ಊಡಿದಡುಣ್ಣದು, ನೀಡಿದಡೊಲಿಯದು.

ಊಡಿದಡುಣ್ಣದು, ನೀಡಿದಡೊಲಿಯದು. ಕಾಡದು ಬೇಡದು ಒಲಿಯದು ನೋಡಾ. ಊಡಿದಡುಂಡು ನೀಡಿದಡೊಲಿದು ಬೇಡಿದ ವರವ ಕೊಡುವ ಜಂಗಮಲಿಂಗದ ಪಾದವ ಹಿಡಿದು ಬದುಕಿದೆ, ಕಾಣಾ ಚೆನ್ನಮಲ್ಲಿಕಾರ್ಜುನಾ.

ಊಡಿದಡುಣ್ಣದು, ನೀಡಿದಡೊಲಿಯದು. Read More »

ಊರ ಮುಂದೆ ಹಾಲತೊರೆ ಇರಲು

ಊರ ಮುಂದೆ ಹಾಲತೊರೆ ಇರಲು ನೀರಡಸಿ ಬಂದೆನಲ್ಲಯ್ಯ ನಾನು. ಬರುದೊರೆವೋದವಳನೆನ್ನನಪ್ಪದಿರಯ್ಯಾ. ನೀನೊತ್ತಿದ ಕಾರಣ ಬಂದೆನಯ್ಯ. ಹೆರಿಗೆ ಕೂತವಳ ತೆಗೆದಪ್ಪುವನೆಗ್ಗ ನೋಡಾ ? ಈ ಸೂನೆಗಾರಂಗೆ ಕುರಿಯ ಮಾರುವರೆ ? ಮಾರಿದರೆಮ್ಮವರೆನ್ನ ನಿನಗೆ. ಎನ್ನತ್ತ ಮುಂದಾಗದಿರು, ಎನ್ನಮೇಲೆ ಕಾಲನಿಡದಿರು. ಚೆನ್ನಮಲ್ಲಿಕಾರ್ಜುನಂಗೆ ಸಲೆ ಮಾರುವೋದವಳಾನು.

ಊರ ಮುಂದೆ ಹಾಲತೊರೆ ಇರಲು Read More »

ಊರ ನಡುವೆ ಒಂದು ಬೇಂಟೆ ಬಿದ್ದಿತ್ತು.

ಊರ ನಡುವೆ ಒಂದು ಬೇಂಟೆ ಬಿದ್ದಿತ್ತು. ಆರು ಕಂಡವರು ತೋರಿರಯ್ಯಾ. ಊರಿಗೆ ದೂರುವೆನಗುಸೆಯನಿಕ್ಕುವೆ ಅರಸುವೆನೆನ್ನ ಬೇಂಟೆಯ. ಅರಿತು ಅರಿಯದೆ ಒಂದು ಬೇಂಟೆಯನಾಡಿದೆನು. ಅರಸಿಕೊಡಾ, ಚೆನ್ನಮಲ್ಲಿಕಾರ್ಜುನಾ.

ಊರ ನಡುವೆ ಒಂದು ಬೇಂಟೆ ಬಿದ್ದಿತ್ತು. Read More »

ಉಳ್ಳುದೊಂದು ತನು, ಉಳ್ಳುದೊಂದು ಮನ.

ಉಳ್ಳುದೊಂದು ತನು, ಉಳ್ಳುದೊಂದು ಮನ. ನಾನಿನ್ನಾವ ಮನದಲ್ಲಿ ಧ್ಯಾನವ ಮಾಡುವೆನಯ್ಯಾ ? ಸಂಸಾರವನಾವ ಮನದಲ್ಲಿ ತಲ್ಲೀಯವಾಹೆನಯ್ಯಾ ? ಅಕಟಕಟಾ, ಕೆಟ್ಟೆ ಕೆಟ್ಟೆ ? ಸಂಸಾರಕ್ಕಲ್ಲಾ, ಪರಮಾರ್ಥಕ್ಕಲ್ಲಾ ? ಎರಡಕ್ಕೆ ಬಿಟ್ಟ ಕರುವಿನಂತೆ ? ಬಿಲ್ವ ಬೆಳವಲಕಾಯನೊಂದಾಗಿ ಹಿಡಿಯಬಹುದೆ ಚೆನ್ನಮಲ್ಲಿಕಾರ್ಜುನಾ ?

