ತ್ವಂ ಅಪರಾ

ತ್ವಂ ಅಪರಾ ವಿಶ್ವಸಾರಾ ವಿಶ್ವಾಧಾರಾ ವಿಶ್ವರಂಜಿನೀ| ಸರ್ವಭೂತ ಆತ್ಮಭೂತ ಸರ್ವ ವಿಭೂತಿ ಪ್ರವಿಧಾಯಿನೀ|| ತ್ವಂ ಅನಲ ಕ್ಷಿತಿ ಅನಿಲ, ವ್ಯೋಂ ಸಲಿಲ ಸಂರೂಪಿಣೀ ತುಮಿ ಅಮೇಯಾ ಮಹೇಶಜಾಯಾ, ಭೋ ಅಭಯಾ ಭಯವಾರಿಣೀ|| ವಿರಾಜಿತಾ ಶವ ಆಸನೇ, ಕಭು ಪ್ರಮತ್ತಾ ಆಸವ ಪಾನೇ| ಕಭು ಯುಕ್ತಾ ಶಿವ ಸನೇ, ಶಿವೇ ಗೋ ಶಿವಾನಿ| ಓ ಮಾ ತ್ರಿಗುಣಧಾರಿಣಿ ಗುಣಾತೀತಾ ತ್ರಿನಯನಿ| ಪ್ರೇಮಿಕೇರ ತ್ರಿತಾಪೇರ ತಾಪ ಸಂಹರ ಹರಮೋಹಿನಿ||                                                                                 —-ಪ್ರೇಮಿಕ್

ತ್ವಂ ಅಪರಾ Read More »

ತಾಯಿ ನೀನೆನ್ನ ಶಿಕ್ಷಿಸಲು

ತಾಯಿ ನೀನೆನ್ನ ಶಿಕ್ಷಿಸಲು ರಕ್ಷಿಪರಾರು ತ್ರಿಭುವನದೊಳು ಹೇ|| ನಿನ್ನನೆ ನಂಬಿಯೆ ಅನ್ಯರ ತ್ಯಜಿಸಿದೆ ನೀಯೆನ್ನ ತ್ಯಜಿಸಲು ಗತಿ ಯಾರಿನ್ನು|| ಮಾನುಷ ಜನ್ಮವ ಮುಕ್ತಿಯ ಆಸೆಯ ಶ್ರೀಗುರುಪಾದವ ಕರುಣಿಸಿದೆ ತಾಯಿ| ಎನ್ನಯ ದೋಣಿಯ ನಿನ್ನಯ ದಡದಲಿ ಮುಳುಗಿಸಿದರೇ ನೀನೇ ಕಾಯುವರಾರು ಕಾಯುವರಾರು ಜಗಜ್ಜನನಿ||                            —ಸ್ವಾಮಿ ಹರ್ಷಾನಂದ

ತಾಯಿ ನೀನೆನ್ನ ಶಿಕ್ಷಿಸಲು Read More »

ತಾಯಿ ದುರ್ಗೆಯ ನಿಜವನರಿಯುವ

ತಾಯಿ ದುರ್ಗೆಯ ನಿಜವನರಿಯುವ ದೀರರಾರೋ ಜಗದೊಳು| ಆರು ದರುಶನ ವೇದಶಾಸ್ತ್ರ ಪುರಾಣವರಿಯದು ಅವಳನು|| ಯೋಗಿಹೃದಯದ ದಿವ್ಯನಿತ್ಯಾ- ನಂದರೂಪಿಣಿ ಆಕೆಯು| ತನ್ನ ಆನಂದದಲಿ ತಾನೇ ಜೀವರೆದೆಯೊಳಗಿರುವಳು|| ಸಕಲಬ್ರಹ್ಮಾಂಡವನು ಬಸಿರಲಿ ಧರಿಸಿ ನಿತ್ಯವು ಪೊರೆವಳು| ಮೂಲಾಧಾರ ಸಹಸ್ರಾರದಿ ಮುನಿಗಳವಳನು ನೆನೆವರು|| ಶಿವನ ಹೊರತಿನ್ನಾರು ಅರಿಯರು ಅವಳ ದಿವ್ಯಸ್ವರೂಪವ| ಪದ್ಮವನದಲಿ ಹಂಸರೂಪನ ಜೊತೆಗೆ ನಲಿಯುವ ಮಾಟವ|| ಕಡಲನೀಜುವೆನೆಂಬ ಮರುಳನ ಕಲ್ಪನೆಗೆ ನಗುವಂದದಿ| ಇಂಥ ತಾಯಿಯ ತಿಳಿದೆನೆಂದರೆ ಶ್ರೀಪ್ರಸಾದನು ನಗುವನು|| ಕುಬ್ಜನಾದವ ಮುಗಿಲಚಂದ್ರನ ಹಿಡಿವ ಯತ್ನದ ತೆರದಲಿ| ಬುದ್ಧಿಯರಿತರು ಹೃದಯವರಿಯದು ತಾಯಿ ದುರ್ಗೆಯ

ತಾಯಿ ದುರ್ಗೆಯ ನಿಜವನರಿಯುವ Read More »

ತಂದೆ ನೀನು ತಾಯಿ ನೀನು

ತಂದೆ ನೀನು ತಾಯಿ ನೀನು ಬಂಧು ನೀನು ಬಳಗ ನೀನು ನೀನಲ್ಲದೆ ಮತ್ತಾರಯ್ಯಾ|| ಕೂಡಲಸಂಗಮದೇವಾ ಹಾಲಲದ್ದು ನೀರಲದ್ದು||                            —-ಬಸವಣ್ಣ

ತಂದೆ ನೀನು ತಾಯಿ ನೀನು Read More »

