ಏಕೆ ನಡುಗಿದೆ ತಾಯೆ ಭೂಮಿ ನಡುರಾತ್ರಿಯೊಳು

ಏಕೆ ನಡುಗಿದೆ ತಾಯೆ ಭೂಮಿ ನಡುರಾತ್ರಿಯೊಳು – ಜಗ ದೇಕ ಪೊಡವಿಗೊಡೆಯನ ರಾಣಿ ಪರಮ ಕಲ್ಯಾಣಿ ಗುರು ಹಿರಿಯರನು ಕಂಡು ಮುರುಕಿಸುವ ಮೋರೆಯಲಿಅರೆಮತಿಯ ಕೊಂಕು ಮಾತುಗಳನಾಡಿಚರಣಕೆರಗದ ಮನುಜರಿರಬಾರದೆಂದೆನುತಮರಮುರಿದು ಒರಗಿ ಸಾಯಲಿ ಎಂದು ನಡುಗಿದೆಯ1 ಉತ್ತಮರ ಹೊಟ್ಟೆಯಲಿ ಬಗಳೊ ಶ್ವಾನವು ಹುಟ್ಟಿಹೆತ್ತವರ ನಿರ್ಬಂಧಕೊಳಗು ಮಾಡಿಅತ್ತೆ ಮಾವರ ಕೀರ್ತಿಯ ಕೊಂಡಾಡುವಧಮರಹೊತ್ತು ಇರಲಾರೆನೆನುತ ಮತ್ತೆ ನಡುಗಿದೆಯ2 ಕಳ್ಳತನವನು ಕಲಿತು ಕಾಲೋಚಿತವ ಕೇಳ್ದುಸುಳ್ಳು ಮಾತುಗಳಾಡಿ ಒಡಲ ಪೊರೆದುಕೊಳ್ಳಿ ದೆವ್ವಗಳಂತೆ ಅಲೆದಾಡುತಿರುವಂಥಸುಳ್ಳು ಮನುಜರ ಹೊರಲಾರೆನೆಂದು ನಡುಗಿದೆಯ 3 ಕಲಿಯುಗದಿ ಮುರಹರನ ಸ್ಮರಣೆಯನು ಮಾಡದೆಯೆಸಲೆ ಭಕ್ತಿಯಿಂ […]

ಏಕೆ ನಡುಗಿದೆ ತಾಯೆ ಭೂಮಿ ನಡುರಾತ್ರಿಯೊಳು Read More »

ಏಕೆ ದಯವಿನಿತಿಲ್ಲ ಲೋಕಪಾವನ

ಏಕೆ ದಯವಿನಿತಿಲ್ಲ ಲೋಕಪಾವನ ಮೂರ್ತಿ ಬೇಕೆಂದು ನಿನ್ನ ಪಾದ ನಂಬಿದ ದಾಸನ ಮೇಲೆ ಎಡರಿಗಾಗುವರಿಲ್ಲ ಕಡನ ನಂಬುವರಿಲ್ಲಬಡವನೆಂದು ವಸ್ತ್ರವ ಕೊಡುವರಿಲ್ಲದೃಢದೊಳಿದ್ದರು ಬವಣೆ ಬಂದೊಡನೆ ಕಾಡುವುವುಒಡೆಯ ಕಂಡೂ ಕಾಣದಿರುವುದುಚಿತವಲ್ಲ||1|| ಮೊರೆಯ ಕೇಳುವರಿಲ್ಲ ಸಿರಿವಂತ ನಾನಲ್ಲಪರಮಾತ್ಮ ನಿನ್ನೊಳಗೆ ನಾನರಿತಿಲ್ಲಬೆರೆತುಕೊಂಡಿರಲು ಸಜ್ಜನರ ಗೆಳೆತನವಿಲ್ಲಪರಮಹಂಸನೆ ಹರಿಸೊ ಇಂಥ ಕೊರತೆಗಳೆಲ್ಲ ||2|| ನೀಲವರ್ಣದ ಲೋಲ ಕಾಲನವರಿಗೆ ಶೂಲಬಾಲ್ಯದಿ ಯಶೋದೆಯ ಹಾಲ ಸವಿದ ಗೋಪಾಲನಾಲಗೆಗೆ ನಿನ್ನ ವಿಶಾಲ ಅಷ್ಟಾಕ್ಷರಿಯನಿತ್ತುಪಾಲಿಸೋ ಶ್ರೀ ಕಾಗಿನೆಲೆಯಾದಿಕೇಶವನೆ||3||

