ಜಂಗಮವೆನ್ನ ಪ್ರಾಣ, ಜಂಗಮವೆನ್ನ ಜೀವ,

ಜಂಗಮವೆನ್ನ ಪ್ರಾಣ, ಜಂಗಮವೆನ್ನ ಜೀವ, ಜಂಗಮವೆನ್ನ ಪುಣ್ಯದ ಫಲ, ಜಂಗಮವೆನ್ನ ನಿಧಿನಿಧಾನ, ಜಂಗಮವೆನ್ನ ಹರುಷದ ಮೇರೆ. ಚೆನ್ನಮಲ್ಲಿಕಾರ್ಜುನಾ, ಜಂಗಮದ ತಿಂಥಿಣಿಯಲ್ಲಿ ಓಲಾಡುವೆನು.

ಜಂಗಮವೆನ್ನ ಪ್ರಾಣ, ಜಂಗಮವೆನ್ನ ಜೀವ, Read More »

ಜಂಗಮದ ಕೈ ಹೊಯ್ದು ಹೊಯ್ದು ನಕ್ಕು ಕೆಟ್ಟರಯ್ಯ ?

ಜಂಗಮದ ಕೈ ಹೊಯ್ದು ಹೊಯ್ದು ನಕ್ಕು ಕೆಟ್ಟರಯ್ಯ ? ಸರಸದಲ್ಲಿ ಮುಟ್ಟಿ ಪೂಜಿಸುವರೆ ನಿಮಗೆ ಲಿಂಗವಿಲ್ಲ. ಹುತ್ತಿನೊಳಗೆ ಕೈಯನಿಕ್ಕೆ ಸರ್ಪದಷ್ಟವಾದರೆ ಮತ್ತೆ ಗಾರುಡವುಂಟೆ ಚೆನ್ನಮಲ್ಲಿಕಾರ್ಜುನಾ ?

ಜಂಗಮದ ಕೈ ಹೊಯ್ದು ಹೊಯ್ದು ನಕ್ಕು ಕೆಟ್ಟರಯ್ಯ ? Read More »

ಚಿಲಿಮಿಲಿ ಎಂದು ಓದುವ ಗಿಳಿಗಳಿರಾ,

ಚಿಲಿಮಿಲಿ ಎಂದು ಓದುವ ಗಿಳಿಗಳಿರಾ, ನೀವು ಕಾಣಿರೆ, ನೀವು ಕಾಣಿರೆ. ಸರವೆತ್ತಿ ಪಾಡುವ ಕೋಗಿಲೆಗಳಿರಾ, ನೀವು ಕಾಣಿರೆ, ನೀವು ಕಾಣಿರೆ. ಎರಗಿ ಬಂದಾಡುವ ತುಂಬಿಗಳಿರಾ, ನೀವು ಕಾಣಿರೆ, ನೀವು ಕಾಣಿರೆ. ಕೊಳನತಡಿಯೊಳಾಡುವ ಹಂಸೆಗಳಿರಾ, ನೀವು ಕಾಣಿರೆ, ನೀವು ಕಾಣಿರೆ. ಗಿರಿ ಗಹ್ವರದೊಳಗಾಡುವ ನವಿಲುಗಳಿರಾ, ನೀವು ಕಾಣಿರೆ, ನೀವು ಕಾಣಿರೆ. ಚೆನ್ನಮಲ್ಲಿಕಾರ್ಜುನನೆಲ್ಲಿದ್ದಹನೆಂದು ಹೇಳಿರೆ.

ಚಿಲಿಮಿಲಿ ಎಂದು ಓದುವ ಗಿಳಿಗಳಿರಾ, Read More »

ಚಿನ್ನಕ್ಕರಿಸಿನ ಚಿನ್ನಕ್ಕರಿಸಿನ ಚಿನ್ನಕ್ಕರಿಸಿನವ ಕೊಳ್ಳಿರವ್ವಾ.

ಚಿನ್ನಕ್ಕರಿಸಿನ ಚಿನ್ನಕ್ಕರಿಸಿನ ಚಿನ್ನಕ್ಕರಿಸಿನವ ಕೊಳ್ಳಿರವ್ವಾ. ಎಮ್ಮ ನಲ್ಲನ ಮೈಯ ಹತ್ತುವ ಅರಿಸಿನವ ಕೊಳ್ಳಿರವ್ವಾ. ಒಳಗುಂದದರಿಸಿನವ ಮಿಂದು ಚೆನ್ನಮಲ್ಲಿಕಾರ್ಜುನನ ಅಪ್ಪಿರವ್ವಾ.