ಉಳ್ಳುದೊಂದು ತನು, ಉಳ್ಳುದೊಂದು ಮನ. Read More »

ಉಳುಹುವ, ಕರವ ನೇಹವುಂಟೆ ನಿಮ್ಮಲ್ಲಿ

ಉಳುಹುವ, ಕರವ ನೇಹವುಂಟೆ ನಿಮ್ಮಲ್ಲಿ ಸಂಸಾರಕ್ಕೆಡೆಯಾ [ಡದ] ಭಕ್ತಿಯೊಳವೆ ಎನ್ನದೇವ ಚೆನ್ನಮಲ್ಲಿಕಾರ್ಜುನಯ್ಯಾ, ಏನ ಹೇಳುವೆನಯ್ಯ ಲಜ್ಜೆಯ ಮಾತನು

ಉಳುಹುವ, ಕರವ ನೇಹವುಂಟೆ ನಿಮ್ಮಲ್ಲಿ Read More »

ಉಸುರಿನ ಪರಿಮಳವಿರಲು

ಉಸುರಿನ ಪರಿಮಳವಿರಲು ಕುಸುಮದ ಹಂಗೇಕಯ್ಯಾ ಕ್ಷಮೆ ದಮೆ ಶಾಂತಿ ಸೈರಣೆಯಿರಲು ಸಮಾಧಿಯ ಹಂಗೇಕಯ್ಯಾ ಲೋಕವೆ ತಾನಾದ ಬಳಿಕ ಏಕಾಂತದ ಹಂಗೇಕಯ್ಯಾ ಚೆನ್ನಮಲ್ಲಿಕಾರ್ಜುನಾ ?

ಉಸುರಿನ ಪರಿಮಳವಿರಲು Read More »

ಉದಯದಲೆದ್ದು ನಿಮ್ಮ ನೆನೆವೆನಯ್ಯಾ.

ಉದಯದಲೆದ್ದು ನಿಮ್ಮ ನೆನೆವೆನಯ್ಯಾ. ಕಸದೆಗೆದು ಚಳೆಯ ಕೊಟ್ಟು ನಿಮ್ಮ ಬರವ ಹಾರುತಿರ್ದೆನಯ್ಯಾ. ಹಸೆ ಹಂದರವನಿಕ್ಕಿ ನಿಮ್ಮಡಿಗಳಿಗೆಡೆಮಾಡಿಕೊಂಡಿರ್ದೆನಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ, ನೀನಾವಾಗ ಬಂದೆಯಾ ಎನ್ನ ದೇವಾ ?

ಉದಯದಲೆದ್ದು ನಿಮ್ಮ ನೆನೆವೆನಯ್ಯಾ. Read More »

ಉದಯಾಸ್ತಮಾನವೆಂಬೆರಡು ಕೊಳಗದಲ್ಲಿ,

ಉದಯಾಸ್ತಮಾನವೆಂಬೆರಡು ಕೊಳಗದಲ್ಲಿ, ಆಯುಷ್ಯವೆಂಬ ರಾಶಿ ಅಳೆದು ತೀರದ ಮುನ್ನ ಶಿವನ ನೆನೆಯಿರೆ ! ಶಿವನ ನೆನೆಯಿರೆ ! ಈ ಜನ್ಮ ಬಳಿಕಿಲ್ಲ. ಚೆನ್ನಮಲ್ಲಿಕಾರ್ಜುನದೇವರದೇವನ ನೆನೆದು ಪಂಚಮಹಾಪಾತಕರೆಲ್ಲರು ಮುಕ್ತಿವಡೆದರಂದು ?

ಉದಯಾಸ್ತಮಾನವೆಂಬೆರಡು ಕೊಳಗದಲ್ಲಿ, Read More »

ಉಣಲೆಂದು ಬಂದ ಸುಖ ಉಂಡಲ್ಲದೆ ಹರಿಯದು.