ಏಕೆ ದಯವಿನಿತಿಲ್ಲ ಲೋಕಪಾವನ Read More »

ಸಂನ್ಯಾಸಿ ಗೀತೆ

ಏಳು, ಮೇಲೇಳೇಳು ಸಾಧುವೆ, ಹಾಡು ಚಾಗಿಯ ಹಾಡನು; ಹಾಡಿನಿಂದೆಚ್ಚರಿಸು  ಮಲಗಿಹ ನಮ್ಮ ಈ ತಾಯ್ನಾಡನು! ದೂರದಡವಿಯೊಳೆಲ್ಲಿ ಲೌಕಿಕ ವಿಷಯ ವಾಸನೆ ಮುಟ್ಟದೊ, ಎಲ್ಲಿ ಗಿರಿ ಗುಹೆ ಕಂದರದ ಬಳಿ ಜಗದ ಗಲಿಬಿಲಿ ತಟ್ಟದೊ , ಎಲ್ಲಿ ಕಾಮವು ಸುಳಿಯದೊ – ಮೇಣ್ ಎಲ್ಲಿ ಜೀವವು ತಿಳಿಯದೊ ಕೀರ್ತಿ ಕಾಂಚನವೆಂಬುವಾಸೆಗಳಿಂದ ಜನಿಸುವ ಭ್ರಾಂತಿಯ, ಎಲ್ಲಿ ಆತ್ಮವು ಪಡೆದು ನಲಿವುದೊ ನಿಚ್ಚವಾಗಿಹ ಶಾಂತಿಯ, ನನ್ನಿವರಿವಾನಂದವಾಹಿನಿಯೆಲ್ಲಿ ಸಂತತ ಹರಿವುದೊ, ಎಲ್ಲಿ ಎಡೆಬಿಡದಿರದ ತೃಪ್ತಿಯ ಝರಿ ನಿರಂತರ ಸುರಿವುದೋ ಅಲ್ಲಿ ಮೂಡಿದ ಹಾಡನುಲಿಯೈ,

ಸಂನ್ಯಾಸಿ ಗೀತೆ Read More »

ಏಶೋ ಹೃದಯ ದೋಲಾಯ್

ಏಶೋ ಹೃದಯ ದೋಲಾಯ್ ದುಲಾಇ ತೋಮಾಯ್| ಪ್ರಾಣೇರ್ ಠಾಕೂರ್ ರಾಮಕೃಷ್ಣ ಮಮ|| ತುಮಿ ಜೇ ಮೋರ್ ಪ್ರಾಣಪ್ರಿಯ ಪ್ರಿಯತಮ ಘನಶ್ಯಾಮ|| ರೋಖೇಛಿ ಹೃದಯೇ ಆಸನ ಪಾತಿ ತವ ಪಥ ಚಾಹಿ ದಿವಸ ರಾತಿ| ಏಶೋ ಏಶೋ ಹರಿ ಏಶೋ ದಯಾ ಕೊರಿ ಮೋರ್ ಜತೊ ಅಪರಾಧ ಕ್ಷಮ ಕ್ಷಮ|| ಖುಜೇಛಿ ಬಾಹಿರೇ ಏಧಾರ್ ಓಧಾರ್ ತುಮಿ ಬೋಲೇಛೊ ತುಮಿ ಹೃದಯೇ ಆಮಾರ್| ಏಬಾರ್ ದರಶ ದಾನೇ ಜುಡಾಓ ಮನಪ್ರಾಣೇ ದಯಾಲ್ ಠಾಕೂರ್ ರಾಮಕೃಷ್ಣ ಮಮ||

ಏಶೋ ಹೃದಯ ದೋಲಾಯ್ Read More »