ಚಿನ್ನಕ್ಕರಿಸಿನ ಚಿನ್ನಕ್ಕರಿಸಿನ ಚಿನ್ನಕ್ಕರಿಸಿನವ ಕೊಳ್ಳಿರವ್ವಾ. Read More »

ಚರಾಚರಾತ್ಮಕ ಪ್ರಪಂಚವೆಲ್ಲ

ಚರಾಚರಾತ್ಮಕ ಪ್ರಪಂಚವೆಲ್ಲ ಶಿವನ ಚಿದ್ಗರ್ಭದಿಂದುಯಿಸಿಪ್ಪವೆಂದು, ಶಿವಾಭಿನ್ನತ್ವದಿಂ ಸಕಲಪ್ರಾಣಿಗಳಲ್ಲಿ ತನ್ನಾತ್ಮಚೇತನವ ತನ್ನಲ್ಲಿ ಸಕಲ ಪ್ರಾಣಿಗಳ ಆತ್ಮ ಚೇತನವ ಕಂಡು, ದಯಾಪರತ್ವವನುಳ್ಳ ಸರ್ವಜ್ಞತಾ ಶಕ್ತಿಯನು ಭಕ್ತಿಸ್ಥಲದಲ್ಲಿ ಪಡೆವುದು ನೋಡಾ. ತನಗೆ ಬಂದ ಅಪವಾದ ನಿಂದೆ ಎ ಡರಾಪತ್ತುಗಳಲ್ಲಿ ಎದೆಗುಂದದೆ ಬಪ್ಪ ಸುಖ ದುಃಖ ಖೇದ ಹರ್ಷಾದಿಗಳು ಶಿವಾe್ಞÉಯಹುದೆಂದು ಪರಿಣತನಪ್ಪ ತೃಪ್ತಿಯ ಶಕ್ತಿಯನು ಮಾಹೇಶ್ವರಸ್ಥಲದಲ್ಲಿ ಪಡೆವುದು ನೋಡಾ. ದೇಹಾದಿ ಆದಿ ಪ್ರಪಂಚಕ್ಕೆ ಮೂಲಿಗನಾದ ಅನಾದಿ ಪರಶಿವನು ಪ್ರಸನ್ನತ್ವವನುಂಟುಮಾಡುವ ಅನಾದಿ ಬೋಧ ಶಕ್ತಿಯನು ಪ್ರಸಾದಿಸ್ಥಲದಲ್ಲಿ ಪಡೆವುದು ನೋಡಾ. ಅಂತಪ್ಪ ದೇಹಾದಿ ಪ್ರಪಂಚದ ಚಲನವಲನವು

ಚರಾಚರಾತ್ಮಕ ಪ್ರಪಂಚವೆಲ್ಲ Read More »

ಚಕ್ರ ಬೆಸಗೆಯ್ವಡೆ ಅಲಗಿನ ಹಂಗೇಕೆ ?

ಚಕ್ರ ಬೆಸಗೆಯ್ವಡೆ ಅಲಗಿನ ಹಂಗೇಕೆ ? ಮಾಣಿಕ್ಯದ ಬೆಳಗುಳ್ಳಡೆ ದೀಪದ ಹಂಗೇಕೆ ? ಪರುಷ ಕೈಯ್ಯಲುಳ್ಳಡೆ ಸಿರಿಯ ಹಂಗೇಕೆ ? ಕಾಮಧೇನು ಕರೆವಡೆ ಕರುವಿನ ಹಂಗೇಕೆ ? ಎನ್ನದೇವ ಚೆನ್ನಮಲ್ಲಿಕಾರ್ಜುನಲಿಂಗವು ಕರಸ್ಥಳದೊಳಗುಳ್ಳಡೆ ಇನ್ನಾವ ಹಂಗೇಕೆ ?

ಚಕ್ರ ಬೆಸಗೆಯ್ವಡೆ ಅಲಗಿನ ಹಂಗೇಕೆ ? Read More »

ಚಂದ್ರಕಾಂತದ ಶಿಲೆಗೆ ಒಂದು ಗಜ ಹೋರುವಂತೆ

ಚಂದ್ರಕಾಂತದ ಶಿಲೆಗೆ ಒಂದು ಗಜ ಹೋರುವಂತೆ ತನ್ನ ನೆಳಲಿಂಗೆ ತಾನೆ ಹೋರಿ ಸಾವಂತೆ ಆನೆಯ ಗತಿ ಆನೆಯ ಮತಿ. ಆನೆಯಹುದು, ಆನೆಯಲ್ಲ, ಅದನೇನೆಂಬೆ ? ನೀನೆನ್ನ ಕರಸ್ಥಲದಲ್ಲಿ ಸಿಲ್ಕಿದೆಯಾಗಿ ನೀ ನಾನೆಂಬ ಭ್ರಾಂತೇಕೆ ? ನಾನು ನೀನಲ್ಲದ ತೆರಹಿಲ್ಲ, ಚೆನ್ನಮಲ್ಲಿಕಾರ್ಜುನಾ.