ಉಣಲೆಂದು ಬಂದ ಸುಖ ಉಂಡಲ್ಲದೆ ಹರಿಯದು. ಕಾಣಲೆಂದು ಬಂದ ದುಃಖ ಕಂಡಲ್ಲದೆ ಹರಿಯದು. ತನುವಿಂಗೆ ಬಂದ ಕರ್ಮ ಹರಿವ ಕಾಲಕ್ಕೆ ಚೆನ್ನಮಲ್ಲಿಕಾರ್ಜುನದೇವರು ಕಡೆಗಣ್ಣಿನಿಂದ ನೋಡಿದರು.

ಉಣಲೆಂದು ಬಂದ ಸುಖ ಉಂಡಲ್ಲದೆ ಹರಿಯದು. Read More »

ಉಡುವೆ ನಾನು ಲಿಂಗಕ್ಕೆಂದು,

ಉಡುವೆ ನಾನು ಲಿಂಗಕ್ಕೆಂದು, ತೊಡುವೆ ನಾನು ಲಿಂಗಕ್ಕೆಂದು, ಮಾಡುವೆ ನಾನು ಲಿಂಗಕ್ಕೆಂದು, ನೋಡುವೆ ನಾನು ಲಿಂಗಕ್ಕೆಂದು, ಎನ್ನಂತರಂಗ ಬಹಿರಂಗಗಳು ಲಿಂಗಕ್ಕಾಗಿ. ಮಾಡಿಯೂ ಮಾಡದಂತಿಪ್ಪೆ ನೋಡಾ. ಆನೆನ್ನ ಚೆನ್ನಮಲ್ಲಿಕಾರ್ಜುನನೊಳಗಾಗಿ ಹತ್ತರೊಡನೆ ಹನ್ನೊಂದಾಗಿಪ್ಪುದನೇನ ಹೇಳುವೆನವ್ವಾ?

ಉಡುವೆ ನಾನು ಲಿಂಗಕ್ಕೆಂದು, Read More »

ಉರಿಯೊಡ್ಡಿದಡೆ ಸೀತಳವೆನಗೆ.

ಉರಿಯೊಡ್ಡಿದಡೆ ಸೀತಳವೆನಗೆ. ಗಿರಿಮೇಲೆ ಬಿದ್ದರೆ ಪುಷ್ಪವೆನಗೆ. ಸಮುದ್ರಮೇಲುವಾಯಿದರೆ ಕಾಲುವೆಯೆನಗೆ. ಚೆನ್ನಮಲ್ಲಿಕಾರ್ಜುನಾ, ನಿಮ್ಮಾಣೆಯೆಂಬುದು ತಲೆಯೆತ್ತಿ ಬಾರದ ಭಾರವೆನಗೆ.

ಉರಿಯೊಡ್ಡಿದಡೆ ಸೀತಳವೆನಗೆ. Read More »

ಉರಿಯ ಫಣಿಯನುಟ್ಟು ಊರಿಂದ ಹೊರಗಿರಿಸಿ,

ಉರಿಯ ಫಣಿಯನುಟ್ಟು ಊರಿಂದ ಹೊರಗಿರಿಸಿ, ಕರೆಯಲಟ್ಟಿದ ಸಖಿಯ ನೆರೆದ ನೋಡೆಲೆಗವ್ವಾ. ತೂರ್ಯಾವಸ್ಥೆಯಲ್ಲಿ ತೂಗಿ ತೂಗಿ ನೋಡಿ ಬೆರಗಾಗಿ ನಿಲಲಾರೆನವ್ವಾ. ಆರವಸ್ಥೆ ಕರ ಹಿರಿದು ಎಲೆ ತಾಯೆ. ಗಿರಿ ಬೆಂದು ತರುವುಳಿದು ಹೊನ್ನರಳೆಯ ಮರನುಲಿವಾಗ ಹಿರಿಯತನಗೆಡಿಸಿ ನೆರೆವೆನು ಚೆನ್ನಮಲ್ಲಿಕಾರ್ಜುನನ.