ತವ ಕೃಪೆ ಬೆಳಗಲಿ

ತವ ಕೃಪೆ ಬೆಳಗಲಿ  ಭವಭ್ರಮೆ ಕಳೆಯಲಿ ಶಿವೆ ಶ್ರೀಶಾರದೆ ತವಕದಿ ಮೊರೆಯುವೆ|| ಇಂದು ಸುವಿಮಲೆ ವಂದಿತ ಪದತಲೆ | ಕುಂದದ ಪ್ರೇಮದ ಮಂದಾಕಿನಿಯೆ|| ತ್ಯಾಗವಿಭೂಷಿತೆ ತ್ಯಾಗಿಕುಲಾಂಬಿಕೆ| ಯೋಗೀಂದ್ರಾರ್ಚಿತೆ ಯೋಗಪ್ರದಾತೆ|| ನಿನ್ನಡಿದಾವರೆ ಎನ್ನಯ ಆಸರೆ| ಮನ್ನಿಸು ದಾಸನ ಬಿನ್ನಹ ಮಾತೆ|| —-ಸ್ವಾಮಿ ಶಾಸ್ತ್ರಾನಂದ

ತವ ಕೃಪೆ ಬೆಳಗಲಿ Read More »

ತಲ್ಲಣಿಸದಿರು ಕಂಡ್ಯ

ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ|| ಬೆಟ್ಟದ ತುದಿಯಲ್ಲಿ ಹುಟ್ಟಿರುವ ವೃಕ್ಷಕ್ಕೆ ಕಟ್ಟೆಯನು ಕಟ್ಟಿ ನೀರೆರೆದವರು ಯಾರೋ| ಪುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲು ಘಟ್ಯಾಗಿ ಸಲಹುವನು ಇದಕೆ ಸಂಶಯಬೇಡ|| ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲ ಅಡಿಗಡಿಗೆ ಆಹಾರವಿತ್ತವರು ಯಾರೋ| ಪಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿ ಬಿಡದೆ ರಕ್ಷಿಪನಿದಕೆ ಸಂದೇಹ ಬೇಡ|| ಕಲ್ಲೊಳಗೆ ಹುಟ್ಟಿರುವ ಕ್ರಿಮಿಕೀಟಗಳಿಗೆಲ್ಲ ಅಲ್ಲಲ್ಲಿ ಆಹಾರವಿತ್ತವರು ಯಾರೋ| ಫುಲ್ಲಲೋಚನ ಕಾಗಿನೆಲೆಯಾದಿಕೇಶವನು ಎಲ್ಲರನು ಸಲಹುವನು ಇದಕೆ ಸಂಶಯಬೇಡ||                                                                  —ಕನಕದಾಸ

ತಲ್ಲಣಿಸದಿರು ಕಂಡ್ಯ Read More »

ತನುವ ನೀರೊಳಗದ್ದಿ

ತನುವ ನೀರೊಳಗದ್ದಿ ಫಲವೇನು ಮನದಲಿ ದೃಢಭಕ್ತಿಯಿಲ್ಲದ ಮನುಜನು|| ದಾನ ಧರ್ಮಂಗಳ ಮಾಡುವುದೆ ಸ್ನಾನ ಜ್ಞಾನ ತತ್ತ್ವಂಗಳ ತಿಳಿವುದೆ ಸ್ನಾನ ಹೀನ ಪಾಪಂಗಳ ಬಿಡುವುದೆ ಸ್ನಾನ ಧ್ಯಾನದಿ ಮಾಧವನ ನೋಡುವುದೆ ಸ್ನಾನ|| ಗುರುಗಳ ಪಾದದರ್ಶನವೆ ಸ್ನಾನ ಹಿರಿಯರ ದರ್ಶನ ಮಾಡುವುದೆ ಸ್ನಾನ ಕರೆದು ಅನ್ನವನಿಕ್ಕುವುದೊಂದು ಸ್ನಾನ ನರಹರಿ ಚರಣವ ನಂಬುವುದೆ ಸ್ನಾನ|| ದುಷ್ಚರ ಸಂಗವ ಬಿಡುವುದೆ ಸ್ನಾನ ಶಿಷ್ಚರ ಸಹವಾಸ ಮಾಡುವುದೆ ಸ್ನಾನ ಸೃಷ್ಚಿಯೊಳಗೆ ಸಿರಿ ಪುರಂದರ ವಿಟ್ಠಲನ ಮುಟ್ಟಿ ಭಜಿಸಿದರೆ ವಿರಜಾ ಸ್ನಾನ||                                            —ಪುರಂದರದಾಸ

ತನುವ ನೀರೊಳಗದ್ದಿ Read More »

ತತ್ಕೈಶೋರಂ

ತತ್ಕೈಶೋರಂ ತಚ್ಚ ವಕ್ತ್ರಾರವಿಂದಂ ತತ್ಕಾರುಣ್ಯಂ ತೇ ಚ ಲೀಲಾಕಟಾಕ್ಷಾಃ ತತ್ಸೌಂದರ್ಯಂ ಸಾ ಚ ಮಂದಸ್ಮಿತಶ್ರೀಃ ಸತ್ಯಂ ಸತ್ಯಂ ದುರ್ಲಭಂ ದೈವತೇಷು|| ಕರಾರವಿಂದೇನ ಪದಾರವಿಂದಂ ಮುಖಾರವಿಂದೇ ವಿನಿವೇಶಯಂತಂ ವಟಸ್ಯ ಪತ್ರಸ್ಯ ಪುಟೇ ಶಯಾನಂ ಬಾಲಂ ಮುಕುಂದಂ ಮನಸಾ ಸ್ಮರಾಮಿ||                                               —ಶ್ರೀಕೃಷ್ಣಕರ್ಣಾಮೃತ

ತತ್ಕೈಶೋರಂ Read More »