಯ

ಪಂಚೇಂದ್ರಿಯದ ಉರವಣೆಯ ಉದುಮದದ ಭರದ ಜವ್ವನದೊಡಲು ವೃಥಾ ಹೋಯಿತ್ತಲ್ಲಾ ? ತುಂಬಿ ಪರಿಮಳವ ಕೊಂಡು ಲಂಬಿಸುವ ತೆರನಂತೆ ಇನ್ನೆಂದಿಂಗೆ ಒಳಕೊಂಬೆಯೊ, ಅಯ್ಯಾ ಚೆನ್ನಮಲ್ಲಿಕಾರ್ಜುನಾ ? |

ಪಂಚೇಂದ್ರಿಯದ ಉರವಣೆಯ Read More »

ಪಂಚೇಂದ್ರಿಯಂಗಳೊಳಗೆ

ಪಂಚೇಂದ್ರಿಯಂಗಳೊಳಗೆ ಒಂದಕ್ಕೆ ಪ್ರಿಯನಾದಡೆ ಸಾಲದೆ ? ಸಪ್ತವ್ಯಸನಂಗಳೊಳಗೆ ಒಂದಕ್ಕೆ ಪ್ರಿಯನಾದಡೆ ಸಾಲದೆ ? ರತ್ನದ ಸಂಕಲೆಯಾದಡೇನು ಬಂಧನ ಬಿಡುವುದೆ ಚೆನ್ನಮಲ್ಲಿಕಾರ್ಜುನಾ ?

ಪಂಚೇಂದ್ರಿಯಂಗಳೊಳಗೆ Read More »

ಪಂಚೇಂದ್ರಿಯ ಸಪ್ತಧಾತು ಅಷ್ಟಮದ ಕೊಂದು ಕೂಗಿತಲ್ಲಾ ?

ಪಂಚೇಂದ್ರಿಯ ಸಪ್ತಧಾತು ಅಷ್ಟಮದ ಕೊಂದು ಕೂಗಿತಲ್ಲಾ ? ಹರಿಬ್ರಹ್ಮರ ಬಲುಹ ಮುರಿದು ಕೊಂದು ಕೂಗಿತಲ್ಲಾ ? ಮಹಾ ಋಷಿಯರ ತಪವ ಕೆಡಿಸಿ ಕೊಂದು ಕೂಗಿತಲ್ಲಾ ? ಚೆನ್ನಮಲ್ಲಿಕಾರ್ಜುನಂಗೆ ಶರಣೆಂದು ನಂಬಿ ಮರೆಹೊಕ್ಕಡೆ ಅಂಜಿ ನಿಂದುದಲ್ಲಾ ?

ಪಂಚೇಂದ್ರಿಯ ಸಪ್ತಧಾತು ಅಷ್ಟಮದ ಕೊಂದು ಕೂಗಿತಲ್ಲಾ ? Read More »

ಫಲ ಒಳಗೆ ಪಕ್ವವಾಗಿಯಲ್ಲದೆ,

ಫಲ ಒಳಗೆ ಪಕ್ವವಾಗಿಯಲ್ಲದೆ, ಹೊರಗಳ ಸಿಪ್ಪೆ ಒಪ್ಪಗೆಡದು. ಕಾಮನ ಮುದ್ರೆಯ ಕಂಡು ನಿಮಗೆ ನೋವಾದಿಹಿತೆಂದು ಆ ಭಾವದಿಂದ ಮುಚ್ಚಿದೆ. ಇದಕ್ಕೆ ನೋವೇಕೆ ಕಾಡದಿರಣ್ಣಾ, ಚೆನ್ನಮಲ್ಲಿಕಾರ್ಜುನದೇವರದೇವನ ಒಳಗಾದವಳ.