ಉರಿಯ ಫಣಿಯನುಟ್ಟು ಊರಿಂದ ಹೊರಗಿರಿಸಿ, Read More »

ಉರಕ್ಕೆ ಜವ್ವನಗಳು ಬಾರದ ಮುನ್ನ,

ಉರಕ್ಕೆ ಜವ್ವನಗಳು ಬಾರದ ಮುನ್ನ, ಮನಕ್ಕೆ ನಾಚಿಕೆಗಳು ತೋರದ ಮುನ್ನ, ನಮ್ಮವರಂದೆ ಮದುವೆಯ ಮಾಡಿದರು ಸಿರಿಶೈಲ ಚೆನ್ನಮಲ್ಲಿಕಾರ್ಜುನಂಗೆ. ಹೆಂಗೂಸೆಂಬ ಭಾವ ತೋರದ ಮುನ್ನ ನಮ್ಮವರಂದೆ ಮದುವೆಯ ಮಾಡಿದರು

ಉರಕ್ಕೆ ಜವ್ವನಗಳು ಬಾರದ ಮುನ್ನ, Read More »

ಉದ್ದರುಸುವದೆನ್ನ ಉದಧಿಶಯನ

ಉದ್ದರುಸುವದೆನ್ನ ಉದಧಿಶಯನ | ಬಿದ್ದೆ ನಿನ್ನಯ ಪಾದ | ಪದ್ಮದ್ವಯಕೆಯಿಂದು ಅಂದು ನೀ ಪೇಳಿದಂದಲಿ ತೀರ್ಥಯಾತ್ರೆ | ನಿಂದರದೆ ಸಂಚರಿಸಿ ಪುಣ್ಯವೆಲ್ಲಾ | ತಂದು ನಿನಗರ್ಪಿಸಿದೆ ಕೈ ಕೊಂಡು | ಮುಂದೆ ಎನ್ನಗೊಂದು ದಾರಿಯ ತೋರು ತಡಮಾಡದಲೆ ದೇವಾ ||1|| ಯಾತರವ ನಾನು ನರಮನೆ ಗಾಯಕರ ದೂತರೆಂಜಲನುಂಡು ಬೆಳದ ನರನೋ || ನೋತ ಫಲವಾವದೊ ನೀನೆ ಬಲ್ಲೆಯಾ ಜೀಯಾ | ಮಾತು ಮಾತಿಗೆ ಹಿಗ್ಗಿ ನಗುವ ಚನ್ನಿಗರಾಯಾ||2|| ಇಷ್ಟೆನ್ನ ಮನದ ಭೀಷ್ಟೆ ಒಂದೆ ವುಂಟು | ಕೃಷ್ಣಾ

ಉದ್ದರುಸುವದೆನ್ನ ಉದಧಿಶಯನ Read More »

ಊಟವನು ಮಾಡು ಬಾ ಉದಧಿಶಯನಾ

ಊಟವನು ಮಾಡು ಬಾ ಉದಧಿಶಯನಾ | ಆಟವನು ಸಾಕುಮಾಡಿ ಅತಿ ವೇಗದಿಂದಲಿ ಕಾಯಿಪಲ್ಲೆ ಒಂದೊಂದು ನೂರು ಪರಿ | ತೋಯ ಸಂಡಿಗೆ ಪಳದೆ ಹುಳಿ ಸಾರು || ಪಾಯಸ ನೊರೆಹಾಲು ಸಕ್ಕರೆಗೂಡಿಸಿ | ತಾಯಿ ದೇವಕಿಯು ಎಡೆಯ ಮಾಡಿದಳು ತಂದು ||1|| ಯಾಲಕ್ಕಿ ಹಾಕಿದ ಹೋಳಿಗೆಯು ಪರಿಮಳ | ಸಲೆ ಶಾಲ್ಯೋದನ ಕರಿದ ಭಕ್ಷ್ಯಾ || ಮೇಲಾದ ಇಂಗು ಜೀರಿಗೆ ಮೆಣಸಿನ ಹುಗ್ಗಿ | ಶ್ರೀ ಲಕುಮಿದೇವಿ ಎಡೆ ಮಾಡಿದಳು ತಂದು ||2|| ಕಸಕಸಿ ಎಳ್ಳು ಲಡ್ಡಿಗೆಯು

ಊಟವನು ಮಾಡು ಬಾ ಉದಧಿಶಯನಾ Read More »

