ಕೊಲ್ಹಾಪುರ ನಿಲಯ ಸರಸಿಜಾಲಯ ಹರಿ
ಕೊಲ್ಹಾಪುರ ನಿಲಯ ಸರಸಿಜಾಲಯ ಹರಿ ವಲ್ಲಭೆ ಬಲು ಸುಲಭೆ ಮೂಕಾಸುರನ ಕೊಂದು ಮೂಕಾಂಬಿಕೆನಿಸಿದೆ ಲೋಕ ಜನನಿ ಕಾಮಿನಿಸಾಕಾರ ಗುಣವಂತೆ ಶ್ರೀ ಕಮಲೆ ಎಲ್ಲಿನಾ ಕಾಣೆ ನಿನಗೆ ಸಮಾ ||1|| ಕೋಲ ಮುನಿಗೊಲಿದಮಲ ಮೃಗನಾಭಿ ಫಾಲೆ ಸಜ್ಜನರ ಪಾಲೆಬಾಲೆ ಜಾತರಹಿತೆ ಲೀಲೆ ನಾನಾ ಪುಷ್ಪಮಾಲೆ ಕಮಲಹಸ್ತೆ||2|| ಶಿವದುರ್ಗೆ ನೀನೆಂದು ಶ್ರವಣಮಾಡಲು ಮನುಜ ರವರವ ನರಕದಲ್ಲಿ ಬವಣೆಪಟ್ಟ ಮೇಲೆ ಸವಿಯದಂತೆ ತಮಸುನಿವಹದೊಳಗೆ ಇಪ್ಪನು ||3|| ಕಾಮತೀರ್ಥ ಬಳಿಯ ಪ್ರೇಮದಿಂದಲಿ ನಿಂದೆ ಸೀಮೆಯೊಳಗೆ ನಿನ್ನಯ ನಾಮಕೊಂಡಾಡಲು ತಾಮಸಗಳ ಕಳೆದು ನಿಷ್ಕಾಮ ಫಲ […]
ಕೊಲ್ಹಾಪುರ ನಿಲಯ ಸರಸಿಜಾಲಯ ಹರಿ Read More »