ದಾಸರ ಪದಗಳು

ಹರಿದಾಸುಲು ವೆಡಲು

ಹರಿದಾಸುಲು ವೆಡಲು ಮುಚ್ಚಟ ಗನಿ ಆನಂದಮಾಯೇ, ದಯಾಲೋ|| ಹರಿಗೋವಿಂದ ನರಹರಿ ರಾಮಕೃಷ್ಣಯನಿ ವರಸುಗ ನಾಮಮುಲ ಕರುಣತೊ ಜೇಯುಚು|| ಸಂಗತಿಗಾನು ಮೃದುಂಗ ಘೋಷಮುಲಚೇ ಪೊಂಗುಚು ವೀಧುಲ ಕೇಗುಚು ಮೆರಯುಚು|| ಜ್ಞಾನಮುತೋ ರಾಮ ಧ್ಯಾನಮುತೋ ಮಂಚಿ ಗಾನಮುತೋ ಮೆನು ದಾನ ಮೊಸಂಗುಚು|| ರಾಜರಾಜುನಿಪೈ ಜಾಜುಲು ಚೆಲ್ಲುಚು ರಾಜಿಲ್ಲುಚು ತ್ಯಾಗರಾಜುನಿತೋ ಗೂಡಿ|| —-ತ್ಯಾಗರಾಜ

ಹರಿದಾಸುಲು ವೆಡಲು Read More »

ಶ್ರೀಹರಿ ಕಾಯೋ ಕರುಣಾನಿಧೇ

ಶ್ರೀಹರಿ ಕಾಯೋ ಕರುಣಾನಿಧೇ|| ಖಗವರಗಮನ ಕರುಣಾನಿಧೇ|| ಜ್ಞಾನ ಧ್ಯಾನದ ನಿಜ ಸಾಧನವರಿಯೆ| ನೀನೆ ಗತಿಯೆನುತ ಮಾಡುವೆ ನಮನ|| ಘೋರ ಸಂಸಾರದಿ ತಾಪದಿ ನೊಂದೆ| ವಾರಿಭವಭಯಹರ ಅಘಕುಲಶಮನ|| ಗುರು ಮಹೀಪತಿ ಪ್ರಭು ಅನಾಥಬಂಧು| ಚರಣಕಮಲಗಳಲಿರಿಸೆನ್ನ ಮನವ|| —-ಮಹೀಪತಿದಾಸ

ಶ್ರೀಹರಿ ಕಾಯೋ ಕರುಣಾನಿಧೇ Read More »

ಶಿವನ ಭಜಿಸಿರೋ

ಶಿವನ ಭಜಿಸಿರೋ (ಪರ) ಶಿವನ… (ಉಮಾ) ಧವನ ಭಜಿಸಿರೋ|| ಶಿವನ ಭವನ ಉಮಾಧವನ ಧವಳಾಂಗನ ದಯಾಘನನ| ಭವದೂರನ ಭಕ್ತಪ್ರಿಯನ ಕವಿಗೇಯನ ಕಾಮಹರನ|| ಶಿವನ… ವ್ಯೋಮಕೇಶ ಕಾಮೇಶ್ವರ ಭೂಮಭದ್ರಗಿರಿನಿವಾಸ| ರಾಮನಾಮ ನೇಮದಿಂದ ಭಾಮೆಗೊರೆದ ವಾಮದೇವನ|| ಕಾಲರೂಪ ನೀಲಕಂಠ ಮೂಲನಾರಾಯಣನ ಭಕುತ| ವ್ಯಾಲಭೂಷ ಆಶುತೋಷ ಫಾಲನೇತ್ರನ ಭಕುತಿಯಿಂದ|| —-ಅಚ್ಯುತದಾಸರು

ಶಿವನ ಭಜಿಸಿರೋ Read More »

ರಾಮ ಪಾಲಯ

ರಾಮ ಪಾಲಯ| ದಶರಥ| ರಾಮ ಪಾಲಯ|| ರಾಮರೂಪಜಿತಕಾಮ ನಿರಂತರ| ತರುಣಾರುಣಮೃದುಚರಣಾಂಬುಜಯುಗ|| ಅಮಲಕಮಲನಿಜನಾಭಿವಿರಾಜಿತ| ಹರಸುರಸರಸಿಜಭವಗರುಡಾರ್ಚಿತ|| ವಸುಧೇಶ್ವರದಶಶಿರಮದಖಂಡನ ಇಂದುವದನದಶಸ್ಯಂದನನಂದನ|| ಕರುಣಾಕರತರಣಿಜವರದಾಯಕ| ವರನರಸಿಂಹದಾಸಾರ್ಚಿತಪಾದುಕ|| —-ನರಸಿಂಹದಾಸ