ಉಮಾ ಕಾತ್ಯಾಯನೀ ಗೌರಿ ದಾಕ್ಷಾಯಣಿ

ಉಮಾ ಕಾತ್ಯಾಯನೀ ಗೌರಿ ದಾಕ್ಷಾಯಣಿ | ಹಿಮವಂತ ಗಿರಿಯ ಕುಮಾರಿ ರಮೆಯರಸನ ಪದಕಮಲ ಮಧುಪೆ ನಿತ್ಯ | ಅಮರವಂದಿತೆ ಗಜಗಮನೆ ಭವಾನಿ ಅ. ಪ ಪನ್ನಗಧರನ ರಾಣಿ ಪರಮಪಾವನಿ | ಪುಣ್ಯಫಲ ಪ್ರದಾಯಿನಿ || ಪನ್ನಗವೇಣಿ ಶರ್ವಾಣಿ ಕೋಕಿಲವಾಣಿ | ಉನ್ನತ ಗುಣಗಣ ಶ್ರೇಣಿ | ಎನ್ನ ಮನದ ಅಭಿಮಾನ ದೇವತೆಯೆ | ಸ್ವರ್ಣಗಿರಿ ಸಂಪನ್ನೆ ಭಾಗ್ಯ ನಿಧಿ || ನಿನ್ನ ಮಹಿಮೆಯನು ಬಿನ್ನಾಣದಲಿ ನಾ | ಬಣ್ಣಿಸಲಳವೆ ಪ್ರಸನ್ನ ವದನಳೆ ||1 || ಮುತ್ತಿನ ಪದಕ

ಉಮಾ ಕಾತ್ಯಾಯನೀ ಗೌರಿ ದಾಕ್ಷಾಯಣಿ Read More »

ಉದರ ಪೂರ್ತಿಯ ಕೊಡದಿರು ಉದಧಿಶಯನ

ಉದರ ಪೂರ್ತಿಯ ಕೊಡದಿರು ಉದಧಿಶಯನ ಮುದದಿ ನಿನ್ನನು ನೆನೆದು ಮಲಗುವೆನೊ ಸುಖದಿ ಮುದದಿ ನಿನ್ನ ಚರಣವನು ಸ್ಮರಿಸುವುದು | ಪರಿಹಾರವು ಬಹು ಗರ್ವ ಹೆಚ್ಚುವುದು ಎನಗೆ | ಅರವಿಂದನಾಭ ಹರಿ ವರವಿದೆ ನಿನ್ನ ಕೇಳ್ವೆ | ಪರಿಹಾಸ್ಯ ನುಡಿಯಲ್ಲ ಪರಮ ಪಾವನಗೆ ||1|| ತನುಮನವು ನಿನ್ನ ವಿಷಯಕ್ಕೆರಗಲಿ | ಅನುಮಾನವಿದ್ದ ಪರಿಯೆಲ್ಲ ತೊಲಗಿ || ವನಜಸಂಭವನೈಯ್ಯ ವೈಕುಂಠಪತಿ ನಿನಗೆ | ಅನವರತ ದೊರೆ ಎಂಬೊ | ಘನತೆ ತಪ್ಪದೆ ಇರಲಿ||2|| ಗಜಮದದಿ ಕಂಗೆಟ್ಟ ಪರಿಯನ್ನ ಮಾಡದೇ ||

ಉದರ ಪೂರ್ತಿಯ ಕೊಡದಿರು ಉದಧಿಶಯನ Read More »