ಚಂದ್ರಕಾಂತದ ಶಿಲೆಗೆ ಒಂದು ಗಜ ಹೋರುವಂತೆ Read More »

ಚಂದನವ ಕಡಿದು ಕೊರೆದು ತೇದಡೆ

ಚಂದನವ ಕಡಿದು ಕೊರೆದು ತೇದಡೆ ನೊಂದೆನೆಂದು ಕಂಪ ಬಿಟ್ಟಿತ್ತೆ ? ತಂದು ಸುವರ್ಣವ ಕಡಿದೊರೆದಡೆ ಬೆಂದು ಕಳಂಕ ಹಿಡಿಯಿತ್ತೆ ? ಸಂದುಸಂದು ಕಡಿದ ಕಬ್ಬನು ತಂದು ಗಾಣದಲ್ಲಿಕ್ಕಿ ಅರೆದಡೆ, ಬೆಂದು ಪಾಕಗುಡದೆ ಸಕ್ಕರೆಯಾಗಿ ನೊಂದೆನೆಂದು ಸಿಹಿಯ ಬಿಟ್ಟಿತ್ತೆ ? ನಾ ಹಿಂದೆ ಮಾಡಿದ ಹೀನಂಗಳೆಲ್ಲವ ತಂದು ಮುಂದಿಳುಹಲು ನಿಮಗೇ ಹಾನಿ. ಎನ್ನ ತಂದೆ ಚೆನ್ನಮಲ್ಲಿಕಾರ್ಜುನಯ್ಯಾ, ನೀ ಕೊಂದಡೆಯೂ ಶರಣೆಂಬುದ ಮಾಣೆ.

ಚಂದನವ ಕಡಿದು ಕೊರೆದು ತೇದಡೆ Read More »

ಛೀ ಹಳಿ ಥೂ ಖೋಡಿ

ಛೀ ಹಳಿ ಥೂ ಖೋಡಿ ಪಾಪಿ ಮನವೆ, ನಿನ್ನ ಕುಹಕ ಬುದ್ಧಿಗಳೆಲ್ಲ ಬಿಡು ಕಂಡ್ಯ ಮನವೆ ಬಣ್ಣದ ಬೀಸಣೆಗ್ಯಂತೆ ಹೆಣ್ಣು ತಿರುಗೋದ ಕಂಡು ಕಣ್ಣು ಸನ್ನೆಯಮಾಡಿ ಕೈ ಹೊನ್ನು ತೋರಿ ತಣ್ಣೀರು ಹೊಯಿದ ಹೊಸ ಸುಣ್ಣದಂತೆ ಕುದಿದು ನಿನ್ನ ಕಣ್ಣಿಗೆ ಮಣ್ಣು ಚೆಲ್ಲಿಕೊಂಬರೆ ಮನವೆ ||1|| ನೆರೆಹೊರೆ ಮನೆಗಳಲಿ ಪ್ರಸ್ಥವನ್ನು ಮಾಡಿದರೆ ಕರೆಯದೆಲೆ ಮೊದಲ್ಹೋಗಿ ಹಾಳು ಹರಟೆ ಬಡಿಗಂಟು ಸುದ್ದಿ ನೂರಾರು ಹೇಳಿ ಅವರ ಹಿರಿಯ ಮಗನಂತೆ ಉದರವ ಪೊರೆವೆ ಮನವೆ ||2|| ಉತ್ತಮಾನ್ನವ ನೀಡೆ ಮುಸುರೆ

ಛೀ ಹಳಿ ಥೂ ಖೋಡಿ Read More »

ಚಿರಂಜೀವಿಯಾಗಿರೆಲೊ ಚಿಣ್ಣ ನೀನು

ಚಿರಂಜೀವಿಯಾಗಿರೆಲೊ ಚಿಣ್ಣ ನೀನು ಪರಮ ಭಾಗವತರ ಪದಧೂಳಿ ಧರಿಸುತಲಿ ಜರಿಯಬೇಡ ಹರಿಯ ಮರೆಯಬೇಡೆಂದೆಂದು ತಿರಿಯಬೇಡ ಖಳರ ಮನೆಗೆ ಪೋಗಿ ಜರೆಯಬೇಡನ್ಯರಿಗೆ ರಹಸ್ಯ ತತ್ತ್ವಗಳನ್ನು ಬೆರೆಯಬೇಡ ಪರರ ಸತಿಯ ಸ್ವಪ್ನದಲೂ ||1|| ಲೋಕವಾರ್ತೆಯ ನಿನ್ನ ಕಿವಿಗೆ ಕೇಳಿಸಬೇಡ ಶ್ರೀ ಕಾಂತ ಚರಿತೆಯನು ಕೇಳದಿರಬೇಡ ಪಾಕವನು ಮಾಡಿ ಏಕಾಂಗಿಯಾಗುಣಬೇಡ ಭೂಕಾಂತರನುಸರಿಸಿ ಬೆಸಗೊಳ್ಳಬೇಡ ||2|| ಸಾಲ ಮಾಡಲಿ ಬೇಡ ಸಾಲದೆಂದೆನಬೇಡ ನಾಳೆಗೆ ಹ್ಯಾಗೆಂಬ ಚಿಂತೆ ಬೇಡ ಖೂಳ ಜನರೊಡಗೂಡಿ ಕಂಗೆಡಲಿ ಬೇಡ ನೀ ಬಾಳುವರ ಸಂಗದಲಿ ಬಾಳೆಲವೊ ಬಾಲ ||3|| ಪಂಡಿತರು