ಏಶೇಛೇ ನೂತನ್ ಮಾನುಷ್

ಏಶೇಛೇ ನೂತನ್ ಮಾನುಷ್ ದೇಖಬಿ ಜದಿ ಆಯ್ ಚಲೇ| (ತಾರ್) ವಿವೇಕ ವೈರಾಗ್ಯ ಝುಲಿ ದುಇ ಕಾಂಧೇ ಸದಾ ಝಲೇ|| ಶ್ರೀವದನೇ ಮಾ ಮಾ ವಾಣೀ ಪಡಿ ಗಂಗಾ ಸಲಿಲೇ| ಬ್ರಹ್ಮಮಯಿ ಗೇಲೊ ಮಾ ದಿನ್ ದೇಖಾ ತೋ ನಾಹಿ ದಿಲೇ|| ನಾಸ್ತಿಕ ಅಜ್ಞಾನೀ ನರೇ ಸರಲ್ ಕಥಾಯ್ ಶಿಖಾಲೇ| ಜೇಇ ಕಾಲೀ ಸೇಇ ಕೃಷ್ಣ ನಾಮ ಭೇದ ಏಕ್ ಮೂಲೇ|| ಏಕವಾ ವಾಟರ್ ಪಾನಿ ವಾರಿ ನಾಮ್ ದೇಯ್ ಜಲೇ| ಅಲ್ಲಾ ಗಾಡ್ ಈಶಾ ಮುಶಾ

ಏಶೇಛೇ ನೂತನ್ ಮಾನುಷ್ Read More »

ಏಮಿ ನೇರಮು ನನ್ನು ಬ್ರೋವ

ಏಮಿ ನೇರಮು ನನ್ನು ಬ್ರೋವ ಎಂತಭಾರಮು ನಾವಲ್ಲ|| ಸಾಮಜವರದುಡನಿ ಮುನುಪೇ ಸತ್ಕೀರ್ತಿಂ ಗಲ್ಗ ಲೇದಾ ನಾಪೈ|| ದೀನಬಂಧುವನಿ ದೇವದೇವುಡನಿ ಮಾನಘನನುಡನಿ ಧರ್ಮಾತ್ಮುಡನುಚುನು|| ಜ್ಞಾನಧನುಲು ಗುಣಗಾನಮು ಸೇಯ ಬಿ- ರಾನ ಜೂಡವು ತ್ಯಾಗರಾಜಾರ್ಚಿತ ನಾಪೈ||                                                        —-ತ್ಯಾಗರಾಜ

ಏಮಿ ನೇರಮು ನನ್ನು ಬ್ರೋವ Read More »

ಏಗಾ ಏಗಾ ವಿಠಾಬಾಈ

ಏಗಾ ಏಗಾ ವಿಠಾಬಾಈ ಮಾಝೇ ಫಂಡರೀಚೇ ಆಯೀ|| ಭೀಮಾ ಆಣೀ ಚಂದ್ರಭಾಗಾ ತುಝೇ ಚರಣಿತೇ ಗಂಗಾ|| ಇತುಕಾ ಸಹಿತಾ ತ್ವಾಭಾಯಾವೇ ಮಾಝೂ ರಂಗೋಣೀಲಾ ಜಾವೇ|| ಮಾಝೂ ರಂಗ ತುಝೂ ಗುಣಿ ನಾಮಾ ಮ್ಹಣೇ ಹ್ಯಾಂಚಿ ಜನಿ||                                    —-ನಾಮದೇವ

ಏಗಾ ಏಗಾ ವಿಠಾಬಾಈ Read More »