ಫಲ ಒಳಗೆ ಪಕ್ವವಾಗಿಯಲ್ಲದೆ, Read More »

ಪಂಪಾತೀರದ ಲಿಂಗಾ ಭವಭಸಿತಾಂಗಾ

ಪಂಪಾತೀರದ ಲಿಂಗಾ ಭವಭಸಿತಾಂಗಾ ಸಂಪುಲ್ಲಾಕ್ಷನ ತೋರೋ ಭಕ್ತ ಕೃಪಾಂಗ ನೀನೆ ಗತಿಯೆಂದು ನಿದಾನದಿಂದ ಧ್ಯಾನವ ಮಾಡಲು ದೈನ್ಯದಲಿಂದ ಹೀನ ಪಾಪಂಗಳು ಕಳೆದು ದಯದಿಂದ ಮಾನಾಭಿಮಾನದೊಡಿಯನೆ ಆನಂದ ||1|| ಗಜಚರ್ಮಾಂಬರ ಗಂಗಾಧರ ಪುರವೈರಿ ಭಜಿಸಿದೆನೊ ನಿನ್ನ ಭಕ್ತಿಯಲಿ ಸಾಕಿರೆ ಕುಜನರೊಳಿಡದೆ ಉತ್ತಮವಾದ ದಾರಿ ನಿಜವಾಗಿ ತೋರಯ್ಯ ದೀನರುಪಕಾರಿ||2|| ಹೇಮಗಿರಿಯ ವಾಸಾ ಈಶನಿರೀಶಾ ಸೋಮಶೇಖರನೆ ಪಾರ್ವತಿಯ ವಿಲಾಸಾ ರಾಮ ಶ್ರೀ ವಿಜಯವಿಠ್ಠಲನೆ ನಿರ್ದೋಷಾ ಸ್ವಾಮಿಯ ನೆನೆವಂತೆ ಕೊಡು ಎನಗೆ ಮನಸಾ||3||

ಪಂಪಾತೀರದ ಲಿಂಗಾ ಭವಭಸಿತಾಂಗಾ Read More »

ಮಂಗಳಂ ಮಹಾಗಂಗೆ

ಮಂಗಳಂ ಮಹಾಗಂಗೆ | ಭಕುತ ಮನೋಹಾರಿಗೆ | ಮಂಗಳಂ ಬಲುದುರಿತ ಸಂಹಾರಿಗೆ | ಮಂಗಳಂ ಪ್ರಯೋಗ ಕ್ಷೇತ್ರ ವಿಹಾರಿಗೆ ಮಂಗಳಂ ಕುಸುಮ ಚಿತ್ರಹಾರಿಗೆ ವೇಣಿಗೆ ನಿತ್ಯಕಲ್ಯಾಣಿಗೆ ಪಲ್ಲವ | ಪಾಣಿಗೆ ಗಂಭೀರ ಗುಣಶ್ರೇಣಿಗೆ | ತ್ರಾಣಿಗೆ ಕೋಕಿಲವಾಣಿಗೆ ಯಾದವನ | ರಾಣಿಗೆ ಮಣಿಹೇಮ ಭೂಷಣೆಗೆ ||1|| ಖ್ಯಾತಿಗೆ ತ್ರಿಲೋಕ ಮಾತೆಗೆ ಯ | ಮುನೆ ಸಂಘಾತಿಗೆ ಸರ್ವದಾ ಬಲುನೀತಿಗೆ | ಜಾತಿಗೆ ತುಹಿನಗಿರಿದಾತೆಗೆ ಲಕುಮಿಯ | ದೂತಿಗೆ ಅಮಿತ ಗುಣ ಪ್ರತಾಪಿಗೆ || ||2|| ಚನ್ನಿಗೆ ನಾರಿಕುಲರನ್ನಿಗೆ

ಮಂಗಳಂ ಮಹಾಗಂಗೆ Read More »

ಬಂದದೆ ಎನಗೆ ಬರಿದೆ ದೂರು

ಬಂದದೆ ಎನಗೆ ಬರಿದೆ ದೂರು ಬಂದೊಂದು ಅವಗುಣದವನೆಂಬೊ ಮಾತು ಕಾಮಕ್ರೋಧಂಗಳು ಹೆಚ್ಚಿಸಿ ಮನದೊಳು ತಾಮಸ ಬುದ್ಧಿ ವಿಶೇಷವಾಗಿ ಕಾಮುಕವಾಗಿ ನಡವಳಿ ನಡಸಿದ ಈ ಮನದ ಅಧಿಕಾರಿ ಶ್ರೀಕೃಷ್ಣನೊ ನಾನೊ ||1|| ಅನ್ಯಾಯ ಅನ್ಯಾಯ ಅಸಡ್ಡಾಳ ಅಪದ್ಧ ನನ್ನ ನಿನ್ನದು ಎಂಬೊ ಬಡದಾಟವು ತನ್ನ ಸ್ಮರಣಿ ತಪ್ಪಿ ವಿಷಯಕ್ಕೆ ಎರಗಿಸಿ ಮುನ್ನ ಮನದ ದಾತಾ ಶ್ರೀಕೃಷ್ಣನೊ ನಾನೊ ||2|| ಮನೆ ಮನೆಗಳ ಪೊಕ್ಕು ಮಕ್ಕಳಾಟಿಕೆಯಿಂದ ವನುರುತರ ರೂಪಿಗೆ ಸೋತು ಆತು ಕನಿಕರಿಸಿ ಕ್ರಮಗೆಟ್ಟು ತಿರುಗಿಸುವ ತನವು ಮಾಡಿದಾತಾ ಕೃಷ್ಣನೊ