ಚಿರಂಜೀವಿಯಾಗಿರೆಲೊ ಚಿಣ್ಣ ನೀನು Read More »

ಚಿನ್ಮಯ ಚಿದಾನಂದ ನೀನೆ

ಚಿನ್ಮಯ ಚಿದಾನಂದ ನೀನೆ ಸನ್ನುತಾಂಗಿಯ ರಮಣ ಸಕಲ ಲೋಕಕೆ ಕರುಣ ಭೃಗು ಮುನಿಪ ಹರಿಹರಾ ಹಿರಣ್ಯಗರ್ಭಾ ದಿಗಳ ವೆಗ್ಗಳವ ನೋಡಲಿ ಬಂದ್ಯೋ ಮಿಗಿಲಾದ ಪರದೈವ ಹರಿಯೆಂದು ಕೊಂಡಾಡೆ ಗಗನ ವಾಸಿಗಳು ಪೂಮಳೆಗರಿಯೆ ಹರುಷದಲಿ ||1|| ಮಡುವಿನೊಳ್ ಕರಿರಾಜ ಸಿಕ್ಕಿ ಸಾವಿರದ ವರುಷ ಬಿಡದೆ ನಕ್ರನ ಕೂಡ ಕಾದಿ ಸೋತು ಒಡಿಯರಾರುಂಟೆ ತ್ರಿಮೂರ್ತಿಗಳೊಳಗೆನಲು ಮೃಡನಜರು ಬೆರಗಾಗಿ ಸಾಮಜನ ಪಾಲಿಸಿದೆ ||2|| ಸೃಷ್ಟಿಜಲ ಮುಸುಕಿ ಬ್ರಹ್ಮಾಂಡ ಪ್ರಳಯಕಾಲದಲಿ ನಿಟಿಲಾಕ್ಷ ಮೊದಲಾದ ದೇವತೆಗಳು ಜಠರದೊಳು ಜಗಕರ್ತುನೆಂದೆನಿಸಿದೆ ವಟಪತ್ರಶಯನ ಸಿರಿವಿಜಯವಿಠ್ಠಲರೇಯಾ||3||

ಚಿನ್ಮಯ ಚಿದಾನಂದ ನೀನೆ Read More »

ಚಿಂತೆಯಾತಕೆ ಮನವೆ ನಿನಗಿದು

ಚಿಂತೆಯಾತಕೆ ಮನವೆ ನಿನಗಿದು ಸತತ ಸಲ್ಲದು ಕಾಣೊ ನಿಂತು ಪುರಂದರ ದಾಸರನುದಿನ ಇಂತು ಬಗೆಯಲಿ ಪಾಲಿಸೊ ಅಗ್ರ ಬುದ್ಧಿಯ ತಾಳು ನಿನಗೆ ಸಾ ಮಗ್ರಿ ಆಲೋಚನಿ ಯಾತಕೆ ಸ ಮಗ್ರ ಸೋಪಸ್ಕರವನು ಅನುಗ್ರಹವನು ಮಾಡುತಾ ಉಗ್ರ ಮನುಜರ ಕೂಡಿಸದೆ ಪಾ ಣಿಗ್ರಹ ಮಾಡಿಪ (ರಾವ) ಗವುಗಾದರೂ ಅಂದು ಪೊಗಳಲು ಶೀಘ್ರದಲಿ ನಿಂದಿಹರೊ ||1|| ಹರಿಗುರುಗಳ ಸಂಕಲ್ಪ ತಪ್ಪದು ಗಿರಿಗಹ್ವರದೊಳಗಿದ್ದರು ಅದು ಬರಿದೆಯಾಗದು ಕೇಳು ಸ್ಮರಿಸಿ ಬಳಲಿ ನಲಿದಾಡಿ ಸುರ ನರೋರುಗ ಏಕತ್ರಗಳ ಮಾಡಿ ಶರಣರಿಂದಾಳಿಸುವ ನಿಶ್ಚಯ ಪರಿದ

ಚಿಂತೆಯಾತಕೆ ಮನವೆ ನಿನಗಿದು Read More »