ಊರಿಗೆ ಬಂದರೆ ದಾಸಯ್ಯ

ಊರಿಗೆ ಬಂದರೆ ದಾಸಯ್ಯ – ನಮ್ಮಕೇರಿಗೆ ಬಾ ಕಂಡ್ಯ ದಾಸಯ್ಯ ಕೈಲಿ ಕೋಲು ಕೊಳಲು ದಾಸಯ್ಯಕಲ್ಲಿಗೆ ವರವಿತ್ತೆ ದಾಸಯ್ಯಮಲ್ಲನ ಮರ್ದಿಸಿ ಮಾವನ ಮಡುಹಿದನೀಲಮೇಘಶ್ಯಾಮ ದಾಸಯ್ಯ ||1|| ಕೊರಳೊಳು ವನಮಾಲೆ ದಾಸಯ್ಯ – ಬಲುಗಿರಿಯನು ನೆಗಹಿದೆ ದಾಸಯ್ಯಇರುಳು ಹಗಲು ನಿನ್ನ ಕಾಣದೆ ಇರಲಾರೆಮರುಳು ಮಾಡುವಂಥ ದಾಸಯ್ಯ|| 2|| ಆದಿನಾರಾಯಣ ದಾಸಯ್ಯಮೋದದೊಂದು ಸಾಸಿರ ನಾಮದ ದಾಸಯ್ಯಮೇದಿನಿಯೊಳು ಪುಟ್ಟಿ ಗೋವ್ಗಳ ಕಾಯ್ದಆದಿಕೇಶವರಾಯ ದಾಸಯ್ಯ||3||

ಊರಿಗೆ ಬಂದರೆ ದಾಸಯ್ಯ Read More »

ಉಥಲೇಛೇ ಪ್ರೇಮ್

ಉಥಲೇಛೇ ಪ್ರೇಮ್ ಪಾರಾವಾರ್ (ತೋರಾ) ಆಯ್ ನಾ ಛುಟೇ ಭವೇರ್ ಮುಟೇ ಭಾಶಿಯೇ ದೇನಾ ಮಾಥಾರ್ ಭಾರ್|| (ಜಾರ್) ಲೇಗೇಛೇ ಬೋಝಾ ತಾರ್ ಹೊಯೇಛೇ ಸೋಜಾ ಭೋಝಾಬುಝೀರ್ ಬುಂಚ್ ಕಿ ಫೇಲೇ ಮಾರ್ ಛೇ ಶೇ ಮೊಜಾ ತುಇ ರೊಯ್ ಲಿ ಬೊಶೆ ಬೋಝಾರ್ ಆಶೇ ಕೊರ್ ಬಿ ಶೇಷೇ ಹಾಹಾಕಾರ್|| ಪ್ರೇಮಸಾಗರೇ ಭಾಶಿಯೇ ದೇನಾ ಗಾ ಜಾಬಿ ಭೇಶೇ ಏಮೊನ್ ದೇಶೇ ಜಾರ್ ಪಾಶೇ ನಾಇ ಗಾ (ಓರೇ) ಚಂದ್ರ ಸೂರ್ಯ ಧ್ವಂಸ ಹೋಲೇಓ ಹೋಯ್ ನಾ

ಉಥಲೇಛೇ ಪ್ರೇಮ್ Read More »

ಉಠೋ ಗೋ ಕರುಣಾಮಯೀ

ಉಠೊ ಗೋ ಕರುಣಾಮಯೀ ಖೋಲೋ ಗೋ ಕುಟೀರ ದ್ವಾರ ಆಂಧಾರೇ ಹೇರಿತೇ ನಾರಿ ಹೃದಿಕಾಂಪೇ ಅನಿವಾರ್|| ತಾರಸ್ವರೇ ಡಾಕಿತೇಛಿ ತಾರಾ ತೋಮಾಯ್ ಕೊತೊಯಿ ಬಾರ್ ದಯಾಮಯೀ ಹೋಯೇ ಆಜಿ ಏಕಿ ತವ ವ್ಯವಹಾರ್|| ಸಂತಾನೇ ರಾಖಿ ಬಾಹಿರೇ ಆಛೋ ಶುಯೇ ಅಂತಃಪುರೇ ಮಾ ಮಾ ಬೋಲೇ ಡೇಕೇ ಮೋರ್ ಅಸ್ಥಿ ಚರ್ಮ ಹೊಲೊ ಸಾರ್|| ಖೇಲಾಯ್ ಮತ್ತ ಛಿಲೇಮ್ ಬೊಲೇ ಬುಝಿ ಮುಖ ಬಾಂಕಾಯಿಲೇ ಏಕಬಾರ್ ಚಾವೋ ಮಾ ವದನ ತುಲೇ ಖೇಲಿತೇ ಜಾಬೊ ನಾ ಆರ್

ಉಠೋ ಗೋ ಕರುಣಾಮಯೀ Read More »