ಏಕರೂಪ ಅರೂಪ

ಏಕರೂಪ ಅರೂಪ ನಾಮ ವರಣ ಅತೀತ ಆಗಾಮೀ ಕಾಲಹೀನ|| ದೇಶಹೀನ ಸರ್ವಹೀನ ನೇತಿ ನೇತಿ ವಿರಾಮ ಯಥಾಯ್|| ಶೇಥಾ ಹೊತೇ ವಹೇ ಕಾರಣಧಾರಾ ಧರಿಯೇ ವಾಸನಾ ವೇಶಾ ಉಜಲಾ| ಗರಜಿ ಗರಜಿ ಉಠೇ ತಾರ ವಾರಿ ಅಹಮಹಮಿತಿ ಸರ್ವಕ್ಷಣ|| ಶೇ ಅಪಾರ ಇಚ್ಛಾಸಾಗರ ಮಾಝೇ ಅಯುತ ಅನಂತ ತರಂಗ ರಾಜೇ| ಕೊತೊಇ ರೂಪ ಕೊತೊಇ ಶಕತಿ ಕೊತೊ ಗತಸ್ಥಿತಿ ಕೇ ಕೊರೇ ಗಣನ|| ಕೋಟಿ ಚಂದ್ರ ಕೋಟಿ ತಪನ ಲಭಿಯೇ ಶೇಯಿ ಸಾಗರೇ ಜನಮ| ಮಹಾಘೋರ ರೋಲೇ

ಏಕರೂಪ ಅರೂಪ Read More »

ಏಳು ತಾಯಿ, ಏಳು ತಾಯಿ

ಏಳು ತಾಯಿ, ಏಳು ತಾಯಿ, ಎಷ್ಟು ಕಾಲ ನಿದ್ದೆಗೈವೆ ಮೂಲಾಧಾರ ಪದ್ಮದಿ|| ಏಳು ತಾಯಿ ಶಿವನಿರುವಾ ಸಾವಿರದಳ ಕಮಲವರಳಲೆನ್ನ ಶಿರೋಮಧ್ಯದಿ ಷಟ್ ಚಕ್ರವ ಭೇದಿಸಮ್ಮ ಮನದ ವ್ಯಥೆಯ ನೀಗಿಸಮ್ಮ ಓ ಚೇತನ ರೂಪಿಣಿ||                        —-ವಚನವೇದ

ಏಳು ತಾಯಿ, ಏಳು ತಾಯಿ Read More »

ಏಹಿ ಮುದಂ

ಏಹಿ ಮುದಂ ದೇಹಿ ಶ್ರೀಕೃಷ್ಣ ಕೃಷ್ಣ-ಮಾಂ ಪಾಹಿ ಗೋಪಾಲ ಬಾಲ ಕೃಷ್ಣ ಕೃಷ್ಣ|| ಧಾವ ಧಾವ ಮಾಧವ ಶ್ರೀಕೃಷ್ಣ ಕೃಷ್ಣ-ನವ್ಯ ನವನೀತಮಾಹರ ಶ್ರೀ ಕೃಷ್ಣ ಕೃಷ್ಣ|| ಭವ್ಯನಟನಂ ಕುರು ಶ್ರೀಕೃಷ್ಣ ಕೃಷ್ಣ-ಬಲ ಭದ್ರಸಹಿತ ಶ್ರೀಕೃಷ್ಣ ಕೃಷ್ಣ|| ಸಾಧು ಸಾಧು ಕೃತಮಿಹ ಕೃಷ್ಣ ಕೃಷ್ಣ-ಲೋಕ ಸಾಧಕಹಿತಾಯ ಶ್ರೀಕೃಷ್ಣ ಕೃಷ್ಣ|| ನಾರದಾದಿ ಮುನಿಗೇಯ ಕೃಷ್ಣ ಕೃಷ್ಣ-ಶ್ರೀಮನ್ ನಾರಾಯಣತೀರ್ಥವರದ ಕೃಷ್ಣ ಕೃಷ್ಣ||                                                  ——ನಾರಾಯಣತೀರ್ಥ

ಏಹಿ ಮುದಂ Read More »