ಚಿಂತೆಯಾತಕೆ ನಿನಗೆ ಎಲೆ

ಚಿಂತೆಯಾತಕೆ ನಿನಗೆ ಎಲೆ ಪ್ರಿಯಳೆ | ಸಂತತ ತಿಳುಪುವೆನು ಭಕುತಿಯಿಂದಲಿ ಕೇಳು ಈ ಭೋಗ ನಮಗೆ ಯಾಕೆಂದು ನೀ ಕೇಳುವಿಯಾ | ಲಾಭವಲ್ಲದ ಇದು ನೋಡುವದಕೆ ಶ್ರೀ ಭೂರಮಣ ತಾನೆ ತಂದಿತ್ತ ವಿಚಿತ್ರ ವೈಭೋಗವಲ್ಲೆನೆಂದರೆ ಬಿಡದು ರಮಣೀ ||1|| ಹಿರಿಯರು ಈರ್ವಗೆ ಮಾಡಿದ ನಿಷ್ಠೆ ವಿ ಸ್ತರ ಪುಣ್ಯ ಬಂದು ಈ ಪರಿ ಸೌಖ್ಯವ ಹಿರಿದಾಗಿ ಕೊಟ್ಟು ನಮ್ಮನು ಪಾಲಿಸುವುದು ಬಲು ಮೊರೆಯಿಟ್ಟರೆ ಕೇಳು ಹರಿಯ ಮಹಿಮೆಗೆ ನಮೋ ||2|| ಕ್ಷೀರಸಾಗರದೊಳಗೆ ಓಲ್ಯಾಡುವವನ ವಿ ಚಾರಮಾಡದೆ ತಂದು

ಚಿಂತೆಯಾತಕೆ ನಿನಗೆ ಎಲೆ Read More »

ಚಿಂತೆ ಮಾಡುವುದ್ಯಾಕೆ ಮನವೆ ನೀನು

ಚಿಂತೆ ಮಾಡುವುದ್ಯಾಕೆ ಮನವೆ ನೀನು ಪಿಂತೆನ್ಯೆಸಗಿದ ಕರ್ಮ ಎಂದಿಗಾದರೂ ಬಿಡದು ಮಗÀನಾರು ನೀನಾರು ಪೇಳೊ ಸಿದ್ಧ ನಿಗಮಾರ್ಥಗಳಿಂದ ಸಜ್ಜನರ ಕೇಳೊ ತಗಿದು ಕಳಿ ಶೋಕದ ಗೋಳು ನಿತ್ಯ ನಗಧರನ ಭಕ್ತಿಯಲಿ ಸುಖದಲ್ಲಿ ಬಾಳೋ ||1|| ಸಾಹನಶಕ್ತಿಯನ್ನು ಮಾಡೊ ಬರಿದೆ ಸ್ನೇಹ ಮಾಡಿದರಿಂದ e್ಞÁನಕ್ಕೆ ಕೇಡು ತಾಹಾದು ಸ್ಥಿರವೆಂದು ನೋಡೊ ನೀನೂ ಮಾಹಪದವಿಗೆ ಬಂದೆ ಸುದೃಢವೆ ಬೇಡು||2|| ವಿರಕ್ತಿ ತೊಡು ತೊಡು ಬಿಡದೆ ಎಂದು ಸಾರಿದೆ ಪೇಳಿ ಧರ್ಮದಲಿನ್ನು ನುಡಿದೆ ವಾರವಾರಕೆ ಹೀಗೆ ಕೆಡದೇ ಶ್ರಿಂ ಗಾರ ಶ್ರೀ

ಚಿಂತೆ ಮಾಡುವುದ್ಯಾಕೆ ಮನವೆ ನೀನು Read More »

ಚರಣವ ತೋರೈ ಚಲುವರಸನೇ

ಚರಣವ ತೋರೈ ಚಲುವರಸನೇ ಚರಣವ ತೋರೈ ಸ್ಮರಣೆಮಾತ್ರದಲಿ ಮುಕುತಿಯ ಕೊಡುವ ಚರಣವ ತೋರೈ ರಮ್ಮೆಯ ಮನಕೆ ಬೆಡಗು ತೋರುವ ಚರಣ ಬೊಮ್ಮಾದಿಗಳ ಮನಕೆ ನಿಲುಕದ ಚರಣವ ತೋರೈ ಚಿಮ್ಮಿ ರಾವಣನ ಬಲು ದೂರಗೈದ ಚರಣವ ತೋರೈ ಘಮ್ಮನೆ ಮೊಸರು ಮೆದ್ದು ಓಡುವ ಚರಣ ತೋರೈ ||1|| ಗೋಕುಲ ಭೂಮಿಯ ಪಾವನ ಮಾಡಿದ ಚರಣವ ತೋರೈ ಲೋಕವನೆಲ್ಲಾ ಅಡಗಿಸಿಕೊಂಡಾ ಚರಣವ ತೋರೈ ಬೇಕೆಂದು ಕುಬುಜಿಯ ಮನೆಗೆ ಪೋದ ಚರಣವ ತೋರೈ ನೂಕಿ ಭವಾಬ್ಧಿ ಬತ್ತಿಸಿ ಬಿಡುವಾ ಚರಣವ ತೋರೈ