ಉಳ್ಳವರು ಶಿವಾಲಯ

ಉಳ್ಳವರು ಶಿವಾಲಯ ಮಾಡುವರಯ್ಯ| ನಾನೇನ ಮಾಡಲಿ ಬಡವನಯ್ಯಾ|| ಎನ್ನ ಕಾಲೇ ಕಂಬವು ದೇಹವೇ ದೇಗುಲ| ಶಿರವೇ ಹೋನ್ನ ಕಳಶವಯ್ಯ|| ಸ್ಥಾವರಕಳಿವುಂಟು ಜಂಗಮಕೆ ಅಳಿವಿಲ್ಲ| ಅಯ್ಯಾ ಕೇಳಯ್ಯ ಕೂಡಲಸಂಗಮ ದೇವ||                                                                —ಬಸವಣ್ಣ

ಉಳ್ಳವರು ಶಿವಾಲಯ Read More »

ಉಬ್ಬದಿರು ಉಬ್ಬದಿರು

ಉಬ್ಬದಿರು ಉಬ್ಬದಿರು ಎಲೆ ಮಾನವ | ಹೆಬ್ಬುಲಿಯಂತೆ ಯಮ ಬೊಬ್ಬಿಡುತ ಕಾದಿರುವ|| ಸಾಗರದ ತೆರೆಯಂತೆ ಸಾವು ಹುಟ್ಟಿರಲಾಗಿ ಭೋಗಭಾಗ್ಯಗಳೆಂದು ಬಳಲಲೇಕೋ| ನಾಗಹೆಡೆ ನೆರಳಲ್ಲಿ ನಡುಗೋ ಕಪ್ಪೆಯ ತೆರದಿ ಕೂಗಿ ಚೀರಿದರೆ ನಿನ್ನಾಗ ಕೇಳುವರೆ|| ಮಾಳಿಗೆ ಮನೆಯೆಂದು ಮತ್ತೆ ಸತಿಸುತರೆಂದು ಜಾಳಿಗೆ ಧನಧಾನ್ಯ ಪಶುಗಳೆಂದು| ವೇಳೆ ತಪ್ಪದೆ ತಿಂಬ ಕೂಳು ತನಗುಂಟೆಂದು ಗಾಳಿಗೊಡ್ಡಿದ ದೀಪ ಬದುಕು ಬಯಲು || ಅಸ್ಧಿರದ ಭವದೊಳಗೆ ಅತಿಶಯಗಳಣಿಸದಲೆ ವಸ್ತು ಇದರಲಿ ಕೇಳು ವೈರಾಗ್ಯವ| ವಿಸ್ತಾರ ಮಹಿಮ ಶ್ರೀ ಪುರಂದರವಿಟ್ಠಲನ ಸ್ವಸ್ಥಚಿತ್ತದಿ ನೆನೆದು ಮುಕ್ತಿ

ಉಬ್ಬದಿರು ಉಬ್ಬದಿರು Read More »

ಉತ್ತಿಷ್ಠತ ಜಾಗ್ರತ

ಉತ್ತಿಷ್ಠತ ಜಾಗ್ರತ| ಮನುಜ|| ಗುರಿಯನು ಸೇರುವವರೆಗೂ| ನೀ ಅರೆಕ್ಷಣ ನಿಲ್ಲದೆ ಮುನ್ನಡೆ ಸಖನೇ|| ನಿನ್ನಯ ಗುರಿಯು ಆತ್ಮದರುಶನ ನಿನ್ನೊಳಗೆಯೆ ಇದೆ ಆ ರತುನ| ಬನ್ನಪಡುತ ಈ ಕ್ಷುದ್ರ ಜೀವನದಿ ಇನ್ನು ತೊಳಲದಿರು ಮುನ್ನಡೆ ಸಖನೇ|| ಮಮತೆಯ ಈ ದೇಹವೆ ನೀನೆಂದು ಭ್ರಮಿಸದಿರೈ ನೀ ಎಂದೆಂದೂ| ಅಮರ ಆತ್ಮ ನೀ ಅಮೃತಪುತ್ರನೇ ಅಮಲಾನಂದದಿ ಪರಿಪೂರ್ಣನು ನೀ||

ಉತ್ತಿಷ್ಠತ ಜಾಗ್ರತ Read More »