ಬಂದದೆ ಎನಗೆ ಬರಿದೆ ದೂರು Read More »

ಬಂದ ದುರಿತ ವಿನಾಶನಾ

ಬಂದ ದುರಿತ ವಿನಾಶನಾ ಬಂದ ದುರಿತ ವಿನಾಶನ ಇಂದು ಪುರಂದರನ ಪೊಂದುತಲಿ ಅತಿ ಭಕುತಿಯಿಂದ ಸ್ಮರಿಸುವ ಜನರ ಹಿಂದೆ ಮುಂದು ಕುಲಕೋಟಿಗಳು ಉದ್ಧಾರ ಸಂದೇಹ ಸಲ್ಲದಿದಕೆ ದ್ವಾರಕಾಪುರದಲ್ಲಿ ಶ್ರೀರಮಣ ಸಭೆಯೊಳಗೆ ಚಾರು ಮಂಡಿತನಾಗಿ ಇರುತಿರಲು ಯದು ಪರಿ ವಾರ ವಾಲಗ ಮಾಡೆ ಸುತ್ತಲಿಹ ಗೋಪಿಕಾ ನಾರಿಯರ ಖ್ಯಾಲದಲ್ಲಿ ವಾರ ಕಾಂತೆಯರು ಮದವೇರಿ ನೃತ್ಯವ ಮಾಡೆ ಭೋರೆಂಬ ವಾದ್ಯವಿಳೆಯೊಳು ಮೊಳಗೆ ದೇವತತಿ ಧೀರರಾರಾರೆಂದು ಪೊಗಳಲಾ ನಭದಿಂದ ನಾರದನು ಧರೆಗಿಳಿದನು ||1|| ಬರುತಲೇ ವೈಕುಂಠಪುರದರಸಗೆರಗಿದನು ಕರಗಳನು ಮುಗಿದು ಕಿನ್ನರಿಯನ್ನು ತಾ

ಬಂದ ದುರಿತ ವಿನಾಶನಾ Read More »

ಪ್ರಾಯಶ್ಚಿತ್ತವು ಎನಗೆ ಇಲ್ಲವಯ್ಯಾ

ಪ್ರಾಯಶ್ಚಿತ್ತವು ಎನಗೆ ಇಲ್ಲವಯ್ಯಾ ನಾಯಿಯಂತೆ ಕಂಡ ಕಂಡಲ್ಲಿ ತಿಂಬುವಗೆ ಮಾನಸದಿ ತ-ದೇಕ ಧ್ಯಾನದಲ್ಲೇ ಕುಳಿತು e್ಞÁನಿಗಳ ಸಹವಾಸ ಮಾಡದಲೆ ಹೀನರಾಶ್ರೈಸೆ ನಾಲಿಗ್ಯೆ ಹಿತವನೆ ಬಯಸಿ ಮೀನು ಗಾಣಕೆ ಬಿದ್ದು ಮಿಡುಕುವಂದದಲಿ ||1|| ಸರಸರನೆ ಕಂಠವನು ಗರಗಸದಿ ಕೊಯ್ದರೂ ತರಹರಿಸದೇ ಪರರ ಮನೆಯನ್ನವನ್ನು ಕರದಲಿ ಸ್ಪರ್ಶ ಸಲ್ಲದು ಎಂದು ಪೇಳುತಿರೆ ಹಿರಿದಾಗಿ ಕುಳಿತು ಭುಂಜಿಸುವ ಪಾತಕಿಗೆ||2|| ಪರರಿತ್ತ ಕೂಳಿನಲಿ ಅವರ ಕುಲಕೋಟಿ ಸಾ- ವಿರ ಜನುಮದಲಿ ಅರ್ಜಿಸಿದ ಪಾಪ ಬೆರೆತಿಹುದು ಎಂದ್ಹೇಳಿ ಕೇಳಿ ಕೇಳಿ ನಗುತ ಹರುಷದಿಂ ಕುಳಿತು