ಚರಣವ ತೋರೈ ಚಲುವರಸನೇ Read More »

ಛೀ ನಿನ್ನ ಮೋರೆ ಮೇಲೆ

ಛೀ ನಿನ್ನ ಮೋರೆ ಮೇಲೆ – ಠೊಣ್ಯಛೀ ನಿನ್ನ ಮೋರೆ ಮೇಲೆ ಹೊತ್ತರೆದ್ದು ಮುಖ ತೊಳೆದು ಮನೆಮನೆ ಪೋಕರಿ ಅಲೆಯುತಿದ್ದೆವಿತ್ತ ಮದದಿ ಪರಸ್ತ್ರೀಯರ ಕಂಡು ಅರ್ತಿಬಡುತಲಿದ್ದೆಲೆತ್ತ ಪಗಡೆ ಚದುರಂಗ ಆಟದಲ್ಲೆ ಹೊತ್ತು ಕಳೆಯುತಿದ್ದೆನಿತ್ಯ ನಿತ್ಯ ಈ ಪರಿ ಆಯುಷ್ಯವ ವ್ಯರ್ಥ ಕಳೆಯುತಿದ್ದೆ ಠೊಣ್ಯ ||1|| ಕಂಡ ಕಂಡಲ್ಲಿಗೆ ಪೋಗಿ ಧನಂಗಳ ಕೊಂಡು ಬರುತ್ತಲಿದ್ದೆಹೆಂಡಿರು ಮಕ್ಕಳು ಹಿತದವರೆಂದು ಕೊಂಡಾಡುತಲಿದ್ದೆಖೋಡಿ ಮಾತುಗಳನು ಹೇಳಿ ಮಂದಿಯ ಕುಂಡೆ ಚಿವುಟುತಿದ್ದೆಭಂಡ ಬಾಳು ಇದು ರಂಡೆ ಗಂಡ ಕಂಡ್ಯ ಯಮನ ಬಾಧೆ ಠೊಣ್ಯ||2|| ಮಾನವ

ಛೀ ನಿನ್ನ ಮೋರೆ ಮೇಲೆ Read More »

ಚೆಲ್ವ ಕಂಗಳ ಚೆಲ್ವಕಾರ ನೋಡ

ಚೆಲ್ವ ಕಂಗಳ ಚೆಲ್ವಕಾರ ನೋಡ ಬಂದೆ ನಿನ್ನ ಬಳಿ ಸಾರ ಬಂದೆ ಚಕ್ರಧರ ಧುರಧೀರ ನಾರಸಿಂಹ ನಾನು ಬಂದೆ ನಾನು ಬಂದೆ ಕಲ್ಲೊಳು ವಿಷಯ ಪುಟ್ಟಿಸಿದನಾ ಶುಭವಲ್ಲದ ದಿವಸದೊಳಿರಾ ನೋಡಿಇಲ್ಲದ ಬಯಲ ನಿಂದೆಯ ಪೊತ್ತು ಶುಕಾಮಲ್ಲರೊಡನೆ ಕಾದಿ ಮಲೆತ ಸಾಲ್ವರ ಕೊಂದುಮಡದಿಗೆ ರತ್ನ ತಂದುದರಿಂದ ||1|| ಮಡದಿಯ ಮನೆಯ ಅರ್ಭಕನಾಗಿ ಬಲುಗಡಿಯ ದಾನವನ ಕೊಂದನ ಸೂನುಬಡನಡುವಿನ ಠಾವಿಗೆ ಸಿಲ್ಕಿ ಸುಖಪಡದಿರೆ ರಾಯನಾ ಹಿಡಿದು ತೋಳು ಕಟ್ಟಿದುದರಿಂದ ||2|| ಮೂಲ ವೃಕ್ಷದಾಲಾರ ಮುಂದೆಯ ದಾನವರಿರ್ದಾಲಯ ದಹಿಪನೆಂಬುದಯ್ಯನಬಲಮಾಡಿ ಬಲಗೆ ಇಂದುರುಹಿದೆ

ಚೆಲ್ವ ಕಂಗಳ ಚೆಲ್ವಕಾರ ನೋಡ Read More »