ರಾಮ ಪಾಲಯ Read More »

ಆವ ರೋಗವು ಎನಗೆ

ಆವ ರೋಗವು ಎನಗೆ ದೇವ ಧನ್ವಂತ್ರಿ| ಸಾವಧಾನದಿ ಎನ್ನ ಕೈಪಿಡಿದು ನೋಡಯ್ಯ|| ಹರಿಮೂರ್ತಿಗಳು ಎನ್ನ ಕಂಗಳಿಗೆ ಕಾಣಿಸವು ಹರಿಯ ಕೀರ್ತನೆಯು ಕೇಳಿಸದು ಕಿವಿಗೆ| ಹರಿಮಂತ್ರ ಸ್ತೋತ್ರ ಬಾರದು ಎನ್ನ ನಾಲಿಗೆಗೆ ಹರಿಪ್ರಸಾದವ ಜಿಹ್ವೆ ಸವಿಯದಯ್ಯ|| ಹರಿಪಾದ ಸೇವೆಗೆ ಹಸ್ತಗಳು ಚಲಿಸವು ಗುರುಹಿರಿಯರಂಘ್ರಿಗೆ ಶಿರ ಬಾಗದು| ಹರಿಯ ನಿರ್ಮಾಲ್ಯವಾಘ್ರಾಣಿಸದು ನಾಸಿಕವು ಹರಿಯಾತ್ರೆಗಳಿಗೆನ್ನ ಕಾಲೇಳದಯ್ಯ|| ಅನಾಥಬಂಧು ಗೋಪಾಲವಿಟ್ಠಲರೇಯ ಎನ್ನ ಭಾಗದ ವೈದ್ಯ ನೀನೆ ನೀನೇ| ಅನಾದಿಕಾಲದ ಭವರೋಗ ಕಳೆಯಯ್ಯ ನಾನೆಂದಿಗೂ ಮರೆಯೆ ನಿನ್ನ ಉಪಕಾರ||                                           ——-ಗೋಪಾಲದಾಸ

ಆವ ರೋಗವು ಎನಗೆ Read More »

ಆಲೋಲತುಲಸೀ

ಆಲೋಲತುಲಸೀವನಮಾಲಭೂಷಣ ಶ್ರೀರಾಮ ರಾಮ ಹರೇ –ಶ್ರೀಮನ್ ನಾರಾಯಣ ಕೃಷ್ಣ ಗೋವಿಂದ ಮಾಧವ ಪುರುಷೋತ್ತಮ ಪಾಲಯ|| ನಂದನಂದನ ಸುಂದರವದನ–ಶ್ರೀರಾಮ…|| ದಶರಥಬಾಲ ದಶಮುಖಕಾಲ–ಶ್ರೀರಾಮ…|| ಕ್ಷೀರಾಬ್ಧಿಶಯನ ಕ್ಷಾರಾಬ್ಧಿಬಂಧನ–ಶ್ರೀರಾಮ…|| ಧನ್ಯಚರಿತ್ರ ಗಣ್ಯಪವಿತ್ರ –ಶ್ರೀರಾಮ…|| ಪಾಲಿತಾಮರ ವಾಲಿನಾಶಕ –ಶ್ರೀರಾಮ…|| ಸಾಮಗಾನನುತ ಭೀಮಾನುಜಮಿತ್ರ–ಶ್ರೀರಾಮ…|| ತಾಟಕಾಂತಕ ಪಾಟಿತಾಸುರ–ಶ್ರೀರಾಮ…|| ಭಕ್ತಪಾಲಕ ಮುಕ್ತಿದಾಯಕ–ಶ್ರೀರಾಮ…|| ಕಂಕಣಭೂಷಣ ಪಂಕಜನಯನ– ಶ್ರೀರಾಮ…|| ವರಹೇಮಾಂಬರ ಕರಧೃತಶೈಲ– ಶ್ರೀರಾಮ…|| ಭರತಾನಂದ ಭದ್ರಾದ್ರಿವಾಸ –ಶ್ರೀರಾಮ…||                                                     —-ಭದ್ರಾಚಲ ರಾಮದಾಸ

ಆಲೋಲತುಲಸೀ Read More »