ಪ್ರಾಯಶ್ಚಿತ್ತವು ಎನಗೆ ಇಲ್ಲವಯ್ಯಾ Read More »

ಪ್ರಾಣ ನಿನ್ನಂಘ್ರಿ ಸಿರಿರೇಣು ಕಾಣು

ಪ್ರಾಣ ನಿನ್ನಂಘ್ರಿ ಸಿರಿರೇಣು ಕಾಣು ತ್ರಾಣ ತ್ರಾಹಿ ತಾತಾ ದಾತಾ | ನಾನಾ ಯೋನಿಯಲಿ ಬಂದೆ ನೊಂದೆ ಗುರುವೆ ನೀನೆ ಗತಿಯೊ ಭರತ ಭಾರತಿರಮಣ ಭಾರತ ಪ್ರತಿಪಾದ್ಯ ಭರತ ಕುಲೋತ್ತಮ ಭವ್ಯ ಭರದಿಂದಲಿ ಎನ್ನಭಾರ ವಹಿಸುವ ಭರಣ ಭಾರದ್ವಾಜಾತ್ಮಜ ಭಾರಭಂಗಾ ||1|| ಗತಿ ಅಗತಿ ಗಮನಗರ್ಭ ಸ್ವರ್ಗ ನರಕ ಈ ಕ್ಷಿತಿ ಲೋಕಾಂತದಲ್ಲಿ ಬಳಲಿ ಮತಿಯ ಕಾಣದೇ ಮಂತ್ರಿ ರಾಜ ಮಹಾತತುವೇಶ ಬಲವತ್ವ್ಸರೂಪ||2|| ಪಂಚಾಹುತಿಯಲಿ ಹಾಕದಿರೋ ಜೀವೇಶ ಸಂಚಿತಾವಳಿ ಸರ್ವನಾಶಾ ಪಂಚದ್ವಾರದಲಿ ಶ್ರೀ ಹರಿಯ ಪೂಜಿಪ ಪುಣ್ಯ

ಪ್ರಾಣ ನಿನ್ನಂಘ್ರಿ ಸಿರಿರೇಣು ಕಾಣು Read More »

ಪ್ರಥಮ ದೈವವೇ ಪಂಢರಿರೇಯಾ

ಪ್ರಥಮ ದೈವವೇ ಪಂಢರಿರೇಯಾ ಪೃಥ್ವಿಯೊಳಗೆ ಭಾಗೀರಥಿಗೆ ಪಥವ ಕೋರೊ ಸಕಲಭಯನಾಶ ಸಾತ್ವಿಕ ಮೂರುತಿ ಭಕ್ತಜನಷೋಷಕ ನೀನಲ್ಲವೆ ತ್ವಕ್ಕು ಇಂದ್ರಿಯಗಳು ನಿನ್ನಾಧೀನವೋ ಅಖಿಳ ಬಗೆಯಿಂದ ಮಾತು ಮನ್ನಿಸಿ ಕಾಯೊ ||1|| ಸರ್ವರಂತರಿಯ ಸಿದ್ಧ ಫಲದಾಯಕ ಸರ್ವರಲಿ ಸ್ವಾಮಿಯೆಂದೆನಿಪ ಸರ್ವ ವಿಘ್ನೋಪ ಶಾಂತಾ ವೇದಾಂತನೆ ಗೀರ್ವಾಣ ಮುನಿಸುತ ಗಿರಿಧರ ದೇವಾ ||2|| ಸಾಧು ಮೂರುತಿ ಸಿದ್ಧ ಫಲದಾ ಬೋಧ ಕೀರುತಿ ಆದಿಪರಬೊಮ್ಮ ವಿಜಯವಿಠ್ಠಲರೇಯಾ ನೀನು ಈ ಜಗದೊಳು ಭೀಮಾ ಕೀರನಿವಾಸಾ ||3||

ಪ್ರಥಮ ದೈವವೇ ಪಂಢರಿರೇಯಾ Read More »