ಚಂದ್ರಶೇಖರಾಷ್ಟಕದಿಂದ

ಚಂದ್ರಶೇಖರಮಾಶ್ರಯೇ ಮಮ ಕಿಂ ಕರಿಷ್ಯತಿ ವೈ ಯಮಃ || ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ಪಾಹಿ ಮಾಮ್ | ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ರಕ್ಷ ಮಾಮ್ || ರತ್ನಸಾನುಶರಾಸನಂ  ರಜತಾದ್ರಿಶೃಂಗನಿಕೇತನಂ ಶಿಂಜಿನೀಕೃತಪನ್ನಗೇಶ್ವರಮಚ್ಯುತಾನನಸಾಯಕಂ ಕ್ಷಿಪ್ರದಗ್ಧಪುರತ್ರಯಂ ತ್ರಿದಶಾಲಯೈರಭಿನಂದಿತಮ್  ||   ಭೇಷಜಂ ಭವರೋಗಿಣಾಮುಖಿಲಾಪದಾಮಾಪಹಾರಿಣ0 ದಕ್ಷಯಜ್ಞವಿನಾಶನಂ ತ್ರಿಗುಣಾತ್ಮಕಂ ತ್ರಿವಿಲೋಚನಂ ಭುಕ್ತಿಮುಕ್ತಿಫಲಪ್ರದಂ  ಸಕಲಾಘಸಂಘವಿನಾಶನಮ್ ||   ಭಕ್ತವತ್ಸಲಮರ್ಚಿತಂ ನಿಧಿಮಕ್ಷಯಂ ಹರಿದಂಬರಂ ಸರ್ವಭೂತಪತಿಂ ಪರಾತ್ಪರಮಪ್ರಮೇಯಮನುತ್ತಮಂ ಸೋಮವಾರಿಣಭೂಹುತಾಶನಸೋಮಪಾನಿಲಖಾಕೃತಿಮ್ ||   ವಿಶ್ವಸೃಷ್ಟಿವಿಧಾಯಿನಂ ಪುನರೇವ ಪಾಲನತತ್ಪರಂ ಸಂಹರಂತಮಪಿ ಪ್ರಪಂಚಮಶೇಷಲೋಕನಿವಾಸಿನಂ ಕ್ರೀಡಯಂತಮಹರ್ನಿಶಂ  ಗಣನಾಥಾಯೂಥಸಮನ್ವಿತಮ್ –ಮಾರ್ಕಂಡೇಯ

ಚಂದ್ರಶೇಖರಾಷ್ಟಕದಿಂದ Read More »

ಚೆಲ್ಲಿದರು ಮಲ್ಲಿಗೆಯ

ಚೆಲ್ಲಿದರು ಮಲ್ಲಿಗೆಯಾ… ಬಾಣಾಸೂರೇರಿ ಮ್ಯಾಲೆ.. ಅಂದಾದ ಚೆಂದಾದ ಮಾಯ್ಗಾರ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ|| ಮಾದಪ್ಪ ಬರುವಾಗಾ.. ಮಾಳೆಪ್ಪ ಘಮ್ಮೆಂದಿತೊ ಮಾಳದಲಿ ಗರುಕೆ ಚಿಗುರ್ಯಾವೆ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ|| ಸಂಪಿಗೆ ಹೂವ್ನಂಗೇ ಇಂಪಾದೊ ನಿನ್ನ ಪರುಸೆ ಇಂಪಾದೊ ನಿನ್ನ ಪರುಸೆ ಕೌದಳ್ಳಿ ಬಯಲಾಗಿ ಚೆಲ್ಲಿದರು ಮಲ್ಲಿಗೆಯ|| ಮಲ್ಲಿಗುವಿನ ಮಂಚಾ ಮರುಗಾದ ಮೇಲೊದಪು ತಾವರೆ ಹೂವು ತಲೆದಿಂಬು ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ|| ಹೊತ್ತು ಮುಳಿಗಿದರೇನೂ ಕತ್ತಲಾದರೇನು ಅಪ್ಪಾ ನಿನ್ನ ಪರುಸೆ ಬರುವೇವು ನಾವು ಚೆಲ್ಲಿದರು ಮಲ್ಲಿಗೆಯಾ||

ಚೆಲ್ಲಿದರು ಮಲ್ಲಿಗೆಯ Read More »

ಚೇತನ ದೇವ ಕೀ

ಚೇತನ ದೇವಕೀ ಸೇವಾ ಕರೋ ನರ| ಜನ್ಮ ಸಫಲ ಹೋ ಜಾಯ್ ತುಮ್ಹಾರೋ|| ಘಟ ಘಟ ಪೂರಣ ಏಕ ನಿರಂಜನ ದ್ವೃೆತಭಾವ ಸಬ ದೂರ ನಿವಾರೋ|| ಹಿರದೇ ಅಂದರ ಮಂದಿರ ಮಾಹೀ| ಜಗಮಗ ಜೋತ ಜಗೇ ಉಜಿಯಾರೋ|| ಪ್ರೇಮಪುಷ್ಪಸೇ ಪೂಜನ ಕೀಜೇ| ಮನ ದೀಪಕ ಧರ ಧ್ಯಾನ ವಿಚಾರೋ|| ಬ್ರಹ್ಮಾನಂದ ಉಲಟ ಸುರತೀಕೋ| ಕರ ದರ್ಶನ ಭವಬಂಧನ ಟಾರೋ||                                             —-ಬ್ರಹ್ಮಾನಂದ