ಏನು ಮಾಡಿದರೇನು

ಏನು ಮಾಡಿದರೇನು ಭವ ಹಿಂಗದು ಸ್ವಾಮಿ ದಾನವಾಂತಕ ನಿನ್ನ ದಯವಾಗದನಕ|| ಅರುಣೋದಯದೊಳೆದ್ದು ಅತಿಸ್ನಾನಗಳ ಮಾಡಿ ಬೆರಳೆಣಿಸಿದೆ ಅದರ ನಿಜವರಿಯದೆ| ಚರಣ ಸಾಷ್ಟಾಂಗವನು ಮಾಡಿ ನಾ ದಣಿದೆನೋ ಹರಿ ನಿನ್ನ ಕರುಣಾಕಟಾಕ್ಷವಾಗದನಕ|| ಶ್ರುತಿ ಶಾಸ್ತ್ರ ಪುರಾಣಗಳನೋದಿ ಬೆಂಡಾದೆ ಅತಿ ಶೀಲಗಳನೆಲ್ಲ ಮಾಡಿ ದಣಿದೆ| ಗತಿಯ ಪಡೆಯುವೆನೆಂದು ಕಾಯ ದಂಡಿಸಿದೆನೋ ರತಿಪತಿಪಿತ ನಿನ್ನ ದಯವಾಗದನಕ|| ಧ್ಯಾನವನು ಮಾಡಿದೆನು ಮೌನವನು ತಾಳಿದೆ ಮ- ಹಾನು ಪುರುಷಾರ್ಥಕ್ಕೆ ಮನವನಿಕ್ಕಿ| ಅನಾಥಬಂಧು ಶ್ರೀ ಪುರಂದರವಿಟ್ಠಲನ ಧ್ಯಾನಿಸುವರೊಡಗೂಡಿ ನೆಲೆಗಾಣದನಕ||                                                    —-ಪುರಂದರದಾಸ

ಏನು ಮಾಡಿದರೇನು Read More »

ಏನು ನಿರುಪಮ ಸೊಬಗು

ಏನು ನಿರುಪಮ ಸೊಬಗು, ಓಹೋ ಎಂಥ ಚೆಲುವಿನ ಮೋಹನ! ನನ್ನ ಹೃದಯದ ಮೂರ್ತಿ ಬಂದನು ಎದೆಯ ಗುಡಿಸಲಿಗೀದಿನ! ಎದೆಯೊಳೊಲವಿನ ಚಿಲುಮೆ ಚಿಮ್ಮಿವೆ ಹತ್ತು ಕಡೆಗೂ ಸುಮ್ಮನೆ! ಯಾವ ಸಂಪದವನ್ನು ಸುರಿಯಲಿ ಹೇಳು ನಿನ್ನೀ ಪದದೆಡೆ? ನನ್ನ ಹರಣವೆ ಶರಣು ನಿನಗೆ, ನನ್ನ ಆತ್ಮವೆ ನಿನ್ನದು  ; ಮತ್ತೆ ಏನನು ನೀಡಲಯ್ಯಾ?- ನನ್ನದೆಲ್ಲವು ನಿನ್ನದು!                          —-ವಚನವೇದ

ಏನು ನಿರುಪಮ ಸೊಬಗು Read More »

ಏನು ಧನ್ಯಳೊ ಲಕುಮಿ

ಏನು ಧನ್ಯಳೊ| ಲಕುಮಿ| ಎಂಥಾ ಮಾನ್ಯಳೋ|| ಸಾನುರಾಗದಿಂದ ಹರಿಯ ತಾನೆ ಸೇವೆ ಮಾಡುತಿಹಳು|| ಕೋಟಿಕೋಟಿ ಭೃತ್ಯರಿರಲು ಹಾಟಕಾಂಬರನ ಸೇವೆ| ಸಾಟಿಯಿಲ್ಲದೆ ಮಾಡಿ ಪೂರ್ಣ ನೋಟದಿಂದ ಸುಖಿಸುತಿಹಳು|| ಛತ್ರ ಚಾಮರ ವ್ಯಜನ ಪರ್ಯಂಕ ಪಾತ್ರರೂಪದಲ್ಲಿ ನಿಂತು ಚಿತ್ರಚರಿತನಾದ ಹರಿಯ ನಿತ್ಯಸೇವೆ ಮಾಡುತಿಹಳು|| ಸರ್ವತ್ರದಿ ವ್ಯಾಪ್ತನಾದ ಸರ್ವದೋಷರಹಿತನಾದ ಶರ್ವವಂದ್ಯನಾದ ಪುರಂದರ ವಿಟ್ಠಲನ್ನ ಸೇವಿಸುವಳು||                                 —-ಪುರಂದರದಾಸ

ಏನು ಧನ್ಯಳೊ ಲಕುಮಿ Read More »