ಚೇತನ ದೇವ ಕೀ Read More »

ಚಲೋ ಮನ ಗಂಗಾ

ಚಲೋ ಮನ ಗಂಗಾ ಯಮುನಾತೀರ್|| ಗಂಗಾ ಯಮುನಾ ನಿರಮಲ ಪಾನೀ ಸೀತಲ ಹೋತ ಸರೀರ್|| ಬನಸೀ ಬಜಾವತ ಗಾವತ ಕಾನ್ಹಾ ಸಂಗ ಲಿಯಾ ಬಲ ಬೀರ್|| ಮೋರ ಮುಕುಟ ಪೀತಾಂಬರ ಸೋಹೇ ಕುಂಡಲ ಝಲಕತ ಹೀರ್|| ಮೀರಾ ಕೇ ಪ್ರಭು ಗಿರಿಧರ ನಾಗರ್ ಚರಣ ಕಮಲ ಪರ್ ಸೀರ್||                                       —-ಮೀರಾ

ಚಲೋ ಮನ ಗಂಗಾ Read More »

ಚರನ ಕಮಲಬಂಧೌ

ಚರನ ಕಮಲ ಬಂಧೌ ಹರಿ ರಾಈ ಜಾಕೀ ಕೃಪಾ ಪಂಗು ಗಿರಿ ಲಂಘೈ ಅಂಧೇಕೋ ಸಬ ಕಛು ದರಸಾಈ|| ಬಹಿರೋ ಸುನೈ ಮೂಕ ಪುನಿ ಬೋಲೈ ರಂಕ ಚಲೈ ಸಿರ ಛತ್ರ ಧರಾಈ|| ಸೂರದಾಸ ಸ್ವಾಮೀ ಕರುನಾಮಯ್ ಬಾರಾ ಬಾರ ಬಂದೌ ತೇಹಿ ಪಾಈ||                                             —-ಸೂರದಾಸ

ಚರನ ಕಮಲಬಂಧೌ Read More »

ಚಿಂತಾ ನಾಸ್ತಿ ಕಿಲ

ಚಿಂತಾ ನಾಸ್ತಿ ಕಿಲ ತೇಷಾಂ|| ಶಮದಮಕರುಣಾಸಂಪೂರ್ಣಾನಾಂ ಸಾಧುಸಮಾಗಮಸಂಕೀರ್ಣಾನಾಂ|| ಕಾಲತ್ರಯಜಿತಕಂದರ್ಪಾಣಾಂ ಖಂಡಿತಸರ್ವೇಂದ್ರಿಯದರ್ಪಾಣಾಂ|| ಪರಮಹಂಸಗುರುಪದಚಿತ್ತಾನಾಂ ಬ್ರಹ್ಮಾನಂದಾಮೃತಮತ್ತಾನಾಂ||                                           –ಸದಾಶಿವ ಬ್ರಹ್ಮೇಂದ್ರ

ಚಿಂತಾ ನಾಸ್ತಿ ಕಿಲ Read More »

ಚಂದ್ರಚೂಡ ಶಿವಶಂಕರ

ಚಂದ್ರಚೂಡ ಶಿವಶಂಕರ ಪಾರ್ವತಿ| ರಮಣ ನಿನಗೆ ನಮೋ ನಮೋ ನಮೋ|| ಸುಂದರ ಮೃಗಧರ ಪಿನಾಕ ಧನುಕರ| ಗಂಗಾಶಿರ ಗಜಚರ್ಮಾಂಬರಧರ|| ಕೊರಳಲಿ ಭಸ್ಮ ರುದ್ರಾಕ್ಷಿ ಮಾಲೆ| ಧರಿಸಿದ ಪರಮ ವೈಷ್ಣವ ನೀನೇ|| ಗರುಡಗಮನ ಶ್ರೀ ಪುರಂದರ ವಿಟ್ಠಲನ| ಪ್ರಾಣಪ್ರಿಯನೇ ನಮೋ ನಮೋ||                                             —ಪುರಂದರದಾಸ

ಚಂದ್ರಚೂಡ ಶಿವಶಂಕರ Read More »

ಚಕೋರಂಗೆ ಚಂದ್ರಮನ

ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ ಅಂಬುಜಕೆ ಭಾನುವಿನ ಉದಯದ ಚಿಂತೆ|| ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ ಎಮಗೆ ನಮ್ಮ ಕೂಡಲಸಂಗಮದೇವರ ಚಿಂತೆ||                                                                       —ಬಸವಣ್ಣ

ಚಕೋರಂಗೆ ಚಂದ್ರಮನ Read More »